Tag: Gas Refilling

  • Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

    Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

    ರಾಮನಗರ: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ (Gas Refilling) ಮಾಡ್ತಿದ್ದ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸರು ದಾಳಿ ನಡೆಸಿರೋ ಘಟನೆ ಕನಕಪುರ (Kanakapura) ಟೌನ್‌ನಲ್ಲಿ ನಡೆದಿದೆ.

    ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ನಿರೀಕ್ಷಕ ಮನೋಹರ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಅನಂತ್‌ರಾಮ್ ನೇತೃತ್ವದ ತಂಡ, ನಗರದ ಪೈಪ್‌ಲೈನ್ ರಸ್ತೆ ಹಾಗೂ ಸಾಮ್ರಾಟ್ ಅಶೋಕ್ ನಗರದ ಉಮೇಶ್ ಎಂಬವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದಲೇ ರಾಜಣ್ಣ ಉಚ್ಚಾಟನೆ? – ಆಪ್ತನನ್ನು ಉಳಿಸಲು ಸಿಎಂ ಕಸರತ್ತು

    ಈ ವೇಳೆ ವಾಣಿಜ್ಯ ಬಳಕೆಯ 7 ಸಿಲಿಂಡರ್, 2 ಮನೆಬಳಕೆ ಸಿಲಿಂಡರ್ ಹಾಗೂ ರೀಫಿಲ್ಲಿಂಗ್ ಮಾಡುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

  • ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ-  ಸರಣಿ ಸಿಲಿಂಡರ್ ಬ್ಲಾಸ್ಟ್

    ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ- ಸರಣಿ ಸಿಲಿಂಡರ್ ಬ್ಲಾಸ್ಟ್

    ಬೆಂಗಳೂರು: ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ದಂಧೆ ನಡೆಸುತ್ತಿದ್ದ ಅಂಗಡಿಯಲ್ಲಿ ಏಕಕಾಲಕ್ಕೆ ಸರಣಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಗೋವಿಂದ ರಾಜನಗರದ ಭರತ್ ಗ್ಯಾಸ್ ಏಜೆನ್ಸಿಯಲ್ಲಿ ನಡೆದಿದೆ.

    ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ವಸ್ತುಗಳು ಜಖಂಗೊಂಡಿವೆ. ಪರಿಶೀಲನೆ ವೇಳೆ ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ದಂಧೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು. ಸ್ಫೋಟಗೊಂಡ ಬೆನ್ನಲ್ಲೇ ಗ್ಯಾಸ್ ಏಜೆನ್ಸಿ ಮಾಲೀಕ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಅಮಲು ಪದಾರ್ಥ ಸೇವಿಸಿ ರಂಪಾಟ – ಉಡುಪಿ ಪೊಲೀಸರಿಗೆ ವಿದ್ಯಾರ್ಥಿಗಳಿಂದ ಅವಾಜ್

    ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಬಿಲ್ಡಿಂಗ್‍ನಲ್ಲಿದ್ದ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದು ರಕ್ಷಿಸಿದ್ದಾರೆ. ಇದನ್ನೂ ಓದಿ: ಇನ್ನೊಂದು ಮದುವೆಯಾಗ್ತೀನಿ ಎಂದ ತಂದೆಯನ್ನು ಕೊಂದ ಮಗ!

  • ಗದಗನಲ್ಲಿ ಗ್ಯಾಸ್ ರೀಫಿಲ್ಲಿಂಗ್ ದಂಧೆ-ಅಧಿಕಾರಿಗಳಿಗೆ, ಪೊಲೀಸರಿಗೆ ಮಾಮೂಲಿ ಕೊಡಲೇಬೇಕಂತೆ!

    ಗದಗನಲ್ಲಿ ಗ್ಯಾಸ್ ರೀಫಿಲ್ಲಿಂಗ್ ದಂಧೆ-ಅಧಿಕಾರಿಗಳಿಗೆ, ಪೊಲೀಸರಿಗೆ ಮಾಮೂಲಿ ಕೊಡಲೇಬೇಕಂತೆ!

    ಗದಗ: ಇಡೀ ದೇಶದಲ್ಲಿ ತೈಲ ಹಾಗೂ ಅನಿಲ ಬೆಲೆ ಗಗನಕ್ಕೆ ಏರುತ್ತಿದೆ. ಜನಸಾಮಾನ್ಯರು ಬೆಲೆ ಏರಿಕೆಯ ಬಲೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಮಾತ್ರ ಕಾಳಸಂತೆಯಲ್ಲಿ ಅನಿಲ ಮಾರಾಟದ ಕಳ್ಳಾಟ ಜೋರಾಗಿ ನಡೆದಿದೆ. ಈ ಗ್ಯಾಸ್ ಕಳ್ಳರ ಗ್ಯಾಂಗ್ ಬಗ್ಗೆ ಪಬ್ಲಿಕ್ ಟಿವಿ ಕುಟುಕು ಕಾರ್ಯಾಚರಣೆಯ ಕ್ಯಾಮರಾ ಕಣ್ಣಿಗೆ ಬಿದ್ದಿದೆ.

    ಗದಗ ಜಿಲ್ಲೆಯಲ್ಲಿ ಈ ಗ್ಯಾಸ್ ರಿಫಿಲ್ಲಿಂಗ್ ದಂಧೆ ಕಾಮನ್. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಿಂದ ಈ ಧಂದೆ ಬಯಲಾಗಿದೆ. ಅನಿಲಭಾಗ್ಯ, ಉಜ್ವಲ ಯೋಜನೆಯಂತಹ ಯೋಜನೆಗಳು ಈ ರೀತಿಯಾಗಿ ದುರುಪಯೋಗ ಆಗುತ್ತಿವೆ. ಗದಗ-ಬೆಟಗೇರಿ ಅವಳಿ ನಗರದ ಅನೇಕ ಮನೆ ಹಾಗೂ ಗೋದಾಮುಗಳಲ್ಲಿ ಅಕ್ರಮವಾಗಿ ಗ್ಯಾಸ್ ತುಂಬುವ ದಂಧೆ ಜೋರಾಗಿ ನಡೆಯುತ್ತಿದೆ.

    ಟ್ಯಾಗೋರ್ ರೋಡ್‍ನ ಮನೆಯೊಂದರಲ್ಲಿ ನಡೆಯುತ್ತಿದ್ದ ದಂಧೆಯತ್ತ ಪಬ್ಲಿಕ್ ಟಿವಿ ಕ್ಯಾಮರಾ ಚಿತ್ತ ನೆಟ್ಟಿತ್ತು. ಆದ್ರೆ ದಂಧೆಕೋರರಿಗೆ ಅನುಮಾನ ಬಂದು ಏನುಬೇಕ್ರಿ, ಗ್ಯಾಸ್ ಬೇಕಾ? 15-20 ನಿಮಿಷ ಬಿಟ್ಟು ಬನ್ನಿ ಎಂದು ಸಿಲಿಂಡರ್ ಇಟ್ಟುಕೊಂಡು ಕಳುಹಿಸಿದರು. ಇದಕ್ಕೆ ಲೈಸನ್ಸ್ ಪಡಿಬೇಕಾ? ನಿಮಗೆಷ್ಟು ಲಾಭ ಎಂದು ಅಮಾಯಕರಂತೆ ಕೇಳಿದಾಗ ಸಿಕ್ಕ ಉತ್ತರ ದಂಗು ಬಡಿಸುವಂತಿತ್ತು. ಅಧಿಕಾರಿಗಳಿಗೆ, ಪೊಲೀಸರಿಗೆ ಮಾಮೂಲಿ ಹೋಗೋ ಸತ್ಯ ಬಯಲಾಯ್ತು. ಲಂಚ ಕೊಡ್ಲೇಬೇಕು, ಇಲ್ಲಾಂದೆ ಬದುಕೋಕೆ ಬಿಡಲ್ಲ. ಒಂದು ಗ್ಯಾಸ್ ಖಾಲಿಯಾದ್ರೆ 300 ರೂಪಾಯಿವರೆಗೆ ಉಳಿಯುತ್ತೆ ಅಂತಾರೆ ದಂಧೆಕೊರರು.

    ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಆಟೋಗಳಿಗೆ ಈ ಎಲ್‍ಪಿಜಿಯನ್ನು ಕೇಜಿ ಲೆಕ್ಕದಲ್ಲಿ ಬಿಕರಿ ಮಾಡುತ್ತಾರೆ. ಕೆಜಿ ಗ್ಯಾಸ್‍ಗೆ 100 ರೂಪಾಯಿಂದ 130 ರೂಪಾಯಿ ವರೆಗೆ ಮಾರಾಟ ಮಾಡಲಾಗುತ್ತದೆ. ದಂಧೆಕೋರರು ಮನೆಯ ಅನೇಕ ಸದಸ್ಯರ ಹೆಸರಿನಲ್ಲಿ ಗ್ಯಾಸ್ ಪಡೆದು ನಂತರ ಈ ತರನಾಗಿ ಅಕ್ರಮವಾಗಿ ಮಾರಾಟ ಮಾಡ್ತಾರೆ. ಈ ಮೂಲಕ ಸಕ್ರಮದ ಹೆಸರಲ್ಲೆ ಅಕ್ರಮಕ್ಕಿಳಿದಿದ್ದಾರೆ. ಇದೆಲ್ಲಾ ಗೊತ್ತಿದ್ದೂ ಸಂಬಂಧಿಸಿದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮಾತ್ರ ಕಣ್ ಮುಚ್ಚಿ ಕುಳತಿದ್ದಾರೆ.

    ಗ್ಯಾಸ್ ಮಾಫಿಯಾ ಬಗ್ಗೆ ಬಗೆದಷ್ಟು ಬಗೆದಷ್ಟು ಬಹಳಷ್ಟು ಮಾಹಿತಿ ದೊರೆಯುತ್ತದೆ. ಇದೆಲ್ಲಾ ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪ್ರೆಷನ್ ಮೂಲಕ ಬಯಲಾಗಿದೆ. ಈ ಕಳ್ಳ ದಂಧೆಯ ಪಾಲುದಾರ ಅಧಿಕಾರಿಗಳು ಇನ್ಮೆಲೆದ್ರು ಎಚ್ಚೆತ್ತು ಕ್ರಮಕ್ಕೆ ಮುಂದಾಗ್ತಾರಾ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv