Tag: Gas

  • ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ‌ – ಅಣಬೆ ಆಕಾರದಲ್ಲಿ ನಭಕ್ಕೆ ಚಿಮ್ಮಿದ ಬೆಂಕಿ!

    ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ‌ – ಅಣಬೆ ಆಕಾರದಲ್ಲಿ ನಭಕ್ಕೆ ಚಿಮ್ಮಿದ ಬೆಂಕಿ!

    ಕೌಲಾಲಂಪುರ: ಮಲೇಷ್ಯಾದ (Malaysia) ರಾಜಧಾನಿ ಕೌಲಾಲಂಪುರದ ಬಳಿಯ ಪುತ್ರ ಹೈಟ್ಸ್‌ನಲ್ಲಿ ಮಂಗಳವಾರ ಗ್ಯಾಸ್ ಪೈಪ್‌ಲೈನ್‌ ಸ್ಫೋಟಿಸಿ (Gas) ಭೀಕರ ಅಗ್ನಿ ಅವಘಡ (Fire Accident ) ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಅಣಬೆ ಆಕಾರದಲ್ಲಿ ಆಕಾಶದೆತ್ತರಕ್ಕೆ ಚಿಮ್ಮಿದೆ.

    ಪುತ್ರ ಹೈಟ್ಸ್‌ನಲ್ಲಿರುವ ಗ್ಯಾಸ್ ಸ್ಟೇಷನ್ ಬಳಿ ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆ ಸುಮಾರು ಕಿಲೋಮೀಟರ್ ದೂರದವರೆಗೂ ಕಾಣಿಸುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ 12 ಜನ ಗಾಯಗೊಂಡಿದ್ದಾರೆ ಮತ್ತು ಇತರ 82 ಜನರನ್ನು ಅವಘಡ ನಡೆದ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

    ಬೆಳಿಗ್ಗೆ 8:10 ರ ಸುಮಾರಿಗೆ ಅಗ್ನಿ ಅವಘಡದ ಮಾಹಿತಿ ಬಂದಿದೆ. ಪೆಟ್ರೋನಾಸ್ ಅನಿಲ ಪೈಪ್‌ಲೈನ್ ಸೋರಿಕೆಯಾಗಿದ್ದು, ಪೈಪ್‌ಲೈನ್‌ನ 500 ಮೀಟರ್ ಬೆಂಕಿಗೆ ಆಹುತಿಯಾಗಿದೆ. ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ ಮತ್ತು ಕೆಲವು ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆ. ಸಿಲುಕಿರುವ ವ್ಯಕ್ತಿಗಳ ಹಾಗೂ ಸ್ಥಳಾಂತರಿಸಲ್ಪಟ್ಟ ಜನರ ಸಂಖ್ಯೆ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜನರನ್ನು ಪುತ್ರ ಹೈಟ್ಸ್ ಮಸೀದಿ ಸಭಾಂಗಣದ ತಾತ್ಕಾಲಿಕ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿ, ವೈದ್ಯಕೀಯ ನೆರವು ನೀಡಲಾಗಿದೆ. ಸಂಬಂಧಪಟ್ಟ ಅನಿಲ ಪೈಪ್‌ಲೈನ್ ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ಸ್ಫೋಟಗಳನ್ನು ತಪ್ಪಿಸಲು ಉಳಿದ ಇಂಧನವನ್ನು ಖಾಲಿ ಮಾಡಲು ರಕ್ಷಣಾ ಸಿಬ್ಬಂದಿ ಕ್ರಮಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

    ಅಗ್ನಿ ಅವಘಡದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಆಕಾಶಕ್ಕೆ ಬೆಂಕಿ ಚಿಮ್ಮಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – ಮೂವರು ಮಕ್ಕಳು ಸೇರಿ 6 ಮಂದಿ ಸಜೀವ ದಹನ

  • ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದೆ ಗ್ಯಾಸ್‌

    ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದೆ ಗ್ಯಾಸ್‌

    ಕಾರವಾರ: ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಆಗುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

    ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಎರಡು ಗ್ಯಾಸ್ ಟ್ಯಾಂಕರ್ ಹಾಗೂ ಒಂದು ಲಾರಿಯನ್ನು ನಿಲ್ಲಿಸಲಾಗಿತ್ತು. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಒಂದು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಗೆ ಹೋಗಿ ಬಿದ್ದಿದೆ. ಇದನ್ನೂ ಓದಿ: ದಕ್ಷಿಣ ಭಾರತದ ಮೊದಲ ರೋಡ್-ಕಮ್-ರೈಲು ಮೇಲ್ಸೇತುವೆ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ

     

    ಗಂಗಾವಳಿ ನದಿ ವೇಗಕ್ಕೆ 7 ಕಿ.ಮೀ ದೂರಕ್ಕೆ ಕೊಚ್ಚಿ ಹೋಗಿರುವ ಟ್ಯಾಂಕರ್ ಈಗ ಸಗಡಗೇರಿ ಎಂಬಲ್ಲಿ ವಾಲಿ ನಿಂತಿದೆ. ಗ್ಯಾಸ್ ಟ್ಯಾಂಕರ್ ಸ್ಥಿತಿಯನ್ನು ಪರಿಶೀಲಿಸಲು ಬೋಟ್ ಮೂಲಕ ಭಾರತ್ ಗ್ಯಾಸ್‌ ತಜ್ಞರು ತೆರಳಿದಾಗ ಸೋರಿಕೆ ಆಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಮಾನ್‌ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್‌ – 13 ಭಾರತೀಯ ಸಿಬ್ಬಂದಿ ನಾಪತ್ತೆ

    ನೀರಿನಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್‌ನಲ್ಲಿರುವ ಅನಿಲವನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸುವುದೇ ಹೇಗೆ ಎನ್ನುವುದೇ ತಜ್ಞರ ಮುಂದೆ ಇರುವ ದೊಡ್ಡ ಸವಾಲು.

     

    ಮಂಗಳೂರಿನಿಂದ ಧಾರವಾಡಕ್ಕೆ ಟ್ಯಾಂಕರ್‌ ತೆರಳುತ್ತಿತ್ತು. ಈ ಟ್ಯಾಂಕರ್‌ನಲ್ಲಿ ಸುಮಾರು 30 ಟನ್‌ ಅನಿಲವಿದೆ. ಸೋರಿಕೆ ಭೀತಿಯಿಂದ ಪರಿಸರದ ನಿವಾಸಿಗಳಿಗೆ ಬೆಂಕಿ ಒಲೆ ಮತ್ತು ವಿದ್ಯುತ್‌ ದೀಪ ಹಚ್ಚದಂತೆ ಜಿಲ್ಲಾಡಳಿತ ಸೂಚಿಸಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- 10 ದಿನದೊಳಗೆ ಅಂಗನವಾಡಿಗಳಿಗೆ ಹಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- 10 ದಿನದೊಳಗೆ ಅಂಗನವಾಡಿಗಳಿಗೆ ಹಣ

    – ಕ್ರಮಕ್ಕೆ ಮುಂದಾದ ಸಚಿವೆ

    ಬೆಂಗಳೂರು: ಅಂಗನವಾಡಿ (Anganawadi) ಮಕ್ಕಳು ಹಾಗೂ ಗರ್ಭಿಣಿಯರಿಗೆ (Pregnant) ಕೊಡುವ ಮೊಟ್ಟೆ (Egg) ಖರೀದಿ ಹಾಗೂ ಗ್ಯಾಸ್ (Gas) ಖರೀದಿ ದುಡ್ಡು ಕೊಡದೇ ಸತಾಯಿಸುತ್ತಿದ್ದಾರೆ ಎಂಬುದರ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರಗೊಂಡಿತ್ತು. ಈ ವರದಿ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi  Hebbalkar) ಎಚ್ಚೆತ್ತುಕೊಂಡಿದ್ದಾರೆ.

    ಪಬ್ಲಿಕ್ ವರದಿ ಬೆನ್ನಲ್ಲೇ ಕ್ರಮಕ್ಕೆ ಮುಂದಾದ ಸಚಿವೆ, ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದರು. 10 ದಿನದೊಳಗೆ ಅಂಗನವಾಡಿಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದರಾಮಣ್ಣ ಹೇಳಿದ್ದಾರೆ.

    ಇತ್ತ ಬೆಳಗಾವಿಯಲ್ಲಿ (Belagavi) ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮೊಟ್ಟೆ ಖರೀದಿಯಲ್ಲಿ ಪಾರದರ್ಶಕತೆ ಇರಬೇಕು ಮತ್ತು ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಖರೀದಿ ಮಾಡಬೇಕು ಎಂಬ ನಿಟ್ಟಿನಲ್ಲಿ ಇಲಾಖೆಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಯಕರ್ತೆಯರ ಖಾತೆಗೆ ಹಣ ಜಮಾವನೆ ವಿಚಾರದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹಣ ಸಂದಾಯ ಆಗಿದೆ. ಬೀದರ್ ಹಾಗೂ ಬೆಂಗಳೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಸರಿಯಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಏನಾಗಿದೆ ಎಂಬ ಮಾಹಿತಿಯನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 4 ತಿಂಗಳಿಂದ ಗ್ಯಾಸ್ ಬಿಲ್‌, ಮೊಟ್ಟೆ ಹಣವೂ ಇಲ್ಲ- ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರಿಲ್ಲ

    ಬೆಂಗಳೂರಿನಲ್ಲಿ ನಾಲ್ಕು ವರ್ಷದಿಂದ ಒಂದು ಸಾವಿರ ಆಯಾ ಹಾಗೂ 440 ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಈಗಾಗಲೇ 13 ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಇದರ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಸೂಚನೆ ನೀಡುತ್ತೇನೆ. ಹಣಕಾಸು ಬಿಡುಗಡೆ ವಿಚಾರದಲ್ಲಿ ಯಾವಾಗಲೂ ನನ್ನ ಮತ್ತು ಫೈನಾನ್ಸ್ ಡಿಪಾರ್ಟ್‍ಮೆಂಟ್ ನಡುವೆ ಒಂದು ತರಹ ಕಾಂಪಿಟೇಶನ್ ಇದ್ದೇ ಇರುತ್ತದೆ ಎಂದು ಅವರು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (OMC) ಶನಿವಾರ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆಯನ್ನು ಹೆಚ್ಚಿಸಿವೆ ಎಂದು ಮೂಲಗಳು ತಿಳಿಸಿವೆ.

    ವರದಿಗಳ ಪ್ರಕಾರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ (Gas) ಸಿಲಿಂಡರ್ ದರವನ್ನು 209 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 1731.50 ರೂ. ಆಗಲಿದೆ ಎಂದು ತಿಳಿಸಿವೆ.

    ಯಾವ ನಗರದಲ್ಲಿ ಎಷ್ಟು?
    ದೆಹಲಿ – 1,731.50 ರೂ.
    ಮುಂಬೈ – 1,684 ರೂ.
    ಲಕ್ನೋ – 1,845 ರೂ.
    ಚೆನ್ನೈ – 1,898 ರೂ.
    ಬೆಂಗಳೂರು – 1,813 ರೂ.
    ಕೋಲ್ಕತ್ತಾ – 1839 ರೂ. ಇದನ್ನೂ ಓದಿ:  ಅ.7 ರವರೆಗೆ 2,000 ರೂ. ನೋಟು ಬದಲಿಸಿಕೊಳ್ಳಲು ದಿನ ವಿಸ್ತರಿಸಿದ RBI

    ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟ ಉಜ್ವಲ ಯೋಜನೆಯಡಿ ಹೆಚ್ಚುವರಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಅನುಮೋದಿಸಿತು. ಅದನ್ನು ಮುಂದಿನ 3 ವರ್ಷಗಳಲ್ಲಿ ನೀಡಲಾಗುತ್ತಿದ್ದೆ. ಈ ಸಂಪರ್ಕಗಳ ಒಟ್ಟು ವೆಚ್ಚ 1,650 ಕೋಟಿ ರೂ. ಆಗಿದೆ. ಉಜ್ವಲಾ ಯೋಜನೆಯಡಿ ನೀಡಲಾಗುತ್ತಿರುವ ಅಸ್ತಿತ್ವದಲ್ಲಿರುವ ಠೇವಣಿ ಮುಕ್ತ ಸಂಪರ್ಕಗಳ ಮುಂದುವರಿಕೆಯಲ್ಲಿ ಈ ಹೊಸ ಸಂಪರ್ಕಗಳನ್ನು ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

    ಗ್ರಾಮೀಣ ಕುಟುಂಬಗಳ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಡುಗೆ ಆಹಾರಕ್ಕಾಗಿ ಕಟ್ಟಿಗೆಯನ್ನು ಅವಲಂಬಿಸಿರುವ ಕುಟುಂಬಗಳಿಗೆ 75 ಲಕ್ಷ ಹೊಸ ಸಂಪರ್ಕಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ಈ ಠೇವಣಿ ಮುಕ್ತ ಸಂಪರ್ಕಗಳನ್ನು ನೀಡುವ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಲಿದೆ. ನಂತರ ತೈಲ ಮಾರುಕಟ್ಟೆ ಕಂಪನಿಗಳಿಂದ ಮರುಪಾವತಿ ಮಾಡಲಾಗುವುದು ಎಂದು ಠಾಕೂರ್ ಹೇಳಿದರು. ಇದನ್ನೂ ಓದಿ: ಅ.7 ರವರೆಗೆ 2,000 ರೂ. ನೋಟು ಬದಲಿಸಿಕೊಳ್ಳಲು ದಿನ ವಿಸ್ತರಿಸಿದ RBI

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Commercial LPG Cylinder Price: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ

    Commercial LPG Cylinder Price: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ

    ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Cylinder) ಬೆಲೆ ದೆಹಲಿಯಲ್ಲಿ (Delhi) 100 ರೂ.ನಷ್ಟು ಅಗ್ಗವಾಗಿದೆ. ಮಂಗಳವಾರದಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 99.75 ರೂ. ಇಳಿಕೆಯಾಗಿದೆ.

    19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 99.75 ರೂ. ಕಡಿತವಾಗಿದೆ. ಈ ಹಿನ್ನೆಲೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಮಾರಾಟ ಬೆಲೆ 1,680 ರೂ. ಆಗಿದೆ. ಇದನ್ನೂ ಓದಿ: ತರಕಾರಿ ಬೆಲೆಯೂ ತುಟ್ಟಿ – ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಯಾವ ತರಕಾರಿಗೆ ಎಷ್ಟು ದರ?

    ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1852.50 ರೂ. ಆಗಿದೆ. ಕೋಲ್ಕತ್ತಾದಲ್ಲಿ 1820.50 ಹಾಗೂ ಚೆನ್ನೈನಲ್ಲಿ 1852.50 ರೂ. ಆಗಿದೆ. ಆದರೆ ಗೃಹಬಳಕೆ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದನ್ನೂ ಓದಿ: ಇಂದಿನಿಂದ ಎಕ್ಸ್‌ಪ್ರೆಸ್‌ ವೇನಲ್ಲಿ ಬೈಕ್, ಆಟೋ ಸಂಚಾರಕ್ಕೆ ನಿರ್ಬಂಧ – ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    ಹೈದರಾಬಾದ್: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪಶುವೈದ್ಯಕೀಯ ಔಷಧಿ ಕಂಪನಿಯಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಪಕ್ಕದ ಕಂಪನಿ ಅಪ್ಯಾರಲ್ಸ್ ಸಂಸ್ಥೆಯ ಸುಮಾರು 200 ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.

    ಪೋರಸ್ ಲ್ಯಾಬೊರೇಟರೀಸ್‍ನಲ್ಲಿ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ಅಚ್ಚುತಪುರಂ ಪ್ರದೇಶದಲ್ಲಿನ ವಿಶೇಷ ಆರ್ಥಿಕ ವಲಯದ (SEZ) ಪಕ್ಕದ ಸಂಸ್ಥೆಯ ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ. ಅಪ್ಯಾರಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ವಾಂತಿ, ತಲೆನೋವು ಮತ್ತು ಕಣ್ಣುರಿ ಕಾಣಿಸಿಕೊಂಡ ಪರಿಣಾಮ ಎಲ್ಲ ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

    ಪೋರಸ್ ಪಕ್ಕದಲ್ಲಿರುವ ಬ್ರಾಂಡಿಕ್ಸ್ ಎಂಬ ಕಂಪನಿ 1,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಬ್ರಾಂಡಿಕ್ಸ್ ಕ್ಯಾಂಪಸ್ ಸೀಡ್ಸ್ ಅಪರೆಲ್ ಇಂಡಿಯಾ ಎಂಬ ಇನ್ನೊಂದು ಕಂಪನಿಯನ್ನು ಹೊಂದಿದೆ. ಕಂಪನಿಯಲ್ಲಿ 1,800 ಮಂದಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಬಳಿಕ ಅಕ್ಕಪಕ್ಕದ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ತಕ್ಷಣ ಸ್ಥಳಾಂತರಿಸಿದ ಪರಿಣಾಮ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ

    ಅಸ್ವಸ್ಥಗೊಂಡ ಮಹಿಳಾ ಕಾರ್ಮಿಕರನ್ನು ಅಚ್ಯುತಪುರಂನ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅನಕಪಲ್ಲಿಯ ಎನ್‍ಟಿಆರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 1,800ಕ್ಕೂ ಅಧಿಕ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಡಿಸ್ಚಾರ್ಚ್ ಮಾಡಲಾಗಿದೆ.

  • ಗ್ಯಾಸ್ ಲೀಕ್: ಅಪಾರ್ಟ್‍ಮೆಂಟ್‍ನಲ್ಲಿ ತಾಯಿ, ಇಬ್ಬರು ಪುತ್ರಿಯರ ಶವ ಪತ್ತೆ

    ಗ್ಯಾಸ್ ಲೀಕ್: ಅಪಾರ್ಟ್‍ಮೆಂಟ್‍ನಲ್ಲಿ ತಾಯಿ, ಇಬ್ಬರು ಪುತ್ರಿಯರ ಶವ ಪತ್ತೆ

    ನವದೆಹಲಿ: ರಾಷ್ಟ್ರ ರಾಜಧಾನಿಯ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಶನಿವಾರ ತಡರಾತ್ರಿ ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿನ ಅಪಾರ್ಟ್‍ಮೆಂಟ್‍ನಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.

    ಮಂಜು (54) ಮಹಿಳೆ ಮತ್ತು ಅವರ ಇಬ್ಬರು ಪುತ್ರಿಯರಾದ ಅಂಶಿಕಾ (27) ಮತ್ತು ಅಂಕು (25) ಅವರು ತಮ್ಮ ಮನೆಯೊಳಗೆ ಗ್ಯಾಸ್‍ನ ವಿಷಕಾರಿ ಹೊಗೆಯನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ 8.55ಕ್ಕೆ ವಸಂತ ವಿಹಾರ್‌ನಲ್ಲಿರುವ ವಸಂತ ಅಪಾರ್ಟ್‍ಮೆಂಟ್‍ನ ಫ್ಲಾಟ್ ಸಂಖ್ಯೆ 207 ಒಳಗಿನಿಂದ ಬೀಗ ಹಾಕಲ್ಪಟ್ಟಿದೆ. ಮನೆಯಲ್ಲಿರುವ ಯಾರು ಪ್ರತಿಕ್ರಿಯಿಸುತ್ತಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ನಿಧಿಗಳ್ಳರಿಂದ ಐತಿಹಾಸಿಕ ಬೀರೇಶ್ವರ ದೇವರ ವಿಗ್ರಹ ಕಳ್ಳತನ

    Deadly gas, do not light match': Chilling note by woman, daughters in Delhi's triple suicide - Cities News

    ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೋಡಿದಾಗ ಎಲ್ಲ ಕಡೆಯಿಂದ ಬಾಗಿಲು ಮತ್ತು ಕಿಟಕಿ ಮುಚ್ಚಿರುವುದು ಕಂಡುಬಂದಿದೆ. ಈ ಹಿನ್ನೆಲೆ ಪೊಲೀಸರು ಬಾಗಿಲು ಒಡೆದು ತೆಗೆದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ನ್ನು ಹೊರತೆಗೆಯಲಾಗಿದೆ. ರೂಮ್‍ನಲ್ಲಿ ಪರಿಶೀಲಿಸಿದಾಗ, ಮೂರು ಶವಗಳು ಹಾಸಿಗೆಯ ಮೇಲೆ ಕಂಡುಬಂದಿದೆ. ಅಷ್ಟೇ ಅಲ್ಲದೇ ಈ ವೇಳೆ ಆತ್ಮಹತ್ಯೆ ಪತ್ರವೂ ಇತ್ತು. ಈ ಹಿನ್ನೆಲೆ ಇದು ಆಕಸ್ಮಿಕವಲ್ಲ, ಆತ್ಮಹತ್ಯೆ ಎಂದು ಶಂಕಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ(ನೈಋತ್ಯ) ಮನೋಜ್.ಸಿ ಹೇಳಿದರು.

    ಏಪ್ರಿಲ್ 2021 ರಲ್ಲಿ ಮಂಜು ಅವರ ಪತಿ ಕೋವಿಡ್‍ನಿಂದ ನಿಧನರಾಗಿದ್ದರು. ಈ ಹಿನ್ನೆಲೆ ಕುಟುಂಬವು ಖಿನ್ನತೆಗೆ ಒಳಗಾಗಿತ್ತು. ಅಷ್ಟೇ ಅಲ್ಲದೇ ಮಂಜು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಮೇಲ್ನೋಟಕ್ಕೆ ಅವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆಂದು ತೋರುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಗೆ ಐಒಎ ಆಸಕ್ತಿ: ಅಶ್ವಥ್ ನಾರಾಯಣ್

  • ದಿನ ಬಳಕೆಯ ಸಿಲಿಂಡರ್‌ ಬೆಲೆ 50 ರೂ. ಏರಿಕೆ

    ದಿನ ಬಳಕೆಯ ಸಿಲಿಂಡರ್‌ ಬೆಲೆ 50 ರೂ. ಏರಿಕೆ

    ನವದೆಹಲಿ: ರಷ್ಯಾ ಉಕ್ರೇನ್‌ ಯುದ್ಧ ಈಗ ಜನರ ಮೇಲೆ ನೇರ ಪರಿಣಾಮ ಬೀರಿದ್ದು ಗೃಹ ಬಳಕೆಯ ಸಿಲಿಂಡರ್‌ ದರ 50 ರೂ. ಏರಿಕೆಯಾಗಿದೆ.

    2021ರ ಅಕ್ಟೋಬರ್‌ 6 ರ ಬಳಿಕ ಮೊದಲ ಬಾರಿಗೆ ದರ ಏರಿಕೆಯಾಗಿದೆ. 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಮಾ.22ರ ಮಧ್ಯರಾತ್ರಿಯಿಂದಲೇ ಏರಿಕೆ ಕಂಡಿದೆ.

    ಬೆಂಗಳೂರಿನಲ್ಲಿ ಈ ಮೊದಲು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 902.50 ರೂ. ಇದ್ದರೆ ಈಗ ಬೆಲೆ 952.50 ರೂ.ಗೆ ಏರಿಕೆಯಾಗಿದೆ.

    ಯಾವ ನಗರದಲ್ಲಿ ಎಷ್ಟು?
    ಮುಂಬೈ – 949.50 ರೂ.
    ಕೋಲ್ಕತ್ತಾ – 965.50 ರೂ.
    ಲಕ್ನೋ – 987.50 ರೂ.
    ಪಾಟ್ನಾ – 1039.50 ರೂ.

  • ರಷ್ಯಾದ ತೈಲ, ಅನಿಲ ಆಮದಿಗೆ ಅಮೆರಿಕ ನಿರ್ಬಂಧ

    ರಷ್ಯಾದ ತೈಲ, ಅನಿಲ ಆಮದಿಗೆ ಅಮೆರಿಕ ನಿರ್ಬಂಧ

    ವಾಷಿಂಗ್ಟನ್: ಉಕ್ರೇನ್‌ ಮೇಲಿನ ರಷ್ಯಾ ಯುದ್ಧವನ್ನು ಖಂಡಿಸಿ ರಷ್ಯಾದ ಅನಿಲ, ತೈಲ ಸೇರಿ ಎಲ್ಲಾ ಬಗೆಯ ಆಮದುಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಿಳಿಸಿದ್ದಾರೆ.

    ನಮ್ಮ ಅನೇಕ ಯೂರೋಪಿಯನ್‌ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು ನಮ್ಮೊಂದಿಗೆ ಸೇರುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಆದರೆ ನಾವು ಈ ನಿಷೇಧದ ತಿಳಿವಳಿಕೆಯೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ

    ನಾವು ಇತಿಹಾಸದಲ್ಲಿ ಆರ್ಥಿಕ ನಿರ್ಬಂಧಗಳ ಅತ್ಯಂತ ಮಹತ್ವದ ಪ್ಯಾಕೇಜ್‌ ಅನ್ನು ಜಾರಿಗೊಳಿಸುತ್ತಿದ್ದೇವೆ. ಇದು ರಷ್ಯಾದ ಆರ್ಥಿಕತೆಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತಿದೆ ಎಂದಿದ್ದಾರೆ.

    ನಾವು ರಷ್ಯಾದ ತೈಲ, ಅನಿಲ ಮತ್ತು ಇಂಧನ ಆಮದುಗಳನ್ನು ನಿಷೇಧಿಸುತ್ತಿದ್ದೇವೆ. ಯುಎಸ್‌ ಬಂದರುಗಳಲ್ಲಿ ರಷ್ಯಾದ ತೈಲವು ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ಅಮೆರಿಕದ ಜನರು ಪುಟಿನ್‌ ಅವರಿಗೆ ಮತ್ತೊಂದು ಪ್ರಬಲ ಹೊಡೆತವನ್ನು ನೀಡುತ್ತಾರೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

  • ಗ್ಯಾಸ್ ವಿತರಣಾ ಯೋಜನೆಗೆ 7000 ಕೋಟಿ ರೂ. ಹೂಡಿಕೆ: ಇಂಡಿಯನ್ ಆಯಿಲ್

    ಗ್ಯಾಸ್ ವಿತರಣಾ ಯೋಜನೆಗೆ 7000 ಕೋಟಿ ರೂ. ಹೂಡಿಕೆ: ಇಂಡಿಯನ್ ಆಯಿಲ್

    ನವದೆಹಲಿ: ಗ್ಯಾಸ್ ವಿತರಣೆಯ ಹೊಸ ಯೋಜನೆಗಾಗಿ 7,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ. ಮನೆ, ವಾಹನ ಹಾಗೂ ಸಣ್ಣ ಕೈಗಾರಿಕೆಗಳಿಗೆ ಗ್ಯಾಸ್ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.

    ಚಿಲ್ಲರೆ ವ್ಯಾಪಾರ, ಹೊಸ ಪ್ರದೇಶಗಳಿಗೆ ಪೈಪ್ ಲೈನ್ ಸೇರಿದಂತೆ ಹಲವು ಗ್ಯಾಸ್ ಮಾರಾಟ ಜಾಲಕ್ಕೆ ಮೂಲಸೌಕರ್ಯವನ್ನು ನಿರ್ಮಿಸಲು 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಗುರಿ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಯೋಗಿ ಸರ್ಕಾರದಿಂದ 16.5 ಲಕ್ಷ ಯುವಕರು ಉದ್ಯೋಗದಿಂದ ವಂಚಿತ: ಪ್ರಿಯಾಂಕಾ ಗಾಂಧಿ

    ವಿವಿಧ ರಾಜ್ಯಗಳ 61 ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳು, ಮನೆ, ವಾಹನಗಳಿಗೆ ಅನಿಲ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ಇಂಡಿಯನ್ ಆಯಿಲ್ ಕಂಪನಿ ತಿಳಿಸಿದೆ. ಇದನ್ನೂ ಓದಿ: ಗೂಗಲ್ ಮೀಟ್‍ನಲ್ಲಿ ಮದುವೆ – ಝೊಮ್ಯಾಟೊ ಊಟ

    ಇಂಡಿಯನ್ ಆಯಿಲ್ ಕಂಪನಿಗೆ ನೀಡಲಾದ ಪರವಾನಗಿಗಳು ಕೆಲವು ರಾಜ್ಯಗಳ ಪ್ರಮುಖ ಜಿಲ್ಲೆಗಳಿಗೆ ಮಾತ್ರವೇ ಸಂಬಂಧ ಪಡುತ್ತದೆ. ಈಗಾಗಲೇ ಕಂಪನಿ 20 ಸಾವಿರ ಕೋಟಿ ರೂ. ಅನಿಲ ಮಾರಾಟದ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದಿದೆ.