Tag: gautham karthik

  • ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ‘ಘಜನಿ’, ‘7 ಆಮ್ ಅರಿವು’, ‘ತುಪಾಕಿ’, ‘ಕತ್ತಿ’, ‘ದರ್ಬಾರ್’ ಮುಂತಾದ ಸೂಪರ್ ಹಿಟ್ ತಮಿಳು ಚಿತ್ರಗಳ ನಿರ್ದೇಶಕರಾದ ಎ.ಆರ್. ಮುರುಗದಾಸ್ (Murugadoss), ಈಗ ಸದ್ದಿಲ್ಲದೆ ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

    ಮುರುಗದಾಸ್ ನಿರ್ಮಾಣದ ಚಿತ್ರದ ಹೆಸರು ‘ಆಗಸ್ಟ್ 16, 1947’. ಹೆಸರು ಕೇಳಿದರೆ, ಇದು ಸ್ವಾತಂತ್ರ್ಯ ಸಂಗ್ರಾಮ ಕಥೆ ಇದ್ದಿರಬಹುದು ಎಂದನಿಸಬಹುದು. ಹೌದು, ಇದು ಸ್ವಾತಂತ್ರ್ಯ ಸಂಗ್ರಾಮದ ಕಥೆಯೇ. ಆದರೆ, ಇದುವರೆಗೂ ಯಾರೂ ಹೇಳದ ಮತ್ತು ತೋರಿಸದ ಒಂದು ವಿಭಿನ್ನ ಮತ್ತು ವಿಶೇಷ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.. ಬ್ರಿಟಿಷ್ ಸಾಮ್ರಾಜ್ಯದ ಎದುರು ಒಂದು ಸಣ್ಣ ಹಳ್ಳಿಯ ಜನ ತೊಡೆ ತಟ್ಟಿ ನಿಲ್ಲುವುದರ ಜೊತೆಗೆ, ಹೇಗೆ ನಿದ್ದೆ ಕೆಡಿಸಿದರು ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.

    ಅಂದಹಾಗೆ, ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ನವನಿರ್ದೇಶಕ ಎನ್.ಎಸ್. ಪೊನ್ ಕುಮಾರನ್. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಪರ್ಪಲ್ ಬುಲ್ ಎಂಟರ್ಟೈನ್ಮೆಂಟ್ ಅರ್ಪಿಸಿ, ಎ.ಆರ್. ಮುರುಗದಾಸ್, ಓಂಪ್ರಕಾಶ್ ಭಟ್ ಮತ್ತು ನರಸೀರಾಮ್ ಚೌಧರಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಗೌತಮ್ ಕಾರ್ತಿಕ್ (Gautham Karthik), ನವನಟಿ ರೇವತಿ (Revathi), ಪುಗಳ್ ಸೇರಿದಂತೆ ಹಲವು ಪ್ರತಿಭಾವಂತ ನಟ-ನಟಿಯರು ಅಭಿನಯಿಸಿದ್ದಾರೆ.  ಅಂದಹಾಗೆ, ‘ಆಗಸ್ಟ್ 16, 1947’ ಚಿತ್ರವು ಏಪ್ರಿಲ್ 07ರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

  • `1947ರ ಆಗಸ್ಟ್ 16’ರ ಕಥೆಯಲ್ಲಿ ಗೌತಮ್ ಕಾರ್ತಿಕ್

    `1947ರ ಆಗಸ್ಟ್ 16’ರ ಕಥೆಯಲ್ಲಿ ಗೌತಮ್ ಕಾರ್ತಿಕ್

    ಕಾಲಿವುಡ್ ನಟ ಗೌತಮ್ ಕಾರ್ತಿಕ್ 1947ರ ಕಥೆ ಹೇಳಲು ಹೊರಟಿದ್ದಾರೆ. `1947 ಆಗಸ್ಟ್ 16′ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಸಖತ್ ರಗಡ್ ಲುಕ್ಕಿನಲ್ಲಿ ಗೌತಮ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.

    ಮಣಿರತ್ನಂ ನಿರ್ದೇಶನದ `ಕಾದಲ್’ ಚಿತ್ರ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಗೌತಮ್ ಕಾರ್ತಿಕ್ ಇದೀಗ ಮಾಸ್ ಲುಕ್ಕಿನಲ್ಲಿ ಮಿಂಚ್ತಿದ್ದಾರೆ. ಎ.ಆರ್ ಮುರುಗದಾಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ `1947 ಆಗಸ್ಟ್ 16′ ಚಿತ್ರದಲ್ಲಿ ಗೌತಮ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ.


    `1947 ಆಗಸ್ಟ್ 16’ಚಿತ್ರದ ಫಸ್ಟ್ ಲುಕ್‌ನ್ನ ಶಿವ ಕಾರ್ತೀಕೇನ್ ರಿವೀಲ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಾಂಪ್ರದಾಯಿಕ ದೋತಿಯಲ್ಲಿ ಕಾಣಿಸಿಕೊಂಡಿರುವ ಗೌತಮ್ ರಾ ಲುಕ್‌ನಲ್ಲಿ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ

    ಪೊನ್ ಕುಮಾರ್ ನಿರ್ದೇಶನದ `1947 ಆಗಸ್ಟ್ 16′ ಕಥೆ ಭಿನ್ನವಾಗಿದೆ. ಎಂದೂ ಮಾಡಿರದ ಪಾತ್ರದಲ್ಲಿ ಗೌತಮ್ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿದೆ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ. ಒಟ್ನಲ್ಲಿ ಚಿತ್ರದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.