Tag: Gardener

  • ಬೀದಿ ನಾಯಿಗೆ ಊಟ ನೀಡಲು ಬಂದವನಿಗೆ ನರಕದ ಹಾದಿ ತೋರಿಸಿದ

    ಬೀದಿ ನಾಯಿಗೆ ಊಟ ನೀಡಲು ಬಂದವನಿಗೆ ನರಕದ ಹಾದಿ ತೋರಿಸಿದ

    ಲಕ್ನೋ: ಬೀದಿನಾಯಿಗಳು ಹಸಿವಿನಿಂದ ಬೊಗಳುತ್ತಿರುವುದನ್ನು ಕಂಡ ಪ್ಲಂಬರ್, ಅವುಗಳಿಗೆ ಆಹಾರ ನೀಡಲು ಹೋದಾಗ ತೋಟಗಾರನೊಬ್ಬ ವಿರೋಧ ವ್ಯಕ್ತಪಡಿಸಿ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ನಡೆದಿದೆ.

    ಮುಸ್ತಾಕಿಮ್ (27) ಮೃತನಾಗಿದ್ದಾನೆ. ಈತ ಬಿಹಾರದ ಮೂಲದವನಾಗಿದ್ದಾನೆ. ಚತರ್‍ಪಾಲ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಈತ ವಿಕ್ಟೋರಿಯಾ ಪಾರ್ಕ್‍ನಲ್ಲಿ ತೋಟಗಾರನಾಗಿದ್ದ. ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾನೆ ಎಂದು ಪ್ಲಂಬರ್ ಮುಸ್ತಾಕಿಮ್‍ಗೆ ಚಾಕುವಿನಿಂದ ಇರಿದಿದ್ದಾನೆ.


    ಪ್ಲಂಬರ್ ಮುಸ್ತಾಕಿಮ್ ಗಾಜಿಯಾಬಾದ್‍ನ ಇಂದಿರಾಪುರಂನಲ್ಲಿರುವ ಬೀದಿ ನಾಯಿಗೆ ಆಹಾರ ನೀಡಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ತೋಟದ ಮಾಲೀಕ ಅವುಗಳಿಗೆ ಆಹಾರ ನೀಡಬೇಡಿ ಎಂದು ಖ್ಯಾತೆ ತೆಗೆದಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ತೋಟಗಾರ ಗಾರ್ಡನ್ ಕತ್ತರಿಸುವ ಕತ್ತರಿಯಿಂದ ಪ್ಲಂಬರ್ ಎದೆಗೆ ಇರಿದು ಕೊಂದಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಬಳಿಕ ಪಾಕ್ ಪ್ರಧಾನಿ ಆಗ್ತಾರಾ ಶೆಹಬಾಜ್ ಷರೀಫ್?

    ಗಾಯಗೊಂಡಿದ್ದ ಮುಸ್ತಾಕಿಮ್‍ನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುಸ್ತಾಕಿಮ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಚತರ್‍ಪಾಲ್‍ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

  • ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ಬೆಂಗಳೂರು: ಒಂದು ರೂಪದಲ್ಲಿ ಗಣೇಶನ ಆಕೃತಿ, ಮತ್ತೊಂದು ಕಡೆಯಿಂದ ಗರುಡನ ರೀತಿ, ತಾಯಿ ಮಗುವಿನ ಆಕೃತಿ, ಜಾಂಬವಂತ ಕರಡಿ ಹೀಗೆ ನಾನಾ ರೂಪದಲ್ಲಿ ಕಾಣುವ ಹಲಸಿನ ಅಪರೂಪದ ಹಣ್ಣು ವಿಸ್ಮಯಕಾರಿ ರೀತಿಯಲ್ಲಿ ಬೆಳವಣಿಗೆಯಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಕ್ಕನಹಳ್ಳಿ ನಿವಾಸಿ ಶಿವಕುಮಾರ್ ಎಂಬವರ ತೋಟದಲ್ಲಿ ಒಂದು ಪುರಾತನವಾದ ಹಲಸಿನ ಮರ ಇದೆ. ಈ ಮರದಲ್ಲಿ ಬಿಟ್ಟ ಹಣ್ಣು ನಾನಾ ಆಕೃತಿಯಲ್ಲಿ ಆ ಹಲಸಿನ ಹಣ್ಣನ್ನ ತಮ್ಮ ಊಹೆಯಂತೆ ಕಾಣತೊಡಗಿದೆ. ಮರದಲ್ಲಿ ಕಂಡ ಈ ಅಪರೂಪದ ಹಣ್ಣನ್ನು ಮಾಲೀಕ ಶಿವಕುಮಾರ್ ಮನೆಗೆ ತಂದು ದೇವರ ಹಣ್ಣು ಎಂದು ಮನೆಯವರಿಗೆ ಮತ್ತು ಸ್ನೇಹಿತರಿಗೆ ತೋರಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ನಮ್ಮ ತೋಟದಲ್ಲಿ ಸಾಕಷ್ಟು ವರ್ಷದ ಹಳೆಯ ಮರ ಇದೆ. ಈ ಹಲಸಿನ ಮರದಲ್ಲಿ ಈ ಹಣ್ಣು ನೋಡಿದಾಗ ನನಗೆ ನಾಲ್ಕೈದು ರೂಪದಲ್ಲಿ ಗೋಚರವಾಗಿದೆ, ಒಂದು ರೀತಿಯಲ್ಲಿ ಈ ಹಣ್ಣು ನೋಡಲು ಖುಷಿಯಾಗಿದೆ ಎಂದಿದ್ದಾರೆ. ಇನ್ನೂ ಈ ಹಣ್ಣು ಅವರವರ ಮನಸ್ಥಿತಿಗೆ ನೋಡುವ ರೀತಿಯಲ್ಲಿ ಗೋಚರವಾಗುವ ದೃಷ್ಟಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಹೊತ್ತು ಹೊರಟ ಕಿಸಾನ್ ರೈಲು

  • ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಪಣಜಿ: 65 ವರ್ಷದ ಕಲಾವಿದರೊಬ್ಬರನ್ನು ತೋಟದ ಕೆಲಸಗಾರ ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೆ ಹೆಣವಾದ ಘಟನೆ ಗೋವಾದಲ್ಲಿ ನಡೆದಿದೆ.

    ಮುಂಬೈ ಮೂಲದ ಚಿತ್ರಕಲಾವಿದರಾದ ಶಿರಿನ್ ಮೋಡಿ(65) ಕೊಲೆಯಾದ ದುರ್ದೈವಿ. ಮನೆಯೊಳಗೆ ಮಾರಕಾಸ್ತ್ರಗಳಿಂದ ಅವರ ತೋಟದ ಮಾಲಿ ಪ್ರಫುಲ್ಲಾ ಶಿರಿನ್‍ರನ್ನು ಕೊಲೆ ಮಾಡಿದ್ದಾನೆ. ಉತ್ತರ ಗೋವಾ ಜಿಲ್ಲೆಯ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ಹೀಗಾಗಿ ಅವರು ಮುಂಬೈ ಬಿಟ್ಟು ಅರಪೊರಾ ಗ್ರಾಮದಲ್ಲೇ ವಾಸಿಸುತ್ತಿದ್ದರು.

    ಅವರ ತೋಟದಲ್ಲಿ ಅಸ್ಸಾಂ ಮೂಲದ ಪ್ರಫುಲ್ಲಾ ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಪ್ರಫುಲ್ಲಾ ಮನೆಯೊಳಗೆ ಮಾರಕಾಸ್ತ್ರಗಳಿಂದ ಶಿರಿನ್ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾರ್ಡ್‌ನ್ ನಲ್ಲಿ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.

    ಈ ವೇಳೆ ಗಾರ್ಡ್‌ನ್ ನಲ್ಲಿ ಬಿದ್ದಿದ್ದ ಮಾಲಿಯನ್ನು ಕಂಡ ಅಕ್ಕಪಕ್ಕದ ಮನೆಯವರು ಆತನನ್ನು ಆಸ್ಪತ್ರಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದನು. ಬಳಿಕ ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು.

    ಆಗ ಅಕ್ಕಪಕ್ಕದ ಮನೆಯವರು, ಮಾಲಿ ಹಾಗೂ ಶಿರಿನ್ ಅವರ ನಡುವೆ ಜಗಳ ನಡೆದಿತ್ತು. ಬಳಿಕ ಮಾಲಿ ಮನೆಯಿಂದ ಹೊರಗೆ ಓಡಿಬರುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ. ಬಹುಶಃ ಆತನೇ ಶಿರಿನ್‍ರನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದನು ಎನಿಸುತ್ತದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.

    ಇತ್ತ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಘಟನೆ ನಡೆದ ಬಳಿಕ ಮಾಲಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದು ಕಂಡು ಬಂದಿದೆ. ಆತ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.