Tag: GC Chandrashekhar

  • ಪಕ್ಷದ ಶಿಸ್ತು ಮೀರಿ‌‌ ಮಾತನಾಡುತ್ತಿರುವ ಸಚಿವರು ಶಿಶುಪಾಲನಂತೆ, ಕಾಂಗ್ರೆಸ್ ಹೈಕಮಾಂಡ್ ಶ್ರೀಕೃಷ್ಣನಂತೆ: ಸಂಸದ ಜಿ.ಸಿ ಚಂದ್ರಶೇಖರ್

    ಪಕ್ಷದ ಶಿಸ್ತು ಮೀರಿ‌‌ ಮಾತನಾಡುತ್ತಿರುವ ಸಚಿವರು ಶಿಶುಪಾಲನಂತೆ, ಕಾಂಗ್ರೆಸ್ ಹೈಕಮಾಂಡ್ ಶ್ರೀಕೃಷ್ಣನಂತೆ: ಸಂಸದ ಜಿ.ಸಿ ಚಂದ್ರಶೇಖರ್

    ಬೆಂಗಳೂರು: ಪಕ್ಷದ ಶಿಸ್ತು ಮೀರಿ ಮಾತನಾಡುತ್ತಿರುವ ಸಚಿವರು ಶಿಶುಪಾಲರಿದ್ದಂತೆ ಹೈಕಮಾಂಡ್ ಶ್ರೀಕೃಷ್ಣ ಇದ್ದಂತೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ಸಂಸದ ಜಿ.ಸಿ ಚಂದ್ರಶೇಖರ್ (GC Chandrashekhar) ಬಣ್ಣಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಚಿವರು ಕಳೆದ ಒಂದು ವರ್ಷದಿಂದ ಬದಲಾವಣೆ ಬಗ್ಗೆ ಸಿಎಂ ವಿಚಾರದ ಬಗ್ಗೆ ಹೇಳುತ್ತಿದ್ದಾರೆ. ಆದರೆ ಯಾವ ಬದಲಾವಣೆಯೂ ಆಗಿಲ್ಲ. ಎಲ್ಲಾ ಸಚಿವರು ಹಿರಿಯರಿದ್ದಾರೆ, ಇದು ಶ್ರೀಕೃಷ್ಣ ಶಿಶುಪಾಲನ‌ ಕಥೆಯಂತೆ. ಇಲ್ಲಿ ಹೈಕಮಾಂಡ್ ಶ್ರೀಕೃಷ್ಣ ಇದ್ದಂತೆ ಶಿಶುಪಾಲ ಯಾರು ಅಂತ ನಿಮಗೆ ಬಿಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಸವಾರರು ಗ್ರೇಟ್‌ ಎಸ್ಕೇಪ್‌

    ಇದಕ್ಕೆಲ್ಲ ಕಾಲವೇ ಉತ್ತರ ಕೊಡುತ್ತದೆ‌. ದೆಹಲಿಯಲ್ಲಿ ಹೈಕಮಾಂಡ್ ಮಾತನಾಡಿದೆ. ಅಲ್ಲಿ ಮಾತನಾಡಿದ ಮೇಲೆ ಇಲ್ಲಿ ಬಂದು ಮಾತನಾಡುವಂತದ್ದು ಏನಿದೆ..? ಯಾರೂ ಮಾತನಾಡಬಾರದು ಅಂತ ಕಾಂಗ್ರೆಸ್ ಅಧ್ಯಕ್ಷರು, ಕೆ.ಸಿ ವೇಣುಗೋಪಾಲ್ ಸಹ ಹೇಳಿದ್ದಾರೆ. ಅವರನ್ನ ಮಂತ್ರಿಮಾಡಿದ್ದು ಹೈಕಮಾಂಡ್, ಅವರನ್ನ ಶಾಸಕರನ್ನ ಮಾಡಿದ್ದು ಹೈಕಮಾಂಡ್, ಕಾಲ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಅಲ್ಲಿ-ಇಲ್ಲಿ ಮಾತನಾಡೋದು ಸರಿಯಲ್ಲ. ನಮಗೂ ಬಿಜೆಪಿಗೂ ಯಾವುದೇ ವ್ಯತ್ಯಾಸ ಇರಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ ಸಿಜೆಐ ಯಾಕೆ ಭಾಗಿಯಾಗಬೇಕು – ಉಪ ರಾಷ್ಟ್ರಪತಿ ಪ್ರಶ್ನೆ

    ಬಿಜೆಪಿಯಲ್ಲಿ ಏನೇನಾಗ್ತಿದೆ ಎಲ್ಲರಿಗೂ ಗೊತ್ತಿದೆ. ಆರೀತಿ ಇಲ್ಲಿ ಗೊಂದಲ ಮೂಡಿಸೋದು ಬೇಡ. ನಾಯಕರಾದವರು ಪಕ್ಷ ಸಂಘಟನೆ ಮಾಡಬೇಕು. ಪಕ್ಷಕ್ಕೆ ತೊಂದರೆಯಾಗುವಂತೆ ಮಾಡಬಾರದು. ಕಾರ್ಯಾಧ್ಯಕ್ಷನಾಗಿ ನಾನು ಇದನ್ನ ಹೇಳ್ತೇನೆ, ಯಾವುದೇ ಸಮಸ್ಯೆ ಉದ್ಭವವಾಗಲಿ. ಪಕ್ಷ ಇಲ್ಲವೇ ಸರ್ಕಾರದಲ್ಲಿ ಆಗಲಿ ತಕ್ಷಣವೇ ಅದಕ್ಕೆ ಪರಿಹಾರ ಸಿಗಲ್ಲ. ಕಾಲವೇ ಅದಕ್ಕೆ ಉತ್ತರಿಸಬೇಕು. ನಿನ್ನೆ ಏನೇನು ಮಾತನಾಡಿದ್ರು ಎಲ್ಲರಿಗೂ ಗೊತ್ತಿದೆ. ಹೈಕಮಾಂಡ್ ಹೇಳಿ ಕಳಿಸಿದೆ ಹೇಳಿದ ಮೇಲೂ ಈ ರೀತಿ ಮಾತನಾಡಿದರೆ ಹೇಗೆ? ಕಾರ್ಯಕರ್ತರಿಗೆ ಒಂದು ಫ್ಯೂಚರ್‌ ಇದೆ. ಅವರಿಗೂ ಆಸೆಗಳು ಇರುತ್ತವೆ. ಅವರ ಪ್ಯೂಚರ್ ಯಾಕೆ ಹಾಳು ಮಾಡಬೇಕು? ಅಂತ ಪ್ರಶ್ನೆ ಮಾಡಿದ್ದಾರೆ.

  • ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

    ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇನ್ನು ಮುಂದೆ ಪೆನ್‌ಡ್ರೈವ್ (Pendrive Case) ಬಗ್ಗೆ ಮಾತನಾಡೋದೆ ಬೇಡ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ (GC Chandrashekhar) ಹೇಳಿದ್ದಾರೆ.

    ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕತ್ವ ಅಂದರೆ ಅದು ಮಹತ್ವದ ಸ್ಥಾನ. ಆ ಸ್ಥಾನಕ್ಕೆ ಮೆರುಗು ನೀಡುವ ವ್ಯಕ್ತಿಗಳು ಅಲ್ಲಿ ಕೂರಬೇಕು. ಕೀಳು ದರ್ಜೆಯ ಭಾಷೆ ಉಪಯೋಗಿಸುವುದು ವಿಪಕ್ಷಗಳಿಗೆ ಶೋಭೆ ತರುವುದಿಲ್ಲ. ಸ್ವಲ್ಪ ಹೋಂ ವರ್ಕ್ ಮಾಡಿ ವಿಪಕ್ಷ ನಾಯಕರು ಮಾತನಾಡಬೇಕು. ಕಾಂಗ್ರೆಸ್ ನಾಯಕತ್ವ ಬಲಿಷ್ಟ ನಾಯಕತ್ವ. ಡಿಕೆಶಿ, ಸಿದ್ದರಾಮಯ್ಯ ತರಹದ ನಾಯಕತ್ವ ಬೇರೆಲ್ಲೂ ಇಲ್ಲ. ಅವರು ಏನೇ ಮಾಡಿದರೂ ಸರ್ಕಾರವನ್ನು ಅಲುಗಾಡಿಸುವ ಯೋಗ್ಯತೆಯೇ ಇಲ್ಲ. ಕೆಲವು ಬಾರಿ ಆರ್.ಅಶೋಕ್ ಮಾತನಾಡುವುದನ್ನು ನೋಡಿದರೆ ಇವರಿಗಿಂತ ಸಿಟಿ ರವಿಯೇ ಬೆಸ್ಟ್ ಅನಿಸುತ್ತದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

    ಸಿಟಿ ರವಿ ಕೂಡ ಕೆಲವೊಮ್ಮೆ ಅಶ್ಲೀಲವಾಗಿ ಮಾತನಾಡುತ್ತಾರೆ. ಆದರೆ ಅಶೋಕ್‌ಗಿಂತ ಸಿ.ಟಿ ರವಿಯೇ ಬೆಸ್ಟ್ ಅನಿಸುತ್ತದೆ. ಕುಮಾರಸ್ವಾಮಿ (HD Kumaraswamy) ಇಡೀ ತನಿಖೆಯೇ ಹಳ್ಳ ಹಿಡಿಯುವಂತೆ ಮಾತನಾಡುತ್ತಿದ್ದಾರೆ. ಇವರು ಹೇಳಿದ ಹಾಗೇ ಎಸ್‌ಐಟಿ ನಡೆಯಬೇಕು. ಇವರು ಹೇಳಿದ ಹಾಗೆ ತನಿಖೆ ನಡೆಯಬೇಕು. ಯಾರು ಯಾರನ್ನೂ ಕೆಣಕಿಲ್ಲ. ಕುಮಾರಸ್ವಾಮಿ ಅವರೇ ದೇವೇಗೌಡರಿಗೆ ನೋವಾಗಿದೆ ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ದೇವೇಗೌಡರ ಮೇಲೆ ನಮಗೆ ಅಪಾರ ಗೌರವವಿದೆ. ಡಿಕೆ ಶಿವಕುಮಾರ್ ಅವರಿಗೆ ನಾವು ಕೇಳಿಕೊಳ್ಳೋದು ಇಷ್ಟೇ. ಇನ್ನು ಮುಂದೆ ಪೆನ್‌ಡ್ರೈವ್ ವಿಚಾರದಲ್ಲಿ ಮಾತೇ ಆಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಪಘಾತಕ್ಕೆ ಇಬ್ಬರು ಟೆಕ್ಕಿಗಳು ಬಲಿ ಕೇಸ್‌; ಕಾರು ಚಲಾಯಿಸಿದ ಅಪ್ರಾಪ್ತನ ತಂದೆ ಬಂಧನ

    ದೇವೇಗೌಡರ ಕುಟುಂಬದ ಬಗ್ಗೆ ಗೌರವವಿದೆ. ಯಾವ ರಾಜಕಾರಣಿ ಕೂಡ ಕುಟುಂಬದಲ್ಲಿ ಈ ರೀತಿ ನಡೆಯಬೇಕು ಎಂದು ಭಾವಿಸುವುದಿಲ್ಲ. ಕುಮಾರಸ್ವಾಮಿ ಅವರು ಪ್ರಕರಣವನ್ನು ನೆಲ ಕಚ್ಚಿಸುತ್ತಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದವರು ನೀವು. ಇವರು ಹೇಳಿದ ಹಾಗೇ ನಡೆಯಬೇಕು. ಎಸ್‌ಐಟಿ ತನಿಖೆ ಆಗಬೇಕಾ? ಸರ್ ದಯವಿಟ್ಟು ಈ ಪ್ರಕರಣದಲ್ಲಿ ಯಾರು ರಿಯಾಕ್ಟ್ ಮಾಡಬೇಡಿ. ಸರ್ಕಾರ ಅದರ ಪಾಡಿಗೆ ಅದು ನಡೆಯುತ್ತಿದೆ. ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡೋಣ. ಯಾರು ಯಾರನ್ನೂ ಕೆಣಕಿಲ್ಲ ಕುಮಾರಸ್ವಾಮಿ ಅವರೇ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಡಿಕೆಶಿ ರಕ್ಷಣೆಗೆ ಸಿಎಂ, ಸರ್ಕಾರ ನಿಂತಿದೆ: ಹೆಚ್‍ಡಿಕೆ ಆರೋಪ

  • ಕಾಗೇರಿ ಕ್ಷೇತ್ರದಲ್ಲಿ ಮಕ್ಕಳಿಗಾಗಿ ಸೇತುವೆ ನಿರ್ಮಿಸಿದ ರಾಜ್ಯಸಭಾ ಸದಸ್ಯ ಚಂದ್ರಶೇಖರ್‌

    ಕಾಗೇರಿ ಕ್ಷೇತ್ರದಲ್ಲಿ ಮಕ್ಕಳಿಗಾಗಿ ಸೇತುವೆ ನಿರ್ಮಿಸಿದ ರಾಜ್ಯಸಭಾ ಸದಸ್ಯ ಚಂದ್ರಶೇಖರ್‌

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪ್ರದೇಶಗಳು ಅರಣ್ಯಮಯವಾದ್ದರಿಂದ ಸಮಸ್ಯೆಗಳು ಹೆಚ್ಚು. ಇದನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ತಮಗೆ ಸಂಬಂಧವಿಲ್ಲ ಎಂಬಂತೆ ಮೂಗು ಮುರಿಯುತ್ತಾರೆ. ಅದರೆ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಸೇತುವೆ ನಿರ್ಮಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

    ವಿಧಾನಸಭೆ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ್ ಹೆಗಡೆಯವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಸರಿಮನೆ ಗ್ರಾಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಮನೆಗಳಿವೆ. ಈ ಊರಿನ ಮಕ್ಕಳು ಶಾಲೆಗೆ ಹೋಗಬೇಕು ಅಂದ್ರೆ ನಾಲ್ಕು ಕಿ.ಮೀ. ನಡೆದು ಹೋಗಬೇಕು. ಈ ಮಾರ್ಗದಲ್ಲಿ ಬಸರಿಮನೆ ಹೊಳೆ ಸಾಗುತ್ತದೆ. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುವುದರಿಂದ ಅಡಿಕೆ ಹಾಗೂ ಮರದ ಹಲಗೆಯಲ್ಲಿ ನಿರ್ಮಿಸಿದ ಕಾಲು ಸಂಕವೇ ಶಾಲೆಗೆ ಹೋಗುವ ಮಕ್ಕಳಿಗೆ ಜೀವರಕ್ಷಕ.

    ಮಳೆಗಾಲದಲ್ಲಿ ಈ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಹೀಗಾಗಿ ಇಲ್ಲಿನ ಶಾಸಕರು, ಸದ್ಯ ರಾಜ್ಯದ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಹಾಗೂ ಸಂಸದ ಅನಂತಕುಮಾರ್ ಹೆಗಡೆಗೆ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದರು.

    2019ರಲ್ಲಿ ಜಿಲ್ಲಾ ಪಂಚಾಯಿತಿ ಅನುದಾನ ಬಿಡುಗಡೆಯಾದರೂ ಸೇತುವೆ ಮಾತ್ರ ನಿರ್ಮಾಣವಾಗಲಿಲ್ಲ. ಈ ಬಗ್ಗೆ ಸ್ಪೀಕರ್ ಕಾಗೇರಿಗೆ ಹಲವು ಬಾರಿ ಮನವಿ ನೀಡಿದ್ದರು. ಆದರೆ ಕೆಲಸ ಮಾತ್ರ ಪ್ರಾರಂಭ ಆಗಲೇ ಇಲ್ಲ. ಹೀಗಾಗಿ ಅಂದಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತ್ ಆಳ್ವ ಅವರ ಗಮನಕ್ಕೆ ತಂದಿದ್ದರು.

    ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕೆಲವು ಅಡೆತಡೆಗಳು ಬಂದಿದ್ದರಿಂದ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಹಾಗಂತ ಅವರು ಸುನ್ಮನೆ ಕೂರದೆ ತಮ್ಮ ಸ್ನೇಹಿತರಾಗಿದ್ದ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಗಮನಕ್ಕೆ ತಂದು ಸಹಾಯ ಬೇಡಿದ್ದರು. ಖುದ್ದು ಸ್ಥಳಕ್ಕೆ ಬಂದು ಸಮಸ್ಯೆ ಅರಿತ ಅವರು, ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹತ್ತು ಲಕ್ಷ ರೂ. ಹಣವನ್ನು ಮಂಜೂರು ಮಾಡಿ ಉ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

    ನಿವೇದಿತ್ ಆಳ್ವ ಸಹ ಈ ಬಗ್ಗೆ ಮುತುವರ್ಜಿ ವಹಿಸಿ ಸೇತುವೆ ನಿರ್ಮಾಣ ಆಗುವ ವರೆಗೆ ಪ್ರತಿ ಬಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತಿದ್ದರು. ಇದರ ಪ್ರತಿಫಲವಾಗಿ ಇಂದು ಸೇತುವೆ ನಿರ್ಮಾಣವಾಗಿದ್ದು, ಜನ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಭಯದಲ್ಲೇ ಸಾಗುತಿದ್ದ ಮಕ್ಕಳಿಗೆ ಈ ಬಾರಿಯಿಂದ ಮಳೆಗಾಲದ ಭಯ ದೂರವಾಗಿದೆ.