Tag: gauri habba

  • ಗೌರಿಹಬ್ಬಕ್ಕೆ ಮರಿ ಟೈಗರ್ ನಟನೆಯ ಲಂಕಾಸುರ ಸಿನಿಮಾದಿಂದ ಹಾಡಿನ ಗಿಫ್ಟ್

    ಗೌರಿಹಬ್ಬಕ್ಕೆ ಮರಿ ಟೈಗರ್ ನಟನೆಯ ಲಂಕಾಸುರ ಸಿನಿಮಾದಿಂದ ಹಾಡಿನ ಗಿಫ್ಟ್

    ದೇ ಮೊದಲ ಬಾರಿಗೆ ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿ, ನಿರ್ಮಾಣ ಮಾಡುತ್ತಿರುವ ಲಂಕಾಸುರ ಸಿನಿಮಾದ ಹಾಡೊಂದು ರೆಡಿಯಾಗಿದ್ದು, ಈ ಹಾಡನ್ನು ವಿಶೇಷ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. ನಾಡಿನಲ್ಲೆಡೆ ಗೌರಿ – ಗಣೇಶ ಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಟೈಗರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಲಂಕಾಸುರ” ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ.

    ಚೇತನ್ ಕುಮಾರ್ ಬರೆದಿರುವ “ಲಕ್ ಲಕ್ ಲಕ್ಕು ಪದುಮಿ. ಒಂಚುರು ಪ್ಲೀಸು ಟಚುಮಿ” ಎಂಬ ಹಾಡು ಗೌರಿ ಹಬ್ಬದ ಶುಭ ಸಂದರ್ಭ ದಲ್ಲಿ ಬಿಡುಗಡೆಯಾಗುತ್ತಿದೆ. ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಸಹನ ಗೌಡ ನರ್ತಿಸಿರುವ ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇಂದು ನಾಗರಾಜ್ ಇಂಪಾಗಿ ಹಾಡಿದ್ದಾರೆ.  ಈ ಹಿಂದೆ ಬಿಡುಗಡೆಯಾಗಿದ್ದ “ಲಂಕಾಸುರ” ಚಿತ್ರದ ಟೈಟಲ್ ಸಾಂಗ್ ಸಹ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಎರಡನೇ ಹಾಡು ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ನಿಶಾ ವಿನೋದ್ ಪ್ರಭಾಕರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು. ಸುಜ್ಞಾನ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಗೌರಿ ಹಬ್ಬ ಆಚರಣೆ ಯಾಕೆ ಬಂತು?

    ಗೌರಿ ಹಬ್ಬ ಆಚರಣೆ ಯಾಕೆ ಬಂತು?

    ನಾಳೆ ನಾಡಿನಾದ್ಯಂತ ಸ್ವರ್ಣ ಗೌರಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶ ಹಬ್ಬಕ್ಕೂ ಮುನ್ನ ಗೌರಿಯನ್ನು ಯಾಕೆ ಪೂಜಿಸಬೇಕು? ಇದರ ಐತಿಹಾಸಿಕ ಕಥೆಯೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು.

    ಭಾದ್ರಪದ ತೃತಿಯಾದಂದು ಗೌರಿಯನ್ನು ಆಚರಿಸಬೇಕು. ಅಂದರೆ ಆಗಸ್ಟ್ 30(ನಾಳೆ) ಬೆಳಗ್ಗೆ ಪ್ರಾತಃಕಾಲದಲ್ಲಿ ಗೌರಿಯನ್ನು ಆಹ್ವಾನಿಸಿ ಪೂಜಿಸಬೇಕು. ನಂತರ ಹಬ್ಬದುಟ ಮಾಡಲಾಗುತ್ತದೆ. ಚತುರ್ಥಿಯ ದಿನ ಕೂಡ ಗೌರಿಯನ್ನು ಪೂಜಿಸಿಯೇ ವಿನಾಯಕನನ್ನು ಪೂಜೆ ಮಾಡಬೇಕು. ಹೀಗೆ ತೃತೀಯಾ ಹಗೂ ಚೌತಿ ಹೀಗೆ 2 ದಿನವೂ ಪೂಜೆಯನ್ನು ಮಾಡುವುದು ಪ್ರತೀತಿ.

    ಹಿನ್ನೆಲೆ ಏನು..?: ಗೌರಿ ಆಚರಣೆ ಎಂಬುದು ಭಾರತೀಯ ಸಂಸ್ಕೃತಿ ಹಿಂದೂ ಸನಾತನ ಧರ್ಮದಲ್ಲಿ ಸಾಕಷ್ಟು ವಿಶೇಷತೆಗಳಿವೆ. ನಾವು ಆಚರಿಸುವ ಪ್ರತೀ ಹಬ್ಬಗಳಲ್ಲಿಯೂ ಒಂದೊಂದು ವಿಶೇಷತೆ ಇದೆ. ಇದನ್ನೂ ಓದಿ: ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಒಬ್ಬ ಹೆಣ್ಣು ಮಗಳು ತವರಿಗೆ ಬರುವ ಹಬ್ಬವೇ ಗೌರಿ ಹಬ್ಬ. ಹೆಣ್ಣು ತನ್ನ ತವರಿಗೆ ಬಂದಾಗ ಅವಳನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳುವುದು. ಮನೆ ಮಕ್ಕಳೆಲ್ಲ ಒಟ್ಟಿಗೆ ಊಟ ಮಾಡಿ ಸಂಭ್ರಮಿಸುವುದಾಗಿದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಮಗಳನ್ನು ಮದುವೆ ಮಾಡಿಕೊಟ್ಟರೆ ನಂತರ ಅವಳು ತವರಿಗೆ ಬರುವುದು ಮುಂದಿನ ಗೌರಿ ಹಬ್ಬಕ್ಕೆ ಆಗಿತ್ತು.

    ಇತಿಹಾಸ ನೋಡುವುದಾದರೆ ಕೈಲಾಸದಲ್ಲಿರುವ ಭಗವಂತ ಶಿವನ ತಾಯಿ ಗೌರಿ ಇಬ್ಬರು ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಹೀಗೆ ಮಾತನಾಡುತ್ತಿದ್ದಾಗ ಭಗವಂತ, ನಿನ್ನ ಸಾನಿಧ್ಯದಲ್ಲಿ ನನಗೆ ಬಹಳ ತೃಪ್ತಿ ಇದೆ. ನನಗೆ ಬೇಕಾದ ಎಲ್ಲವನ್ನೂ ದಯಪಾಲಿಸಿದ್ದಿ. ಜೊತೆಗೆ ಒಂದು ಸಾಮ್ರಾಜ್ಯವನ್ನೇ ನನಗಾಗಿ ಕಟ್ಟಿದ್ದೀಯಾ. ಇಷ್ಟೆಲ್ಲಾ ಇದ್ದರೂ ಒಮ್ಮೆ ನನ್ನ ತವರಿನ ಜನರನ್ನು ನೋಡಬೇಕು ಎಂಬ ಆಸೆ ಉಂಟಾಗಿದೆ ಎಂಬ ಅಭಿಪ್ರಾಯ ಮಂಡಿಸಿದ್ದಾಳೆ.

    ಆಗ ಶಿವ, ನಿನಗೆ ಇಲ್ಲಿ ಏನು ಕಡಿಮೆ ಆಗಿದೆ. ಇಲ್ಲಿ ಎಲ್ಲವೂ ನಿನ್ನದೇ ರಾಜ್ಯ. ನಿನ್ನ ಮಾತಿನಂತೆಯೇ ನಡೆಯುತ್ತಿದೆ. ಇಷ್ಟೆಲ್ಲಾ ಇರುವಾಗ ನೀನು ಇಲ್ಲಿಂದ ತವರಿಗೆ ಯಾಕೆ ಹೋಗಬೇಕು. ಬೇಕಿದ್ರೆ ನಿನ್ನ ತವರು ಮನೆಯವರನ್ನೇ ಇಲ್ಲಿಗೆ ಕರೆಸುತ್ತೇನೆ ಎಂದು ಹೇಳುತ್ತಾನೆ. ಇದನ್ನೂ ಓದಿ: ಆಪಲ್‌ನಿಂದಲೂ ಮಾಡ್ಬೋದು ಹಲ್ವಾ

    ಆಗ ಗೌರಿ, ಹಾಗಲ್ಲ ನಾನು ನನ್ನ ತವರಿಗೆ ತೆರಳಿ ಅಲ್ಲಿ ನನ್ನ ಬಾಲ್ಯ ದಿನಗಳನ್ನು ತವರಿನಲ್ಲಿರುವವರ ಜೊತೆ ಹಂಚಿಕೊಳ್ಳಬೇಕು. ಆಗ ನನಗೆ ಸಂತೋಷ ಎಂದು ಹೇಳುತ್ತಾಳೆ. ಆಗ ಶಿವ, ಎಷ್ಟು ದಿನಕ್ಕೆ ತವರಿಗೆ ಹೋಗ್ತಿಯಾ.. ಒಂದು ವೇಳೆ ಹೀಗೆ ಹೋದವಳು ಬರುವುದು ತಡವಾದರೆ ಎಂದು ಪ್ರಶ್ನಿಸುತ್ತಾನೆ. ಈ ವೇಳೆ ಗೌರಿ, ಇಲ್ಲ ಭಾದ್ರಪದ ಮಾಸದಲ್ಲಿ ಇಂತಹ ಒಂದು ದಿನ ನಾನು ನನ್ನ ತವರಿಗೆ ಹೋಗಿ ಬರುವುದಾಗಿ ಶಿವನ ಮುಂದೆ ಬೇಡಿಕೆ ಇಡುತ್ತಾಳೆ. ಹೀಗೆ ತಾಯಿ ತವರಿಗೆ ಬರುತ್ತಾಳೆ. ಇದೇ ದಿನವನ್ನು ನಾವಿಂದು ಸ್ವರ್ಣ ಗೌರಿ ಹಬ್ಬ ಎಂದು ಆಚರಿಸುತ್ತೇವೆ.

    Live Tv
    [brid partner=56869869 player=32851 video=960834 autoplay=true]

  • ಶಾಸಕ ಪ್ರೀತಂಗೌಡ ಭರ್ಜರಿ ಗಿಫ್ಟ್ – ಗೌರಿ ಹಬ್ಬಕ್ಕೆ ಸೀರೆ, ಬಳೆ, ಕುಂಕುಮ ಭಾಗ್ಯ

    ಶಾಸಕ ಪ್ರೀತಂಗೌಡ ಭರ್ಜರಿ ಗಿಫ್ಟ್ – ಗೌರಿ ಹಬ್ಬಕ್ಕೆ ಸೀರೆ, ಬಳೆ, ಕುಂಕುಮ ಭಾಗ್ಯ

    ಹಾಸನ: ಗೌರಿ ಹಬ್ಬಕ್ಕೆ ಶಾಸಕ ಪ್ರೀತಂ ಗೌಡ ಅವರು ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ.

    ಗೌರಿ ಹಬ್ಬಕ್ಕೆ ಮಹಿಳೆಯರಿಗೆ ಸೀರೆ, ಬಳೆ, ಕುಂಕುಮ ಭಾಗ್ಯ ಸಿಕ್ಕಂತಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದ ಮಹಿಳೆಯರಿಗೆ ಕಾರ್ಯಕರ್ತರ ಮೂಲಕ ಸೀರೆ ನೀಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಮನೆಯಲ್ಲಿರುವ ಮಹಿಳೆಯರಿಗೆಲ್ಲ ಸೀರೆ, ಕುಂಕುಮ, ಬಳೆ ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನಾನು ಕಮಿಷನ್ ಪಡೆದಿದ್ರೆ ಕಾನೂನು ಹೋರಾಟ ಮಾಡ್ಲಿ, ಸಿದ್ದರಾಮಯ್ಯ ಬಳಿ ಯಾಕೆ ಹೋಗ್ಬೇಕು- ಮುನಿರತ್ನ ಪ್ರಶ್ನೆ

    ಗೌರಿ ಹಬ್ಬಕ್ಕೆ ಮಹಿಳೆಯರಿಗೆ ಬಾಗೀನ ಹೆಸರಿನಲ್ಲಿ ಸೀರೆ ಹಂಚಿಕೆ ಮಾಡಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸುಮಾರು 75 ಸಾವಿರಕ್ಕೂ ಹೆಚ್ಚು ಸೀರೆ ಹಂಚುತ್ತಿದ್ದಾರೆ. ಹಾಸನದ ವಾರ್ಡ್‍ಗಳು, ಹಳ್ಳಿ, ಹಳ್ಳಿಗೆ ತೆರಳಿ ಮನೆ ಮನೆಗೆ ಸೀರೆ ವಿತರಿಸುತ್ತಿದ್ದಾರೆ. ಸೀರೆಯ ಕವರ್ ಮೇಲೆ ಶಾಸಕ ಪ್ರೀತಂಗೌಡ ಫೋಟೋ ಅಂಟಿಸಿ ಬಾಗೀನ ಹಂಚುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]