Tag: Gavi Siddheshwar Swamiji

  • ಗವಿ ಸಿದ್ದೇಶ್ವರ ಸ್ವಾಮೀಜಿ ತೋಳಲ್ಲಿ ಪುಟ್ಟ ಕಂದಮ್ಮ – ವಿಡಿಯೋ ವೈರಲ್

    ಗವಿ ಸಿದ್ದೇಶ್ವರ ಸ್ವಾಮೀಜಿ ತೋಳಲ್ಲಿ ಪುಟ್ಟ ಕಂದಮ್ಮ – ವಿಡಿಯೋ ವೈರಲ್

    ಕೊಪ್ಪಳ: ಗವಿ ಮಠದ ಅಭಿನವ ಗವಿ ಸಿದ್ದೇಶ್ವರ ಮಾಹಾಸ್ವಾಮಿಗಳು ಮಗುವೊಂದನ್ನು ಎತ್ತಿಕೊಂಡು ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಕಾರ್ಯಕ್ರಮವೊಂದರಲ್ಲಿ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು ಪುಟ್ಟ ಕಂದಮ್ಮನೊಂದಿಗೆ ಕಾಲ ಕಳೆದಿದ್ದಾರೆ. ಕಂದಮ್ಮನನ್ನು ಎತ್ತಿಕೊಂಡು ಓಡಾಡುತ್ತಾ ಸ್ವಾಮೀಜಿ ಕಾಲ ಕಳೆದಿದ್ದಾರೆ. ಎಲ್ಲವನ್ನೂ ಮರೆತು ಸ್ವಾಮೀಜಿಗಳು ಪುಟ್ಟ ಕಂದಮ್ಮನೊಂದಿಗೆ ಕಾಲ ಕಳೆದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

    ವಿಡಿಯೋದಲ್ಲಿ ಸ್ವಾಮೀಜಿಗಳು ಕಂದಮ್ಮನನ್ನು ಎತ್ತಿಕೊಂಡು ವಿದ್ಯಾರ್ಥಿಗಳು ಊಟ ಮಾಡುತ್ತಿದ್ದ ಸ್ಥಳಕ್ಕೆ ಬಂದು ಕೆಲ ಕಾಲ ನಿಂತು, ವಿದ್ಯಾರ್ಥಿಗಳನ್ನು ಮಾತನಾಡಿಸಿಕೊಂಡು ತೆರಳಿದ ದೃಶ್ಯ ಸೆರೆಯಾಗಿದೆ. ಸ್ವಾಮೀಜಿ ಅವರ ಸರಳತನಕ್ಕೆ ಎಲ್ಲರೂ ಮನಸೋತಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.