Tag: GBA

  • ನಕ್ಷೆ ಮಂಜೂರಾತಿ, ಟಿಡಿಆರ್ ನೀಡುವ ಅಧಿಕಾರ ಇನ್ಮುಂದೆ GBA ವ್ಯಾಪ್ತಿಗೆ – ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ

    ನಕ್ಷೆ ಮಂಜೂರಾತಿ, ಟಿಡಿಆರ್ ನೀಡುವ ಅಧಿಕಾರ ಇನ್ಮುಂದೆ GBA ವ್ಯಾಪ್ತಿಗೆ – ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ

    – 5 ಪಾಲಿಕೆಗಳಿಗೆ ಐದು ಕಚೇರಿ ಅಂತಿಮ
    – ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಮಹತ್ವದ ನಿರ್ಣಯ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ಬೆಂಗಳೂರಿನಲ್ಲಿ ಜಿಬಿಎ ಮೊದಲ ಸಭೆ ನಡೀತು. ಜಿಬಿಎ (GBA) ಅಡಿಯಲ್ಲಿರುವ 5 ನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆ ಸಂಬಂಧಿಸಿದಂತೆ ಸಭೆ ಮಾಡಲಾಯಿತು. ಸಭೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳು ಹಾಗೂ ಕುಂದುಕೊರತೆಗಳ ಬಗ್ಗೆಯೂ ಚರ್ಚೆ ನಡೀತು.

    ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಬೆಂಗಳೂರು ನಗರ ಕಾಂಗ್ರೆಸ್ ಶಾಸಕರು, ಜಿಬಿಎ ಪಾಲಿಕೆಗಳ ಆಯುಕ್ತರು, ಸದಸ್ಯರು ಭಾಗಿಯಾಗಿದ್ದರು. ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಯಿತು. ಇದನ್ನೂ ಓದಿ: ಟ್ರಾಫಿಕ್‌ ಸಮಸ್ಯೆ ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ: ಪ್ರಿಯಾಂಕ್‌ ಖರ್ಗೆ ವ್ಯಾಖ್ಯಾನ

    ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA)ಕ್ಕೆ ಇದ್ದ ಇದ್ದ ನಕ್ಷೆ ಮಂಜೂರಾತಿ ಹಾಗೂ TDR (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು) ನೀಡುವ ಅಧಿಕಾರವನ್ನ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ತರಲು ನಿರ್ಧರಿಸಲಾಯಿತು. ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳಿಗೆ ಬಜೆಟ್‌ ತೀರ್ಮಾನ ಮಾಡುವ ಜೊತೆಗೆ ಬಿಎಂಟಿಸಿ ಹಾಗೂ ಅಗ್ನಿಶಾಮಕ ದಳವನ್ನೂ ಸಹ ಬಿಜೆಪಿ ವ್ಯಾಪ್ತಿಗೆ ಸೇರಿಸಿ ನಿರ್ಣಯ ಕೈಗೊಳ್ಳಲಾಯಿತು. ಇದನ್ನೂ ಓದಿ: ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

    ಸಭೆಯ ಮಹತ್ವದ ನಿರ್ಣಯಗಳೇನು?
    – ಬಿಡಿಎಗೆ ಇದ್ದ ನಕ್ಷೆ ಮಂಜೂರಾತಿ ಇನ್ಮುಂದೆ ಜಿಬಿಎ ವ್ಯಾಪ್ತಿಗೆ
    – ಟಿಡಿಆರ್ ನೀಡುವ ಅಧಿಕಾರ ಕೂಡ ಇನ್ಮುಂದೆ ಜಿಬಿಎ ವ್ಯಾಪ್ತಿಗೆ
    – ಐದು ಪಾಲಿಕೆಗಳ ಬಜೆಟ್ ತೀರ್ಮಾನ
    – ಬಿಎಂಟಿಸಿ, ಅಗ್ನಿ ಶಾಮಕ ದಳ, ಇನ್ಮುಂದೆ ಜಿಬಿಎ ವ್ಯಾಪ್ತಿಗೆ
    – ಕೇಂದ್ರ ಸಂಯೋಜನಾ ಸಮಿತಿ ರಚನೆಗೆ ತೀರ್ಮಾನ (ಇಲಾಖೆಗಳ ನಡುವಿನ ಸಮನ್ವಯತೆಗೆ)
    – ಜಿಬಿಎ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನ
    – ಐದು ಪಾಲಿಕೆಗಳಿಗೆ ಐದು ಕಚೇರಿ ಅಂತಿಮ
    – ಸೆಂಟ್ರಲ್ ಪಾಲಿಕೆ ಜಿಬಿಎ ಕೇಂದ್ರ ಕಚೇರಿಯಲ್ಲೇ ಕಚೇರಿ ಇರಲಿದೆ
    – ಹೊಸ ಪಾಲಿಕೆ ಕಚೇರಿ ಕಟ್ಟಡಗಳು ಒಂದೇ ರೀತಿ ಇರಬೇಕೆಂದು ತೀರ್ಮಾನಿಸಲಾಗಿದೆ
    – ಒಂದೇ ಮಾದರಿಯಲ್ಲಿ ಕಚೇರಿ ನಿರ್ಮಾಣ ಮಾಡಲು ತೀರ್ಮಾನ
    – ಹೊಸದಾಗಿ ಐದು ಪಾಲಿಕೆಗಳಿಗೆ ಕಚೇರಿ ನಿರ್ಮಾಣ

    ಬಿಜೆಎ ಸಭೆಗೆ ಬಿಜೆಪಿ ಶಾಸಕರ ಗೈರು
    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಭೆಗೆ ಬಿಜೆಪಿ ಶಾಸಕರು ಗೈರಾದರು. ಜಿಬಿಎ ರಚನೆ ಬಗ್ಗೆ ನಮಗೆ ವಿರೋಧವಿದೆ ಹಾಗಾಗಿ ನಾವು ಸಭೆಗೆ ಹಾಜರಾಗುವುದಿಲ್ಲ ಎಂದು ವಿರೋಧಿಸಿದ್ರು. 75 ಜಿಬಿಎ ಸದಸ್ಯರ ಪೈಕಿ ಕೇವಲ 35 ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಹೀಗಾಗಿ ಮೊದಲ ಸಭೆಯಲ್ಲಿ ಸಿಎಂಗೆ ಹಿನ್ನಡೆಯಾಯ್ತು. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

  • ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ನಾಳೆ ನಿರ್ಧಾರ – ಕಾನೂನು ಇಲಾಖೆ ವರದಿಗೆ ಸೂಚನೆ

    ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ನಾಳೆ ನಿರ್ಧಾರ – ಕಾನೂನು ಇಲಾಖೆ ವರದಿಗೆ ಸೂಚನೆ

    – ಎಲ್ಲ ಮಾರ್ಗಗಳ ಪರಿಶೀಲನೆಗೆ ಸಿಎಂ ಆದೇಶ

    ಬೆಂಗಳೂರು: ಗ್ರೇಟರ್ ಬೆಂಗಳೂರು (GBA) ವ್ಯಾಪ್ತಿ ಹಾಗೂ ರಾಜ್ಯದ ಇತರೆಡೆ ನಿರ್ಮಾಣ ಹಂತದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ (Karnaraka Government) ವಿಫಲವಾಗಿದೆ.

    ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯಿತಾದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗದೇ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಕುರಿತು ಮಾಹಿತಿ ನೀಡುವಂತೆ ಕಾನೂನು ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ನಾಳಿನ ಸಭೆಯಲ್ಲಿ ಕಾನೂನು ಇಲಾಖೆಯ ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳೋ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಎನ್. ಚಲುವರಾಯಸ್ವಾಮಿ

    ಸಭೆಯ ಬಳಿಕ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar), ಜಿಬಿಎಯಿಂದ ನಾವು ಪ್ರಪೋಸಲ್ ಕೊಟ್ಟಿದ್ವಿ. ಆದ್ರೆ ಇದು ಪಂಚಾಯತ್, ಮುನಿಸಿಪಾಲಿಟಿಗೂ ಎಲ್ಲದ್ದಕ್ಕೂ ಬೇಕು. ತಮಿಳುನಾಡು ಸೇರಿ ಬೇರೆ ಬೇರೆ ರಾಜ್ಯದ ಮಾಹಿತಿ ಪಡೆದಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಏನಾದ್ರು ಮಾರ್ಗ ಇದೆಯಾ ಅಂತ ಪರಿಶೀಲನೆ ಮಾಡಲು ಕಾನೂನು ಇಲಾಖೆಗೆ ಹೇಳಿದ್ದೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ – ಬೆಂಗಳೂರಿನ ಈ ರಸ್ತೆಯಲ್ಲಿ 45 ದಿನ ಸಂಚಾರ ಬಂದ್

    ಅನುಮತಿ ಪಡೆಯದ ಕಟ್ಟಡಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕೊಡಬಾರದು ಅಂತ ಸುಪ್ರೀಂ ಕೋರ್ಟ್ ಆದೇಶ ಇದೆ. ಹೀಗಾಗಿ ಸಿಎಂ ಅವರ ನೇತೃತ್ವದಲ್ಲಿ ಸಭೆ ಆಗಿದೆ. ಎಲ್ಲಾ ಇಲಾಖೆ ಸಚಿವರು ಭಾಗಿಯಾಗಿದ್ದರು, ಎಜಿ ಕೂಡಾ ಇದ್ದರು. ಇವತ್ತಿನ ಸಭೆಯಲ್ಲಿ ಅನೇಕ ಅಭಿಪ್ರಾಯಗಳು ಬಂದಿವೆ. ಅವಕಾಶ ಕೊಡೋಕೆ ಕಾನೂನಿನಲ್ಲಿ ಅನೇಕ ಅಡೆತಡೆಗಳು ಇವೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ 30*40 ಸೈಟ್ ಗೆ ಅನುಮತಿ ಕೊಡೋ ತೀರ್ಮಾನ ಮಾಡಿದ್ದೇವೆ. ಇದರ ಮೇಲೆ ಜಾಸ್ತಿ ಅಳತೆಯಲ್ಲಿ ಇರೋ ಕಟ್ಟಡಗಳಿಗೆ ಕೊಡೋದು ಹೇಗೆ ಅಂತ ಚರ್ಚೆ ಆಗಿದೆ. ನಾಳೆಯ (ಗುರುವಾರ) ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡ್ತೀವಿ. ಹೊಸ ಕಟ್ಟಡ ಕಟ್ಟಲು ಇನ್ನು ಮುಂದೆ ಬಿಡೊಲ್ಲ. ಈಗ ಕಟ್ಟಿರೋರಿಗೆ ಸಹಾಯ ಮಾಡೋದಕ್ಕೆ ದಾರಿ ಇದೆಯಾ ನೋಡ್ತಾ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ – ಅಂತಿಮ ವರದಿ ಸಲ್ಲಿಸಲು SIT ತಯಾರಿ

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಲಮಂಡಳಿ ಇಲಾಖೆ, ವಿದ್ಯುತ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

  • ರಾಜ್ಯದಲ್ಲಿ 1.2 ಕೋಟಿ ಮನೆಗಳ ಸಮೀಕ್ಷೆ ಮುಕ್ತಾಯ – ಬೆಂಗಳೂರಲ್ಲಿ ಜಾತಿ ಜನಗಣತಿ ಮೊದಲ ದಿನವೇ ಗೊಂದಲ

    ರಾಜ್ಯದಲ್ಲಿ 1.2 ಕೋಟಿ ಮನೆಗಳ ಸಮೀಕ್ಷೆ ಮುಕ್ತಾಯ – ಬೆಂಗಳೂರಲ್ಲಿ ಜಾತಿ ಜನಗಣತಿ ಮೊದಲ ದಿನವೇ ಗೊಂದಲ

    – ಜಿಬಿಎ ವ್ಯಾಪ್ತಿಯಲ್ಲಿಂದು 22,141 ಮನೆಗಳ ಸಮೀಕ್ಷೆ
    – ತಾಂತ್ರಿಕ ಸಮಸ್ಯೆ ಮಧ್ಯೆ ಜನರ ಆಕ್ರೋಶ

    ಬೆಂಗಳೂರು: ರಾಜ್ಯದಲ್ಲಿ 1.2 ಕೋಟಿ (1,02,38,657 ಮನೆಗಳು) ಮನೆಗಳ ಸಮೀಕ್ಷೆ (Caste Census) ದಾಟಿದೆ. ಇವತ್ತು ಒಂದೇ ದಿನ 9,13,892 ಮನೆಗಳ ಸರ್ವೆ ಆಗಿದೆ. ಬೆಂಗಳೂರಿನಲ್ಲಿ (Bengaluru) 22,141 ಮನೆಗಳ ಜಾತಿಗಣತಿ ಆಗಿದೆ.

    ಬೆಂಗಳೂರಿನಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ ಗೊಂದಲದ ಗೂಡಾಗಿತ್ತು. ಮೊದಲ ದಿನವೇ ಗಣತಿದಾರರಿಗೆ ಸಮೀಕ್ಷೆ ಆ್ಯಪ್ ಗೊಂದಲ, ಸರ್ವರ್ ಸಮಸ್ಯೆ, ಲೊಕೇಷನ್ ಕಿರಿಕಿರಿ ಎದುರಾಗಿತ್ತು. ಹಲವಡೆ ಐಡಿ ಕಾರ್ಡ್ ಕಿಟ್ ವಿತರಣೆಯೂ ವಿಳಂಬವಾಗಿತ್ತು. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಂತೂ ಗಣತಿದಾರರು ಪ್ರತಿಭಟನೆಗೆ ಇಳಿದಿದ್ರು. ಇದನ್ನೂ ಓದಿ: ಪ್ರಶ್ನೆ ಸಿಂಪಲ್ ಇರಬೇಕು ಇದು ಟೂ ಮಚ್ – ಜಾತಿಗಣತಿ ವೇಳೆ ಡಿ.ಕೆ ಶಿವಕುಮಾರ್‌ ಅಸಮಾಧಾನ

    ಬೆಂಗಳೂರಿನ ಹಲವಡೆ ಸಮೀಕ್ಷೆದಾರರು ಮನೆಗೆ ತೆರಳಿದಾಗ ವೈಯಕ್ತಿಕ ಮಾಹಿತಿ ಯಾಕೆ ಕೊಡಬೇಕು..? ಮಾಹಿತಿ ಕೊಟ್ರೇ ಅದು ಸುರಕ್ಷಿತನಾ..? ಅಂತ ಅಸಮಾಧಾನ ವ್ಯಕ್ತಪಡಿಸಿ ಗಣತಿದಾರರ ವಿರುದ್ಧ ತಿರುಗಿಬಿದ್ರು. ಪ್ರಮುಖವಾಗಿ ಆಧಾರ್ ಕಾರ್ಡ್, ಬ್ಯಾಂಕ್ ವಿವರ, ಚರಾಸ್ತಿ-ಸ್ಥಿರಾಸ್ತಿ ವಿವರ ಕುಟುಂಬದ ಸಾಲ, ಆದಾಯ ತೆರಿಗೆ ಪಾವತಿದಾರರು, ಕುರಿ-ಎಮ್ಮೆ-ಕೋಣ ಸಾಕಿದ್ದೀರಾ..? ಹೀಗೆ ಅನೇಕ ಪ್ರಶ್ನೆಗಳಿಗೆ ಇದೇನು ಆಸ್ತಿ ಸಮೀಕ್ಷೆನಾ ಅಂತ ಜನ ಹೈರಾಣಾಗಿ ಆಕ್ರೋಶ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ – ಗೊಂದಲ, ಘರ್ಷಣೆ ತಪ್ಪಿಸಿ: ಅಶ್ವತ್ಥ ನಾರಾಯಣ್

    ಬೆಂಗಳೂರು ಜನರ ವಿರೋಧ ಯಾಕೆ?
    * ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಕೇಳ್ತಿರೋದಕ್ಕೆ ವಿರೋಧ
    * ರಾಷ್ಟ್ರೀಕೃತನಾ ಅನ್ನೋ ವಿವರ ಕೇಳ್ತಾ ಇದ್ದಾರೆ.
    * ಆಸ್ತಿ ವಿವರ ಕಲೆಹಾಕುತ್ತಿದ್ದಾರೆ..
    * ಸ್ವಂತ ಮನೆನಾ..? ಬಾಡಿಗೆ ಮನೆನಾ..? ಅಂತ ಕೇಳ್ತಿದ್ದಾರೆ
    * ಅಂಗಡಿ ಇದ್ಯಾ..? ಜಮೀನು ಇದ್ಯಾ..? ಅಂತ ಪ್ರಶ್ನೆ
    * ಗಾಡಿ ಇದ್ಯಾ.. ಕಾರ್ ಇದ್ಯಾ..? ಆರ್‌ಸಿ ನಂಬರ್ ಕೊಡಬೇಕು
    * ಸ್ಕೂಲ್ ಯಾಕೆ ಬಿಟ್ರಿ.. ಅನ್ನೋ ಪ್ರಶ್ನೆಗೆ ತೀವ್ರ ವಿರೋಧ

    ಬೆಂಗ್ಳೂರಲ್ಲಿಂದು 22,141 ಮನೆಗಳ ಸಮೀಕ್ಷೆ
    ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 32 ಲಕ್ಷ ಮನೆಗಳ ಸಮೀಕ್ಷೆ ಮಾಡಬೇಕಿದ್ದು, ಮೊದಲ ದಿನ 22,141 ಮನೆಗಳ ಸಮೀಕ್ಷೆ ಮುಕ್ತಾಯವಾಗಿದೆ. ಇನ್ನೂ 2 ವಾರಗಳಲ್ಲಿ ಉಳಿದ ಎಲ್ಲಾ ಮನೆಗಳ ಸಮೀಕ್ಷೆ ಮುಕ್ತಾಯಗೊಳಿಸಬೇಕಿದೆ.

    5 ಪಾಲಿಕೆಗಳ ವ್ಯಾಪ್ತಿಯಲ್ಲಿನ ಸಮೀಕ್ಷಾ ವರದಿ
    1. ಕೇಂದ್ರ ನಗರ ಪಾಲಿಕೆ: 2,822
    2. ಪೂರ್ವ ನಗರ ಪಾಲಿಕೆ: 3,105
    3. ಉತ್ತರ ನಗರ ಪಾಲಿಕೆ: 5,987
    4. ದಕ್ಷಿಣ ನಗರ ಪಾಲಿಕೆ: 3,145
    5. ಪಶ್ಚಿಮ ನಗರ ಪಾಲಿಕೆ: 7,082
    ಒಟ್ಟು ಮನೆಗಳು: 22,141

  • ಬೆಂಗಳೂರು | ಮೊದಲ ದಿನವೇ ಜಾತಿಗಣತಿ ಸಮೀಕ್ಷೆಗೆ ವಿಘ್ನ – ಗೊಂದಲ ನಿವಾರಣೆಗೆ ಗಣತಿದಾರರಿಂದ ಪ್ರತಿಭಟನೆ

    ಬೆಂಗಳೂರು | ಮೊದಲ ದಿನವೇ ಜಾತಿಗಣತಿ ಸಮೀಕ್ಷೆಗೆ ವಿಘ್ನ – ಗೊಂದಲ ನಿವಾರಣೆಗೆ ಗಣತಿದಾರರಿಂದ ಪ್ರತಿಭಟನೆ

    ಬೆಂಗಳೂರು: ನಗರದಲ್ಲಿ ತಡವಾಗಿ ಆರಂಭವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಹತ್ತಾರು ವಿಘ್ನ ಎದುರಾಗಿದೆ. ಹೀಗಾಗಿ ವೈಯಾಲಿಕಾವಲ್ ಬಿಬಿಎಂಪಿ (BBMP) ಕಚೇರಿಯಲ್ಲಿ ಗೊಂದಲಗಳ ನಿವಾರಣೆಗೆ ಆಗ್ರಹಿಸಿ ನೂರಾರು ಜನ ಗಣತಿದಾರರು ಪ್ರತಿಭಟನೆ ನಡೆಸಿದರು.

    ಬಹಳಷ್ಟು ಜನ ಗಣತಿದಾರರು ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಿಂದ ಸಮೀಕ್ಷೆಗೆ ಹೋಗದೇ ಗೊಂದಲಗಳಿಂದಾಗಿ ಪರದಾಡಿದರು. ವಾರ್ಡ್‌ಗಳ ಹಂಚಿಕೆಯಲ್ಲಿ ಗೊಂದಲ, ರೋಗಿಗಳನ್ನೂ ಗಣತಿಗೆ ನೇಮಕ, ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಸೇರಿ ಹತ್ತಾರು ಗೊಂದಲಗಳಿಂದಾಗಿ ಮೊದಲ ದಿನವೇ ಸಮೀಕ್ಷೆಗೆ ವಿಘ್ನ ಎದುರಾಗಿದೆ. ಗೊಂದಲಗಳ ಬಗೆಹರಿಸಲು ಆಗ್ರಹಿಸಿ ಜಿಬಿಎ ಅಧಿಕಾರಿಗಳ ಜೊತೆ ಗಣತಿದಾರರು ವಾಗ್ವಾದ ನಡೆಸಿದರು.ಇದನ್ನೂ ಓದಿ: ಮುಜರಾಯಿಂದ ಬಿಗ್‌ಶಾಕ್ – 40 ವರ್ಷಗಳಿಂದ ಬೆಂಗ್ಳೂರಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳು ಜಪ್ತಿ

    ತಮ್ಮ ಕ್ಷೇತ್ರ ಬಿಟ್ಟು 30-40 ಕಿ.ಮೀ ದೂರದ ಕ್ಷೇತ್ರಗಳಿಗೆ ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ. ಜೊತೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಣತಿದಾರರು ಬೇಸರ ಹೊರಹಾಕಿದರು. ಕೊನೆಗೆ ಗೊಂದಲ ಬಗೆಹರಿಸಲು ಎರಡು ದಿನ ಸಮಯಾವಕಾಶ ಪಡೆದ ಜಿಬಿಎ ಅಧಿಕಾರಿಗಳು, ಗಣತಿದಾರರಿಂದ ಕೋರಿಕೆ ಅರ್ಜಿಗಳನ್ನು ಸ್ವೀಕರಿಸಿ ಕಳುಹಿಸಿದರು.

    ಬೆಂಗಳೂರು ಗಣತಿದಾರರ ಗೊಂದಲಗಳೇನು?
    – ವಾರ್ಡ್‌ಗಳ ಹಂಚಿಕೆಯಲ್ಲಿ ಗೊಂದಲ – ಸ್ಥಳೀಯವಾಗಿ ಹತ್ತು ವಾರ್ಡ್‌ಗಳ ಆಯ್ಕೆಗೆ ಅವಕಾಶ. ಆದರೆ ಗಣತಿದಾರರು ಆಯ್ಕೆ ಮಾಡಿದ ವಾರ್ಡ್‌ಗಳನ್ನು ಬಿಟ್ಟು ದೂರ ದೂರದ ವಾರ್ಡ್ಗಳಿಗೆ ಹಂಚಿಗೆ ಮಾಡಲಾಗಿದೆ.
    – ವಿಕಲ ಚೇತನರಿಗೆ, ಮಕ್ಕಳಿರುವ ತಾಯಂದಿರು, ಗರ್ಭಿಣಿಯರಿಗೆ ದೂರದ ವಾರ್ಡ್‌ಗಳ ಹಂಚಿಕೆಯಿಂದ ಭಾರೀ ಸಮಸ್ಯೆ.
    – ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಿಗೆ ನಗರದೊಳಗೆ ಗಣತಿಗೆ ನಿಯೋಜನೆ ಮಾಡಿದ್ದು, 20, 30, 40 ಕಿ.ಮೀ ದೂರ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.
    – ಹೃದ್ರೋಗ ಸೇರಿ ಕೆಲ ರೋಗಗಗಳಿಂದ ನರಳುತ್ತಿರುವ ಸರ್ಕಾರಿ ನೌಕರರಿಗೂ ಗಣತಿಗೆ ನೇಮಕ ಮಾಡಿದ್ದಾರೆ. ಗಣತಿಯಿಂದ ವಿನಾಯಿತಿ ಕೊಡ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
    – ಹಲವು ವಿಕಲಚೇತನರು ಗಣತಿಯಿಂದ ವಿನಾಯಿತಿ ಕೋರಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸ್ತಿಲ್ಲ ಎಂದು ಆರೋಪ
    – ಸಮೀಕ್ಷೆ ಆ್ಯಪ್ ಗೊಂದಲ, ತಾಂತ್ರಿಕ ಸಮಸ್ಯೆ ನಿವಾರಣೆ ಆಗಿಲ್ಲ.

    ಪ್ರತಿ ಗಣತಿದಾರರಿಗೆ ಒಟ್ಟು 300 ಮನೆಗಳ ಗಣತಿಗೆ ಸೂಚನೆ ನೀಡಲಾಗಿದ್ದು, ಅ.4ರಿಂದ ಒಟ್ಟು 14 ದಿನಗಳ ಕಾಲ ಗಣತಿ ನಡೆಯಲಿದೆ. ಇನ್ನೂ ಗಣತಿ ಸಂದರ್ಭದಲ್ಲಿ ಒಂದು ಮನೆಯ ಗಣತಿಗೆ ಕನಿಷ್ಟ ಅರ್ಧ ಗಂಟೆಯಿಂದ ಒಂದು ಗಂಟೆ ಕಾಲ ಬೇಕೇ ಬೇಕು. ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದಷ್ಟೂ ಸಮೀಕ್ಷೆಗೆ ಹೆಚ್ಚು ಸಮಯ ಹಿಡಿಯಲಿದೆ. ಜೊತೆಗೆ ಒಟ್ಟು 60 ಪ್ರಶ್ನೆಗಳ ಪೈಕಿ 40 ಪ್ರಶ್ನೆಗಳನ್ನು ಮನೆಯ ಪ್ರತಿ ಸದಸ್ಯರಿಗೂ ಪ್ರತ್ಯೇಕವಾಗಿ ಕೇಳಿ ಬರೆದುಕೊಳ್ಳಬೇಕು. ಉಳಿದ 20 ಸಾಮಾನ್ಯ ಪ್ರಶ್ನೆಗಳಿಗೆ ಕುಟುಂಬದ ಯಾರಾದರೂ ಒಬ್ಬರಿಂದ ಉತ್ತರ ಪಡೆಯಬೇಕು ಎಂಬ ಸೂಚನೆಯಿದೆ.ಇದನ್ನೂ ಓದಿ: ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ

     

  • ಬೆಂಗಳೂರಿನಲ್ಲಿ ಅ.3ರಿಂದ ಜಾತಿಗಣತಿ ಸಮೀಕ್ಷೆ ಆರಂಭ – ಜಿಬಿಎ ಮುಖ್ಯ ಆಯುಕ್ತ

    ಬೆಂಗಳೂರಿನಲ್ಲಿ ಅ.3ರಿಂದ ಜಾತಿಗಣತಿ ಸಮೀಕ್ಷೆ ಆರಂಭ – ಜಿಬಿಎ ಮುಖ್ಯ ಆಯುಕ್ತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅ.3ರಿಂದ ಜಾತಿಗಣತಿ ಸಮೀಕ್ಷೆ (Caste Census Survey) ಆರಂಭವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಮುಖ್ಯ ಆಯುಕ್ತ ಮಹೇಶ್ವರ ರಾವ್ (Maheshwar Rao) ಅವರು ತಿಳಿಸಿದ್ದಾರೆ.

    ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಕ್ಟೋಬರ್ 3ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಸದ್ಯ ಸಮೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಅ.3ರ ಒಳಗೆ ತರಬೇತಿ ಮುಕ್ತಾಯ ಆಗಲಿದೆ. ಅದಾದ ಬಳಿಕ ಸಮೀಕ್ಷೆ ಆರಂಭ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ರಾಯಚೂರು | ಜಾತಿಗಣತಿ ಸಮೀಕ್ಷೆಗೆ ನಿರ್ಲಕ್ಷ್ಯ – ಆರು ಅಂಗನವಾಡಿ ಕಾರ್ಯಕರ್ತೆಯರು ವಜಾ, 57 ಸಿಬ್ಬಂದಿಗೆ ನೋಟಿಸ್

    ಈ ಮೊದಲು ಸಿಬ್ಬಂದಿ ಇಲ್ಲದ ಕಾರಣದಿಂದ ಬೆಂಗಳೂರಿನಲ್ಲಿ ಒಂದು ವಾರ ತಡವಾಗಿ ಜಾತಿಗಣತಿ ಸಮೀಕ್ಷೆ ಆರಂಭಿಸುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ದಿನಾಂಕ ನಿಗದಿಪಡಿಸಿದ್ದಾರೆ. ಈಗಾಗಲೇ ಬೆಂಗಳೂರು ಹೊರತುಪಡಿಸಿ ರಾಜ್ಯದೆಲ್ಲೆಡೆ ಸೆ.22ರಿಂದ ಜಾತಿಗಣತಿ ಸಮೀಕ್ಷೆ ಆರಂಭವಾಗಿದ್ದು, ಅ.7ರಂದು ಕೊನೆಗೊಳ್ಳಲಿದೆ.

  • ಓಸಿ ಇಲ್ಲದೇ ವಿದ್ಯುತ್ ಸಂಪರ್ಕ ಕಡಿತ – ಸೋಮವಾರ ಸಿಎಂ, ಸಿಎಸ್‌ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ

    ಓಸಿ ಇಲ್ಲದೇ ವಿದ್ಯುತ್ ಸಂಪರ್ಕ ಕಡಿತ – ಸೋಮವಾರ ಸಿಎಂ, ಸಿಎಸ್‌ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ

    – 1,200 ಅಡಿಗೂ ಹೆಚ್ಚು ವಿಸ್ತೀರ್ಣದ ಕಟ್ಟಡಕ್ಕೂ ಓಸಿ ವಿನಾಯ್ತಿ
    – ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ರಿಲ್ಯಾಕ್ಸೇಷನ್

    ಬೆಂಗಳೂರು: ಓಸಿ (Occupancy Certificate) ಸಮಸ್ಯೆಯಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್‌ ಸಂಪರ್ಕ (Electricity Connection) ಇಲ್ಲದಂತಾಗಿದೆ. ಹೀಗಾಗಿ ಸಮಸ್ಯೆ ಬಗೆಹರಿಸಿ ವಿದ್ಯುತ್ ಸಂಪರ್ಕ ನೀಡಲು ಸಿಎಂ, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸೋಮವಾರ ಸಭೆ ಬಳಿಕ ಓಸಿ ಇಲ್ಲದೇ ವಿದ್ಯುತ್ ಸಂಪರ್ಕಕ್ಕೆಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.

    ಹೌದು. ಬೆಂಗಳೂರು ನಗರ (Bengaluru City) ವ್ಯಾಪ್ತಿಯಲ್ಲಿ 1,200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯ್ತಿ ನೀಡಬೇಕಾ? ಎಂಬ ವಿಷಯದ ಬಗ್ಗೆ ಕಳೆದ ಕ್ಯಾಬಿನೆಟ್‌ನಲ್ಲಿ ಚರ್ಚೆನಡೆಸಲಾಗಿತ್ತು. ಬೆಸ್ಕಾಂನಿಂದ ಓಸಿ ಇಲ್ಲದೇ ಇದ್ದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಇದರಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲಂದಂತಾಗುತ್ತದೆ. ಹೀಗಾಗಿ ವಿದ್ಯುತ್ ಸಂಪರ್ಕಕ್ಕಾಗಿ ಓಸಿ ವಿನಾಯಿತಿ ನೀಡಲು ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಸಿಎಂ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ.

    ಇನ್ನೂ ಓಸಿಯಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗಲಿದೆ. ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. 53 ಸಾವಿರ ಅರ್ಜಿಗಳಿಂದ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಸಿಗಲಿದೆ. ಅಸ್ತಿತ್ವದಲ್ಲಿ ಇರುವ ಕಟ್ಟಡಗಳಿಂದ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ, ಕಮರ್ಷಿಯಲ್ ಮತ್ತು ರೆನ್ಸಿಡೆನ್ಷಿಯಲ್‌, 30*40 ಚದರ ಅಡಿ ನಿವೇಶನದ ವಿದ್ಯುತ್ ಸಂಪರ್ಕಕ್ಕೆ 33 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. 1,200 ಚದರ ಅಡಿ ನಿವೇಶನಗಳಿಂದ 25,000 ಸಾವಿರ ಅರ್ಜಿಗೆ ರಿಲ್ಯಾಕ್ಸೇಷನ್ ಸಿಗಲಿದೆ.

  • ಬೆಂಗಳೂರಿನ ಆಸ್ತಿ ಮಾಲೀಕರಿಗೆ GBA ಗುಡ್‌ನ್ಯೂಸ್‌ – ಬಿ ಖಾತಾಗಳಿಗೂ ಎ-ಖಾತಾ ಮಾನ್ಯತೆಗೆ ತಯಾರಿ

    ಬೆಂಗಳೂರಿನ ಆಸ್ತಿ ಮಾಲೀಕರಿಗೆ GBA ಗುಡ್‌ನ್ಯೂಸ್‌ – ಬಿ ಖಾತಾಗಳಿಗೂ ಎ-ಖಾತಾ ಮಾನ್ಯತೆಗೆ ತಯಾರಿ

    – ಜಿಬಿಎಯಿಂದ ಹೊಸ ಸಾಫ್ಟ್‌ವೇರ್‌ ತಯಾರು

    ಬೆಂಗಳೂರು: ಇಲ್ಲಿನ ನಗರವಾಸಿಗಳಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಗುಡ್‌ನ್ಯೂಸ್‌ ಕೊಟ್ಟಿದೆ. ಬಿ – ಖಾತಾಗಳಿಗೆ ಎ-ಖಾತಾ ಮಾನ್ಯತೆ ನೀಡಲು ಜಿಬಿಎ ಹೊಸದೊಂದು ಸಾಫ್ಟ್‌ವೇರ್‌ ಸಿದ್ಧಪಡಿಸಿದೆ. ಈಗಾಗಲೇ ಸಾಫ್ಟ್‌ವೇರ್‌ ನಿರ್ಮಿಸುವ ಕಾರ್ಯ ಸಂಪೂರ್ಣ ಮುಕ್ತಾಯ ಆಗಿದೆ. ಇನ್ನು ಹೊಸ ತಂತ್ರಜ್ಞಾನದ ಆಪ್ ಸಿದ್ಧಪಡಿಸಿರುವುದನ್ನು ಲೋಕಾರ್ಪಣೆ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ತಲುಪಿದೆ. ಡಿಸಿಎಂ ಒಪ್ಪಿಗೆ ಕೊಟ್ಟ ಬಳಿಕ ಎ – ಖಾತಾ (A Khata) ವಿತರಣೆ ಆಗಲಿದೆ. ಎ ಖಾತಾ ವಿತರಣೆಗೆ ಸಣ್ಣಪುಟ್ಟ ಕೆಲಸ ಅಷ್ಟೇ ಬಾಕಿ ಶೀಘ್ರದಲ್ಲೇ ಎ ಖಾತಾ ವಿತರಣೆ ಆಗಲಿದೆ.

    ಬೆಂಗಳೂರಿನ (Bengaluru) ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿತ್ತು. ಇದರ ಬೆನ್ನಲ್ಲೇ ನಗರದ ಎಲ್ಲಾ ಬಿ ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಗರದಲ್ಲಿರುವ ಅಕ್ರಮ ಮತ್ತು ಅನಿಯಂತ್ರಿತ ಕಟ್ಟಡ ಮತ್ತು ವಿನ್ಯಾಸಗಳನ್ನು ನಿಯಂತ್ರಿಸಲು ಈ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಆದ್ರೆ ಆದೇಶ ಆಗಿ ಒಂದು ತಿಂಗಳು ಸಮೀಪಿಸುತ್ತಾ ಇದ್ದರೂ ಎ-ಖಾತಾ ವಿತರಣೆ ಆಗಿರಲಿಲ್ಲ. ಹೀಗಾಗಿ ಜಿಬಿಎಯಿಂದ ಹೊಸ ಸಾಫ್ಟ್‌ವೇರ್‌ ಸಿದ್ಧಪಡಿಸುತ್ತಾ ಇದ್ದರು. ಈಗ ಹೊಸ ಸಾಫ್ಟ್‌ವೇರ್‌ ಸಿದ್ಧಪಡಿಸುವ ಕಾರ್ಯಮುಕ್ತಾಯ ಆಗಿದ್ದು. ಗ್ರೀನ್ ಸಿಗ್ನಲ್‌ಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ರವಾನೆ ಆಗಲಿದೆ. ಇದನ್ನೂ ಓದಿ: ಗಣಪತಿ ಆತ್ಮಹತ್ಯೆ ಕೇಸ್‌ ನ್ಯಾ.ಕೆ.ಎನ್.ಕೇಶವ ನಾರಾಯಣ ಸಲ್ಲಿಸಿದ್ದ ವರದಿ ರಿಜೆಕ್ಟ್‌- ಕ್ಯಾಬಿನೆಟ್‌ನಲ್ಲಿ ಕೈಗೊಂಡ ತೀರ್ಮಾನಗಳು ಏನು?

    ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯಿಂದ 2009ರಿಂದ ಈಚೆಗೆ ಬಿ ಖಾತಾವನ್ನು ನೀಡಲಾಗಿತ್ತು, ಬಿ-ಖಾತಾ ನೀಡುವ ಪ್ರಕ್ರಿಯೆಯನ್ನು 2024 ರಂದು ಸ್ಥಗಿತಗೊಳಿಸಲಾಗಿತ್ತು, ಹೀಗಾಗಿ ಈ ನಡುವಿನ ಬಿಖಾತಾ ಆಸ್ತಿ ಸಮಸ್ಯೆ ಬಗೆಹರಿಸಲು ಈ ನಿರ್ಧಾರವನ್ನು ಮಾಡಲಾಗಿದೆ, ಇನ್ನು ಜಿಬಿಎಯಿಂದ ಹೊಸ ಸಾಫ್ಟ್‌ವೇರ್‌ ಸಿದ್ಧಪಡಿಸಿದ್ದು ಖಾತಾದಾರರೇ ಅಪ್ಲೈ ಮಾಡಿ ಹಣ ಪಾವತಿ ಮಾಡುವ ವ್ಯವಸ್ಥೆ ಇರಲಿದೆ. ಜೊತೆಗೆ ಸೈಟ್, ಕಟ್ಟಡ ಮಾಹಿತಿಯನ್ನ ಒಳಗೊಂಡ ಅಂಶವನ್ನ ಕೂಡ ಉಲ್ಲೇಖ ಮಾಡಿ ಎ-ಖಾತಾಗೆ ಅಪ್ಲೈ ಮಾಡಬೇಕಾಗುತ್ತೆ. ಒಂದಷ್ಟು ಅಂಶಗಳನ್ನ ಒಳಗೊಂಡಂತಹ ಸಾಫ್ಟ್‌ವೇರ್‌ ಸಿದ್ಧವಾಗಿದ್ದು ಸಾಫ್ಟ್‌ವೇರ್‌ ಸಿದ್ಧವಾದ ಬಳಿಕ ಮುಂದಿನ ತಿಂಗಳು ಎ-ಖಾತಾ ವಿತರಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ

    ಹೊಸ ಸಾಫ್ಟ್‌ವೇರ್‌ ಜೊತೆಗೆ ಒಂದಷ್ಟು ಮಾರ್ಗಸೂಚಿಗಳು ಎ-ಖಾತಾ ಪಡೆಯಲು ಜಾರಿಯಾಗಲಿವೆ. ಈ ಮೂಲಕ ಬಿ-ಖಾತಾಗಳಿದ್ದ ಬಿಬಿಎಂಪಿ ನಕ್ಷೆ ಅನುಮೋದನೆ ಓಸಿ ಹಾಗೂ ಸಿಸಿ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದೆ. ಇನ್ನು ಎ ಖಾತಾ ನೀಡಲು ಮಾರ್ಗಸೂಚಿ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲ್ಲ- ಸಿಎಂ ಮನವಿಯನ್ನು ತಿರಸ್ಕರಿಸಿದ ಅಜೀಂ ಪ್ರೇಮ್‌ಜಿ

  • ಅಕ್ಟೋಬರ್‌ ಒಳಗೆ ಗುಂಡಿ ಮುಚ್ಚದಿದ್ರೆ ಚೀಫ್‌ ಎಂಜಿನಿಯರ್‌ಗಳೇ ಸಸ್ಪೆಂಡ್‌: ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

    ಅಕ್ಟೋಬರ್‌ ಒಳಗೆ ಗುಂಡಿ ಮುಚ್ಚದಿದ್ರೆ ಚೀಫ್‌ ಎಂಜಿನಿಯರ್‌ಗಳೇ ಸಸ್ಪೆಂಡ್‌: ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

    – ಜನರ ಕಷ್ಟ ನಿಮ್ಮ ಕಣ್ಣಿಗೆ ಬೀಳ್ತೀಲ್ವಾ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು; ಸಿಎಂ ಫುಲ್‌ ಗರಂ
    – ಒಟ್ಟು 14,795 ರಸ್ತೆ ಗುಂಡಿಗಳ ಗುರುತು; 8,046 ಗುಂಡಿಗಳು ಮುಚ್ಚಲು ಬಾಕಿ

    ಬೆಂಗಳೂರು: ಬೆಂಗಳೂರು ನಗರ ರಸ್ತೆಗಳ (Bengaluru City Roads) ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿದಂದು ಮಹತ್ವದ ಸಭೆ ನಡೆಯಿತು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ (Siddaramaiah) ಅವರು ಎಂಜಿನಿಯರ್‌ಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಂದ ಮಾಹಿತಿ ಪಡೆದ ಸಿಎಂ, ಹಾಳಾಗಿರುವ ನಗರದ ರಸ್ತೆ ಗುಂಡಿಗಳಿಂದ (Potholes) ಜನ ಹೈರಾಣಾಗಿದ್ದಾರೆಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಠ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು, ನಾಚಿಕೆ ಆಗುವುದಲ್ಲವೇ ನಿಮ್ಗೆ? ಮಚ್ಚಿರುವ ಗುಂಡಿಗಳೂ ನೆಟ್ಟಗಿಲ್ಲ. ಜನರ ಪ್ರತಿನಿತ್ಯದ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವಾ? ತುರ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ? ಪ್ರತಿ ವಾರ್ಡ್‌ನ ಎಂಜಿನಿಯರ್‌ಗಳು, ಮುಖ್ಯ ಎಂಜಿನಿಯಋಗಳು ಏನ್‌ ಮಾಡ್ತಿದ್ದಾರೆ? ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲೇಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾನು ಯಾರ ಮುಖವನ್ನೂ ನೋಡಲ್ಲ. ಗುಂಡಿ ಮುಚ್ಚದಿದ್ದರೇ ಎಲ್ಲ ಚೀಫ್ ಎಂಜಿನಿಯರ್‌ಗಳನ್ನ ಸಸ್ಪೆಂಡ್‌ ಮಾಡಿ ಮನೆಗೆ ಕಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಗುತ್ತಿಗೆದಾರರೊಂದಿಗೆ ಶಾಮೀಲಾಗದೇ ಒದಗಿಸಿರುವ ಅನುದಾನಕ್ಕೆ ಉತ್ತಮ ಗುಣಮಟ್ಟದ, ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮ ವಹಿಸಿ. ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ? ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ? ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ಇರಿಸಬೇಕು ಎಂದು ತಾಕೀತು ಮಾಡಿದರು.

    ಬಿಡಿಎ, ಬಿಎಂಆರ್ ಸಿಎಲ್, ಜಲಮಂಡಳಿ ಅಧಿಕಾರಿಗಳ ನಡುವೆ ಸಮನ್ವಯವೇ ಇರುವುದಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು. ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯ ಆಯುಕ್ತರು ಪ್ರತಿ ವಾರ 5 ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು. ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಆದ್ಯತೆ ಮೇರೆಗೆ ಕ್ರಮ ವಹಿಸಿ. ಒಂದು ತಿಂಗಳ ನಂತರ ಮತ್ತೆ ಮೌಲ್ಯ ಮಾಪನ ನಡೆಸಲಾಗುವುದು ಎಂದು ಹೇಳಿದರು ಸಿಎಂ

    14,795 ರಸ್ತೆ ಗುಂಡಿಗಳ ಗುರುತು
    ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಸ್ತೆ ಜಾಲದಲ್ಲಿ 1,648.43 ಕಿ.ಮೀ ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿವೆ. 46.61 ಕಿ.ಮೀ ಹೈಡೆನ್ಸಿಟಿ ಕಾರಿಡಾರ್ ರಸ್ತೆಗಳಿವೆ. ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣ ನಗರಪಾಲಿಕೆಗಳಲ್ಲಿ ಒಟ್ಟು 14,795 ರಸ್ತೆ ಗುಂಡಿಗಳನ್ನು ಗುರುತಿಸಿಲಾಗಿದೆ. ಈಗಾಗಲೇ 6,749 ಗುಂಡಿಗಳನ್ನು ಮುಚ್ಚಲಾಗಿದ್ದು 8,046 ಗುಂಡಿಗಳು ಮುಚ್ಚಲು ಬಾಕಿ ಇವೆ. ಅಕ್ಟೋಬರ್ ಅಂತ್ಯ ವೇಳೆಗೆ ಎಲ್ಲಾ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗಾಗಲೇ 108.20 ಕಿ.ಮೀ ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ.‌ 143.68 ಕಿ.ಮೀ ಉದ್ದದ ರಸ್ತೆ ಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. 401.63 ಕಿ. ಮೀ ರಸ್ತೆಗಳು ಡಾಂಬರೀಕರಣ ಗೊಂಡಿದ್ದು, 440.92 ಕಿ.ಮೀ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆ 584.60 ಕಿ ಮೀ ಉದ್ದದ ರಸ್ತೆಗಳಲ್ಲಿ  ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

    * ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು 2025-26ರ ಆಯವ್ಯಯದಲ್ಲಿ 18 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
    * ಎಲ್ಲಾ ನಗರ ಪಾಲಿಕೆಗಳಿಗೂ ತುರ್ತು ಕಾಮಗಾರಿ ಕೈಗೊಳ್ಳಲು 25 ಕೋಟಿ ರೂ.ಗಳ ಹಣ ಬಿಡುಗಡೆ ಮಾಡಲಾಗಿದ್ದು, ಪಾಲಿಕೆಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ.
    * ನೂತನ ತಂತ್ರಜ್ಞಾನ JETPATCHER ಬಳಸಿಕೊಳ್ಳಲು 2.50 ಕೋಟಿ ರೂ.ಗಳ ಮೊತ್ತದ ಟೆಂಡರ್ ಚಾಲ್ತಿಯಲ್ಲಿದ್ದು ಸದರಿ ತಂತ್ರಜ್ಞಾನದಿಂದ ತೇವಾಂಶವಿರುವ ಸಮಯದಲ್ಲಿಯೂ ಗುಂಡಿಗಳನ್ನು ಮುಚ್ಚಬಹುದಾಗಿದೆ.
    * ಐದೂ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ತಾಂತ್ರಿಕ ಸಮನ್ವಯಾಧಿಕಾರಿ ನೇಮಿಸಲು ಕ್ರಮ.
    * ಇಬ್ಬಲೂರು ಜಂಕ್ಷನ್, ಅಗರ, ವೀರಣ್ಣನ ಪಾಳ್ಯ, ನಾಗವಾರ ಮತ್ತು ಹೆಬ್ಬಾಳ ಜಂಕ್ಷನ್‌ಗಳಲ್ಲಿ ಜಲಮಂಡಳಿ ಮತ್ತು ಮೆಟ್ರೋ ಕಾಮಗಾರಿಯಿಂದ ಜಂಕ್ಷನ್ ಹಾಳಾಗಿದ್ದು 400 ಕೋಟಿ ರೂ.ಗಳ ಹೊರವರ್ತುಲ ರಸ್ತೆ ಅಭಿವೃದ್ಧಿ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ತಿಳಿಸಿದರು.

  • ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಡಿಸಿಎಂ ಡಿಕೆಶಿ

    ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಡಿಸಿಎಂ ಡಿಕೆಶಿ

    – ʻಪಬ್ಲಿಕ್‌ ಟಿವಿʼ ನಿರಂತರ ವರದಿ ಬಳಿಕ ಡೆಡ್‌ಲೈನ್‌ ಫಿಕ್ಸ್‌

    ಬೆಂಗಳೂರು: ನಗರದಲ್ಲಿ ಗುಂಡಿ ಗಂಡಾಂತರದ ಬಗ್ಗೆ ʻಪಬ್ಲಿಕ್‌ ಟಿವಿʼ (Public TV) ನಿರಂತರ ವರದಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar), ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ್ದಾರೆ.

    ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ʻಬೆಂಗಳೂರಿನ ರಸ್ತೆ ಗುಂಡಿಗಳ (Road Potholes) ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ತಿಳಿಸಿದ್ದಾರೆ.

    ಹೆಜ್ಜೆಹೆಜ್ಜೆಗೂ ಗುಂಡಿಗಳು.. ಅಂಕು ಡೊಂಕಿನ ರಸ್ತೆಗಳು!
    ಯೆಸ್‌. ಬೆಂಗಳೂರಿನಲ್ಲಿ ಅದೇಕೋ ಗುಂಡಿ ಗಂಡಾಂತರ ತಪ್ಪುವ ಲಕ್ಷಣವೇ ಕಾಣುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ಕಣ್ಣಿಗೆ ರಾಚುತ್ತಿವೆ. ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್ ರೀತಿ ಸಂಚರಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನ ಗುಂಡಿಗಳು ಹರಾಜು ಹಾಕ್ತಿವೆ. ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಆಗಿ ಬದಲಾದ್ರೂ ರಸ್ತೆಗುಂಡಿಗಳ ಹಾವಳಿ ತಪ್ಪುತ್ತಿಲ್ಲ. ಗ್ರೇಟರ್ ಬೆಂಗಳೂರು ರಸ್ತೆಗುಂಡಿಗಳಲ್ಲೂ ಗ್ರೇಟಾಗಿದೆ ಅನ್ನೋದರಲ್ಲಿ ತಪ್ಪೇನಿಲ್ಲ. ಈ ರಸ್ತೆ ಗುಂಡಿ ವಿಚಾರದಲ್ಲಿ `ಪಬ್ಲಿಕ್ ಟಿವಿ’ ವಿಸ್ತೃತ ವರದಿ ಪ್ರಸಾರ ಮಾಡುತ್ತಲೇ ಬಂದಿದೆ. ಈಗ ರಸ್ತೆ ಗುಂಡಿಯಿಂದ ರೋಸಿ ಹೋಗಿ ಕಂಪನಿಗಳು ಬೆಂಗಳೂರು ತೊರೆಯುವ ಆತಂಕ ಮೂಡಿಸಿವೆ.

    ಬೆಂಗಳೂರು ರಸ್ತೆ ಗುಂಡಿ ವಿರುದ್ಧ ಉದ್ಯಮಿಗಳ ಆಕ್ರೋಶ
    ಬೆಂಗಳೂರು ನಗರದ ರಸ್ತೆ ಗುಂಡಿಗಳ ಬಗ್ಗೆ ಸಣ್ಣ ಮಕ್ಕಳನ್ನ ಕೇಳಿದ್ರೂ ಬೇಸರ ವ್ಯಕ್ತಪಡಿಸ್ತಾರೆ. ಆ ಮಟ್ಟಿಗೆ ನರಕಯಾತನೆ ಬೆಂಗಳೂರಿನ ಜನ ಅನುಭವಿಸುತ್ತಿದ್ದಾರೆ. ಈಗ ರಸ್ತೆ ಗುಂಡಿಗಳಿಂದಾಗಿ ಎಂಎನ್‌ಸಿ ಕಂಪನಿಗಳು ಬೆಂಗಳೂರಿನಿಂದ ದೂರ ದೂರ ಆಗುವ ಆತಂಕ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಬ್ಲಾಕ್ ಬಕ್ ಕಂಪನಿ ಸಿಇಒ ರಾಜೇಶ್ ಯಬಜಿ ಎಕ್ಸ್ ಖಾತೆಯಲ್ಲಿ ಮಾಡಿದ ಒಂದು ಟ್ವೀಟ್. ದಿನದ ಅರ್ಧ ದಿನ ನಮ್ಮ ಕಂಪನಿ ಸಿಬ್ಬಂದಿ ರಸ್ತೆಯಲ್ಲೇ ಕಳೆಯುವಂತಾಗಿದೆ. ಈಗ ರಸ್ತೆಗುಂಡಿ, ಧೂಳು.. ಟ್ರಾಫಿಕ್ ಜಾಮ್ ಇವೆಲ್ಲದ್ರಿಂದ ಶಿಫ್ಟ್ ಆಗುವಂತಾಗಿದೆ. ಕಳೆದ 5 ವರ್ಷದಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು. ಇನ್ನು ಉದ್ಯಮಿ ಕಿರಣ್ ಮಜುಂದಾರ್ ಶಾ, ಉದ್ಯಮಿ ಮೋಹನ್‌ದಾಸ್ ಪೈ ಸಹ ಟ್ವೀಟ್ ಮಾಡಿ ರಸ್ತೆ ಗುಂಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಗುಂಡಿ ಮುಚ್ಚಲು ಕೋಟಿ ಕೋಟಿ ರಿಲೀಸ್.. ಏನಾಯ್ತು..?
    ಬೆಂಗಳೂರಿನಲ್ಲಿ ಬರೀ 10 ಸಾವಿರ ಗುಂಡಿ ಇದೆ ಅಂತ ಡಿಸಿಎಂ ಡಿಕೆಶಿ ಹೇಳಿದ್ರು. ಈವರೆಗೆ 6 ಸಾವಿರ ಗುಂಡಿ ಮುಚ್ಚಿದ್ದೇವೆ. 4 ಸಾವಿರ ಗುಂಡಿ ಮುಚ್ಚುತ್ತೇವೆ ಎಂದಿದ್ರು. ಈ ತಿಂಗಳಲ್ಲೇ ಮುಚ್ಚುತ್ತೇವೆ ಅಂದಿದ್ದರು. ಆದರೆ ಬೆಂಗಳೂರಿನಲ್ಲಿ ಹೆಜ್ಜೆಹೆಜ್ಜೆಗೂ ರಸ್ತೆಗುಂಡಿಗಳ ದರ್ಬಾರ್ ನಡೀತಿದೆ. ಹಾಗಾದ್ರೆ ಕೋಟಿ ಕೋಟಿ ಬಿಡುಗಡೆ ಆಗಿದ್ದ ಹಣ ಏನಾಯ್ತು.. ರಸ್ತೆಗುಂಡಿ ಗಳ ಬಗ್ಗೆ ಸರ್ಕಾರಕ್ಕೆ ಇಷ್ಟೊಂದು ನಿರ್ಲಕಷ್ಯನಾ? ಡಿಸಿಎಂ ಡಿಕೆಶಿ ಸರ್ಕಾರಿ ನಿವಾಸದ ಕೂಗಳತೆ ದೂರದಲ್ಲೇ ಗುಂಡಿಬಿದ್ದ ರಸ್ತೆಗಳು ಕಂಡುಬಂದಿವೆ.

    ಈ ಬಗ್ಗೆ ಪಬ್ಲಿಕ್‌ ಟಿವಿ ನಿರಂತರ ವರದಿ ಪ್ರಸಾರ ಮಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.

  • ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ

    ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ

    ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengalruu Authority) ಅಡಿ ರಚನೆಯಾಗಿರುವ ಐದು ಪಾಲಿಕೆಗಳಿಗೆ ರಾಜ್ಯ ಸರ್ಕಾರ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

    ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಗಳಿಗೆ ತಲಾ 25 ಕೋಟಿ ರೂ.ಯಂತೆ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಪಾಲಿಕೆಗಳ ದೈನಂದಿನ ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳಿಗಾಗಿ ಅನುದಾನ ಅಗತ್ಯವಿದೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಯಿಂದ 125 ಕೋಟಿ ರೂ. ಬಿಡುಗಡೆಯಾಗಿದೆ.ಇದನ್ನೂ ಓದಿ:ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ – ಆಟೋ ಚಾಲಕ ಅರೆಸ್ಟ್

    ಪ್ರಸ್ತುತ ಸಂಗ್ರಹ ಆಗುತ್ತಿರುವ ಆಸ್ತಿ ತೆರಿಗೆಯ ಹಣ ಸರ್ಕಾರದ ಸುಪರ್ದಿಯಲ್ಲಿದೆ. ಸಂಗ್ರಹವಾದ ತೆರಿಗೆ ಹಣ ಇನ್ನೂ ಹೊಸ ಪಾಲಿಕೆಗಳ ಬ್ಯಾಂಕ್ ಅಕೌಂಟ್‌ಗೆ ಬರುತ್ತಿಲ್ಲ. ಹೀಗಾಗಿ ಅದೆಲ್ಲವೂ ಸರ್ಕಾರದ ಸುಪರ್ದಿಯಲ್ಲಿದೆ. 2025-26ನೇ ಸಾಲಿನಲ್ಲಿ 300 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಆಗಿದೆ. 300 ಕೋಟಿ ರೂ.ಯಲ್ಲಿ ಸರ್ಕಾರ 125 ಕೋಟಿ ರೂ.ಯನ್ನ ದೈನಂದಿನ ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬ್ಯಾಂಕ್ ಅಕೌಂಟ್‌ಗೆ ಅನುದಾನವನ್ನ ವರ್ಗಾಯಿಸಿದೆ.