Tag: Gauri Shinde

  • 5 ವರ್ಷದ ನಂತರ ಮತ್ತೆ ಒಂದಾಗಲಿದ್ದಾರೆ ಈ ಜೋಡಿ!

    5 ವರ್ಷದ ನಂತರ ಮತ್ತೆ ಒಂದಾಗಲಿದ್ದಾರೆ ಈ ಜೋಡಿ!

    ಮುಂಬೈ: 2012ರಲ್ಲಿ ಬಿಡುಗಡೆ ಕಂಡ ಇಂಗ್ಲೀಷ್-ವಿಂಗ್ಲೀಷ್ ಚಿತ್ರ ನ್ಯಾಷನಲ್ ಅಲ್ಲದೇ ಇಂಟರ್‍ನ್ಯಾಷನಲ್‍ನಲ್ಲೂ ಸಾಕಷ್ಟು ಹಿಟ್ ಆಗಿತ್ತು. ಈ ಚಿತ್ರವನ್ನು ಗೌರಿ ಶಿಂಧೆ ನಿರ್ದೇಶಿಸಿದ್ದು, ಶ್ರೀದೇವಿ ನಟಿಸಿದ್ದರು. ಆದರೆ ಈಗ ಈ ಜೋಡಿ ಮತ್ತೆ ಒಂದಾಗಲಿದ್ದಾರೆ.

    ಇಂಗ್ಲೀಷ್-ವಿಂಗ್ಲೀಷ್ ಚಿತ್ರ ತೆರೆ ಮೇಲೆ ಬಂದು 5 ವರ್ಷವಾಗಿದೆ. ಶ್ರೀದೇವಿ ಅವರು ತಮ್ಮ ಹಾಗೂ ಗೌರಿ ಶಿಂಧೆಯಿರುವ ಫೋಟೋವೊಂದ್ದನ್ನು ಹಾಕಿ ಶೀಘ್ರದಲ್ಲೇ ಬರಲಿದ್ದೇವೆ (ಕಮಿಂಗ್ ಸೂನ್) ಎಂದು ಬರೆದಿದ್ದಾರೆ. ವರದಿಯೊಂದರ ಪ್ರಕಾರ ಇದು ಅವರು ಕೊಡುತ್ತಿರುವ ಸುಳಿವು ಎಂದು ಹೇಳಲಾಗಿದೆ.

    ಇತ್ತೀಚಿಗೆ ಶ್ರೀದೇವಿ ಅವರು ನಟಿಸಿರುವ ಮಾಮ್ ಚಿತ್ರ ಸಾಕಷ್ಟು ಯಶಸ್ಸು ಕಂಡಿತ್ತು. ಈಗ ಈ ಜೋಡಿ ಮತ್ತೆ ಒಂದಾದ್ದರೆ ಪ್ರೇಕ್ಷಕರಿಗಾಗಿ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಮೂಡಿ ಬರಲಿದೆ.

    https://twitter.com/SrideviInMom/status/915800531825655808

    https://twitter.com/gauris/status/915803880679763968

    https://twitter.com/gauris/status/916009617716416512