Tag: Gauramma

  • ಹರಕೆ ಹೊತ್ತ ನಂತರ ಡಿಕೆಶಿ ಹುಟ್ಟಿದ್ದು : ಅಮ್ಮನ ಭಾವುಕ ಮಾತು

    ಹರಕೆ ಹೊತ್ತ ನಂತರ ಡಿಕೆಶಿ ಹುಟ್ಟಿದ್ದು : ಅಮ್ಮನ ಭಾವುಕ ಮಾತು

    ಜೀ ಕನ್ನಡ ವಾಹಿನಿಯ ಪ್ರಸಿದ್ಧ ಟಾಕ್ ಶೋ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar). ಭಾನುವಾರ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಡಿಕೆಸಿ ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ತಾಯಿ, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿರುವ ಡಿಕೆಶಿ ತಾಯಿ ಗೌರಮ್ಮ (Gauramma), ತಮ್ಮ ಮಗನ ಹುಟ್ಟಿನ ಬಗ್ಗೆ ಮಾತನಾಡಿದ್ದಾರೆ. ‘ನನಗೆ ಎರಡು ವರ್ಷ ಮಕ್ಕಳೇ ಇರಲಿಲ್ಲ. ನಾನು ದೇವರಲ್ಲಿ ಹರಕೆ ಹೊತ್ತೆ. ಹರಕೆ ಮಾಡಿದ  ನಂತರ ಶಿವಕುಮಾರ್ ಹುಟ್ಟಿದ. ಮಗ ಮನೆಗೆ ಬಂದ ಖುಷಿ ಹೇಳೋಕೆ ಆಗಲ್ಲ’ ಎಂದು ಭಾವುಕರಾಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಮಗನ ಬಗ್ಗೆ ಮತ್ತಷ್ಟು ಹೆಮ್ಮೆಯ ಮಾತುಗಳನ್ನೂ ಅವರು ಆಡಿದ್ದಾರೆ.

    ನಟ ರಮೇಶ್ ಅರವಿಂದ್ (Ramesh Aravind) ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್ ಮೇಲೆ ಕೂರಿಸಿಕೊಂಡು ಅವರ ಕಥೆ ಕೇಳಿದ್ದಾರೆ. ಡಿಕೆಶಿ ಕಥೆಯನ್ನು ಆಪ್ತರಿಂದ ಹೇಳಿಸಿದ್ದಾರೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್ ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಅವರ ಸಾಲಿಗೆ ಡಿ.ಕೆ ಶಿವಕುಮಾರ್ ಸೇರಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.

     

    ಈ ವಾರಾಂತ್ಯದಲ್ಲಿ ಡಿಕೆಶಿ ಅವರ ಎಪಿಸೋಡ್ ಅನ್ನು ಪ್ರಸಾರ ಮಾಡಲಾಗುತ್ತದೆ ಎಂಬ ಮಾಹಿತಿ ಇದ್ದು, ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಡಿಕೆಶಿ ಕಂತುಗಳನ್ನು ನೋಡಬಹುದಾಗಿದೆ. ಒಟ್ನಲ್ಲಿ ಡಿಕೆಶಿ ಅವರ ರಾಜಕೀಯ ಸಾಧನೆಯ ಕಥೆ ಕೇಳೋದ್ದಕ್ಕೆ ಡಿಕೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • CBI ರೇಡ್ ಹಿನ್ನೆಲೆ- ಗೇಟ್‍ಗೆ ಬೀಗ ಹಾಕಿ ಮನೆಯಲ್ಲಿ ಕುಳಿತ ಡಿಕೆಶಿ ತಾಯಿ ಗೌರಮ್ಮ

    CBI ರೇಡ್ ಹಿನ್ನೆಲೆ- ಗೇಟ್‍ಗೆ ಬೀಗ ಹಾಕಿ ಮನೆಯಲ್ಲಿ ಕುಳಿತ ಡಿಕೆಶಿ ತಾಯಿ ಗೌರಮ್ಮ

    ರಾಮನಗರ: ಕೇಂದ್ರಿಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು ಗೇಟ್‍ಗೆ ಬೀಗ ಹಾಕಿ ಮನೆಯಲ್ಲಿ ಕುಳಿತಿದ್ದಾರೆ.

    ಡಿಕೆಶಿ ಕನಕಪುರ ಮನೆ ಮೇಲೆ ಬುಧವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಡಿಕೆಶಿಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿರುವ ಮನೆಯ ಗೇಟ್‍ಗೆ ಬೀಗ ಜಡಿಯಲಾಗಿದೆ. ಗೇಟ್ ಗೆ ಬೀಗ ಹಾಕಿ ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಡಿಕೆಶಿ ತಾಯಿ ಗೌರಮ್ಮ ಕುಳಿತಿದ್ದಾರೆ. ಇತ್ತ ಡಿಕೆಶಿಯವರು, ನನಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಸಿಬಿಐ ದಾಳಿ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಏನ್ಮಾಡ್ತಿರಾ ಯಾರ ಮೇಲೆ ಪ್ರೀತಿ ಇರುತ್ತಾ ಅವರ ಮನೆ ದಾಳಿ ಮಾಡುತ್ತಾರೆ. ನಾನು ಈ ಕೆಲಸದಲ್ಲಿದ್ದಿನಿ. ಅವರು ಅಲ್ಲಿ ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ತಾಯಿಗೆ ವಯಸ್ಸಾಗಿದೆ, ಮರೆವು ಜಾಸ್ತಿ ಆಗಿದೆ: ಡಿಕೆ ಶಿವಕುಮಾರ್

    ಜಮೀನು ನೋಡಿದರೆ, ಮನೆ ನೋಡಿದ್ದಾರೆ. ಅಧಿಕಾರಿಗಳು ಏನೇನೂ ಮಾಡಿದ್ದಾರೋ ಗೊತ್ತಿಲ್ಲ. ನನ್ನ ತಾಯಿಗೆ ವಯಸ್ಸಾಗಿದೆ. ಮರೆವು ಜಾಸ್ತಿ ಆಗಿದೆ. ಸಿಬಿಐ ಅಂದಕೂಡಲೇ ನಮ್ಮ ಜನ ಗಡಗಡ ಅಂತಾರೆ. ನಾವು ಗಡಗಡ ಅಂತೀವಿ. ಹೀಗಾಗಿ ಅಲ್ಲಿ ಏನಾಗಿದೆ ಅಂತಾ ಯಾರಿಗೂ ಗೊತ್ತಾಗಿಲ್ಲ ಎಂದು ಹೇಳಿದರು.

    ಸಿಬಿಐ ದಾಳಿ: 5 ವರ್ಷದಲ್ಲಿ 75 ಕೋಟಿಗೂ ಅಧಿಕ ಆಸ್ತಿಗಳಿಸಿರುವ ಸಂಬಂಧ ಡಿಕೆಶಿ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ತನ್ನ ಮೇಲಿನ ಪ್ರಕರಣವನ್ನು ರದ್ದು ಮಾಡುವಂತೆ ಡಿಕೆ ಶಿವಕುಮಾರ್ ಹೈಕೋರ್ಟ್‍ಮೇಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದಾರೆ.

    ಸಿಬಿಐ ಪರ ವಕೀಲರು ಹೆಚ್ಚುವರಿ ಆಕ್ಷೇಪಣೆಗೆ ಕಾಲಾವಧಿ ಕೇಳಿದ ಅರ್ಜಿ ಸಲ್ಲಿಸಿದ್ದರು. ನಂತರ ಆಸ್ತಿ ಮೌಲ್ಯಮಾಪನ ಮಾಡಿ ಹೆಚ್ಚಿನ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಸಿಪಿಡಬ್ಲ್ಯೂಡಿ ಅಧಿಕಾರಿಗಳ ಜೊತೆ ತೆರಳಿ ಮೌಲ್ಯಮಾಪನ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಡಿ ಹಳ್ಳಿ ನಿವಾಸದಲ್ಲಿ ಡಿಕೆಶಿ ತಾಯಿ ವಿಚಾರಣೆ

    ಕೋಡಿ ಹಳ್ಳಿ ನಿವಾಸದಲ್ಲಿ ಡಿಕೆಶಿ ತಾಯಿ ವಿಚಾರಣೆ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಡಿಕೆ ಬ್ರದರ್ಸ್‍ಗೆ ಶಾಕ್ ನೀಡಿರುವ ಸಿಬಿಐ ಅಧಿಕಾರಿಗಳು ಇದೀಗ ಕನಕಪುರ ಬಂಡೆ ತಾಯಿಯನ್ನು ವಿಚಾರಣೆ ನಡೆಸಿದ್ದಾರೆ.

    ಕೋಡಿಹಳಿಯಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಹಾಗೂ ಡಿಕೆಶಿ ತಾಯಿ ಗೌರಮ್ಮ ಎದುಬದುರಾಗಿ ಕುಳೀತುಕೊಂಡು ವಿಚಾರಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಗೌರಮ್ಮ ಉತ್ತರಿಸಿದ್ದಾರೆ. ಕೊಡಿಹಳ್ಳಿಯ ನಿವಾಸದ ಮುಂದೆ ಕಾರ್ಯಕರ್ತರು ಜಮಾಯಿಸಿದ್ದಾರೆ.

    ಬೆಳಗ್ಗೆ 6 ಗಂಟೆ ಸುಮಾರಿಗೆ ದೊಡ್ಡ ಆಲಹಳ್ಳಿಯ ಡಿಕೆಶಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಸತತ 6 ಗಂಟೆಗಳ ಕಾಲ ದಾಳಿ ಮಾಡಿರುವ ಅಧಿಕಾರಿಗಳು ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಚಾರಣೆ ಮುಕ್ತಾಯವಾಗಿದೆ. ಸಿಬಿಐ ಅಧಿಕಾರಿಗಳ ದಾಳಿ ವೇಳೆ ಡಿಕೆ ತಾಯಿಯ ಕಾರು ಡ್ರೈವರ್ ಉಮೇಶ್ ಮಾತ್ರ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮಗಳ ಐಶ್ವರ್ಯವೇ ಮುಳುವಾಗುತ್ತಾ..?

    ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಗೌರಮ್ಮ, ನನ್ನ ನನ್ನ ಮಗನನ್ನ ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ. ಅದಕ್ಕಾಗಿಯೇ ಪದೇ ಪದೇ ನಮ್ಮ ಮಗನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದರು.  ಇದನ್ನೂ ಓದಿ: ಟ್ರಬಲ್ ಶೂಟರ್ ಇಂದು ಸಿಬಿಐಗೆ ಲಾಕ್ ಆಗಿದ್ದು ಹೇಗೆ?

    ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ ಸುಮ್ಮನೆ ತಿರುಗುತ್ತಾರೆ. ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಸಾಕು ಎಂದು ಹೇಳಿದ್ದರು. ಇದನ್ನೂ ಓದಿ: ಮನೆಯ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ – ಸಿಬಿಐ ದಾಳಿಗೆ ಡಿಕೆಶಿ ತಾಯಿ ಗರಂ

  • ಮನೆಯ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ – ಸಿಬಿಐ ದಾಳಿಗೆ ಡಿಕೆಶಿ ತಾಯಿ ಗರಂ

    ಮನೆಯ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ – ಸಿಬಿಐ ದಾಳಿಗೆ ಡಿಕೆಶಿ ತಾಯಿ ಗರಂ

    – ನನ್ನ ಮಗನನ್ನು ಕಂಡ್ರೆ ಅಧಿಕಾರಿಗಳಿಗೆ ಪ್ರೀತಿ

    ರಾಮನಗರ: ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ಕೂಡ ತೆಗೆದುಕೊಂಡು ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹೇಳಿದ್ದಾರೆ.

    ಮಗನ ಮನೆ ಮೇಲೆ ಸಿಬಿಐ ದಾಳಿ ಕುರಿತು ಕೋಡಿಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನನ್ನ ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ. ಅದಕ್ಕಾಗಿಯೇ ಪದೇ ಪದೇ ನಮ್ಮ ಮಗನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

    ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ ಸುಮ್ಮನೆ ತಿರುಗುತ್ತಾರೆ. ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಸಾಕು ಎಂದು ಹೇಳಿದರು.

    ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಇಂದು ಐವರು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಇಂದು ಬೆಳಗ್ಗೆ 8 ಗಂಟೆಗೆ ಸಿಬಿಐ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದು, ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಡಿಕೆಶಿಗೆ ಸೇರಿದ ಹಲವು ಕಡೆಗಳಲ್ಲಿ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಡಿಕೆಶಿ ಮನೆಯಲ್ಲಿದ್ದ 50 ಲಕ್ಷ ಹಣ ಸೀಜ್?

    ಕಳೆದ ವರ್ಷ ಸೆಪ್ಟೆಂಬರ್ 3ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಡಿಕೆಶಿ ಜೈಲು ಸೇರಿದ್ದರು. ಇದೀಗ ಒಂದು ವರ್ಷ ಕಳೆಯುವ ಬೆನ್ನಲ್ಲೇ ಮತ್ತೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಎಫ್‍ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮನೆಯ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ.

  • ಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು – ಬೆಂಗ್ಳೂರಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ

    ಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು – ಬೆಂಗ್ಳೂರಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ

    ಬೆಂಗಳೂರು: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿ.ಕೆ.ಶಿವಕುಮಾರ್ ತಾಯಿ ಹಾಗೂ ಪತ್ನಿಗೆ ಸಮನ್ಸ್ ನೀಡಿತ್ತು. ಆದರೆ ವಿಚಾರಣೆಗೆ ಅತ್ತೆ ಗೈರಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಇಡಿ ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದ್ದು, ಅನಾರೋಗ್ಯದ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ.

    ಇಂದು ವಿಚಾರಣೆಗೆ ಹಾಜರಾಗುವಂತೆ ಗೌರಮ್ಮಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಅನಾರೋಗ್ಯ ಹಿನ್ನೆಲೆ ದೆಹಲಿಗೆ ಆಗಮಿಸಲು ಸಾಧ್ಯವಿಲ್ಲ ಎಂದು ಗೌರಮ್ಮ ಅವರು ಸಮನ್ಸ್ ಗೆ ಉತ್ತರ ನೀಡಿದ್ದಾರೆ. ಅಲ್ಲದೆ, ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್ ಪತ್ನಿಯಿಂದಲೂ ಇದೇ ರೀತಿ ಮನವಿ ಮಾಡಲಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಅಕ್ಟೋಬರ್ 17ಕ್ಕೆ ವಿಚಾರಣೆಗೆ ಹಾಜರಾಗುವಂತೆ ಉಷಾ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇದೀಗ ಸಮನ್ಸ್ ಗೆ ಗೌರಮ್ಮ ಹಾಗೂ ಉಷಾ ಅವರು ಉತ್ತರಿಸಿದ್ದು, ಈ ಕುರಿತು ಇಡಿ ಅಧಿಕಾರಿಗಳು ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    ಅಕ್ರಮ ಹಣ ವರ್ಗಾವಣೆ ಪ್ರರಕಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮತ್ತಷ್ಟು ವಿಚಾರಣೆಗೆ ನಡೆಸಿರುವ ಇಡಿ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

    ಡಿಕೆ ಶಿವಕುಮಾರ್ ಅವರ ಕುಟುಂಬವನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಇಡಿ ಅಧಿಕಾರಿಗಳು ನಾಳೆಯೇ ವಿಚಾರಣೆ ಹಾಜರಾಗುವಂತೆ ಸೋಮವಾರ ತಾಯಿ ಗೌರಮ್ಮ ಅವರಿಗೆ ಸೂಚಿಸಿದ್ದರು. ಉಷಾ ಅವರಿಗೆ ನೀಡಲಾಗಿರುವ ನೋಟಿಸ್‍ನಲ್ಲಿ ಗುರುವಾರ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಕುಟುಂಬ ಸದಸ್ಯರ ನಡುವೆ ನಡೆದಿರುವ ಹಣದ ವ್ಯವಹಾರವೇ ಕಾರಣ ಎನ್ನಲಾಗಿದ್ದು, ತಾಯಿ-ಮಗನಿಗೆ, ಮಗ-ತಾಯಿಗೆ, ಪತಿ-ಪತ್ನಿಗೆ, ಮಾವನಿಂದ ಸೊಸೆಗೆ ಸಾಲದ ವ್ಯವಹಾರ ನಡೆದಿರುವ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಜ್ಜಿ-ಮೊಮ್ಮಗಳ ವ್ಯವಹಾರ: ಡಿಕೆಶಿ ಕುಟುಂಬದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರ ಬಗ್ಗೆ ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಡಿಕೆಶಿ ತಾಯಿ ಗೌರಮ್ಮ ಅವರು ಮೊಮ್ಮಗಳ ನಡುವೆ ಕೋಟಿ ರೂ. ವ್ಯವಹಾರ ನಡೆದಿದೆ. ಮೊದಲಿಗೆ ಮೊಮ್ಮಗಳು ಐಶ್ವರ್ಯ ಅವರ ಖಾತೆಗೆ 2018 ಜೂನ್ ತಿಂಗಳಿನಲ್ಲಿ ಅಜ್ಜಿ ಗೌರಮ್ಮ ಅವರು 3 ಕೋಟಿ ರೂ.ಗಳನ್ನು ಜಮೆ ಮಾಡಿದ್ದಾರೆ. ಅಲ್ಲದೇ ಐಶ್ವರ್ಯಾ ಹೆಸರಿಗೆ 2001 ರಲ್ಲಿ ಉತ್ತರಹಳ್ಳಿಯಲ್ಲಿದ್ದ 3 ಎಕ್ರೆ ಭೂಮಿಯನ್ನು ಗಿಫ್ಟ್ ನೀಡಿ ಬರೆದುಕೊಟ್ಟಿದ್ದರು. ಆ ಬಳಿಕ 2002ರಲ್ಲಿ ಹೊಸಕೆರೆಹಳ್ಳಿಯ 3 ಎಕರೆ ಭೂಮಿಯನ್ನು ಗಿಫ್ಟ್ ನೀಡಿದ್ದರು. ಇದರ ನಡುವೆಯೇ ಐಶ್ವರ್ಯಾಗೆ ಮೂರು ನಿವೇಶನಗಳನ್ನು ಗೌರಮ್ಮ ನೀಡಿದ್ದರು. ಒಟ್ಟು 193 ಕೋಟಿ ರೂ.ಗಳನ್ನು ಐಶ್ವರ್ಯಾ ಅವರ ಖಾತೆಗೆ ಜಮೆ ಮಾಡಿದ್ದರು.

    ಅಮ್ಮ-ಮಕ್ಕಳ ನಡುವಿನ ವ್ಯವಹಾರ: ಮೊಮ್ಮಗಳಿಗೆ ಭೂಮಿ ಹಾಗೂ ಹಣವನ್ನು ನೀಡಿದ್ದ ಗೌರಮ್ಮ ಅವರು ಪುತ್ರ ಡಿಕೆ ಶಿವಕುಮಾರ್ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ರೂ. ಹಾಗೂ 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಮತ್ತೆ ಡಿಕೆಶಿ ಅವರಿಗೆ 35 ಲಕ್ಷ ರೂ. ಗಳನ್ನು ಗೌರಮ್ಮ ಸಾಲ ನೀಡಿದ್ದಾರೆ. ಅಲ್ಲದೇ ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ರಿಂದ ಗೌರಮ್ಮ ಅವರಿಗೆ 4.89 ಕೋಟಿ ರೂ. ಸಾಲ ನೀಡಲಾಗಿದೆ.

    ಬೇನಾಮಿ ಆಸ್ತಿ ತನಿಖೆ: ಕುಟುಂಬದ ಸದಸ್ಯರ ನಡುವೆಯೇ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿದೆ. ಅಲ್ಲದೇ ಇಡಿ ಅಧಿಕಾರಿಗಳಿಗೆ ಗೌರಮ್ಮರ ಹೆಸರಲ್ಲಿ 273 ಕೋಟಿ ರೂ. ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ, ಡಿಕೆ ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋ. ರೂ. ಸಾಲ ವ್ಯವಹಾರ ನಡೆದಿದೆ. 2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ ರೂ. ಗಳಿಗೆ 4.9 ಗುಂಟೆ ಜಮೀನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಆದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿಗೆ.

    ಡಿಕೆಶಿ ಪತ್ನಿಗೆ ಸಮನ್ಸ್ ಯಾಕೆ?
    ಮೊಮ್ಮಗಳು ಹಾಗೂ ಇಬ್ಬರ ಪುತ್ರರ ನಡುವೆ ತಾಯಿ ಗೌರಮ್ಮ ಅವರು ನಡೆಸಿರುವ ವ್ಯವಹಾರದಂತೆಯೇ ಡಿಕೆಶಿ ಪತ್ನಿ ಉಷಾ ಅವರ ಹೆಸರಿನಲ್ಲೂ ಹಣದ ವ್ಯವಹಾರ ನಡೆದಿದೆ. ಪತಿ ಡಿಕೆ ಶಿವಕುಮಾರ್ ಅವರಿಗೆ ಪತ್ನಿ ಉಷಾ ಅವರು 2.60 ಕೋಟಿ ರೂ. ಸಾಲ ನೀಡಿದ್ದಾರೆ. ಮಾವ ಕೆಂಪೇಗೌಡರಿಂದ 5.42 ಕೋಟಿ ರೂ. ಹಾಗೂ ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ.

    ಉಳಿದಂತೆ ಪುತ್ರಿ ಐಶ್ವರ್ಯಾ ಅವರಿಗೆ 2.70 ಕೋಟಿ ರೂ. ಹಾಗೂ ಪತಿಯ ಸಹೋದರ ಡಿಕೆ ಸುರೇಶ್‍ಗೆ 11 ಕೋಟಿ ಸಾಲ ನೀಡಿದ್ದಾರೆ. ಅಲ್ಲದೇ 13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಯನ್ನು ಉಷಾ ಅವರು ಮಾಡಿದ್ದು, ಶ್ರೀರಾಮ್ ಪ್ರಾಪರ್ಟೀಸ್‍ನಿಂದ ದಾಖಲೆ ಇಲ್ಲದ 5 ಕೋಟಿ ರೂ. ಹಣವನ್ನು ಸ್ವೀಕಾರ ಮಾಡಿದ್ದಾರೆ. ಶೋಭಾ ಡೆವಲಪರ್ಸ್, ಇಂದ್ರಪ್ರಸ್ತ ಡೆವಲಪರ್ಸ್ ನಲ್ಲಿ ಶೇ.40ರಷ್ಟು ಷೇರು ಖರೀದಿ ಸೇರಿದಂತೆ ಸಲಾರ್ಪುರಿಯಾ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ. ಉಳಿದಂತೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮನೆ ನಿರ್ಮಾಣಕ್ಕೆ ಫೆಡರಲ್ ಬ್ಯಾಂಕ್‍ನಿಂದ 7.61 ಕೋಟಿ ರೂ. ಹಾಗೂ ಆರ್.ಟಿ.ನಗರ ಫೆಡರಲ್ ಬ್ಯಾಂಕ್‍ನಲ್ಲಿ 4 ಕೋಟಿ 25 ಲಕ್ಷ ಮನೆ ಸಾಲ. ಶೋಭಾ ಡೆವಲಪರ್ಸ್‍ನಿಂದ 8.48 ಕೋಟಿ ರೂ.ಗಳನ್ನು ಉಷಾ ಅವರು ಸಾಲ ಪಡೆದಿದ್ದಾರೆ. ಈ ಹಣಕಾಸಿನ ವ್ಯವಹಾರ ಬಗ್ಗೆಯೂ ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.