Tag: Gathavaibhava

  • ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್‌

    ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್‌

    ಭಿನ್ನ ಸಿನಿಮಾಗಳನ್ನ ಪ್ರಸ್ತುತಪಡಿಸುವುದರಲ್ಲಿ ನಿರ್ದೇಶಕ ಸಿಂಪಲ್ ಸುನಿ ಯಾವಾಗಲೂ ಮುಂದು. ಡಿಫರೆಂಟ್  ಕಥೆ ಹೊತ್ತು `ಗತವೈಭವ’ ಚಿತ್ರದ ಮೂಲಕ ಸದ್ದು ಮಾಡ್ತಿದ್ದಾರೆ. `ಅವತಾರ ಪುರುಷ’ ಚಿತ್ರದ ನಂತರ ಮತ್ತೆ ಆಶಿಕಾ ರಂಗನಾಥ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ʻಗತವೈಭವʼ ಚಿತ್ರಕ್ಕೆ ನಾಯಕಿಯಾಗಿ ಪಟಾಕಿ ಪೋರಿ ಸಾಥ್ ನೀಡ್ತಿದ್ದಾರೆ.

    ನಿರ್ದೇಶಕ ಸಿಂಪಲ್ ಸುನಿ ಬತ್ತಳಿಕೆಯ ಬಹುನಿರೀಕ್ಷಿತ ಸಿನಿಮಾ `ಗತವೈಭವ’ ಈ ಸಿನಿಮಾ ಮೂಲಕ ಶಾಸಕ ಎಸ್.ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನವಾಗಿ ದುಷ್ಯಂತ್ ಇಂಟ್ರುಡ್ಷನ್ ಟೀಸರ್ ರಿಲೀಸ್ ಮಾಡಿದ್ದ ಸುನಿ ಈಗ ನಾಯಕಿಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದ್ದಾರೆ. ಇದನ್ನೂ ಓದಿ:‘ಹರ್ ಘರ್ ತಿರಂಗಾ’ ಆಂದೋಲನಕ್ಕೆ ಯಶ್, ಸುದೀಪ್ ಸೇರಿದಂತೆ ಹಲವು ಗಣ್ಯರು ಸಾಥ್

    `ಗತವೈಭವ’ಕ್ಕೆ ನಾಯಕಿ ಯಾರು ಆಗ್ತಾರೆ ಎಂಬ ಕುತೂಹಲ ಚಿತ್ರರಸಿಕರಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೀರೋ ಇಂಡ್ರುಡಕ್ಷನ್ ಟೀಸರ್ ದಾಟಿಯಲ್ಲಿಯೇ ಸುನಿ ತಮ್ಮದೇ ಸ್ಟೈಲ್‌ನಲ್ಲಿ ನಾಯಕಿಯನ್ನು ಪರಿಚಯಿಸಿದ್ದಾರೆ. ಹೊಸ ಹೀರೋಗೆ ಆಶಿಕಾ ಹೀರೋಯಿನ್ ಆಗಲು ಸುನಿ ಹೇಗೆ ಒಪ್ಪಿಸಿದ್ರೂ ಅನ್ನೋದನ್ನು ಸಣ್ಣದೊಂದು ಝಲಕ್ ಮೂಲಕ ತೋರಿಸಿಕೊಟ್ಟಿದ್ದಾರೆ. ವಿಡಿಯೋ ಕೊನೆಯಲ್ಲಿ ನಾಯಕಿ ಆಶಿಕಾ ಲುಕ್ ರಿವೀಲ್ ಮಾಡಿದ್ದು, ದೇವಕನ್ಯೆ ಗೆಟಪ್‌ನಲ್ಲಿ ಚುಟುಚುಟು ಬ್ಯೂಟಿ ಮಿಂಚಿದ್ದಾರೆ.

     

    View this post on Instagram

     

    A post shared by ಸುನಿ SuNi (@simplesuni)

    ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾದಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಕೂಡ ಇರಲಿದ್ದು, ಈಗಾಗಲೇ 40ರಷ್ಟು ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ಆಶಿಕಾ ದುಷ್ಯಾಂತ್‌ಗೆ ಜೋಡಿಯಾಗಿ ನಟಿಸಲಿದ್ದು, ದೇವಕನ್ಯೆ ಹಾಗೂ ಪೋರ್ಚುಗೀಸ್ ಯುವತಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಗತವೈಭವ ಸಿನಿಮಾಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಹೀರೋ ನೋಡಿ ಅಲ್ಲ ಟ್ಯಾಲೆಂಟ್ ನೋಡಿ ಸಿನಿಮಾ ಮಾಡ್ತೀನಿ ಅಂದಿದ್ಯಾಕೆ ಸಿಂಪಲ್ ಸುನಿ

    ಹೀರೋ ನೋಡಿ ಅಲ್ಲ ಟ್ಯಾಲೆಂಟ್ ನೋಡಿ ಸಿನಿಮಾ ಮಾಡ್ತೀನಿ ಅಂದಿದ್ಯಾಕೆ ಸಿಂಪಲ್ ಸುನಿ

    ಸಿಂಪಲ್ ಸುನಿ ಸ್ಯಾಂಡಲ್‍ವುಡ್ ಅಂಗಳದ ಒನ್ ಆಫ್ ದಿ ಟ್ಯಾಲೆಂಟೆಡ್ ಡೈರೆಕ್ಟರ್. ಸಿಂಪಲ್ ಆಗ್ ಒಂದು ಲವ್ ಸ್ಟೋರಿ ಹೇಳಿ ಪ್ರೇಕ್ಷಕರ ಮನದಲ್ಲಿ ರಾಯಲ್ ಆಗಿ ಕುಳಿತಿರುವ ಇವ್ರು ಕಟೆಂಟ್ ಹಾಗೂ ಪ್ರೆಸೆಂಟೇಶನ್ ಮೂಲಕವೇ ಎಲ್ಲರನ್ನು ಕ್ಲೀನ್ ಬೋಲ್ಡ್ ಮಾಡಿಬಿಡ್ತಾರೆ.

    ಸದ್ಯ ಅವತಾರ ಪುರುಷ ಬಿಡುಗಡೆಗೆ ಸಿದ್ಧರಾಗಿರುವ ಇವ್ರು ಹೀರೋ ನೋಡಿ ಅಲ್ಲ ಟ್ಯಾಲೆಂಟ್ ನೋಡಿ ಸಿನಿಮಾ ಮಾಡ್ತೀನಿ ಅಂತ ಹೇಳ್ತಿದ್ದಾರೆ. ಅರೆ, ಹೀಗ್ ಯಾಕ್ ಹೇಳಿದ್ರು ಅಂತ ನೀವೇನು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಗತವೈಭವ ಹೀರೋ ಲಾಂಚ್ ಟೀಸರ್ ನೋಡಿದ್ರೆ ಸಾಕು ಆನ್ಸರ್ ಸಿಕ್ಕಿಬಿಡುತ್ತೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಹೌದು, ಗತವೈಭವ ಸಿಂಪಲ್ ಸುನಿ ಮುಂದಿನ ಸಿನಿಮಾ. ಈ ಸಿನಿಮಾ ಮೂಲಕ ನವ ನಟ ದುಶ್ಯಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಸುನಿ. ಗತವೈಭವ ಚಿತ್ರದ ನಾಯಕನ ಇಂಟ್ರಡಕ್ಷನ್ ಟೀಸರ್ ಇಂದು ಬಿಡುಗಡೆಯಾಗಿದೆ. ಡಿಫ್ರೆಂಟ್ ಅಂಡ್ ಕ್ರಿಯೇಟಿವ್ ಆಗಿ ಮೂಡಿ ಬಂದಿರುವ ಹೀರೋ ಲಾಂಚ್ ಟೀಸರ್ ಸಖತ್ ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ವಾವ್ ಎನ್ನುತ್ತಿದ್ದಾರೆ ನೋಡುಗರು. ಈಗಾಗಲೇ ಬಜಾರ್ ಮೂಲಕ ಧನ್ವೀರ್‍ರನ್ನು ಚಿತ್ರರಂಗಕ್ಕೆ ಲಾಂಚ್ ಮಾಡಿ ಸೈ ಎನಿಸಿಕೊಂಡಿರುವ ಸಿಂಪಲ್ ಸುನಿ ಮತ್ತೊಬ್ಬ ಯುವ ನಟ ದುಶ್ಯಂತ್ ಅವರನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ.

    ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ ಪುತ್ರ ದುಶ್ಯಂತ್. ಈ ಮೂಲಕ ಮತ್ತೊಬ್ಬ ರಾಜಕರಣಿಯ ಪುತ್ರ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಟನೆ, ಡಾನ್ಸ್, ಆಕ್ಷನ್ ಹೀಗೆ ಎಲ್ಲದರಲ್ಲೂ ಸರ್ವ ರೀತಿಯಲ್ಲೂ ತಯಾರಿ ಮಾಡಿಕೊಂಡು ಬಂದಿದ್ದಾರೆ ದುಶ್ಯಂತ್. ಸದ್ಯ ಟೀಸರ್ ಮೂಲಕ ಚಮಕ್ ಕೊಟ್ಟಿರುವ ಸಿಂಪಲ್ ಸುನಿ ಅವತಾರ ಪುರುಷ ಬಿಡುಗಡೆ ನಂತರ ಗತವೈಭವನ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಈ ಬಾರಿ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಸಬ್ಜೆಕ್ಟ್ ಹೊತ್ತು ತರ್ತಿರುವ ಸಿಂಪಲ್ ಸುನಿ ಅದಕ್ಕೆ ಬೇಕಾದ ಸಕಲ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ಚಿತ್ರವನ್ನು ದೀಪಕ್ ತಿಮ್ಮಪ್ಪ ಹಾಗೂ ಸಿಂಪಲ್ ಸುನಿ ಇಬ್ಬರೂ ಜೊತೆಗೂಡಿ ಸುನಿ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ರವೀಂದ್ರನಾಥ್ ಟಿ ಸಿನಿಮಾಟೋಗ್ರಫಿ, ಭರತ್ ಬಿ.ಜೆ ಸಂಗೀತ, ಮನು ಶೇಡ್ಗಾರ್ ಸಂಕಲನವಿದೆ. ಸದ್ಯದಲ್ಲೇ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ ಚಿತ್ರತಂಡ. ಇದನ್ನೂ ಓದಿ: ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ