Tag: gaziabad

  • ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ

    ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ

    ಲಕ್ನೋ: ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ಮನೆಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಜೀವ ದಹನವಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಭಾನುವಾರ ಮುಂಜಾನೆ ಕುಟುಂಬಸ್ಥರು ಮಲಗಿದ್ದ ಸಂದರ್ಭ ಅಗ್ನಿ ಅವಘಡ ಉಂಟಾಗಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ – ಕೆ.ಶಿವನಗೌಡ ನಾಯಕ್

    ಮೃತರನ್ನು ಗುಲ್ಬಹರ್ (32) ಹಾಗೂ ಆಕೆಯ ಇಬ್ಬರು ಅಪ್ರಾಪ್ತ ಪುತ್ರರು ಎಂದು ಗುರುತಿಸಲಾಗಿದೆ. ಅದೇ ಮನೆಯಲ್ಲಿ ವಾಸಿಸುತ್ತಿದ್ದ ಸಂಬಂಧಿಕರ ಮಗ ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಹಿಳೆಯ ಪತಿ ಶಹನವಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ:  ವಿಶೇಷ ಕಾರ್ಯಾಚರಣೆ – ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ ಗದಗ ಎಸ್‌ಪಿ

  • ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ- ತಿಂಗಳ ಬಳಿಕ ರೇಬಿಸ್‍ನಿಂದ ಬಾಲಕ ಸಾವು

    ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ- ತಿಂಗಳ ಬಳಿಕ ರೇಬಿಸ್‍ನಿಂದ ಬಾಲಕ ಸಾವು

    ಗಾಜಿಯಾಬಾದ್: ಒಂದು ತಿಂಗಳ ಹಿಂದೆ ನಾಯಿ (Dog) ಕಚ್ಚಿದ ಘಟನೆಯನ್ನು ಪೋಷಕರಿಗೆ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ರೇಬಿಸ್‍ನಿಂದ (Rabies) ಮೃತಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    8ನೇ ತರಗತಿಯ ವಿದ್ಯಾರ್ಥಿ ಶಹವಾಜ್‍ನನ್ನು ಆರೋಗ್ಯ ಹದಗೆಟ್ಟ ಪರಿಣಾಮ ಸೋಮವಾರ ಸಂಜೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಅಲ್ಲಿ ಚಿಕಿತ್ಸೆ ಪಡೆದು ಬುಲಂದ್‍ಶಹರ್‍ನಿಂದ ಗಾಜಿಯಾಬಾದ್‍ಗೆ ಮರಳಿ ಕರೆತರುತ್ತಿದ್ದಾಗ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಇಂಗ್ಲೆಂಡ್‍ನ ಅತೀ ದೊಡ್ಡ ನಗರಕ್ಕೆ ಆರ್ಥಿಕ ಸಂಕಷ್ಟ – ತುರ್ತು ಪರಿಸ್ಥಿತಿ ಘೋಷಣೆ

    ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್‍ಗೆ ಒಂದೂವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿತ್ತು. ಆದರೆ ಈತ ಭಯದಿಂದ ಅದನ್ನು ಪೋಷಕರಿಂದ ಮುಚ್ಚಿಟ್ಟಿದ್ದನು. ಕ್ರಮೇಣ ಈತನ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲು ಶುರುವಾಯಿತು. ಅಲ್ಲದೆ ಸೆಪ್ಟೆಂಬರ್ 1 ರಿಂದ ಊಟ ಮಾಡುವುದುನ್ನು ಕೂಡ ನಿಲ್ಲಿಸಿದ್ದಾನೆ. ಮಗನ ವರ್ತನೆಯಿಂದ ಬೇಸತ್ತ ಪೋಷಕರು ಏನಾಯ್ತು ಎಂದು ಕೇಳಿದ್ದಾರೆ. ಈ ವೇಳೆ ಆತ ತನಗೆ ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿರುವ ವಿಚಾರವನ್ನು ತಿಳಿಸಿದ್ದಾನೆ.

    ಕೂಡಲೇ ಶಹವಾಜ್‍ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ವೈದ್ಯರು ದಾಖಲಿಸಿಕೊಳ್ಳದೆ ಔಷಧಿ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕಳೆದ ವಾರ ಆಯುರ್ವೇದಿಕ್ ಔಷಧಿಯ ಮೊರೆ ಹೋಗಿರುವುದಾಗಿ ಪೊಲೀಸರ ಬಳಿ ಪೋಷಕರು ತಿಳಿಸಿದ್ದಾರೆ.

    ಅಂಬುಲೆನ್ಸ್‍ನಲ್ಲಿ ಗಾಜಿಯಾಬಾದ್‍ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ನಾಯಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ವಾಲಿ ವಲಯದ ಸಹಾಯಕ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಸೆಕ್ಯುರಿಟಿ ಗಾರ್ಡ್ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೇ ಸಾವು

    ಮಹಿಳಾ ಸೆಕ್ಯುರಿಟಿ ಗಾರ್ಡ್ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೇ ಸಾವು

    ನವದೆಹಲಿ: ದೆಹಲಿ (Delhi) ಸಮೀಪದ ಘಾಜಿಯಾಬಾದ್‌ನ (Ghaziabad) ಹೌಸಿಂಗ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಸೆಕ್ಯುರಿಟಿ ಗಾರ್ಡ್ (Security Guard) ಮೇಲೆ ಆಕೆಯ ಮೇಲ್ವಿಚಾರಕ ಮತ್ತು ಇತರ ಇಬ್ಬರು ಗಾರ್ಡ್‌ಗಳು ಸಾಮೂಹಿಕ ಅತ್ಯಾಚಾರ (Rape) ಮಾಡಿ ಥಳಿಸಿದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ನಿತ್ರಾಣಗೊಂಡಿರುವ ಸಂತ್ರಸ್ತ ಯುವತಿಯನ್ನು ಅತ್ಯಾಚಾರ ಮಾಡಿ ಬಳಿಕ ಮೂವರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅವಳನ್ನು ಗಾಜಿಯಾಬಾದ್ ಬದಲಿಗೆ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಂಧನದಿಂದ ತಪ್ಪಿಸಿ ಪರಾರಿಯಾಗಿದ್ದರು. ಆದಾಗ್ಯೂ ಪ್ರಮುಖ ಆರೋಪಿ ಅಜಯ್ (32) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆ ಆಸೆಯಂತೆ ರಸಗುಲ್ಲಾ ನೀಡಿ ಬಾಲಕನ ಕೊಲೆಗೈದ ಕ್ಲಾಸ್‍ಮೇಟ್ಸ್!

    ಸೋಮವಾರ ತಡರಾತ್ರಿ ಯುವತಿಯ ಆರೋಗ್ಯದಲ್ಲಿ ಏರುಪೇರದ ಹಿನ್ನೆಲೆ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಯುವತಿ ಜಾರ್ಖಂಡ್‌ಗೆ ಸೇರಿದವರಾಗಿದ್ದು, ಹೌಸಿಂಗ್ ಸೊಸೈಟಿಯ ಬಳಿ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್- 14 ಉಗ್ರರ ಆಸ್ತಿ ಮುಟ್ಟುಗೋಲಿಗೆ ಪೊಲೀಸರ ಕ್ರಮ

    ಮೇಲ್ವಿಚಾರಕರು ಮತ್ತು ಇತರ ಇಬ್ಬರು ಗಾರ್ಡ್‌ಗಳು ಆಕೆಯನ್ನು ಥಳಿಸಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ನಂತರ ಆಕೆ ಪ್ರತಿಭಟಿಸಲು ಮುಂದಾದಾಗ ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಆರೋಪಿ ತಪ್ಪಿಸಿಕೊಳ್ಳಲು ಇತರ ಸಹೋದ್ಯೋಗಿಗಳು ಸಹಾಯ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಾಲಕಿಯನ್ನು ಅಪಹರಿಸಿ, ಒಂದೂವರೆ ತಿಂಗಳು ನಿರಂತರವಾಗಿ ರೇಪ್-‌ ವ್ಯಕ್ತಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳು ಬೆಡ್‍ಶೀಟ್ ತರಲು ನಿರಾಕರಿಸಿದ ಕೋಪಕ್ಕೆ ಪತ್ನಿಯನ್ನೇ ಕೊಂದ ಭೂಪ!

    ಮಗಳು ಬೆಡ್‍ಶೀಟ್ ತರಲು ನಿರಾಕರಿಸಿದ ಕೋಪಕ್ಕೆ ಪತ್ನಿಯನ್ನೇ ಕೊಂದ ಭೂಪ!

    ಲಕ್ನೋ: ವ್ಯಕ್ತಿಯೊಬ್ಬ ಮಗಳ ಮೇಲಿನ ಕೋಪಕ್ಕೆ ಪತ್ನಿಯನ್ನು ಕೊಲೆಗೈದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಆರೋಪಿಯನ್ನು ಶದಾಬ್ (35) ಎಂದು ಗುರುತಿಸಲಾಗಿದೆ. ಈತ ಮಗಳು (Daughter) ತನಗೆ ಬೆಡ್‍ಶೀಟ್ ತರಲಿಲ್ಲವೆಂದು ಸಿಟ್ಟುಗೊಂಡು ತನ್ನ ಪತ್ನಿಯನ್ನೇ ಕೊಲೆಗೈದಿದ್ದಾನೆ.

    ಮಗಳ ಮೇಲೆ ಸಿಟ್ಟುಗೊಂಡಿದ್ದ ಶದಾಬ್ ಪತ್ನಿ(Wife) ಗೆ ಚೂರಿಯಿಂದ ಇರಿದಿದ್ದಾನೆ. ಬುಧವಾರ ರಾತ್ರಿ ತನ್ನ 5 ವರ್ಷದ ಮಗಳ ಜೊತೆ ತನಗೆ ಬೆಡ್ ಶೀಟ್ (BedSheet) ತಂದುಕೊಡುವಂತೆ ಶದಾಬ್ ಕೇಳಿದ್ದಾನೆ. ಆದರೆ ತನ್ನ ಪಾಡಿಗೆ ಆಟವಾಡುತ್ತಿದ್ದ ಪುಟ್ಟ ಕಂದಮ್ಮ ತನ್ನ ತಂದೆಗೆ ಬೆಡ್ ಶೀಟ್ ತಂದುಕೊಡುವ ಗೋಜಿಗೆ ಹೋಗಿಲ್ಲ.

    How clean is your bed? Study reveals one in three wash sheets just once a year - Starts at 60

    ಈ ಹಿನ್ನೆಲೆಯಲ್ಲಿ ಮಗಳ ಮೇಲೆ ಸಿಟ್ಟುಗೊಂಡ ಶದಾಬ್, ಪತ್ನಿಯನ್ನು ಕರೆದು ಆಕೆಗೆ ಚೆನ್ನಾಗಿ ಥಳಿಸಿದ್ದಾನೆ. ಈ ವೇಳೆ ಪತಿಯ ಏಟಿನಿಂದ ತಪ್ಪಿಸಿಕೊಳ್ಳಲು ಪತ್ನಿ ಯತ್ನಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಆತ ಅಡುಗೆ ಮನೆಯಲ್ಲಿದ್ದ ಚಾಕು ತಂದು ಆಕೆಯ ದೇಹದ ಮೇಲೆಲ್ಲ ಇರಿದಿದ್ದಾನೆ. ಇದನ್ನೂ ಓದಿ: ಉದ್ಯಮಿಗಳು, ನಿರ್ಮಾಪಕರು, ರಾಜಕಾರಣಿಗಳಿಗೆ ಬೆದರಿಕೆ ಒಡ್ಡಿ ಸುಲಿಗೆ- ಮಹಿಳೆ ಅರೆಸ್ಟ್

    ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯಿಸಿರೆಳೆದರು. ಬಳಿಕ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ.

    ಪ್ರಕರಣ ಸಂಬಂಧ ಮೃತ ಮಹಿಳೆಯ ತಂದೆ ಆರೋಪಿ ಪತಿ ವಿರುದ್ಧ ದೂರು ದಾಖಲಿಸಿದ್ದು, ಶದಾಬ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಕ್ಕಿನ ಮರಿ ತರಲು ತಾಯಿ ಒಪ್ಪಲಿಲ್ಲವೆಂದು 14ರ ಬಾಲಕ ನೇಣಿಗೆ ಶರಣು

    ಬೆಕ್ಕಿನ ಮರಿ ತರಲು ತಾಯಿ ಒಪ್ಪಲಿಲ್ಲವೆಂದು 14ರ ಬಾಲಕ ನೇಣಿಗೆ ಶರಣು

    ಲಕ್ನೋ: ತನ್ನ ಬೇಡಿಕೆಯನ್ನು ತಾಯಿ ಈಡೇರಿಸುತ್ತಿಲ್ಲ ಎಂದು ಮನನೊಂದು 14 ವರ್ಷದ ಬಾಲಕನೊಬ್ಬ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಕಳೆದ 3-4 ದಿನಗಳಿಂದ ಬಾಲಕ ಮನೆಗೆ ಬೆಕ್ಕಿನ ಮರಿ ತೆಗೆದುಕೊಂಡು ಬನ್ನಿ ಎಂದು ತನ್ನ ತಾಯಿ ಬಳಿ ಹೇಳಿಕೊಂಡಿದ್ದಾರೆ. ಬಾಲಕನ ತಂದೆ ಚೀನಾದಲ್ಲಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ತಂದೆ ಬಂದ ಬಳಿಕ ಬೆಕ್ಕಿನ ಮರಿ ತರುವ ಎಂದು ಮಗನಿಗೆ ತಾಯಿ ಹೇಳಿದ್ದಾರೆ.

    ಆದರೆ ತಂದೆ ಬರುವವರೆಗೆ ಕಾಯಲು ಆಗಲ್ಲ. ನನಗೆ ಈಗಲೇ ಬೆಕ್ಕಿನ ಮರಿ ಬೇಕು ಎಂದು ಆತ ಹಠ ಮಾಡಿದ್ದಾನೆ. ಆದರೆ ಮಗನ ಮಾತಿಗೆ ತಾಯಿ ಸೊಪ್ಪು ಹಾಕಲಿಲ್ಲ. ಇದರಿಂದ ಬೇಸರಗೊಂಡ ಬಾಲಕ ರೂಮಿಗೆ ತೆರಳಿದ್ದಾನೆ. ಅಲ್ಲದೆ ರೂಮಿನ ಬಾಗಿಲು ಕೂಡ ಹಾಕಿಕೊಂಡು ಒಳಗೆ ಸೇರಿದ್ದಾನೆ. ಈ ಬಗ್ಗೆ ತಾಯಿ ತಲೆಕೆಡಿಸಿಕೊಳ್ಳದೆ ತನ್ನ ಕೆಲಸದಲ್ಲಿ ಬ್ಯುಸಿಯಾದರು.

    ಮರುದಿನ ಬೆಳಗ್ಗೆ ಜಿಮ್ ಟ್ರೈನರ್ ಹಾಗೂ ಬಾಲಕನ ತಾಯಿ ರೂಮಿನ ಬಾಗಿಲು ಒಡೆದು ನೋಡಿದಾಗ ದಂಗಾಗಿದ್ದಾರೆ. ಬಾಲಕ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಬಾಲಕ ದೆಹಲಿಯ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯ ಹಾಸ್ಟೆಲ್ ನಲ್ಲಿ ಇದ್ದ ಬಾಲಕ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಹೇರಿದ್ದ ಪರಿಣಾಮ ಮನೆಗೆ ಬಂದಿದ್ದನು. ಇದೂವರೆಗೂ ಬಾಲಕನ ಸಾವಿನ ಸಂಬಂಧ ಕುಟುಂಬಸ್ಥರು ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ದಂಪತಿಯಿಂದ ಗರ್ಭಿಣಿ ಕೊಲೆ- ಚಿನ್ನ, ದುಬಾರಿ ಡ್ರೆಸ್ ಕದ್ದು ಅದೇ ಸೂಟ್‍ಕೇಸ್‍ನಲ್ಲಿ ಶವ ತುಂಬಿ ಬಿಸಾಕಿದ್ರು!

    ದಂಪತಿಯಿಂದ ಗರ್ಭಿಣಿ ಕೊಲೆ- ಚಿನ್ನ, ದುಬಾರಿ ಡ್ರೆಸ್ ಕದ್ದು ಅದೇ ಸೂಟ್‍ಕೇಸ್‍ನಲ್ಲಿ ಶವ ತುಂಬಿ ಬಿಸಾಕಿದ್ರು!

    ನೊಯ್ಡಾ: ಗರ್ಭಿಣಿಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಬಟ್ಟೆಗಳನ್ನು ಕದ್ದು, ಅದೇ ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಎಸೆದ ಅಮಾನವೀಯ ಘಟನೆಯೊಂದು ಗಾಜಿಯಾಬಾದ್ ನಲ್ಲಿ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು ಮಾಲಾ ಎನ್ನಲಾಗಿದ್ದು ಈಕೆಯನ್ನು ಪಕ್ಕದಲ್ಲೇ ನೆಲೆಸಿದ್ದ ಸೌರಭ್ ದಿವಾಕರ್ ಹಾಗೂ ರಿತು ಕೊಲೆ ಮಾಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಅಂತ ಗೌತಮ್ ಬುದ್ದ ನಗರದ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.

    ಘಟನೆ ವಿವರ:
    ಕಳೆದ ಗುರುವಾರ ಮೃತ ಮಹಿಳೆ ನೆಲೆಸಿದ್ದ ಬಾಡಿಗೆ ಮನೆಗೆ ಆಕೆಯ ಸಂಬಂಧಿಕರು ಬಂದಿದ್ದರು. ಈ ವೇಳೆ ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರಿಂದ ಮಾಲಾ ತನ್ನ ಬಳಿಯಿದ್ದ ಚಿನ್ನ ಹಾಗೂ ದುಬಾರಿ ಬೆಲೆಯ ಉಡುಪುಗಳನ್ನು ತೋರಿಸಿದ್ದಾರೆ. ಇವೆಲ್ಲವೂ ಪಕ್ಕದ ಮನೆಯಲ್ಲಿದ್ದ ರಿತು ಅವರ ಕಣ್ಣಿಗೂ ಬಿದ್ದಿದೆ. ಆರೋಪಿ ರಿತು ಮನೆಗೆ ಹಿಂದುರುಗಿ ತನ್ನ ಗಂಡ ಸೌರಭ್ ಜೊತೆ ಮಾಲಾ ಬಳಿ ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಉಡುಪುಗಳು ಇರುವ ಬಗ್ಗೆ ಹೇಳಿದ್ದಾಳೆ. ಅಲ್ಲದೇ ಮರುದಿನ ಮಾಲಾ ಪತಿ ಶಿವಂ ಕೆಲಸಕ್ಕೆ ಹೋದ ಬಳಿಕ ತನ್ನ ಮನೆಗೆ ಮಾಲಾರನ್ನು ಕರೆಸಿಕೊಂಡಿದ್ದಾಳೆ ಅಂತ ಶರ್ಮಾ ವಿವರಿಸಿದ್ದಾರೆ.

    ಮನೆಗೆ ಕರೆಸಿಕೊಂಡ ಬಳಿಕ ದಂಪತಿ ಮಾಲಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಾಲಾ ಮದುವೆ ಬಳಿಕ ಚಿನ್ನಾಭರಣ ಹಾಗೂ ಬಟ್ಟೆಗಳನ್ನು ಇಡುತ್ತಿದ್ದ ಸೂಟ್ ಕೇಸ್‍ನಲ್ಲಿ ಮಾಲಾ ಶವವನ್ನು ತುಂಬಿಸಿದ್ದಾರೆ. ಈ ಮೊದಲು ಮಾಲಾ ಅವರ ಸೂಟ್ ಕೇಸ್ ನಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಗೂ ಮೊಬೈಲನ್ನು ತೆಗೆದಿಟ್ಟುಕೊಂಡಿದ್ದಾರೆ. ಈ ಎಲ್ಲಾ ಕೃತ್ಯಗಳ ಬಳಿಕ ಅಂದರೆ 9 ಗಂಟೆಯ ನಂತರ ದಂಪತಿ ಶವ ತುಂಬಿದ ಸೂಟ್ ಕೇಸ್ ನ್ನು ತೆಗೆದುಕೊಂಡು ಗಾಜಿಯಾಬಾದ್ ಗೆ ಹೋಗುತ್ತಾರೆ. ಅಲ್ಲಿಂದ ಇಬ್ಬರು ಸೋದರಮಾವನ ಬಳಿಗೆ ಹೋಗುತ್ತಾರೆ. ಹೀಗೆ ಹೋಗುವಾಗ ಇಂದಿರಾಪುರಂ ಎಂಬ ಪ್ರದೇಶದಲ್ಲಿ ತಮ್ಮ ಕೈಲಿದ್ದ ಸೂಟ್ ಕೇಸನ್ನು ಎಸೆದಿದ್ದಾರೆ.

    ಇತ್ತ ಮಾಲಾ ಕಾಣೆಯಾಗಿರುವ ಬಗ್ಗೆ ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ನಾಪತ್ತೆ ಪ್ರಕರಣ ದಾಖಲಾದಂತೆ ಗಾಜಿಯಾ ಬಾದ್ ನಲ್ಲಿ ಸೂಟ್ ಕೇಸ್ ಒಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿರುವುದು ಪೊಲೀಸರಿಗೆ ಮಾಹಿತಿ ದೊರೆಯುತ್ತದೆ. ಹೀಗಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದಾಗ ಮಾಲಾ ಶವ ಇರುವುದಾಗಿ ಶಂಕೆ ವ್ಯಕ್ತಪಡಿಸುತ್ತಾರೆ. ಈ ಮಧ್ಯೆ ಮಾಲಾ ಸಂಬಂಧಿಕರು ವರದಕ್ಷಿಣೆಗೋಸ್ಕರ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ಪ್ರಕರಣ ಸಂಬಂಧ ತನಿಖೆ ನಡೆಸಿದಾಗ, ಮಾಲಾ ಪತಿ ಶಿವಂ ಕೆಲಸಕ್ಕೆ ತೆರಳಿದ ಬಳಿಕ ಕೊಲೆ ಮಾಡಿರುವುದು ಬೆಳಕಿಗೆ ಬರುತ್ತದೆ. ಅಲ್ಲದೇ ಘಟನೆ ನಡೆದ ಬಳಿಕ ಪಕ್ಕದ ಮನೆ ನಿವಾಸಿಗಳಾದ ರೀತು, ಸೌರಭ್ ಮನೆಗೆ ವಾಪಸ್ಸಾಗಿಲ್ಲ. ಇದು ದಂಪತಿ ಮೇಲೆ ಮತ್ತುಷ್ಟು ಸಂಶಯ ಮೂಡಲು ಕಾರಣವಾಯಿತು. ಬಳಿಕ ದಂಪತಿಯನ್ನು ಪೊಲೀಸರು ಬಂಧಿಸಿದಾಗ ಚಿನ್ನಾಭರಣ, ಡ್ರೆಸ್ ಹಾಗೂ ಮೊಬೈಲ್ ಫೋನ್ ಕದ್ದಿರುವುದು ಬೆಳಕಿಗೆ ಬಂದಿದೆ ಅಂತ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ. ಆದ್ರೆ ಕೊಲೆಯಾದ ಮಾಲಾ ಗರ್ಭಿಣಿ ಅಂತ ಹೇಳಲಾಗಿದ್ದು, ಎಷ್ಟು ತಿಂಗಳಾಗಿತ್ತು ಎಂಬುದರ ಬಗ್ಗೆ ವರದಿಯಾಗಿಲ್ಲ.

    ಸದ್ಯ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 201(ಸಾಕ್ಷಿ ನಾಶ), 316, 394(ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಅಂತ ಶರ್ಮಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv