Tag: gay couple

  • ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    – 2022 ರಲ್ಲಿ ಮದುವೆಯಾಗಿತ್ತು ಈ ಜೋಡಿ

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಗುರುವಾರ ಸಂಭವಿಸಿದ ಏರ್‌ ಇಂಡಿಯಾ (Air India) ಭೀಕರ ಅವಘಡದಲ್ಲಿ, ಮದುವೆಯಾಗಿದ್ದ ಗೇ ಜೋಡಿಯು ದುರಂತ ಸಾವು ಕಂಡಿದೆ.

    ಜಾಮಿ ಮೀಕ್ (45) ಮತ್ತು ಫಿಯಾಂಗಲ್ ಗ್ರೀನ್ ಲಾ (39) ಇಬ್ಬರೂ ಗೇ ಜೋಡಿ.‌ ಲಂಡನ್-ಬ್ರಿಟನ್‌ನ ವಾಕ್ಸ್ ಹಾಲ್‌ನವರಾಗಿದ್ದ ಸಲಿಂಗಿ ಜೋಡಿ 2022ರಲ್ಲಿ ಮದುವೆಯಾಗಿದ್ದರು (Same Sex Marriage). ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಜಾಮಿ ಮೀಕ್ ಎಂಬಾತ ವೆಲ್ನೆಸ್ ಫೌಂಡ್ರಿಯ ಸಂಸ್ಥಾಪಕ. ಇವರಿಬ್ಬರೂ ಯೋಗ ತರಬೇತಿ, ಆಧ್ಯಾತ್ಮಿಕ ತರಬೇತಿ ನೀಡುತ್ತಿದ್ದರು. ಭಾರತ ಪ್ರವಾಸಕ್ಕೆ ಬಂದಿದ್ದರು. ಘಟನೆ ಹಿಂದಿನ‌ ದಿನ ರಾತ್ರಿ ಅತ್ಯದ್ಭುತ ಎಂದು ಬಣ್ಣಿಸಿ ವೀಡಿಯೋ ಮಾಡಿದ್ದರು.

    ಭಾರತ ಪ್ರವಾಸ ಮುಗಿಸಿ ಹೊರಟಾಗ ಖುಷಿಯಲ್ಲಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದ ಗೇಟ್‌ನಲ್ಲಿ ಕುಳಿತು ಇವರು ಮಾಡಿದ್ದ ಕೊನೆಯ ವೀಡಿಯೋ ವೈರಲ್ ಆಗಿತ್ತು. ವೀಡಿಯೋದಲ್ಲಿ ಭಾರತದ ಪ್ರವಾಸದ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು. ವಿಮಾನವು ಹಾಸ್ಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತು. ಪರಿಣಾಮವಾಗಿ ಪ್ರಯಾಣಿಕರು ಸೇರಿದಂತೆ 274 ಮಂದಿ ಮೃತಪಟ್ಟಿದ್ದಾರೆ.

  • ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ

    ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ

    ಹೈದರಬಾದ್: ತೆಲಂಗಾಣದ ಸಲಿಂಗಕಾಮಿ ಜೋಡಿಯೊಂದು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಶನಿವಾರ ಹೈದರಾಬಾದ್‍ನ ಹೊರವಲಯದಲ್ಲಿರುವ ರೆಸಾರ್ಟ್‍ನಲ್ಲಿ ಸಲಿಂಗಕಾಮಿ ಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿತ್ತು. ಹೋಟೆಲ್ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಹಿರಿಯ ಅಧ್ಯಾಪಕರಾದ ಕೋಲ್ಕತ್ತಾ ಮೂಲದ ಸುಪ್ರಿಯೊ ಚಕ್ರವರ್ತಿ(31) ಮತ್ತು ಎಂಎನ್‍ಸಿ ಉದ್ಯೋಗಿಯಾಗಿರುವ ದೆಹಲಿ ಮೂಲಕ ಅಭಯ್ ಡ್ಯಾಂಗ್ (34) ಬಿಳಿ ಸೂಟಿನಲ್ಲಿ ಉಂಗುರ ವಿನಿಮಯ ಮಾಡಿಕೊಳ್ಳುವ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಬೆಂಗಾಲಿ ಮತ್ತು ಪಂಜಾಬಿ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್

    Gay couple

    8 ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಪತಿ ಮತ್ತು ಪತಿ ಆಗಿದ್ದು, ಈ ವಿಶೇಷ ಮದುವೆಗೆ ಅವರು ಪ್ರಾಮಿಸಿಂಗ್ ಸೆರ್ಮನಿ ಎಂಬ ಹೆಸರನ್ನು ಕೊಟ್ಟಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ನಡೆದ ಈ ವಿವಾಹ ಮಹೋತ್ಸವದಲ್ಲಿ ದಂಪತಿಗಳ ಅನೇಕ ಸ್ನೇಹಿತರು ಮತ್ತು ಆಪ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಟಾಲಿವುಡ್ ನಟಿ – ಕಾಜಲ್ ಫೋಟೋ ಹೇಳ್ತೀರೋದೇನು?

    Gay couple

    ಒಟ್ಟಾರೆ ಭಾರತದಲ್ಲಿ ಸಲಿಂಗಕಾಮಿ ವಿವಾಹಕ್ಕೆ ಮಾನ್ಯತೆ ಇಲ್ಲದಿದ್ದರೂ, ಈ ಜೋಡಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲ ಭಾರತದ ಸಲಿಂಗಕಾಮಿ ಜೋಡಿಯಾಗಿದೆ.

  • ಬಿಕಿನಿ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಿಂಗಿ ಜೋಡಿ ಸಾವು

    ಬಿಕಿನಿ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಿಂಗಿ ಜೋಡಿ ಸಾವು

    – ರಾತ್ರಿ ಕುಟುಂಬಸ್ಥರ ಜೊತೆ ಪಾರ್ಟಿ
    – ಬೆಳಗ್ಗೆ ರೂಮಿನಲ್ಲಿ ಶವವಾಗಿ ಪತ್ತೆ

    ಬ್ಯಾಂಕಾಕ್: ಸಲಿಂಗಿ ಜೋಡಿಯೊಂದು ಪರಸ್ಪರ ಚಾಕುವಿನಿಂದ ಇರಿದುಕೊಂಡು ಮೃತಪಟ್ಟಿರುವ ಘಟನೆ ಯ್ಲೆಂಡ್‍ನ ಪ್ರವಾಸಿ ಹೋಟೆಲ್ ರೂಮಿನಲ್ಲಿ ನಡೆದಿದೆ.

    ಮೃತರನ್ನು ರಾಟ್ರೀ ಸ್ರಿವಿಬೂನ್ (24) ಮತ್ತು ಪಟ್ಸಾನನ್ ಚನ್‍ಪ್ರಪಾತ್ (29) ಎಂದು ಗುರುತಿಸಲಾಗಿದೆ. ಬ್ಯಾಂಕಾಕ್‍ನಿಂದ 100 ಕಿ.ಮೀ ದೂರದಲ್ಲಿರುವ ಪಟ್ಟಾಯದಲ್ಲಿನ ಸಮುದ್ರ ತೀರದ ರೆಸಾರ್ಟ್ ನಲ್ಲಿರುವ ಹೋಟೆಲ್ ರೂಮಿನಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಕುಟುಂಬದವರು ಬೆಳಗ್ಗೆ ರೂಮಿಗೆ ಹೋಗಿ ನೋಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಪಟ್ಸಾನನ್ ಮತ್ತು ರಾಟ್ರೀ ಇಬ್ಬರಿಗೂ ಕುತ್ತಿಗೆ ಸೇರಿದಂತೆ ಅನೇಕ ಕಡೆ ಚಾಕುವಿನಿಂದ ಇರಿದ ಗಾಯಗಳಾಗಿದ್ದವು. ಇಬ್ಬರು ಸಾಯುವ ಕೆಲ ಗಂಟೆಗಳ ಮೊದಲು ಆನ್‍ಲೈನಲ್ಲಿ ಪೋಸ್ಟ್ ಮಾಡಿದ್ದ ಫೋಟೋದ ಬಗ್ಗೆ ವಾಗ್ವಾದ ನಡೆದಿದೆ. ರಾಟ್ರೀ ಸ್ವಿಮ್ಮಿಂಗ್ ಪೂಲ್ ಅಂಚಿನಲ್ಲಿ ಕುಳಿತು ಹಸಿರು ಬಣ್ಣದ ಬಿಕಿನಿಯಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಪೋಸ್ಟ್ ಮಾಡಿದ್ದರು ಎಂದು ತಿಳಿದುಬಂದಿದೆ.

    ಪಟ್ಸಾನನ್ ಮತ್ತು ರಾಟ್ರೀ ಸಾಯುವ ಮುನ್ನ ಅಂದರೆ ರಾತ್ರಿಯಷ್ಟೇ ಕುಟುಂಬದ ಜೊತೆ ಒಟ್ಟಿಗೆ ಸೇರಿ ಊಟ ಮಾಡಿದ್ದರು. ಅಲ್ಲದೇ ಅವರೊಂದಿಗೆ ಸಂತಸದಿಂದ ಕಾಲ ಕಳೆದಿದ್ದರು. ಆದರೆ ಬೆಳಗ್ಗೆ ಸಲಿಂಗಿ ಜೋಡಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ.

    ಪಾರ್ಟಿ ವೇಳೆ ಎಲ್ಲರೂ ಖುಷಿಯಿಂದ ಇದ್ದೆವು. ಆಗ ಪಟ್ಸಾನನ್ ಮತ್ತು ರಾಟ್ರೀ ಇಬ್ಬರ ಸಂಬಂಧವೂ ಚೆನ್ನಾಗಿತ್ತು. ಆದರೆ ನನ್ನ ಸಹೋದರಿಯ ಗೆಳತಿ ಸ್ವಲ್ಪ ಹೊಟ್ಟೆಕಿಚ್ಚಿನ ಸ್ವಭಾವದವಳಾಗಿದ್ದಳು. ಹೀಗಾಗಿ ಇಬ್ಬರ ಸಾವಿನಿಂದ ನಾವು ಆಘಾತಗೊಂಡಿದ್ದೇವೆ ಎಂದು ರಾಟ್ರೀ ಸಹೋದರ ಪೈರೋಜ್ ತಿಳಿಸಿದ್ದಾರೆ.

    ಘಟನೆ ಸ್ಥಳದಲ್ಲಿ ಚಾಕು ಪತ್ತೆಯಾಗಿದೆ. ಇಬ್ಬರ ನಡುವೆ ವಾದ-ವಿವಾದ ನಡೆದಿದ್ದು, ನಂತರ ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೂ ನಾವು ಕುಟುಂಬದವರನ್ನು ವಿಚಾರಣೆ ಮಾಡುತ್ತಿದ್ದೇವೆ. ಆದರೆ ಯಾರ ಮೇಲೆ ಅನುಮಾನ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುರಿಸಿದ್ದಾರೆ.

  • ವೈದ್ಯಲೋಕದ ಅಚ್ಚರಿ : ಇಬ್ಬರು ತಾಯಂದಿರ ಗರ್ಭದಿಂದ ಜನಿಸಿದ ಒಂದು ಮಗು

    ವೈದ್ಯಲೋಕದ ಅಚ್ಚರಿ : ಇಬ್ಬರು ತಾಯಂದಿರ ಗರ್ಭದಿಂದ ಜನಿಸಿದ ಒಂದು ಮಗು

    ಆಸ್ಟಿನ್: ಇಬ್ಬರು ಸಲಿಂಗಿ ದಂಪತಿ ಮದುವೆಯಾಗಿದ್ದು, ಅವರಿಬ್ಬರು ಸೇರಿ ಒಂದು ಮಗುವಿಗೆ ಜನ್ಮ ನೀಡಿರುವ ಅಚ್ಚರಿಯೊಂದು ನಡೆದಿದೆ.

    ಒಂದೇ ಮಗುವನ್ನು ಇಬ್ಬರು ಸಲಿಂಗಿಗಳು ತಮ್ಮ ಗರ್ಭದಲ್ಲಿರಿಸಿಕೊಂಡು ಜನ್ಮ ನೀಡಿದ್ದಾರೆ. ಈಗ ಆ ಮಗುವಿಗೆ ಇಬ್ಬರು ಅಮ್ಮಂದಿರಾಗಿದ್ದು, ವೈದ್ಯಲೋಕದ ಅಚ್ಚರಿ ಘಟನೆ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಎಂದು ಹೇಳಲಾಗುತ್ತಿದೆ.

    ಈ ಅಚ್ಚರಿ ಘಟನೆ ನಾರ್ಥ್ ಟೆಕ್ಸಾಸ್ ನ ಮೌಂಟೇನ್ ಸ್ಪ್ರಿಂಗ್ಸಿ ಎಂಬಲ್ಲಿ ನಡೆದಿದೆ. ಟೆಕ್ಸಾಸ್ ನಿವಾಸಿಗಳಾದ ಆಶ್ಲೆ ಮತ್ತು ಬ್ಲಿಸ್ ಕೌಲ್ಟರ್ ಇಬ್ಬರು ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವನ್ನು ಪಡೆಯಲು ಇವರು ಸುಮಾರು 6,25,557 ರೂ, ಖರ್ಚು ಮಾಡಿದ್ದಾರೆ.

    ಮೊದಲಿಗೆ ಪ್ರಯೋಗಾಲಯದ ಮೂಲಕ ದಾನಿಗಳಿಂದ 36 ವರ್ಷದ ಬ್ಲಿಸ್ ಅವರು ಅಂಡಾಣುಗಳನ್ನು ಪಡೆದುಕೊಂಡಿದ್ದರು. ಅದನ್ನು ಬ್ಲಿಸ್ ಗರ್ಭದಲ್ಲಿ ಇರಿಸಲಾಯಿತು. ಐದು ದಿನಗಳ ನಂತರ ಬ್ಲಿಸ್ ಮಗುವಿಗೆ ಜನ್ಮ ನೀಡಲು ಹಿಂದೇಟು ಹಾಕಿದರು. ಮತ್ತೆ ವೈದ್ಯರ ಸಲಹೆಯ ಮೇರೆಗೆ ಅಂಡಾಣುಗಳನ್ನು ಸಂಗಾತಿ 28 ವರ್ಷದ ಆಶ್ಲೆ ಗರ್ಭದಲ್ಲಿ ಇರಿಸಲಾಯಿತು.

    ಇದೇ ವರ್ಷದ ಜೂನ್ ತಿಂಗಳಿನಲ್ಲಿ ಆಶ್ಲೆ ಅವರು ಆರೋಗ್ಯಕರವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಶ್ಲೇ ಮತ್ತು ಬ್ಲಿಸ್ ಆರು ವರ್ಷಗಳ ಹಿಂದೆ ಭೇಟಿಯಾಗಿದ್ದು, ಜೂನ್ 2015 ರಲ್ಲಿ ಮದುವೆಯಾದ್ದರು. ಇವರಿಬ್ಬರೂ ಒಂದು ದಿನ ತಾವು ಮಗುವನ್ನು ಪಡೆಯಬೇಕು ಎಂದು ನಿರ್ಧಾರ ಮಾಡಿದ್ದಾರೆ.

    ಆದರೆ ಬ್ಲಿಸ್ ಅವರು ಮಗುವಿಗೆ ಗರ್ಭಿಣಿಯಾಗಬೇಕೆಂದು ಬಯಸಲಿಲ್ಲ. ಒಂದೇ ಲಿಂಗದ ಸ್ತ್ರೀ ದಂಪತಿ ಮಗುವನ್ನು ಪಡೆಯಬೇಕೆಂದರೆ ಒಬ್ಬ ಮಹಿಳೆ ಇತರರ ಅಂದರೆ ದಾನಿಗಳು ಮೂಲಕ ವೀರ್ಯಾಣು ಪಡೆದು ಮಕ್ಕಳನ್ನು ಪಡೆಯಬೇಕಾಗುತ್ತದೆ. ಅದೇ ರೀತಿ ಬ್ಲಿಸ್ ಮತ್ತು ಆಶ್ಲೇ ಇಬ್ಬರೂ ಮಗುವನ್ನು ಪಡೆಯಲು ಬಯಸಿದ್ದರು.

    ಆ ಮೂಲಕ ಮೊದಲಿಗೆ ಬ್ಲಿಸ್ ಡಾ. ಕ್ಯಾಥಿ ಡೂಡಿ ಬಗ್ಗೆ ತಿಳಿದು ಅವರ ಬಳಿ ಚಿಕಿತ್ಸೆ ಪಡೆದು ದಾನಿಗಳ ಮೂಲಕ ವೀರ್ಯಾಣು ಪಡೆದು ಗರ್ಭ ಧರಿಸಿದರು. ಆದರೆ ಕಾರಣನಂತರಗಳಿಂದ ಆ ಗರ್ಭವನ್ನು ತನ್ನ ಪಾಟ್ನರ್ ಆಶ್ಲೆಗೆ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಇಬ್ಬರು ಒಂದೇ ಮಗುವನ್ನು ತಮ್ಮ ಗರ್ಭದಲ್ಲಿರಿಸಿಕೊಂಡು  ಜನ್ಮ ನೀಡಿದ್ದಾರೆ. ಈ ಮೂಲಕ ಇಬ್ಬರು ಒಂದೇ ಮಗುವಿಗೆ ಅಮ್ಮನಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv