Tag: Gaya

  • ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಗೆ ಗಾಯ

    ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಗೆ ಗಾಯ

    ನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ (Ravi Varma) ಪೆಟ್ಟು ಮಾಡಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ (Mudhol) ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಸಾಹಸ ದೃಶ್ಯಕ್ಕಾಗಿ ಕಟ್ಟಿದ ರೋಪ್ ಹರಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿಕ್ರಮ್ ರವಿಚಂದ್ರನ್ (Vikram Ravichandran) ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾಕಷ್ಟು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕಾಗಿ ಕಂಪೋಸ್ ಮಾಡಲಾಗಿದೆಯಂತೆ. ಸಾಮಾನ್ಯವಾಗಿ ಕಷ್ಟದ ಸ್ಟಂಟ್ ಗಳನ್ನೇ ಕಂಪೋಸ್ ಮಾಡುವ ರವಿವರ್ಮ, ಈ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವನ್ನು ಕಂಪೋಸ್ ಮಾಡಿದ್ದರಂತೆ. ಈ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ ಗಾಯವಾಗಿದೆ.

    ಆತಂಕ ಪಡುವಂತಹ ಘಟನೆ ಅದಲ್ಲವಾದರೂ, ರವಿವರ್ಮ ಪದೇ ಪದೇ ಇಂತಹ ಘಟನೆಗಳಿಗೆ ಸಾಕ್ಷಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಸ್ತಿಗುಡಿ ಸಿನಿಮಾದಲ್ಲೂ ದುರ್ಘಟನೆ ನಡೆದಿತ್ತು. ಮೊನ್ನೆಯಷ್ಟೇ ಜೋಗಿ ಪ್ರೇಮ್ ನಿರ್ದೇಶನ ಕೇಡಿ ಸಿನಿಮಾದಲ್ಲೂ ನಟರೊಬ್ಬರು ಗಾಯ (Injury) ಮಾಡಿಕೊಂಡಿದ್ದರು. ಈ ಎರಡು ಚಿತ್ರಗಳಿಗೂ ಇವರೇ ಸಾಹಸ ನಿರ್ದೇಶಕರು. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

    ಮುಧೋಳ್ ಸಿನಿಮಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರಧಾನ ಸಾಹಸಮಯ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.

  • ಶೂಟಿಂಗ್ ವೇಳೆ ಸಂಜಯ್ ದತ್ ಗೆ ಗಾಯ : ಹಲವು ಅನುಮಾನಗಳು

    ಶೂಟಿಂಗ್ ವೇಳೆ ಸಂಜಯ್ ದತ್ ಗೆ ಗಾಯ : ಹಲವು ಅನುಮಾನಗಳು

    ಪ್ರಚಾರದ ವಿಷಯದಲ್ಲಿ ಜೋಗಿ ಪ್ರೇಮ್ (Jogi Prem) ಯಾವತ್ತಿಗೂ ಮುಂದು. ಸಣ್ಣ ಸಣ್ಣ ಸಂಗತಿಗಳನ್ನೂ ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ. ಆದರೆ, ಶೂಟಿಂಗ್ ಸ್ಥಳದಲ್ಲಿ ನಡೆದ ಅವಘ‍ಡವನ್ನು ಮುಚ್ಚಿಟ್ಟರಾ ಅನ್ನುವ ಅನುಮಾನ ಮೂಡಿದೆ. ಸಾಹಸ ಸನ್ನಿವೇಶವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಸಂಜಯ್ ದತ್ (Sanjay Dutt) ಗೆ ಆದ ಗಾಯದ ಬಗ್ಗೆ ಎಲ್ಲಿಯೂ ಸುದ್ದಿ ಆಗದಂತೆ ನೋಡಿಕೊಳ್ಳಲಾಗಿದೆ ಎನ್ನುವ ಮಾತು ಹರಿದಾಡುತ್ತಿದೆ. ಶುಕ್ರವಾರ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

    ಬಾಲಿವುಡ್ ನಟ ಸಂಜಯ್ ದತ್ ಸದ್ಯ ಕನ್ನಡದ ಕೆಡಿ (KD) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶ ಚಿತ್ರೀಕರಣವಾಗುತ್ತಿದ್ದು, ಈ ವೇಳೆ ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ (Bomb Blasting) ಮಾಡುವಾಗ ಸಂಜಯ್ ಗಾಯ ಮಾಡಿಕೊಂಡಿದ್ದಾರೆ. ಈ ಸನ್ನಿವೇಶವನ್ನು ಸಾಹಸ ನಿರ್ದೇಶಕ ರವಿವರ್ಮಾ ಕಂಪೋಸ್ ಮಾಡಿದ್ದರು.

    ಧ್ರುವ ಸರ್ಜಾ (Dhruva Sarja) ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಮಾಗಡಿ ರೋಡ್ ನಲ್ಲಿ ಹಾಕಲಾದ ಸೆಟ್ ನಲ್ಲಿ ಈ ಅವಘಡ ನಡೆದಿದೆ. ಇದನ್ನೂ ಓದಿ:ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು

    ಒಂದು ಕಡೆ ಸಂಜಯ್ ದತ್ ಅವರಿಗೆ ಗಾಯವಾಗಿದೆ ಎನ್ನುವ ಸುದ್ದಿ ಇದ್ದರೂ, ಮತ್ತೊಂದು ಕಡೆ ತಮಗೆ ಏನೂ ಆಗಿಯೇ ಇಲ್ಲ ಎನ್ನುವಂತೆ ಸಂಜಯ್ ಅವರು ಗೆಳೆಯನ ಬರ್ತಡೇ ಸಂಭ್ರಮದಲ್ಲಿ ಭಾಗಿಯಾಗಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಇತ್ತ ರವಿವರ್ಮಾ ಅವರು ಪ್ರೇಮ್ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಹಾಗಾದರೆ, ನಿಜವಾಗಿ ಅಲ್ಲಿ ಆಗಿದ್ದು ಏನು ಎನ್ನುವುದನ್ನು ಚಿತ್ರತಂಡವೇ ಸ್ಪಷ್ಟ ಪಡಿಸಬೇಕಿದೆ.

    ಸಂಜಯ್ ದತ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲನೇ ಸಿನಿಮಾ ಇದಾಗಿದ್ದು, ಸಂಜಯ್ ಅವರ ಕನ್ನಡದ ಎರಡನೇ ಚಿತ್ರ ಎನ್ನುವುದು ವಿಶೇಷ.  ಈ ಸಿನಿಮಾದಲ್ಲಿ ಬಾಲಿವುಡ್ ಇನ್ನೋರ್ವ ಕಲಾವಿದರು ನಟಿಸುತ್ತಿದ್ದು, ಈ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

  • Breaking- ಶೂಟಿಂಗ್ ವೇಳೆ ಅವಘಡ: ಬಾಂಬ್ ಬ್ಲಾಸ್ಟಿಂಗ್ ವೇಳೆ ಸಂಜಯ್ ದತ್ ಗೆ ಗಾಯ

    Breaking- ಶೂಟಿಂಗ್ ವೇಳೆ ಅವಘಡ: ಬಾಂಬ್ ಬ್ಲಾಸ್ಟಿಂಗ್ ವೇಳೆ ಸಂಜಯ್ ದತ್ ಗೆ ಗಾಯ

    ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಸದ್ಯ ಕನ್ನಡದ ಕೆಡಿ (KD) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶ ಚಿತ್ರೀಕರಣವಾಗುತ್ತಿದ್ದು, ಈ ವೇಳೆ ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ (Bomb Blasting) ಮಾಡುವಾಗ ಸಂಜಯ್ ಗಾಯ ಮಾಡಿಕೊಂಡಿದ್ದಾರೆ.

    ಧ್ರುವ ಸರ್ಜಾ (Dhruva Sarja) ಮತ್ತು ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಕೆಡಿ ಚಿತ್ರದ ಚಿತ್ರೀಕರಣವು ಮಾಗಡಿ ರೋಡ್ ನಲ್ಲಿ ಹಾಕಲಾದ ಸೆಟ್ ನಲ್ಲಿ ನಡೆಯುತ್ತಿತ್ತು.  ಇದನ್ನೂ ಓದಿ:ಸ್ಪರ್ಧಿಗಳಿಂದ ಅಗೌರವ: ಬಿಗ್ ಬಾಸ್ ಶೋ ಮಧ್ಯೆಯೇ ಹೊರನಡೆದ ನಟ ಮೋಹನ್ ಲಾಲ್

    ಎಷ್ಟೇ ಮುತುವರ್ಜಿವಹಿಸಿದರೂ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಕೆಡಿ ಸಿನಿಮಾ ಕೂಡ ಅದಕ್ಕೆ ಹೊರತಾಗಲಿಲ್ಲ. ಸಂಜಯ್ ದತ್ ಗಾಯಗೊಳ್ಳುತ್ತಿದ್ದಂತೆಯೇ ಶೂಟಿಂಗ್ ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ. ಸಂಜಯ್ ಮತ್ತು ಧ್ರುವ ನಡುವೆ ಸಾಹಸ ಸನ್ನಿವೇಶದ ಚಿತ್ರೀಕರಣವನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದರು ಎಂದು ಗೊತ್ತಾಗಿದೆ.  ಈ ಘಟನೆ ಕಳೆದ ಶುಕ್ರವಾರದಂದು ನಡೆದದ್ದು, ಸಂಜಯ್ ದತ್ ಘಟನೆಯ ನಂತರ ಮುಂಬೈಗೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ.

    ಸಂಜಯ್ ದತ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲನೇ ಸಿನಿಮಾ ಇದಾಗಿದ್ದು, ಸಂಜಯ್ ಅವರ ಕನ್ನಡದ ಎರಡನೇ ಚಿತ್ರ ಎನ್ನುವುದು ವಿಶೇಷ.  ಈ ಸಿನಿಮಾದಲ್ಲಿ ಬಾಲಿವುಡ್ ಇನ್ನೋರ್ವ ಕಲಾವಿದರು ನಟಿಸುತ್ತಿದ್ದು, ಈ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

  • ಮುದ್ದುಗಿಳಿ ಕಾಣೆಯಾಗಿದೆ ಹುಡುಕಿಕೊಡಿ – ನಗದು ಬಹುಮಾನ ಘೋಷಿಸಿದ ಕುಟುಂಬ

    ಮುದ್ದುಗಿಳಿ ಕಾಣೆಯಾಗಿದೆ ಹುಡುಕಿಕೊಡಿ – ನಗದು ಬಹುಮಾನ ಘೋಷಿಸಿದ ಕುಟುಂಬ

    ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಕುಟುಂಬವೊಂದು ಕಳೆದ 12 ವರ್ಷಗಳಿಂದಲೂ ಮುದ್ದಾಗಿ ಸಾಕಿದ್ದ `ಪೊಪೊ’ ಗಿಳಿಯೊಂದು ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ ಆಕರ್ಷಕ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.

    ಇಲ್ಲಿನ ಪಿಪಾರಪತಿ ರಸ್ತೆಯ ನಿವಾಸಿಗಳಾದ ಶ್ಯಾಮ್ ದೇವ್ ಪ್ರಸಾದ್‌ಗುಪ್ತಾ ಹಾಗೂ ಅವರ ಪತ್ನಿ ಸಂಗೀತಾ ಗುಪ್ತಾ ತಮ್ಮ ಗಿಳಿಯನ್ನು ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ನಗರದ ಪ್ರಮುಖ ರಸ್ತೆಯ ಗೋಡೆಗಳ ಮೇಲೆ ಹಾಗೂ ಮಾರುಕಟ್ಟೆಗಳಲ್ಲಿ ಪಕ್ಷಿಯ ಫೋಟೋ ಇರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದನ್ನೂ ಓದಿ: ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಮಹಿಳೆಗೆ ಮುಂಬೈ ಕ್ಲಬ್‌ನಲ್ಲಿ ಕಿರುಕುಳ

    Pet parrot

    ಪೊಪೊ ಗಿಳಿ ಒಂದು ತಿಂಗಳ ಹಿಂದೆ ಮನೆಯಿಂದ ಹಾರಿಹೋಗಿದೆ. ಅದನ್ನು ಮರಳಿ ಪಡೆಯಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ವಿಶೇಷ ಧ್ವನಿಯಲ್ಲಿ ಕೂಗುವುದು, ಹತ್ತಿರದ ಮರಗಳಲ್ಲಿ ಹುಡುಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

    ಕೊನೆಯ ಪ್ರಯತ್ನವಾಗಿ ಪೋಸ್ಟರ್ ಮೂಲಕ ಕರೆ ಕೊಟ್ಟಿದ್ದಾರೆ. ಜೊತೆಗೆ ಫೇಸ್‌ಬುಕ್ ಹಾಗೂ ವಾಟ್ಸಾಪ್ ಮೂಲಕ ಸಂದೇಶ ರವಾನೆ ಮಾಡುವ ಮೂಲಕ ಹುಡುಕಾಟದ ಅಭಿಯಾನ ಶುರು ಮಾಡಿದ್ದಾರೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್

    PARROT

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗೀತಾ ಗುಪ್ತ ಅವರು, ಸುಮಾರು 12 ವರ್ಷಗಳಿಂದ ಗಿಳಿಯನ್ನು ಸಾಕುಪ್ರಾಣಿಯನ್ನು ಹೊಂದಿದ್ದೆವು. ಏಪ್ರಿಲ್ 5ರಂದು ಪಕ್ಷಿ ಮನೆಯಿಂದ ನಾಪತ್ತೆಯಾಗಿತ್ತು. ನಮ್ಮ ಪಕ್ಷಿಯನ್ನು ಯಾರೇ ತೆಗೆದುಕೊಂಡಿದ್ದರೂ ದಯವಿಟ್ಟು ಅದನ್ನು ನಮಗೆ ಹಿಂತಿರುಗಿಸಿ ಎಂದು ಮನವಿ ಮಾಡಿದ್ದೇವೆ. ಏಕೆಂದರೆ ಅದು ಪಕ್ಷಿ ಮಾತ್ರವಲ್ಲ ನಮ್ಮ ಕುಟುಂಬದ ಸದಸ್ಯ. ಅದಕ್ಕೆ ಪ್ರೀತಿಯಿಂದ ಪೊಪೊ ಎಂದು ಹೆಸರಿಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

  • ಸಂತ್ರಸ್ತೆಗೆ ಅತ್ಯಾಚಾರ ಸನ್ನಿವೇಶ ವಿವರಿಸುವಂತೆ ಒತ್ತಾಯಿಸಿದ್ದ ಆರ್ ಜೆಡಿ ಮುಖಂಡರ ವಿರುದ್ಧ ಎಫ್‍ಐಆರ್!

    ಸಂತ್ರಸ್ತೆಗೆ ಅತ್ಯಾಚಾರ ಸನ್ನಿವೇಶ ವಿವರಿಸುವಂತೆ ಒತ್ತಾಯಿಸಿದ್ದ ಆರ್ ಜೆಡಿ ಮುಖಂಡರ ವಿರುದ್ಧ ಎಫ್‍ಐಆರ್!

    ಪಾಟ್ನಾ: ಅತ್ಯಾಚಾರದ ಸನ್ನಿವೇಶ ವಿವರಿಸುವಂತೆ ಸಂತ್ರಸ್ತ ಬಾಲಕಿಗೆ ಒತ್ತಾಯಿಸಿದ ಆರೋಪದಡಿ ಆರ್ ಜೆಡಿ ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಮೆಹ್ತಾ ಹಾಗೂ ಶಾಸಕ ಸುರೇಂದ್ರ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ.

    ಶುಕ್ರವಾರ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದರು, ಈ ವೇಳೆ ಪೊಲೀಸರನ್ನು ತಡೆದ ಆರ್ ಜೆಡಿ ಪಕ್ಷದ ಸತ್ಯಶೋಧನಾ ತಂಡದ ಸದಸ್ಯರು, ಅತ್ಯಾಚಾರದ ಘಟನೆ ಹಾಗೂ ಅನುಭವವನ್ನು ವಿವರಿಸುವಂತೆ ಸಂತ್ರಸ್ತ ಬಾಲಕಿಗೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ತಂಡದ ಕೆಲವು ಸದಸ್ಯರು ಅತ್ಯಾಚಾರ ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗ ಪಡೆಸಲು ಯತ್ನಿಸಿದ್ದರು ಎಂದು ಮಗಧ ವಲಯದ ಉಪ ಪೊಲೀಸ್ ಮಹಾನಿರೀಕ್ಷಕ ವಿನಯ್‍ಕುಮಾರ್ ಹೇಳಿದ್ದಾರೆ. ಇದನ್ನು ಓದಿ: ಕಣ್ಣ ಮುಂದೆಯೇ ಪತ್ನಿ, ಮಗಳ ಮೇಲೆ ಗ್ಯಾಂಗ್ ರೇಪ್ – ಕಾಪಾಡದ ಸ್ಥಿತಿಯಲ್ಲಿ ವ್ಯಕ್ತಿ

    ಏನಿದು ಘಟನೆ?
    ಜೂನ್ 14ರಂದು ಕೃತ್ಯ ನಡೆದಿದ್ದು, ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರ ಸಮೀಪದ ವ್ಯಕ್ತಿಯೊಬ್ಬ ರಾತ್ರಿ ತನ್ನ ಹೆಂಡತಿ ಹಾಗೂ 15 ವರ್ಷದ ಮಗಳೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ. ಈ ವೇಳೆ ಶಸ್ತ್ರ ಸಜ್ಜಿತರಾಗಿ ಬಂದ ಯುವಕರ ಗುಂಪೊಂದು ಅವರನ್ನು ತಡೆದಿದ್ದು, ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ, ಆತನ ಹೆಂಡತಿ ಹಾಗೂ 15 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದರು.

    ಆರ್‍ಜೆಡಿ ಪಕ್ಷದ ಸತ್ಯಶೋಧನಾ ತಂಡ ವರ್ತನೆ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲೋಕ್ ಕುಮಾರ್ ಮೆಹ್ತಾ ಅವರು, ಪ್ರಕರಣವನ್ನು ಮತ್ತೊಂದು ಕಡೆಗೆ ತಿರುಗಿಸಲು ಹಾಗೂ ಜನರ ಗಮನ ಬೇರೆಡೆ ಸೆಳೆದು ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

    ನಾವು ಅತ್ಯಾಚಾರ ಸನ್ನಿವೇಶ ವಿವರಿಸುವಂತೆ ಒತ್ತಾಯಿಸಿಲ್ಲ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದೇವು. ಆದರೆ ಬಾಲಕಿಯು ಮಾಧ್ಯಮದವರನ್ನು ನೋಡುತ್ತಲೇ ಕೋಪಗೊಂಡಳು. ಅಲ್ಲದೇ ಅತ್ಯಾಚಾರವಾದ 24 ಗಂಟೆಯೊಳಗೆ ಸಂತ್ರಸ್ತೆಯನ್ನು ವ್ಯದ್ಯಕೀಯ ತಪಾಸಣೆ ಮಾಡಿಸಬೇಕು. ಆದರೆ 38 ಗಂಟೆಗಳಾದ ಬಳಿಕ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯತ್ತಿದ್ದದ್ದು ಏಕೆ ಎಂದು ಮೆಹ್ತಾ ಪ್ರಶ್ನಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಗಯಾ ಜಿಲ್ಲೆಯ ಸೋನೆಡಿಯಾ ಹಳ್ಳಿಯ ಶಿವಂ ಶರ್ಮಾ ಮತ್ತು ಗೌರವ್ ಶರ್ಮಾ ಆಗಿದ್ದು, ಮತ್ತೊಬ್ಬ ಆರೋಪಿ ಪಾಸ್ವಾನ್ ನನ್ನು ಬಂಧಿಸಲಾಗಿದೆ. ಈತ ಸೋನೆಡಿಯಾ ಸಮೀಪ ಇರುವ ಮಂಗಳೂರು ಗ್ರಾಮದ ನಿವಾಸಿಯಾಗಿದ್ದಾನೆ.