Tag: GauriLankesh

  • ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಮಾತನಾಡೋ ಮಂದಿಯ ವಿರುದ್ಧ ದಾಳಿ: ರಾಹುಲ್ ಗಾಂಧಿ

    ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಮಾತನಾಡೋ ಮಂದಿಯ ವಿರುದ್ಧ ದಾಳಿ: ರಾಹುಲ್ ಗಾಂಧಿ

    ನವದೆಹಲಿ: ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ಧಾಂತ ವಿರುದ್ಧ ಮಾತನಾಡುವವರ ಮೇಲೆ ಹಲ್ಲೆ, ದಾಳಿ ಆಗುತ್ತಿದ್ದು, ಅಷ್ಟೇ ಅಲ್ಲದೇ ಅವರ ಹತ್ಯೆ ನಡೆಯುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಗೌರಿ ಲಂಕೇಶ್ ಹತ್ಯೆಯ ಹಿನ್ನೆಲೆಯಲ್ಲಿ ಮಾಧ್ಯಗಳ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಅವರು ತಪ್ಪಿತಸ್ಥರನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದ್ದರೆ ಎಂದರು.

    ಗೌರಿ ಲಂಕೇಶ್ ಕುಟುಂಬದ ಜೊತೆ ಇಡಿ ದೇಶವಿದೆ. ಸತ್ಯವನ್ನು ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

  • ನಂಬಲು ಸಾಧ್ಯವಾಗ್ತಿಲ್ಲ, ರಾತ್ರಿ 7.30ರ ವರೆಗೆ ಆಫೀಸ್‍ನಲ್ಲಿದ್ರು: ಲಂಕೇಶ್ ಪತ್ರಿಕೆಯ ಉದ್ಯೋಗಿ

    ನಂಬಲು ಸಾಧ್ಯವಾಗ್ತಿಲ್ಲ, ರಾತ್ರಿ 7.30ರ ವರೆಗೆ ಆಫೀಸ್‍ನಲ್ಲಿದ್ರು: ಲಂಕೇಶ್ ಪತ್ರಿಕೆಯ ಉದ್ಯೋಗಿ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯನ್ನು ನನಗೆ ನಿಜವಾಗಿ ನಂಬಲು ಸಾಧ್ಯವೇ ಆಗುತ್ತಿಲ್ಲ ಎಂದು ಲಂಕೇಶ್ ಪತ್ರಿಕೆಯ ಸಹೋದ್ಯೋಗಿ ಸತೀಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಂಜೆ ನಾನು ಮೇಡಂ ಜೊತೆಗೆ ನಾನು ಗಾಂಧಿ ಬಜಾರ್ ಆಫೀಸ್ ನಲ್ಲಿದ್ದೆ. ಫೈನಲ್ ಎಡಿಶನ್ ಬಗ್ಗೆ ಮಾತನಾಡಿದ್ವಿ. ಬಳಿಕ ರಾತ್ರಿ 7.30ರ ವೇಳೆಗೆ ನಾನು ಮನೆಗೆ ಹೊರಟೆ ಅವರು ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಹೊರಟರು. ಬಳಿಕ ಏನಾಯ್ತು ಗೊತ್ತಿಲ್ಲ ಎಂದು ತಿಳಿಸಿದರು.

    ಯಾವುದಾದರು ಬೆದರಿಕೆ ಇತ್ತೆ ಎಂದು ಎಂದು ಕೇಳಿದ್ದಕ್ಕೆ, ಆ ರೀತಿಯ ಯಾವುದೇ ಬೆದರಿಕೆ  ಬಗ್ಗೆ ನನ್ನ ಜೊತೆ ಮಾತನಾಡಿರಲಿಲ್ಲ. ನಾನು 1996ರಿಂದ ಗೌರಿ ಲಂಕೇಶ್ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    https://youtu.be/E5KklglYg8o