Tag: Garment

  • ಬೆಂಗಳೂರಿನಲ್ಲಿ ಶೇ.30 ರಷ್ಟು ಕಾರ್ಮಿಕರೊಂದಿಗೆ ಗಾರ್ಮೆಂಟ್ಸ್ ಪ್ರಾರಂಭ

    ಬೆಂಗಳೂರಿನಲ್ಲಿ ಶೇ.30 ರಷ್ಟು ಕಾರ್ಮಿಕರೊಂದಿಗೆ ಗಾರ್ಮೆಂಟ್ಸ್ ಪ್ರಾರಂಭ

    ಬೆಂಗಳೂರು: ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿ ಶೇ.30 ರಷ್ಟು ನೌಕರರನ್ನು ಬಳಸಿಕೊಂಡು ಉತ್ಪಾದನೆ ಶುರು ಮಾಡುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಗಾರ್ಮೆಂಟ್ಸ್ ಗಳು ಕಾರ್ಯಾರಂಭ ಶುರು ಮಾಡಿಕೊಂಡಿದೆ.

    ಪೀಣ್ಯ ಬಳಿ ಇರುವ ಎಂ ಎಸ್ ಗಾರ್ಮೆಂಟ್ಸ್  ನಲ್ಲಿ ಕೆಲಸ ಮಾಡುವ ನೌಕರರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ.  ಒಳ ಹೋಗುವ ಮೊದಲು ಅಲ್ಲಿನ ಸಿಬ್ಬಂದಿ ಪ್ರತಿ ನೌಕರರ ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡಲಾಗುತ್ತದೆ.  ಜೊತೆಗೆ ಸ್ಯಾನಿಟೈಸರ್ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗಾರ್ಮೆಂಟ್ಸ್ ಸಿಬ್ಬಂದಿ ಗುಂಪು ಸೇರಬಾರದು ಎಂದು ತಿಳಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಿದ್ದಾರೆ.

    ಗಾರ್ಮೆಂಟ್ಸ್ ಒಳಭಾಗದಲ್ಲೂ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.

    ಮಾಲೀಕರಾದ ಮಂಜು ಮಾತಾನಾಡಿ, ಲಾಕ್ ಡೌನ್ ಮತ್ತು ಕೊರೊನಾ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಆಗುತ್ತಿದೆ. ಅದರೂ ಜೀವನ ಮಾಡಬೇಕಾಗಿದೆ. ಸರ್ಕಾರದ ನಿಯಮಗಳ ಪ್ರಕಾರವೇ ನಾವೂ ಉತ್ಪಾದನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅನ್‍ಲಾಕ್‍ಗೂ ಮೊದಲೇ ಕೊವೀಡ್ ನಿಯಮ ಉಲ್ಲಂಘನೆ- ಸೋಂಕು ಹರಡುವ ಭೀತಿ

    ಈ ಗಾರ್ಮೆಂಟ್ಸ್ ನಲ್ಲಿ ಕೋವಿಡ್ ಸಮಯದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಪಿಪಿಇ ಕಿಟ್ ಗಳನ್ನು ತಯಾರಿಸಲಾಗುತ್ತಿದೆ.

  • ಕರ್ನಾಟಕ ಲಾಕ್‍ಡೌನ್ – ಗಾರ್ಮೆಂಟ್ಸ್ ತೆರೆಯಲು ಅನುಮತಿ

    ಕರ್ನಾಟಕ ಲಾಕ್‍ಡೌನ್ – ಗಾರ್ಮೆಂಟ್ಸ್ ತೆರೆಯಲು ಅನುಮತಿ

    ಬೆಂಗಳೂರು: ಲಾಕ್‍ಡೌನ್‍ಗಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಮತ್ತೆ ಬದಲಾವಣೆಯಾಗಿದೆ. ಪರಿಷ್ಕೃತ ಮಾರ್ಗಸೂಚಿಯಲ್ಲಿ ಗಾರ್ಮೆಂರ್ಟ್ ಗಳಲ್ಲಿ ಶೆ.50ರಷ್ಟು ನೌಕರರಿಗೆ ಅನುಮತಿ ಕೊಡಲಾಗಿದೆ.

    ಉತ್ಪಾದನಾ ವಲಯದ ಗಾರ್ಮೆಂಟ್ಸ್ ಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ಬಹುತೇಕ ಗಾರ್ಮೇಂಟ್ಸ್ ಗಳು  ಉತ್ಪಾದನಾ ವಲಯವೇ ಆಗಿರುವ ಕಾರಣ ಸರ್ಕಾರದ ಪರಿಷ್ಕೃತ  ಆದೇಶ ಎಲ್ಲಾ ಗಾರ್ಮೆಂಟ್ಸ್ ಗಳಿಗೆ ಅನ್ವಯವಾಗಲಿದೆ.

    ಗಾರ್ಮೆಂಟ್ಸ್ ನೌಕರರು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಗಾರ್ಮೆಂಟ್ಸ್ ನೌಕರರು ಹಳ್ಳಿಗಳಿಗೆ ತೆರಳಿರುವ ಕಾರಣ ಸರ್ಕಾರದ ಹೊಸ ಆದೇಶದಿಂದ ಗೊಂದಲ ಉಂಟಾಗಿದೆ.