Tag: gas geyser

  • Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    ಮೈಸೂರು: ಬಾತ್‌ರೂಂನಲ್ಲಿ (Bathroom) ಗ್ಯಾಸ್ ಗೀಸರ್ (Gas Geyser) ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ (Sisters) ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆ ಪಿರಿಯಾಪಟ್ಟಣ (Piriyapatna) ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

    ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು. ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ (Carbon Monoxide) ಸೋರಿಕೆಯಾಗಿ ಘಟನೆ ಸಂಭವಿಸಿದೆ. ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಬಾತ್‌ರೂಂಗೆ ಹೋದಾಗ ಘಟನೆ ನಡೆದಿದೆ. ಬಹಳ ಹೊತ್ತು ಕಳೆದರು ಬಾತ್‌ರೂಂನಿಂದ ಅಕ್ಕ, ತಂಗಿ ಹೊರಬಾರದ ಹಿನ್ನೆಲೆ ತಂದೆ ಅಲ್ತಾಫ್ ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ಈ ವೇಳೆ ಬಾಗಿಲು ಒಡೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರೋದು ಗೊತ್ತಾಗಿದೆ. ಇದನ್ನೂ ಓದಿ: ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ರಸ್ತೆಗೆ ಬಿದ್ದ ಟೆಕ್ಕಿ – ಲಾರಿ ಹರಿದು ದುರ್ಮರಣ

    ತಕ್ಷಣವೇ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟುಹೊತ್ತಿಗಾಗಲೇ ಇಬ್ಬರೂ ಮೃತಪಟ್ಟಿದ್ದರು. ಕೋಣೆಯಲ್ಲಿ ಕಿಟಕಿ ಇರದ ಹಿನ್ನೆಲೆ ಉಸಿರುಗಟ್ಟಿದೆ ಎನ್ನಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

  • ಕೊಪ್ಪಳ | ಗ್ಯಾಸ್ ಗೀಸರ್ ಸ್ಫೋಟ – ಐವರಿಗೆ ಗಂಭೀರ ಗಾಯ

    ಕೊಪ್ಪಳ | ಗ್ಯಾಸ್ ಗೀಸರ್ ಸ್ಫೋಟ – ಐವರಿಗೆ ಗಂಭೀರ ಗಾಯ

    ಕೊಪ್ಪಳ: ಗ್ಯಾಸ್ ಗೀಸರ್ ಸ್ಪೋಟಗೊಂಡಿರುವ ಪರಿಣಾಮ ಐವರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ನಗರದ ಸಾರಿಗೆ ಬಸ್ ಡಿಪೋ ಬಳಿಯಿರುವ ಕಾಲೋನಿಯಲ್ಲಿ ನಡೆದಿದೆ.ಇದನ್ನೂ ಓದಿ: ಗೋಧ್ರಾ ದುರಂತ ಆಧರಿತ ಸಿನಿಮಾ ‘ದಿ ಸಾಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ ಮೋದಿ

    ಗಾಯಾಳುಗಳನ್ನು ಕವಿತಾ, ಪ್ರೀತಿ, ಶೋಭಾ, ಶೃತಿ, ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಸದ್ಯ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕವಿತಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದವರನ್ನು ಗಂಗಾವತಿಯ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳ ಹಾಗೂ ಗಂಗಾವತಿ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಒಕ್ಕಲಿಗರ ದ್ರೋಹಿ, ಡಿಕೆಶಿ ಸುಳ್ಳಿನ ಶೂರ – ಜೆಡಿಎಸ್ ಲೇವಡಿ

  • ಗೀಸರ್‌ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ತಾಯಿ, ಮಗ ಸಾವು

    ಗೀಸರ್‌ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ತಾಯಿ, ಮಗ ಸಾವು

    ರಾಮನಗರ: ಬಿಸಿನೀರು ಕಾಯಿಸುವ ಗ್ಯಾಸ್‌ ಗೀಸರ್‌ (Gas Geyser) ವಿಷಕಾರಿ ಕಾರ್ಬನ್ ಮಾನಾಕ್ಸೈಡ್ (Carbon Monoxide) ಸೋರಿಕೆಯಿಂದಾಗಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಮಾಗಡಿ (Magadi) ಪಟ್ಟಣದ ಜ್ಯೂರಿನಗರದಲ್ಲಿ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶೋಭಾ(40) ಮತ್ತು ಅವರ ಪುತ್ರ ದಿಲೀಪ್ (17) ಮೃತ ದುರ್ದೈವಿಗಳು. ರಾತ್ರಿ ಏಳು ಗಂಟೆ ಸುಮಾರಿಗೆ ದಿಲೀಪ್ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ ಆನ್ ಮಾಡಿಕೊಂಡು ಸ್ನಾನಕ್ಕೆ ತೆರಳಿದ್ದಾನೆ.

     

    ವೇಳೆ ಗೀಸರ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ಸ್ನಾನದ ಮನೆಗೆ ಕಿಟಕಿ ಇಲ್ಲದ ಪರಿಣಾಮ ಕೊಠಡಿಯಲ್ಲಿ ವಿಷಾನಿಲ ಆವರಿಸಿ ದಿಲೀಪ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಇತ್ತ ಸ್ನಾನಕ್ಕೆ ಹೋದ ಮಗ ಇಷ್ಟು ಹೊತ್ತಾದರೂ ಬರಲಿಲ್ಲವಲ್ಲ ಎಂದು ತಾಯಿ ಶೋಭಾ, ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋದಾಗ ಅವರು ಕೂಡಾ ಅಸ್ವಸ್ಥರಾಗಿದ್ದಾರೆ.

    ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ರವಾನಿಸುವಾಗ ಶೋಭಾ ಕೂಡಾ ಮೃತಪಟ್ಟಿದ್ದಾರೆ. ವಿಷಯ ತಿಳಿದ ಮಾಗಡಿ ಪೊಲೀಸರು, ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರಕ್ಕೆ ಹಿನ್ನಡೆ; ವ್ಯಾಪಾರಿಗಳ ಮಾಹಿತಿ ಬಹಿರಂಗಪಡಿಸುವ ಆದೇಶಕ್ಕೆ ತಡೆ

     

  • ಗ್ಯಾಸ್ ಗೀಸರ್‌ಗೆ ಮತ್ತೊಂದು ಬಲಿ – ವಿಷಾನಿಲ ಸೋರಿಕೆಯಾಗಿ ಸ್ನಾನ ಮಾಡಲು ಹೋಗಿದ್ದ ಯುವತಿ ಸಾವು

    ಗ್ಯಾಸ್ ಗೀಸರ್‌ಗೆ ಮತ್ತೊಂದು ಬಲಿ – ವಿಷಾನಿಲ ಸೋರಿಕೆಯಾಗಿ ಸ್ನಾನ ಮಾಡಲು ಹೋಗಿದ್ದ ಯುವತಿ ಸಾವು

    ಬೆಂಗಳೂರು: ಗ್ಯಾಸ್ ಗೀಸರ್‌ಗೆ (Gas Geyser) ಬೆಂಗಳೂರಿನಲ್ಲಿ (Bengaluru) ಮತ್ತೊಂದು ಬಲಿಯಾಗಿದ್ದು, ವಿಷಾನಿಲ ಸೋರಿಕೆಯಾಗಿ ಸ್ನಾನ ಮಾಡಲು ಹೋಗಿದ್ದ ಯುವತಿ (Young Woman) ಸಾವನ್ನಪ್ಪಿದ ಘಟನೆ ಕಾಮಾಕ್ಷಿಪಾಳ್ಯದ (Kamakshipalya) ಮೀನಾಕ್ಷಿನಗರದಲ್ಲಿ ನಡೆದಿದೆ.

    ರಾಜೇಶ್ವರಿ (23) ಮೃತ ಯುವತಿ. ರಾಜೇಶ್ವರಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಣ್ಣನ ವಿವಾಹದ (Marriage) ಹಿನ್ನೆಲೆ ರಜೆ ಹಾಕಿ ಮನೆಯಲ್ಲಿದ್ದಳು. ಸ್ನಾನ ಮಾಡಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ಧಗಧಗನೆ ಹೊತ್ತಿ ಉರಿದ ಕಾರು – ಅದೃಷ್ಟವಶಾತ್ ಚಾಲಕ ಪಾರು

    ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾದ ಹಿನ್ನೆಲೆ ಯುವತಿ ಅಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಿಸದೇ ಯುವತಿ ಕೊನೆಯುಸಿರೆಳೆದಿದ್ದಾಳೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಗೆಳತಿ ಮೇಲೆ ಪ್ರೀತಿ; ಲಿಂಗ ಬದಲಿಸಿಕೊಂಡ್ರೂ ಮದುವೆಗೆ ಒಪ್ಪದ ಮಹಿಳಾ ಟೆಕ್ಕಿಯನ್ನ ಜೀವಂತ ಸುಟ್ಟು ಹತ್ಯೆ

  • ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಉಸಿರುಗಟ್ಟಿ ಸಾವು

    ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಉಸಿರುಗಟ್ಟಿ ಸಾವು

    ಬೆಂಗಳೂರು: ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ತಾಯಿ-ಮಗು ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ಸಿಲಿಕಾನ್ ಸಿಟಿಯ ಚಿಕ್ಕಬಾಣಾವರದಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ಮಂಗಳಾ(35) ಹಾಗೂ ಮಗಳು ಗೌತಮಿ(7) ಎಂದು ಗುರುತಿಸಲಾಗಿದೆ. ಮಂಜುಳಾ ಪತಿ ಕೆಲಸಕ್ಕೆ ತೆರಳಿದ ಬಳಿಕ ಈ ಅವಘಢ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಂಗಳಾ ಅವರು ಗ್ಯಾಸ್ ಗೀಸರ್ ಆನ್ ಮಾಡಿ ಮಗಳು ಗೌತಮಿಗೆ ಸ್ನಾನ ಮಾಡಿಸಲೆಂದು ಹೋಗಿದ್ದರು. ಈ ವೇಳೆ ಗೀಸರ್ ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಇಡೀ ಕೊಠಡಿ ಆವರಿಸಿದೆ. ಪರಿಣಾಮ ಉಸಿರಾಡಲು ಸಾಧ್ಯವಾಗದೆ ಅಮ್ಮ-ಮಗಳು ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಸಾಮೂಹಿಕ ಅತ್ಯಾಚಾರ- ಪತಿ, ಆತನ ಸ್ನೇಹಿತರು ಅರೆಸ್ಟ್‌

    ಇತ್ತ ಸಂಜೆಯಾದರೂ ಮಂಗಳಾ ಅವರು ನಮನೆಯಿಂದ ಹೊರಬಾರದ್ದನ್ನು ಗಮನಿಸಿದ ಮಾಲೀಕರು ಮನೆಯೊಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ತಾಯಿ-ಮಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಯಿತು.

    ಘಟನೆ ಸಂಬಮಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾತ್‍ರೂಮಿನಲ್ಲಿ ಗ್ಯಾಸ್ ಗೀಸರ್ ಲೀಕ್ ಆಗಿ ಹುಟ್ಟುಹಬ್ಬದಂದೇ ಬಾಲಕಿ ಸಾವು

    ಬಾತ್‍ರೂಮಿನಲ್ಲಿ ಗ್ಯಾಸ್ ಗೀಸರ್ ಲೀಕ್ ಆಗಿ ಹುಟ್ಟುಹಬ್ಬದಂದೇ ಬಾಲಕಿ ಸಾವು

    ಮುಂಬೈ: ಬಾತ್‍ರೂಮಿನಲ್ಲಿ ಗೀಸರ್ ಲೀಕ್ ಆಗಿ ಹುಟ್ಟುಹಬ್ಬದಂದೇ ಬಾಲಕಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಧ್ರುವಿ ಗೋಹಿಲಾ(15) ಮೃತಪಟ್ಟ ಬಾಲಕಿ. ಬುಧವಾರ ಬೆಳಗ್ಗೆ ಸುಮಾರು 6.45ಕ್ಕೆ ಧ್ರುವಿ ಸ್ನಾನ ಮಾಡಲು ಹೋಗಿದ್ದಳು. ಒಂದು ಗಂಟೆಯಾದರೂ ಹೊರಬರದ ಕಾರಣ ಪೋಷಕರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಧ್ರುವಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಳು. ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಧ್ರುವಿಯನ್ನು 24 ಗಂಟೆ ವೆಂಟಿಲೇಟರ್ ನಲ್ಲಿಟ್ಟ ಬಳಿಕ ಆಕೆ ಮೃತಪಟ್ಟಿದ್ದಾಳೆ. ವೈದ್ಯರ ಪ್ರಕಾರ, ಧ್ರುವಿ ಕಾಲು ಬಿಸಿ ನೀರಿನಿಂದ ಸುಟ್ಟು ಹೋಗಿತ್ತು. ಮರಣೋತ್ತರ ವರದಿಯ ಪ್ರಕಾರ ಉಸಿರುಗಟ್ಟಿದ್ದ ಕಾರಣ ಧ್ರುವಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

    10ನೇ ತರಗತಿ ಓದುತ್ತಿದ್ದ ಧ್ರುವಿ ತನ್ನ ಹುಟ್ಟುಹಬ್ಬದಂದೇ ಮೃತಪಟ್ಟಿದ್ದಾಳೆ. ಧ್ರುವಿ ಸ್ನಾನ ಮಾಡುತ್ತಿದ್ದ ಬಾತ್‍ರೂಮಿನಲ್ಲಿ ವೆಂಟಿಲೇಶನ್ ಇರಲಿಲ್ಲ. ಅಲ್ಲದೆ ಚಳಿಯಿದ್ದ ಕಾರಣ ಧ್ರುವಿ ಬಾತ್‍ರೂಮಿನ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಳು.

    ಈ ಬಗ್ಗೆ ಧ್ರುವಿ ತಂದೆ ರಾಜೀವ್ ಪ್ರತಿಕ್ರಿಯಿಸಿ, ನನಗೆ ಇದ್ದಿದ್ದು ಒಬ್ಬಳೇ ಮಗಳು, ಆಕೆಯ ಮೇಲೆ ನನಗೆ ತುಂಬಾ ಭರವಸೆಯಿತ್ತು. ನಾನು ಜನರಿಗೆ ಗ್ಯಾಸ್ ಗೀಸರ್ ಬಳಸದಂತೆ ಸಲಹೆ ನೀಡುತ್ತೇನೆ ಎಂದು ಕಣ್ಣೀರು ಹಾಕಿದರು.