Tag: Gaza Hospital

  • ಗಾಜಾದ ಅಲ್ ಶಿಫಾ ಆಸ್ಪತ್ರೆಯೇ ಹಮಾಸ್ ಅಡ್ಡ; ಶಸ್ತ್ರಾಸ್ತ್ರ ಪತ್ತೆ – ಉಗ್ರರ ಅಡಗುದಾಣಗಳ ಮೇಲೆ ಬುಲ್ಡೋಜರ್

    ಗಾಜಾದ ಅಲ್ ಶಿಫಾ ಆಸ್ಪತ್ರೆಯೇ ಹಮಾಸ್ ಅಡ್ಡ; ಶಸ್ತ್ರಾಸ್ತ್ರ ಪತ್ತೆ – ಉಗ್ರರ ಅಡಗುದಾಣಗಳ ಮೇಲೆ ಬುಲ್ಡೋಜರ್

    ಟೆಲ್ ಅವೀವ್: ಗಾಜಾದ ಅಲ್ ಶಿಫಾ ಆಸ್ಪತ್ರೆ ಹಮಾಸ್ (Hamas) ಉಗ್ರರ ಕಾರ್ಯಸ್ಥಾನ ಎಂದು ಇಸ್ರೇಲ್ (Israel) ಮೊದಲಿಂದ ಹೇಳುತ್ತಾ ಬಂದಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆಸ್ಪತ್ರೆಗಳನ್ನು ಹಮಾಸ್ ಬಳಸುತ್ತದೆ ಎಂಬುದಕ್ಕೆ ತನ್ನ ಪಡೆಗಳು ಪುರಾವೆಗಳನ್ನು ಕಂಡುಕೊಂಡಿವೆ ಎಂದು ಇಸ್ರೇಲ್ ಮತ್ತೆ ಹೇಳಿಕೊಂಡಿದೆ.

    ಅಲ್ ಶಿಫಾ ಆಸ್ಪತ್ರೆಯ (Al-Shifa Hospital) ಎಂಆರ್‌ಐ ಯೂನಿಟ್‌ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಇಸ್ರೇಲ್‌ ತಿಳಿಸಿದೆ. ಹಮಾಸ್‌ಗೆ ಸೇರಿದ ಬ್ಯಾಗ್‌ಗಳಲ್ಲಿ ಎಕೆ 47, ಗ್ರೆನೇಡ್ ಸೇರಿ ಹಲವು ಶಸ್ತ್ರಾಸ್ತ್ರ ಸಿಕ್ಕಿವೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಇಸ್ರೇಲ್ ಸೇನೆ (Israeli Defence Force) ಬಿಡುಗಡೆ ಮಾಡಿದೆ. ಇದನ್ನೂ ಓದಿ: ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್‌ ಉಗ್ರರ ಸುರಂಗ – ಇಸ್ರೇಲ್‌ನಿಂದ ವಿಡಿಯೋ ರಿಲೀಸ್‌

    ಅಲ್ ಶಿಫಾ ಆಸ್ಪತ್ರೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇಸ್ರೇಲ್ ಸೇನೆ, ಆಸ್ಪತ್ರೆಯ ಇಂಚಿಂಚನ್ನೂ ಜಾಲಾಡುತ್ತಿದೆ. ಅಷ್ಟೇ ಅಲ್ಲ, ಅಲ್ ಶಿಫಾ ಆಸ್ಪತ್ರೆ ಮೇಲೆ ಬುಲ್ಡೋಜರ್‌ಗಳು ನುಗ್ಗಿವೆ ಎಂದು ವರದಿಯಾಗಿದೆ.

    ಬುಲ್ಡೋಜರ್‌ಗಳು ದಕ್ಷಿಣ ಭಾಗದ ಗೇಟ್ ಅನ್ನು ಧ್ವಂಸ ಮಾಡಿದೆ. ಹಮಾಸ್ ಉಗ್ರರ ಸುರಂಗಗಳನ್ನು ಪತ್ತೆ ಹಚ್ಚಲು ಇಸ್ರೇಲ್ ಪಡೆಗಳು ಬುಲ್ಡೋಜರ್ ಅಸ್ತ್ರವನ್ನು ಪ್ರಯೋಗಿಸಿವೆ. ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಮನೆಯನ್ನು ಐಡಿಎಫ್ ನಾಶ ಮಾಡಿದೆ. ಈಗಾಗಲೇ ಪ್ಯಾಲೆಸ್ತೇನ್ ಸಂಸತ್‌ನ್ನು ನೆಲಸಮ ಮಾಡಿದೆ. ಇದನ್ನೂ ಓದಿ: ಇಸ್ರೇಲ್‌ ಧೋರಣೆ ಖಂಡಿಸಿದ ವಿಶ್ವಸಂಸ್ಥೆ ನಿರ್ಣಯಕ್ಕೆ ಭಾರತ ಬೆಂಬಲ

  • ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ಕ್ಯಾನ್ಸಲ್

    ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ಕ್ಯಾನ್ಸಲ್

    ಟೆಲ್‍ಅವಿವ್: ಯುದ್ಧದ ಬಿಕ್ಕಟ್ಟಿನ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Baiden) ಇಂದು ಭೇಟಿ ನೀಡುತ್ತಿದ್ದಾರೆ. ಈ ಬೆನ್ನಲ್ಲೇ ಗಾಜಾ ಆಸ್ಪತ್ರೆಯ (Gaza Hospital) ಮೇಲೆ ಭಾರೀ ದಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ಅರಬ್ ನಾಯಕರ (Arab Leaders) ಜೊತೆಗಿನ ಬೈಡೆನ್ ಮೀಟಿಂಗ್ ರದ್ದುಗೊಳಿಸಲಾಗಿದೆ.

    ಗಾಜಾ ಆಸ್ಪತ್ರೆಯಲ್ಲಿ ಭೀಕರ ಸ್ಫೋಟ ಪ್ರಕರಣದಿಂದ 500 ಮಂದಿಯ ಸಾವನ್ನಪ್ಪಿದ್ದಾರೆ. ಹೀಗಾಗಿ ಇಸ್ರೇಲ್‍ಗೆ ಬೆಂಬಲ ಸೂಚಿಸುವ ಅಮೆರಿಕ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಅಲ್ಲದೆ ಅಮ್ಮಾನ್ ನಲ್ಲಿ ನಡೆಯಬೇಕಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಅರಬ್ ಮುಖಂಡರ ಸಭೆ ಕೂಡ ರದ್ದಾಗಿದೆ.

    ಜೋರ್ಡಾನ್ ವಿದೇಶಾಂಗ ವ್ಯವಹಾರಗಳ ಸಚಿವ ಐಮನ್ ಸಫಾದಿ, ಜೋರ್ಡಾನ್ ದೊರೆ ಅಬ್ದುಲ್ಲಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತೇಹ್ ಎಲ್ ಸೀಸಿ ಮತ್ತು ಫೆಲಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರು ಬೈಡೆನ್ ಜೊತೆ ಬುಧವಾರ ಅಮ್ಮಾನ್ ನಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆ ರದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್‌ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?

    ಹಮಾಸ್ ಹಾಗೂ ಇಸ್ರೇಲ್ ನಡುವಿನ ಕಾಳಗಕ್ಕೆ ಇಂದು 12ನೇ ದಿನ. ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ 1300 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲಿನ 250 ಮಂದಿಯನ್ನು ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರೆ, ಹಮಾಸ್ ನ 200 ಮಂದಿ ಇಸ್ರೇಲ್ ಸೆರೆಯಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]