Tag: Gavi Gangadhareshwara Temple

  • ಗ್ರಹಣದಿಂದ ಜಲಕಂಟಕ, ರಾಜಕೀಯ ಎಫೆಕ್ಟ್‌ ಆಗಲಿದೆ: ಅರ್ಚಕ ಸೋಮಸುಂದರ್‌ ದೀಕ್ಷಿತ್‌

    ಗ್ರಹಣದಿಂದ ಜಲಕಂಟಕ, ರಾಜಕೀಯ ಎಫೆಕ್ಟ್‌ ಆಗಲಿದೆ: ಅರ್ಚಕ ಸೋಮಸುಂದರ್‌ ದೀಕ್ಷಿತ್‌

    ಬೆಂಗಳೂರು: ಗ್ರಹಣದಿಂದಾಗಿ ಜಲಕಂಟಕ, ರಾಜಕೀಯವಾಗಿ ಸಾಕಷ್ಟು ಪರಿಣಾಮಗಳು ಬೀರಲಿವೆ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್‌ ದೀಕ್ಷಿತ್‌ (Somasundar Dixit) ಹೇಳಿದ್ದಾರೆ.

    ಚಂದ್ರಗ್ರಹಣದ (Chandra Grahan) ಪರಿಣಾಮಗಳ ಕುರಿತು ಮಾತನಾಡಿದ ಅವರು, ಚಂದ್ರಗ್ರಹಣ ಸಂಪೂರ್ಣ ವಿಶೇಷ. ಇದು ರಕ್ತ ಚಂದ್ರಗ್ರಹಣವಲ್ಲ, ತಾಮ್ರ ಚಂದ್ರಗ್ರಹಣ. ಭಾದ್ರಪದ ಮಾಸದ ಪೌರ್ಣಮೆಯ ಚಂದ್ರಗ್ರಹಣ ವಿಶೇಷವಾಗಿದೆ. ಗ್ರಹಣ ಹಿನ್ನೆಲೆ ಇಂದು ಶಿವನಿಗೆ ಕ್ಷೀರ ನೈವೇದ್ಯ ಅರ್ಪಿಸಲಾಗುತ್ತದೆ. ಮಹಾಮಂಗಳಾರತಿ ಬಳಿಕ ದೇವಸ್ಥಾನ ದರ್ಬಾ ಬಂಧನದಿಂದ ಕ್ಲೋಸ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್

    ಗ್ರಹಣದಿಂದ ವಿಮುಕ್ತಿ ಬಳಿಕ ಶಿವನಿಗೆ ವಿಶೇಷ ಅಭಿಷೇಕ, ಪೂಜೆ ಇರುತ್ತದೆ. ಈ ವರ್ಷದ ಚಂದ್ರಗ್ರಹಣ ಕುಂಭ ರಾಶಿ ಮೇಲೆ ಪರಿಣಾಮ ಬೀರಲಿದೆ. ಈ ಬಾರಿ ಜಲಕಂಟಕ ಇದೆ, ರಾಜಕೀಯವಾಗಿ ಎಫೆಕ್ಟ್ ಆಗಲಿದೆ. ಗ್ರಹಣದಿಂದ ಮತ್ತಷ್ಟು ಜಲಕಂಟಕ ಹೆಚ್ಚಾಗುವ ಸಂಭವ ಇದೆ. ನದಿಗಳು, ಕೆರೆಗಳು ಉಕ್ಕಿ ಹರಿದು ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಗವಿಗಂಗಾಧರೇಶ್ವರನಿಗೆ ಪಂಚಾಮೃತ ಪೂಜೆ, ಕ್ಷೀರಾಭಿಷೇಕ ಆರಂಭವಾಗಿದೆ. ಹಾಲು, ಮೊಸರು, ಹೂವಿನ ಅಭಿಷೇಕ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕ್ಷೀರ ನೈವೇದ್ಯ ಸಮರ್ಪಣೆ ಆಗಿದೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಗ್ರಹಣ; ಮಧ್ಯಾಹ್ನವೇ ದೇವಾಲಯಗಳು ಬಂದ್ – ವಿಶೇಷ ಪೂಜೆ, ಪುನಸ್ಕಾರ

  • ಚಂದ್ರಗ್ರಹಣ: ಗವಿಗಂಗಾಧರ ದೇವಾಲಯ ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದ್

    ಚಂದ್ರಗ್ರಹಣ: ಗವಿಗಂಗಾಧರ ದೇವಾಲಯ ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದ್

    – ಬೆಂಗ್ಳೂರಿನ ಬಹುತೇಕ ದೇವಸ್ಥಾನಗಳ ದರ್ಶನ ಸಮಯದಲ್ಲಿ ಬದಲಾವಣೆ

    ಬೆಂಗಳೂರು: ಇದೇ ಭಾನುವಾರ (ಸೆ.7) ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ನಗರದ ಗವಿಗಂಗಾಧರ ದೇವಾಲಯ (Gavi Gangadhareshwara Temple) ಬೆಳಗ್ಗೆ 11 ಗಂಟೆಗೆ ಬಂದ್ ಆಗಲಿದೆ.

    ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್‌ ಅವರು ಮಾತನಾಡಿ, ಸೂರ್ಯಗ್ರಹಣವಾದರೆ ಗ್ರಹಣಕ್ಕೂ ಸ್ವಲ್ಪ ಹೊತ್ತಿನ ಮೊದಲು ದೇವಸ್ಥಾನ ಬಂದ್ ಮಾಡುತ್ತಿದ್ದೆವು. ಆದರೆ ಚಂದ್ರಗ್ರಹಣದಲ್ಲಿ ಹಾಗೇ ಮಾಡಲು ಬರುವುದಿಲ್ಲ. ಗ್ರಹಣಕ್ಕೂ ಮೊದಲು ಸುಮಾರು 6 ಗಂಟೆ ದೇವಾಲಯ ಬಂದ್ ಮಾಡಬೇಕಾಗುತ್ತದೆ. ಹೀಗಾಗಿ ಬೆಳಗ್ಗೆ ಗಂಗಾಧರನಿಗೆ ಕ್ಷೀರ ನೈವೇದ್ಯ ನೀಡುತ್ತೇವೆ. ಕ್ಷೀರ ಬಿಟ್ಟು ಬೇರೆ ಪ್ರಸಾದ ನೀಡಲ್ಲ. ಬೆಳಗ್ಗೆ 11 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಬಳಿಕ ಬಾಗಿಲು ಬಂದ್ ಮಾಡಲಾಗುತ್ತದೆ. ಗ್ರಹಣ ಮೋಕ್ಷಗೊಂಡ ಕೂಡಲೇ ಶುದ್ಧೀಕರಣ ಮಾಡಲು ಆಗಲ್ಲ, ಮರುದಿನ ಬೆಳಗ್ಗೆ ಶುದ್ಧೀಕರಣ ಮಾಡಿದ ಬಳಿಕ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಸೆಪ್ಟೆಂಬರ್ 7, 8 ರಂದು ಸಂಭವಿಸಲಿದೆ ಚಂದ್ರಗ್ರಹಣ

    ಇನ್ನೂ ರಕ್ತಚಂದ್ರಗ್ರಹಣ ಹಿನ್ನೆಲೆ ನಗರದ ಬಹುತೇಕ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆಯಾಗಲಿದೆ. ಯಾವ ದೇವಸ್ಥಾನ, ದರ್ಶನ ಸಮಯ ಯಾವಾಗ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

    ಬನಶಂಕರಿ ದೇವಾಲಯ:
    ಬನಶಂಕರಿ ದೇವಿ ಜನ್ಮೋತ್ಸವದ ದಿನವೇ ರಕ್ತಚಂದ್ರಗ್ರಹಣ ಸಂಭವಿಸುತ್ತಿದೆ. ಗ್ರಹಣದ ದಿನ ಬೆಳಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ ನಡೆಯುತ್ತದೆ. ಜೊತೆಗೆ ದೇವಿಯ ಜನ್ಮೋತ್ಸವವಿರುವುದರಿಂದ ಚಂಡಿಕಾ ಹೋಮ ನಡೆಸಲಾಗುತ್ತದೆ. ಸಂಜೆ 4 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದ್ದು, ಬಳಿಕ 4:30ಕ್ಕೆ ದೇವಾಲಯ ಬಂದ್ ಮಾಡಲಾಗುತ್ತದೆ. ಮರುದಿನ ಬೆಳಗ್ಗೆ 6 ಗಂಟೆಗೆ ದೇವಾಲಯ ಹಾಗೂ ಆವರಣ ಶುದ್ಧೀಕರಣ ಮಾಡಲಾಗುತ್ತದೆ. ನಂತರ ಪೂಜೆ ಮಾಡಿ, ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ.

    ಗಾಳಿ ಆಂಜನೇಯ ದೇವಸ್ಥಾನ:
    ಗ್ರಹಣದ ದಿನ ಮಧ್ಯಾಹ್ನ 3 ಗಂಟೆಗೆ ದೇವಾಲಯವನ್ನು ಬಂದ್ ಮಾಡಲಾಗುತ್ತದೆ. ಹೀಗಾಗಿ 2:30ರ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. 2:30ರಿಂದ 3ಗಂಟೆವರೆಗೆ ದೇವಾಲಯದ ಒಳಗೆ ದರ್ಬೆ ಇಡಲಾಗುತ್ತದೆ. ಗ್ರಹಣ ಮುಗಿದ ಬಳಿಕ ಬೆಳಗ್ಗೆ ಶಾಂತಿ ಪೂಜೆ ಮಾಡಿ, ಎಂದಿನಂತೆ ಭಕ್ತರಿಗೆ ದರ್ಶನ ವ್ಯವಸ್ಥೆ ಇರುತ್ತದೆ.

    ಕಾಡು ಮಲ್ಲೇಶ್ವರ ದೇವಾಲಯ:
    ಗ್ರಹಣದ ದಿನ ಬೆಳಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಮಧ್ಯಾಹ್ನ 2:30ವರೆಗೆ ಮಾತ್ರ ಭಕ್ತರಿಗೆ ದರ್ಶನ ವ್ಯವಸ್ಥೆ ಇರುತ್ತದೆ. ಗ್ರಹಣದ ಸಮಯದಲ್ಲಿ ಎಲ್ಲಾ ದೇವರುಗಳ ಮೇಲೆ ದರ್ಬೆ ಇಡಲಾಗುತ್ತದೆ. ಗ್ರಹಣ ಮುಗಿದ ಮರುದಿನ ಬೆಳಿಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಶುದ್ಧೀಕರಣ ಮಾಡಿ, ನಂತರ ಗ್ರಹಣ ಶಾಂತಿಗಾಗಿ ರುದ್ರ ಹೋಮ, ಪ್ರಸಾದ ಸೇವೆ ಇರಲಿದೆ. ನಂತರ ದರ್ಶನಕ್ಕೆ ಅವಕಾಶವಿರುತ್ತದೆ.ಇದನ್ನೂ ಓದಿ: ರಾಜಸ್ಥಾನ, ಗುಜರಾತ್‌ ಸೇರಿ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

  • ಗವಿಗಂಗಾಧರನಿಗೆ ಸೂರ್ಯ ಪೂಜೆ ಆಗಿದೆ: ಸೋಮಸುಂದರ್ ದೀಕ್ಷಿತ್

    ಗವಿಗಂಗಾಧರನಿಗೆ ಸೂರ್ಯ ಪೂಜೆ ಆಗಿದೆ: ಸೋಮಸುಂದರ್ ದೀಕ್ಷಿತ್

    • ನಾಳೆ ಶಾಂತಿ ಹೋಮ

    ಬೆಂಗಳೂರು: ಗವಿಗಂಗಾಧರನಿಗೆ (Gavi Gangadhareshwara Temple) ಸೂರ್ಯ ಪೂಜೆ ಆಗಿದೆ. ಮೋಡವಾಗಿದ್ದರಿಂದ ಸೂರ್ಯ ಪೂಜೆ ನೋಡಲು ಆಗಿಲ್ಲ ಎಂದು ಗವಿಗಂಗಾಧರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

    ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿಲ್ಲ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ವೇಳೆ, ಓಂಕಾರ ತತ್ವದಲ್ಲಿ ಬಹಳ ವಿಶೇಷವಿದೆ. ಉತ್ತರಾಯಣ ಪ್ರವೇಶಿಸೋ ಸೂರ್ಯ, ಭಗವಂತನನ್ನ ಸ್ಪರ್ಶಿಸುತ್ತಾನೆ. ಖಂಡಿತವಾಗಿಯೂ ಸೂರ್ಯ ಬಂದು ಪೂಜೆ ಆಗಿದೆ. ಎಷ್ಟು ಹೊತ್ತು ನಿಂತಿದ್ದ ಎಂದು ಹೇಳಲು ಆಗಲ್ಲ ಎಂದಿದ್ದಾರೆ.

    ಈ ವರ್ಷದ ಭವಿಷ್ಯ ಹೇಳಲು ಆಗಲ್ಲ. ಮಧ್ಯಾಹ್ನ 2 ಗಂಟೆವರೆಗೂ ಬೆಳಕಿತ್ತು. ಜಲದ ತೊಂದರೆಗಳು, ಸಂಕಷ್ಟಗಳು ಆಗುತ್ತವೆ. ಜನರಿಗೆ ಯಾವ ರೀತಿಯ ತೊಂದರೆ ಆಗಲ್ಲ. ಸ್ಪರ್ಶಿಸದೇ ಇದ್ದಿದ್ದಕ್ಕೆ ನಾಳೆ ಶಾಂತಿ ಮಾಡುತ್ತೇವೆ ಎಂದಿದ್ದಾರೆ.

  • ಗವಿಗಂಗಾಧರೇಶ್ವರನ ಸೂರ್ಯಾಭಿಷೇಕಕ್ಕೆ ಅಡ್ಡಿಯಾದ ಮೋಡ

    ಗವಿಗಂಗಾಧರೇಶ್ವರನ ಸೂರ್ಯಾಭಿಷೇಕಕ್ಕೆ ಅಡ್ಡಿಯಾದ ಮೋಡ

    ಬೆಂಗಳೂರು: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ (Makar Sankranti) ದಿನವಾದ ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ (Gavi Gangadhareshwara Temple) ವಿಶೇಷ ವಿಸ್ಮಯಕ್ಕೆ ಮೋಡ ಅಡ್ಡಿ ಪಡಿಸಿದ್ದಾನೆ

    ಸಂಜೆ 5:14 ರಿಂದ 5:17ರ ವರೆಗೆ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. ಆದರೆ ಮೋಡ ಕವಿದ ವಾತಾವರಣದಿಂದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಸಾಧ್ಯವಾಗಲಿಲ್ಲ.

    ಮೊದಲು ದೇವರ ಅಭಿಷೇಕಕ್ಕೆ ಪೂರ್ಣಕುಂಭ ಕಳಸದೊಂದಿಗೆ ದೇವಸ್ಥಾನಕ್ಕೆ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಆಗಮಿಸಿದರು. ಈ ವೇಳೆ ಗವಿಗಂಗಾಧರೇಶ್ವರನಿಗೆ ಪೂರ್ಣಕುಂಭ ಅಭಿಷೇಕ ಮಾಡಲಾಯಿತು.

    ದೇವಸ್ಥಾನದಲ್ಲಿ ಬೆಳಗ್ಗೆ 5:30 ರಿಂದ ವಿಶೇಷಪೂಜೆ, ಅಲಂಕಾರದ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಧ್ಯಾಹ್ನ 12:30 ಕ್ಕೆ ಗವಿಗಂಗಾಧರೇಶ್ವರ ದೇವಾಲಯ ಬಂದ್ ಮಾಡಲಾಗಿತ್ತು. ಮಧ್ಯಾಹ್ನ 12:30 ರಿಂದ ಸಂಜೆ 4ರ ವರೆಗೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಸೂರ್ಯ ರಶ್ಮಿ ಸ್ಪರ್ಶ ಕಣ್ತುಂಬಿಕೊಳ್ಳಲು ದೇವಾಲಯದ ಹೊರಗೆ ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು.

    ಸೂರ್ಯ ರಶ್ಮಿ ಸ್ಪರ್ಶವಾಗದ ಹಿನ್ನೆಲೆ, ಭಕ್ತರ ಆತಂಕ ದೂರ ಮಾಡಲು ದೇವಾಲಯದಲ್ಲಿ ಶಾಂತಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.

  • ಇಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ಸನ್ನಿಧಿ – ಶಿವಲಿಂಗದ ಮೇಲೆ ಬೀಳಲಿದೆ ಸೂರ್ಯ ರಶ್ಮಿ

    ಇಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ಸನ್ನಿಧಿ – ಶಿವಲಿಂಗದ ಮೇಲೆ ಬೀಳಲಿದೆ ಸೂರ್ಯ ರಶ್ಮಿ

    ಬೆಂಗಳೂರು: ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲದಲ್ಲಿ ಅದ್ಭುತ ಕ್ಷಣಕ್ಕೆ ಇಂದು ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರನ (Gavi Gangadhareshwara Temple) ಸನ್ನಿಧಿ ಸಾಕ್ಷಿಯಾಗಲಿದೆ. ಗಂಗಾಧರನಿಗೆ ಭಾಸ್ಕರ ನಮಿಸುವ ಸೂರ್ಯರಶ್ಮಿಯ ವಿಸ್ಮಯದ ಕ್ಷಣ ಇಂದು ನಡೆಯಲಿದೆ

    ಇಂದು ಮಕರ ಸಂಕ್ರಾಂತಿ ಸಂಭ್ರಮ. ಗವಿಗಂಗಾಧರ ದೇಗುಲದಲ್ಲಿ ವರ್ಷಕ್ಕೊಮ್ಮೆ ಸಂಭವಿಸು ಕೌತುಕ ವಿಸ್ಮಯ ನಡೆಯಲಿದೆ. ಪಥವನ್ನು ಬದಲಾಯಿಸುವ ಸೂರ್ಯದೇವ ಇಂದು ಪರಮೇಶ್ವರನ ದರ್ಶನ ಮಾಡಿ ಉತ್ತರಾಯಣ ಪ್ರವೇಶ ಮಾಡುತ್ತಾನೆ. ಈ ವೇಳೆ ಸಂಜೆ ದೇಗುಲದ ಬಲಭಾಗದಲ್ಲಿರುವ ಕಿಂಡಿಯ ಮೂಲಕ ಪ್ರವೇಶಿಸುವ ಸೂರ್ಯ ರಶ್ಮಿ ಬಳಿಕ ನಂದಿಯ ಕೊಂಬುಗಳ ಮೂಲಕ ಹಾದು ಗವಿಯೊಳಗಿರುವ ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಭಾಸ್ಕರ ವಿಸ್ಮಯ ಇಂದು ನಡೆಯಲಿದೆ. ಇದನ್ನೂ ಓದಿ: ಸಂಕ್ರಾಂತಿ ಸುಗ್ಗಿ; ಹಸುಗಳಿಗೆ ಕಿಚ್ಚು ಹಾಯಿಸುವ ಸಂಭ್ರಮ

    ಸಂಜೆ 5:15 ರಿಂದ 5:17 ರ ವರೆಗೆ ಈ ಕೌತುಕ ನಡೆಯಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದು, ದೇಗುಲದ ಅವರಣದಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ.

    ಪ್ರತಿ ವರ್ಷ ಈ ಸುಂದರ ವಿದ್ಯಮಾನಕ್ಕೆ ದೇವಸ್ಥಾನ ಸಾಕ್ಷಿಯಾಗುತ್ತದೆ. ಭಕ್ತರ ಕೌತುಕ ವಿಸ್ಮಯವನ್ನು ಕಣ್ತುಂಬಿಸಿಕೊಳ್ಳುವ ಕಾತುರ ಅದೇ ರೀತಿ ಇರಲಿದೆ. ಇದನ್ನೂ ಓದಿ: ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?

  • ಸೋಮವಾರ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇಗುಲ

    ಸೋಮವಾರ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇಗುಲ

    ಬೆಂಗಳೂರು: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ (Makar Sankranti) ಕ್ಷಣಗಣನೆ ಆರಂಭವಾಗಿದೆ. ಸಂಕ್ರಾತಿ ದಿನದಂದೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ (Gavi Gangadhareshwara Temple) ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ.

    ಈ ದಿನ ಸೂರ್ಯರಶ್ಮಿ ಶಿವನನ್ನು ಸ್ಪರ್ಶಿಸುವ ವಿಶೇಷ ಕೌತುಕ ನಡೆಯಲಿದೆ. ಸೂರ್ಯ ದಕ್ಷಿಣಪಥ ದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಶಿವನ ಮೂರ್ತಿಯನ್ನು ಸ್ಪರ್ಶಿಸಲಿದ್ದಾನೆ. ಸಂಜೆ 5.20 ರಿಂದ 5.23 ನಿಮಿಷದ ವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಲಿದೆ. ಲಿಂಗಭಾಗದಲ್ಲಿ ಎಷ್ಟು ಸಮಯ ಸೂರ್ಯರಶ್ಮಿ ಇರುತ್ತೆ ಅನ್ನೋದರ ಮೇಲೆ ಹೊಸ ವರ್ಷದ ಭವಿಷ್ಯ ಇರಲಿದೆ ಅನ್ನೋದು ನಂಬಿಕೆ.

    ದೇವಸ್ಥಾನದಲ್ಲಿ ಬೆಳಗ್ಗೆ 5 ಗಂಟೆಗೆ ವಿಶೇಷಪೂಜೆ, ಅಲಂಕಾರ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ದೇವಸ್ಥಾನ ಓಪನ್ ಇರಲಿದ್ದು, ನಂತ್ರ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿರುದಿಲ್ಲ ಸಂಜೆ ಸೂರ್ಯರಶ್ಮಿ ಲಿಂಗವನ್ನ ಸ್ಮರ್ಶಿಸಿದ ನಂತ್ರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ. ಇದನ್ನೂ ಓದಿ: ಪಂಚೆ ಧರಿಸಿ ಪೊಂಗಲ್‌ ಆಚರಿಸಿದ ಪ್ರಧಾನಿ ಮೋದಿ- ವೀಡಿಯೋ ವೈರಲ್‌

    ಭಕ್ತಾಧಿಗಳು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಇರಲಿದೆ. ದೇವರನ್ನ ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಅರ್ಚಕರನ್ನ ಬಿಟ್ಟರೆ ಇನ್ನುಳಿದ ಯಾರಿಗೂ ದೇವಸ್ಥಾನ ಪ್ರವೇಶ ಇರುವುದಿಲ್ಲ ಎಂದು ದೇವಾಲಯದ ಪ್ರಧಾನ ಆರ್ಚಕ ಸೋಮಸುಂದರ್ ದೀಕ್ಷೀತ್ ಮಾಹಿತಿ ನೀಡಿದ್ದಾರೆ.

  • ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

    ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

    ಬೆಂಗಳೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಇಂದು ಸಂಜೆ 5:17ರ ಸಮಯದಲ್ಲಿ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯನ ರಶ್ಮಿ ಗವಿ ಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸುವ ಮೂಲಕ ಕಿರಣಾಭಿಷೇಕ ಮಾಡಿತು.

    ಉತ್ತರಾಯಣ ಆರಂಭಗೊಳ್ಳುವ ಶುಭ ಘಳಿಗೆಯಲ್ಲಿ ಭಾಸ್ಕರ ತನ್ನ ಪಥ ಬದಲಿಸಿದ ಹಿನ್ನೆಲೆಯಲ್ಲಿ ಸೂರ್ಯ ರಶ್ಮಿ ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸಿತು. ಈ ಐತಿಹಾಸಿಕ ನೆರಳು-ಬೆಳಕಿನಾಟಕ್ಕೆ ಬೆಂಗಳೂರಿನ ಗುಟ್ಟಳ್ಳಿಯ ಗವಿಗಂಗಾಧರ ದೇವಾಲಯ ಸಾಕ್ಷಿಯಾಯಿತು. ಸೂರ್ಯನ ಕಿರಣ ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಂತೆ ಲಿಂಗಕ್ಕೆ ಹಾಲಿನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಮಂತ್ರಾಲಯದಲ್ಲಿ ಸಂಕ್ರಾಂತಿ ಸಂಭ್ರಮ – ನಾಡಿನ ಜನತೆಗೆ ಶುಭ ಕೋರಿದ ಸುಭುದೇಂದ್ರ ತೀರ್ಥರು

    ಈ ಮಹಾ ಕೌತುಕವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ದೇಗುಲದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿರುತ್ತಿದ್ದರು. ಆದರೆ ಕೋವಿಡ್‌ ಕಾರಣದಿಂದಾಗಿ ಈ ಬಾರಿ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಭಕ್ತರು ಮನೆಯಲ್ಲೇ ಇದ್ದು ಟಿವಿ ಮೂಲಕ ಕೌತುಕವನ್ನು ಕಣ್ತುಂಬಿಕೊಂಡಿದ್ದಾರೆ.

    ಕಳೆದ ವರ್ಷ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತಾದರೂ, ಸೂರ್ಯ ಮೋಡದ ಮರೆಯಲ್ಲಿ ಹಾದು ಹೋಗಿದ್ದ. ಹೀಗಾಗಿ ಕೌತುಕ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರಿಗೆ ನಿರಾಶೆಯಾಗಿತ್ತು. ಆದರೆ ಈ ಬಾರಿ ಕೋವಿಡ್‌ ಕಾರಣಕ್ಕೆ ದೇಗುಲ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ. ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ- ವೇತನ 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ

  • ದಕ್ಷಿಣ ಕಾಶಿ ಶಿವಗಂಗೆಯ ದೇಗುಲಕ್ಕೆ ಇಂದು ಸಂಜೆಯೇ ಬೀಗ- ಶಿವನಿಗೆ ದರ್ಬೆಯಿಂದ ದಿಗ್ಬಂಧನ

    ದಕ್ಷಿಣ ಕಾಶಿ ಶಿವಗಂಗೆಯ ದೇಗುಲಕ್ಕೆ ಇಂದು ಸಂಜೆಯೇ ಬೀಗ- ಶಿವನಿಗೆ ದರ್ಬೆಯಿಂದ ದಿಗ್ಬಂಧನ

    ನೆಲಮಂಗಲ: ಇಂದು ಸಂಜೆಯಿಂದ ನಾಳೆ ಮಧ್ಯಾಹ್ನದವರೆಗೂ ಸಂಭವಿಸಲಿರುವ ಸೂರ್ಯಗ್ರಹಣದ ವೇಳೆ ಎಲ್ಲಾ ದೇಗುಲಗಳನ್ನು ಮುಚ್ಚಲಾಗುತ್ತದೆ. ಈ ಹಿನ್ನೆಲೆ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಇಂದು ಸಂಜೆಯೇ ದೇವಸ್ಥಾನದಲ್ಲಿ ಶಿವನಿಗೆ ದರ್ಬೆಯಿಂದ ದಿಗ್ಬಂಧನ ಹಾಕಿ ಬಾಗಿಲು ಮುಚ್ಚಲಾಗುತ್ತಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಖ್ಯಾತಿಯ ಶಿವಗಂಗೆಯ ಗವಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಸ್ವರ್ಣಾಂಭ ದೇವಾಲಯದಲ್ಲಿ ಗ್ರಹಣದ ಆಚರಣೆ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ.

    ಸಂಜೆ 5:30ಕ್ಕೆ ದರ್ಬೆಯಿಂದ ಸ್ವರ್ಣಾಂಭ ಸಮೇತ ಶ್ರೀ ಗಂಗಾಧರೇಶ್ವರ ದೇವರಿಗೆ ದಿಗ್ಬಂಧನ ಮಾಡಿ, ನಾಳೆ ಮಧ್ಯಾಹ್ನ 12:30ಕ್ಕೆ ದರ್ಬೆಯಿಂದ ವಿಮುಕ್ತಿ ಮಾಡಲಾಗುತ್ತದೆ. ನಂತರ ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.