Tag: gay

  • ಸಲಿಂಗಕಾಮಿ ಗೆಳೆಯನಿಗಾಗಿ ದೊಡ್ಡಮ್ಮನ ಮನೆಯಲ್ಲೇ ಕಳ್ಳತನ ಮಾಡಿದ್ದ ದತ್ತು ಪುತ್ರ ಅರೆಸ್ಟ್

    ಸಲಿಂಗಕಾಮಿ ಗೆಳೆಯನಿಗಾಗಿ ದೊಡ್ಡಮ್ಮನ ಮನೆಯಲ್ಲೇ ಕಳ್ಳತನ ಮಾಡಿದ್ದ ದತ್ತು ಪುತ್ರ ಅರೆಸ್ಟ್

    ಬೆಂಗಳೂರು: ಸಲಿಂಗಕಾಮಿ ಗೆಳೆಯನಿಗಾಗಿ ದೊಡ್ಡಮ್ಮನ ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ದತ್ತು ಪುತ್ರನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

    ಪ್ರಥಮ್ ಬಂಧಿತ ಆರೋಪಿ. ದತ್ತು ಪಡೆದು ಸಾಕಿದ್ದ ಮಗನಿಂದಲೇ ದೊಡ್ಡಮ್ಮನ ಮನೆಗೆ ಕನ್ನ ಹಾಕಲಾಗಿದೆ. ಹೊಸಕೆರೆಹಳ್ಳಿಯ ಡಾಕ್ಟರ್ ಶಾಂತಿಯವರ ಕುಟುಂಬ ಮುಂಬೈಗೆ ಹೋಗಿದ್ದಾಗ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಗೆ ಡಾಕ್ಟರ್ ಶಾಂತಿ ದೂರು ನೀಡಿದ್ದರು.

    ಡಾಕ್ಟರ್ ತಂಗಿ ಮಗ ಬಂದು ಹೋಗಿದ್ದ ಬಗ್ಗೆ ಅನುಮಾನಗೊಂಡ ಪೊಲೀಸರಿಗೆ, ಏಕಾಏಕಿ ಪ್ರಥಮ್ ಅಕೌಂಟ್‌ಗೆ ಹಣ ಬಂದಿರೋದು ಗೊತ್ತಾಗಿತ್ತು. ವಿಚಾರಣೆ ವೇಳೆ ಆರೋಪಿ ತಾನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಕಳ್ಳತನವಾದ ಮನೆ ಮಾಲೀಕೆ ಡಾಕ್ಟರ್ ಶಾಂತಿಯ ತಂಗಿ ಮಗನಾಗಿದ್ದ ಪ್ರಥಮ್.‌ ಮಕ್ಕಳು ಇಲ್ಲ ಅಂತ ಪ್ರಥಮ್‌ನನ್ನ ದತ್ತು ಪಡೆದು ಡಾಕ್ಟರ್ ಶಾಂತಿ ತಂಗಿ ಸಾಕಿದ್ದರು. ಸ್ವಂತ ಮಗನಂತೆ ಚೆನ್ನಾಗಿ ಸಾಕಿ ಬಿಬಿಎ ಸಹ ಓದಿಸಿದ್ದರು.

    ಆಗಾಗ ದೊಡ್ಡಮ್ಮನ ಮನೆಗೆ ಹೋಗಿ ಬರುತ್ತಿದ್ದ ಆರೋಪಿ ಪ್ರಥಮ್ ಸಲಿಂಗಕಾಮಿಯಾಗಿದ್ದ. ಪ್ರಥಮ್ ತನ್ನ ಬಾಯ್‌ಫ್ರೆಂಡ್‌ಗಾಗಿ ದೊಡ್ಡಮ್ಮನ ಮನೆಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಬಂಧಿತ ಆರೋಪಿಯಿಂದ 258 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಚೆನ್ನೈನಲ್ಲಿದ್ದ ತನ್ನ ಬಾಯ್‌ಫ್ರೆಂಡ್‌ಗಾಗಿ ಕಳ್ಳತನ ಮಾಡಿದ್ದ. ಮೊದಲು ಬ್ಯಾಂಕ್ ಮ್ಯಾನೇಜರ್ ಆಗಿದ್ದ ಆರೋಪಿ, ನಂತರ ಬಾಯ್‌ಫ್ರೆಂಡ್‌ಗಾಗಿ ಕೆಲಸ ಬಿಟ್ಟು ಚೆನ್ನೈನಲ್ಲಿ ಕೆಲಸ ಹುಡುಕಿದ್ದ. ಕದ್ದ ಚಿನ್ನ ಮಾರಾಟ ಮಾಡಿ ಹಲವು ಬಾರಿ ವಿಮಾನದಲ್ಲಿ ಓಡಾಡಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

  • ಮದುವೆಯಾದಾಗಿಂದಲೂ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ ಪತಿ – ಸಲಿಂಗಿ ಗಂಡನಿಂದ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತ್ನಿ

    ಮದುವೆಯಾದಾಗಿಂದಲೂ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ ಪತಿ – ಸಲಿಂಗಿ ಗಂಡನಿಂದ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತ್ನಿ

    ಬೆಂಗಳೂರು: ಸಲಿಂಗಿ (Gay) ಗಂಡನಿಂದ ಬೇಸತ್ತು ಮಹಿಳೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಯಾದಾಗಿನಿಂದಲೂ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ ಪತಿ ಬಗ್ಗೆ ಅನುಮಾನಗೊಂಡು ವಾಟ್ಸಪ್‌ ಪರಿಶೀಲಿಸಿದಾಗ ಮಹಿಳೆಗೆ ಗಂಡನ ನಿಜ ಬಣ್ಣ ಬಯಲಾಗಿದೆ.

    ಏನಿದು ಪ್ರಕರಣ?
    ರಾಜಧಾನಿಯಲ್ಲಿ ಹೀಗೊಂದು ಪ್ರಕರಣ ನಡೆದಿದ್ದು, ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಗಂಡ ದಿಗಂತ್‌ನಿಂದ ಮೋಸ ಹೋದ ಮಹಿಳೆ ಟೆಕ್ಕಿಯಾಗಿದ್ದಾರೆ. ಮಗನ ವಿಚಾರ ಗೊತ್ತಿದ್ದೂ ಆತನ ಪೋಷಕರು ಮದುವೆ ಮಾಡಿಸಿದ್ದರು. ಹೆಣ್ಣಿನ ಮನೆಯವರಿಂದ 160 ಗ್ರಾಂ ಚಿನ್ನಾಭರಣ ಹಾಗೂ ನಗದು ಪಡೆದು ಮಗ ಸಲಿಂಗಕಾಮಿ ಅನ್ನೋದನ್ನ ಬಚ್ಚಿಟ್ಟು ಮದುವೆ ಮಾಡಿಸಿದ್ದರು. ಮದುವೆಯಾದಾಗಿನಿಂದ ಈತ ಲೈಂಗಿಕ ಸಂಪರ್ಕ ಮುಂದೂಡುತ್ತಲೇ ಇದ್ದ. ಇದನ್ನೂ ಓದಿ: ಹೊಟ್ಟೆ ನೋವಿನ ಚಿಕಿತ್ಸೆಗೆ ಬಂದವ ಸಾವು- ಪುತ್ತೂರಿನ ಖ್ಯಾತ ವೈದ್ಯರ ವಿರುದ್ಧ ಆರೋಪ

    ದಿಗಂತ್‌ ಸಹೋದರನಿಗೆ ಮಕ್ಕಳಾದ ಹಿನ್ನೆಲೆ ನೀನು ಮಕ್ಕಳು ಮಾಡಿಕೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರು. ಮಕ್ಕಳ ಬಗ್ಗೆ ಮಾತನಾಡುತ್ತಿದ್ದಂತೆ ದಿಗಂತ್‌ ಪಲಾಯನ ಮಾಡುತ್ತಿದ್ದ. ಪತಿಯ ನಡವಳಿಕೆ ಕಂಡು ಅನುಮಾನಗೊಂಡ ಟೆಕ್ಕಿ ಪತ್ನಿ ಆತನ ವಾಟ್ಸಪ್‌, ಮೆಸೆಂಜರ್‌ ಪರಿಶೀಲಿಸಿದ್ದಾಳೆ. ಈ ವೇಳೆ ಪತಿಯ ನಿಜ ಬಣ್ಣ ಬಯಲಾಗಿದೆ.

    ತಾನಿರಬೇಕಾದ ಜಾಗದಲ್ಲಿ ಪರಪುರುಷ ಇರುವುದನ್ನು ಕಂಡು ಪತ್ನಿ ಶಾಕ್‌ ಆಗಿದ್ದಾಳೆ. ವಾಟ್ಸಪ್‌ನಲ್ಲಿ ತನ್ನ ಪತಿ ಪರಪುರುಷನ ಜೊತೆ ಅತಿ ಸಲುಗೆಯಿಂದಿದ್ದ ಫೋಟೋಗಳು ಪತ್ತೆಯಾಗಿವೆ. ತಬ್ಬಿಕೊಂಡಿರುವ ಹಾಗೂ ಲೈಂಗಿಕತೆಗೆ ಸಂಬಂಧಪಟ್ಟಂತಹ ಫೋಟೋಗಳು ಕಂಡುಬಂದಿವೆ. ಇದರಿಂದ ನೊಂದ ಮಹಿಳೆ ಪತಿಯನ್ನ ಪ್ರಶ್ನೆ ಮಾಡಿದ್ದಳು. ಈ ವೇಳೆ ಪತ್ನಿ ಮೇಲೆ ಸಲಿಂಗಿ ದಿಗಂತ್ ಹಲ್ಲೆ ನಡೆಸಿದ್ದ. ಪತಿಯ ಪೋಷಕರಿಗೆ ಹೇಳಿದಾಗ, ಅನುಸರಿಸಿಕೊಂಡು ಹೋಗು ಎಂದು ಸುಮ್ಮನಾಗುತ್ತಿದ್ದರು. ಇದರಿಂದ ಬೇಸತ್ತು ಟೆಕ್ಕಿ ಮಹಿಳೆ ಸದ್ಯ ಪತಿ ದಿಗಂತ್ ಮತ್ತು ಆತನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: DCM ಡಿಕೆಶಿ ಮನೆದೇವರು ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನ, ಬೆಳ್ಳಿ ಕಳ್ಳತನ‌!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೇ ಡೇಟಿಂಗ್ ಆ್ಯಪ್‌ನಲ್ಲಿ ಯುವಕರಿಗೆ ವಂಚನೆ- 6 ಮಂದಿ ಅರೆಸ್ಟ್

    ಗೇ ಡೇಟಿಂಗ್ ಆ್ಯಪ್‌ನಲ್ಲಿ ಯುವಕರಿಗೆ ವಂಚನೆ- 6 ಮಂದಿ ಅರೆಸ್ಟ್

    ಲಕ್ನೋ: ಸಲಿಂಗಕಾಮಿಗಳ ಡೇಟಿಂಗ್ ಆ್ಯಪ್ (Gay Dating App) ಬಳಸಿಕೊಂಡು ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಉತ್ತರ ಪ್ರದೇಶದ (Uttar Pradesh) ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಸಲಿಂಗಕಾಮಿ ಡೇಟಿಂಗ್ ಆ್ಯಪ್ ಆಗಿರುವ ‘ಬ್ಲೂಡ್’ನಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ರಚಿಸಿ ಯುವಕರನ್ನು ವಂಚಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಲಖನ್ ಸಿಂಗ್ ಯಾದವ್ ತಿಳಿಸಿದ್ದಾರೆ.

    ವರದಿಗಳ ಪ್ರಕಾರ, ಆರೋಪಿಗಳು ಗೇ ಡೇಟಿಂಗ್ ಆ್ಯಪ್‌ನಲ್ಲಿ ಅಮಾಯಕ ಯುವಕರೊಂದಿಗೆ ಚಾಟ್ ಮಾಡಿ ಬಳಿಕ ಡೇಟಿಂಗ್‌ಗೆ ಕರೆಯುತ್ತಿದ್ದರು. ಬಳಿಕ ಯುವಕರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಬೆತ್ತಲೆ ವೀಡಿಯೋಗಳನ್ನು ಶೂಟ್ ಮಾಡಿದ್ದಾರೆ. ತದನಂತರ ಯುವಕರಿಂದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಬೆತ್ತಲೆ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ, ಅವರ ಫೋನ್ ಬಳಸಿ ಯುಪಿಐ ಮೂಲಕ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ಇದೇ ರೀತಿ ವಂಚನೆಗೆ ಒಳಗಾದ ಯುವಕನೊಬ್ಬ ಪೊಲೀಸರನ್ನು ಸಂಪರ್ಕಿಸಿ ತನ್ನ ನಗ್ನ ವೀಡಿಯೋಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ದೂರು ನೀಡಿದ್ದಾನೆ. ಈ ಬಗ್ಗೆ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

    ಯುವಕನಿಂದ ಮಾಹಿತಿ ಪಡೆದ ಪೊಲೀಸರು ವಂಚನೆಯಲ್ಲಿ ತೊಡಗಿದ್ದ 6 ಜನರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ದಿಲೀಪ್ ಅಲಿಯಾಸ್ ಪ್ರದ್ಯುಮ್ನ್ ಸಿಂಗ್ (21), ಅರುಣ್ ರಜಪೂತ್ (22), ವಿಪಿನ್ ಸಿಂಗ್ (21), ಪವನ್ ಕುಮಾರ್ ಸಿಂಗ್ (22), ಪ್ರವೀಣ್ ಸಿಂಗ್ (20) ಹಾಗೂ ಬ್ರಿಜೇಂದ್ರ ಸಿಂಗ್ (19) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹೃದಯಾಘಾತದಿಂದ ಹೆಸರಾಂತ ನಿರ್ದೇಶಕ ಸಿದ್ದಿಕಿ ನಿಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ತಮಿಳು ನಾಡು ಸರಕಾರಕ್ಕೆ ಮನವಿ ಮಾಡಿದ ನಿರ್ದೇಶಕ ವೆಟ್ರಿಮಾರನ್

    ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ತಮಿಳು ನಾಡು ಸರಕಾರಕ್ಕೆ ಮನವಿ ಮಾಡಿದ ನಿರ್ದೇಶಕ ವೆಟ್ರಿಮಾರನ್

    ಶಾಲಾ ಮಕ್ಕಳು ಲೈಂಗಿಕ ಶಿಕ್ಷಣವನ್ನು ಕಲಿಯುವುದರ ಅವಶ್ಯಕತೆ ಇದೆ. ಶಾಲಾ ಪಠ್ಯಕ್ರಮದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು ಸೇರ್ಪಡೆ ಮಾಡುವುದರ ಬಗ್ಗೆ ಕೇರಳ ಹೈಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಿರುವ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್, ಇದನ್ನು ತಮಿಳುನಾಡಿನಲ್ಲೂ ಜಾರಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ವಿಶ್ವ ಲೈಂಗಿಕ ಆರೋಗ್ಯ ದಿನ ಸಂದರ್ಭದಲ್ಲಿ ಮಾತನಾಡಿದ ಅವರು ಸಲಿಂಗ ವಿವಾಹವನ್ನೂ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

    ಬಾಂಗ್ಲಾದೇಶದ ಮಹಿಳೆ ಮತ್ತು ತಮಿಳುನಾಡಿನ ಮಹಿಳೆಯ ನಡುವೆ ನಡೆದ ಮದುವೆಯನ್ನು ಉದಾಹರಣೆಯಾಗಿ ತಗೆದುಕೊಂಡ ಅವರು ಇಂತಹ ಮದುವೆಯನ್ನು ನಾಗರೀಕ ಸಮಾಜ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು. ಅಲ್ಲದೇ, ತಮಿಳುನಾಡಿನ ಸುಭಿಕ್ಷಾ ಸುಬ್ರಮಣಿ ಹಾಗೂ ಟೀನಾ ದಾಸ್ ಸಲಿಂಗಿಗಳು ತಮಿಳು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಿದ್ದನ್ನೂ ಅವರು ನೆನಪಿಸಿಕೊಂಡರು. ಇದನ್ನೂ ಓದಿ: ಮತ್ತೆ ಶುರುವಾಯ್ತು ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್: `ಬ್ರಹ್ಮಾಸ್ತ್ರʼ ಚಿತ್ರಕ್ಕೆ ವಿರೋಧ

    ಪ್ರತಿಯೊಬ್ಬರೂ ತಮ್ಮ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಬದುಕಬೇಕು. ತೃತಿಯ ಲಿಂಗಿಗಳಿಗೆ ತಮ್ಮದೇ ಆದ ಬದುಕಿನ ಹಕ್ಕು ನೀಡುವಂತೆ ಕರೆಕೊಟ್ಟ ವೆಟ್ರಿಮಾರನ್, ಲೈಂಗಿಕ ಶಿಕ್ಷಣದ ಬಗ್ಗೆ ಒತ್ತು ನೀಡುವಂತೆ ಅವರು ಕೇಳಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಲಾಡ್ಜ್‌ನಲ್ಲಿ ಸಲಿಂಗಿಗಳ ಕಿತ್ತಾಟ – ಓರ್ವ ಸಾವು, ಇನ್ನೊಬ್ಬ ಜೈಲಿಗೆ

    ಲಾಡ್ಜ್‌ನಲ್ಲಿ ಸಲಿಂಗಿಗಳ ಕಿತ್ತಾಟ – ಓರ್ವ ಸಾವು, ಇನ್ನೊಬ್ಬ ಜೈಲಿಗೆ

    – ಜೂನ್‌ನಲ್ಲಿ ನಡೆದಿದ್ದ ಅನುಮಾನಾಸ್ಪದ ಸಾವು
    – ಮಾರತ್‌ಹಳ್ಳಿ ಲಾಡ್ಜ್‌ನಲ್ಲಿ ಕೊಲೆ

    ಬೆಂಗಳೂರು: ಮಾರತ್‌ಹಳ್ಳಿ ಲಾಡ್ಜ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಸಲಿಂಗಿಗಳ ಮಧ್ಯೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡ ವಿಚಾರ ತನಿಖೆಯ ವೇಳೆ ಬಯಲಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ಸ್ನೇಹಿತ ರಾಜಗೋಪಾಲ್‌ನನ್ನು ಕೊಲೆಗೈದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುವಣ್ಣನ್‌ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಏನಿದು ಪ್ರಕರಣ?
    ಜೂನ್ 4 ರಂದು ಮಾರತ್‌ಹಳ್ಳಿಯ ಲಾಡ್ಜ್‌ನಲ್ಲಿ ರಾಜಗೋಪಾಲ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ರೂಮ್‌ ಪಡೆದುಕೊಂಡಿದ್ದರು. ಮೂರು ದಿನವಾದರೂ ರಿನಿವಲ್‌ ಮಾಡಿದ ಕಾರಣ ಜೂನ್‌ 7 ರಂದು ಲಾಡ್ಜ್ ಸಿಬ್ಬಂದಿ ಕೊಠಡಿ ಪರಿಶೀಲಿಸಲು ಮುಂದಾದಾಗ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ದೇಹ ಪತ್ತೆಯಾಗಿತ್ತು. ಕೂಡಲೇ ಲಾಡ್ಜ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಯ ವೇಳೆ ಕುತ್ತಿಗೆ ಹಿಸುಕಿ ಉಸಿರು ಗಟ್ಟಿಸಿ ರಾಜ್‌ಗೋಪಾಲನನ್ನು ಕೊಲೆ ಮಾಡಿರುವ ವಿಚಾರ ದೃಢಪಟ್ಟಿತ್ತು. ಅನುಮಾನಾಸ್ಪದ ಸಾವಿನ ಹಿನ್ನಲೆ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

    ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    ಲಾಡ್ಜ್‌ನಲ್ಲಿ ಮೊಬೈಲ್‌ ಟವರ್‌ ಲೋಕೇಷನ್‌ ಪರಿಶೀಲಿಸಿದಾಗ ಒಂದು ಮೊಬೈಲ್‌ ಸಂಖ್ಯೆ ಸ್ವಿಚ್‌ ಆಫ್‌ ಆಗಿತ್ತು. ಆ ಮೊಬೈಲ್‌ ನಂಬರ್‌ ಜಾಡು ಹಿಡಿದಾಗ ತಮಿಳುನಾಡಿನಲ್ಲಿ ತಮಿಳುವಣ್ಣನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಪ್ರಕಟವಾಗಿದೆ. ಇದನ್ನೂ ಓದಿ: ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ

    ಇಬ್ಬರು ಸಲಿಂಗಿಗಳು:
    ಆರೋಪಿ ತಮಿಳುವಣ್ಣನ್‌ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಟೆಕ್ನಿಕಲ್‌ ಅಸೋಸಿಯೇಟ್‌ ಆಗಿ ಕೆಲಸ ಮಾಡಿಕೊಂಡಿದ್ದ. ಸಲಿಂಗಿ ಆಗಿದ್ದ ಕಾರಣಕ್ಕೆ ಪತ್ನಿ ಬಿಟ್ಟು ಹೋಗಿದ್ದಳು. 2020ರಲ್ಲಿ ತಮಿಳುವಣ್ಣನಿಗೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ರಾಜಗೋಪಾಲ್‌ ಪರಿಚಯವಾಗಿದ್ದಾನೆ. ಆತನೂ ಸಲಿಂಗಿ ಆಗಿದ್ದು ಆತನ ಪತ್ನಿಯೂ ಬಿಟ್ಟುಹೋಗಿದ್ದಳು. ಸ್ನೇಹಿತರಾಗಿದ್ದ ಇವರಿಬ್ಬರು ಲಾಡ್ಜ್‌ಗಳಲ್ಲಿ ಉಳಿದುಕೊಂಡು ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದರು.

    ಮೇ ತಿಂಗಳಲ್ಲಿ ತಮಿಳುವಣ್ಣನ್‌ಗೆ ದೇವರ ಬೀಸನಹಳ್ಳಿಯಲ್ಲಿ ಇರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಚೆನ್ನೈನಿಂದ ಬೆಂಗಳೂರಿಗೆ ಶಿಫ್ಟ್‌ ಆಗಿದ್ದ. ಶಿಫ್ಟ್‌ ಆದ ವಿಚಾರವನ್ನು ಸ್ನೇಹಿತ ರಾಜಗೋಪಾಲ್‌ಗೆ ತಿಳಿಸಿರಲಿಲ್ಲ. ತಮಿಳುವಣ್ಣನ್‌ ಚೆನ್ನೈ ಬಿಟ್ಟು ಹೋಗಿದ್ದಕ್ಕೆ ರಾಜಗೋಪಲ್‌ ಕೋಪಗೊಂಡಿದ್ದ. ಕೊನೆಗೆ ತಮಿಳುವಣ್ಣನ್‌ ಬೆಂಗಳೂರಿನಲ್ಲಿರುವ ವಿಚಾರ ತಿಳಿದು ಮೇ ಕೊನೆಯ ವಾರದಲ್ಲಿ ರಾಜಗೋಪಾಲ್‌ ನಗರಕ್ಕೆ ಬಂದಿದ್ದ. ಬಳಿಕ ಇವರಿಬ್ಬರೂ ಲಾಡ್ಜ್‌ನಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು.

    ಚೆನ್ನೈಗೆ ತೆರಳಿದ್ದ ರಾಜಗೋಪಲ್‌ ಜೂನ್‌ 4ರಂದು ಪುನಃ ಬೆಂಗಳೂರಿಗೆ ಬಂದಿದ್ದ. ರಾಜಗೋಪಾಲ್‌ ‘ನಿನ್ನ ಬಿಟ್ಟು ಹೋಗುವುದಿಲ್ಲ’ ಎಂದು ತಮಿಳುವಣ್ಣನ ಬಳಿ ಹೇಳಿದ್ದಾನೆ. ಅದೇ ದಿನ ರಾತ್ರಿ ಅದೇ ಲಾಡ್ಜ್‌ನಲ್ಲಿ ರೂಂ ಬಾಡಿಗೆ ಪಡೆದು ಇಬ್ಬರೂ ಉಳಿದುಕೊಂಡಿದ್ದರು. ಮಾರನೇ ದಿನ ತಮಿಳುವಣ್ಣನ್‌ ರೂಂಗೆ ಬಂದ ವೇಳೆ ಹಣಕಾಸಿನ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ತಮಿಳುವಣ್ಣನ್‌ ಹೊಡೆಯಲು ಮುಂದಾದಾಗ ಆಘಾತದಿಂದ ರಾಜಗೋಪಾಲ್‌ ಕುಸಿದು ಮೃತಪಟ್ಟಿದ್ದಾನೆ. ಇದರಿಂದ ಭಯಗೊಂಡ ತಮಿಳುವಣ್ಣನ್‌ ಕೊಠಡಿಗೆ ಬೀಗ ಹಾಕಿ ತೆರಳಿದ್ದ.‌ ಜೂನ್‌ 7 ರಂದು ಲಾಡ್ಜ್‌ ಸಿಬ್ಬಂದಿ ಕೊಠಡಿ ತೆರೆದಾಗ ರಾಜಗೋಪಾಲ ಶವವಾಗಿ ಪತ್ತೆಯಾಗಿದ್ದ.

    Live Tv
    [brid partner=56869869 player=32851 video=960834 autoplay=true]

  • ರಾಮ್ ಗೋಪಾಲ್ ವರ್ಮಾ ಸಲಿಂಗ ಕಾಮಿ ಎಂದು ಜರಿದ ಫ್ಯಾನ್ಸ್

    ರಾಮ್ ಗೋಪಾಲ್ ವರ್ಮಾ ಸಲಿಂಗ ಕಾಮಿ ಎಂದು ಜರಿದ ಫ್ಯಾನ್ಸ್

    ಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುಮ್ಮನಿರಲು ಅವರ ಬಾಯಿ ಬಿಡುತ್ತಿಲ್ಲ. ಹಾಗಾಗಿಯೇ ಮನಬಂದಂತೆ ಮಾತನಾಡುತ್ತಲೇ ಇರುತ್ತಾರೆ. ಆ ಮಾತುಗಳು ಯಾವ ರೀತಿಯಲ್ಲಿ ತಮಗೇ ಪರಿಣಾಮ ಬೀರಬಲ್ಲವು ಎಂಬುದನ್ನು ಅವರು ಬಹುಶಃ ಯೋಚಿಸುವುದಿಲ್ಲ. ಹಾಗಾಗಿ ಮಾತೆಲ್ಲವೂ ವಿವಾದಗಳಾಗಿ ಬದಲಾಗುತ್ತವೆ. ಆದರೂ, ಅವರು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಮಾತನಾಡುತ್ತಲೇ ಹೋಗುತ್ತಾರೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೆ ಮಾತಿಗೆ ಸಿಕ್ಕಿದ್ದಾರೆ. ಇವರ ನಿರ್ದೇಶನದ ಲಡಕಿ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮೊದಲ ಬಾರಿಗೆ ಭಾರತೀಯ ಸಿನಿಮಾ ರಂಗಕ್ಕೆ ಪೂರ್ಣ ಪ್ರಮಾಣದ ಮಾರ್ಷಲ್ ಆರ್ಟ್ ಬಳಸಿಕೊಂಡು ಮಾಡಿದ ಸಿನಿಮಾವನ್ನು ನೀಡುತ್ತಿದ್ದಾರೆ. ಈ ಸಿನಿಮಾಗೆ ಪ್ರೇರಣೆ ಬ್ರೂಸಲಿ ಎಂದು ಹೇಳಿಕೊಂಡಿದ್ದಾರೆ. ಬ್ರೂಸಲಿ ಎನ್ನು ಇಷ್ಟಕ್ಕೆ ಬಳಸಿಕೊಂಡಿದ್ದರೆ ಚೆನ್ನಾಗಿತ್ತು. ಆದರೆ, ಅವರು ಹಾಗೆ ಮಾಡಿಲ್ಲ.

    ಸದ್ಯ ಲಡಕಿ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ರಾಮ್ ಗೋಪಾಲ್ ವರ್ಮಾ, ತಾವು ಈ ಸಿನಿಮಾವನ್ನು ಬ್ರೂಸ್ಲಿ ಪ್ರೇರಣೆಯಿಂದ ಮಾಡಿದ್ದು, ನಾನು ಅವರಿಗೆ ಕಿಸ್ ಮಾಡುವ ಆಸೆ ಹೊಂದಿದ್ದೆ. ತುಂಬಾ ಸಲ ಅವರಿಗೆ ಕಿಸ್ ಮಾಡಬೇಕು ಅಂತ ಅನಿಸಿತ್ತು. ಹಾಗಂತ ನನ್ನನ್ನು ಸಲಿಂಗಿ ಕಾಮಿ ಅಂದುಕೊಳ್ಳಬೇಡಿ. ನಾನು ಸಲಂಗಿ ಅಲ್ಲ ಎಂದೂ ಹೇಳಿದ್ದಾರೆ. ಆದರೆ, ಫ್ಯಾನ್ಸ್ ಮಾತ್ರ ಸುಮ್ಮನಿಲ್ಲ. ನೀವು ಸಲಂಗಿಯೇ ಎಂದು ಜರಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಲಿಂಗಿಗಳ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೈರಲ್

    ಸಲಿಂಗಿಗಳ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೈರಲ್

    ತಿರುವನಂತಪುರಂ: ಇತ್ತೀಚೆಗೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಸಖತ್ ಟ್ರೆಂಡ್ ಆಗಿದ್ದು, ಮದುವೆಗೆ ಮುನ್ನ ಫೋಟೋಶೂಟ್ ಮಾಡಿಸಿಕೊಳ್ಳಲು ಅನೇಕ ಜೋಡಿಗಳು ಖುಷಿಪಡುತ್ತಾರೆ. ಹಾಗೆಯೇ ಇತ್ತೀಚೆಗೆ ಕೇರಳದ ಸಲಿಂಗಿ ಜೋಡಿಯೊಂದು ಮಾಡಿಸಿರುವ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಎಲ್ಲೆಡೆ ವೈರಲ್ ಆಗಿದೆ.

    ಕೇರಳ ಮೂಲದ ಸಲಿಂಗ ಜೋಡಿ ಅಬ್ದುಲ್ ರೆಹಿಮ್ ಮತ್ತು ನೆವಿದ್ ಆಂಟೋನಿ ಚುಲ್ಲಿಕಾಲ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಜೋಡಿ ನೀಡಿರುವ ರೊಮ್ಯಾಂಟಿಕ್ ಪೋಸ್‍ಗಳು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಎಲ್ಲರು ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನಮಗೂ ಎಲ್ಲರಂತೆ ಖುಷಿ ಖುಷಿಯಾಗಿ ಮದುವೆ ಆಗಬೇಕು ಎನ್ನುವ ಆಸೆ ಇದೆ. ಅದಕ್ಕೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡಿದ್ದೇವೆ ಎಂದು ಸಲಿಂಗಿಗಳು ಹೇಳಿದ್ದಾರೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ತಮ್ಮ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇವರ ಫೋಟೋಗಳನ್ನು ನೋಡಿ ನೆಟ್ಟಿಗರು ಕೂಡ ಖುಷಿಪಟ್ಟಿದ್ದು, ಜೋಡಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ಈ ಸಲಿಂಗ ಜೋಡಿ ತಮ್ಮ ಸಾಕು ನಾಯಿಗಳ ಜೊತೆ ಕೂಡ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಶೇಷ ಫೋಟೋಶೂಟ್‍ಗೆ ನೆಟ್ಟಿಗರು ಮನಸೋತಿದ್ದಾರೆ.

    ಕಳೆದ 5 ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದರಂತೆ. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು 377 ವಿಧಿಯನ್ನು ರದ್ದುಗೊಳಿಸಿದ ಬಳಿಕ ಇಬ್ಬರೂ ಮದುವೆಯಾಗಲು ಇಚ್ಛಿಸಿದ್ದಾರೆ. ಈ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಅಬ್ದುಲ್ ಮತ್ತು ನೆವಿದ್ ವಿವಾಹವಾಗುತ್ತಿದ್ದಾರೆ.

    ಈ ಸಲಿಂಗ ಜೋಡಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ, ಆದರೆ ಮದುವೆ ದಿನಾಂಕವನ್ನು ನಿಗದಿಗೊಳಿಸಿಲ್ಲ.

  • ಇದು ನನ್ನ ತಪ್ಪಲ್ಲ, ನಾನು ಸಲಿಂಗಕಾಮಿ-ಯುವಕ ಆತ್ಮಹತ್ಯೆ

    ಇದು ನನ್ನ ತಪ್ಪಲ್ಲ, ನಾನು ಸಲಿಂಗಕಾಮಿ-ಯುವಕ ಆತ್ಮಹತ್ಯೆ

    ಚೆನ್ನೈ: 19 ವರ್ಷದ ಯುವಕನೊಬ್ಬ ಸಲಿಂಗಕಾಮಿಯಾಗಿದ್ದು, ಇದರಿಂದ ಸಮಾಜಕ್ಕೆ ಭಯಗೊಂಡು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೀಲಂಕಾರೈ ಬೀಚ್ ನಲ್ಲಿ ನಡೆದಿದೆ.

    ಅವಿಂಶು ಪಾಟೀಲ್ ಮೃತ ಯುವಕ. ಈತ ಮೂಲತಃ ಮುಂಬೈ ನಗರದವನಾಗಿದ್ದು, ಕೆಲಸಕ್ಕೆಂದು ಮೂರು ತಿಂಗಳ ಹಿಂದೆ ಚೆನ್ನೈಗೆ ಬಂದಿದ್ದನು. ನಂತರ ಚೆನ್ನೈನ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದನು. ಜುಲೈ 2 ರಂದು ನೀಲಂಕಾರೈ ಬೀಚ್ ನಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು.

    ಈತ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಯಾರೂ ಜವಬ್ದಾರರಲ್ಲ ಎಂದು ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ಎರಡು ಪೋಸ್ಟ್ ಹಾಕಿದ್ದನು. ಮೊದಲಿಗೆ ಜುಲೈ 2 ರಂದು “ನಾನು ಹುಡುಗ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ನಾನು ನಡೆಯುವುದು, ಆಲೋಚನೆ ಮಾಡುವುದು ಮತ್ತು ಮಾತನಾಡುವುದು ಎಲ್ಲವೂ ಹುಡುಗಿಯರ ರೀತಿಯಾಗಿತ್ತು. ಇದನ್ನು ಭಾರತದ ಜನರು ಇಷ್ಟಪಡುವುದಿಲ್ಲ” ಎಂದು ಫೇಸ್‍ಬುಕ್‍ನಲ್ಲಿ ಹಿಂದಿಯಲ್ಲಿ ಬರೆದು ಪೋಸ್ಟ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಇಂಗ್ಲಿಷ್ ಪೋಸ್ಟ್ ನಲ್ಲಿ “ಸಲಿಂಗಕಾಮಿಗಳು ಮತ್ತು ತೃತೀಯ ಲಿಂಗಿಗಳಿಗೆ ಗೌರವ ನೀಡುವ ಇತರ ದೇಶಗಳ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಜೊತೆಗೆ ಸಲಿಂಗಕಾಮಿಗಳಿಗೆ ಸಹಾಯ ಮಾಡುವ ಭಾರತೀಯ ಜನರ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾನೆ. ದಯವಿಟ್ಟು ತನ್ನ ತಂದೆ-ತಾಯಿಯನ್ನು ದೂಷಿಸಬೇಡಿ, ಅವರಿಗೆ ಸಹಾಯ ಮಾಡಿ. ನಾನು ನನ್ನ ಕುಟುಂಬವನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನಾನು ಸಲಿಂಗಿಯಾಗಿ ಹುಟ್ಟಿದು ನನ್ನ ತಪ್ಪಲ್ಲ, ಇದು ದೇವರ ತಪ್ಪು ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾನೆ.

    ಸಮುದ್ರದಲ್ಲಿ ಮೃತದೇಹವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಈ ಕುರಿತು ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ ಸಲಿಂಗಕಾಮಿ

    ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ ಸಲಿಂಗಕಾಮಿ

    ಚೆನ್ನೈ: ಸಲಿಂಗಕಾಮಿಯೊಬ್ಬ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಇಬ್ಬರು ಪುರುಷರ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಆರೋಪಿಯನ್ನು ಮನಾಮಧುರೈನ ನಿವಾಸಿ ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇಬ್ಬರು ಪುರುಷರ ಜೊತೆ ಸೆಕ್ಸ್ ಮಾಡಲು ಯತ್ನಿಸಿದ್ದಾನೆ. ಇದಕ್ಕೆ ಇಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಇಬ್ಬರ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಈಗಾಗಲೇ ಮದುವೆಯಾಗಿದ್ದು, ಇಬ್ಬರ ಮಕ್ಕಳಿದ್ದಾರೆ. ಈತ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ವಿಡಿಯೋ ಪರಿಶೀಲನೆ ಮಾಡಿದಾಗ ಅದರಲ್ಲಿ ಆರೋಪಿ ಚೆನ್ನೈನ ರೆಟ್ಟೇರಿಯ ಫ್ಲೈಓವರ್ ಅಡಿಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಜೂನ್ 11 ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರೆಟ್ಟೇರಿಯ ಫ್ಲೈಓವರ್ ನಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಕಂಡು ಬಂದರು. ತಕ್ಷಣ ನಾವು ಆತನನ್ನು ಆಸ್ಪತ್ರೆಗೆ ದಾಖಲಿಸಿ ತನಿಖೆ ಶುರು ಮಾಡಿದೇವು. ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಇಬ್ಬರಿಗೂ ಒಂದೇ ಗಾಯವಾಗಿತ್ತು. ಆಗ ನಾವು ಈ ಕೃತ್ಯವನ್ನು ಆರೋಪಿಯೊಬ್ಬನೆ ಎಸಗಿದ್ದಾನೆ ಎಂದು ತಿಳಿದು ಬಂದಿತ್ತು. ಸದ್ಯಕ್ಕೆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿ ಇಬ್ಬರ ಮೇಲೆ ದಾಳಿ ಮಾಡಲು ಮದ್ಯ ಬಾಟಲಿ ಮತ್ತು ಬ್ಲೇಡ್ ಅನ್ನು ಉಪಯೋಗಿಸಿದ್ದಾನೆ ಎಂದು ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದೆ. ಆರೋಪಿ ರೆಟ್ಟೇರಿಯ ಫ್ಲೈಓವರ್ ನಲ್ಲಿ ಓಡಾಡುತ್ತಾ ಇಬ್ಬರನ್ನು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಆಮಿಷವೊಡ್ಡಿದ್ದಾನೆ. ಆದರೆ ಇಬ್ಬರು ವ್ಯಕ್ತಿಗಳು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡು ಅವರ ಮರ್ಮಾಂಗವನ್ನು ಕಟ್ ಮಾಡಿದ್ದಾನೆ. ಆರೋಪಿ ಆಗಾಗ ರೆಟ್ಟೇರಿ ಫ್ಲೈಓವರ್ ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

    ವಿಡಿಯೋ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನೇ ಈ ಕೃತ್ಯ ಎಸಗಿರುವುದು ಎಂದು ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ನಾನು ಸಲಿಂಗಕಾಮಿಯಲ್ಲ – ಆಸೀಸ್ ಆಟಗಾರ ಜೇಮ್ಸ್ ಫಾಲ್ಕ್‌ನರ್‌ ಸ್ಪಷ್ಟನೆ

    ನಾನು ಸಲಿಂಗಕಾಮಿಯಲ್ಲ – ಆಸೀಸ್ ಆಟಗಾರ ಜೇಮ್ಸ್ ಫಾಲ್ಕ್‌ನರ್‌ ಸ್ಪಷ್ಟನೆ

    ಸಿಡ್ನಿ: ಆಸ್ಟ್ರೇಲಿಯಾ ತಂಡದ ಖ್ಯಾತ ಕ್ರಿಕೆಟ್ ಆಟಗಾರರ ಜೇಮ್ಸ್ ಫಾಲ್ಕ್‌ನರ್‌ ತಾನೊಬ್ಬ ಸಲಿಂಗಕಾಮಿಯೆಂದು ಆರ್ಥೈಸುವಂತಹ ಟ್ವೀಟ್ ಮಾಡಿ ಮುಜುಗರಕ್ಕೆ ಒಳಗಾಗಿದ್ದು, ಬಳಿಕ ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಆಸೀಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಜೇಮ್ಸ್ ಫಾಲ್ಕ್‌ನರ್‌, ಸೋಮವಾರ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಾಯಿ ಹಾಗೂ ಗೆಳೆಯನೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ನನ್ನ ಬಾಯ್ ಫ್ರೆಂಡ್, ತಾಯಿಯೊಂದಿಗೆ ಹುಟ್ಟುಹಬ್ಬದ ಡಿನ್ನರ್ ಎಂದು ಫೋಟೋದ ಕೆಳಗೆ ಬರೆದುಕೊಂಡಿದ್ದರು.

    https://www.instagram.com/p/Bw1epixh7hN/?utm_source=ig_embed

    ಜೇಮ್ಸ್ ಫಾಲ್ಕ್‌ನರ್‌ ಪೋಸ್ಟ್ ಗೆ ಹಲವು ಕ್ರಿಕೆಟ್ ಆಟಗಾರರರು ಸೇರಿದಂತೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, ನೀವು ಸಲಿಂಗಕಾಮಿ ಎಂದು ಧೈರ್ಯವಾಗಿ ಹೇಳಿಕೊಂಡ ನಿಮ್ಮ ನಡೆಗೆ, ನಮ್ಮ ಬೆಂಬಲವಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಅಭಿಮಾನಿಗಳ ಈ ಪ್ರತಿಕ್ರಿಯೆಗೆ ಶಾಕ್ ಆದ ಜೇಮ್ಸ್ ಫಾಲ್ಕ್‌ನರ್‌ ಮತ್ತೊಂದು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಈ ಮೊದಲಿನ ಪೋಸ್ಟ್ ಬಗ್ಗೆ ತಪ್ಪು ತಿಳಿದುಕೊಳ್ಳಲಾಗಿದೆ. ನಾನು ಸಲಿಂಗಕಾಮಿ ಅಲ್ಲ. ಆದರೆ ಅಂತಹವರ ಬಗ್ಗೆ ನೀವು ನೀಡಿದ ಬೆಂಬಲ ನೋಡಿ ಹೆಮ್ಮೆ ಅನಿಸುತ್ತಿದೆ. ಪ್ರೀತಿ ಅಂದರೆ ಪ್ರೀತಿ ಅಷ್ಟೇ. ಅಂದಹಾಗೆ ಆತ ನನ್ನ ಗೆಳೆಯ ಮಾತ್ರ. ತುಂಬಾ ಸಮಯದ ಬಳಿಕ ಮನೆಯಲ್ಲಿ ಆತನೊಂದಿಗೆ ಭೇಟಿ ಮಾಡಿದ್ದ ಕಾರಣ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

    https://www.instagram.com/p/Bw2-aefB63J/?utm_source=ig_embed

    ಇತ್ತೀಚೆಗೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗ ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಜೇಮ್ಸ್ ಫಾಲ್ಕ್‌ನರ್‌ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿತ್ತು. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸ್ಟಿವನ್ ಡೇವಿಸ್ ತಾವು ಸಲಿಂಗಕಾಮಿ ಎಂಬುದನ್ನು ಬಹಿರಂಗ ಪಡಿಸಿದ್ದರು.