ಬೆಂಗಳೂರು: ನಗರದಲ್ಲಿ ಕಸವನ್ನ (Garbage) ಆಟೋಗಳಿಗೆ ನೀಡಬೇಕು ಅಂತ ಘನತ್ಯಾಜ್ಯ ನಿರ್ವಹಣೆ ನಿಗಮ ಆದೇಶ ಮಾಡಿದೆ. ಜೊತೆಗೆ ಮನೆ ಮನೆಗೆ ತೆರಳೋ ಕಸದ ಆಟೋಗಳ ಸಮಯ ಕೂಡ ಬದಲಾವಣೆ ಮಾಡಿದೆ.
ಮೊದಲೆಲ್ಲ ಬೆಳ್ಳಗ್ಗೆ 6.30ಕ್ಕೆ ಕಸದ ಆಟೋಗಳು ಕಸ ಸಂಗ್ರಹಕ್ಕೆ ಮನೆ ಮುಂದೆ ಬರುತ್ತಾ ಇದ್ದವು ಈಗ ಸಮಯವನ್ನ ಬದಲಾವಣೆ ಮಾಡಿ ಬೆಳ್ಳಗ್ಗೆ 5.30ಕ್ಕೆ ಮನೆ ಮನೆಗೆ ಆಟೋ ತೆರಳುವಂತೆ ಆದೇಶ ಮಾಡಿದೆ. ಆದರೂ ಕೂಡ ಕಸದ ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ಮಾಡ್ತಾ ಇದ್ದಾರೆ ಬೆಂಗಳೂರಿಗರು (Bengalurians). ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ – ಇಂದಿನಿಂದ 3 ದಿನ ಕಾವೇರಿ ನೀರು ಸಿಗಲ್ಲ
ಕಸದ ಆಟೋಗಳಿಗೆ ಕಸ ನೀಡದ ಮನೆಗಳಿಗೆ ನೋಟಿಸ್ ನೀಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ನಿರ್ಧಾರ ಮಾಡಿದೆ. ಕಸ ನೀಡದ ಮನೆಗಳಿಗೆ ನೋಟಿಸ್ ನೀಡಲಿದೆ ಜೊತೆಗೆ ಕಟ್ಟಡ ನಿರ್ಮಾಣದ ಆವಶೇಗಳನ್ನ ಎಲ್ಲೆಂದರಲ್ಲೆ ಬಿಸಾಡುತ್ತಿದ್ದರು. ಈಗ ಕಟ್ಟಡದ ಆವಶೇಷಗಳನ್ನ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ದಿಂದಲೇ ವಿಲೇವಾರಿ ಮಾಡಲು ಚಿಂತಿಸಿದೆ. ವಿಲೇವಾರಿ ವೆಚ್ಚವನ್ನ ಕಟ್ಟಡ ಮಾಲೀಕರು ಭರಿಸಬೇಕಿದೆ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು
ರಾಮನಗರ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಫ್ (Bidadi Township) ಭೂಸ್ವಾಧೀನ ವಿರೋಧಿಸಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮದ ರೈತರು (Farmers) ಆಹೋರಾತ್ರಿ ಧರಣಿ ಕೈಗೊಂಡಿದ್ದು, ಭೈರಮಂಗಲ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಭೂ ಸ್ವಾಧೀನ ಪ್ರಕ್ರಿಯೆಗೆ ಜೆಎಂಸಿ ಸರ್ವೆ ಆರಂಭವಾಗಿರುವ ಹಿನ್ನೆಲೆ ಸರ್ವೇ ಕಾರ್ಯಕ್ಕೆ ತಡೆ ನೀಡಿ ಧರಣಿ ನಡೆಸಲಾಗುತ್ತಿದೆ. ಬಿಡದಿ ಟೌನ್‌ಶಿಪ್‌ಗೆ 9 ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ಜಿಬಿಎ ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದೆ. ಈ ಯೋಜನೆಯಿಂದ ರೈತರಿಗೆ ಯಾವುದೇ ಲಾಭ ಇಲ್ಲ, ಕೃಷಿ ಕೆಲಸ ಬಿಟ್ಟು ವಾಚ್‌ಮೆನ್ ಕೆಲಸ ಮಾಡಿಸಲು ಸರ್ಕಾರ ಮುಂದಾಗುತ್ತಿದೆ ಎಂದು ರೈತರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರೋಪಿ ನಟ ದರ್ಶನ್ ಮನೆಯಲ್ಲಿ 3 ಲಕ್ಷ ನಗದು ಕಳ್ಳತನ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತಿಹಾಸದ ಪುಟ ಸೇರಿದೆ. ಬೆಂಗಳೂರು ಪಾಲಿಕೆಯನ್ನು 5 ಮಹಾನಗರ ಪಾಲಿಕೆವುಳ್ಳ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಇಂದಿನಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.
ಒಂದೊಂದು ಪಾಲಿಕೆಗೆ 100ರಿಂದ 150 ವಾರ್ಡ್‌ಗಳನ್ನು ಸೇರಿಸಲಾಗುತ್ತದೆ. ಅಂದಾಜು 500 ಸದಸ್ಯರು ಆರಿಸಿ ಬರಲಿದ್ದಾರೆ. ನವೆಂಬರ್ 1ರೊಳಗೆ ವಾರ್ಡ್ ವಿಂಗಡಣೆ ಅಂತಿಮವಾಗಲಿದೆ. ನ.30ರೊಳಗೆ ವಾರ್ಡ್ ಮೀಸಲಾತಿ ಅಂತಿಮವಾಗಲಿದ್ದು, ಆ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ವರ್ಷಾರಂಭದಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದನ್ನೂಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್
ಮೇಯರ್ ಅವಧಿ 1 ವರ್ಷದಿಂದ ಎರಡೂವರೆ ವರ್ಷಕ್ಕೆ ವಿಸ್ತರಿಸಲಾಗುವುದು. ನಾಳೆಯಿಂದಲೇ ಆಯಾ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಟ್ಯಾಕ್ಸ್ ಸಂಗ್ರಹಿಸಲಾಗುವುದು. ನ.1ನೇ ತಾರೀಖಿಗೆ ಎಲ್ಲಾ 5 ಪಾಲಿಕೆಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಬೆಂಗಳೂರು ಉಸ್ತುವಾರಿ ಸಚಿವ ಶಿವಕುಮಾರ್ (DK Shivakumar) ಹೇಳಿದರು.
ಸಿದ್ದರಾಮಯ್ಯ (Siddaramaiah) ಪುತ್ರ ಯತೀಂದ್ರರನ್ನು ಜಿಬಿಎ ಸದಸ್ಯರನ್ನಾಗಿ ಮಾಡಿರೋದನ್ನು ಸಮರ್ಥಿಸಿಕೊಂಡಿರುವ ಡಿಕೆಶಿ ಬೆಂಗಳೂರು ವೋಟರ್ ಆಗಿರುವುದರಿಂದ ಸದಸ್ಯರಾಗಿ ನೇಮಿಸಿರಬಹುದು ಎಂದಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ʻಬಿಬಿಎಂಪಿʼ (BBMP) ಹೆಸರು ಇತಿಹಾಸ ಪುಟ ಸೇರಲಿದ್ದು, ನಾಳೆಯಿಂದ (ಮೇ 15) ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾಗಲಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ʻಗ್ರೇಟರ್ ಬೆಂಗಳೂರು ಪ್ರಾಧಿಕಾರʼ (Greater Bengaluru Authority) ಆಗಿ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಇದರೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ (Bengaluru Administrative Act) ಸುಗಮ ಆಡಳಿತ ತರುವ ದೃಷ್ಟಿಯಿಂದ ಗರಿಷ್ಠ 7 ಪಾಲಿಕೆ ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ ಕಾಯ್ದೆಗೆ ನಿಯಮಾವಳಿ ರೂಪಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಜಿಬಿಎ ಮುಖ್ಯ ಆಯುಕ್ತರು ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಜೊತೆಗೆ ಹೊಸ ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗುತ್ತದೆ. ಇದನ್ನೂ ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್
ಕಾಯ್ದೆ ಹಾದಿ ಹೇಗೆ?
ವಿಧಾನ ಮಂಡಲದಲ್ಲಿ ಮಾರ್ಚ್ 13ರಂದು ಅಂಗೀಕಾರವಾಗಿದ್ದ ʻಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024ʼಯನ್ನು ರಾಜ್ಯಪಾಲರ ಅಂಕಿತಕ್ಕಾಗಿ 2025ರ ಮಾರ್ಚ್ 17ರಂದು ಕಳುಹಿಸಲಾಗಿತ್ತು. ಮಸೂದೆಯು ಸಂವಿಧಾನದ 74ನೇʼ ತಿದ್ದುಪಡಿಗೆ ವಿರುದ್ಧವಾಗಿದೆ ಮತ್ತು ದೆಹಲಿ ಮಹಾನಗರ ಪಾಲಿಕೆಯ ವಿಭಜನೆ ಸಂದರ್ಭದಲ್ಲಿ ಆದಂತೆ ಸಮಸ್ಯೆಗಳು ಸೃಷ್ಟಿಯಾಗುತ್ತವೆʼ ಎಂದು ಬೆಂಗಳೂರು ಟೌನ್ ಹಾಲ್ ಸಂಘಟನೆ ಹಾಗೂ ಬಿಜೆಪಿ ನಾಯಕರ ನಿಯೋಗಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದವು. ಮಸೂದೆಯನ್ನು ತಡೆ ಹಿಡಿಯುವಂತೆಯೂ ಒತ್ತಾಯಿಸಿದ್ದವು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು – ಪಾಕ್ ಬಂಧಿಸಿದ್ದ ಬಿಎಸ್‌ಎಫ್ ಯೋಧ ತಾಯ್ನಾಡಿಗೆ ವಾಪಸ್
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ʻಎರಡೂ ಮನವಿಗಳನ್ನು ನಾನು ಪರಿಶೀಲಿಸಿದ್ದೇನೆ. ಈ ಮಸೂದೆಯು ಕಾನೂನಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ಎರಡೂ ಮನವಿ ಪತ್ರಗಳಲ್ಲಿ ಪ್ರಸ್ತಾಪಿಸಿರುವ ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ಅಗತ್ಯವಿದೆ’ ಎಂದು ಮಾರ್ಚ್ 25ರಂದು ಮಸೂದೆಯನ್ನು ಹಿಂದಿರುಗಿಸಿದ್ದರು. ಅದಕ್ಕೆ ಅಗತ್ಯ ಸ್ಪಷನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಏಪ್ರಿಲ್ 24ರಂದು ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಅಂದು ಸಂಜೆಯೇ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024’ ಅನ್ನು ಅಧಿಸೂಚಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದನ್ನೂ ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್
ಮೇ 15ರಿಂದ:
ಸದ್ಯ ಬಿಬಿಎಂಪಿಯ 225 ವಾರ್ಡ್‌ಗಳು ಜೆಬಿಎ ವ್ಯಾಪ್ತಿಯಲ್ಲಿರಲಿದೆ. ನಂತರ ಬಿಬಿಎಂಪಿ ವ್ಯಾಪ್ತಿ ಮಾತ್ರ ʻಗ್ರೇಟರ್ ಬೆಂಗಳೂರು ಪ್ರದೇಶʼ ಎಂದಾಗಲಿದ್ದರೂ ನಂತರದ ದಿನಗಳಲ್ಲಿ ವ್ಯಾಪ್ತಿ ಹಿಗ್ಗಲಿದೆ. ತಲಾ ಸುಮಾರು 125 ವಾರ್ಡ್‌ಗಳ ಮೂರು ನಗರ ಪಾಲಿಕೆಗಳನ್ನು ರಚಿಸುವ ಯೋಜನೆ ಇದ್ದು ಅದಕ್ಕೆ ತಕ್ಕಂತೆ ʻಗ್ರೇಟರ್ ಬೆಂಗಳೂರು ಪ್ರದೇಶʼದ ಗಡಿಯನ್ನು ಗುರುತಿಸಲಾಗುತ್ತದೆ. ನಗರದ ಸುತ್ತಲಿರುವ ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಎಲೆಕ್ಟ್ರಾನಿಕ್ ಸಿಟಿ ಅತ್ತಿಬೆಲೆ ಜಿಗಣಿ ಕೈಗಾರಿಕೆ ಪ್ರದೇಶ ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ʻಗ್ರೇಟರ್ ಬೆಂಗಳೂರು ಪ್ರದೇಶʼಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕಾಯ್ದೆಯಲ್ಲೇ ಇರುವಂತೆ ಎಲ್ಲ ನಗರ ಪಾಲಿಕೆಗಳ ಹೆಸರು ʻಬೆಂಗಳೂರುʼ ಎಂದೇ ಆರಂಭವಾಗಬೇಕಿದೆ. ʻಬೆಂಗಳೂರು ಕೇಂದ್ರ ನಗರ ಪಾಲಿಕೆʼ ʻಬೆಂಗಳೂರು ಉತ್ತರ ನಗರ ಪಾಲಿಕೆʼ ʻಬೆಂಗಳೂರು ದಕ್ಷಿಣ ನಗರ ಪಾಲಿಕೆʼ… ಹೀಗೆ ಹೆಸರಿಸಲಾಗುತ್ತದೆ. ʻಗ್ರೇಟರ್ ಬೆಂಗಳೂರು ಪ್ರದೇಶʼ ವ್ಯಾಪ್ತಿಯನ್ನು ಹಿಗ್ಗಿಸಿದ ಮೇಲೆ ಅದರನ್ವಯ ಮೂರು ಅಥವಾ ಐದು ನಗರಪಾಲಿಕೆಗಳನ್ನು ರಚಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.