Tag: Gautam

  • ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಜೊತೆ ಕಾಲ ಕಳೆದ ಮಹೇಶ್‌ ಬಾಬು ಪುತ್ರ

    ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಜೊತೆ ಕಾಲ ಕಳೆದ ಮಹೇಶ್‌ ಬಾಬು ಪುತ್ರ

    ತೆಲುಗಿನ ಸ್ಟಾರ್ ಹೀರೋ ಮಹೇಶ್ ಬಾಬು (Mahesh Babu) ಪುತ್ರ ಗೌತಮ್ (Gautam) ಇದೀಗ ಸುದ್ದಿಯಲ್ಲಿದ್ದಾರೆ. ಗೌತಮ್ ಶಾಲೆಗೆ ಮುಗಿದ ಮೇಲೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಮಗನ ಆಸ್ಪತ್ರೆಯ ಭೇಟಿಯ ಬಗ್ಗೆ ಅಸಲಿ ಕಾರಣ ಬಿಚ್ಚಿದ್ದಾರೆ. ಗೌತಮ್ ನಡೆಯ ಬಗ್ಗೆ ನಟಿ ನಮ್ರತಾ ಶಿರೋಡ್ಕರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಲಾ ಪ್ರತಿನಿಧಿಯಾಗಿ ಮೈಸೂರಿಗೆ ದೀಪ ಹಚ್ಚಲು ಬರುತ್ತೇನೆ: ಹಂಸಲೇಖ

    ನಟ ಮಹೇಶ್ ಬಾಬು ಅವರು ತಮ್ಮದೇ ಚಾರಿಟೇಬಲ್ ಫೌಂಡೇಶನ್ (MB Foundation)  ಹೊಂದಿದ್ದಾರೆ. ಎಂಬಿ ಫೌಂಡೇಶನ್ ಎಂಬುದು ಇದರ ಹೆಸರು. ಇದರ ಮೂಲಕ ಅನೇಕರಿಗೆ ನೆರವು ನೀಡುವ ಕೆಲಸ ಮಾಡ್ತಿದ್ದಾರೆ. ರೇನ್‌ಬೋ ಮಕ್ಕಳ ಆಸ್ಪತ್ರೆ ಜೊತೆಗೆ ಈ ಫೌಂಡೇಶನ್ ಕೈಜೋಡಿಸಿದೆ. ಹಾಗಾಗಿ ಗೌತಮ್ ಘಟ್ಟಮನೇನಿ ಅವರು ಈ ಆಸ್ಪತ್ರೆಗಳಿಗೆ (Hospital) ಭೇಟಿ ನೀಡುತ್ತಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಜೊತೆಗೆ ಅವರು ಮಾತನಾಡುತ್ತಾರೆ. ಆ ಮೂಲಕ ಅವರ ಮುಖದಲ್ಲಿ ನಗು ಅರಳಿಸಲು ಪ್ರಯತ್ನಿಸುತ್ತಾರೆ. ಈ ಬಗ್ಗೆ ನಮ್ರತಾ ಶಿರೋಡ್ಕರ್ (Namrata Shirodkar) ಮಗನ (Son) ನಡೆ ಬಗ್ಗೆ ಶ್ಲಾಘಿಸಿದ್ದಾರೆ.

    ಗೌತಮ್ ಎಂಬಿ ಫೌಂಡೇಶನ್‌ನ ಮುಖ್ಯ ಭಾಗ. ಶಾಲೆ ಮುಗಿದ ಬಳಿಕ ಅವನು ಆಸ್ಪತ್ರೆಗೆ ತೆರಳುತ್ತಾನೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಮುಖದಲ್ಲಿ ನಗು ಅರಳಿಸುವ ಸಲುವಾಗಿ ಅವರ ಜೊತೆ ಒಂದಷ್ಟು ಸಮಯ ಕಳೆಯುತ್ತಾನೆ. ಮಕ್ಕಳು ಆದಷ್ಟು ಬೇಗ ಚೇತರಿಸಿಕೊಳ್ಳಲು ಈ ರೀತಿಯಲ್ಲಿ ಸಹಾಯ ಮಾಡುತ್ತಿರುವ ಗೌತಮ್ ಸಾಥ್ ನೀಡುತ್ತಾರೆ. ಈ ಬಗ್ಗೆ ನಟಿ ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಒಟ್ನಲ್ಲಿ ಮಹೇಶ್ ಬಾಬು ಪುತ್ರ ನಡೆ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಮಹೇಶ್ ಬಾಬು ಪುತ್ರಿ ಸಿತಾರಾ (Sitara), ನಿರೂಪಣೆ- ಮಾಡೆಲಿಂಗ್ ಅಂತಾ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಿದ್ದಾರೆ. ಗೌತಮ್ ಸದ್ಯ ಎಜುಕೇಶನ್ ಕಡೆ ಗಮನ ಕೊಡಲಿ ಬಳಿಕ ಚಿತ್ರರಂಗದಲ್ಲಿ ಬೆಳೆಯುವ ಆಸಕ್ತಿ ಇದ್ದರೆ ಬೆಳಯಲಿ ಎಂದು ನಮ್ರತಾ ಈ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್

    ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್

    ಟಾಲಿವುಡ್ ಕ್ವೀನ್ ಕಾಜಲ್ ಅಗರ್ವಾಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತನ್ನ ಮುದ್ದು ಕಂದಮ್ಮನ ಜೊತೆ ಹೃದಯಸ್ಪರ್ಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳು ಹುಟ್ಟುವಾಗಲೇ ಸೆಲೆಬ್ರಿಟಿಗಳಾಗಿ ಹುಟ್ಟುತ್ತಾರೆ. ಅದರಂತೆ ಕಾಜಲ್ ಮಗನ ಮುದ್ದು ಮುಖ ನೋಡಬೇಕು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕಾಜಲ್ ಮಗನ ಜೊತೆ ಆಟವಾಡುವ ಫೋಟೋ ಶೇರ್ ಮಾಡಿದ್ರೂ, ಮುಖವನ್ನು ಮಾತ್ರ ಹ್ಯಾಡ್ ಮಾಡುತ್ತಿದ್ದರು. ಆದರೆ ಇಂದು ‘ಅಮ್ಮಂದಿರ ದಿನ’ವಾಗಿದ್ದರಿಂದ ತಮ್ಮ ಮುದ್ದು ಕಂದಮ್ಮನ ಫೋಟೋ ಜೊತೆಗೆ ಭಾವನ್ಮಾಕ ಸಾಲು ಬರೆದು ಪೋಸ್ಟ್ ಮಾಡಿದ್ದಾರೆ.

    ಕಾಜಲ್ ತನ್ನ ಮಗನಿಗೆ ನೀಲ್ ಎಂದು ಹೆಸರಿಟ್ಟಿದ್ದು, ತನ್ನ ಚಿಕ್ಕ ರಾಜಕುಮಾರನಿಗೆ ಮುದ್ದಾದ ಪತ್ರವನ್ನು ಬರೆದಿದ್ದಾರೆ. ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ ಕಾಜಲ್, ನನ್ನ ಪ್ರೀತಿಯ ನೀಲ್, ನೀನು ನನಗೆ ಯಾವಾಗಲೂ ಎಷ್ಟು ಅಮೂಲ್ಯವಾದವನು ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ನಾನು ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡೆ. ನಿನ್ನ ಪುಟ್ಟ ಕೈಯನ್ನು ನಾನು ಹಿಡಿದುಕೊಂಡಾಗ ನಿನ್ನ ಬೆಚ್ಚಗಿನ ಉಸಿರನ್ನು ನಾನು ಅನುಭವಿಸಿದೆ. ನಿನ್ನ ಸುಂದರವಾದ ಕಣ್ಣುಗಳನ್ನು ನೋಡಿದ ಕ್ಷಣ, ನಾನು ಶಾಶ್ವತವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇದನ್ನೂ ಓದಿ: ಪೂಲ್‌ನಲ್ಲಿ ಪತಿಯ ಜೊತೆ ಹಾಟ್ ಆಗಿ ಕಾಣಿಸಿಕೊಂಡ ಕತ್ರಿನಾ ಕೈಫ್ 

    ನೀನು ನನ್ನ ಮೊದಲ ಮಗು. ಮುಂಬರುವ ವರ್ಷಗಳಲ್ಲಿ, ನಾನು ನಿನಗೆ ಕಲಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಆದರೆ ನೀನು ಈಗಾಗಲೇ ನನಗೆ ಸಾಕಷ್ಟು ಪ್ರಮಾಣದಲ್ಲಿ ಕಲಿಸಿದ್ದೀಯಾ. ತಾಯಿಯಾಗುವುದು ಏನು ಎಂದು ನೀನು ನನಗೆ ಕಲಿಸಿದ್ದೀಯ. ನೀನು ನನಗೆ ನಿಸ್ವಾರ್ಥವಾಗಿರಲು, ಶುದ್ಧ ಪ್ರೀತಿ ಎಲ್ಲವನ್ನು ಕಲಿಸಿದ್ದೀಯ ಎಂದು ಭಾವನ್ಮಾಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ತಾಯಂದಿರ ದಿನ ವಿಶ್ ಮಾಡಿದ್ದು, ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಕಾಜಲ್ ತನ್ನ ಪತಿ ಗೌತಮ್ ಬಗ್ಗೆಯೂ ಭಾವನ್ಮಾಕ ಸಾಲುಗಳನ್ನು ಬರೆದು ಪೊಸ್ಟ್ ಮಾಡಿದ್ದರು. ಗೌತಮ್ ಹೇಗೆ ತನ್ನನ್ನು ನೋಡಿಕೊಳ್ಳುತ್ತಾರೆ. ಅವರು ನನಗೆ ಗೌರವವನ್ನು ಕೊಡುತ್ತಾರೆ ಎಂಬುದನ್ನು ಬರೆದುಕೊಂಡಿದ್ದರು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್

  • ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ನೀರಿಕ್ಷೆಯಲ್ಲಿದ್ದಾರೆ ಕಾಜಲ್ ಅಗರ್ವಾಲ್

    ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ನೀರಿಕ್ಷೆಯಲ್ಲಿದ್ದಾರೆ ಕಾಜಲ್ ಅಗರ್ವಾಲ್

    ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ತಾಯಿ ಆಗುತ್ತಿದ್ದಾರೆ. ಈ ವಿಚಾರವನ್ನು ಅವರ ಪತಿ ಗೌತಮ್ ಕಿಚ್ಲು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಿನ್ನೆಡೆಗೆ ನೋಡುತ್ತಿದ್ದೇನೆ 2022 ಎಂದು ಬರೆದಿರುವ ಗೌತಮ್, ಕಾಜಲ್ ಅವರ ಮುದ್ದಾದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ:  ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ

     

    View this post on Instagram

     

    A post shared by Gautam Kitchlu (@kitchlug)

    ಇತ್ತೀಚೆಗಷ್ಟೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದ ಕಾಜಲ್, ಗೌತಮ್ ಹೊಸ ವರ್ಷದ ಶುಭಾಷಯವನ್ನು ಕೋರಿದ್ದಾರೆ. ಜೊತೆಗೆ ತಾಯಿಯಾಗುತ್ತಿರುವುದನ್ನು ಬಿಂಬಿಸುವ ಹೊಸ ಫೋಟೋವೊಂದನ್ನೂ ಕಾಜಲ್ ಅಗರ್ವಾಲ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕಾಜಲ್ ಹಾಗೂ ಗೌತಮ್ 2020ರ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೌತಮ್ ಉದ್ಯಮಿಯಾಗಿದ್ದಾರೆ. ಕಾಜಲ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2004ರಲ್ಲಿ. ತಮ್ಮ ಅಭಿನಯದ ಮೂಲಕವಾಗಿ ಟಾಲಿವುಡ್‍ನಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾರೆ. ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಕಾಜಲ್ ಅಗರ್ವಾಲ್ ಇದ್ದಾರೆ.

  • ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದ ರಚಿತಾ ಸೋದರಿ

    ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದ ರಚಿತಾ ಸೋದರಿ

    – ಮಾಸ್ಕ್ ಧರಿಸಿ ಲಿಪ್‍ಲಾಕ್

    ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಪ್ರಕರಣ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ ಸೀರಿಯಲ್, ಸಿನಿಮಾ ಶೂಟಿಂಗ್‍ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಕೆಲವು ನಟ-ನಟಿಯರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಈ ಮಧ್ಯೆ ನಟಿ ನಿತ್ಯಾ ರಾಮ್ ಮಾಸ್ಕ್ ಧರಿಸಿ ಪತಿಯೊಂದಿಗೆ ಕಿಸ್ ಮಾಡಿದ್ದಾರೆ.

    ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಪತಿ ಗೌತಮ್ ಜೊತೆ ಮಾಸ್ಕ್ ಧರಿಸಿ ಕಿಸ್ ಮಾಡಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಮಾಸ್ಕ್ ಧರಿಸಿ ಕಿಸ್ ಮಾಡಿದ್ದು, “ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ” ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

    ಅಷ್ಟೇ ಅಲ್ಲದೇ ಆ ಫೋಟೋಗೆ #CoronaEffect #StaySafe #NeverStopRomance ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬಳಸಿದ್ದಾರೆ. ಈ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ. ‘ಮೊದಲು ಸುರಕ್ಷತೆ ಆಮೇಲೆ ಕಿಸ್’, ‘ಕೊರೊನಾ ಗಂಭೀರವಾದ ಸಮಸ್ಯೆ, ತಮಾಷೆಯಲ್ಲ’ ಅಲ್ಲಿ ಕೊರೊನಾ ಇದ್ರೂ ನೀವು ರೊಮ್ಯಾನ್ಸ್ ಮಾಡುವುದು ಬಿಡುತ್ತಿಲ್ಲ’ ಎಂದು ಅನೇಕ ರೀತಿ ಕಮೆಂಟ್ ಮಾಡಿದ್ದಾರೆ.

    https://www.instagram.com/p/B9-vhgoAFNB/

    2019 ಡಿಸೆಂಬರ್‌ನಲ್ಲಿ ನಿತ್ಯ ರಾಮ್ ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ.

    ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ.

    ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು.