ಬೆಂಗಳೂರು: ಕೊರೊನೊ ವೈರಸ್, ಕಾಲರಾ ಭಯ ಹರಡುವ ಭೀತಿ ಈಗ ಬಿಬಿಎಂಪಿಯ ಸಿಬ್ಬಂದಿ, ಪೌರಕಾರ್ಮಿಕರಿಗೂ ಕಾಡುತ್ತಿದೆ. ಕಾರಣ ಪಾಲಿಕೆಯಲ್ಲಿ ಹಾಜರಾತಿಗಾಗಿ ಈಗಲೂ ಬಯೋಮೆಟ್ರಿಕ್ ಮುಂದುವರಿಕೆ ಮಾಡಲಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ, ಬ್ಯಾಟರಾಯನಪುರ, ತ್ಯಾಗರಾಜ್‍ನಗರ ಎಲ್ಲ ಕಡೆ ಬಯೋಮೆಟ್ರಿಕ್ ಮೂಲಕ ಹಾಜರಾತಿ ಪಡೆಯಲಾಗುತ್ತಿದೆ. ಇದು ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ. ಇಡೀ ನಗರಕ್ಕೆ ಮುನ್ನಚ್ಚರಿಕೆ ಬಗ್ಗೆ ಅರಿವು ಹೇಳುವ ಬಿಬಿಎಂಪಿ ಮಾತ್ರ ಬಯೋಮೆಟ್ರಿಕ್ ಮುಂದುವರಿಸಿದೆ.

ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಈ ವಿಚಾರ ನನ್ನ ಗಮನಕ್ಕೆ ಬೆಳಿಗ್ಗೆಯೇ ಬಂದಿದೆ. ಆಯುಕ್ತರು, ಆಡಳಿತ ವಿಭಾಗದ ವಿಶೇಷ ಆಯುಕ್ತರು, ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಬಯೋಮೆಟ್ರಿಕ್ ವ್ಯವಸ್ಥೆ ತೆಗೆದರೆ ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಬಯೋಮೆಟ್ರಿಕ್ ಸಂಸ್ಥೆ ದೃಷ್ಟಿಯಿಂದ ತೀರ್ಮಾನ ಮಾಡಲಾಗುತ್ತದೆ ಎಂದರು.






ಪಬ್ಲಿಕ್ ಟಿವಿ ವರದಿಯನ್ನು ವೀಕ್ಷಿಸಿದ ಬಳಿಕ ಮೇಯರ್ ಅವರು, ಬಿಬಿಎಂಪಿ ಆಯುಕ್ತರಿಗೆ ನೇರ ಕರೆ ಮಾಡಿ ಇಂತಹ ಅಧಿಕಾರಿಗಳು ಹಾಗೂ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಿದರು. ಅಲ್ಲದೇ ಈ ಸಂಬಂಧ ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


