Tag: Gautam Gambhir

  • ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ನವದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಸೋಲುಂಡರೂ ಪಂತ್ ಬ್ಯಾಟ್ ನಿಂದ ಸರಾಗವಾಗಿ ರನ್ ಹರಿದು ಬಂದಿತ್ತು. ಈ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ತಮ್ಮ ಮೊದಲ ಶತಕ ಸಿಡಿಸಿದ್ದ ಪಂತ್ ಬೆಂಗಳೂರು ವಿರುದ್ಧವು ಅರ್ಧ ಶತಕ (61 ರನ್, 34 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ 582 ರನ್ ಗಳಿಸಿದರು.

    ಈ ಮೂಲಕ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಪಂತ್ ಮಾಜಿ ನಾಯಕ ಗೌತಮ್ ಗಂಭೀರ್ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ನ ಮೊದಲ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಗಂಭೀರ್ 2008 ರಲ್ಲಿ 534 ರನ್ ಸಿಡಿಸಿದ್ದರು. 10 ವರ್ಷಗಳ ಬಳಿಕ ಡೆಲ್ಲಿ ಪರ 20 ವರ್ಷದ ಪಂತ್ ಈ ದಾಖಲೆಯನ್ನು ಮುರಿದಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಪಂತ್ ಒಟ್ಟಾರೆ 1 ಶತಕ ಹಾಗೂ ನಾಲ್ಕು ಅರ್ಧ ಶತಕ ಹಾಗೂ 61 ಬೌಂಡರಿ, 31 ಸಿಕ್ಸರ್ ಸಿಡಿಸಿದ್ದಾರೆ.

    ಐಪಿಎಲ್ ಚೊಚ್ಚಲ ಶತಕ ಸಿಡಿಸಿ ಟೂರ್ನಿಯಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಮನಿಷ್ ಪಾಂಡೆ ಐಪಿಎಲ್ ನಲ್ಲಿ ಶತಕ ಗಳಿಸಿದ ಕಿರಿಯ ಆಟಗಾರರಾಗಿದ್ದಾರೆ. 2009 ರಲ್ಲಿ ಪಾಂಡೇ 19 ವರ್ಷ 253 ದಿನ ವಯಸ್ಸಿನಲ್ಲಿ ಶತಕ ಸಿಡಿಸಿದ್ದರು. ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ (22 ವರ್ಷ 151 ದಿನ) ಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

  • ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ನವದೆಹಲಿ: ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನಿರಾಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದು, ಯುವ ಆಟಗಾರ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ಪಟ್ಟ ನೀಡಲಾಗಿದೆ.

    ಡೆಲ್ಲಿ ತಂಡದ ನಾಯಕತ್ವ ವಹಿಸಿದ್ದ ಗೌತಮ್ ಗಂಭೀರ್ ತಂಡದ ನಿರಾಸ ಪ್ರದರ್ಶನದ ಹೊಣೆ ಹೊತ್ತು ಸ್ವತಃ ನಾಯಕತ್ವ ಪಟ್ಟದಿಂದ ಬುಧವಾರ ಹಿಂದೆ ಸರಿದಿದ್ದಾರೆ. ಗಂಭೀರ್ ನಾಯಕತ್ವ ಪಟ್ಟದಿಂದ ಕೆಳಗಿಳಿದ ಕಾರಣ ಡೆಲ್ಲಿ ತಂಡದ ಮ್ಯಾನೇಜ್‍ಮೆಂಟ್ ಶ್ರೇಯಸ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಭೀರ್ ನಾಯಕತ್ವ ತೊರೆಯುವ ಸಂಗತಿ ನನ್ನ ಸ್ವತಃ ನಿರ್ಧಾರವಾಗಿದ್ದು, ತನ್ನ ಮೇಲೆ ಯಾರ ಒತ್ತಡವು ಇಲ್ಲ. ಅಲ್ಲದೇ ನನ್ನ ನಿರ್ಧಾರದ ಕುರಿತು ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸಿದ ಬಳಿಕ ಹಲವು ಸುತ್ತು ಚರ್ಚೆಗಳು ನಡೆಸಲಾಗಿದೆ ಎಂದರು.

    ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ 6 ಪಂದ್ಯಗಳನ್ನು ಆಡಿದೆ. ಉಳಿದಂತೆ 8 ರ ಘಟಕ್ಕೆ ತಲುಪಲು ಇನ್ನು 8 ಪಂದ್ಯಗಳನ್ನು ಆಡಬೇಕಿದೆ. ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಪಡೆದಿದೆ. ಟೂರ್ನಿಯಲ್ಲಿಯ ಮಧ್ಯದಲ್ಲಿ ತಂಡದ ನಾಯತ್ವ ಬದಲಾವಣೆ ಮಾಡುವುದು ತಂಡದ ಮೇಲೆ ಋಣಾತ್ಮಕ ಪ್ರಭಾವ ಉಂಟು ಮಾಡಲಿದೆ ಎಂಬ ಅಂಶದ ಬಳಿಕವೂ ಗಂಭೀರ್ ಅವರ ನಿರ್ಧಾರದ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲಿನ ಬಳಿಕ ಗಂಭೀರ್ ತಂಡದ ನಾಯಕತ್ವ ತೊರೆಯುವ ನಿರ್ಧಾರವನ್ನು ತಂಡದ ಮ್ಯಾನೇಜ್ ಮೆಂಟ್ ಮುಂದೇ ತಿಳಿಸಿದ್ದರು. ಬಳಿಕ ಹಲವು ಬಾರಿ ಚರ್ಚೆ ನಡೆಸಿ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಟಿಂಗ್ ಹಾಗೂ ಗಂಭೀರ್ ಜಂಟಿಯಾಗಿ ನಿರ್ಧಾರ ಪ್ರಕಟಿಸಿದ್ದಾರೆ.

    ನಾಯಕತ್ವದ ಬದಲಾವಣೆ ನಿರ್ಧಾರದಿಂದ ಮುಂದಿನ ಕೊಲ್ಕತ್ತಾ ವಿರುದ್ಧದ ಪಂದ್ಯವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಗಂಭೀರ್ ಅವರ ಈ ನಿರ್ಧಾರಕ್ಕೆ ವೈಯಕ್ತಿಕವಾಗಿ ಅವರು ತಂಡಕ್ಕೆ ರನ್ ಕೊಡುಗೆ ನೀಡದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಟೂರ್ನಿಯಲ್ಲಿ ಗಂಭೀರ್ ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು, ಬಳಿಕ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಟೂರ್ನಿಯಲ್ಲಿ ಒಟ್ಟಾರೆ 6 ಪಂದ್ಯಗಳಿಂದ ಗಂಭೀರ್ 85 ರನ್ ಗಳಿಸಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೊಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು.

    ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ ಆರ್ ಸಿಬಿ ಹಾಗೂ ಚೆನ್ನೈ ತಂಡಗಳ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಪಡೆಯಲು ವಿಫಲವಾಗಿತ್ತು.

  • ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ಮೊಹಾಲಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಗೌತಮ್ ಗಂಭೀರ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಅರ್ಧಶತಕ ಹೊಡೆದಿದ್ದ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಐಪಿಎಲ್ ಟೂರ್ನಿಯಲ್ಲಿ ಈ ಮೂಲಕ 36 ನೇ ಅರ್ಧಶತಕ ಸಿಡಿಸಿದ ಗಂಭೀರ್ ಪಟ್ಟಿಯಲ್ಲಿ ಆಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಸದ್ಯ ಚೆಂಡು ವಿರೂಪಗೊಳಿದ ಪ್ರಕರಣದಲ್ಲಿ ಐಪಿಎಲ್ ನಿಂದ ಹೊರಗುಳಿದಿರುವ ವಾರ್ನರ್ ದಾಖಲೆಯನ್ನು ಗಂಭೀರ್ ಮುರಿಯುವ ಅವಕಾಶವಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (32) ಮೂರನೇ ಸ್ಥಾನ, ಸುರೇಶ್ ರೈನಾ (31) 4ನೇ ಸ್ಥಾನ, ಆರ್ ಸಿಬಿ ನಾಯಕ ಕೊಹ್ಲಿ (30) ನಂತರದ ಸ್ಥಾನ ಪಡೆದಿದ್ದಾರೆ.

    ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೌತಮ್ ಗಂಭೀರ್ ಅರ್ಧ ಶತಕ ಗಳಿಸಿದ್ದಾರೆ. ಪಂದ್ಯದಲ್ಲಿ 36 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ನೆರವಿನಿಂದ ಅರ್ಧಶತಕ ಸಿಡಿಸಿದರು.

    ಕಳೆದ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಾಯಕತ್ವ ವಹಿಸಿದ್ದ ಗಂಭೀರ್ ಈ ಬಾರಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    ಗಂಭೀರ್ ಕಳೆದ 10 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ ಗಳಿದ ಪಟ್ಟಿ: 58 , 15, 72, 1, 0, 41, 0, 57, 38, 76, 50. ಒಟ್ಟಾರೆ 11 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ 68 ರನ್ ಸರಾಸರಿ ಯೊಂದಿಗೆ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.

  • ಅಫ್ರಿದಿ `ಯುಎನ್’ ಪದಕ್ಕೆ ವಿಶೇಷ ಅರ್ಥ ನೀಡಿದ್ರು ಗಂಭೀರ್

    ಅಫ್ರಿದಿ `ಯುಎನ್’ ಪದಕ್ಕೆ ವಿಶೇಷ ಅರ್ಥ ನೀಡಿದ್ರು ಗಂಭೀರ್

    ನವದೆಹಲಿ: ಭಾರತವನ್ನು ಕೆಣಕಿ ಟ್ವಿಟ್ಟರ್ ನಲ್ಲಿ ಕಾಶ್ಮೀರ ಕುರಿತು `ಯುಎನ್'(ಯುನೈಟೆಡ್ ನೇಷನ್ಸ್ ಅಥವಾ ವಿಶ್ವಸಂಸ್ಥೆ) ಯಾವ ಕಾರ್ಯ ಮಾಡುತ್ತಿದೆ ಎಂದು ಪ್ರಶ್ನಿಸಿ, ಟ್ವೀಟ್ ಮಾಡಿದ್ದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ವ್ಯಂಗ್ಯವಾಡಿ ಟಾಂಗ್ ನೀಡಿದ್ದಾರೆ.

    ಈ ಮೊದಲು ಟ್ವೀಟ್ ಮಾಡಿದ್ದ ಅಫ್ರಿದಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕರೆದಿದ್ದರು. ಅಲ್ಲದೇ ಅಲ್ಲಿನ ಸರ್ಕಾರ ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ. ಅದರೂ ವಿಶ್ವಸಂಸ್ಥೆ ಹಾಗೂ ಇತರೇ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ಮಾಧ್ಯಮಗಳು ಶಹೀದ್ ಅಫ್ರಿದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಳಿದರು. ಆದರೆ ಅವರಿಗೆ ಏನು ಹೇಳುವುದು? ಅಫ್ರಿದಿ ಮಾತ್ರ `ಯುಎನ್’ ಕಡೆಗೆ ನೋಡುತ್ತಿದ್ದಾರೆ. ಅಫ್ರಿದಿ ಅವರ ಹಿಂದುಳಿದ ನಿಘಂಟಿನಲ್ಲಿ ಯುಎನ್ ಎಂದರೆ `ಅಂಡರ್ ನೈಂಟೀನ್’ ಎಂಬ ಅರ್ಥವನ್ನು ನೀಡುತ್ತದೆ. ಮಾಧ್ಯಮಗಳು ಈ ವಿಷಯದಿಂದ ವಿಶ್ರಾಂತಿ ಪಡೆಯಬಹುದು. ಅಫ್ರಿದಿ ನೋಬಲ್ ನಲ್ಲಿ ಔಟಾದ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಅಫ್ರಿದಿ ತಮ್ಮ 16ನೇ ವಯಸ್ಸಿಗೆ ಕ್ರಿಕೆಟ್ ಗೆ ಪ್ರವೇಶ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಈ ಕುರಿತು ಹಲವು ಬಾರಿ ಚರ್ಚೆಗಳು ನಡೆದಿದ್ದವು. ಇಂದಿಗೂ ಅಫ್ರಿದಿ ಕ್ರಿಕೆಟ್ ಗೆ ಪ್ರವೇಶ ಪಡೆದ ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮೂಲಕ ಗಂಭೀರ್ ಮತ್ತೊಮ್ಮೆ ಅಫ್ರಿದಿಗೆ ಟಾಂಗ್ ನೀಡಿದ್ದಾರೆ.

    ಈ ಹಿಂದೆ 2007 ರಲ್ಲಿ ಕನ್ಪುರದಲ್ಲಿ ನಡೆದ ಪಾಕಿಸ್ತಾನ ಹಾಗೂ ಭಾರತ ನಡುವಿನ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅಂಪೈರ್ ಇಬ್ಬರ ನಡುವೆ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದ್ದರು.

  • ಮದ್ಯ ಮಾರಾಟ ಕೇಸ್: ಕೋರ್ಟ್ ಮೆಟ್ಟಿಲೇರಿದ ಗಂಭೀರ್

    ಮದ್ಯ ಮಾರಾಟ ಕೇಸ್: ಕೋರ್ಟ್ ಮೆಟ್ಟಿಲೇರಿದ ಗಂಭೀರ್

    ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಅವರು ತನ್ನ ಹೆಸರಿನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಕೋರ್ಟ್ ಮೆಟ್ಟಲು ಏರಿದ್ದಾರೆ.

    ಮಂಗಳವಾರ ದೆಹಲಿ ಕೋರ್ಟ್ ನಲ್ಲಿ ತಮ್ಮ ಹೆಸರು ಬಳಕೆ ಮಾಡುತ್ತಿದ್ದ ಮಾರಾಟಗಾರನ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಪಶ್ಚಿಮ ದೆಹಲಿಯ ಗಂಗೂರ್ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಗೌತಮ್ ಗಂಭೀರ್ ಅವರನ್ನು ಹೆಸರನ್ನು ಇಡಲಾಗಿದೆ. ಈ ಬಾರ್‍ಗೆ ಬರುವ ಗ್ರಾಹಕರಿಗೆ ನನ್ನ ಹೆಸರಲ್ಲಿ ಸರ್ವ್ ಮಾಡಿ ಮದ್ಯಪಾನಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಗಂಭೀರ್ ಆರೋಪಿಸಿದ್ದಾರೆ.

    ಬಾರ್ ಮಾಲೀಕನ ಹೆಸರು ಗೌತಮ್ ಗಂಭೀರ್: ಇನ್ನು ಇತ್ತ ಕ್ರಿಕೆಟಿಗ ಬಾರ್ ಮಾಲೀಕನ ವಿರುದ್ಧ ಕೋರ್ಟ್‍ನಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಬಾರ್ ಮಾಲೀಕ, ನನ್ನ ಹೆಸರು ಸಹ ಗೌತಮ್ ಗಂಭೀರ್ ಆಗಿದ್ದು, ನಾನು ನನ್ನ ಹೆಸರಿನ ಟ್ಯಾಗ್ ಲೈನ್‍ನ್ನ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಇಟ್ಟು ವ್ಯವಹರಿಸುತ್ತಿದ್ದೇನೆ. ಗಂಗೂರ್ ಮತ್ತು ಹವಾಲಾತ ಹೆಸರಿನ ಎರಡು ರೆಸ್ಟೋರೆಂಟ್ ಬಾರ್‍ಗಳು ನನ್ನ ಹೆಸರಿನ ಟ್ಯಾಗ್‍ಲೈನ್ ದೊಂದಿಗೆ ವ್ಯವಹರಿಸುತ್ತಿವೆ ಅದರಲ್ಲಿ ಏನು ತಪ್ಪಿಲ್ಲ ಎಂದು ಬಾರ್ ಮಾಲೀಕ ಹೇಳಿದ್ದಾರೆ.