Tag: Gautam Adani

  • ಕೇದಾರನಾಥ ಯಾತ್ರಿಗಳಿಗೆ ಗುಡ್ ನ್ಯೂಸ್ – 12.9 ಕಿಮೀ ರೋಪ್‌ವೇ ನಿರ್ಮಿಸಲಿದೆ ಅದಾನಿ ಕಂಪನಿ

    ಕೇದಾರನಾಥ ಯಾತ್ರಿಗಳಿಗೆ ಗುಡ್ ನ್ಯೂಸ್ – 12.9 ಕಿಮೀ ರೋಪ್‌ವೇ ನಿರ್ಮಿಸಲಿದೆ ಅದಾನಿ ಕಂಪನಿ

    ಮುಂಬೈ: ಕೇದಾರನಾಥ (Kedarnath Dham) ಯಾತ್ರಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. 12.9 ಕಿಮೀ ರೋಪ್‌ವೇ ನಿರ್ಮಿಸುವುದಾಗಿ ಅದಾನಿ ಕಂಪನಿ ಘೋಷಿಸಿದೆ.

    ಭಕ್ತರಿಗೆ ತೀರ್ಥಯಾತ್ರೆ ಸುಲಭ ಮತ್ತು ಸುರಕ್ಷಿತವಾಗಿಸುವ ಉದ್ದೇಶದಿಂದ ಕೇದಾರನಾಥ ಧಾಮಕ್ಕೆ ಹೊಸ ರೋಪ್‌ವೇ ನಿರ್ಮಾಣ ಮಾಡುವುದಾಗಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಬುಧವಾರ ತಿಳಿಸಿದ್ದಾರೆ.

    ಕೇದಾರನಾಥ ಧಾಮಕ್ಕೆ ಕಠಿಣವಾದ ಆರೋಹಣವು ಈಗ ಸುಲಭವಾಗಲಿದೆ. ಈ ಯೋಜನೆ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ. ಎಲ್ಲರಿಗೂ ಭಗವಾನ್‌ ಮಹಾದೇವನ ಆಶೀರ್ವಾದ ಇರಲಿ. ಜೈ ಬಾಬಾ ಕೇದಾರನಾಥ ಎಂದು ಅದಾನಿ ಎಕ್ಸ್‌ ಪೋಸ್ಟ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.‌ ಇದನ್ನೂ ಓದಿ: Vizag ನಲ್ಲಿರುವ ‘G’ ಅಂದರೆ ಅದು ಗೂಗಲ್‌- ಅತಿ ಕಿರಿಯ ರಾಜ್ಯದಲ್ಲಿ ಹೆಚ್ಚು ಹೂಡಿಕೆ: ನಾಯ್ಡು ಸಂಭ್ರಮ

    ಶಿವನಿಗೆ ಅರ್ಪಿತವಾದ ಕೇದಾರನಾಥ ದೇವಾಲಯವು ಹಿಮಾಲಯದಲ್ಲಿ 11,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ. ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅ.23 ರಂದು ಚಳಿಗಾಲ ಹಿನ್ನೆಲೆ ಕೇದಾರನಾಥ ಧಾಮದ ದ್ವಾರಗಳನ್ನು ಮುಚ್ಚಲಾಗುವುದು ಎಂದು ಶ್ರೀ ಬದರಿನಾಥ ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ತಿಳಿಸಿದೆ.

    ದ್ವಾರಗಳನ್ನು ಮುಚ್ಚುವ ದಿನಾಂಕ ನಿರ್ಧರಿಸಲು ಬದರಿನಾಥ ದೇವಾಲಯದ ಆವರಣದಲ್ಲಿ ಮಧ್ಯಾಹ್ನ ಒಂದು ಭವ್ಯ ಧಾರ್ಮಿಕ ಸಮಾರಂಭ ನಡೆಸಲಾಯಿತು. ಈ ಕಾರ್ಯಕ್ರಮದ ಸಂದರ್ಭದಲ್ಲಿ, ಧರ್ಮಾಧಿಕಾರಿ ಮತ್ತು ವೇದ ವಿದ್ವಾಂಸರು BKTCಯ ಅಧಿಕಾರಿಗಳ ಸಮ್ಮುಖದಲ್ಲಿ ಪಂಚಾಂಗ ಲೆಕ್ಕಾಚಾರಗಳ ಆಧಾರದ ಮೇಲೆ ದಿನಾಂಕ ಅಂತಿಮಗೊಳಿಸಲಾಯಿತು. ಇದನ್ನೂ ಓದಿ: ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

  • ಸೆಬಿಯಿಂದ ಕ್ಲೀನ್‌ಚಿಟ್‌| ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿಗೆ ಏರಿಕೆ

    ಸೆಬಿಯಿಂದ ಕ್ಲೀನ್‌ಚಿಟ್‌| ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿಗೆ ಏರಿಕೆ

    ಮುಂಬೈ: ಹಿಂಡನ್‌ಬರ್ಗ್‌ ಸಂಶೋಧನಾ ವರದಿಯಲ್ಲಿನ (Hindenburg Research Report) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಕ್ಲೀನ್‌ ಚಿಟ್‌ ನೀಡಿದ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ (Adani Group) ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ.

    ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿ ರೂ. ಏರಿಕೆಯಾಗಿದ್ದು ಈಗ ಒಟ್ಟು ಕಂಪನಿಗಳ  ಮೌಲ್ಯ 13.96 ಲಕ್ಷ ಕೋಟಿ ರೂ.ಗೆ ತಲುಪಿದೆ.

    ಯಾವುದು ಎಷ್ಟು ಏರಿಕೆ?
    ಪವರ್‌ – 13.42% (84.75ರೂ.), ಟೋಟಲ್‌ ಗ್ಯಾಸ್‌ – 7.55% (45.85 ರೂ.), ಅದಾನಿ ಎಂಟರ್‌ಪ್ರೈಸಸ್‌ -5.25% (126 ರೂ.), ಗ್ರೀನ್‌ ಎನರ್ಜಿ -5.48% (53.60 ರೂ.), ಅದಾನಿ ಎನರ್ಜಿ ಸಲ್ಯೂಷನ್ಸ್‌ – 4.94% (41.35 ರೂ.), ಅದಾನಿ ಪೋರ್ಟ್ಸ್‌- 1.15% (16.20 ರೂ.) ಭಾರೀ ಏರಿಕೆ ಕಂಡಿದೆ. ಇದರ ಜೊತೆ ಎಸಿಸಿ, ಅಂಬುಜಾ ಸಿಮೆಂಟ್‌ಗಳ ಷೇರುಗಳ ಮೌಲ್ಯವೂ ಏರಿದೆ.

    ಹಿಂಡನ್‌ಬರ್ಗ್‌ ಆರೋಪದಿಂದ ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಅದಾನಿ ಕಂಪನಿಗಳ ಷೇರು ಖರೀದಿಸಲು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಸೆಬಿಯಿಂದ ಕ್ಲೀನ್‌ಚಿಟ್‌ ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆ ಮಾಡಲು ಆರಂಭಿಸಿದ್ದರಿಂದ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ. ಇದನ್ನೂ ಓದಿ:  ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಸುದೀರ್ಘ ಅವಧಿಗಳ ಕಾಲ ತನಿಖೆ ನಡೆಸಿದ ಸೆಬಿ ಅದಾನಿ ಗ್ರೂಪ್‌ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ, ಆರೋಪವನ್ನು ಸಾಬೀತುಪಡಿಸಲು ಯಾವುದೇ ಬಲವಾದ ಸಾಕ್ಷಿಗಳು ಕಂಡುಬಂದಿಲ್ಲ ಎಂದು ತಿಳಿಸಿತ್ತು.

    2022 ರ ಸೆಪ್ಟೆಂಬರ್‌ನಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ 22 ಲಕ್ಷ ಕೋಟಿ ರೂ. ಇತ್ತು. 2023 ರ ಜನವರಿಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಹೊಸ ಷೇರು ಬಿಡುಗಡೆ ಅಥವಾ ಎಫ್‌ಪಿಒ ಬಿಡುಗಡೆ ಮಾಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್‌ ತನ್ನ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು.

    ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ನೈಜ ಬೆಲೆಗಿಂತ ಕೃತಕ ಬೆಲೆಯಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಇದು ಅಕ್ರಮ ಎಂದು ಹಿಂಡನ್‌ಬರ್ಗ್‌ ಆರೋಪಿಸಿತ್ತು. ಈ ವರದಿ ಪ್ರಕಟವಾದ ನಂತರ ಅದಾನಿ ಸಂಪತ್ತು ಕರಗಲು ಆರಂಭವಾಗಿತ್ತು. ವರದಿ ಪ್ರಕಟಿಸಿದ ಬಳಿಕ 2023ರ ಫೆಬ್ರವರಿಯಲ್ಲಿ ಇದು 7 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿತ್ತು. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್‌ ಅದಾನಿ (Gautam Adani) ಅವರು 32ನೇ ಸ್ಥಾನಕ್ಕೆ ಜಾರಿದ್ದರು.

    ಹಿಂಡನ್‌ಬರ್ಗ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ತನಿಖೆ ನಡೆಸಿ ಅದಾನಿ ಕಂಪನಿ ಕ್ಲೀನ್‌ ಚಿಟ್‌ ನೀಡಿತ್ತು. ಮಾರಿಷಸ್‌ ಸರ್ಕಾರವೂ ಅದಾನಿ ಕಂಪನಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಮ್ಮ ಕಾನೂನಿನ ಪ್ರಕಾರ ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿಗೆ ಅವಕಾಶವಿಲ್ಲ. ನಮ್ಮ ಷರತ್ತನ್ನು ಒಪ್ಪಿದ ಒಪ್ಪಿದ ಕಂಪನಿಗಳನ್ನು ಶೆಲ್‌ ಕಂಪನಿಗಳು ಎಂದು ಹೇಳುವುದು ಆಧಾರ ರಹಿತ ಎಂದು ಹೇಳಿತ್ತು.

  • ಅದಾನಿ ದುಡ್ಡನ್ನ ಮೋದಿ, ಬಿಜೆಪಿಯವರು ಹಂಚಿಕೊಳ್ತಿದ್ದಾರೆ: ಸಂತೋಷ್ ಲಾಡ್

    ಅದಾನಿ ದುಡ್ಡನ್ನ ಮೋದಿ, ಬಿಜೆಪಿಯವರು ಹಂಚಿಕೊಳ್ತಿದ್ದಾರೆ: ಸಂತೋಷ್ ಲಾಡ್

    ಬೆಂಗಳೂರು: ನಾನು ರಾಹುಲ್ ಗಾಂಧಿ (Rahul Gandhi) ದುಡ್ಡು ಕೊಡ್ತೀನಿ ಅಂತ ಆರೋಪ ಮಾಡುತ್ತಾರೆ. ಅದಾನಿ (Gautam Adani) ದುಡ್ಡನ್ನ ಮೋದಿ, ಬಿಜೆಪಿ ಅವರು ಹಂಚಿಕೊಳ್ಳುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.

    ಕಾರ್ಮಿಕ ಇಲಾಖೆಯಲ್ಲಿ ಅಕ್ರಮ ಆರೋಪದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ. ಅಕ್ರಮದ ದಾಖಲಾತಿ ಕೊಟ್ಟರೆ ನಾನು ತನಿಖೆ ಮಾಡಿಸುತ್ತೇನೆ. ನಾನು ಮೋದಿ ವಿರುದ್ಧ ಮಾತನಾಡುತ್ತೇನೆ ಅಂತ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದಾಖಲಾತಿಗಳು ಇದ್ದರೆ ಬಿಜೆಪಿ ಅವರು ಕೋರ್ಟ್‌ಗೆ ಹೋಗಲಿ. ಆರ್‌ಟಿಐ ಅನ್ನ ಈ ದೇಶದಲ್ಲಿ ಬಿಜೆಪಿ ಉಳಿಸಿದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

    ಇವರು ಸುದ್ದಿಗೋಷ್ಟಿ ಮಾಡಿ ಆರೋಪ ಮಾಡಿದ ಕೂಡಲೇ ಸಿಬಿಐಗೆ ಕೊಡಬೇಕಾ? ಬಿಜೆಪಿ ಅವರು ದಾಖಲಾತಿ ಕೊಡಲಿ, ನಾನು ತನಿಖೆ ಮಾಡಿಸುತ್ತೇನೆ ಎಂದು ಸಂತೋಷ್ ಲಾಡ್ ತಿರುಗೇಟು ನೀಡಿದರು. ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಮಂಡನೆ – ಆ.16ಕ್ಕೆ ವಿಶೇಷ ಸಂಪುಟ ಸಭೆ

  • ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

    ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

    ನವದೆಹಲಿ: ಕೈಗಾರಿಕೋದ್ಯಮಿ ಗೌತಮ್‌ ಅದಾನಿ (Gautam Adani) ಅವರ ಪುತ್ರ ಜೀತ್‌ ಅದಾನಿ (Jeet Adani) ಮದುವೆಗೆ ಸಜ್ಜಾಗಿದ್ದಾರೆ. ತಮ್ಮ ವಿವಾಹದ ಗೌರವಾರ್ಥ, ಪ್ರತಿ ವರ್ಷ 500 ಅಂಗವಿಕಲ ಮಹಿಳೆಯರಿಗೆ ಮದುವೆಗೆ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

    ಜೀತ್‌ ಅದಾನಿ ಅವರು ಫೆ.7 ರಂದು ಜೈಮಿನ್‌ ಶಾ ಅವರನ್ನು ವಿವಾಹವಾಗಲಿದ್ದಾರೆ. ಈ ಕುರಿತು ಎಕ್ಸ್‌ ಖಾತೆಯಲ್ಲಿ ಗೌತಮ್‌ ಅದಾನಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

    ಜೀತ್ ಮತ್ತು ದಿವಾ ತಮ್ಮ ದಾಂಪತ್ಯ ಜೀವನವನ್ನು ಒಂದು ಉದಾತ್ತ ಪ್ರತಿಜ್ಞೆಯೊಂದಿಗೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಪ್ರತಿ ವರ್ಷ 500 ದಿವ್ಯಾಂಗ ಸಹೋದರಿಯರ ಮದುವೆಗೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡುವ ‘ಮಂಗಲ ಸೇವಾ’ ಪ್ರತಿಜ್ಞೆಯನ್ನು ಅವರು ತೆಗೆದುಕೊಂಡಿದ್ದಾರೆ. ಒಬ್ಬ ತಂದೆಯಾಗಿ, ಈ ಪ್ರತಿಜ್ಞೆ ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ. ಇದರಿಂದ ಅನೇಕ ದಿವ್ಯಾಂಗ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬಗಳು ಸಂತೋಷ ಮತ್ತು ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ ಎಂದು ಅದಾನಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

    2019 ರಲ್ಲಿ ಅದಾನಿ ಗ್ರೂಪ್ ಸೇರಿದ ಇಪ್ಪತ್ತೇಳು ವರ್ಷದ ಜೀತ್ ಅದಾನಿ, ಎಂಟು ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮತ್ತು ಅಭಿವೃದ್ಧಿ ಪೋರ್ಟ್‌ಫೋಲಿಯೊದಲ್ಲಿ ಹೊಂದಿರುವ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಮೂಲಸೌಕರ್ಯ ಕಂಪನಿಯಾದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್‌ನ ನಿರ್ದೇಶಕರಾಗಿದ್ದಾರೆ.

    ಪೆನ್ಸಿಲ್ವೇನಿಯಾ ವಿವಿಯ ಹಳೆಯ ವಿದ್ಯಾರ್ಥಿಯಾಗಿರುವ ಜೀತ್, ಅದಾನಿ ಗ್ರೂಪ್‌ನ ರಕ್ಷಣಾ, ಪೆಟ್ರೋಕೆಮಿಕಲ್ಸ್ ಮತ್ತು ತಾಮ್ರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಅವರು ಗ್ರೂಪ್‌ನ ಡಿಜಿಟಲ್ ರೂಪಾಂತರದ ಉಸ್ತುವಾರಿಯನ್ನೂ ಹೊಂದಿದ್ದಾರೆ.

  • ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನಮ್ಮ ಭಾಗ್ಯ: ಗೌತಮ್ ಅದಾನಿ

    ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನಮ್ಮ ಭಾಗ್ಯ: ಗೌತಮ್ ಅದಾನಿ

    ಪ್ರಯಾಗ್‌ರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ಮಹಾಪ್ರಸಾದ ಸೇವೆ ನೀಡುತ್ತಿರುವ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿಯವರು (Gautam Adani), ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸಲು ನಮಗೆ ಇದು ಸದಾವಕಾಶ ಎಂದು ಹೇಳಿಕೊಂಡಿದ್ದಾರೆ.

    X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಹಾ ಕುಂಭದ ದೈವಿಕ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸುವ ಶುಭ ಅವಕಾಶ ಪಡೆದಿದ್ದೇವೆ. ಸೇವೆಯೇ ಧ್ಯಾನ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು. ಗಂಗಾ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಮಹಾ ಕುಂಭಮೇಳದ ವಿಶೇಷತೆ ಸಾರುವ 52 ನಿಮಿಷಗಳ ವಿಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ.

    ಫೆ.26 ರವರೆಗೆ ನಡೆಯಲಿರುವ ಮಹಾ ಕುಂಭಮೇಳದಲ್ಲಿ ಅದಾನಿ ಗ್ರೂಪ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ISKON) ಭಕ್ತರಿಗೆ ಊಟವನ್ನು ಒದಗಿಸಲು ಕೈಜೋಡಿಸಿವೆ.

    ಅದಾನಿಯವರು ಮಂಗಳವಾರ ಅವರ ಪತ್ನಿ ಪ್ರೀತಿ ಅದಾನಿ ಮತ್ತು ಪುತ್ರ ಕರಣ್ ಅದಾನಿ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಅವರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

  • ಮಹಾಕುಂಭ ಮೇಳದಲ್ಲಿ ಪ್ರಸಾದ ತಯಾರಿಸಿದ ಅದಾನಿ

    ಮಹಾಕುಂಭ ಮೇಳದಲ್ಲಿ ಪ್ರಸಾದ ತಯಾರಿಸಿದ ಅದಾನಿ

    – ಅದಾನಿ ಗ್ರೂಪ್‌, ಇಸ್ಕಾನ್‌ ಸಹಯೋಗದಿಂದ ಮಹಾಪ್ರಸಾದ ಸೇವೆ

    ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಮಂಗಳವಾರ ಮಹಾಕುಂಭ ಮೇಳದ ( Maha Kumbh Mela) ಇಸ್ಕಾನ್ ಶಿಬಿರದಲ್ಲಿ ಪ್ರಸಾದ ತಯಾರಿಸಿ ಸೇವೆ ಸಲ್ಲಿಸಿದ್ದಾರೆ

    &

    nbsp;

    ಜನವರಿ 13 ರಿಂದ ಫೆಬ್ರವರಿ 26 ರವರೆಗಿನ ಮಹಾಕುಂಭ ಮೇಳದ ಸಂಪೂರ್ಣ ಅವಧಿಗೆ ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದೊಂದಿಗೆ ‘ಮಹಾಪ್ರಸಾದ್ ಸೇವಾ’ ಉಪಕ್ರಮದಡಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತಾಡಿದ ಅವರು, ಮಹಾಕುಂಭ ಮೇಳದಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ. ಕುಂಭ ಭಕ್ತಿ ಮತ್ತು ಸೇವೆಯ ಪವಿತ್ರ ಕೇಂದ್ರವಾಗಿದೆ. ಇಸ್ಕಾನ್ ಸಹಯೋಗದೊಂದಿಗೆ ಭಕ್ತರಿಗಾಗಿ ನಾವು ಮಹಾಪ್ರಸಾದ ಸೇವೆಯನ್ನು ಮಾಡುತ್ತಿರುವುದು ನನ್ನ ಅದೃಷ್ಟ ಎಂದಿದ್ದಾರೆ.

    ಮಹಾಪ್ರಸಾದ ಸೇವೆಯು 50 ಲಕ್ಷ ಭಕ್ತರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. ಎರಡು ದೊಡ್ಡ ಅಡುಗೆಮನೆಗಳಲ್ಲಿ ಊಟವನ್ನು ತಯಾರಿಸಿ ಮೇಳದ ಪ್ರದೇಶದಾದ್ಯಂತ 40 ಸ್ಥಳಗಳಲ್ಲಿ ವಿತರಿಸಲಾಗುತ್ತದೆ. ಪ್ರತಿದಿನ 1 ಲಕ್ಷ ಭಕ್ತರಿಗೆ ಆಹಾರವನ್ನು ನೀಡುವ ನಿರೀಕ್ಷೆಯಿದೆ. ಇನ್ನೂ ಈ ಸೇವೆಯು 2,500 ಸ್ವಯಂಸೇವಕರು, ಅಂಗವಿಕಲ ಭಕ್ತರು ಮತ್ತು ಮಕ್ಕಳಿರುವ ತಾಯಂದಿರಿಗೆ ಗಾಲ್ಫ್ ಕಾರ್ಟ್‌ಗಳು ಮತ್ತು ಗೀತಾ ಸಾರ್‌ನ ಐದು ಲಕ್ಷ ಪ್ರತಿಗಳ ವಿತರಣೆಯನ್ನು ಒಳಗೊಂಡಿದೆ.

    ಈ ಉಪಕ್ರಮದ ಕುರಿತು ಚರ್ಚಿಸಲು ಅದಾನಿ ಇಸ್ಕಾನ್ ಆಡಳಿತ ಮಂಡಳಿ ಆಯೋಗದ ಅಧ್ಯಕ್ಷ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿಯಾದರು.

    ಇಸ್ಕಾನ್ ಪಾಲುದಾರಿಕೆಗೆ ಧನ್ಯವಾದ ಹೇಳಿದ ಅದಾನಿ, ʻಮಾ ಅನ್ನಪೂರ್ಣೆಯ ಆಶೀರ್ವಾದದೊಂದಿಗೆ, ಲಕ್ಷಾಂತರ ಭಕ್ತರಿಗೆ ಉಚಿತ ಆಹಾರವನ್ನು ಒದಗಿಸಲಾಗುವುದು. ಸೇವೆಯು ದೇಶಭಕ್ತಿ, ಧ್ಯಾನ ಮತ್ತು ಪ್ರಾರ್ಥನೆಯ ಅತ್ಯುನ್ನತ ರೂಪವಾಗಿದೆ. ನಿಜವಾದ ಅರ್ಥದಲ್ಲಿ, ಸೇವೆಯೇ ದೇವರುʼ ಎಂದಿದ್ದಾರೆ.

  • 8 ಗಂಟೆ ಕೆಲಸ ಮಾಡ್ತಾ ಕುಳಿತರೆ ಹೆಂಡ್ತಿ ಓಡಿಹೋಗ್ತಾಳೆ – ಗೌತಮ್‌ ಅದಾನಿ ಹಾಸ್ಯ!

    8 ಗಂಟೆ ಕೆಲಸ ಮಾಡ್ತಾ ಕುಳಿತರೆ ಹೆಂಡ್ತಿ ಓಡಿಹೋಗ್ತಾಳೆ – ಗೌತಮ್‌ ಅದಾನಿ ಹಾಸ್ಯ!

    ಮುಂಬೈ: ವಾರಕ್ಕೆ 70 ಗಂಟೆ ದುಡಿಬೇಕು ಎನ್ನುವ ಇನ್ಫೋಸಿಸ್ (Infosys) ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ (Narayana Murthy) ಅವರ ಹೇಳಿಕೆ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಈ ಹೊತ್ತಿನಲ್ಲೇ ದೇಶದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ (Gautam Adani) ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ʻಕೆಲಸ-ಜೀವನ ಸಮತೋಲʼ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ನಾವು ಇಷ್ಟಪಡುವ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನದಲ್ಲಿ ಸಮತೋಲನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

    ನಿಮ್ಮ ಕೆಲಸ ಮತ್ತು ಜೀನವದ ಸಮತೋಲನವನ್ನು ನನ್ನ ಮೇಲೆ ಹೇರಬಾರದು, ಹಾಗೆಯೇ ನನ್ನ ಕೆಲಸ-ಜೀವನ ಸಮತೋಲನವನ್ನ ನಿಮ್ಮ ಮೇಲೆ ಹೇರಬಾರದು. ನಾನು ನನ್ನ ಕುಟುಂಬದೊಂದಿಗೆ ನಿತ್ಯ 4 ಗಂಟೆ ಕಳೆಯುತ್ತೇನೆ, ನನಗೆ ಅದರಲ್ಲಿ ಆನಂದ ಇದೆ. ಉಳಿದ ಸಮಯದಲ್ಲೂ 8 ಗಂಟೆಕಾಲ ಕೆಲಸ ಮಾಡ್ತಾ ಕುಳಿತರೇ ಹೆಂಡ್ತಿ ಓಡಿಹೋಗ್ತಾಳೆ ಅಂತ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಕೆಲದಿನಗಳ ಹಿಂದೆಯಷ್ಟೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು, ಭಾರತದ (India) ಕೆಲಸದ ಸಂಸ್ಕೃತಿ ಬದಲಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ದೇಶವು ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಯುವಜನತೆ (Youngsters) ವಾರಕ್ಕೆ 70 ಗಂಟೆಗಳ ಕಾಲ ಕೆಲಸ (70-Hour Work Week) ಮಾಡಲು ಸಿದ್ಧರಾಗಿರಬೇಕು ಎಂದು ಹೇಳಿದ್ದರು.

    ಎರಡನೇ ಮಹಾಯುದ್ಧದ ಬಳಿಕ ಜರ್ಮನಿ (Germany) ಹಾಗೂ ಜಪಾನ್ (Japan) ದೇಶ ಅಭಿವೃದ್ಧಿಯಾಗಿದ್ದನ್ನು ಉಲ್ಲೇಖಿಸಿದ್ದ ಅವರು, ಎರಡನೇ ಮಹಾಯುದ್ಧದ ಬಳಿಕ ಪ್ರತಿಯೊಬ್ಬ ಜರ್ಮನ್‌ ಪ್ರಜೆ ಕೆಲ ವರ್ಷಗಳವರೆಗೆ ಹೆಚ್ಚುವರಿ ಅವಧಿ ದುಡಿಯುತ್ತಿದ್ದರು. ಪಾಶ್ಚಿಮಾತ್ಯರಿಂದ ಅನಪೇಕ್ಷಿತ ಹವ್ಯಾಸಗಳನ್ನು ನಾವು ಕಲಿಯಬಾರದು. ಭಾರತ ನನ್ನ ದೇಶ, ಇದಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕಾಲ ದುಡಿಯುತ್ತೇನೆ ಎಂಬ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎ೦ದು ಯುವಜನತೆಯಲ್ಲಿ ಮನವಿ ಮಾಡಿದ್ದರು.

  • ಬಿಹಾರದಲ್ಲಿ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪಿಸಲು ಅದಾನಿ ಗ್ರೂಪ್ 20,000 ಕೋಟಿ ಹೂಡಿಕೆ

    ಬಿಹಾರದಲ್ಲಿ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪಿಸಲು ಅದಾನಿ ಗ್ರೂಪ್ 20,000 ಕೋಟಿ ಹೂಡಿಕೆ

    – 12,000 ಉದ್ಯೋಗ ಸೃಷ್ಟಿಯ ಗುರಿ

    ಪಾಟ್ನಾ: ಬಿಹಾರದಲ್ಲಿ ಥರ್ಮಲ್‌ ಪವರ್‌ ಪ್ಲಾಂಟ್‌ ಸ್ಥಾಪಿಸಲು ಅದಾನಿ ಸಮೂಹ (Adani Group) 20,000 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ ಎಂದು ಅದಾನಿ ಎಂಟರ್‌ಪ್ರೈಸಸ್‌ ನಿರ್ದೇಶಕ ಪ್ರಣವ್‌ ಅದಾನಿ (Pranav Adani) ತಿಳಿಸಿದ್ದಾರೆ.

    ಶುಕ್ರವಾರ ಪಾಟ್ನಾದ ʻಬಿಹಾರ ಬಿಸಿನೆಸ್‌ ಕನೆಕ್ಟ್‌ʼ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣವ್‌, ಸಂಘಟಿತ ಹೂಡಿಕೆ ಮಾರ್ಗಸೂಚಿಗಳನ್ನು ತಿಳಿಸಿದರು. ಇದೇ ವೇಳೆ ಬಿಹಾರದಲ್ಲಿ ಪವರ್‌ ಪ್ಲಾಂಟ್‌ ಪ್ರಾಜೆಕ್ಟ್‌ಗೆ ಹೂಡಿಕೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಅಮಿತ್‌ ಶಾ ಹೇಳಿಕೆ ಗದ್ದಲ, ಕಾಂಗ್ರೆಸ್‌ ಪ್ರತಿಭಟನೆ; ಅಧಿವೇಶನದ ಕೊನೆಯ ದಿನವೂ ಕಲಾಪ ಮುಂದೂಡಿಕೆ!

    ಬಿಹಾರದ ಇಂಧನ ವಲಯದಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹ ಯೋಜಿಸಿದೆ. ಅಲ್ಟ್ರಾ-ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್ (Thermal Power Plant) ಸ್ಥಾಪಿಸಲು ಸುಮಾರು 20,000 ಕೋಟಿ ರೂ. ಹೂಡಿಕೆ ಮಾಡುವುದು ನಮ್ಮ ಗುರಿಯಾಗಿದೆ. ಇಂತಹ ಬೃಹತ್ ಯೋಜನೆಯಿಂದ ಮುಂದಿನ ದಿನಗಳಲ್ಲಿ ಕನಿಷ್ಠ 12,000 ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಕಾರ್ಯಾಚರಣೆ ಹಂತದಲ್ಲೇ 1,500 ನುರಿತರಿಗೆ ಉದ್ಯೋಗ ಕಲ್ಪಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎನ್‌ಜಿ ಟ್ಯಾಂಕರ್‌ ನಡುವೆ ಡಿಕ್ಕಿ – ಧಗಧಗಿಸಿದ ಅಗ್ನಿ ಜ್ವಾಲೆ, ನಾಲ್ವರು ಸಜೀವ ದಹನ, 15 ಮಂದಿ ಸಾವು!

    ಬಿಹಾರದಲ್ಲಿ ಅತಿದೊಡ್ಡ ಖಾಸಗಿ ಹೂಡಿಕೆದಾರನಾಗಿರುವ ಅದಾನಿ ಸಮೂಹ ಈಗಾಗಲೇ ಗ್ಯಾಸ್‌ ವಿತರಣೆ, ಕೃಷಿ ಲಾಜಿಸ್ಟಿಕ್ಸ್‌ ಕೇಂದ್ರಗಳು ಸೇರಿದಂತೆ 8,500 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದೆ. ಇದರಿಂದ 2,500 ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಈ ವಲಯಗಳಲ್ಲಿ ಈಗ ಇನ್ನೂ ಹೆಚ್ಚುವರಿ 2,300 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಹಾಗಾಗಿ ಹೆಚ್ಚುವರಿ 25,000 ಸ್ಥಳೀಯರಿಗೆ ಉದ್ಯೋಗಾವಕಾಶ‌ ಸಿಗಲಿದೆ ಎಂದು ವಿವರಿಸಿದರು.

    ಇದಲ್ಲದೇ ಬಿಹಾರದಲ್ಲಿ ರೈಲ್ವೆ ಟರ್ಮಿನಲ್‌ಗಳು, ಐಸಿಡಿಗಳು (ಒಳನಾಡಿನ ಕಂಟೈನರ್ ಡಿಪೋಗಳು) ಹಾಗೂ ಕೈಗಾರಿಕಾ ಗೋದಾಮಿನಂತಹ ಮೂಲ ಸೌಕರ್ಯಗಳ ಅಭಿವೃದ್ಧಿಗೆ 1,000 ಕೋಟಿ ರೂ. ಹೂಡಿಕೆ ಮಾಡಲು ಪ್ಲ್ಯಾನ್‌ ಮಾಡಿದ್ದೇವೆ. ಅದಕ್ಕಾಗಿ ಸರ್ಕಾರ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್‌ ಭಾಗವತ್‌

    ಇನ್ನೂ ಬಿಹಾರದ 5 ಪ್ರಮುಖ ನಗರಗಳಲ್ಲಿ ವಿದ್ಯುತ್‌ ಬಳಕೆಯ ಮೇಲ್ವಿಚಾರಣೆಯನ್ನು ಸ್ವಯಂಚಾಲಿತಗೊಳಿಸಲು 28 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ ಮೀಟರ್‌ ಸ್ಥಾಪಿಸಲು ಅದಾನಿ ಸಮೂಹ 2,100 ಕೋಟಿ ರೂ. ಹೂಡಿಕೆ ಮಾಡಿದೆ. ಇದು ತಂತ್ರಜ್ಞಾನ ವಿಭಾಗದಲ್ಲಿ 4,000 ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಪ್ರಣವ್‌ ಅದಾನಿ ತಿಳಿಸಿದರು.

  • ಅದಾನಿ ಬಂಧನಕ್ಕೆ ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ: ಕೇಂದ್ರ

    ಅದಾನಿ ಬಂಧನಕ್ಕೆ ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ: ಕೇಂದ್ರ

    ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಮತ್ತು ಅವರ ಕಾರ್ಯನಿರ್ವಾಹಕರ ವಿರುದ್ಧ ಸಮನ್ಸ್ ನೀಡಲು ಅಥವಾ ಬಂಧನ ವಾರಂಟ್ ನೀಡಲು ಅಮೆರಿಕದಿಂದ (USA) ಭಾರತ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ.

    ವಾರದ ಸುದ್ದಿಗೋಷ್ಠಿಯಲ್ಲಿ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal)  ಪ್ರತಿಕ್ರಿಯಿಸಿ  ಇದು ಖಾಸಗಿ ಸಂಸ್ಥೆ, ವ್ಯಕ್ತಿ ಮತ್ತು ಅಮೆರಿಕ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ವಿಷಯ ಎಂದು ತಿಳಿಸಿದರು. ಇದನ್ನೂ ಓದಿ: ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌


    ಸಮನ್ಸ್ ಅಥವಾ ಬಂಧನ ವಾರಂಟ್ ಸೇವೆಗಾಗಿ ವಿದೇಶಿ ಸರ್ಕಾರದ ಯಾವುದೇ ವಿನಂತಿಯು ಪರಸ್ಪರ ಕಾನೂನು ನೆರವಿನ ಭಾಗವಾಗಿದೆ ಮತ್ತು ಅಂತಹ ವಿನಂತಿಗಳನ್ನು ಸ್ವೀಕರಿಸಿದಾಗ ಅರ್ಹತೆಗಳ ಮೇಲೆ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: 2007ರ ಘಟನೆ ಉಲ್ಲೇಖಿಸಿ ಎಂಜೆಲಾ ಮರ್ಕೆಲ್ ಬಳಿ ಈಗ ಕ್ಷಮೆ ಕೇಳಿದ ಪುಟಿನ್‌

    ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಅಧಿಕಾರಿಗಳ ವಿರುದ್ಧ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.

  • ಅದಾನಿ ತಮ್ಮ ಮೇಲಿನ ಆರೋಪ ಒಪ್ಪಿಕೊಳ್ಳಲ್ಲ, ಕೇಂದ್ರ ಸರ್ಕಾರವೇ ರಕ್ಷಿಸುತ್ತಿದೆ: ರಾಗಾ ಕಿಡಿ

    ಅದಾನಿ ತಮ್ಮ ಮೇಲಿನ ಆರೋಪ ಒಪ್ಪಿಕೊಳ್ಳಲ್ಲ, ಕೇಂದ್ರ ಸರ್ಕಾರವೇ ರಕ್ಷಿಸುತ್ತಿದೆ: ರಾಗಾ ಕಿಡಿ

    ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರು ಎಂದಿಗೂ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳಲ್ಲ. ನ್ಯಾಯಯುತವಾಗಿ ಅವರು ಜೈಲಿನಲ್ಲಿರಬೇಕು, ಆದ್ರೆ ಕೇಂದ್ರ ಸರ್ಕಾರವೇ ಅವರನ್ನ ರಕ್ಷಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ‌ಗಾಂಧಿ (Rahul Gandhi) ಕಿಡಿ ಕಾರಿದ್ದಾರೆ.

    ಉದ್ಯಮಿ ಗೌತಮ್‌ ಅದಾನಿ (Gautam Adani) ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ (ಅಂದಾಜು 2238 ಕೋಟಿ ರೂ.) ಹೆಚ್ಚು ಲಂಚದ (Bribe) ಭರವಸೆ ನೀಡಿದ್ದಾರೆ ಎಂಬ ಆರೋಪವನ್ನು ಅದಾನಿ ಸಮೂಹ ತಳ್ಳಿಹಾಕಿದ ನಂತರ ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

    ಅದಾನಿ ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಾ? ನಿಸ್ಸಂಶಯವಾಗಿ ಅವರು ಆರೋಪಗಳನ್ನು ನಿರಾಕರಿಸುತ್ತಾರೆ. ಹಾಗಾಗಿ ನಾವು ಹೇಳಿದಂತೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ಅನುದಾನ ತಂದು ಸಂಪನ್ಮೂಲ ಹೆಚ್ಚಿಸಿಕೊಳ್ತೇವೆ – ಪರಮೇಶ್ವರ್‌

    ಸಣ್ಣ ಸಣ್ಣ ಆರೋಪದಲ್ಲಿ ನೂರಾರು ಜನರನ್ನು ಬಂಧಿಸಲಾಗುತ್ತಿದೆ. ಆದ್ರೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾವಿರಾರು ಕೋಟಿ ರೂ.ಗಳ ಆರೋಪ ಹೊರಿಸಲ್ಪಟ್ಟಿದೆ. ನ್ಯಾಯಯುತವಾಗಿ ಅವರು ಜೈಲಿನಲ್ಲಿರಬೇಕು, ಆದ್ರೆ ಕೇಂದ್ರ ಸರ್ಕಾರವೇ ಅವರನ್ನು ರಕ್ಷಿಸುತ್ತಿದೆ ಎಂದು ದೂರಿದ್ದಾರೆ.

    ಬುಧವಾರ ಬೆಳಗ್ಗಯಷ್ಟೇ ತಮ್ಮ ವಿರುದ್ಧದ ಆರೋಪಗಳನ್ನು ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ (AGEL) ತಳ್ಳಿಹಾಕಿದೆ. ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಹಣಾಧಿಕಾರಿ ವನೀತ್ ಜೈನ್ ವಿರುದ್ಧ ಯುಎಸ್ ಫಾರಿನ್ ಕರಪ್ಟ್ ಪ್ರಾಕ್ಟೀಸಸ್ ಆಕ್ಟ್ (ಎಫ್‌ಸಿಪಿಎ) ಉಲ್ಲಂಘನೆಯ ಆರೋಪ ಹೊರಿಸಲಾಗಿಲ್ಲ ಎಜಿಇಎಲ್ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಸಿಎಂ ಪತ್ನಿಗೆ ಮತ್ತೊಂದು ಕಾನೂನು ಸಂಕಷ್ಟ – ತವರಿನಿಂದ ಉಡುಗೊರೆಯಾಗಿ ಪಡೆದಿದ್ದ ಭೂಮಿ ಮೇಲೆ ಕೇಸ್‌

    ಇಂಡಿಯಾ ಒಕ್ಕೂಟ ಸಭೆ:
    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿಂದು ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು. ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.