Tag: Gas Rate

  • ಗ್ಯಾಸ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

    ಗ್ಯಾಸ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

    ಧಾರವಾಡ: ಗ್ಯಾಸ್ ಸಿಲಿಂಡರ್ ಹಾಗೂ ಪೆಟ್ರೋಲ್ ದರ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಿಗೆ ಒಲೆ ಮೇಲೆ ಉಪ್ಪಿಟ್ಟು ಅಡುಗೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆ ವೇಳೆಯೇ ಕಟ್ಟಿಗೆ ಹೊರೆ ಹೊತ್ತು ಹೊರಟಿದ್ದ ಮಹಿಳೆಯನ್ನು ಪ್ರತಿಭಟನೆಗೆ ಸೇರಿಸಿಕೊಂಡ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು, ಆ ಮಹಿಳೆಯ ತಲೆ ಮೇಲೆ ಕಟ್ಟಿಗೆ ಹೊರೆ ಹೊರೆಸಿಯೇ ಭಾಷಣ ಮಾಡುತ್ತ ನಿಂತರು. ಭಾಷಣ ಮುಗಿದ ಮೇಲೆ ಹೊರೆ ಹೊತ್ತ ಮಹಿಳೆಯನ್ನು ವಾಪಸ್ ಕಳಿಸಿದರು.