Tag: Gauribidanuru

  • ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವು, ತಾಯಿ ಗಂಭೀರ

    ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವು, ತಾಯಿ ಗಂಭೀರ

    ಚಿಕ್ಕಬಳ್ಳಾಪುರ: ತೆಂಗಿನ ಮರ (Coconut Tree) ಮುರಿದು ಬಿದ್ದು 3 ವರ್ಷದ ಮಗು ಸಾವನ್ನಪ್ಪಿದ್ದು, ತಾಯಿ ಗಂಭೀರ ಗಾಯಗೊಂಡಿರುವ ಘಟನೆ ಗೌರಿಬಿದನೂರು (Gaurididanur) ತಾಲೂಕಿನ ಹಾಲಗಾನಹಳ್ಳಿಯಲ್ಲಿ (Halaganahalli) ನಡೆದಿದೆ.

    ಪೃಥ್ವಿರಾಜ್(3) ಮೃತ ಮಗು, ಗರ್ಭಿಣಿ ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿವೆ. ಗರ್ಭಿಣಿ ಮೋನಿಕಾ 15 ದಿನಗಳ ಹಿಂದೆ ಹೆರಿಗೆಗಾಗಿ ತವರು ಮನೆ ಹಾಲಗಾನಹಳ್ಳಿಗೆ ಬಂದಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

    ಭಾನುವಾರ (ಫೆ.23) ಮನೆಯ ಮುಂದೆ ಇದ್ದ ತೆಂಗಿನ ಮರ ಮುರಿದು ಬಿದ್ದಿದೆ. ಪರಿಣಾಮ ಮಗು ಸಾವನ್ನಪ್ಪಿದೆ. ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಅಧಿಕಾರದಲ್ಲಿ ತೃಪ್ತಿ ಅನ್ನೋದು ಇರಲ್ಲ: ಟಿ.ಬಿ ಜಯಚಂದ್ರ

    ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸಲಿಂಗ ಕಾಮಕ್ಕಾಗಿ ಯುವಕನಿಗೆ ಫೋನ್ ಮಾಡ್ದ – ಮನೆಯಿಂದ ಹೋದ ಶಿಕ್ಷಕ ಕೊಲೆ

    ಸಲಿಂಗ ಕಾಮಕ್ಕಾಗಿ ಯುವಕನಿಗೆ ಫೋನ್ ಮಾಡ್ದ – ಮನೆಯಿಂದ ಹೋದ ಶಿಕ್ಷಕ ಕೊಲೆ

    ಚಿಕ್ಕಬಳ್ಳಾಪುರ: ಸಲಿಂಗ ಕಾಮತೃಷೆಗೆ ಸರ್ಕಾರಿ ಶಾಲಾ ಶಿಕ್ಷಕ ಕೊಲೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

    42 ವರ್ಷದ ವಿಶ್ವನಾಥ್ ಕೊಲೆಯಾದ ಶಿಕ್ಷಕ. ಆಕಾಶ್, ಮನು, ಮಂಜುನಾಥ್ ಹಾಗೂ ಶ್ರೀಕಾಂತ್ ಆರೋಪಿಗಳು. ಈ ನಾಲ್ವರಲ್ಲಿ ಎ1 ಆರೋಪಿ ಆಕಾಶ್ ಬಿಟ್ಟು ಉಳಿದ ಮೂವರನ್ನ ಗೌರಿಬಿದನೂರು ನಗರ ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.

    ಏನಿದು ಪ್ರಕರಣ?
    ಸರ್ಕಾರಿ ಶಾಲಾ ಶಿಕ್ಷಕ ವಿಶ್ವನಾಥ್ ಜೂನ್ 04 ರಂದು ರಾತ್ರಿ 8 ಗಂಟೆ ಸುಮಾರಿಗೆ ಬೈಕ್ ಪಾರ್ಕ್ ಮಾಡಿ ಬರೋದಾಗಿ ಹೆಂಡತಿಗೆ ಹೇಳಿ ಹೊರ ಹೋಗಿದ್ದು, ರಾತ್ರಿ ಮನೆಗೆ ವಾಪಾಸ್ ಬಂದಿರಲಿಲ್ಲ. ಬೆಳಗ್ಗೆ ಪತ್ನಿ ಗೌರಿಬಿದನೂರು ನಗರ ಪೊಲೀಸರ ಮೊರೆ ಹೋಗಿದ್ರು. ಸಂಜೆ ವೇಳೆಗೆ ವಿಶ್ವನಾಥ್ ಮೃತದೇಹ ಗೌರಿಬಿದನೂರು ನಗರದ ಹಿರೇಬಿದನೂರು ಬಳಿಯ ಬೈಪಾಸ್ ರಸ್ತೆಯ ನರ್ಸಿಂಗ್ ಕಾಲೇಜು ಎದುರುಗಡೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್-ಪ್ರಶ್ನಿಸಿದ ತಾಯಿಯನ್ನ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಸಲಿಂಗಿ ಮಗಳು

    ಸಂಪೂರ್ಣ ಬೆತ್ತಲಾಗಿ ಪ್ಯಾಂಟ್ ನಿಂದ ಕಾಲುಗಳನ್ನ ಕಟ್ಟಿ ಹಾಕಲಾಗಿತ್ತು. ಬಲವಾದ ಆಯುಧದಿಂದ ಹಲ್ಲೆ ಮಾಡಿ ಹೊಡೆದು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದ ಪೊಲೀಸರು ಸದ್ಯ ನಾಲ್ವರನ್ನು ಬಂಧಿಸಿದ್ದಾರೆ. ಮನು ಮಂಜುನಾಥ್ ಹಾಗೂ ಶ್ರೀಕಾಂತ್ ಎಂಬವರನ್ನ ಬಂಧಿಸಿದ್ದು, ಬಂಧಿತರು ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: 190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

    ಕೊಲೆಗೆ ಕಾರಣ ಏನು..?
    ಕೊಲೆಯಾದ ಶಿಕ್ಷಕ ವಿಶ್ವನಾಥ್ ಹಾಗೂ ಕೊಲೆ ಆರೋಪಿತ ಆಕಾಶ್ ಗೆ ಗ್ರಿಂಡರ್ ಅನ್ನೋ ಅಪ್ ಮೂಲಕ ಪರಿಚಯವಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತಂತೆ. ಹಲವು ಬಾರಿ ದೈಹಿಕ ಸಂಪರ್ಕ ಸಹ ಬೆಳೆಸಿದ್ರಂತೆ. ಇದೇ ರೀತಿ ಜೂನ್ 04 ರಂದು ಸಹ ತನ್ನ ಕಾಮತೃಷೆಗೆ ಅಂತ ಶಿಕ್ಷಕ ವಿಶ್ವನಾಥ್ ಫೋನ್ ಮಾಡಿ ಆಕಾಶ್ ಕರೆಸಿಕೊಂಡಿದ್ದಾನೆ. ಇದನ್ನೂ ಓದಿ: ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪ – ಮುಖ್ಯ ಶಿಕ್ಷಕ ಬಂಧನ

    ಈ ವೇಳೆ ಶಿಕ್ಷಕ ವಿಶ್ವನಾಥ್ ಬಳಿ ದುಡ್ಡು ಕೀಳಬೇಕು ಅಂತ ತನ್ನ ಸ್ನೇಹಿತರಾದ ಮಂಜು ಹಾಗೂ ಮನು ಎಂಬವರನ್ನ ಮೊದಲೇ ಪ್ಲಾನ್ ಮಾಡಿ ಆಕಾಶ್ ಕರೆಸಿಕೊಂಡಿದ್ದಾನೆ. ಅವರು ವಿಶ್ವನಾಥ್ ಗೆ ಗೊತ್ತಿಲ್ಲದ ಹಾಗೆ ಬಂದು ಅವಿತು ಕುಳಿತಿದ್ರು. ದೈಹಿಕ ಸಂಪರ್ಕದ ವೇಳೆ ಎಂಟ್ರಿ ಕೊಟ್ಟಿರೋ ಮಂಜು ಹಾಗೂ ಮನು ಹಾಗೂ ಆಕಾಶ್ ಮೂವರು ಸೇರಿ ಶಿಕ್ಷಕ ವಿಶ್ವನಾಥ್ ಮೊಬೈಲ್ ಕಸಿದುಕೊಂಡು ಅನ್‍ಲೈನ್ ಮುಖಾಂತರ ದೊಡ್ಡಬಳ್ಳಾಪುರ ಮೂಲದ ಭಾಸ್ಕರ್ ಎಂಬವರಿಗೆ ಮೊದಲು 1,000 ರೂ. ಅಮೇಲೆ 10,000 ದಂತೆ ಮೂರು ಬಾರಿ ಒಟ್ಟು 31,000 ಹಣ ವರ್ಗಾವಣೆ ಮಾಡಕೊಂಡಿದ್ದಾರೆ. ಇದನ್ನೂ ಓದಿ: ಪಿಪಿಇ ಕಿಟ್ ಕಳಚಿ ಆಸ್ಪತ್ರೆಯ ಶೌಚಾಲಯದಲ್ಲೇ ಸೋಂಕಿತನೊಂದಿಗೆ ಸಲಿಂಗಿ ನರ್ಸ್ ಸೆಕ್ಸ್!

    ಈ ಹಣ ವರ್ಗಾವಣೆಗೆ ಪಾಸ್ ವರ್ಡ್ ಹೇಳಿಲ್ಲ ಅಂತ ವಿಶ್ವನಾಥ್ ಗೆ ಕುಡಿದ ಅಮಲಿನಲ್ಲಿದ್ದ ಮೂವರು ದೊಣ್ಣೆ ಹಾಗೂ ಕೈಗಳಿಂದ ಬಲವಾಗಿ ಹಲ್ಲೆ ಮಾಡಿದ್ದು, ವಿಶ್ವನಾಥ್ ಸಾವನ್ನಪ್ಪಿರುತ್ತಾನೆ. ಈ ಮೂವರ ಜೊತೆಗೆ ಕೊನೆಯಲ್ಲಿ ಶ್ರೀಕಾಂತ್ ಸಹ ಸೇರಿಕೊಂಡಿರುತ್ತಾನೆ. ಸದ್ಯ ಮೂವರನ್ನ ಬಂಧಿಸಿರುವ ಪೊಲೀಸರು ಎ 1 ಆರೋಪಿ ಆಕಾಶ್ ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಸಲಿಂಗ ಮದ್ವೆಯಾದ ಯುವಕನ ವಿರುದ್ಧ ಸಿಡಿದೆದ್ದ ಕೊಡವರು!

  • ಮೇ 3ರವರೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರಿನಲ್ಲಿ ಸೀಲ್‍ಡೌನ್: ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್

    ಮೇ 3ರವರೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರಿನಲ್ಲಿ ಸೀಲ್‍ಡೌನ್: ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ಮೇ 3ರವರೆಗೂ ಚಿಕ್ಕಬಳ್ಳಾಪುರ ನಗರ ಹಾಗೂ ಗೌರಿಬಿದನೂರು ನಗರದಲ್ಲಿ ಸೀಲ್‍ಡೌನ್ ಮುಂದುವರಿಯಲಿದೆ ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಹೇಳಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ಮೊಬೈಲ್ ಸ್ವಾನ್ ಕಲೆಕ್ಷನ್ ಯೂನಿಟ್ ವಾಹನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು, ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆ ನೆರೆಯ ರಾಜ್ಯ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಆಂಧ್ರದ ಹಿಂದೂಪುರ ರೆಡ್ ಝೋನ್ ಪಟ್ಟಿಯಲ್ಲಿದೆ. ಹೀಗಾಗಿ ಮೇ 3 ರವರೆಗೂ ಸಹ ಜಿಲ್ಲೆಯಲ್ಲಿ ಎಂದಿನಂತೆ ಲಾಕ್ ಡೌನ್ ಮುಂದುವರೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.

    ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿನ 523 ಪ್ರಕರಣಗಳಲ್ಲಿ 198 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 325 ಮಂದಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಉಳಿದವರಲ್ಲಿ ಶೇ.90 ರಷ್ಟು ಮಂದಿ ಆರೋಗ್ಯಕರವಾಗಿದ್ದು ಯಾವುದೇ ತೊಂದರೆ ಇಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ. ಹಲವರು ದಾನಿಗಳು ಮುಂದೆ ಪ್ಲಾಸ್ಮಾ ದಾನ ಮಾಡಿದ್ರೂ ಪ್ಲಾಸ್ಮಾ ಥೆರೆಪಿ ಮಾಡೋಕೆ ರೋಗಿಗಳೇ ಇಲ್ಲ ಎಂದರು.

    ಚಿಕ್ಕಬಳ್ಳಾಪುರ ನಗರ ಹಾಗೂ ಗೌರಿಬಿದನೂರು ನಗರ ಸಂಪೂರ್ಣ ಸೀಲ್‍ಡೌನ್ ಹಾಗೆ ಮುಂದುವರೆಯಲಿದೆ. ಸದ್ಯಕ್ಕೆ ಮೊದಲಿನಂತೆ ಕೃಷಿ ಹಾಗೂ ಕೃಷಿಗೆ ಸಂಬಧಿಸಿದಂತಹ ಸರಕು ಸಾಗಣೆ ವಾಹನಗಳ ಒಡಾಟ, ಕೃಷಿ ಸಂಬಂಧಿತ ಮಳಿಗೆಗೆಳನ್ನ ತೆರೆಯಲು ಹಾಗೂ ಕೆಲ ರಸ್ತೆ ಕಾಮಗಾರಿಗಳಷ್ಟೇ ಸಡಲಿಕೆ ಇರಲಿದೆ. ಕೈಗಾರಿಕೆಗಳಿಗೂ ಸಹ ಸದ್ಯಕ್ಕೆ ವಿನಾಯತಿ ಇಲ್ಲ.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18 ಮಂದಿಗೆ ಕೊರೊನಾ ಸೋಂಕು ದೃಢವಾಗಿ, ಇಬ್ಬರು ಮೃತಪಟ್ಟಿದ್ದರು, 16 ಮಂದಿಯಲ್ಲಿ 11 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಆಟೋ ಓಡಿಸೋ ಮೂಲಕ ಬದುಕಿನ ಬಂಡಿ ಕಟ್ಟಿಕೊಂಡ ಆದಿಲಕ್ಷ್ಮಮ್ಮ

    ಆಟೋ ಓಡಿಸೋ ಮೂಲಕ ಬದುಕಿನ ಬಂಡಿ ಕಟ್ಟಿಕೊಂಡ ಆದಿಲಕ್ಷ್ಮಮ್ಮ

    ಚಿಕ್ಕಬಳ್ಳಾಪುರ: ಉದ್ಯೋಗಂ ಪುರುಷ ಲಕ್ಷಣಂ ಅನ್ನೋ ಹಳೆಯ ಗಾದೆ ಮಾತು ಈಗ ಅಕ್ಷರಶಃ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಆಟೋ ಬಸ್, ಲಾರಿಗಳ ಚಾಲನೆಯಲ್ಲಿ ಪುರಷರದ್ದೇ ಪ್ರಾಬಲ್ಯ. ಅಂತದ್ರಲ್ಲಿ ಒರ್ವ ದಿಟ್ಟ ಮಹಿಳೆ ತನ್ನ ಮಕ್ಕಳ ಭವಿಷ್ಯ ಹಾಗೂ ಜೀವನ ನಿರ್ವಹಣೆಗೆ ಆಟೋ ಓಡಿಸುವ ಮೂಲಕ ಬದುಕನ್ನು ಕಟ್ಟಿಕೊಂಡಿರುವ ಧೀರ ಮಹಿಳೆ ಆದಿಲಕ್ಷ್ಮಮ್ಮ.

    ಗಂಡ ಸತ್ತು ಹೋದ ಬಳಿಕ ಆತ್ಮ ಸ್ಥೈರ್ಯ ಕಳೆದುಕೊಳ್ಳುದೇ ಆದಿಲಕ್ಷ್ಮಮ್ಮ ಆಟೋ ಓಡಿಸುವ ಮೂಲಕ ಬದುಕನ್ನು ಕಟ್ಟಿಕೊಂಡಿರುವ ಧೀರ ಮಹಿಳೆ. ಗಂಡ ಸತ್ತ ಬಳಿಕ ಮೂಲೆ ಸೇರದೆ ಆದಿಲಕ್ಷ್ಮಮ್ಮ ನಗರದಲ್ಲಿ ಆಟೋ ಓಡಿಸುವ ಮೂಲಕ ಜಿಲ್ಲೆಯ ಮೊದಲ ಮಹಿಳಾ ಆಟೋ ಚಾಲಕಿ ಎಂದೆನಿಸಿದ್ದಾರೆ.

    ಆದಿಲಕ್ಷ್ಮಮ್ಮ ಜಿಲ್ಲೆಯ ಗೌರಿಬಿದನೂರು ನಗರದ ಅಂಬೇಡ್ಕರ್ ಕಾಲೋನಿಯ ನಿವಾಸಿ. ಇವರ ಪತಿ ಶ್ಯಾಮಪ್ಪ ಐದು ತಿಂಗಳ ಹಿಂದೆ ಅತಿಯಾದ ಕುಡಿತದಿಂದ ಸಾವನ್ನಪ್ಪಿದ್ದರು. ಆದಿಲಕ್ಷಮ್ಮರಿಗೆ 15 ವರ್ಷದ ಶೇಖರ್ ಮತ್ತು 14 ವರ್ಷದ ವಂಶಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಸದ್ಯ ಸರ್ಕಾರಿ ಶಾಲೆಯೊಂದರಲ್ಲಿ ಒರ್ವ 9 ನೇ ತರಗತಿ ಹಾಗೂ ಮತ್ತೊರ್ವ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಳಗ್ಗೆ ಬೇಗನೆ ಎದ್ದು ಮಕ್ಕಳಿಗೆ ಆಡುಗೆ ಮಾಡಿ ಉಣಬಡಿಸಿ, ಮಕ್ಕಳನ್ನ ಶಾಲೆಗೆ ಕಳುಹಿಸಿ ತಾವೂ ಕೂಡ ಯೂನಿಫಾರ್ಮ್ ಧರಿಸಿ ಆಟೋ ಓಡಿಸುವ ಕಾಯಕ್ಕೆ ತೆರಳುತ್ತಾರೆ.

    ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಆಟೋ ಓಡಿಸುವ ಮೂಲಕ ದುಡಿದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಗೌರಿಬಿದನೂರು ನಗರದ ಮಾನಸ ಆಸ್ಪತ್ರೆಯ ಸರ್ಕಲ್ ನ ಆಟೋ ಸ್ಟ್ಯಾಂಡ್ ನಲ್ಲಿ ಆಟೋ ನಿಲ್ಲಿಸೋ ಈ ಆದಿಲಕ್ಷಮ್ಮರಿಗೆ ಬೇರೆ ಆಟೋ ಚಾಲಕರು ಸಹಕಾರ ನೀಡುತ್ತಿದ್ದಾರೆ. ಮೊದಲು ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಆದಿಲಕ್ಷ್ಮಮ್ಮ ಮಕ್ಕಳನ್ನು ಸಾಕುವುದಕ್ಕೆ ಕಷ್ಟ ಆಗ್ತಿತಂತೆ. ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಅಡುಗೆ ಮಾಡಿ ಊಟ ಮಾಡಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.

    ಕಡು ಕಷ್ಟದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಆದಿಲಕ್ಷಮ್ಮ ಮಕ್ಕಳ ಭವಿಷ್ಯಕ್ಕಾಗಿ ದಿಟ್ಟತನದಿಂದ ಬದುಕನ್ನ ಎದುರಿಸುತ್ತಿದ್ದಾರೆ. ಯಾವ ಭಯ, ಅಂಜಿಕೆ, ಅಳುಕು, ಯಾರ ಮುಲಾಜು ಇಲ್ಲದೆ ಆಟೋ ಚಲಾಯಿಸ್ತಿರೋ ಆದಿಲಕ್ಷ್ಮಮ್ಮ ಮಹಿಳಾ ದಿನಾಚರಣೆ ಅಂಗವಾಗಿ ಇತರೆ ಮಹಿಳೆಯರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸೋಣ.