Tag: garadi film

  • ʼಹೊಡಿರಲೆ ಹಲಗಿ’ ಎಂದು ಭಟ್ಟರ ಗರಡಿಯಲ್ಲಿ ಸೊಂಟ ಬಳುಕಿಸಿದ ನಿಶ್ವಿಕಾ ನಾಯ್ಡು

    ʼಹೊಡಿರಲೆ ಹಲಗಿ’ ಎಂದು ಭಟ್ಟರ ಗರಡಿಯಲ್ಲಿ ಸೊಂಟ ಬಳುಕಿಸಿದ ನಿಶ್ವಿಕಾ ನಾಯ್ಡು

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಕ್ವೀನ್ ನಿಶ್ವಿಕಾ ನಾಯ್ಡು (Nishvika Naidu) ಅವರು ಪ್ರತಿಭಾವಂತ ನಟಿ ಮಾತ್ರವಲ್ಲ ಅದ್ಭುತ ಡ್ಯಾನ್ಸ್ರ್ ಕೂಡ ಹೌದು. ತಾನು ಡ್ಯಾನ್ಸ್ ಮಾಡೋಕೂ ಸೈ ಅಂತಾ ಭಟ್ರ ಗರಡಿಯಲ್ಲಿ ನಟಿ ಸೊಂಟ ಬಳುಕಿಸಿರೋದೇ ಸಾಕ್ಷಿ. ‘ಹೊಡಿರಲೆ ಹಲಗಿ’ ಅಂತಾ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಚಿತ್ರರಂಗದಲ್ಲಿ ಈಗ ಟ್ರೆಂಡ್ ಬದಲಾಗಿದೆ. ನಾಯಕಿಯಾಗಿಯೇ ಗುರುತಿಸಿಕೊಳ್ಳಬೇಕು ಅನ್ನೋದಕ್ಕಿಂತ ಒಳ್ಳೆಯ ಪಾತ್ರದಲ್ಲಿ ತಾವು ಕಾಣಿಸಿಕೊಳ್ಳಬೇಕು ಎಂದು ಯೋಚಿಸುವ ಮನಸ್ಥಿತಿ ಬದಲಾಗಿದೆ. ನಾಯಕಿ ಪಾತ್ರಕ್ಕೆ ಅಂಟಿಕೂರದೇ ಐಟಂ ಹಾಡಿಗೂ ನಾಯಕಿಯರು ಹೆಜ್ಜೆ ಹಾಕಲು ಮನಸ್ಸು ಮಾಡ್ತಿದ್ದಾರೆ. ಈ ಪ್ರಯೋಗವನ್ನ ಕತ್ರಿನಾ ಕೈಫ್, ಕರೀನಾ, ಸಮಂತಾ, ತಮನ್ನಾ ಭಾಟಿಯಾ ಹೀಗೆ ಹಲವು ನಟಿಯರು ಸೊಂಟ ಬಳುಕಿಸಿ ಗೆದ್ದಿದ್ದಾರೆ. ಈಗ ಅದೇ ದಾರಿಯಲ್ಲಿ ಕನ್ನಡದ ನಟಿ ನಿಶ್ವಿಕಾ ನಾಯ್ಡು ಕೂಡ ಹೆಜ್ಜೆ ಇಟ್ಟಿದ್ದಾರೆ. ಯೋಗರಾಜ್ ಭಟ್ಟರ ಗರಡಿಯಲ್ಲಿ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

    ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi Film Kannada) ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿದ್ದಾರೆ. ಭಟ್ಟರು ಬರೆದ ‘ಹೊಡಿರೆಲೆ ಹಲಗಿ’ ಹಾಡು ಇಂದು (ಜೂನ್ 14) ಬಿಡುಗಡೆ ಆಗಿದೆ. ಈ ಲಿರಿಕಲ್ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್ ಸ್ಟೆಪ್‌ಗಳ ಝಲಕ್ ತೋರಿಸಲಾಗಿದೆ. ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದರಲ್ಲಿ ಇದೆ. ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಕುಣಿತ ನೋಡಿ ಪಡ್ಡೆಗಳಿಗೆ ಕಿಕ್ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ’ ಸಾಂಗ್ ಮೂಡಿಬಂದಿದೆ. ಮೇಘನಾ ಹಳಿಯಾಳ್ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ.

    ಯೋಗರಾಜ್ ಭಟ್ ಅವರು ಮತ್ತಾರೂ ಊಹಿಸಲಾಗದಂತಹ ಪದಪುಂಜಗಳ ಮೂಲಕ ಅವರು ಸಾಹಿತ್ಯ ರಚಿಸುತ್ತಾರೆ. ‘ಹೊಡಿರೆಲೆ ಹಲಗಿ’ ಸಾಂಗ್ ಕೂಡ ಅದೇ ಶೈಲಿಯಲ್ಲಿ ಮೂಡಿ ಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ಅವರು ಈ ಸಾಂಗ್ ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್‌ಗಳಲ್ಲಿ ಇಡೀ ಹಾಡನ್ನು ಶೂಟ್ ಮಾಡಲಾಗಿದೆ. ಸೌಮ್ಯ ಫಿಲ್ಮ್ಸ್, ಕೌರವ ನಿರ್ಮಾಣ ಸಂಸ್ಥೆ ಕಡೆಯಿಂದ ಗರಡಿ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಸೂರ್ಯ, ಬಿಸಿ ಪಾಟೀಲ್, ಸೋನಾಲ್, ಧರ್ಮಣ್ಣ ಕಡೂರು ಸೇರಿದಂತೆ ಹಲವರು ನಟಿಸಿದ್ದಾರೆ.

    ಅಮ್ಮಾ ಐ ಲವ್‌ಯೂ, ಜೆಂಟಲ್‌ಮೆನ್, ಪಡ್ಡೆಹುಲಿ, ದಿಲ್ ಪಸಂದ್, ಗುರು ಶಿಷ್ಯರು, ಸಖತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

  • Exclusive Photos – ಗರಡಿಗಾಗಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

    Exclusive Photos – ಗರಡಿಗಾಗಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗರಡಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್. ಮತ್ತೋರ್ವ ಸಚಿವ ಬಿ.ಸಿ. ಪಾಟೀಲ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಗೆಳೆಯನಿಗಾಗಿ ಪಾತ್ರ ಮಾಡಿದೆ ಎಂದಿದ್ದಾರೆ ಸೋಮಶೇಖರ್. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    “ನನಗೆ ನಟನೆಯ ಗಂಧಗಾಳಿ ಗೊತ್ತಿಲ್ಲ. ಗೆಳೆಯ ಪಾಟೀಲರು ಅವರ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಗೆಳೆಯನ ಪ್ರೀತಿಗಾಗಿ ಬಣ್ಣ ಹಚ್ಚಿದೆ. ನಾನು ಪಾತ್ರ ಮಾಡುತ್ತಿರುವುದರಿಂದ ಬೇರೊಬ್ಬ ನಟನ ಅವಕಾಶ ಕಸಿದುಕೊಂಡೆ ಅನಿಸುತ್ತಿದೆ’ ಎಂದಿದ್ದಾರೆ ಸಚಿವರು. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ಈ ಸಿನಿಮಾದಲ್ಲಿ ಅವರು ಸೋಮಣ್ಣ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ. ಅದು ಬಿ.ಸಿ. ಪಾಟೀಲ್ ಗೆಳೆಯನ ಪಾತ್ರವೇ ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಪಾಟೀಲ್ ರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ

    “ಬೆಳಗ್ಗೆ ನಿರ್ದೇಶಕ ಯೋಗರಾಜ್ ಭಟ್ಟರು ನನ್ನ ಪಾತ್ರವನ್ನು ವಿವರಿಸಿದರೆ, ಡೈಲಾಗ್ ಹೇಳಿದರು. ಅವರು ಏನು ಹೇಳಿದರೋ ಅಷ್ಟನ್ನು ಮಾಡಿದ್ದೇನೆ. ಅದರಾಚೆ ನನಗೆ ನಟನೆ ಬಾರದು. ಪ್ರೇಕ್ಷಕರು ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ’ ಎನ್ನುವುದು ಸೋಮಶೇಖರ್ ಮಾತು. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ಬೆಂಗಳೂರಿನ ಜಿ.ವಿ ಅಯ್ಯರ್ ಸ್ಟುಡಿಯೋದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಬಿ.ಸಿ.ಪಾಟೀಲ್, ಸೋಮಶೇಖರ್, ಚಿತ್ರದ ನಾಯಕ ಯಶಸ್ ಸೂರ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಅಂದಹಾಗೆ ಗಾಳಿಪಟ 2 ಸಿನಿಮಾದ ನಂತರ ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ಚಿತ್ರವಿದು. ಹಳ್ಳಿ ಸೊಗಡಿನಲ್ಲಿ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು. ಇಂತಹ ಕಥೆಯನ್ನು ಅವರು ಇದೇ ಮೊದಲ ಬಾರಿಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ಯೋಗರಾಜ್ ಭಟ್.

  • ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಯೋಗರಾಜ್ ಭಟ್ಟ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಅನೇಕ ನಾಯಕಿಯರು ಈ ಹೊತ್ತಿಗೂ ಕಾಯುತ್ತಿದ್ದಾರೆ. ಭಟ್ಟರ ಸಿನಿಮಾದಲ್ಲಿ ನಟಿಸಿದ ಬಹುತೇಕ ಕಲಾವಿದರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಇವರ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಇಂತಹ ಹೊತ್ತಿನಲ್ಲಿ ಸಿಕ್ಕಿರುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ಇದನ್ನೂ ಓದಿ :ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ

    ಅಂದುಕೊಂಡಂತೆ ಆಗಿದ್ದರೆ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು ರಚಿತಾ ರಾಮ್. ಈ ಚಿತ್ರವನ್ನು ನಟ, ಸಚಿವ ಬಿ.ಸಿ.ಪಾಟೀಲ್ ನಿರ್ಮಾಣ ಮಾಡುತ್ತಿರುವುದರಿಂದ, ಅವರ ಮನೆಗೂ ರಚಿತಾ ಹೋಗಿ ಬಂದಿದ್ದರು. ಸಿನಿಮಾದ ಪೂಜೆ, ಮುಹೂರ್ತ ಇತ್ಯಾದಿ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಿದ್ದರು. ಇನ್ನೇನು ಭಟ್ಟರು ಶೂಟಿಂಗ್ ಗೆ ಹೊರಡಬೇಕು ಎನ್ನುವಾಗ ರಚಿತಾ ರಾಮ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ರಚಿತಾ ರಾಮ್ ಸಿನಿಮಾದಲ್ಲಿ ಇಲ್ಲ ಎನ್ನುತ್ತಿದ್ದಂತೆಯೇ ಗಾಂಧಿನಗರದಲ್ಲಿ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು. ಈ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸುತ್ತಿರುವುದೇ ರಚಿತಾ ಹೊರ ಹೋಗಲು ಕಾರಣ ಎನ್ನಲಾಗಿತು. ಸಂಭಾವನೆಯ ವಿಚಾರವೂ ಕೇಳಿ ಬಂತು. ಅಸಲಿ ವಿಚಾರವೆಂದರೆ, ಸದ್ಯ ರಚಿತಾ ರಾಮ್ ಅವರು ‘ಕ್ರಾಂತಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ರಿಯಾಲಿಟಿ ಶೋ ಜಡ್ಜ್ ಆಗಿ ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಗರಡಿ ಸಿನಿಮಾಗೆ ಡೇಟ್ ಹೊಂದಿಸಲು ಸಾಧ್ಯವಾಗದೇ ಸಿನಿಮಾ ಬಿಡಬೇಕಾಗಿ ಬಂತಂತೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ರಚಿತಾ ರಾಮ್ ಜಾಗಕ್ಕೆ ಬೇರೆ ನಟಿಯು ಬಂದಾಗಿದೆ. ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ. ಅಂದಹಾಗೆ ರಚಿತಾ ರಾಮ್ ಮಾಡಬೇಕಿದ್ದ ಪಾತ್ರವನ್ನು ಈಗ ಮಾಡುತ್ತಿರುವುದು ಸೋನಲ್ ಮೆಂಥೆರೋ.