Tag: Garage

  • ಪುತ್ರನ ಭೇಟಿಗೆಂದು ಹೋಗಿದ್ದಾಗ ಗ್ಯಾರೇಜ್‌ನಲ್ಲಿ ಮಲಗಿದ್ರಂತೆ ವಿಶ್ವದ ಶ್ರೀಮಂತನ ತಾಯಿ!

    ಪುತ್ರನ ಭೇಟಿಗೆಂದು ಹೋಗಿದ್ದಾಗ ಗ್ಯಾರೇಜ್‌ನಲ್ಲಿ ಮಲಗಿದ್ರಂತೆ ವಿಶ್ವದ ಶ್ರೀಮಂತನ ತಾಯಿ!

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಅವರು ಇತ್ತೀಚೆಗೆ ತಮ್ಮ ಮಗನನ್ನು ಭೇಟಿ ಮಾಡಲು ಹೋಗಿದ್ದಾಗ, ತಮಗೆ ಮಲಗಲು ಗ್ಯಾರೇಜ್‌ನಲ್ಲಿ ವ್ಯವಸ್ಥೆ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ.

    ಹೌದು, ತನ್ನ ಬಿಲಿಯನೇರ್ ಪುತ್ರ ವಿಶ್ವದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ ಸಹ ಆತ ತನ್ನ ಆಸ್ತಿಯ ಬಗ್ಗೆ ಸ್ವಲ್ಪವೂ ಆಸಕ್ತಿ ಹೊಂದಿಲ್ಲ ಎಂದು ಮಾಯೆ ಮಸ್ಕ್ ತಿಳಿಸಿದ್ದಾರೆ. ಅವರು ಟೆಕ್ಸಾಸ್‌ನಲ್ಲಿರುವ ಟೆಕ್ ಮ್ಯಾಗ್ನೇಟ್‌ಗೆ ಭೇಟಿ ನೀಡಿದ್ದಾಗ ಅಲ್ಲಿ ಸ್ಪೇಸ್‌ಎಕ್ಸ್‌ನ ಪ್ರಧಾನ ಕಛೇರಿಯ ಗ್ಯಾರೇಜ್‌ನಲ್ಲಿ ಮಲಗಲು ತಿಳಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಿರಿಯ ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿಸಿದ ಮುಖೇಶ್ ಅಂಬಾನಿ

    ಮಸ್ಕ್ ವಿಶ್ವದ ಶ್ರೀಮಂತನಾಗಿದ್ದರೂ ತಮ್ಮ ರಾಕೆಟ್ ಸೈಟ್ ಬಳಿ ಒಂದು ಮನೆಯನ್ನೂ ಕಟ್ಟಿಸಲಿಲ್ವಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತದೆ. ಆದರೆ ಅವರು ತಮಗೆ ಆಸ್ತಿಯಲ್ಲಿ ಆಸಕ್ತಿ ಇಲ್ಲ ಎಂಬುದನ್ನು ಈ ಹಿಂದೆಯೂ ತಿಳಿಸಿದ್ದರು.

    ಮಸ್ಕ್ 2020ರಲ್ಲಿ ತಮ್ಮ ಎಲ್ಲಾ ಆಸ್ತಿಯನ್ನೂ ಮಾರಾಟ ಮಾಡುವ ಬಗ್ಗೆ ಹೇಳಿದ್ದರು. ಈ ವರ್ಷದ ಆರಂಭದಲ್ಲಿ ತಾವು ಮನೆಯನ್ನೂ ಹೊಂದಿರದೇ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ ಬಗ್ಗೆ ಹೇಳಿಕೊಂಡಿದ್ದರು. ಹೆಚ್ಚಿನ ಆಸ್ತಿ ಹೊಂದುವುದು ನನಗೆ ಭಾರ ಎನಿಸುತ್ತದೆ. ನನಗೆ ಹಣದ ಅಗತ್ಯವಿಲ್ಲ. ನಾನು ಬಹುತೇಕ ಎಲ್ಲಾ ಭೌತಿಕ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದೇನೆ, ಯಾವ ಮನೆಯನ್ನೂ ನಾನು ಹೊಂದುವುದಿಲ್ಲ ಎಂದು ಈ ಹಿಂದೆ ಮಸ್ಕ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಹಿಜಬ್ ನಿಷೇಧ: ಅರ್ಜಿದಾರರ ವಿರುದ್ಧ ಸುಪ್ರೀಂಕೋರ್ಟ್ ಗರಂ – ರಾಜ್ಯ ಸರ್ಕಾರ, ಅರ್ಜಿದಾರರಿಗೆ ನೋಟಿಸ್

    Live Tv
    [brid partner=56869869 player=32851 video=960834 autoplay=true]

  • ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಬೆಂಗಳೂರು: ಓದಿದ್ದು 7ನೇ ತರಗತಿ ಆದರೆ ಮನೆ ದೋಚುವುದರಲ್ಲಿ ನಂಬರ್ 1 ಕಳ್ಳನಾಗಿದ್ದ ಗ್ಯಾರೇಜ್ ಮೆಕ್ಯಾನಿಕ್‍ನೊಬ್ಬನನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ.

    ಮುರುಳಿ ಬಂಧಿತ ಆರೋಪಿ. ಆರೋಪಿಯು ವರ್ಷಕ್ಕೆ ಒಂದೇ ಕಳ್ಳತನ, ಮಾಡುತ್ತಿದ್ದನು. ಉಳಿದ ಸಮಯ ಗ್ಯಾರೇಜ್‍ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ವರ್ಷಕ್ಕೆ ಒಂದರಂತೆ 13 ವರ್ಷದಲ್ಲಿ ಈತ 13 ಕಳ್ಳತನಗಳನ್ನು ಮಾಡಿದ್ದಾನೆ. 2009ರಲ್ಲಿ ಕಳ್ಳತನ ಶುರು ಮಾಡಿದ್ದವನು ಕೊನೆಗೆ 2022ರಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನು ತುಂಬಾ ಅಚ್ಚುಕಟ್ಟಾಗಿ ಯೋಜನೆ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದನು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

    ಪ್ರತಿನಿತ್ಯ ಯಾರೂ ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಾರೆ ಅವರ ಮನೆಗಳನ್ನೇ ಈತ ಗುರಿಯಾಗಿಸಿಕೊಳ್ಳುತ್ತಿದ್ದನು. ಶಾಲೆಗೆ ಹೋಗುವಾಗ ಮೊದಲು ಅವರನ್ನು ಹಿಂಬಾಲಿಸುತ್ತಿದ್ದನು. ಪೋಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಎಷ್ಟು ಸಮಯ ಹಿಡಿಯುತ್ತೆ ನೋಡಿಕೊಂಡು ಉಪಾಯ ಮಾಡುತ್ತಿದ್ದನು. 1 ಮನೆ ಕಳ್ಳತನ ಮಾಡಲು ಸುಮಾರು 1 ತಿಂಗಳು ಉಪಾಯ ಮಾಡುತ್ತಿದ್ದನು. ಇದನ್ನೂ ಓದಿ:  ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

    ನಂತರ ಆ ಮನೆಯ ಡೋರ್ ಕೀ ಮಾದರಿಯ ನಾಲ್ಕೈದು ನಕಲಿ ಕೀ ತಯಾರು ಮಾಡಿಸುತ್ತಿದ್ದನು. ನಂತರ ಪೊಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದರ ಒಳಗೆ ಮನೆ ದೋಚುತ್ತಿದ್ದನು. ಮುರುಳಿ ಒಂದು ಬಾರಿ ಕಳ್ಳತನ ಮಾಡಿದರೆ ಮತ್ತೆ ವರ್ಷವಿಡಿ ಕಳ್ಳತನದ ಸಹವಾಸಕ್ಕೆ ಹೋಗುತ್ತಿರಲಿಲ್ಲ.

    ಇಂತಹ ಚಾಲಾಕಿ ಕಳ್ಳನಿಂದ 3 ಠಾಣೆಯ ಪೊಲೀಸರು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ಒಂದು ಮನೆ ಕಳ್ಳತನದ ಕೇಸ್ ಆಗಿತ್ತು. ಈ ವೇಳೆ ಪೊಲೀಸರು ವಿಚಾರಣೆಗಾಗಿ ಆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳನ ಫಿಂಗರ್ ಪ್ರಿಂಟ್ ಶೇಖರಿಸಿದ್ದರು. ಜನವರಿ ತಿಂಗಳಿನ ಕೊನೆಯ ವಾರದ ಹಿಂದೆ ಆರ್ ಟಿ ನಗರ ಪೊಲೀಸರಿಗೆ ಸಿಕ್ಕಿ ಬಿದ್ದಾಗ ಈತನ ಫಿಂಗರ್ ಪ್ರಿಂಟ್ ಕಳ್ಳತನ ಕೇಸ್‍ನಲ್ಲಿ ಮ್ಯಾಚ್ ಆಗಿದೆ.

    ಆರೋಪಿಯನ್ನು ಪೊಲೀಸರು ಹೆಬ್ಬಾಳ ಕೇಸ್ ಬಗ್ಗೆ ವಿಚಾರಣೆ ಮಾಡುವಾಗ ಒಟ್ಟು 13 ಕಳ್ಳತನಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರ್ ಟಿ ನಗರ, ಡಿಜೆಹಳ್ಳಿ, ಅಮೃತಹಳ್ಳಿ, ಹೆಬ್ಬಾಳ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಸದ್ಯ ಎಲ್ಲಾ ಪ್ರಕರಣಗಳಿಂದ ಒಟ್ಟು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸದ್ಯ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಅವನನ್ನು ಪಡೆದಿದ್ದು, ಮತ್ತಷ್ಟು ವಿಚಾರಣೆಗೆ ತಯಾರಾಗಿದ್ದಾರೆ.

  • ಗ್ಯಾರೇಜ್‍ಗೆ ಆಕಸ್ಮಿಕ ಬೆಂಕಿ- ಐದು ಬೈಕ್‍ಗಳು ಭಸ್ಮ

    ಗ್ಯಾರೇಜ್‍ಗೆ ಆಕಸ್ಮಿಕ ಬೆಂಕಿ- ಐದು ಬೈಕ್‍ಗಳು ಭಸ್ಮ

    ರಾಯಚೂರು: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಗ್ಯಾರೇಜ್ ನಲ್ಲಿದ್ದ ಐದು ಬೈಕ್ ಗಳು ಸುಟ್ಟು ಭಸ್ಮವಾಗಿರುವ ಘಟನೆ ರಾಯಚೂರಿನ ಎಲ್.ಬಿ.ಎಸ್ ನಗರದಲ್ಲಿ ನಡೆದಿದೆ.

    ಶೇಕ್ ಮಿಯಾನ್ ಬಾಬು ಎಂಬವರಿಗೆ ಸೇರಿದ ಗ್ಯಾರೇಜ್ ನಲ್ಲಿ ಮಧ್ಯರಾತ್ರಿ ಎರಡು ಗಂಟೆಗೆ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಗಳು ಭಸ್ಮವಾಗಿವೆ. ಗ್ಯಾರೇಜ್ ಪಕ್ಕದವರು ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.

    ಗ್ಯಾರೇಜ್ ಒಳಗಿದ್ದ ಐದು ಬೈಕ್ ಗಳು, ವಿವಿಧ ಮೆಕಾನಿಕ್ ಸಾಮಾನುಗಳು ಸೇರಿ ಲಕ್ಷಾಂತರ ರೂಪಾಯಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬಳಿಕ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅಕ್ಕ ಪಕ್ಕಕ್ಕೆ ಬೆಂಕಿ ಹಬ್ಬುವುದನ್ನ ತಡೆದಿದ್ದಾರೆ. ಈ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.