Tag: gas cylinder

  • ಬೆಂಗಳೂರು | ಸಿಲಿಂಡರ್‌ ಸ್ಫೋಟ – ಮನೆಯೇ ನೆಲಸಮ, ಓರ್ವ ಸಾವು

    ಬೆಂಗಳೂರು | ಸಿಲಿಂಡರ್‌ ಸ್ಫೋಟ – ಮನೆಯೇ ನೆಲಸಮ, ಓರ್ವ ಸಾವು

    ಬೆಂಗಳೂರು: ಭೀಕರ ಸಿಲಿಂಡರ್‌ ಸ್ಫೋಟಕ್ಕೆ (Cylinder Blast )ಬೃಹತ್‌ ಕಟ್ಟಡವೇ ನೆಲಸಮಗೊಂಡಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಕೆ.ಆರ್‌ ಪುರಂನ ತ್ರಿವೇಣಿ ನಗರದಲ್ಲಿ ನಡೆದಿದೆ.

    ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಭಾರೀ ಕಟ್ಟಡವೇ ನೆಲಸಮ ಆಗಿದೆ. ಅಕ್ಕಪಕ್ಕದ ಮನೆಗಳ ಕಿಟಕಿಗಳು ಹಾನಿಯಾಗಿದೆ. ಈ ವೇಳೆ ಮನೆಯಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಕೆ.ಆರ್‌ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ಸ್ಕ್ವಾಡ್‌ ಹಾಗೂ ಡಾಗ್ ಸ್ಕ್ವಾಡ್ ಅಧಿಕಾರಿಗಳಿಂದಲೂ ಸ್ಥಳ ಪರಿಶೀಲನೆ ನಡೆಯುತ್ತಿದೆ. ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ.

  • ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್‌ನಲ್ಲಿ ಭಾರೀ ವಂಚನೆ

    ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್‌ನಲ್ಲಿ ಭಾರೀ ವಂಚನೆ

    ಕಲಬುರಗಿ: ಮನೆ ಮನೆಗೆ ಸರಬರಾಜಾಗುವ ಗ್ಯಾಸ್ ಸಿಲಿಂಡರ್‌ಗಳಲ್ಲಿ (Gas Cylinder) 2 ಕೆಜಿಯಷ್ಟು ಗ್ಯಾಸ್ (LPG Gas) ಕಳ್ಳತನ ಮಾಡಿ ಬಳಿಕ ಮನೆಗಳಿಗೆ ಒದಗಿಸುತ್ತಿರುವುದು ಕಲಬುರಗಿಯಲ್ಲಿ (Kalaburagi) ಬೆಳಕಿಗೆ ಬಂದಿದೆ. ದಿನದಿಂದ ದಿನಕ್ಕೆ ಅಡುಗೆ ಸಿಲಿಂಡರ್ ಬೆಲೆ ಗಗನಕ್ಕೆ ಏರುತ್ತಿದೆ ಈಗ ಗ್ಯಾಸ್ ಎಜನ್ಸಿಯವರು ಇದನ್ನೇ ಬಂಡವಾಳ ಮಾಡಿಕೊಂಡು ವಂಚನೆಗೆ ಇಳಿದಿದ್ದಾರೆ.

    ನಗರದ ಆಳಂದ ಕಾಲೋನಿಯಲ್ಲಿ ಮನೆಗೆ ಸಪ್ಲೈ ಮಾಡುವ ಸಿಲಿಂಡರ್‍ನಲ್ಲಿ ಕದಿಯುವ ದಂಧೆ ಶುರುವಾಗಿದೆ. ಇಲ್ಲಿನ ನಿವಾಸಿ ಮುಕೇಶ್ ಠಾಕೂರ್ ಎಂಬುವರ ಮನೆಗೆ ಸರಬರಾಜು ಮಾಡುವ ಸಿಲಿಂಡರ್‍ನಲ್ಲಿ ಹಲವು ದಿನಗಳಿಂದ ಕಡಿಮೆ ಗ್ಯಾಸ್ ಬರುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ಚಂದ್ರಯಾನ-3 ಮತ್ತೊಂದು ಮೈಲಿಗಲ್ಲು: ಭೂಕಕ್ಷೆ ತೊರೆದು ಚಂದ್ರನ ಕಡೆಗೆ ಯಶಸ್ವಿ ಪ್ರಯಾಣ

    ಇದರಿಂದ ಸಿಲಿಂಡರ್ ಇಳಿಸಲು ಬಂದಿದ್ದಾಗ ತೂಕ ಮಾಡಲು ಡೆಲಿವರಿ ಬಾಯ್‍ಗೆ ಹೇಳಿದ್ದಾರೆ. ಆದರೆ ಡಿಲಿವರಿ ಬಾಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಒಂದು ವಾರದ ಬಳಿಕ ತೂಕ ಯಂತ್ರ ಸಮೇತ ಬಂದು ತೂಕ ಮಾಡಿದ್ದಾಗ ಸಿಲಿಂಡರ್ ಭಾರ ಸೇರಿ ಅದರ ಒಳಗಿನ ಗ್ಯಾಸ್ ಸರಿಯಾಗಿದೆ ಅಂದಿದ್ದಾರೆ. ಇದರಿಂದ ಏಜೆನ್ಸಿ ತೂಕ ಯಂತ್ರದ ಮೇಲೆ ಅನುಮಾನಗೊಂಡು ಮುಕೇಶ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತೂಕ ಮಾಡಿಸಿದ್ದಾರೆ. ಆಗ ಸಿಲಿಂಡರ್‍ನಲ್ಲಿ 2 ಕೆಜಿಗೂ ಹೆಚ್ಚಿನ ಗ್ಯಾಸ್ ಕಡಿಮೆ ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

    ಮನೆಗಳಿಗೆ ಸರಬರಾಜು ಮಾಡುವ ಪ್ರತಿ ಸಿಲಿಂಡರ್‌ನ ತೂಕವನ್ನು ಸರ್ಕಾರ ದೃಢಿಕರಿಸಿ ಸ್ಟ್ಯಾಪಿಂಗ್ ಮಾಡಿಸಿದ ಯಂತ್ರದಲ್ಲಿಯೇ ತೂಕ ಮಾಡಿಯೇ ಗ್ರಾಹಕರಿಗೆ ಕೊಡಬೇಕು ಎಂಬ ನಿಯಮವಿದೆ. ರಾಜ್ಯದಲ್ಲಿನ ಬಹುತೇಕ ಗ್ಯಾಸ್ ಏಜೆನ್ಸಿಗಳ ತೂಕ ಯಂತ್ರಗಳು ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಸ್ಟ್ಯಾಪಿಂಗ್ ಮಾಡಿಕೊಂಡಿಲ್ಲ. ಪ್ರತಿ ಪ್ಯಾಕ್ಡ್ ಸಿಲಿಂಡರ್‍ನಿಂದ 2 ಕೆಜಿಯಷ್ಟು ಅಡುಗೆ ಅನಿಲವನ್ನು ಖಾಲಿಯಾದ ಸಿಲಿಂಡರ್‌ಗಳಿಗೆ ಭರ್ತಿ ಮಾಡಿ ನಂತರ ಆ ಸಿಲಿಂಡರ್‍ನ್ನು ಯಥಾವತ್ತಾಗಿ ಪ್ಯಾಕ್ ಮಾಡಿ ಮನೆಗಳಿಗೆ ಸರಬರಾಜು ಮಾಡುತ್ತಿದ್ದಾರೆ.

    ಹೀಗೆ ಸಿಲಿಂಡರ್ ಖರೀದಿಸುವ ಗ್ರಾಹಕರು ಸಿಲಿಂಡರ್ ಪ್ಯಾಕ್ ಇದೆ ಅಂತಾ ಖರೀದಿಸಿ ಮೋಸ ಹೋಗುತ್ತಿದ್ದಾರೆ. ಈ ಮೂಲಕ ರಾಜ್ಯದ ಕೆಲ ಗ್ಯಾಸ್ ಏಜೆನ್ಸಿ ಹಾಗು ಸಪ್ಲೈ ಮಾಡುವ ನೌಕರರು ಗ್ರಾಹಕರಿಗೆ ವಂಚಿಸಿ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಪಾದಿಸ್ತಿದ್ದಾರೆ. ಸದ್ಯ ಗ್ಯಾಸ್ ಏಜೆನ್ಸಿಯ ಮಾಫಿಯಾದ ಬಗ್ಗೆ ಕಲಬುರಗಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಾರ್ಡರ್‌ ಲವ್‌ – ಭಾರತದ ಪ್ರೇಮಿಗಾಗಿ ಲಂಕಾದಿಂದ ಹಾರಿ ಬಂದ ಲಂಕಿಣಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

    ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

    ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ (Mysuru) ಗ್ಯಾಸ್ ಸಿಲಿಂಡರ್ (Gas Cylinder) ಸ್ಫೋಟಗೊಂಡು ಸುಮಾರು 10 ಮಂದಿಗೆ ಗಾಯವಾದ ಘಟನೆ ನಡೆದಿದೆ.

    ಬುಧವಾರ ಮೈಸೂರಿನ ಬನ್ನಿಮಂಟಪದ ಅಗ್ನಿಶಾಮಕ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ವಸತಿಗೃಹದ ಮನೆಯೊಂದರಲ್ಲಿ ಗ್ಯಾಸ್ ಲೀಕೇಜ್‍ ಆಗಿದ್ದು, ಬೆಳಗ್ಗೆ ಎದ್ದು ಹಾಲು ಕಾಯಿಸಲು ಬೆಂಕಿ ಹಚ್ಚುವ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಅಕ್ಕಪಕ್ಕದ ಮನೆಯವರಿಗೂ ಬೆಂಕಿ ತಗುಲಿದೆ.

    ಘಟನೆಯಲ್ಲಿ ಒಂದೇ ಮನೆಯ ನಾಲ್ವರು ಹಾಗೂ ಅಕ್ಕಪಕ್ಕದ 6 ಮಂದಿಗೆ ಗಾಯಗಳಾಗಿದೆ. ಅವರಲ್ಲಿ ಇಬ್ಬರು ಮಕ್ಕಳಿದ್ದು, ಓರ್ವ 6 ವರ್ಷ ಹಾಗೂ ಇನ್ನೋರ್ವ 10 ವರ್ಷದ ಬಾಲಕನಾಗಿದ್ದಾನೆ. 6 ಮಂದಿ ಗಾಯಳು ಪೈಕಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ದೇಹದ ಕೆಲ ಭಾಗ ಸುಟ್ಟುಹೋಗಿದೆ. ಇದನ್ನೂ ಓದಿ: ಕಳೆದ‌ ಬಾರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತಾ?

    ಗಾಯಳುಗಳು ಸಮೀಪದ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರೆಲ್ಲರೂ ವೆಂಟಿಲೆಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಘಟನೆ ಬಗ್ಗೆ ಆಸ್ಪತ್ರೆ (Hospital) ಬಳಿ ಸ್ಥಳೀಯರು ಮಾಹಿತಿ ನೀಡಿದರು. ಮೈಸೂರಿನ ಎನ್‌.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಿಕ್ಸಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್- ಪ್ರೀತಿ ನಿರಾಕರಿಸಿದ್ರಿಂದ ಕೊಲೆಗೆ ನಿರ್ಧರಿಸಿದ್ದೆ ಎಂದ ಆರೋಪಿ

    Live Tv
    [brid partner=56869869 player=32851 video=960834 autoplay=true]

  • ಸಿಲಿಂಡರ್ ಸೋರಿಕೆಯಾಗಿ ಬೆಂಕಿ- ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿ ಸಾವು

    ಸಿಲಿಂಡರ್ ಸೋರಿಕೆಯಾಗಿ ಬೆಂಕಿ- ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿ ಸಾವು

    ಬೆಳಗಾವಿ: ಸಿಲಿಂಡರ್ (Gas Cylinder) ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿಯಿಂದ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರ್ಸಿಂಗ್ ಓದುತ್ತಿದ್ದ ಶ್ರೀಧರ್ ಪ್ಯಾಟಿ (19) ಮೃತ ಯುವಕನಾಗಿದ್ದಾನೆ. ಇದನ್ನೂ ಓದಿ: ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ ಅಪ್ಪು ಅಭಿಮಾನಿಗಳು – ಗಂಧದಗುಡಿ ಸಿನಿಮಾ ಕೆಲಕಾಲ ಸ್ಥಗಿತ

    ಮನೆಯಲ್ಲಿ ಸಂಜೆ ವೇಳೆ ಟೀ (Tea) ಮಾಡಲು ಹೋಗಿದ್ದಾಗ ಗ್ಯಾಸ್ ಆನ್ ಮಾಡಿ ಲೈಟರ್ ಹುಡುಕಿದ್ದಾನೆ. ಸ್ವಲ್ಪ ಸಮಯದ ಬಳಿಕ ಲೈಟರ್ ಸಿಕ್ಕಿದೆ. ಅಷ್ಟೊತ್ತಿಗಾಗಲೇ ಅಡುಗೆ ಮನೆ ತುಂಬಾ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದೆ. ಲೈಟರ್ ಹಚ್ಚುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಶ್ರೀಧರ್ ಸಾವನ್ನಪ್ಪಿದ್ದಾನೆ.

    ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಡಿಕ್ಕಿ

    ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಡಿಕ್ಕಿ

    ಮಡಿಕೇರಿ: ಗ್ಯಾಸ್ ಸಿಲಿಂಡರ್ ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನ ಸ್ಥಿತಿ ಗಂಭೀರಗೊಂಡ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಬಳಿ ನಡೆದಿದೆ.

    ಇಂದು ಮಧ್ಯಾಹ್ನ ಸುಂಟಿಕೊಪ್ಪ ಮಾರ್ಗವಾಗಿ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹಳ್ಳಕ್ಕೆ ಬಿಂದಿದೆ. ಗ್ಯಾಸ್ ಸಿಲಿಂಡರ್ ತುಂಬಿದ ಹಿನ್ನೆಲೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿಯಾಗಿದರೂ ಯಾವುದೇ ಅನುಹುತ ಸಂಭವಿಸಿಲ್ಲ. ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ವೇದಿಕೆ ಮೇಲೆ ಉರುಳಿದ ಲೈಟಿಂಗ್ ಟ್ರೇಸ್: ಈರಣ್ಣ ಕಡಾಡಿ ಪಾರು

    ಲಾರಿ ಪಲ್ಟಿ ಹೊಡೆದ ಪರಿಣಾಮದಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಬಂದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಲಾರಿ ಚಾಲಕನನ್ನು ಮಡಿಕೇರಿಯ ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಇದನ್ನೂ ಓದಿ: ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಕೋರ್ ಕಮಿಟಿಯಲ್ಲಿ ಚರ್ಚೆ: ಬೊಮ್ಮಾಯಿ

  • ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ 7 ಕಾರ್ಮಿಕರಿಗೆ ಗಾಯ

    ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ 7 ಕಾರ್ಮಿಕರಿಗೆ ಗಾಯ

    ಬೆಂಗಳೂರು(ಆನೇಕಲ್): ಕಾರ್ಮಿಕರು ಬೆಳಿಗ್ಗೆ ಉಪಹಾರ ಸೇವಿಸಿ ತಮ್ಮ ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತಿದ್ರು, ಇತ್ತ ಓರ್ವ ಕಾರ್ಮಿಕ ಉಪಹಾರ ತಯಾರಿಸುತ್ತಿದ್ದ ಆಗ ಇದ್ದಕಿದ್ದಂತೆ  ಸಿಲಿಂಡರ್‌ಗೆ ಬೆಂಕಿ ತಗುಲಿ ಬ್ಲಾಸ್ಟ್ ಆಗಿ ಇಡೀ ಮನೆ ಹೊತ್ತಿ ಉರಿದಿದೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಈ ಘಟನೆ ನಡೆದಿದೆ. ಜಿಗಣಿ ಪೊಲೀಸ್ ಠಾಣೆ ಹಿಂಬಾಗದಲ್ಲಿರುವ ಮಂಜುನಾಥ್ ರೆಡ್ಡಿ ಮನೆ ಈ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ಆ ಮನೆಯಲ್ಲಿ ಉತ್ತರ ಭಾರತದ 3 ಮಂದಿ ಬಾಡಿಗೆ ಆಧಾರದಲ್ಲಿ ವಾಸವಿದ್ದರು. ಆದರೆ ನಿನ್ನೆ ಹಬ್ಬ ಅಂತ ಹೇಳಿ ಸಂಬಂಧಿಕರು ಸಹ ಮನೆಗೆ ಬಂದಿದ್ದರು ಇಂದು ಬೆಳಿಗ್ಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ವೇಳೆ ಐದು ಮಂದಿಗೆ ಗಂಭೀರ ಗಾಯವಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ಗಾಯಾಳುಗಳನ್ನು ಜಗದೀಶ್. ಶಾಂತಿಬೈ, ಪ್ರಕಾಶ್, ಕಾಡು, ಜೈಮುಲ್, ಮಂಜು ಹಾಗೂ ವಲ್ಲಿ ಎಂದು ಗುರಿತಿಸಲಾಗಿದೆ. ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮುಂಜಾನೆ ಕೆಲಸಕ್ಕೆ ಹೊರಡಲು ಸಿದ್ಧವಾಗುವ ವೇಳೆ ಘಟನೆ ನಡೆದಿದ್ದರಿಂದ ಪ್ರಣಾಪಯಾದಿಂದ ಪಾರಾಗಿದ್ದಾರೆ ಘಟನೆಗೆ ಕಾರಣ ಏನು ಎಂಬುದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕದ ಅಧಿಕಾರಿಗಳಿಂದ ತನಿಖೆ ಕೈಗೊಂಡಿದ್ದಾರೆ ಜೊತೆಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

  • ಚಿನ್ನಾಭರಣ ಸಮೇತ ಗ್ಯಾಸ್ ಸಿಲಿಂಡರ್ ಹೊತ್ತೊಯ್ದ ಕಳ್ಳರು

    ಚಿನ್ನಾಭರಣ ಸಮೇತ ಗ್ಯಾಸ್ ಸಿಲಿಂಡರ್ ಹೊತ್ತೊಯ್ದ ಕಳ್ಳರು

    – 50 ಸಾವಿರ ನಗದು, ದುಬಾರಿ ಬಟ್ಟೆ ಕಳ್ಳತನ

    ಜೈಪುರ: ಚಿನ್ನಾಭರಣ ಸಮೇತ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಕಳ್ಳರು ಹೊತ್ತೊಯ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮನೆಯ ಮಾಲೀಕರು ವೈದ್ಯಕೀಯ ಚೆಕಪ್ ಗಾಗಿ ಆಸ್ಪತ್ರೆಗೆ ತೆರಳಿದ್ದ ವೇಳೆ ಕಳ್ಳತನ ನಡೆದಿದೆ.

    ಅಜ್ಮೇರ್ ಜಿಲ್ಲೆಯ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲ ಬಿ ಬ್ಲಾಕ್ ನಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಮಾಲೀಕ ದೀಪ್‍ಚಂದ್ ಗುಪ್ತಾ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಗುಪ್ತಾ ಕುಟುಂಬದ ಜೊತೆ ಉದಯಪುರಕ್ಕೆ ತೆರಳಿದ್ದರು. ಮನೆಗೆ ಬಂದಾಗ ಹಾಕಿದ್ದ ಬೀಗ ಮುರಿಯಲಾಗಿತ್ತು. ಮನೆಯಲ್ಲಿದ್ದ 50 ಸಾವಿರ ನಗದು, ಚಿನ್ನಭರಣ ಹಾಗೂ ಗ್ಯಾಸ್ ಸಿಲಿಂಡರ್ ಕಳ್ಳತನವಾಗಿದೆ.

    ಕಳ್ಳತನ ಸಂಬಂಧ ಗುಪ್ತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 50 ಸಾವಿರ ನಗದು, ಚಿನ್ನದ ಮಂಗಲಸೂತ್ರ, ಕುಂಡಲ್, ಕಾಲ್ಗೆಜ್ಜೆ, ಕೆಲ ದುಬಾರಿ ಬೆಲೆಯ ಬಟ್ಟೆ ಮತ್ತು ಗ್ಯಾಸ್ ಸಿಲಿಂಡರ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

  • ನಡು ರಸ್ತೆಯಲ್ಲೇ ಸ್ಫೋಟಗೊಂಡು 50 ಮೀ. ಎತ್ತರಕ್ಕೆ ಚಿಮ್ಮಿದ ಗ್ಯಾಸ್ ಸಿಲಿಂಡರ್

    ನಡು ರಸ್ತೆಯಲ್ಲೇ ಸ್ಫೋಟಗೊಂಡು 50 ಮೀ. ಎತ್ತರಕ್ಕೆ ಚಿಮ್ಮಿದ ಗ್ಯಾಸ್ ಸಿಲಿಂಡರ್

    ಮಂಗಳೂರು: ನೋಡ ನೋಡುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾದ ಘಟನೆ ಮಂಗಳೂರಿನ ಜೆಪ್ಪು ಮಾರುಕಟ್ಟೆ ಬಳಿ ನಡೆದಿದೆ.

    ಮಾರ್ಕೆಟ್ ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಲೀಕ್ ಆಗಿದ್ದ ಗ್ಯಾಸ್ ಸಿಲಿಂಡರನ್ನು ಸ್ಥಳೀಯರು ಅಂಗಡಿಯಿಂದ ಹೊರಗೆ ತಂದಿದ್ದರು. ಅಷ್ಟರಲ್ಲೇ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡಿದೆ.

    ಸ್ಫೋಟದ ತೀವ್ರತೆಗೆ ಸಿಲಿಂಡರ್ 50 ಮೀಟರ್ ಎತ್ತರಕ್ಕೆ ಚಿಮ್ಮಿದೆ. ಅದೃಷ್ಟವಶಾತ್ ಯಾರಿಗೂ ಗಾಯ ಸಂಭವಿಸಿಲ್ಲ. ಸಿಲಿಂಡರ್ ನಲ್ಲಿ ಬೆಂಕಿಯಿದ್ದರೂ ಸಿಲಿಂಡರ್ ಪಕ್ಕವೇ ಜನ ನಿಂತಿದ್ದರು. ಅಲ್ಲದೆ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದು, ಕೆಲ ಕಾಲ ಆತಂಕಕ್ಕೀಡುಮಾಡಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಅಕ್ರಮ ಗ್ಯಾಸ್ ಸಿಲಿಂಡರ್ ದಂಧೆಗೆ ಕಡಿವಾಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಅಕ್ರಮ ಗ್ಯಾಸ್ ಸಿಲಿಂಡರ್ ದಂಧೆಗೆ ಕಡಿವಾಣ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೇ ಅಕ್ರಮ ಗ್ಯಾಸ್ ಮಾಫಿಯಾ ಯಾವ ಭಯವೂ ಇಲ್ಲದೆ ರಾಜರೋಷವಾಗಿ ನಡೆಯುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ತಂಡ ರಹಸ್ಯ ಕಾರ್ಯಾಚರಣೆ ಮೂಲಕ ಹೇಗೆ ಗ್ಯಾಸ್ ಸಿಲಿಂಡರ್ ಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಅನ್ನೋದನ್ನ ತಿಳಿಯೋ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿತ್ತು.

    ಬೆಂಗಳೂರಿನ ಬಗಲಗುಂಟೆ ಬಳಿಯ ಬೋನ್ ಮಿಲ್ ನ ಜನರ ವಾಸ ಮಾಡೋ ಮನೆಗಳ ಮಧ್ಯೆ ಗೋಡಾನ್ ಮಾಡಿಕೊಂಡು ಕಳೆದ 4 ವರ್ಷದಿಂದ ಅಕ್ರಮವಾಗಿ ಎಲ್ಲ ಮಾದರಿಯ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆ ವೇಳೆ ಇಂಚಿಂಚೂ ಮಾಹಿತಿಯನ್ನ ಬಿತ್ತರ ಮಾಡಿತ್ತು.

    ವರದಿ ಮಾಡಲು ಬಂದಿರೋ ವಿಚಾರ ತಿಳಿದ ಬಗಲಗುಂಟೆ ಪೊಲೀಸರು ಅಕ್ರಮವಾಗಿ ಗ್ಯಾಸ್ ದಂಧೆ ಮಾಡುತ್ತಿದ್ದವರನ್ನ ಬಂಧಿಸಿದ್ದಾರೆ. ಅಲ್ಲದೆ ಗ್ಯಾಸ್ ಸಿಲಿಂಡರ್, ಆಟೋ, ಹಾಗೂ ಅಂಗಡಿಯನ್ನ ಸಿಝ್ ಮಾಡಿ ಅಕ್ರಮ ಗ್ಯಾಸ್ ದಂಧೆಗೆ ಕಡಿವಾಣ ಹಾಕಿದ್ದಾರೆ.

  • ಕಮರ್ಷಿಯಲ್ ಸಿಲಿಂಡರ್ ತರಿಸೋ ಮುನ್ನ ಎಚ್ಚರ – ನಿಮ್ಮ ಕೈ ಸೇರುವುದ್ರೊಳಗೆ ಕಳವಾಗುತ್ತೆ ಗ್ಯಾಸ್

    ಕಮರ್ಷಿಯಲ್ ಸಿಲಿಂಡರ್ ತರಿಸೋ ಮುನ್ನ ಎಚ್ಚರ – ನಿಮ್ಮ ಕೈ ಸೇರುವುದ್ರೊಳಗೆ ಕಳವಾಗುತ್ತೆ ಗ್ಯಾಸ್

    ದಾವಣಗೆರೆ: ನೀವು ಹೋಟೆಲ್, ಮದುವೆ ಸಮಾರಂಭಗಳಿಗೆ ಕಮರ್ಷಿಯಲ್ ಸಿಲಿಂಡರ್ ತರಿಸುತ್ತಾ ಇದ್ದೀರಾ.. ಹಾಗಾದ್ರೆ ಈ ಸುದ್ದಿ ನೀವು ಓದಲೇಬೇಕು. ಗ್ಯಾಸ್ ಏಜೆನ್ಸಿಗಳಿಂದ ನಿಮ್ ಕೈ ಸೇರುವುದರೊಳಗೆ ಗ್ಯಾಸ್ ಕಳ್ಳತನವಾಗುತ್ತದೆ.

    ಈಗೆಲ್ಲ ಫಾಸ್ಟ್ ಜಮಾನ. ಕಟ್ಟಿಗೆ, ಒಲೆ ಎಂದು ಕೂರುವ ಬದಲು ಮದುವೆ ಸಮಾರಂಭಗಳಿಗೆ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಿ ಕಾರ್ಯಕ್ರಮ ಮುಗಿಸಿಬಿಡುತ್ತಾರೆ. ಆದರೆ ಇದಕ್ಕೂ ಮುನ್ನ ಈ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಭರ್ತಿಯಾಗಿರುತ್ತಾ ಅನ್ನೋದನ್ನ ನಾವು ಪರೀಕ್ಷಿಸಬೇಕಿದೆ. ಯಾಕೆಂದರೆ ಮಾರ್ಗ ಮಧ್ಯೆನೇ ಗ್ಯಾಸ್ ಕದಿಯೋ ಕೆಲಸವನ್ನ ಏಜೆನ್ಸಿ ಸಿಬ್ಬಂದಿ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬಹುತೇಕ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಖತರ್ನಾಕ್ ಕೆಲಸಕ್ಕಿಳಿದಿದ್ದಾರೆ. ಸಿಬ್ಬಂದಿ ಮಾರ್ಗ ಮಧ್ಯದಲ್ಲಿಯೇ ತುಂಬಿರುವ ಸಿಲಿಂಡರ್‍ಗಳನ್ನು ಖಾಲಿ ಸಿಲಿಂಡರ್‍ಗೆ ಡಂಪ್ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ.

    ಯುವಕ: ಏನ್ ಮಾಡ್ತಾ ಇದ್ದೀರಣ್ಣ. ಎಮ್ಟಿಗೆ ಹಾಕ್ತಾ ಇದ್ದೀರಾ.. ತುಂಬಿದ್ದೆಲ್ಲ ಅರ್ಧರ್ಧ ಮಾಡಿ ಒಂದ್ರಲ್ಲಿ ತುಂಬ್ತಾ ಇದ್ದೀರಾ..?
    ಗ್ಯಾಸ್ ಏಜೆನ್ಸಿ ಸಿಬ್ಬಂದಿ: ಖಾಲಿವು ಇದ್ವು..
    ಯುವಕ: ಅದೇನಪ್ಪ ಹೊಲದಲ್ಲಿ ಬಂದು ಮನೆಗೆ ಹಾಕ್ತಾ ಇದ್ದೀರಾ..? ಹೋ.. ಹೊಲ್ದಾಗೆ ಬಂದು ಮನೆಗೆ ಹಾಕ್ತಾ ಇದೀರಾ.. ಅದೇನಪ್ಪ ಜನಗಳಿಗೆಲ್ಲ ತುಂಬಿದೆ ಅಂತ ಕೊಟ್ಟುಬಿಟ್ಟು ಅರ್ಧರ್ಧ ನೀವು ಖಾಲಿ ಮಾಡ್ಕೊಂಡು.
    ಸಿಬ್ಬಂದಿ: ಅಲ್ಲಣ್ಣ.. ಇದು.. ಸಮಾಧಾನ ಇವು.. ಮದುವೆವು..
    ಯುವಕ: ಮದುವೆವೂ..
    ಸಿಬ್ಬಂದಿ: ಹುಃ ಅಣಾ.. ಚೌಟ್ರಿವು ಇವು

    ಯುವಕ: ಚೌಟ್ರಿವೇನು..?
    ಸಿಬ್ಬಂದಿ: ಏ.. ತಗಿಯಣ..
    ಯುವಕ: ನಿಮ್ಮುನ್ನಾ ಬಹಳ ಸರಿ ನೋಡಿದ್ದೀನಿ ಇಲ್ಲಿ.
    ಸಿಬ್ಬಂದಿ: ಏಯ್ ತಗಿಯಣ..
    ಯುವಕ: ತಡಿ ತಡಿ.. ಅಯ್ಯೋ.. ನಿನ್ನ..
    ಸಿಬ್ಬಂದಿ: ಅಯ್ಯೋ ಬಿಡಣ್ಣ.. ಹೊಟ್ಟೆಪಾಡಿಗೆ ಮಾಡ್ಕೋತೀವಿ..
    ಯುವಕ: ಹೊಟ್ಟೆ ಪಾಡಿಗೆ ಮಾಡ್ಕಾ…

    ಹೀಗೆ ತುಂಬಿದ ಸಿಲಿಂಡರ್‍ಗಳನ್ನು ಅರ್ಧಕ್ಕೆ ಮಾಡಿ ಗ್ರಾಹಕರಿಗೆ ಯಾವ ರೀತಿ ಯಾಮಾರಿಸುತ್ತಿದ್ದಾರೆ. ಗೋದಾಮ್‍ನಿಂದ ಸಿಲಿಂಡರ್ ತರೋದು ಅಲ್ಲೇ ಹತ್ತಿರ ಇರೋ ತೋಟಗಳಿಗೆ ಹೋಗಿ ಖಾಲಿ ಸಿಲಿಂಡರ್‍ಗೆ ಡಂಪ್ ಮಾಡಿಕೊಳ್ಳೋದು. ಇದೇ ಇವರ ನಿತ್ಯದ ಕೆಲಸವಾಗಿದೆ. ಗ್ರಾಹಕರು ಮಾತ್ರ ದುಪ್ಪಟ್ಟು ಹಣ ನೀಡಿ ಕಮರ್ಷಿಯಲ್ ಸಿಲಿಂಡರ್‍ಗಳನ್ನು ತರಿಸಿ ಮೋಸಕ್ಕೆ ಒಳಗಾಗುತ್ತಿದ್ದಾರೆ.

    ಒಟ್ಟಿನಲ್ಲಿ ಯಾವುದೇ ಸಭೆ ಸಮಾರಂಭ, ಮದುವೆಗಳಿಗೆ ಸಿಲಿಂಡರ್ ತರಿಸುವುದಕ್ಕೂ ಮುನ್ನ ಸ್ವಲ್ಪ ಯೋಚಿಸಿ. ಗ್ಯಾಸ್ ತೂಕ ಪರಿಶೀಲಿಸಿ. ಇಲ್ಲಾಂದ್ರೆ ಯಾಮಾರೋದು ಗ್ಯಾರಂಟಿ.