Tag: Gavi Mutt

  • ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ

    ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ

    ಕೊಪ್ಪಳ: ಇಲ್ಲಿನ ಗವಿ ಮಠ (Gavi Math) ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಮುಸ್ಲಿಂ ಮಹಿಳೆಯೊಬ್ಬರು (Muslim Woman) ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತು ಗಮನಸೆಳೆದಿದ್ದಾರೆ.

    ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ನಾಗ ದೇವರ ಮುಂದೆ ಧ್ಯಾನಕ್ಕೆ ಕುಳಿತ ಮಹಿಳೆ. ಹಸೀನಾ ಬೇಗಂ ಕಳೆದ ಎಂಟು ದಿನಗಳಿಂದ ಗವಿ ಮಠಕ್ಕೆ ಬಂದು ದ್ಯಾನ ಮಾಡುತ್ತಿದ್ದಾರೆ. ಗವಿ ಮಠದಲ್ಲಿ ನಿರಂತರ ಒಂದು ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿದ್ದಾರೆ. 90%ನಷ್ಟು ಹಿಂದೂ ಧರ್ಮದವರು ಗವಿ ಮಠಕ್ಕೆ ಬರುತ್ತಾರೆ. ಆದರೆ ಆವರಣದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಅಂಗಡಿ ಬಳಿ ಕುಳಿತವನ ಮೇಲೆ ಡೆಡ್ಲಿ ಅಟ್ಯಾಕ್ – ಚಿಕಿತ್ಸೆ ಫಲಿಸದೇ ಯುವಕ ಸಾವು

    ಹಸೀನಾ ಬೇಗಂ ಮಾನಸಿಕ ನೆಮ್ಮದಿಗಾಗಿ ಇಲ್ಲಿ ಧ್ಯಾನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಗವಿ ಮಠದ ಶ್ರೀಗಳು ನಿತ್ಯ ಸಂಜೆ ಸಮಯದಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೆ ಹಸೀನಾ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಒಟ್ಟು 11 ಧ್ಯಾನ ಮಾಡೋದಾಗಿ ಬೇಡಿಕೊಂಡಿರೋ ಹಸಿನಾ ಬೇಗಂ, ನಾಗದೇವರ ಮುಂದೆ ನಿತ್ಯ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಸೀನಾ ಬೇಗಂ, ನನ್ನ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಇಲ್ಲಿ ಧ್ಯಾನಕ್ಕೆ ಕೂರುತ್ತೇನೆ ಎಂದು ಗವಿಮಠದ ಶ್ರೀಗಳನ್ನು ಕೇಳಿದ್ದೆ. ನಿನ್ನ ಮನಸ್ಸಿಗೆ ನೆಮ್ಮದಿ ಸಿಗುವುದಾದರೆ ಕೂರು ಎಂದು ಹೇಳಿದ್ದರು. ನಾನು 2013ರಿಂದ ಮಠಕ್ಕೆ ಬರುತ್ತಿದ್ದೇನೆ. ನನಗೆ ಸಮಯ ಸಿಕ್ಕಾಗೆಲ್ಲ ಇಲ್ಲಿಗೆ ಬಂದು 10 ನಿಮಿಷ ಕುಳಿತುಕೊಂಡು ಹೋಗುತ್ತೇನೆ. ನನಗೆ ಕಷ್ಟ ಇತ್ತು, ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಎಂಟು ದಿನಗಳ ಹಿಂದೆ ನನಗೆ ನಿಲ್ಲಲು ಆಗುತ್ತಿರಲಿಲ್ಲ. ನಾನು ಇಲ್ಲಿಗೆ ಬಂದ ವೇಳೆ ಜೋರು ಮಳೆ ಬರುತ್ತಿತ್ತು. ಆ ಮಳೆಯಲ್ಲೇ ಧ್ಯಾನಕ್ಕೆ ಕುಳಿತುಕೊಂಡೆ. ಇವತ್ತು ನನ್ನ ಮನಸ್ಸಿಗೆ ನೆಮ್ಮದಿ ಅನಿಸಿದೆ. ಹಿಂದೂ-ಮುಸ್ಲಿಂ ಅನ್ನೋದು ನನ್ನಲಿಲ್ಲ. ಇದು ನಮ್ಮ ಮಠ. ನನಗೆ ಬಹಳ ನೋವಾಗಿತ್ತು. ಶ್ರೀಗಳು ಕೂರುವ ಜಾಗದ ಎದುರಿನ ಜಾಗ ನನಗೆ ಬಹಳ ಇಷ್ಟ ಆಯಿತು. ಅದಕ್ಕೆ ಅಲ್ಲೇ ಧ್ಯಾನಕ್ಕೆ ಕುಳಿತೆ. ಪ್ರತಿನಿತ್ಯ ಒಂದು ಗಂಟೆ ಧ್ಯಾನಕ್ಕೆ ಕುಳಿತುಕೊಳ್ಳುತ್ತೇನೆ. ಸೋಮವಾರದ ತನಕ ಧ್ಯಾನ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ: ನಿಖಿಲ್‌ ಕುಮಾರಸ್ವಾಮಿ ಸ್ಕ್ಯಾನರ್‌ನಲ್ಲಿರೋ ಫೋಟೊ ಯಾರದ್ದು?

  • ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್

    ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್

    ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಇಂದು (ಜು.೨೩) ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದರು.ಇದನ್ನೂ ಓದಿ: ಸಣ್ಣ ವರ್ತಕರಿಗೆ ರಿಲೀಫ್‌ | ತೆರಿಗೆ ವಸೂಲಿ ಮಾಡಲ್ಲ: ಸಿದ್ದರಾಮಯ್ಯ ಘೋಷಣೆ

    ಬುಧವಾರ ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಬೆಂಬಲಿಗರೊಂದಿಗೆ ಗವಿಮಠಕ್ಕೆ ಭೇಟಿ ನೀಡಿದರು. ಇದಕ್ಕೂ ಮುನ್ನ ನಾಲ್ಕು ತಿಂಗಳ ಹಿಂದೆಯೂ ಕೂಡ ಯತ್ನಾಳ್ ಅವರು ಗವಿಮಠಕ್ಕೆ ಭೇಟಿ ನೀಡಿದ್ದರು.

    ಇದೀಗ ಮತ್ತೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.ಇದನ್ನೂ ಓದಿ: ಕಲಬುರಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ ಮೃತದೇಹ ಪತ್ತೆ

  • ವಿಜಯೇಂದ್ರನ ಚಮಚಾಗಳಿದ್ರೆ ಪ್ರಶ್ನೆ ಕೇಳ್ಬೇಡಿ – ಮಾಧ್ಯಮಗಳ ಮುಂದೆ ಸಿಡಿಮಿಡಿಗೊಂಡ ಯತ್ನಾಳ್

    ವಿಜಯೇಂದ್ರನ ಚಮಚಾಗಳಿದ್ರೆ ಪ್ರಶ್ನೆ ಕೇಳ್ಬೇಡಿ – ಮಾಧ್ಯಮಗಳ ಮುಂದೆ ಸಿಡಿಮಿಡಿಗೊಂಡ ಯತ್ನಾಳ್

    – ಯಾವ ಜನ್ಮದಲ್ಲೂ ಕಾಂಗ್ರೆಸ್‌ಗೆ ಹೋಗಲ್ಲ, ಅದು ಮುಸ್ಲಿಮರ ಪಕ್ಷ: ಯತ್ನಾಳ್

    ಕೊಪ್ಪಳ: ಯಾವ ಜನ್ಮದಲ್ಲಿಯೂ ಕಾಂಗ್ರೆಸ್‌ಗೆ (Congress) ಹೋಗಲ್ಲ, ಅದು ಮುಸ್ಲಿಮರ ಪಕ್ಷ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

    ಗೋಶಾಲೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲು ಕೊಪ್ಪಳದ (Koppal) ಗವಿಮಠಕ್ಕೆ (Gavi Mutt)ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಯಾವ ಜನ್ಮದಲ್ಲಿಯೂ ಹೋಗಲ್ಲ, ಅದು ಮುಸ್ಲಿಮರ ಪಕ್ಷ. ವಿಜಯೇಂದ್ರನ ಟೀಂನವರದ್ದು ನಕಲಿ ಸಾಮಾಜಿಕ ಜಾಲತಾಣವಿದೆ. ಅದರಲ್ಲಿ ಈ ರೀತಿ ಅಪಪ್ರಚಾರ ಮಾಡ್ತಾ ಇದ್ದಾರೆ. ಬಿಜೆಪಿಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದವರಿದ್ದಾರೆ. ಕೊರೊನಾ ಸಮಯದಲ್ಲಿ ಎಷ್ಟೆಷ್ಟೋ ಬಿಲ್ ಹಾಕಿದ್ದರು ಎಂದರು.ಇದನ್ನೂ ಓದಿ:ಟಾಲಿವುಡ್ ನೆಪೋಟಿಸಂ ಬಗ್ಗೆ ಮಾತನಾಡಿದ ‘ಲಕ್ಕಿ ಭಾಸ್ಕರ್‌’ ನಿರ್ಮಾಪಕ ನಾಗ ವಂಶಿ

    ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ನಿಮ್ಮ ಜೊತೆ ಇರುತ್ತಾರಾ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ನಿಮಗೆ ವಿಜಯೇಂದ್ರ ಏನಾದರೂ ಈ ರೀತಿ ಪ್ರಶ್ನೆ ಕೇಳುವಂತೆ ಕಳಿಸಿದ್ದಾನಾ? ಪದೇ ಪದೇ ಅದೇ ಕೇಳುತ್ತೀರಾ? ಮಾಧ್ಯಮದವರು ಪಾರದರ್ಶಕರಾಗೀರಿ, ವಿಜಯೇಂದ್ರ ವಾಟಾಪ್ಸ್ನಲ್ಲಿ ಕಳುಹಿಸಿದ್ದನ್ನು ನನಗೆ ಕೇಳಬೇಡಿ. ವಿಜಯೇಂದ್ರನ ಚಮಚಾಗಳಿದ್ದರೆ ನನಗೆ ಪ್ರಶ್ನೆ ಕೇಳಬೇಡಿ ಗೆಟ್ ಔಟ್, ಸುಮ್ಮನೇ ಸರಳ ಪ್ರಶ್ನೆ ಕೇಳಿ, ವಿಜಯೇಂದ್ರ ಕಡೆ ದುಡ್ಡು ತೆಗೆದುಕೊಂಡು ನನಗೆ ಪ್ರಶ್ನೆ ಕೇಳುವ ಹಾಗಿದ್ರೆ, ನನ್ನ ಪ್ರೆಸ್ ಮೀಟ್‌ಗಳಿಗೆ ಬರಬೇಡಿ ಎಂದು ಗರಂ ಆದರು.

    ಯಡಿಯೂರಪ್ಪ ಹಾಗೂ ಅವನ ಮಗನದ್ದು ಸಾಕಷ್ಟು ಹಗರಣ ಇದೆ, ಅವರು ಹಣ ಕೊಟ್ಟು ಕೆಲವರನ್ನ ಖರೀದಿ ಮಾಡಿರಬಹುದು. ನಾನು ಇಡಿ ರಾಜ್ಯ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದರು. ಇನ್ನೂ ಕಾಂಗ್ರೆಸ್ ಮಹಾನಾಯಕ ಮತ್ತು ಬಿಜೆಪಿಯ ಮಹಾಕಳ್ಳರು ಸೇರಿ ರಾಜಣ್ಣನ ಹನಿಟ್ರ‍್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ:ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

  • ಗವಿಶ್ರೀಗಳಿಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್

    ಗವಿಶ್ರೀಗಳಿಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್

    ಕೊಪ್ಪಳ: ನಟ ಡಾಲಿ ಧನಂಜಯ್ (Daali Dhananjay) ಇಂದು (ಜ.28) ಕೊಪ್ಪಳ (Koppal) ಸಂಸ್ಥಾನದ ಗವಿಮಠಕ್ಕೆ ಆಗಮಿಸಿ, ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಭೇಟಿ ಮಾಡಿ, ಮದುವೆಗೆ ಆಹ್ವಾನಿಸಿದ್ದಾರೆ.

    ಗವಿಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ಡಾಲಿ ಆಮಂತ್ರಣ ಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದರು. ನಂತರ ಕೆಲ ಹೊತ್ತು ಗವಿಶ್ರೀ ಡಾಲಿ ಧನಂಜಯ್ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಈ ವೇಳೆ ಶ್ರೀಗಳು ಮಠದ ಪರಂಪರೆ, ಇತಿಹಾಸ, ರಥೋತ್ಸವ, ಜಾತ್ರೋತ್ಸವದ ಬಗ್ಗೆ ಮಾಹಿತಿ ನೀಡಿದರು.ಇದನ್ನೂ ಓದಿ: ಹಾಡಹಗಲೇ ಶೂಟೌಟ್ – ಓರ್ವನ ಬರ್ಬರ ಹತ್ಯೆ, ಹಳೇ ದ್ವೇಷಕ್ಕೆ ಹರಿಯಿತಾ ನೆತ್ತರು?

    ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಶ್ರೀಮಠದಿಂದ ಡಾಲಿ ಧನಂಜಯ್‌ಗೆ ಗವಿಸಿದ್ದೇಶ್ವರರ ಕರ್ತೃ ಗದ್ದುಗೆಯ ಫೋಟೋ ನೀಡಿ, ಸನ್ಮಾನಿಸುವ ಮೂಲಕ ಆಶೀರ್ವದಿಸಿದರು. ನಂತರ ಗವಿಮಠ ಮೈದಾನದಲ್ಲಿನ ಮಹಾದಾಸೋಹ ಭವನದಲ್ಲಿ ಡಾಲಿ ಪ್ರಸಾದ ಸ್ವೀಕರಿಸಿದರು.

    ಫೆ.15ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಫೆ.16ರಂದು ಡಾಲಿ-ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.ಇದನ್ನೂ ಓದಿ:AI ರಂಗದಲ್ಲಿ ಡೀಪ್‌ಸೀಕ್ ಸಂಚಲನ – ಅಮೆರಿಕ ಷೇರುಪೇಟೆ ಶೇಕ್!