Tag: Garbage Vehicle

  • ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    ಚಿಕ್ಕಮಗಳೂರು: ಕಸವನ್ನು ಡಂಬಿಂಗ್ ಯಾರ್ಡ್‍ಗೆ ಡಂಪ್ ಮಾಡುವಾಗ ಕಸದ ಸಮೇತ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್‍ನೊಳಗೆ ಬಿದ್ದರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

     

    ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆ ಮಾರ್ಗದಲ್ಲಿ ಬಣಕಲ್ ಗ್ರಾಮ ಪಂಚಾಯತ್ ಡಂಪಿಂಗ್ ಯಾರ್ಡ್ ನಿರ್ಮಿಸಿದೆ. ಗ್ರಾಮದ ಕಸವನ್ನು ಡಂಪಿಂಗ್ ಯಾರ್ಡ್‍ಗೆ ಡಂಪ್ ಮಾಡುವ ವೇಳೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್ ಒಳಕ್ಕೆ ಬಿದ್ದಿದ್ದು, ಕಸ ವಿಲೇವಾರಿ ಘಟಕದ ಬಳಿ ಸೂಕ್ತವಾದ ರಸ್ತೆ ಇಲ್ಲ. ಮಳೆ ಬಂದು ಸಾಕಷ್ಟು ಕೆಸರು ತುಂಬಿತ್ತು. ಹಾಗಾಗಿ, ಕಸದ ಜೊತೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್‍ನೊಳಗೆ ಬಿದ್ದಿದೆ. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

    ಬಳಿಕ ಜೆಸಿಬಿಯನ್ನು ಕರೆಸಿ ಸುಮಾರು 12 ಅಡಿ ಆಳದ ಗುಂಡಿಯೊಳಕ್ಕೆ ಬಿದ್ದಿದ್ದ ಆಟೋವನ್ನು ಮೇಲೆ ಎತ್ತಿದ್ದಾರೆ. ಕಸದ ಆಟೋ ಜೊತೆ ಆಟೋ ಡ್ರೈವರ್ ಕೂಡ ಗುಂಡಿಯೊಳಗೆ ಬಿದ್ದಿದ್ದಾನೆ. ಆದರೆ, ಆತನಿಗೆ ಏನೂ ಆಗಿಲ್ಲ. ಸಣ್ಣ-ಪುಟ್ಟ ಗಾಯಗಳಾಗಿವೆ. ಆಟೋ ಗುಂಡಿಯೊಳಕ್ಕೆ ಬಿದ್ದ ಕೂಡಲೇ ಚಾಲಕ ಮೇಲೆ ಎದ್ದು ಬಂದಿದ್ದಾನೆ. ಇದನ್ನೂ ಓದಿ: ಕಳ್ಳ ಸಿಕ್ಕಿಲ್ಲವೆಂದು ಪತ್ನಿಗೆ ಥರ್ಡ್ ಡಿಗ್ರಿ ಚಿತ್ರಹಿಂಸೆ – ಪೊಲೀಸ್ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಸಿಲಿಕಾನ್ ಸಿಟಿಯಲ್ಲಿ ಕಸದ ಲಾರಿಗೆ ಮತ್ತೊಂದು ಬಲಿ – 10 ದಿನದ ಅಂತರದಲ್ಲಿ ಎರಡನೇ ದುರ್ಮರಣ

    ಸಿಲಿಕಾನ್ ಸಿಟಿಯಲ್ಲಿ ಕಸದ ಲಾರಿಗೆ ಮತ್ತೊಂದು ಬಲಿ – 10 ದಿನದ ಅಂತರದಲ್ಲಿ ಎರಡನೇ ದುರ್ಮರಣ

    – ಮಾರ್ಚ್ 31ಕ್ಕೆ ಬಾಗಲೂರಿನಲ್ಲಿ ವೃದ್ಧ ರಾಮಯ್ಯ ಬಲಿ

    ಬೆಂಗಳೂರು: ಹತ್ತು ದಿನಗಳ ಹಿಂದೆ ಹೆಬ್ಬಾಳದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಸದ ಲಾರಿ ಹರಿದು ವಿದ್ಯಾರ್ಥಿನಿ ಅಕ್ಷಯಾ ಸಾವನ್ನಪ್ಪಿದ ಹತ್ತೇ ದಿನದ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿಯಾಗಿದೆ.

    ಇಂದು ಬಾಗಲೂರು-ಥಣಿಸಂದ್ರ ರಸ್ತೆಯಲ್ಲಿ ಬಿಬಿಎಂಪಿಯ ಕಸದ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 76 ವರ್ಷದ ವೃದ್ಧ ರಾಮಯ್ಯ ಪ್ರಾಣಪಕ್ಷಿ ಹಾರಿಹೋಗಿದೆ. ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ನೆಲಕ್ಕೆ ಬಿದ್ದ ರಾಮಯ್ಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಸಂಬಂಧಿಕರ ಮಗಳ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಪತ್ನಿ ಜೊತೆ ಸಾತನೂರಿಗೆ ತೆರಳಿದ್ದ ರಾಮಯ್ಯ ಪತ್ನಿಯನ್ನು ಕಾರಿನಲ್ಲಿ ಕಳುಹಿಸಿ ತಾವು ಸಂಪಿಗೆಹಳ್ಳಿಯ ಮನೆಗೆ ವಾಪಸಾಗುತ್ತಿದ್ರು. ಬಾಗಲೂರಿನ ರೇವಾ ಯೂನಿವರ್ಸಿಟಿ ಬಳಿ ರಾಮಯ್ಯರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಸದ ಲಾರಿ ಢಿಕ್ಕಿಯಾಗಿದ್ದು ಪರಿಣಾಮ ನೆಲಕ್ಕೆ ಬಿದ್ದ ರಾಮಯ್ಯರ ದೇಹದ ಮೇಲೆ ಲಾರಿ ಹರಿದಿದೆ. ಸ್ಥಳದಲ್ಲೇ ರಾಮಯ್ಯ ಸಾವನ್ನಪ್ಪಿದ್ದು ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ – ಕಾರಣ ನಿಗೂಢ