Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಲಕ್ನೋ: ಇತ್ತೀಚಿನ ಮದುವೆಗಳು ಮಂಟಪಕ್ಕೆ ಬಂದು ಮುರಿದು ಬೀಳುವುದು ಹೆಚ್ಚಾಗಿದೆ. ಸಿನಿಮಾ ಸ್ಟೈಲ್‍ನಲ್ಲಿ ಮದುವೆ ನಡೆದ ಉದಾಹರಣೆಗಳಿವೆ. ಆದರೆ ಇಲ್ಲೊಂದು ಜೋಡಿ ಕುತ್ತಿಗೆಗೆ ಹಾರ ಹಾಕುವ ಬದಲಾಗಿ, ಎಸೆದಿದ್ದಾನೆ ಎಂದು ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

ಸಂಪ್ರದಾಯದಂತೆ ವರನು, ವಧು ಕುತ್ತಿಗೆಗೆ ಹಾರವನ್ನು ಹಾಕುವ ಬದಲು ಎಸೆದಿದ್ದಾನೆ. ವರನ ವರ್ತನೆಯಿಂದ ಅಸಮಾಧಾನಗೊಂಡ ವಧು, ಅವನನ್ನು ಮದುವೆಯಾಗಲು ನಿರಾಕರಿಸಿದಳು. ಈ ಘಟನೆ ಬಿದುನಾ ಪೊಲೀಸ್ ವೃತ್ತದ ವ್ಯಾಪ್ತಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

ವಧು ಆತನೊಂದಿಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಮದುವೆ ಮುಂದುವರಿಸಲು ವಧುವಿನ ಮನವೊಲಿಸಲು ಕುಟುಂಬದವರು ಪ್ರಯತ್ನಿಸಿದರು. ಆದರೆ ವಧು ಈ ವಿಚಾರವಾಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಈ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. 2 ಕುಟುಂಬಗಳ ನಡುವೆ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದೇ ಇದ್ದಾಗ ಎರಡು ಕುಟುಂಬಗಳು ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು ಹಿಂದಿರುಗಿಸಿ, ಮದುವೆ ಮುರಿದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

ಮದುವೆ ಮಂಟಪದವರೆಗೆ ಬಂದು ಮುರಿದುಕೊಂಡು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ತಮಿಳುನಾಡಿನ ಕಡಲೂರಿನಲ್ಲಿ, ಸೋದರ ಸಂಬಂಧಿಯೊಂದಿಗೆ ವಧು ನೃತ್ಯ ಮಾಡಿದ್ದಕ್ಕಾಗಿ ವರನು ಆಕೆಯ ಕೆನ್ನೆಗೆ ಹೊಡೆದಿದ್ದನು, ನಂತರ ಈ ವಿಚಾರವಾಗಿ ಕೋಪಗೊಂಡ ವಧು ಅದೇ ಮುಹೂರ್ತದಲ್ಲಿ ಇನ್ನೊಬ್ಬನನ್ನು ಮದುವೆಯಾಗಿದ್ದಳು.

ರಾಂಚಿ: ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆಗೈದ 7 ಆರೋಪಿಗಳಿಗೆ ಹೂಹಾರ ಹಾಕಿ ಆಕ್ರೋಶಕ್ಕೆ ಒಳಗಾಗಿದ್ದ ಜಯಂತ್ ಸಿನ್ಹಾ ವಿರುದ್ಧ ಇದೀಗ ತಂದೆ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಗರಂ ಆಗಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿನ್ಹಾ, ಮಗನ ಈ ಕಾರ್ಯವನ್ನು ಯಾವುದೇ ಕಾರಣಕ್ಕೂ ನಾನು ಒಪ್ಪಲು ಸಿದ್ಧನಿಲ್ಲ. ಈ ಹಿಂದೆ ನಾನು ಒಬ್ಬ ನಾಲಾಯಕ್ ಮಗನ ಅಪ್ಪನಾಗಿದ್ದೆ. ಆದ್ರೆ ಇದೀಗ ಪಾತ್ರಗಳು ಬದಲಾಗಿವೆ. ಇದು ಟ್ವಿಟ್ಟರ್ ಮಹಿಮೆ ಅಂತ ಹೇಳೋ ಮೂಲಕ ಮಗನ ವಿರುದ್ಧ ಕೆಂಡಾಮಂಡಲಾಗಿದ್ದಾರೆ.
Earlier I was the Nalayak Baap of a Layak Beta. Now the roles are reversed. That is twitter. I do not approve of my son's action. But I know even this will lead to further abuse. You can never win.
— Yashwant Sinha (@YashwantSinha) July 7, 2018
ಏನಿದು ಘಟನೆ?:
ಕಳೆದ ವರ್ಷ ಜೂನ್ ತಿಂಗಳಲ್ಲಿ ಜಾರ್ಖಂಡ್ ನ ರಾಮ್ ಗ್ರಹ್ ನಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಅವರನ್ನ ಕಾರಿನಿಂದ ಎಳೆದು ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಸೇರಿ 11 ಮಂದಿ ಜೈಲು ಪಾಲಾಗಿದ್ದರು. ಇದೀಗ ಒಂದು ವರ್ಷದ ನಂತರ ಜೂನ್ 29ರಂದು ಜಾರ್ಖಂಡ್ ಹೈಕೋರ್ಟ್ 8 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.ಹೀಗಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಇವರೆಲ್ಲರೂ ರಾಂಚಿಯಲ್ಲಿರೋ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಸಚಿವರು ಎಲ್ಲರನ್ನೂ ಹಾರ ಹಾಕಿ ಸ್ವಾಗತಿಸಿದ್ದಾರೆ.
ಈ ಕುರಿತ ಭಾವಚಿತ್ರಗಳು ಇದೀಗ ವೈರಲ್ ಆಗಿದ್ದು, ಇದೀಗ ಮಗ ಜಯಂತ್ ಸಿನ್ಹಾ ವಿರುದ್ಧ ತಂದೆ ಯಶ್ವಂತ್ ಸಿಂಗ್ ಕಿಡಿಕಾರಿದ್ದಾರೆ.
There you are. Exactly as I had predicted. You can never win.
— Yashwant Sinha (@YashwantSinha) July 7, 2018

ಮಂಡ್ಯ: ತಮಗೆ ಹಾಕಿದ ಸೇಬಿನ ಹಾರವನ್ನು ಹರಾಜು ಹಾಕಿ ಆ ಹಣವನ್ನು ತಮ್ಮ ಪಕ್ಷದ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಸುರೇಶ್‍ಗೌಡ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದಾರೆ.
ನಾಗಮಂಗಲ ಕ್ಷೇತ್ರ ವ್ಯಾಪ್ತಿಗೆ ಬರುವ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಪಕ್ಷದ ಅಭ್ಯರ್ಥಿ ಸುರೇಶ್‍ಗೌಡ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದರು. ಈ ವೇಳೆ ದೇವೇಗೌಡರಿಗೆ ಅಭಿಮಾನಿಗಳು ಸುಮಾರು 200ಕೆಜಿ ತೂಕದ ಸೇಬಿನ ಹಾರ ಹಾಕಿದ್ದರು.

ಸೇಬಿನ ಹಾರವನ್ನು ವೇದಿಕೆಯ ಮೇಲೆ ಹರಾಜು ಹಾಕಲಾಯಿತ್ತು. ಮೊದಲು ಮಾಜಿ ಶಾಸಕ ಶಿವರಾಮೇಗೌಡ ಸೇಬಿನ ಹಾರಕ್ಕೆ ಒಂದು ಲಕ್ಷ ಬೆಲೆ ಕಟ್ಟಿದ್ದರು. ನಂತರ ಬೆಟ್ಟೇಗೌಡ ಸೇಬಿನ ಹಾರಕ್ಕೆ ಮೂರು ಲಕ್ಷ ಬೆಲೆ ಕಟ್ಟಿದ್ದರು. ಅವರನ್ನೂ ಮೀರಿಸಿ ಬೆಂಗಳೂರಿನ ಜೆಡಿಎಸ್ ಮುಖಂಡರೊಬ್ಬರು ಸೇಬಿನ ಹಾರಕ್ಕೆ ಮೂರೂವರೆ ಲಕ್ಷ ಬೆಲೆ ಕಟ್ಟಿದ್ದರು.
ನಂತರ ಐದು ಲಕ್ಷಕ್ಕೆ ಹರಾಜು ಕೂಗಲಾಯಿತ್ತು. ಅಂತಿಮವಾಗಿ ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನಸ್ವಾಮಿ ಸೇಬಿನ ಹಾರವನ್ನು ಆರು ಲಕ್ಷಕ್ಕೆ ಹರಾಜಿನಲ್ಲಿ ಕೊಂಡುಕೊಂಡರು. ಹರಾಜಿನ ನಂತರ ವೇದಿಕೆಯಲ್ಲೇ ಜೆಡಿಎಸ್ ಮುಖಂಡರು ಒಂದೊಂದು ಸೇಬನ್ನು ತಿಂದು ರುಚಿ ನೋಡಿದ್ದು ವಿಶೇಷವಾಗಿತ್ತು.

ಪಾಟ್ನಾ: ಮದುವೆಯಲ್ಲಿ ವಧುವಿಗೆ ವರ ಹಾರ ಹಾಕಿದ ಬೆನ್ನೆಲ್ಲೆ ಪ್ರಿಯಕರ ಸಿಂಧೂರ ಹಚ್ಚಿದ (ಬೈತಲೆಗೆ ಕುಂಕುಮ) ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ವೇದಿಕೆ ಮೇಲೆ ವಧು ಹಾಗೂ ವರ ಹಾರ ಬದಲಾಯಿಸಿಕೊಳ್ಳಲು ನಿಂತಿದ್ದರು. ಆಗ ತಕ್ಷಣ ವಧುವಿನ ಪ್ರಿಯಕರ ತನ್ನ ನಾಲ್ಕೈದು ಸ್ನೇಹಿತರ ಜೊತೆ ವೇದಿಕೆ ಹತ್ತಿ ಸಿಂಧೂರ ಹಾಕಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಜನರು ಒಂದು ಕ್ಷಣ ದಂಗಾದರು.
ಪ್ರಿಯಕರ ವಧುವಿನ ಹಣೆಗೆ ಸಿಂಧೂರ ಹಾಕಿದ ನಂತರ ಮದುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ನಂತರ ಗ್ರಾಮದ ಹಿರಿಯರು ಬಂದು ವಿಚಾರಿಸಿದಾಗ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ನಂತರ ವಧುವನ್ನು ತನ್ನ ಪ್ರಿಯಕರನ ಜೊತೆ ಗ್ರಾಮಸ್ಥರು ಕಳುಹಿಸಿಕೊಟ್ಟಿದ್ದಾರೆ ಅಂತಾ ವರದಿಯಾಗಿದೆ.

ವಧುವಿನ ಕುಟುಂಬದವರು ಮದುವೆಯನ್ನು ಬೇರೆ ಕಡೆ ನಿಶ್ಚಯ ಮಾಡಿದ್ದು, ಮದುವೆಯ ಶಾಸ್ತ್ರ ಸಂಪ್ರದಾಯಗಳೆಲ್ಲ ನೆರವೇರಿತ್ತು. ವರ ಮೆರವಣಿಗೆಯಿಂದ ನೇರವಾಗಿ ಹಾರ ಬದಲಾಯಿಸಿಕೊಳ್ಳಲು ವೇದಿಕೆ ಮೇಲೆ ಬಂದರು. ವರ ವಧುವಿಗೆ ಹಾರ ಹಾಕುವ ಸಮಯದಲ್ಲೇ ಆಕೆಯ ಪ್ರಿಯಕರ ವೇದಿಕೆ ಮೇಲೆ ಹತ್ತಿ ಯುವತಿಗೆ ಸಿಂಧೂರ ಹಚ್ಚಿದ್ದಾನೆ.
ಈ ಘಟನೆ ನಡೆದ ನಂತರ ಮದುವೆ ಮನೆ ಗಲಾಟೆಗಳು ಆರಂಭವಾಗಿದೆ. ವಧುವಿನ ಕುಟುಂಬಸ್ಥರು ಎಲ್ಲರೂ ಸೇರಿ ಪ್ರಿಯಕರ ಹಾಗೂ ಆತನ ಸ್ನೇಹಿತರಿಗೆ ಥಳಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡರು. ಇದನ್ನು ನೋಡಿದ ವಧು ತನ್ನ ಪ್ರಿಯಕರನನ್ನು ಬಿಟ್ಟುಬಿಡಿ ಎಂದು ಜೋರಾಗಿ ಕಿರುಚಲು ಶುರು ಮಾಡಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.

ವಧು ಹಾಗೂ ಆಕೆಯ ಪ್ರಿಯಕರನ ಬಗ್ಗೆ ವಿಚಾರಿಸಿದ್ದಾಗ ನಾವು ಮೂರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಈ ವಿಚಾರ ನನ್ನ ತಂದೆ- ತಾಯಿಗೂ ಗೊತ್ತಿತ್ತು. ಆದರೆ ಅವರು ಬಲವಂತವಾಗಿ ನನ್ನ ಮದುವೆಯನ್ನು ಮಾಡಲು ನಿರ್ಧರಿಸಿದ್ದರು. ನಂತರ ನನಗೆ ಹೆದರಿಸಿ ನನ್ನ ಮದುವೆಯನ್ನು ಬೇರೊಬ್ಬ ಜೊತೆ ನಿಶ್ಚಯಿಸಿದ್ದರು ಎಂದು ವಧು ಗ್ರಾಮಸ್ಥರ ಮುಂದೆ ಹೇಳಿಕೆ ನೀಡಿದ್ದಾಳೆ.
ವಧು ಹಾಗೂ ಆಕೆಯ ಪ್ರಿಯಕರ ಫೋಟೋವನ್ನು ನೋಡಿದ ವರ ಮತ್ತೊಮ್ಮೆ ವಧುವಿನ ನಿರ್ಧಾರವನ್ನು ಕೇಳಿದ್ದನು. ಆಗ ವಧು ತನ್ನ ಪ್ರಿಯಕರನ ಜೊತೆ ಹೋಗುವುದಾಗಿ ಹಠ ಮಾಡುತ್ತಿದ್ದಳು. ಆಗ ವರ ಮೆರವಣಿಗೆ ಮೂಲಕ ಹಿಂದಿರುಗಲು ನಿರ್ಧರಿಸಿದ್ದರು. ನಂತರ ಗ್ರಾಮಸ್ಥರು ಹಾಗೂ ಪೋಷಕರು ವಧುವನ್ನು ತನ್ನ ಪ್ರಿಯಕರನ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟರು ಎಂದು ವರದಿಯಾಗಿದೆ.

ಮೈಸೂರು: ನೆಚ್ಚಿನ ಜನನಾಯಕನನ್ನು ಮೆಚ್ಚಿಸೋಕ್ಕೆ ಅಭಿಮಾನಿಗಳು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇಬು ಹಣ್ಣುಗಳ ಹಾರ ಹಾಕಿ ಸ್ವಾಗತ ಮಾಡಲಾಗಿತ್ತು.
ಈಗ ಅಭಿಮಾನಿಯೊಬ್ಬರು ಎಚ್‍ಡಿ ಕುಮಾರಸ್ವಾಮಿ ಅವರಿಗೆ ರಾಗಿ ತೆನೆ ಹಾರ ಅರ್ಪಿಸಿ ಅಭಿಮಾನ ಮೆರೆದಿದ್ದಾರೆ. ಜಿಲ್ಲೆಯ ಟಿ.ನರಸೀಪುರದಲ್ಲಿ ಇಂತಹದ್ದೊಂದು ಅಭಿಮಾನ ಕಂಡು ಬಂದಿದ್ದು, ಅಭಿಮಾನಿಯೊಬ್ಬ ತೆನೆ ಹೊತ್ತ ಮಹಿಳೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಅಭಿಮಾನಿಯೊಬ್ಬ ಬೃಹತ್ ಆಕಾರದ ರಾಗಿ ತೆನೆ ಹಾರ ಅರ್ಪಿಸಿ ಖುಷಿ ಪಟ್ಟಿದ್ದಾರೆ. ಇದನ್ನು ಓದಿ: ಕ್ರೇನ್ ಮೂಲಕ ಸಚಿವ ಶಿವಕುಮಾರ್ ಗೆ 300 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಸನ್ಮಾನ!

ಇದು ಅಂತಿಂತಾ ಹಾರ ಅಲ್ಲ 12 ಅಡಿ ಉದ್ದ, 250 ಕೆ.ಜಿ. ತೂಕವಿದ್ದು, ಹಾರವನ್ನು ಅರ್ಪಿಸುವುದಕ್ಕೆ ಕ್ರೇನ್ ಬಳಸಿರುವುದು ವಿಶೇಷವಾಗಿದೆ. ಬುಧವಾರ ಟಿ.ನರಸೀಪುರದಲ್ಲಿ ರೋಡ್ ಶೋ ಇತ್ತು. ಇದಕ್ಕಾಗಿ ಕುಮಾರಸ್ವಾಮಿ ತೆರೆದ ಬಸ್ ನಲ್ಲಿ ಆಗಮಿಸಿದಾಗ ಕ್ರೇನ್ ಮೂಲಕ ಬೃಹತ್ ಆಕಾರದ ರಾಗಿ ತೆನೆ ಹಾರ ಅರ್ಪಿಸಲಾಗಿದೆ.


ನವದೆಹಲಿ: ವರನೊಬ್ಬ ತನ್ನ ಮದುವೆಯಲ್ಲಿ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿ ಎಡವಟ್ಟು ಮಾಡಿಕೊಂಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ವರದಿಯಾಗಿಲ್ಲ. ಆದ್ರೆ ಸಂಪ್ರದಾಯವನ್ನು ಗಮನಿಸಿದ್ರೆ ಭಾರತೀಯ ಮದುವೆಯಲ್ಲಿ ಈ ಎಡವಟ್ಟಾಗಿದೆ ಎಂಬುದಾಗಿ ವರದಿಯಾಗಿದೆ.

ವಿಡಿಯೋದಲ್ಲೇನಿದೆ?: ವಿಡಿಯೋದಲ್ಲಿ ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲಿದ್ದ ಹಾರವನ್ನು ವಧುವಿನ ಪಕ್ಕದಲ್ಲೇ ನಿಂತಿದ್ದ ಆಕೆಯ ಸ್ನೇಹಿತೆಗೆ ಕೊರಳಿಗೆ ಹಾಕಿದ್ದಾನೆ. ವರನ ಈ ಎಡವಟ್ಟು ಕಂಡ ಮದುವೆಗೆ ಬಂದವರು ದಂಗಾಗಿ ಹೋಗಿದ್ದಾರೆ.
ವರ ಹಾಗೂ ವಧು ತಮ್ಮ ಮದುವೆಗೆ ಹಾರ ಬದಲಾಯಿಸಿಕೊಳ್ಳಲು ಸ್ಟೇಜ್ ಮೇಲೆ ಬಂದರು. ಆಗ ವಧು ಪಕ್ಕದಲ್ಲಿ ಆಕೆಯ ಸ್ನೇಹಿತೆ ನಿಂತಿದ್ದು, ಆಕೆಯ ಮೇಲೆ ವರನಿಗೆ ಪ್ರೀತಿಯಾಗಿದೆ. ಹೀಗಾಗಿ ಆತ ಮಧುವಿನ ಕೊರಳಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಯ ಕೊರಳಿಗೆ ಹಾಕಿದ್ದಾನೆ ಅಂತ ನೆರೆದವರು ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಅಲ್ಲಿದ್ದ ವಧು ಹಾಗೂ ಜನರು ದಂಗಾಗಿ ಹೋದ್ರೂ, ವರ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಗುತ್ತ ನಿಂತಿದ್ದನು ಎಂದು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
ಮಾರ್ಚ್ 26, 2018ರಂದು `ಬೇಟೋ ಸೇ ಪ್ಯಾರಿ ಬೇಟಿ ಹೋತೆಯೇ’ ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೋವನ್ನು 3,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
