Tag: gayatri

  • ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಸೋಷಿಯಲ್ ಮೀಡಿಯಾದ ಸ್ಟಾರ್ ಮತ್ತು ನಟಿ ಡಾಲಿ ಡಿಕ್ರೂಜ್ ಅಲಿಯಾಸ್ ಗಾಯತ್ರಿ ಮಾರ್ಚ್ 18ರಂದು ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಸ್ನೇಹಿತರ ಜೊತೆ ಹೋಳಿ ಪಾರ್ಟಿಗೆ ಎಂದು ಪಬ್ ವೊಂದಕ್ಕೆ ತೆರಳಿದ್ದ ಅವರು, ಅಲ್ಲಿಂದ ವಾಪಸ್ ಮನೆಗೆ ಬರುವಾಗ ಕಾರು ಅಪಘಾತವಾಗಿತ್ತು. ಚಾಲಕ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹಾರಿದ್ದ ಕಾರು, ಈ ನಟಿಯ ಪ್ರಾಣ ತಗೆದಿತ್ತು. ಈ ಪ್ರಕರಣವನ್ನು ಬೆನ್ನುಹತ್ತಿದ್ದ ಪೊಲೀಸರಿಗೆ ಒಂದಷ್ಟು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಹೋಳಿ ಹಬ್ಬದ ದಿನ ಹೈದರಾಬಾದ್ ನಲ್ಲಿ ಮದ್ಯ ನಿಷೇಧವಾಗಿತ್ತು. ಹಾಗಾಗಿಯೇ ಇವರು ಮದ್ಯ ಕುಡಿಯಲೆಂದು ಉಪಾಯ ಮಾಡಿದ್ದು ಎಳನೀರನ್ನು. ಅದಕ್ಕೆ ಮಿಕ್ಸ್ ಮಾಡಿ ಗೊತ್ತಿಲ್ಲದಂತೆ ಗಾಯತ್ರಿ ಮತ್ತು ಅವರ ಜೊತೆ ಹೋಗಿದ್ದ ರೋಹಿತ್ ಗೆ ಕೊಟ್ಟಿದ್ದಾರೆ. ತಾವು ಎಷ್ಟು ಕುಡಿದಿದ್ದೇವೆ ಎಂದು ಅರಿಯದೇ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.

    ತಾನು ಮನೆಯಲ್ಲೇ ಹೋಳಿ ಹಬ್ಬ ಆಚರಿಸುವುದಾಗಿ ಗಾಯತ್ರಿ ಹೇಳಿದ್ದರೂ, ಒತ್ತಾಯ ಮಾಡಿ ರೋಹಿತ್ ಮತ್ತು ಸ್ನೇಹಿತರು ಆಕೆಯನ್ನು ಪ್ರಿಸ್ಮಾ ಎಂಬ ಪಬ್ ಗೆ ಕರೆದುಕೊಂಡು ಹೋಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಮನೆಯಲ್ಲೇ ಹಬ್ಬ ಆಚರಿಸಿದ್ದರೆ ಮಗಳ ಪ್ರಾಣ ಉಳಿಯತ್ತಿತ್ತು ಎಂದಿದ್ದಾರೆ ಕುಟುಂಬದ ಸದಸ್ಯರು. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ಗಾಯತ್ರಿ ಮತ್ತು ಸ್ನೇಹಿತರಿದ್ದ ಆ ಕಾರು ತುಂಬಾ ವೇಗವಾಗಿ ಚಲಿಸಿದೆ. ಫುಟ್ ಪಾತ್ ಗೆ ಢಿಕ್ಕಿ ಹೊಡೆದು, ಅಲ್ಲಿಂದ ಒಂದಷ್ಟು ಅಡಿ ಉರುಳುತ್ತಾ ಸಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ ತಾಗಿದೆ. ಆಕೆಯು ಕೂಡ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರಂತೆ.

  • ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು

    ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು

    ಕ್ಷಿಣ ಭಾರತದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಡಿಕ್ರೂಜ್ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ನಟಿ ಗಾಯತ್ರಿ ಎಂದೇ ಖ್ಯಾತಿಯನ್ನು ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

    ಈ ಅಪಘಾತದಲ್ಲಿ ಗಾಯತ್ರಿ ಮಾತ್ರವಲ್ಲ ಕಾರಿನಲ್ಲಿದ್ದ ರಾಥೋಡ್ ಮತ್ತು ಮಹಿಳೆಯೊಬ್ಬರು ಕೂಡ ಸಾವನ್ನಪ್ಪಿದ್ದಾರೆ. ಹೆಚ್ಚು ವೇಗದಲ್ಲಿ ಬಂದ ಕಾರಣವೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಸುದ್ದಿ ತಿಳಿದ ತಕ್ಷಣ ತೆಲುಗು ಸಿನಿ ಮಂದಿ ಅಘಾತಗೊಂಡಿದ್ದಾರೆ. ನಟಿ ಸುರೇಖಾ ವಾಣಿ ಮತ್ತು ಮಗಳು ಸುಪ್ರಿಯಾ ಗಾಯತ್ರಿ ಸಾವಿನ ಸುದ್ದಿ ಕೇಳಿ ಭಾವುಕರಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿಯೂ ಬರೆದುಕೊಂಡಿದ್ದಾರೆ.

    ನಿಜಕ್ಕೂ ಇದು ಅನ್ಯಾಯ. ಈ ಸುದ್ದಿಯನ್ನು ನಾನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾನು ಗಾಯತ್ರಿ ಜೊತೆ ಒಳ್ಳೆಯ ನೆನಪುಗಳನ್ನು ಹೊಂದಿದ್ದೆ. ನನಗೆ ಆಕೆ ತುಂಬಾ ಆತ್ಮೀಯಳು. ಈ ಸುದ್ದಿ ಕೇಳಿ ನಾನು ಅಘಾತಕ್ಕೆ ಒಳಗಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಗಾಯಿತ್ರಿ ಅವರು ಹಲವು ಕಿರುಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ‘ಮೇಡಂ ಸರ್ ಮೇಡಂ ಅಂಥೆ’ ವೆಬ್ ಸರಣಿಯಲ್ಲಿಯೂ ಅಭಿನಯಿಸಿದ್ದರು. ಇದನ್ನೂ ಓದಿ:  ಪಾವಗಡ ಬಳಿಕ ಬೀದರ್‌ನಲ್ಲೂ ಖಾಸಗಿ ಬಸ್ ಪಲ್ಟಿ

  • ಕೆಜಿಎಫ್‍ನಲ್ಲಿ ಪತ್ನಿ ಪಾತ್ರವನ್ನು ಹೇಳಿ ಧನ್ಯವಾದ ಹೇಳಿದ ಅನಂತ್ ನಾಗ್!

    ಕೆಜಿಎಫ್‍ನಲ್ಲಿ ಪತ್ನಿ ಪಾತ್ರವನ್ನು ಹೇಳಿ ಧನ್ಯವಾದ ಹೇಳಿದ ಅನಂತ್ ನಾಗ್!

    ಬೆಂಗಳೂರು: ಕೆಜಿಎಫ್ ಸಿನಿಮಾದ ಯಶಸ್ಸು ನನ್ನ ಪತ್ನಿ ಗಾಯತ್ರಿ ಅವರಿಗೂ ಸಲ್ಲುತ್ತದೆ. ಅವರಿಗೆ ನನ್ನ ವಿಶೇಷ ಧನ್ಯವಾದಗಳು ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.

    ನಗರದಲ್ಲಿ ನಡೆದ ಕೆಜಿಎಫ್ ಚಿತ್ರತಂಡದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತ್ ನಾಗ್ ಅವರು, ಕೆಜಿಎಫ್ ಸಿನಿಮಾದ ಡಬ್ಬಿಂಗ್ ಪೂರ್ಣಗೊಳಿಸಿ ನಾನು ವಿದೇಶಕ್ಕೆ ಹೋಗಿದ್ದೆ. ಇತ್ತ ಚಿತ್ರತಂಡ ನನ್ನ ಪಾತ್ರಕ್ಕೆ ಹಿಂದಿ ಡಬ್ಬಿಂಗ್ ನಡೆಸುತ್ತಿದ್ದರು. ನಾನು ವಿದೇಶದಿಂದ ಮರಳಿದ ಬಂದಾಗ ಯಶ್ ಹಾಗೂ ನಿರ್ದೇಶಕರು ನನ್ನ ಬಳಿಗೆ ಬಂದು, ನಿಮ್ಮ ಪಾತ್ರಕ್ಕೆ ಯಾರೋಬ್ಬರ ಧ್ವನಿ ಸರಿಯಾಗುತ್ತಿಲ್ಲ. ನೀವೇ ಹಿಂದಿ ಡಬ್ಬಿಂಗ್ ಮಾಡಬೇಕು ಅಂತ ಕೇಳಿಕೊಂಡರು. ಆದರೆ ನಾನು ಹಿಂದಿ ಮಾತನಾಡದೇ ಎಷ್ಟೋ ದಿನಗಳೇ ಕಳೆದು ಹೋಗಿತ್ತು. ಆಗ ನನಗೆ ಬೆಂಬಲ ನೀಡಿದ್ದು ನನ್ನ ಪತ್ನಿ ಗಾಯತ್ರಿ ಎಂದು ಅನಂತ್‍ನಾಗ್ ತಿಳಿಸಿದರು. ಇದನ್ನು ಓದಿ: ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ, ಆ ಎದೆಯಲ್ಲಿ ನೀವು ಇದ್ದೀರಿ: ಯಶ್

    ಹಿಂದಿ ಡಬ್ಬಿಂಗ್ ವೇಳೆ ರಾಧಿಕಾ ಅವರಿಗೆ ಹೆಣ್ಣು ಮಗುವಾಗಿತ್ತು. ಬಾಣಂತಿ ವಿಶ್ರಾಂತಿಯ ಪಡೆಯಬೇಕಿತ್ತು. ಇತ್ತ ನನಗೆ ಕೊಂಕಣಿ ಭಾಷೆಯ ಶೈಲಿಯಲ್ಲಿಯೇ ಹಿಂದಿ ಮಾತನಾಡಿ ಬಿಡ್ತೀನಿ ಎನ್ನುವ ಭಯವಿತ್ತು. ಈ ವೇಳೆ ಉತ್ತರ ಪ್ರದೇಶ, ಪಂಜಾಬ್, ಮುಂಬೈನಲ್ಲಿ ಬೆಳೆದಿದ್ದ ಗಾಯತ್ರಿ ನನಗೆ ಹಿಂದಿ ಡೈಲಾಗ್‍ಗಳನ್ನು ಹೇಳಲು ಮುಂದಾದಳು. ಡಬ್ಬಿಂಗ್ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕುಳಿತು ಹಿಂದಿ ಉಚ್ಛಾರಣೆ ತಪ್ಪಾಗದಂತೆ ಎಚ್ಚರವಹಿಸಿದಳು. ಆಕೆಯ ಸಹಾಯದಿಂದ ಹಿಂದಿ ಡಬ್ಬಿಂಗ್ ಮುಗಿಯಿತು. ಇದರಿಂದಾಗಿ ನಾನು ಗಾಯತ್ರಿ ಅವರಿಗೂ ಕೂಡ ವಿಶೇಷ ಧನ್ಯವಾದ ಹೇಳುತ್ತೇನೆ. ಈ ಚಿತ್ರದ ಯಶಸ್ಸಿಗೆ ಅವರ ಪಾತ್ರವೂ ಪ್ರಮುಖವಾಗಿದೆ ಎಂದು ಅನಂತ್ ನಾಗ್ ಹೇಳಿದರು.

    ಯಶ್ ಬಗ್ಗೆ ಹೊಗಳಿಕೆ:
    ರಾಕಿಂಗ್ ಸ್ಟಾರ್ ಯಶ್ 10 ವರ್ಷಗಳ ಹಿಂದೆ ‘ಪ್ರೀತಿ ಇಲ್ಲದೆ ಮೇಲೆ’ ಸಿನಿಮಾದಲ್ಲಿ ನನ್ನ ಮಗನ ಪಾತ್ರದಲ್ಲಿ ನಟಿಸಿದ್ದ. ಆಗಿನ್ನು ಯಶ್ ಹಾಲುಗೆನ್ನೆಯ ಹುಡುಗ. ಅಲ್ಲಿಂದ ಆತನ ಜೊತೆಗೆ ಉತ್ತಮ ಒಡನಾಟ ಆರಂಭವಾಯಿತು. ಯಶ್ ಚಿತ್ರೀಕರಣದ ವೇಳೆ ಕುತೂಹಲ ಮೂಡಿಸುವ ಪ್ರಶ್ನೆಗಳನ್ನು ಕೇಳುತ್ತಿದ್ದ. ಗೂಗ್ಲಿ ಸಿನಿಮಾ ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಯಶ್ ಜೊತೆಗೆ ನಟಿಸಿದ್ದೇನೆ ಎಂದು ತಿಳಿಸಿದರು.

    ಕೆಜಿಎಫ್ ಸಿನಿಮಾ ಭಾರತ ಹಾಗೂ ವಿದೇಶಿ ಭಾಷೆಗಳಲ್ಲಿ ತೆರೆ ಕಂಡು, ಯಶಸ್ವಿಯಾಗಿದೆ. ಯಶ್ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿದ್ದಾನೆ. ನಿರ್ದೇಶಕ ವಿಜಯ್ ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ಸಿನಿಮಾದ ಯಶಸ್ಸು ಸಲ್ಲುತ್ತವೆ ಎಂದರು.

    ಡಬ್ಬಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅನಂತ್‍ನಾಗ್ ಅವರು, ಪರಭಾಷೆ ಚಿತ್ರಗಳನ್ನು ಡಬ್ಬಿಂಗ್ ಮಾಡಬಾರದು ಎನ್ನುವ ವಿಚಾರವಿತ್ತು. ಆದರೆ ಈಗ ಕೆಜಿಎಫ್ ಚಿತ್ರ ಬೇರೆ ಭಾಷೆಗಳಲ್ಲಿ ಹೋದ ಮೇಲೆ ಅದರ ದೃಷ್ಟಿಕೋನ ಬದಲಾಗಿದೆ. ಇಂತಹ ಅನೇಕ ಚಿತ್ರಗಳು ಸ್ಯಾಂಡಲ್‍ವುಡ್‍ನಿಂದ ತೆರೆ ಕಾಣಬೇಕು ಅಂತ ಜನ ಬಯಸುತ್ತಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಕೀಯ ಒತ್ತಡಕ್ಕೆ ಮಣಿದು ಆದೇಶ ನೀಡಿಲಾಗಿದೆ-ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ ಆರೋಪ ಕುರಿತು ಗಾಯತ್ರಿ ಸ್ಪಷ್ಟನೆ

    ರಾಜಕೀಯ ಒತ್ತಡಕ್ಕೆ ಮಣಿದು ಆದೇಶ ನೀಡಿಲಾಗಿದೆ-ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ ಆರೋಪ ಕುರಿತು ಗಾಯತ್ರಿ ಸ್ಪಷ್ಟನೆ

    ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಬಿಬಿಎಂಪಿ ಚುನಾವಣೆ ಗೆದ್ದ ಆರೋಪ ಎದುರಿಸುತ್ತಿರುವ ನಗರದ ಕೆಪಿ ಅಗ್ರಹಾರ ಪಾಲಿಕೆ ಸದಸ್ಯೆ ಗಾಯತ್ರಿ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

    ನಗರ ಜಿಲ್ಲಾಧಿಕಾರಿಗಳ ಆದೇಶ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯ ಒತ್ತಡದಿಂದ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ನನ್ನನ್ನು ಸಾಕಿದ್ದು ಅಜ್ಜಿ, ನನ್ನ ಅಪ್ಪ-ಅಮ್ಮ ಯಾರು ಎಂದು ಗೊತ್ತಿಲ್ಲ. ನನ್ನನ್ನು ನಾಯಕ ಎಂದಲೇ ಅಜ್ಜಿ ಶಾಲೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ನನ್ನ ಪತಿ ನಾಯ್ಡು. ಅದರೆ ನನ್ನ ತವರು ಜಾತಿ ಹೋಗಲ್ಲ. ನಾವೇನು ಸುಳ್ಳು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ರಾಜಕೀಯ ಒತ್ತಡ: ಕಾಂಗ್ರೆಸ್ ಸ್ಥಳೀಯ ಮುಖಂಡರ ಕುತಂತ್ರದಿಂದ ಈ ರೀತಿ ಅರೋಪ ಕೇಳಿ ಬರುತ್ತಿದೆ ಎಂದು ಪ್ರತ್ಯಾರೋಪ ಮಾಡಿದ ಗಾಯತ್ರಿ ಅವರು, ಶಾಲೆಯಲ್ಲಿ ಪೋಷಕರು ನೀಡಿರುವ ದಾಖಲೆ ಅನ್ವಯ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ. ಇದೇ ಕಾರಣಕ್ಕಾಗಿ ನಾನು ಮೂರು ವರ್ಷದಿಂದ ಕೋರ್ಟ್ ಗೆ ಅಲೆಯುತ್ತಿದ್ದೇನೆ. ನಾನು ಸುಳ್ಳು ದಾಖಲೆ ನೀಡಿಲ್ಲ, ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುತ್ತೇನೆ. ಸುಳ್ಳು ದಾಖಲೆ ನೀಡಿಲ್ಲ ಎಂದರು.

    ಏನಿದು ಪ್ರಕರಣ:
    ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್‍ಗೆ ತಂದೆ-ತಾಯಿ, ಜಾತಿ ಬಗ್ಗೆ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ನಾಯಕ ಜಾತಿ ಹೆಸರಿನಲ್ಲಿ ನಗರದ ಕೆಪಿ ಆಗ್ರಹಾರದಲ್ಲಿರುವ ಸಿದ್ದಲಿಂಗೇಶ್ವರ ಶಾಲೆಯಲ್ಲಿ ವ್ಯಾಸಂಗ ನಡೆಸಿರುವ ಕುರಿತು ದಾಖಲೆ ನೀಡಲಾಗಿತ್ತು. ಆದರೆ ಅವರ ಶೈಕ್ಷಣಿಕ ಆರ್ಹತೆ ಬಗ್ಗೆ ಶಾಲೆಯಲ್ಲಿ ಯಾವುದೇ ಪೂರಕ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಡಿಡಿಪಿಐ ಹಾಗೂ ಇತರೇ ಅಧಿಕಾರಿಗಳು ವರದಿ ನೀಡಿದ್ದು, ಈ ವರದಿ ಅನ್ವಯ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.

  • ಹಾರರ್ ‘ಗಾಯಿತ್ರಿ’ ಪ್ರಚಾರಕ್ಕಾಗಿ ಚಿತ್ರ ತಂಡದಿಂದ ಮೇನಕಾ ಥಿಯೇಟರ್‍ನಲ್ಲಿ ಗಿಮಿಕ್?

    ಹಾರರ್ ‘ಗಾಯಿತ್ರಿ’ ಪ್ರಚಾರಕ್ಕಾಗಿ ಚಿತ್ರ ತಂಡದಿಂದ ಮೇನಕಾ ಥಿಯೇಟರ್‍ನಲ್ಲಿ ಗಿಮಿಕ್?

    ಬೆಂಗಳೂರು: ಗಾಂಧಿನಗರದಲ್ಲಿರೋ ಮೇನಕಾ ಚಿತ್ರಮಂದಿರದಲ್ಲಿ ಗಾಯಿತ್ರಿ ಚಿತ್ರ ನೋಡುತ್ತಿದ್ದ ವ್ಯಕ್ತಿಯೊಬ್ಬ ಕುಳಿತ ಸ್ಥಳದಿಂದಲೇ ಕುಸಿದು ಬಿದ್ದಿರುವ ವಿಚಾರಕ್ಕೆ ಟ್ವಿಸ್ಟ್ ದೊರೆತಿದೆ.

    ಘಟನೆಗೆ ಸಂಬಂಧಿಸಿದಂತೆ ಇದೀಗ ಪಬ್ಲಿಕ್ ಟಿವಿಗೆ ಮಾಹಿತಿಯೊಂದು ಲಭ್ಯವಾಗಿದ್ದು, ಇಂದೊಂದು ಸೆಕೆಂಡ್ ಕ್ಲಾಸ್ ನಲ್ಲಿ ಟಿಕೆಟ್ ಪಡೆದು ಚಿತ್ರ ವೀಕ್ಷಿಸುತ್ತಿದ್ದಾಗ ನಡೆದ ಘಟನೆ ನಡೆದಿರೋದು ಸ್ಪಷ್ಟವಾಗಿದೆ. ಅಲ್ಲದೇ ಚಿತ್ರದ ಪ್ರಚಾರಕ್ಕಾಗಿ ಮಾಡಿರೋ ಪ್ರೀ ಪ್ಲಾನ್ ಅನ್ನೋ ಅನುಮಾನ ಹುಟ್ಟಿಸಿದೆ. ಘಟನೆ ಆದ ತಕ್ಷಣ ಚಿತ್ರತಂಡದವರೊಬ್ಬರು ಫೇಸ್ ಬುಕ್ ಲೈವ್ ಮಾಡಿದ್ದರಿಂದ ಈ ಅನುಮಾನ ಪ್ರಶ್ನೆ ಎದ್ದಿದೆ.

    ಒಟ್ಟಿನಲ್ಲಿ ಬಿದ್ದ ಅಸ್ವಸ್ಥಗೊಂಡು ಯುವಕ ಲಕ್ಕಪ್ಪನನ್ನು ಕೂಡಲೇ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ. ಲಕ್ಕಪ್ಪ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

    ಗಾಯಿತ್ರಿ ಚಿತ್ರ ನೋಡುತ್ತಿದ್ದ ಪ್ರೇಕ್ಷಕ ಸಿನಿಮಾ ನೋಡಿ ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿಗೆ ಚಿತ್ರಮಂದಿರದ ಮಾಲೀಕ ವಿಶ್ವನಾಥ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸಿನಿಮಾ ತಂಡದಲ್ಲಿ ಕೆಲಸ ಮಾಡಿದ ವ್ಯಕ್ತಿ ಇವತ್ತು ಸೆಕೆಂಡ್ ಕ್ಲಾಸ್ ನಲ್ಲಿ ಕುಳಿತುಕೊಂಡಿದ್ದ. ಬಾಲ್ಕನಿಯಿಂದ ಆತ ಬೀಳಲೇ ಇಲ್ಲ. ನಮ್ಮಲ್ಲಿ ಸಿಸಿಟಿವಿ ದೃಶ್ಯವಿದೆ. ಕುಳಿತಲ್ಲಿಂದ ಬಿದ್ದ ಕೂಡಲೇ ಆತನನ್ನು ಆಂಬುಲೆನ್ಸ್ ಮೂಲಕ ಕೆಸಿ ಜನರಲ್ ಆಸ್ಪತ್ರಗೆ ದಾಖಲಿಸಲಾಗಿದೆ. ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿ ಸುಳ್ಳು ಅದು ಗಿಮಿಕ್ ಎಂದು ಹೇಳಿದರು.

    ಚಿತ್ರದ ನಿರ್ಮಾಪಕಿ ಭಾರತಿ ಅವರು ಪ್ರತಿಕ್ರಿಯಿಸಿ, ಸಿನಿಮಾ ಶೂಟಿಂಗ್ ವೇಳೆ ಆತ ಭಯ ಆಗುತ್ತದೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ಆತ ಕ್ಲೈಮಾಕ್ಸ್ ಪಾತ್ರದಲ್ಲೂ ಅಭಿನಯಿಸಿದ್ದ. ಆತನಿಗೆ ಏನಾಯ್ತು ಎನ್ನುವ ಮಾಹಿತಿ ತಿಳಿದಿಲ್ಲ ಎಂದು ಅವರು ತಿಳಿಸಿದರು.

    ಗಾಯಿತ್ರಿ ಎಂಬ ಕನ್ನಡ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸತ್ಯ ಸಾಮ್ರಾಟ್ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಚೇತನ್, ಶೋಭಾರಾಣಿ, ನಯನಾ ಕೃಷ್ಣ, ಸ್ಮೈಲ್ ಶಿವು, ರೋಹಿತ್, ಪೂಜಾ, ರಂಜಿತಾ, ಲೋರ್ಡ್ ತೆಲಾಸ್, ಶೋಭರಾಜ್, ರಾಣಿ, ಥ್ರಿಲ್ಲರ್ ವೆಂಕಟೇಶ್, ಮೋಹನ್ ಜುನೇಜ, ದುಬೈ ರಫೀ ಅಭಿನಯಿಸಿದ್ದಾರೆ. ಭಾರತಿ ಈ ಚಿತ್ರದ ನಿರ್ಮಾಪಕಿಯಾಗಿದ್ದಾರೆ.

    ಮನೆಯೊಂದರಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಸುತ್ತ ಚಿತ್ರಕತೆ ಇದ್ದು, ಒಂದು ಬಂಗಲೆಯಲ್ಲಿ ಮೂರು ಜನ ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿ ಮೂವರು ಹೆಣ್ಣು ಮಕ್ಕಳು ವಾಸವಿರುತ್ತಾರೆ. ಬಂಗಲೆಯಲ್ಲಿ ನಡೆಯುವ ನಿಗೂಢ ಘಟನೆಗಳೇ ಈ ಚಿತ್ರದಲ್ಲಿ ತೋರಿಸಲಾಗಿದೆ.

    https://www.youtube.com/watch?v=KWfnrS1naKc

    https://www.youtube.com/watch?v=LwXTMR7cmrw

    https://www.youtube.com/watch?v=WrXipJv38bo