Tag: Gay Nightclub

  • ಅಮೆರಿಕದ ಸಲಿಂಗಕಾಮಿಗಳ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ – 5 ಸಾವು, 18 ಮಂದಿಗೆ ಗಾಯ

    ಅಮೆರಿಕದ ಸಲಿಂಗಕಾಮಿಗಳ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ – 5 ಸಾವು, 18 ಮಂದಿಗೆ ಗಾಯ

    ನ್ಯೂಯಾರ್ಕ್‌: ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿ ಶನಿವಾರ ರಾತ್ರಿ ಸಲಿಂಗಕಾಮಿಗಳ ನೈಟ್‌ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕ್ಲಬ್ ಕ್ಯೂನಲ್ಲಿ ನಡೆದ ದಾಳಿಯ ನಂತರ ಶಂಕಿತ ಮಹಿಳೆಯನ್ನು ಬಂಧಿಸಲಾಗಿದ್ದು, ಗಾಯಗೊಂಡಿದ್ದ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೊಲೊರಾಡೋ ಸ್ಪ್ರಿಂಗ್ಸ್ ಪೊಲೀಸ್ ಲೆಫ್ಟಿನೆಂಟ್ ಪಮೇಲಾ ಕ್ಯಾಸ್ಟ್ರೋ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾಗೆ ಕೌಂಟರ್ ಕೊಡಲು 125 ಆ್ಯಂಟಿ ಏರ್‌ಕ್ರಾಫ್ಟ್ ಗನ್ – ಉಕ್ರೇನ್ ಬೆಂಬಲಕ್ಕೆ ಬ್ರಿಟನ್

    SHOOTOUT

    ದಾಳಿಯ ಉದ್ದೇಶದ ಬಗ್ಗೆ ಆಕೆ ಯಾವುದೇ ಮಾಹಿತಿ ನೀಡಿಲ್ಲ. ಗುಂಡಿನ ದಾಳಿಗೆ ಯಾವ ರೀತಿಯ ಬಂದೂಕು ಬಳಸಲಾಗಿದೆ ಎಂದು ಹೇಳಲು ನಿರಾಕರಿಸಿದ್ದಾಳೆ.

    ಕ್ಲಬ್ ತನ್ನ ಫೇಸ್‌ಬುಕ್ ಪುಟದಲ್ಲಿ, ನಮ್ಮ ಸಮುದಾಯದ ಮೇಲಿನ ಪ್ರಜ್ಞಾಶೂನ್ಯ ದಾಳಿ ಖಂಡನೀಯ. ಬಂದೂಕುಧಾರಿಯನ್ನು ಸದೆಬಡಿಯಲು ಹೆಚ್ಚಿನ ಹಾನಿ ತಪ್ಪಿಸಿದ ಗ್ರಾಹಕರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ರನ್‌ವೇಯಲ್ಲಿ ಅಗ್ನಿಶಾಮಕ ಟ್ರಕ್‌ಗೆ ಪ್ಯಾಸೆಂಜರ್ ವಿಮಾನ ಡಿಕ್ಕಿ- ಇಬ್ಬರು ಸಿಬ್ಬಂದಿ ಸಾವು

    2016 ರಲ್ಲಿ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿನ ಸಲಿಂಗಕಾಮಿ ನೈಟ್‌ಕ್ಲಬ್‌ನಲ್ಲಿ ಬಂದೂಕುಧಾರಿ 49 ಜನರನ್ನು ಕೊಂದಿದ್ದ. ನಂತರ ಪೊಲೀಸರು ಗುಂಡು ಹಾರಿಸಿ ಬಂದೂಕುಧಾರಿಯನ್ನು ಹತ್ಯೆಗೈದಿದ್ದರು. ಅದೇ ಮಾದರಿಯಲ್ಲಿ ಈಗ ಮತ್ತೊಂದು ದಾಳಿ ನಡೆದಿದೆ.

    Live Tv
    [brid partner=56869869 player=32851 video=960834 autoplay=true]