Tag: Gangubai Kathiawadi

  • ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಬಾಲಿವುಡ್‌ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಸಂಜಯ್ ಲೀಲಾ ಬನ್ಸಾಲಿ `ಗಂಗೂಬಾಯಿ ಕಾಥಿಯಾವಾಡಿ’ ಸಕ್ಸಸ್ ನಂತರ `ಹೀರಾಮಂಡಿ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಬಹುಭಾಷಾ ನಟಿ ಅದಿತಿ ರಾವ್ ಇದೀಗ ಈ ಚಿತ್ರತಂಡ ಸೇರಿಕೊಂಡಿದ್ದಾರೆ.

    ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸುವುದರಲ್ಲಿ ನಿರ್ದೇಶಕ ಸಂಜಯ್ ಲೀಲಿ ಬನ್ಸಾಲಿ ಯಾವಾಗಲೂ ಮುಂದು. ರಾಮ್ ಲೀಲಾ, ಪದ್ಮಾವತ್, ಬಾಜಿರಾವ್ ಮಸ್ತಾನಿ, ಬಿಟೌನ್‌ನಲ್ಲಿ ಹವಾ ಸೃಷ್ಟಿಸಿದ ನಿರ್ದೇಶಕ ಈಗ ಹೀರಾ ಮಂಡಿ ಚಿತ್ರದ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರಮುಖ ಪಾತ್ರದಲ್ಲಿ ಫರ್ದೀನ್ ಖಾನ್‌ಗೆ ನಾಯಕಿಯಾಗಿ ಅದಿತಿ ರಾವ್ ಹೈದರಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ನಿರೀಕ್ಷೇ ಹುಟ್ಟು ಹಾಕಿರುವ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಫರ್ದೀನ್ ಖಾನ್ ಮತ್ತು ಅದಿತಿ ರಾವ್ ಕಾಣಿಸಿಕೊಳ್ತಿದ್ದಾರೆ. ಈ ಹೊಸ ಜೋಡಿ ಬನ್ಸಾಲಿ ಚಿತ್ರದಲ್ಲಿ ಹೇಗೆ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಹೋಟೆಲ್‌ನಲ್ಲಿ ಆಲಿಯಾ ಭಟ್: ನೆಟ್ಟಿಗರು ಗರಂ

    ಪಾಕ್ ಹೋಟೆಲ್‌ನಲ್ಲಿ ಆಲಿಯಾ ಭಟ್: ನೆಟ್ಟಿಗರು ಗರಂ

    ಗ್ರಾಹಕರನ್ನು ಸೆಳೆಯಲು ಪಾಕಿಸ್ತಾನದ ರೆಸ್ಟೋರೆಂಟ್‌ವೊಂದು ಮಾಡಿರುವ ಯೋಜನೆ ನೋಡಿ, ಗ್ರಾಹಕರು ಬೆರಗಾಗಿದ್ದಾರೆ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು, ಚಿತ್ರದಲ್ಲಿ ಆಲಿಯಾ ಭಟ್ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ.

    ಇದೇ ವರ್ಷ ತೆರೆಕಂಡ ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ಆಲಿಯಾ ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಚಿತ್ರದ ಆಲಿಯಾ ಚಿತ್ರವನ್ನು ಹೋಟೆಲ್ ಮುಂದೆ ಅಂಟಿಸಿ ಗ್ರಾಹಕರನ್ನು ಸೆಲೆಯುವ ಯತ್ನ ಮಾಡುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಧಿಕಾ ಪಂಡಿತ್ ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವ ಸಂಭ್ರಮ

    ಈ ವರ್ಷದ ಸೂಪರ್ ಹಿಟ್ ಸಿನಿಮಾ `ಗಂಗೂಬಾಯಿ ಕಾಥಿಯಾವಾಡಿ’ ಅವರ ಜೀವನಾಧಾರಿತ ಚಿತ್ರದಲ್ಲಿ ಆಲಿಯಾ ವೇಶ್ಯೆ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಪಾಕ್‌ನ ಕರಾಚಿಯ ಹೋಟೆಲ್‌ಗೆ ದೃಶ್ಯ ಬಳಸಿಕೊಂಡಿರುವುದಲ್ಲದೇ ಹೋಟೆಲ್ ಮುಂದೆ ಪೋಸ್ಟರ್ ಸಹ ಅಂಟಿಸಿದ್ದಾರೆ. ಪುರುಷರಿಗೆ ಮಾತ್ರ 25% ರಿಯಾಯಿತಿ ಕೂಡ ಇದೆ ಎಂದು ಹೋಟೆಲ್ ಹೇಳಿಕೊಂಡಿದೆ. ಚಿತ್ರದಲ್ಲಿ ಪುರುಷರನ್ನು ಕರೆಯುವ ದೃಶ್ಯವನ್ನೇ ಉಪಯೋಗಿಕೊಂಡಿರುವುದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದಾರೆ.

    Live Tv

  • ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

    ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

    ಬಾಲಿವುಡ್ ಕ್ಯೂಟ್ ಬ್ಯೂಟಿ ಆಲಿಯಾ ಭಟ್ ಹೆಚ್ಚು ಬಬ್ಲಿ ಕ್ಯಾರೆಕ್ಟರ್ ಇರುವಂತಹ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ರಿಲೀಸ್ ಆದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಪ್ರೌಢ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರರಂಗದಲ್ಲಿಯೇ ಟಾಕ್ ಆಗಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಪ್ರೇಕ್ಷಕರಿಂದ ಒಳ್ಳೆ ಮೆಚ್ಚುಗೆ ಪಡೆದುಕೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವೇಳೆ ಪಾಕ್ ಖ್ಯಾತ ನಟರೊಬ್ಬರು ಆಲಿಯಾ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ.

    ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲಿ ವಿಶ್ಚದಲ್ಲೇ ಆಲಿಯಾ ಸಿನಿಮಾ ಹವಾ ಹೆಚ್ಚಾಗಿದೆ. ವಿದೇಶದಲ್ಲಿಯೂ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನೈಜ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನ ಚಿತ್ರತಂಡ ಮಾಡಿದ್ದಾರೆ. ಈ ಸಿನಿಮಾವನ್ನು ಪಾಕಿಸ್ತಾನದಲ್ಲಿಯೂ ಸಿನಿರಸಿಕರು ನೋಡಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

     

    View this post on Instagram

     

    A post shared by Galaxy Lollywood (@galaxylollywood)

    ಈ ಸಿನಿಮಾ ನೋಡಲೇ ಬೇಕೆಂದು ಪಾಕ್ ನಟ ಮುನೀಬ್ ಬಟ್ ತನ್ನ ಪತ್ನಿ ಅಮಾನ್ ಖಾನ್ ಜೊತೆ ಸೇರಿ ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ. ಅವರು ದುಬೈನಲ್ಲಿರುವ ಮುನೀಬ್ ಅಲ್ಲೇ ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮುನೀಬ್, ಪತ್ನಿ ಜೊತೆ ಸಿನಿಮಾ ವೀಕ್ಷಿಸುತ್ತಿರುವ ವೀಡಿಯೋ ಶೇರ್ ಮಾಡಿದ್ದು, ಫುಲ್ ವೈರಲ್ ಆಗಿದೆ.

    ಮುನೀಬ್ ಪತ್ನಿ ಮತ್ತು ಮಗಳ ಜೊತೆ ದುಬೈನಲ್ಲಿ ರಜೆಯ ಕಳೆಯುತ್ತಿದ್ದಾರೆ. ಪತ್ನಿಗಾಗಿ ಮುನೀಬ್ ಅಲಿಯಾ ಭಟ್ ಸಿನಿಮಾವನ್ನು ಬುಕ್ ಮಾಡಿದ್ದಾರೆ. ಸುದ್ದಿ ತಿಳಿದ ಅಭಿಮಾನಿಗಳು ಆಲಿಯಾ ನಟನೆ ಬಗ್ಗೆ ಇನ್ನಚ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:  ಆರ್ಯ ಈಡಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ – ಡಾ.ಪ್ರಣವಾನಂದ ಸ್ವಾಮೀಜಿ ಒತ್ತಾಯ

  • ಆಲಿಯಾ ಭಟ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್‍ಗೆ ‘ಪಾನಿ ಮೇ ದೂಧ್’ ಎಂದ ಕಂಗನಾ

    ಆಲಿಯಾ ಭಟ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್‍ಗೆ ‘ಪಾನಿ ಮೇ ದೂಧ್’ ಎಂದ ಕಂಗನಾ

    ಮುಂಬೈ: ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಇಡೀ ಬಾಲಿವುಡ್ ಸಂಭ್ರಮ ಪಡುತ್ತಿದ್ದರೆ, ವಿವಾದಿತ ತಾರೆಯಾಗಿಯೇ ಗುರುತಿಸಿಕೊಳ್ಳುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಕೊಂಕು ತಗೆದಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿರುವ ಅವರು, ಬಾಕ್ಸ್ ಆಫೀಸ್ ರಿಪೋರ್ಟ್ ಬಗ್ಗೆ ‘ಪಾನಿ ಮೇ ದೂಧ್’ ಎಂದು ಕಾಮೆಂಟ್ ಮಾಡಿದ್ದಾರೆ.

    ಗಂಗೂಬಾಯಿ ಕಥಿಯಾವಾಡಿ ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೆ, ಅದರ ಯಶಸ್ಸಿನ ಬಗ್ಗೆ ಕಂಗನಾ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು 100 ಕೋಟಿ ರೂ. ಕ್ಲಬ್ ಸೇರಿದ ಹಿನ್ನೆಲೆಯಲ್ಲಿಯೇ ಕಂಗನಾ ವ್ಯಕ್ತ ಪಡಿಸಿರುವ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರ ಚರ್ಚೆಗೆ ಕಾರಣವಾಗಿದೆ. ಇದು ಹೊಗಳಿಕೆಯೋ ಅಥವಾ ತೆಗಳಿಕೆಯೋ ಏನೂ ಗೊತ್ತಾಗದೇ ಗೊಂದಲಕ್ಕೂ ಕೆಲವರು ಬಿದ್ದಿದ್ದಾರೆ. ಇದನ್ನೂ ಓದಿ: ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ – ಆಲಿಯಾ ಅಭಿನಯಕ್ಕೆ ಕಂಗನಾ ಫುಲ್ ಫಿದಾ

    (ಅಚ್ಚಾ ದೂಧ್ ಮೇ ಪಾನಿ ತೋ ಸುನಾ ಥಾ ಲೇಕಿನ್ ಪಾನಿ ಮೇ ದೂಧ್ ಹಮ್ ಕ್ಯಾ ಮಜ್ಬೂರಿಯಾನ್ ರಹೀ ಹೊಂಗಿ ಬೇಚರೋನ್ ಕಿ) ಹಾಲನ್ನು ನೀರಿನಿಂದ ದುರ್ಬಲಗೊಳಿಸುವ ಪ್ರವೃತ್ತಿಯ ಬಗ್ಗೆ ನಾವು ಕೇಳಿದ್ದೇವೆ ಆದರೆ ಇಲ್ಲಿ ನೀರನ್ನು ಹಾಲಿನೊಂದಿಗೆ ದುರ್ಬಲಗೊಳಿಸಲಾಗಿದೆ ಎಂದು ತೋರುತ್ತದೆ. ಅಸಹಾಯಕ ಜನರು ಕೆಲವು ಕಟ್ಟುಪಾಡುಗಳನ್ನು ಹೊಂದಿರುತ್ತಾರೆ ಎಂದು ಅವರು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ ಚಿತ್ರವು 100 ಕೋಟಿ ರೂಪಾಯಿಗಳ ಗಡಿ ದಾಟಿದೆ ಮತ್ತು ಇನ್ನೂ ಮುಂದುವರೆದಿದೆ. ಈ ಹಿಂದೆ ಕಂಗನಾ ಚಿತ್ರದ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ದಕ್ಷಿಣ ಭಾರತದ ಥಿಯೇಟರ್‍ಗಳಲ್ಲಿ ಸಿನಿಮಾ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿರುವುದನ್ನು ಕೇಳಲು ಸಂತಸವಾಗುತ್ತಿದೆ. ಹಿಂದಿಯಲ್ಲಿ ಪುಟ್ಟ, ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಿನಿಮಾ ಮುಂದೆ ಸಾಗುತ್ತಿರುವ ಬಗ್ಗೆ ಕೇಳುತ್ತಿದ್ದೇನೆ. ಸ್ಟಾರ್ ನಟ ಮತ್ತು ನಿರ್ದೇಶಕರ ಸಿನಿಮಾಗಳೇ ಹೆಚ್ಚಾಗಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಮಹಿಳಾ ಪ್ರಧಾನ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

    ಹಿಂದಿ ಚಿತ್ರೋದ್ಯಮ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಿನಿಮಾ ಮುಂದೆ ಸಾಗುತ್ತಿದೆ. ಸದ್ಯ ಪುಟ್ಟ ಹೆಜ್ಜೆ ಇಡುತ್ತಿರುವ ಈ ಸಿನಿಮಾ ದೊಡ್ಡ ಹೆಜ್ಜೆ ಇಡಲು ಕಡಿಮೆ ಸಮಯವಿಲ್ಲ. ಕೆಲವೊಮ್ಮೆ ಮಾಫಿಯಾ ಸಿನಿಮಾಗಳು ಕೂಡ ಒಳ್ಳೆಯದನ್ನು ಮಾಡುತ್ತವೆ. ಉತ್ತಮ ಸಿನಿಮಾ ಮಾಡಿದರೆ ಖಂಡಿತ ಎಲ್ಲರೂ ಪ್ರಶಂಸಿಸುತ್ತೇವೆ ಮತ್ತು ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ ಎಂದು ಆಲಿಯಾ ಭಟ್ ಅಭಿನಯಕ್ಕೆ ಹಾಗೂ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈಗ ಉಲ್ಟಾ ಹೊಡೆದಿದ್ದಾರೆ.

  • ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದ ಗಂಗೂಬಾಯಿ

    ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದ ಗಂಗೂಬಾಯಿ

    ಮುಂಬೈ: ಬಾಲಿವುಡ್ ತಾರೆ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಇದೇ ಶುಕ್ರವಾರದಂದು ಬಿಡುಗಡೆ ಆಗಿದೆ. ಬಿಡುಗಡೆಗೊಂಡ ಮೊದಲ ದಿನವೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರವು ಅಂದಾಜು 7 ಕೋಟಿ ಗಳಿಸಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಅಚ್ಚರಿ ಪಡುವಷ್ಟು ಗಂಗೂಬಾಯಿ ಗಲ್ಲಾಪೆಟ್ಟಿಗೆ ತುಂಬಿಸಿದ್ದಾಳೆ. ಮೊದಲ ದಿನವೇ ಬರೋಬ್ಬರಿ 10.50 ಕೋಟಿ ರೂ. ಈ ಸಿನಿಮಾ ಬಾಚಿಕೊಂಡಿದೆ.

    ರಿಲೀಸ್ ಆದ ಎರಡನೇ ದಿನ ಶನಿವಾರ 13.32 ಕೋಟಿ ರೂಪಾಯಿ, ಮೂರನೇ ದಿನ ಭಾನುವಾರ 15.30 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಮೂರನೇ ದಿನಕ್ಕೆ ಈ ಚಿತ್ರದ ಕಲೆಕ್ಷನ್ 39.12 ಕೋಟಿ ರುಪಾಯಿ ದಾಟಿತ್ತು. ವೀಕೆಂಡ್ ಅಲ್ಲದೇ, ವೀಕ್ ಡೇಸ್ ನಲ್ಲೂ ಅದರ ಲೆಕ್ಕಾಚಾರ ಕೆಳಗಿಳಿಯಲಿಲ್ಲ. ಸೋಮವಾರವೂ ಚಿತ್ರದ ಕಲೆಕ್ಷನ್ ಕುಗ್ಗದೇ, ವಾರದ ಮೊದಲ ದಿನವಾದರೂ ಅಂದಾಜು 8.20 ಕೋಟಿ ರೂಪಾಯಿ ಸಿನಿಮಾ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ ಅಂದಾಜು 47 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಚಿತ್ರವು ತೆರೆಗೆ ಬಂದು ಇಂದಿಗೆ 4 ದಿನಗಳಾಗಿವೆ. ಅಲ್ಲದೇ, ಮಹಾ ಶಿವರಾತ್ರಿ ನಿಮಿತ್ಯ ದೇಶಾದ್ಯಂತ ಹಬ್ಬಕ್ಕೆ ಸರ್ಕಾರಿ ರಜೆ ಇದೆ. ಈ ಕಾರಣಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಧಾವಿಸಿದ್ದರು. ಹೀಗಾಗಿ, ಈ ಸಿನಿಮಾ ಮಂಗಳವಾರ ಮಧ್ಯಾಹ್ನದವರೆಗೆ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಅಂದಾಜಿದೆ. ಹೀಗೆ ಗಂಗೂಬಾಯಿಯ ನಾಲ್ಕು ದಿನಗಳ ಒಟ್ಟು ಕಲೆಕ್ಷನ್ ಅಂದಾಜು 57 ಕೋಟಿ ದಾಟಬಹುದು ಅಂತಿದೆ ಬಿ ಟೌನ್ ಬಾಕ್ಸ್ ಆಫೀಸ್. ಸಿನಿಮಾದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಈ ವಾರಾಂತ್ಯಕ್ಕೆ ಗಂಗೂಬಾಯಿ 100 ಕೋಟಿ ಕ್ಲಬ್ ಗೆ ಸೇರಳಿದ್ದಾಳೆ. ಇದನ್ನೂ ಓದಿ : ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

  • ಆಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

    ಆಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

    ಮುಂಬೈ: ಬಾಲಿವುಡ್ ನಟ ಶಂತನು ಮಹೇಶ್ವರಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆಗಿನ ನಟನಾ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

    ಶುಕ್ರವಾರ ರಿಲೀಸ್ ಆದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನಟನೆಗೆ ಅಲಿಯಾ ಮತ್ತು ತಂಡಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಗಂಗೂಬಾಯಿ ಜೊತೆ ಟೈಲರ್ ಆಗಿ ಪ್ರೇಕ್ಷಕರ ಗಮನ ಸೆಳೆದ ಶಂತನು ಮಹೇಶ್ವರಿ ಮಾಧ್ಯಮಗಳಿಗೆ ತಮ್ಮ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಸಂತೋಷವಾಗಿದೆ ಎಂದು ತಿಳಿಸಿದರು.

    ಶಂತನು ಅವರು ಮೂಲತಃ ನೃತ್ಯಪಟುವಾಗಿದ್ದು, ಸಿನಿಮಾದಲ್ಲಿ ಎಲ್ಲಿಯೂ ಅವರು ಡ್ಯಾನ್ಸ್ ಮಾಡಿಲ್ಲ. ಈ ಕುರಿತು ಮಾತನಾಡಿದ ಅವರು, ನಾನು ಸಿನಿಮಾದಲ್ಲಿ ಡ್ಯಾನ್ಸ್ ಮಾಡಿಲ್ಲ ಎಂದು ನನಗೆ ಯಾವುದೇ ರೀತಿ ಅಸಮಾಧಾನವಿಲ್ಲ. ಏಕೆಂದರೆ ಬನ್ಸಾಲಿ ಅವರು ನಾನು ನೃತ್ಯ ಮಾಡುವುದನ್ನು ನೋಡುವುದಕ್ಕಿಂತ ಹೆಚ್ಚು ನಟನೆ ಮಾಡಿಸುವುದರಲ್ಲಿ ಆಸಕ್ತಿಯನ್ನು ಹೊಂದಿದ್ದರು. ಅಲ್ಲದೆ ಅವರು ನನ್ನಲ್ಲಿ ನಟನಾ ಕೌಶಲ್ಯ ಇದೆ ಎಂದು ನಂಬಿದ್ದಕ್ಕೆ ಹೆಚ್ಚು ಸಂತೋಷವಾಗಿದೆ ಎಂದು ಖುಷಿಪಟ್ಟರು. ಇದನ್ನೂ ಓದಿ:  ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!

    ‘ಗಂಗೂಬಾಯಿ ಕಾಠಿಯಾವಾಡಿ’ ಆಲಿಯಾ ಭಟ್ ಜೊತೆಗಿನ ನಟನೆ ಕುರಿತು ಮಾತನಾಡಿದ ಅವರು, ‘ಮೇರಿ ಜಾನ್’ ಹಾಡಿನ ಸಮಯದಲ್ಲಿ ಅಲಿಯಾ ನನಗೆ ಕಪಾಳಮೋಕ್ಷ ಮಾಡಬೇಕಿತ್ತು. ಆದರೆ ಅಲಿಯಾ ಅವರಿಗೆ ನನಗೆ ತುಂಬಾ ಬಲವಾಗಿ ಕಪಾಳಮೋಕ್ಷ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ನಾವು ಆ ಸೀನ್ ಗೆ ಸುಮಾರು 20 ಟೇಕ್‍ಗಳನ್ನು ತೆಗದುಕೊಂಡಿದ್ದೆವು. ನಾನು ಅವರಿಗೆ ಏನು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದೆ. ನಂತರ ಅವರು ಕೂಲ್ ಆಗಿದ್ದರು ಎಂದು ವಿವರಿಸಿದರು.

    Shantanu Maheshwari interview: On Gangubai Kathiawadi, meeting Alia Bhatt on Jhalak and more | Bollywood - Hindustan Times

    ಈ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ನನ್ನ ಮತ್ತು ಅಲಿಯಾ ಅವರ ಕೆಮಿಸ್ಟ್ರಿ ನೋಡಿ ಒಪ್ಪಿಕೊಂಡಿದ್ದಾರೆ. ಈ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಈ ಸಿನಿಮಾ ನೋಡಿದ ಮೇಲೆ ಜನರು ನನ್ನನ್ನು ಮಾತನಾಡಿಸುವ ರೀತಿ ಪೂರ್ತಿ ಬದಲಾಗಿದೆ. ನನ್ನ ಪೋಷಕರು ಈ ಪ್ರತಿಕ್ರಿಯೆ ನೋಡಿ ನನ್ನ ಮೇಲೆ ಹೆಮ್ಮೆಪಡುತ್ತಿದ್ದಾರೆ. ಇದನ್ನು ನೋಡಿ ನನಗೆ ಸಂತೋಷವಾಗಿಗೆ ಎಂದರು.

    ಈ ಸಿನಿಮಾ ನೋಡಿದ ಮೇಲೆ ಮನೆಯವರಿಗೆ ಸಂತೋಷವಾಗಿದೆ. ಆದರೆ ನಾನು ಮೊದಲು ಮನೆಯಲ್ಲಿ ಹೇಗೆ ಇದ್ದೆ ಅದೇ ರೀತಿ ಈಗಲೂ ಇದ್ದೇನೆ. ನಾನು ಅವಿಭಕ್ತ ಕುಟುಂಬದಲ್ಲಿದ್ದು, ಮನೆಯಲ್ಲಿ ನಾನೇ ಚಿಕ್ಕವನು. ನನ್ನನ್ನು ಮೊದಲು ಮನೆಯಲ್ಲಿ ಯಾವ ರೀತಿ ನೋಡುತ್ತಿದ್ರೂ ಅದೇ ರೀತಿ ಈಗಲೂ ನೋಡುತ್ತಾರೆ. ಇದು ಒಳ್ಳೆಯ ವಿಷಯ ಎಂದು ತಿಳಿಸಿದರು. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

    Gangubai Kathiawadi: Who is Shantanu Maheshwari, who is fighting love with Alia Bhatt? are very popular on social media - The India Print : theindiaprint.com, The Print

    ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಕಥೆಯನ್ನು ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನಿಂದ ತೆಗೆದುಕೊಳ್ಳಲಾಗಿದೆ. ಆಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಶುಕ್ರವಾರ ರಿಲೀಸ್ ಆದ ಈ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

  • ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ – ಆಲಿಯಾ ಅಭಿನಯಕ್ಕೆ ಕಂಗನಾ ಫುಲ್ ಫಿದಾ

    ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ – ಆಲಿಯಾ ಅಭಿನಯಕ್ಕೆ ಕಂಗನಾ ಫುಲ್ ಫಿದಾ

    ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಶುಕ್ರವಾರವಷ್ಟೇ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಸಿನಿಮಾದಲ್ಲಿ ಆಲಿಯಾ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಆಲಿಯಾ ಅಭಿನಯ ನೋಡಿ ಫುಲ್ ಫಿದಾ ಆಗಿದ್ದಾರೆ.

    ಈ ಕುರಿತಂತೆ ಕಂಗನಾ ರಣಾವತ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ದಕ್ಷಿಣ ಭಾರತದ ಥಿಯೇಟರ್‌ಗಳಲ್ಲಿ ಸಿನಿಮಾ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿರುವುದನ್ನು ಕೇಳಲು ಸಂತಸವಾಗುತ್ತಿದೆ. ಹಿಂದಿಯಲ್ಲಿ ಪುಟ್ಟ, ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಿನಿಮಾ ಮುಂದೆ ಸಾಗುತ್ತಿರುವ ಬಗ್ಗೆ ಕೇಳುತ್ತಿದ್ದೇನೆ. ಸ್ಟಾರ್ ನಟ ಮತ್ತು ನಿರ್ದೇಶಕರ ಸಿನಿಮಾಗಳೇ ಹೆಚ್ಚಾಗಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಮಹಿಳಾ ಪ್ರಧಾನ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಹಿಂದಿ ಚಿತ್ರೀಕೋದ್ಯಮದಲ್ಲಿಯೂ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಿನಿಮಾ ಮುಂದೆ ಸಾಗುತ್ತಿದೆ. ಸದ್ಯ ಪುಟ್ಟ ಹೆಜ್ಜೆ ಇಡುತ್ತಿರುವ ಈ ಸಿನಿಮಾ ದೊಡ್ಡ ಹೆಜ್ಜೆ ಇಡಲು ಕಡಿಮೆ ಸಮಯವಿಲ್ಲ. ಕೆಲವೊಮ್ಮೆ ಮಾಫಿಯಾ ಸಿನಿಮಾಗಳು ಕೂಡ ಒಳ್ಳೆಯದನ್ನು ಮಾಡುತ್ತದೆ. ಉತ್ತಮ ಸಿನಿಮಾ ಮಾಡಿದರೆ ಖಂಡಿತ ಎಲ್ಲರೂ ಪ್ರಶಂಸಿಸುತ್ತೇವೆ ಮತ್ತು ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ ಎಂದು ಆಲಿಯಾ ಭಟ್ ಅಭಿನಯಕ್ಕೆ ಹಾಗೂ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

    ಸಂಜಯ್ ಲೀಲಾ ಬನ್ಸಾಲಿ ಆ್ಯಕ್ಷನ್ ಕಟ್ ಹೇಳಿದ್ದು, ಗಂಗೂಬಾಯಿ ಕಾಠಿಯಾವಾಡಿ ಕಥೆಯನ್ನು ಹುಸೇನ್ ಜೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನಿಂದ ತೆಗೆದುಕೊಳ್ಳಲಾಗಿದೆ. ಆಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಗಂಗೂಬಾಯಿ ಕಾಠಿಯಾವಾಡಿ ಮುಂಬೈನ ಕಾಮಾಠಿಪುರ ಲೈಂಗಿಕ ಕಾರ್ಯಕರ್ತೆಯಾಗಿ ನಂತರ ರಾಜಕೀಯ ಪ್ರವೇಶ ಮಾಡಿದ್ದರು. ಉತ್ತಮ ಜೀವನ ನಡೆಸುತ್ತಿದ್ದರು. ಈ ನಿಜವಾದ ಘಟನೆಯನ್ನು ತೆಗದುಕೊಂಡು ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಮಾಡಲಾಗಿದೆ. ಇದನ್ನೂ ಓದಿ: ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

  • ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

    ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

    ಮುಂಬೈ: ಬಾಲಿವುಡ್ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ. ಜಗತ್ತಿನಾದ್ಯಂತ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬ್ಯುಸಿಯಾಗಿದ್ದರೆ, ಇತ್ತ ಕಡೆ ಸುಪ್ರೀಂ ಕೋರ್ಟ್ ಸಲಹೆಯೊಂದನ್ನು ನೀಡಿ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಿನಿಮಾದ ಕುರಿತಾಗಿ ಸಾಕಷ್ಟು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಸಿನಿಮಾ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಚಿತ್ರತಂಡಕ್ಕೆ ಸಲಹೆ ನೀಡಿದೆ.

    ಹೆಸರು ಬದಲಾಯಿಸುವುದರ ಜತೆಗೆ ಸಿನಿಮಾದ ಕಥೆಯೇ ಬಗ್ಗೆಯೇ ಆಕ್ಷೇಪ ವ್ಯಕ್ತ ಪಡಿಸಿ, ಗಂಗೂಬಾಯಿ ಅವರ ದತ್ತು ಪುತ್ರ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಅಲ್ಲದೇ, ಸಿನಿಮಾ ಬಿಡುಗಡೆಯನ್ನು ತಡೆಹಿಡಿಯಲು ಕೋರಿ ನ್ಯಾಯಾಲಯಗಳ ಮುಂದೆ ಹಲವಾರು ಅರ್ಜಿಗಳು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಸಲಹೆಯನ್ನು ನೀಡಿದೆ. ಬನ್ಸಾಲಿ ಪ್ರೊಡಕ್ಷನ್ಸ್‍ನ ವಕೀಲ ಸಿದ್ಧಾರ್ಥ ದವೆ ಅವರು ಸಲಹೆಯ ಬಗ್ಗೆ ತಮ್ಮ ಕಕ್ಷಿದಾರ ಜೊತೆ ಮಾತನಾಡಿ ಸೂಚನೆಗಳನ್ನು ಪಡೆಯುವುದಾಗಿ ಇಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಚಾರವಾಗಿ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

    ‘ಗಂಗೂಬಾಯಿ ಕಾಠಿಯಾವಾಡಿ’ ಮುಂಬೈನ ಕಾಮಾಠಿಪುರ ಲೈಂಗಿಕ ಕಾರ್ಯಕರ್ತೆಯಾಗಿ ನಂತರ ರಾಜಕೀಯ ಪ್ರವೇಶ ಮಾಡಿದ್ದರು. ಉತ್ತಮ ಜೀವನ ನಡೆಸುತ್ತಿದ್ದರು. ಈ ನಿಜವಾದ ಘಟನೆಯನ್ನು ತೆಗದುಕೊಂಡು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾವನ್ನು ಮಾಡಲಾಗಿದೆ. ಈ ಹಿನ್ನೆಲೆ ಗಂಗೂಬಾಯಿಯ ದತ್ತುಪುತ್ರ ಬಾಬು ರಾವ್ಜಿ ಶಾ ಸಹ ಸಿನಿಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನಲ್ಲಿ ಅವರು, ನನ್ನ ತಾಯಿಯನ್ನು ಈ ಸಿನಿಮಾದಲ್ಲಿ ಮಾನಹಾನಿ ಮಾಡಲಾಗಿದೆ. ಅದಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದ್ದರು.

    ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ವಿರುದ್ಧ ಇದೀಗ ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಕೂಡ ಮತ್ತೊಂದು ದೂರು ಕೊಟ್ಟಿದ್ದಾರೆ. ಕಾಠಿಯಾವಾಡಿ ಎನ್ನುವುದು ಪ್ರದೇಶದ ಹೆಸರು. ಈ ಹೆಸರನ್ನು ಚಿತ್ರದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

    ‘ಗಂಗೂಬಾಯಿ ಕಾಠಿಯಾವಾಡಿ’ ಕಥೆಯನ್ನು ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನಿಂದ ತೆಗೆದುಕೊಳ್ಳಲಾಗಿದೆ. ಅಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ.

  • ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

    ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

    ವಿವಾದಗಳಿಗೂ ಮತ್ತು ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೂ ಹಾಲು ತುಪ್ಪದ ಸಂಬಂಧ ಅನಿಸತ್ತೆ. ಅವರು ಆಯ್ಕೆ ಮಾಡಿಕೊಳ್ಳುವ ಪ್ರತಿ ಕಥೆಯೂ ವಿವಾದ ಕೇಂದ್ರಬಿಂದು ಆಗುತ್ತಿದೆ. ಈ ಹಿಂದೆ ತೆರೆಕಂಡ ಇವರ ನಿರ್ದೇಶನದ ‘ಪದ್ಮಾವತ್’ ಚಿತ್ರ ಕೂಡ ವಿವಾದದಿಂದಾಗಿಯೇ ಸಾಕಷ್ಟು ಸಂಚಲನ ಮೂಡಿಸಿತ್ತು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರಿಂದ ಹಿಡಿದು, ನಾನಾ ಸಂಘಟನೆಗಳು ಬನ್ಸಾಲಿ ವಿರುದ್ಧ ಪ್ರತಿಭಟಿಸಿದವು. ಕೋರ್ಟು, ಕಚೇರಿ ಅಂತ ಪದ್ಮಾವತಿ ಅಲೆದು ಅಲೆದು, ನಂತರ ಬಿಡುಗಡೆ ಆಯಿತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲ

    ಇದೀಗ ಗಂಗೂಬಾಯಿ ಕಾಠಿಯಾವಾಡಿ ಸರದಿ. ಈ ಸಿನಿಮಾ ಇನ್ನೇನು ಎರಡೇ ಎರಡು ದಿನಗಳಲ್ಲಿ ಬಿಡುಗಡೆಯಾಗಬೇಕು. ಅಷ್ಟರಲ್ಲಿ ಮೂರು ಕೇಸ್ ಗಳು ಈ ಸಿನಿಮಾದ ವಿರುದ್ಧ ದಾಖಲಾಗಿವೆ. ಗಂಗೂಬಾಯಿ ದತ್ತು ಪುತ್ರ ಎಂದು ಹೇಳಿಕೊಳ್ಳುತ್ತಿರುವ ಬಾಬು ರಾವ್ ಷಾ ಎನ್ನುವವರು ಈ ಮೊದಲು ಸಂಜಯ್ ಲೀಲಾ ಬನ್ಸಾಲಿ ಮತ್ತು ಗಂಗೂಬಾಯಿ ಪಾತ್ರ ಮಾಡಿರುವ ಅಲಿಯಾ ಭಟ್ ವಿರುದ್ಧ ಮಾನಹಾನಿ ದೂರ ದಾಖಲಿಸಿದ್ದರು. ತಮ್ಮ ಸಾಕು ತಾಯಿಯನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎನ್ನುವುದು ಅವರ ದೂರಾಗಿತ್ತು. ಕೇಸ್ ಇನ್ನೂ ನ್ಯಾಯಾಲಯದಲ್ಲಿ ಇದೆ. ಈಗ ಈ ಸಿನಿಮಾದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.  ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

    ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ವಿರುದ್ಧ ಇದೀಗ ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಕೂಡ ಮತ್ತೊಂದು ದೂರು ಕೊಟ್ಟಿದ್ದಾರೆ. ಕಾಠಿಯಾವಾಡಿ ಎನ್ನುವುದು ಪ್ರದೇಶದ ಹೆಸರು. ಈ ಹೆಸರನ್ನು ಚಿತ್ರದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.

  • ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

    ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

    ಮುಂಬೈ: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಕೊನೆಗೂ ನಮ್ಮ ಕನಸು ನನಸಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾದ ‘ಧೋಲಿಡಾ’ ಸಾಂಗ್ ಇಂದು ರಿಲೀಸ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗಳಲ್ಲಿ ಡ್ಯಾನ್ಸ್ ಗೆ ಯಾವಾಗಲೂ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತೆ. ಅದೇ ರೀತಿ ಇಂದು ರಿಲೀಸ್ ಆದ ‘ಧೋಲಿಡಾ’ ಹಾಡಿನಲ್ಲಿ ಡ್ಯಾನ್ಸ್ ಸಖತ್ ಆಗಿ ಮೂಡಿಬಂದಿದೆ. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

    ಇನ್‍ಸ್ಟಾಗ್ರಾಮ್‍ನಲ್ಲಿ ಆಲಿಯಾ, ಕೊನೆ ನಮ್ಮ ಕನಸು ನನಸಾಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರು ಸಂಯೋಜಿಸಿದ ಡ್ಯಾನ್ಸ್ ಕೊನೆಗೂ ಇಂದು ರಿಲೀಸ್ ಆಗಿದೆ. ನನ್ನ ಹೃದಯ ಯಾವಾಗಲೂ ‘ಧೋಲಿಡಾ’ಗಾಗಿ ಮಿಡಿಯುತ್ತಿರುತ್ತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಡ್ಯಾನ್ಸ್ ನೋಡಿ ಫುಲ್ ಫಿದಾ ಆಗಿದ್ದಾರೆ.

     

    View this post on Instagram

     

    A post shared by Gangubai ???????? (@aliaabhatt)

    ಗಂಗೂಬಾಯಿ ಪಾತ್ರಧಾರಿಯಾದ ಆಲಿಯಾ ಡ್ಯಾನ್ಸ್ ಮಾಡಿದ್ದು, ವೀಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸಾಂಗ್‍ನಲ್ಲಿ ಆಲಿಯಾ ಬಿಳಿ ಸೀರೆಯನ್ನು ಧರಿಸಿದ್ದು, ಫುಲ್ ಜೋಶ್‍ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಹಾಡಿನ ಕೊನೆಯ ಸೀನ್ ಹೈಲೈಟ್ ಆಗಿದೆ. ಈ ಹಾಡನ್ನು ಸಂಜಯ್ ಲೀಲಾ ಬನ್ಸಾಲಿ ಸಂಯೋಜಿಸಿದ್ದಾರೆ. ಜಾಹ್ನವಿ ಶ್ರೀಮಾನ್ಕರ್ ಮತ್ತು ಶೈಲ್ ಹಾಡಿದ್ದಾರೆ. ಸಾಹಿತ್ಯವನ್ನು ಕುಮಾರ್ ಅವರು ಬರೆದಿದ್ದಾರೆ.

    Sanjay Leela Bhansali

    ಕಥೆಯ ಎಳೆ!
    ಗಂಗೂಬಾಯಿ ಕಥಿಯವಾಡಿ ಮುಂಬೈನ ಕಾಮತಿಪುರದಲ್ಲಿ ಲೈಂಗಿಕ ಕಾರ್ಯಕರ್ತೆ, ಚಿಕ್ಕ ವಯಸ್ಸಿನಲ್ಲಿಯೇ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ನಿಜ ಜೀವನದ ಮಹಿಳೆಯ ಪ್ರಯಾಣವನ್ನು ಈ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ.

    ಈ ಸಿನಿಮಾ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. ಭಿನ್ನ ರೀತಿಯ ಸಿನಿಮಾವನ್ನು ಮಾಡಲು ಸಂಜಯ್ ಲೀಲಾ ಬನ್ಸಾಲಿ ಯಾವಾಗಲೂ ಉತ್ಸುಕರಾಗಿರುತ್ತಾರೆ. ಬನ್ಸಾಲಿ ಅವರ ಜೊತೆ ಆಲಿಯಾ ಅವರಿಗೆ ‘ಗಂಗೂಬಾಯಿ ಕಥಿಯಾವಾಡಿ’ ಚೊಚ್ಚಲ ಸಿನಿಮಾವಾಗಿದೆ. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ‘ಗಂಗೂಬಾಯಿ ಕಥಿಯಾವಾಡಿ’ ಹೊರತುಪಡಿಸಿ, ಆಲಿಯಾ ಭಟ್ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದಲ್ಲಿಯೂ ಐತಿಹಾಸಿಕ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಸಹ ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‍ಟಿಆರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.