Tag: gauri spratt

  • ಮಾಜಿ ಪತ್ನಿ ಮನೆಗೆ ಗೆಳತಿಯೊಂದಿಗೆ ಬಂದ ಆಮೀರ್ ಖಾನ್

    ಮಾಜಿ ಪತ್ನಿ ಮನೆಗೆ ಗೆಳತಿಯೊಂದಿಗೆ ಬಂದ ಆಮೀರ್ ಖಾನ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ನಿನ್ನೆ (ಏ.27) ಗೆಳತಿ ಗೌರಿಯೊಂದಿಗೆ (Gauri Spratt) ಮಾಜಿ ಪತ್ನಿ ರೀನಾ ದತ್ತಾ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಆಮೀರ್ ಮತ್ತು ಗೆಳತಿ ಗೌರಿ ಭಾನುವಾರದ ವಿಶೇಷವಾಗಿ ಮಾಜಿ ಪತ್ನಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ, ಆಮೀರ್ ಪುತ್ರ ಜುನೈದ್ ಖಾನ್ ಕೂಡ ಜೊತೆಗಿದ್ದಾರೆ. ಆಮೀರ್ ಖಾನ್ ಗೆಳತಿಯನ್ನು ಮಗನ ಮುಂದೆಯೇ ಮೊದಲ ಪತ್ನಿಯ ಮನೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ: ಅಮಾಯಕರ ಹತ್ಯೆಯಿಂದ ಆಘಾತವಾಗಿದೆ ಎಂದ ಆಮೀರ್ ಖಾನ್

     

    View this post on Instagram

     

    A post shared by Viral Bhayani (@viralbhayani)

    ಅಂದಹಾಗೆ, ಆಮೀರ್ ಖಾನ್ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಸಂದರ್ಭದಲ್ಲಿ ಮಾಧ್ಯಮಕ್ಕೆ ಡೇಟಿಂಗ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದರು. ಗೌರಿ ಜೊತೆ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಅವರನ್ನು ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಪರಿಚಿತರು ಎಂದಿದ್ದರು. ಗೌರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತಮ್ಮದೇ ನಿರ್ಮಾಣದ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಆಮೀರ್ ಮಾಹಿತಿ ನೀಡಿದ್ದರು. ಗೌರಿಗೆ 6 ವರ್ಷದ ಮಗನಿದ್ದು, ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಕುಟುಂಬಸ್ಥರನ್ನು ಆಕೆ ಭೇಟಿಯಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಮನೆಯವರಿಗೂ ಖುಷಿಯಿದೆ ಎಂದು ಹಂಚಿಕೊಂಡಿದ್ದರು.

    2021ರಲ್ಲಿ ಕಿರಣ್ ರಾವ್‌ಗೆ ಆಮೀರ್ ಡಿವೋರ್ಸ್ ನೀಡಿದರು. ಇದಕ್ಕೂ ಮುನ್ನ ರೀನಾ ದತ್‌ಗೆ 2002ರಲ್ಲಿ ಡಿವೋರ್ಸ್ ಆಗಿತ್ತು. ಈಗ ಮತ್ತೆ ಹೊಸ ಬಾಳಿಗೆ ಕಾಲಿಡಲು ಆಮೀರ್ ರೆಡಿಯಾಗಿದ್ದಾರೆ.

  • ಫಸ್ಟ್ ಟೈಮ್ ಗರ್ಲ್‌ಫ್ರೆಂಡ್ ಗೌರಿ ಜೊತೆ ಪಬ್ಲಿಕ್‌ನಲ್ಲಿ ಕಾಣಿಸಿಕೊಂಡ ಆಮೀರ್ ಖಾನ್

    ಫಸ್ಟ್ ಟೈಮ್ ಗರ್ಲ್‌ಫ್ರೆಂಡ್ ಗೌರಿ ಜೊತೆ ಪಬ್ಲಿಕ್‌ನಲ್ಲಿ ಕಾಣಿಸಿಕೊಂಡ ಆಮೀರ್ ಖಾನ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ಮೊದಲ ಬಾರಿಗೆ ಗರ್ಲ್‌ಫ್ರೆಂಡ್ ಗೌರಿ‌ ಸ್ಪ್ರಾಟ್ (Gauri Spratt) ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಫಸ್ಟ್ ಟೈಮ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

    ಆಮೀರ್ ಖಾನ್ ತಾವು ಬೆಂಗಳೂರಿನ ಬೆಡಗಿ ಗೌರಿ (Gauri Spratt) ಜೊತೆ ಡೇಟಿಂಗ್ (Dating) ಮಾಡುತ್ತಿರೋದಾಗಿ ಇತ್ತೀಚೆಗೆ ರಿವೀಲ್ ಮಾಡಿದ್ದರು. ಈಗ ಮೊದಲ ಬಾರಿಗೆ ಆಮೀರ್ ಮತ್ತು ಗೌರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಎಕ್ಸೆಲ್ ಆಫೀಸ್‌ನಿಂದ ಹೊರಬರುವಾಗ ಪಾಪರಾಜಿಗಳ ಕ್ಯಾಮೆರಾಗೆ ಆಮೀರ್ ಸ್ಮೈಲ್ ಮಾಡಿದ್ದಾರೆ. ಗರ್ಲ್‌ಫ್ರೆಂಡ್ ಗೌರಿಯನ್ನು ಮೊದಲಿಗೆ ಕಾರಿನಲ್ಲಿ ಕೂರಿಸಿ ಅವರು ತೆರಳಿದ್ದಾರೆ. ಇದನ್ನೂ ಓದಿ:ಮದುವೆಗೆ ಸಜ್ಜಾದ ‘ಬಿಗ್ ಬಾಸ್’ ಖ್ಯಾತಿಯ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ಜೋಡಿ

     

    View this post on Instagram

     

    A post shared by Manav Manglani (@manav.manglani)

    ಅಂದಹಾಗೆ, ಮಾ.14ರಂದು ಆಮೀರ್ ಖಾನ್ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವೇಳೆ, ಮಾಧ್ಯಮದ ಜೊತೆ ಡೇಟಿಂಗ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದರು. ಗೌರಿ ಜೊತೆ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಅವರನ್ನು ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಪರಿಚಿತರು ಎಂದು ಹೇಳಿದ್ದಾರೆ. ಗೌರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತಮ್ಮದೇ ನಿರ್ಮಾಣದ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಆಮೀರ್ ಮಾಹಿತಿಯನ್ನು ಹಂಚಿಕೊಂಡಿದ್ದರು.

    ಗೌರಿಗೆ 6 ವರ್ಷದ ಮಗನಿದ್ದು, ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಕುಟುಂಬಸ್ಥರನ್ನು ಆಕೆ ಭೇಟಿಯಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಮನೆಯವರಿಗೂ ಖುಷಿಯಿದೆ ಎಂದು ನಟ ಹೇಳಿದ್ದರು.

    ಆಮೀರ್ ಗೆಳತಿ ಗೌರಿ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಏನೆಂದರೆ, ಅರ್ಧ ತಮಿಳಿನ ಮತ್ತು ಐರಿಷ್ ಆಗಿದ್ದಾರೆ. ಅವರ ಅಜ್ಜ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದರು.

    2021ರಲ್ಲಿ ಕಿರಣ್ ರಾವ್‌ಗೆ ಆಮೀರ್ ಡಿವೋರ್ಸ್ ನೀಡಿದರು. ಇದಕ್ಕೂ ಮುನ್ನ ರೀನಾ ದತ್‌ಗೆ 2002ರಲ್ಲಿ ಡಿವೋರ್ಸ್ ಆಗಿತ್ತು. ಈಗ ಮತ್ತೆ ಹೊಸ ಬಾಳಿಗೆ ಕಾಲಿಡಲು ಆಮೀರ್ ರೆಡಿಯಾಗಿದ್ದಾರೆ.

  • ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಬೆಂಗಳೂರಿನ ಬೆಡಗಿ ಗೌರಿ ಸ್ಪ್ರಾಟ್‌ (Gauri Spratt) ಜೊತೆ ಎಂಗೇಜ್ ಆಗಿರುವ ಬಗ್ಗೆ ಖಚಿತಪಡಿಸಿದ್ದಾರೆ. ಗೌರಿ ಜೊತೆ 3ನೇ ಮದುವೆಗೆ ಆಮೀರ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ಹುಟ್ಟೂರಿನ ರಥೋತ್ಸವದಲ್ಲಿ ತೇರು ಎಳೆದ ಅರ್ಜುನ್ ಸರ್ಜಾ, ಧ್ರುವ ಸರ್ಜಾ

    ಆಮೀರ್ ಖಾನ್ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ, ಮಾಧ್ಯಮದ ಜೊತೆ ಡೇಟಿಂಗ್ (Dating) ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. ಗೌರಿ ಜೊತೆ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಅವರನ್ನು ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಪರಿಚಿತರು ಎಂದು ಹೇಳಿದ್ದಾರೆ. ಗೌರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತಮ್ಮದೇ ನಿರ್ಮಾಣದ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಆಮೀರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಗೌರಿಗೆ 6 ವರ್ಷದ ಮಗನಿದ್ದು, ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಕುಟುಂಬಸ್ಥರನ್ನು ಆಕೆ ಭೇಟಿಯಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಮನೆಯವರಿಗೂ ಖುಷಿಯಿದೆ ಎಂದು ನಟ ತಿಳಿಸಿದ್ದಾರೆ.

    ತಾವು ನಟಿಸಿರುವ ‘ಲಗಾನ್’ ಮತ್ತು ‘ದಂಗಲ್’ ಸೇರಿದಂತೆ ಕೆಲವು ಚಿತ್ರಗಳನ್ನು ಗೌರಿ ವೀಕ್ಷಿಸಿದ್ದಾರೆ. ಬುಧವಾರ ಆಮೀರ್ ಖಾನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಡಿನ್ನರ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಡಿನ್ನರ್ ವೇಳೆ ಗೌರಿ ಬಗ್ಗೆ ಆಮೀರ್ ಮಾತನಾಡಿದ್ದಾರೆ.

    ಇನ್ನೂ ಆಮೀರ್ ಗೆಳತಿ ಗೌರಿ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಎನೆಂದರೆ, ಅರ್ಧ ತಮಿಳಿನ ಮತ್ತು ಐರಿಷ್ ಆಗಿದ್ದಾರೆ. ಅವರ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

    2021ರಲ್ಲಿ ಕಿರಣ್ ರಾವ್‌ಗೆ (Kiran Rao) ಆಮೀರ್ ಡಿವೋರ್ಸ್ ನೀಡಿದರು. ಇದಕ್ಕೂ ಮುನ್ನ ರೀನಾ ದತ್‌ಗೆ 2002ರಲ್ಲಿ ಡಿವೋರ್ಸ್ ಆಗಿತ್ತು. ಈಗ ಮತ್ತೆ ಹೊಸ ಬಾಳಿಗೆ ಕಾಲಿಡಲು ಆಮೀರ್ ರೆಡಿಯಾಗಿದ್ದಾರೆ.