Tag: gangsters

  • ದೆಹಲಿಯಲ್ಲಿ ಪೊಲೀಸರಿಂದ ಎನ್‌ಕೌಂಟರ್ – ಸಿಗ್ಮಾ ಗ್ಯಾಂಗ್‌ನ ನಾಲ್ವರು ದರೋಡೆಕೋರರ ಹತ್ಯೆ

    ದೆಹಲಿಯಲ್ಲಿ ಪೊಲೀಸರಿಂದ ಎನ್‌ಕೌಂಟರ್ – ಸಿಗ್ಮಾ ಗ್ಯಾಂಗ್‌ನ ನಾಲ್ವರು ದರೋಡೆಕೋರರ ಹತ್ಯೆ

    ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಪೊಲೀಸರು ಎನ್‌ಕೌಂಟರ್ (Encounter) ನಡೆಸಿದ್ದು, ಬಿಹಾರದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಸಿಗ್ಮಾ ಗ್ಯಾಂಗ್‌ನ (Sigma Gang) ನಾಲ್ವರು ದರೋಡೆಕೋರರು (Gangsters) ಹತ್ಯೆಯಾಗಿದ್ದಾರೆ.

    ದೆಹಲಿ ಮತ್ತು ಬಿಹಾರ ಪೊಲೀಸರ ತಂಡ ಮತ್ತು ದರೋಡೆಕೋರರ ನಡುವೆ ಗುರುವಾರ ಮುಂಜಾನೆ 2:20ಕ್ಕೆ ರೋಹಿಣಿಯ ಡಾ. ಅಂಬೇಡ್ಕರ್ ಚೌಕ್‌ನಿಂದ ಪನ್ಸಾಲಿ ಚೌಕ್‌ವರೆಗಿನ ಬಹದ್ದೂರ್ ಷಾ ಮಾರ್ಗದಲ್ಲಿ ಗುಂಡಿನ ಚಕಮಕಿ ನಡೆದಿದೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಪೊಲೀಸರು ಸಿಗ್ಮಾ ಗ್ಯಾಂಗ್‌ನ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದ ವೇಳೆ ದರೋಡೆಕೋರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಎನ್‌ಕೌಂಟರ್ ನಡೆಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

    ಗುಂಡಿನ ದಾಳಿಯಲ್ಲಿ ನಾಲ್ವರು ಆರೋಪಿಗಳಿಗೂ ಗುಂಡು ತಾಗಿದ್ದು, ಅವರನ್ನು ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ನಾಲ್ವರು ದರೋಡೆಕೋರರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇದನ್ನೂ ಓದಿ: ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭ

    ದರೋಡೆಕೋರರು ಯಾರು?
    ದರೋಡೆಕೋರರನ್ನು ರಂಜನ್ ಪಾಠಕ್ (25), ಬಿಮ್ಲೇಶ್ ಮಹ್ತೊ (25), ಮನೀಶ್ ಪಾಠಕ್ (33), ಮತ್ತು ಅಮನ್ ಠಾಕೂರ್ (21) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್ ಈ ಗ್ಯಾಂಗ್‌ನ ನಾಯಕನಾಗಿದ್ದ. ಹಲವಾರು ವರ್ಷಗಳಿಂದ ಈ ಸಿಗ್ಮಾ ಗ್ಯಾಂಗ್ ಬಿಹಾರದಾದ್ಯಂತ ಸುಲಿಗೆ ಮತ್ತು ಕಾಂಟ್ರಾಕ್ಟ್ ಪಡೆದು ಹತ್ಯೆ ನಡೆಸುವುದರಲ್ಲಿ ಭಾಗಿಯಾಗಿತ್ತು. ಇದನ್ನೂ ಓದಿ: ತಾಯಿ ಬಳಿ ಮಲಗಿದ್ದ ಗಂಡು ಮಗು ಕಳ್ಳತನ – ಮಹಿಳೆ ಬಂಧನ

    ರಂಜನ್ ಪಾಠಕ್ ಬಂಧನಕ್ಕೆ 25,000 ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಸೀತಾಮರ್ಹಿ ಮತ್ತು ಬಿಹಾರದ ಪಕ್ಕದ ಜಿಲ್ಲೆಗಳಲ್ಲಿ ಐದು ಪ್ರಮುಖ ಕೊಲೆಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ರಂಜನ್ ಪಾಠಕ್ ಪೊಲೀಸರಿಗೆ ಬೇಕಾಗಿದ್ದ. ಅಲ್ಲದೇ ರಂಜನ್ ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದ ಎಂದು ದೆಹಲಿ ಪೊಲೀಸ್ ಮೂಲ ಬಹಿರಂಗಪಡಿಸಿದೆ. ಇತ್ತೀಚಿಗೆ ದರೋಡೆಕೋರರು ಬಿಹಾರ ಚುನಾವಣೆ ಸಂಬಂಧ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್ – ಕಡೆಗಳಿಗೆಯಲ್ಲೂ ದೇವಿ ಕಣ್ತುಂಬಿಕೊಂಡ ಭಕ್ತಗಣ

    ಸಿಗ್ಮಾ ಗ್ಯಾಂಗ್ ಸುಮಾರು 7 ವರ್ಷಗಳಿಂದ ಸಕ್ರಿಯವಾಗಿದ್ದು, ಬಿಹಾರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ದೆಹಲಿಯಲ್ಲಿ ತಲೆಮರೆಸಿಕೊಂಡಿತ್ತು. ಹಲವು ದಿನಗಳವರೆಗೆ ಪೊಲೀಸರು ಇವರ ಚಲನವಲನಗಳನ್ನು ಪತ್ತೆಹಚ್ಚಿ ಬಳಿಕ ಕಾರ್ಯಾಚರಣೆಗೆ ಇಳಿದಿದ್ದಾರೆ. ಗ್ಯಾಂಗ್‌ನ ಜಾಲವನ್ನು ಪತ್ತೆಹಚ್ಚುವ ಸಲುವಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಇವಿ ಬಿಎಂಟಿಸಿ ಬಸ್ಸು ಚಾಲಕರಿಂದ ದಿಢೀರ್‌ ಪ್ರತಿಭಟನೆ

  • ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ನವದೆಹಲಿ: ರೌಡಿಶೀಟರ್‌ಗಳ(Gangsters) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಉತ್ತರ ಭಾರತದಾದ್ಯಂತ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ.

    ಹರಿಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಿವಿಧ ರೌಡಿಶೀಟರ್‌ಗಳೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಪಡೆಗಳ ಸಮನ್ವಯದಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ.

    ರೌಡಿಶೀಟರ್‌ಗಳು ಮತ್ತು ಭಯೋತ್ಪಾದಕರ(Terrorist) ನಡುವೆ ಸಂಬಂಧಗಳಿರುವುದನ್ನು ಬಹಿರಂಗಪಡಿಸಲಾಗಿದೆ. ಭಾರತ ಮತ್ತು ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್‌ಸ್ಟರ್ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳಿಂದಲೂ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ(Sidhu Moosewala) ಹತ್ಯೆಯ ಪ್ರಮುಖ ಶಂಕಿತ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಕೆಲವು ಆರೋಪಿಗಳು ಜೈಲಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಬಳಿಕ ಭಯೋತ್ಪಾದಕರು ಮತ್ತು ರೌಟಿಶೀಟರ್‌ಗಳ ನಡುವೆ ನಂಟು ಬೆಳೆಯುತ್ತಿರುವುದು ಬಹಿರಂಗವಾಗಿದೆ. ಕೇಂದ್ರ ಈ ಬಗ್ಗೆ 2 ತಿಂಗಳಿನಿAದ ಪಂಜಾಬ್ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್

    ಕೇಂದ್ರ ಗೃಹ ಸಚಿವಾಲಯ ಭಾರತದಾದ್ಯಂತ ಈ ರೌಡಿಶೀಟರ್‌ಗಳ ವಿರುದ್ಧ ಗುಪ್ತಚರ ನೇತೃತ್ವದ ಸಂಘಟಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಅವರ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲು ಎನ್‌ಐಎ ಗೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಜೂನ್ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದ ಬಳಿ ಸಿಧು ಮೂಸೆ ವಾಲಾ ಅವರನ್ನು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡು ಹಾರಿಸಲಾಗಿತ್ತು. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು 2ಕಿ.ಮೀ.ವರೆಗೂ ಎಳೆದೊಯ್ದ ಕಂಟೈನರ್ ಟ್ರಕ್

    Live Tv
    [brid partner=56869869 player=32851 video=960834 autoplay=true]

  • ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರು ಅರೆಸ್ಟ್

    ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರು ಅರೆಸ್ಟ್

    ಚಾಮರಾಜನಗರ: ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್ ದರೋಡೆಕೋರರ ಗುಂಪನ್ನು ಹಡೆಮುರಿಕಟ್ಟುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನ ಭರತ್ ಅಲಿಯಾಸ್ ಹುಳಿಮಾವು, ಹನುಮೇಗೌಡ, ಕಿರಣ್, ಪ್ರತಾಪ್ ಬಂಧಿತ ಆರೋಪಿಗಳಾಗಿದ್ದಾರೆ. ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರ ಹಣ ಮತ್ತು ಮೊಬೈಲ್ ದೋಚಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

     

    ಕಳೆದ ತಿಂಗಳಷ್ಟೆ ತಮಿಳುನಾಡು ಮೂಲದ ಶಿವು ಹಾಗೂ ಸ್ನೇಹಿತ ದಿನೇಶ್, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಮಧುವನಹಳ್ಳಿಯ ಮುಖ್ಯ ರಸ್ತೆಯ ಬಳಿ ಕಾರಿನಲ್ಲಿ ಬಂದ ಆರೋಪಿಗಳು ಶಿವು ಹಾಗೂ ದಿನೇಶ್ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು.

    ಬಳಿಕ ಶಿವು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಡಿವೈಎಸ್ಪಿ ಜಿ.ನಾಗರಾಜು ಮಾರ್ಗದರ್ಶನದಲ್ಲಿ ಎರಡು ಪ್ರತ್ಯೇಕ ತಂಡಗಳ ಮೂಲಕ ಕಾರ್ಯಾಚರಣೆಗಿಳಿದಿದ್ದರು. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

    ತಿಂಗಳುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಖತರ್ನಾಕ್ ನಾಲ್ವರು ಆರೋಪಿಗಳ ಬೆನ್ನತ್ತಿದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸ್ವಿಫ್ಟ್ ಡಿಸೈರ್ ಕಾರು ಮತ್ತು ಫೋನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿದ್ದಾರೆ.

  • ಭೀಮಾತೀರದಲ್ಲಿ ಶುರುವಾಯ್ತು ಹಣಕ್ಕಾಗಿ ಕಿಡ್ನಾಪ್ ದಂಧೆ

    ಭೀಮಾತೀರದಲ್ಲಿ ಶುರುವಾಯ್ತು ಹಣಕ್ಕಾಗಿ ಕಿಡ್ನಾಪ್ ದಂಧೆ

    ವಿಜಯಪುರ: ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಖದೀಮರಿಂದ ಬೇಕರಿ ಮಾಲೀಕರೊಬ್ಬರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಿನ್ನೆ ಸಂಜೆ 6.30ರ ಸುಮಾರಿಗೆ ನಡೆದಿದೆ.

    ರಾಜಸ್ಥಾನ ಮೂಲದ ಅರ್ಬುದಾ ಬೇಕರಿ ಮಾಲೀಕ ಮಾಸಸಿಂಗ್ ಕಿಡ್ನಾಪ್ ಆದ ವ್ಯಕ್ತಿ. ಮಾಲೀಕನನ್ನು ಕಿಡ್ನಾಪ್ ಮಾಡಿಕೊಂಡು ಹೊದ ಬಿಳಿ ಸ್ವಿಫ್ಟ್ ಕಾರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಸಸಿಂಗ್ ಅವರನ್ನು ಕಿಡ್ನಾಪ್ ಮಾಡಿ, 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಖದೀಮರು ವ್ಯಕ್ತಿಯನ್ನು ಕಿಡ್ನಾಪ್ ಮಾಡಿ, ಕೈ ಹಾಗೂ ಕಾಲಿಗೆ ಚಾಕು ಚುಚ್ಚಿ ಮನಬಂದಂತೆ ಹಲ್ಲೆ ನಡೆಸಿದ್ದರು. ಇದನ್ನೂ ಓದಿ:  ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

    ಹಲ್ಲೆಗೊಳಗಾದ ಮಾಸಸಿಂಗ್ ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವೀಟ್ ಆರ್ಡರ್ ಕೊಡೊದಿದೆ ಅಂತ ಮಾಲೀಕನನ್ನು ಕಾರಿನ ಬಳಿ ಕರೆದಿದ್ದರು. ಈ ವೇಳೆ ಅವರು ಕಾರಿನ ಹತ್ತಿರ ಬರುತ್ತಿದ್ದಂತೆ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್‍ರಗಳು ಅವರಿಗೆ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಲ್ಲದೇ 20 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದು, ಝಳಕಿ ಬಳಿ ಬಂದು ಹಣ ಕೊಡುವಂತೆ ಹೇಳಿದ್ದರು. ಮಾಸಸಿಂಗ್ ಕಳೆದ ಹತ್ತು ವರ್ಷಗಳಿಂದ ಇಂಡಿಯಲ್ಲಿ ಬೇಕರಿ ನಡೆಸುತ್ತಿದ್ದರು.

    ಮಾಸಸಿಂಗ್ ಕಿಡ್ನಾಪ್ ಮತ್ತು ಟಾರ್ಚರ್ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇಂಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದಿದ್ದು, ಪೊಲೀಸರು ಬೇಕರಿ ಮಾಲೀಕ ಮಾಸಸಿಂಗ್ ಕಿಡ್ನಾಪ್ ವಿಚಾರ ತಿಳಿಯುತ್ತಿದ್ದಂತೆ ಜಾಗೃತಗೊಂಡಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ಮಾಸಸಿಂಗ್ ಕುಟುಂಬಸ್ಥರು, ದರೋಡೆಕೋರರು ಝಳಕಿ ಬಳಿ ಬಂದು 20 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರಿಂದ ಹಣ ಕೊಡಲು ಸಿದ್ಧವಾಗಿದ್ದರು. ಈ ವೇಳೆ ಪೊಲೀಸರು ಕಿಡ್ನಾಪರ್ಸ್ ಸೆರೆಗೆ ಜಾಲ ರಚಿಸಿದ್ದರು. ಝಳಕಿ ಬಳಿ ಬರುತ್ತಿದ್ದಂತೆ ಪೊಲೀಸರು ಬಂದಿರುವ ವಿಚಾರ ತಿಳಿದ ಕಿಡ್ನಾಪರ್ಸ್ ಇದ್ದಕ್ಕಿದ್ದಂತೆ ಲೋಣಿ ಗ್ರಾಮದ ಕಡೆ ಕಾರು ತಿರುಗಿಸಿದ್ದಾರೆ.

    ಬಳಿಕ ಕಾರನ್ನು ಬೆನ್ನಟ್ಟಿದ ಪೊಲೀಸರು ಕಿಡ್ನಾಪರ್ಸ್ ಅನ್ನು ಸರೆ ಹಿಡಿದು ಪೊಲೀಸರು ಬೇಕರಿ ಮಾಲೀಕನನ್ನು ರಕ್ಷಿಸಿದ್ದಾರೆ. ತಡರಾತ್ರಿ ವರೆಗೂ ಕಾರ್ಯಾಚರಣೆ ನಡೆಸಿ ಕೊನೆಗೂ ಕಿಡ್ನಾಪ್ ಪಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

    ಘಟನೆಯು ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ದರೋಡೆ ನಡೆಸಲು ಹೊರಟಿದ್ದ ಗ್ಯಾಂಗ್ – ಸಿನಿಮೀಯ ರೀತಿಯಲ್ಲಿ ಬಂಧನ

    ದರೋಡೆ ನಡೆಸಲು ಹೊರಟಿದ್ದ ಗ್ಯಾಂಗ್ – ಸಿನಿಮೀಯ ರೀತಿಯಲ್ಲಿ ಬಂಧನ

    ಕಾರವಾರ: ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ಶಿರಸಿಯ ಯಲ್ಲಾಪುರ ರಸ್ತೆಯ ಬಳಿ ನಡೆದಿದೆ.

    ಶಿರಸಿಯ ವಿದ್ಯಾ ನಗರದ ಮುರುಗೇಶ ಪೂಜಾರಿ (20), ಮಹಮ್ಮದ್ ಯಾಸೀನ್ (23), ಮೊಹಲ್ಲಾದ ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19), ಮರ್ದಾನ್ ಶಫಿಸಾಬ (19) ಹಾಗೂ ಚರಣ್ ನಾಯ್ಕ (19) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ದರೋಡೆಗೆ ಬಳಸುವ ವಸ್ತುಗಳು ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ.

    ಕೃತ್ಯದ ಮುಖ್ಯ ಆರೋಪಿಯಾಗಿದ್ದ ವಿದ್ಯಾ ನಗರದ ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದಾನೆ. ಬಂಧಿತರಿಂದ ಮಾರಕಾಸ್ತ್ರಗಳು, ಬೈಕ್, ಮತ್ತು ಅಂದಾಜು 20 ಸಾವಿರ ಮೌಲ್ಯದ 912 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಡಿಎಸ್‍ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ್ ಮಾರ್ಗದರ್ಶನದಲ್ಲಿ ಶಿರಸಿ ಮಾರುಕಟ್ಟೆ ಠಾಣೆಯ ಪಿಎಸ್‍ಐ ನಾಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾರತದ ಸ್ಥಳೀಯ ದರೋಡೆಕೋರರನ್ನು ಬಳಸಿ ಪಾಕಿಸ್ತಾನದಿಂದ ದಾಳಿಗೆ ಸಂಚು

    ಭಾರತದ ಸ್ಥಳೀಯ ದರೋಡೆಕೋರರನ್ನು ಬಳಸಿ ಪಾಕಿಸ್ತಾನದಿಂದ ದಾಳಿಗೆ ಸಂಚು

    – ಸ್ಥಳೀಯ ಯುವಕರನ್ನೇ ಬಳಸಿ ದಾಳಿಗೆ ಸ್ಕೆಚ್
    – ದರೋಡೆಕೋರರಿಗೆ ಟಾಸ್ಕ್ ನೀಡಿ ಕಾರ್ಯಸಾಧನೆ

    ನವದೆಹಲಿ: ಎಷ್ಟು ಪ್ಲಾನ್ ಮಾಡಿದರೂ ಭಾರತದಲ್ಲಿ ದಾಳಿ ನಡೆಸಲು ಸಾಧ್ಯವಾಗದೆ ಪಾಪಿ ಪಾಕಿಸ್ತಾನದ ಹತಾಶೆಗೊಂಡಿದೆ. ಹೀಗಾಗಿ ಐಎಸ್‍ಐ(ಇಂಟರ್ ಸರ್ವಿಸ್ ಇಂಟಲಿಜೆನ್ಸ್) ಹಾಗೂ ಇತರ ಸಂಘಟನೆಗಳ ಮೂಲಕ ಇದೀಗ ಭಾರತದ ಸ್ಥಳೀಯ ಯುವಕರನ್ನೇ ಬಳಸಿಕೊಂಡು ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂಬ ಭಯಾನಕ ಮಾಹಿತಿ ಬಹಿರಂಗವಾಗಿದೆ.

    ಇದು ಉಗ್ರ ಸಂಘಟನೆಗಳು ಹಾಗೂ ಪಾಕಿಸ್ತಾನದ ಇತ್ತೀಚಿನ ಟ್ರೆಂಡ್ ಆಗಿದ್ದು, ಭಾರತದಲ್ಲಿನ ಗುಪ್ತಚರ ಸಂಸ್ಥೆಗಳು ಹಾಗೂ ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕೃತ್ಯ ಎಸಗಲು ಸಂಚು ರೂಪಿಸಲಾಗುತ್ತಿದೆ. ಭಾರತದಲ್ಲಿ ಹೆಚ್ಚಿನ ಭದ್ರತೆ ಇರುವ ಹಿನ್ನೆಲೆ ಪಾಕಿಸ್ತಾನ ಐಎಸ್‍ಐ ಹಾಗೂ ಇತರ ಉಗ್ರ ಸಂಘಟನೆಗಳು ನೇರವಾಗಿ ದಾಳಿ ನಡೆಸಲು ಆಗುತ್ತಿಲ್ಲ. ಹೀಗಾಗಿ ಭಾರತದಲ್ಲಿ ಯಾವುದೇ ದಾಳಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಸ್ಥಳೀಯ ಯುವಕರನ್ನೇ ಬಳಸಿಕೊಂಡು ಅವರಿಗೇ ಟಾಸ್ಟ್ ನೀಡುತ್ತಿದೆ ಎಂಬ ಭಯಾನಕ ಅಂಶ ಇದೀಗ ಹೊರ ಬಿದ್ದಿದೆ.

    ಇತ್ತೀಚೆಗೆ ಛತ್ತಿಸ್‍ಗಢದ ಇಂಟಲಿಜೆನ್ಸ್ ಯುನಿಟ್ ಈ ಕುರಿತು ಫುಲ್ ಅಲರ್ಟ್ ಆಗಿದ್ದು, ಟೆರರಿಸ್ಟ್‍ಗಳು ಹಾಗೂ ಹೆಚ್ಚು ಪ್ರಭಾವ, ಸ್ಥಳೀಯ ಸಂಪರ್ಕ ಹೊಂದಿರುವ ದರೋಡೆಕೋರರ ಕುರಿತು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಈ ಕುರಿತು ಕೆಲ ದರೋಡೆಕೋರರ ಹೆಸರನ್ನು ಸಹ ಗುಪ್ತಚರ ದಳ ಉಲ್ಲೇಖಿಸಿದೆ. ಐಎಸ್‍ಐ ಮತ್ತು ಭಯೋತ್ಪಾದಕ ಸಂಘಟನೆಗಳು ಈ ದರೋಡೆಕೋರರೊಂದಿಗೆ ಸಂಪರ್ಕದಲ್ಲಿವೆ. ಅಲ್ಲದೆ ಭಾರತದಲ್ಲಿ ದಾಳಿ ನಡೆಸಲು ಅವರಿಗೆ ಟಾಸ್ಕ್ ನೀಡಲಾಗುತ್ತಿದೆ ಎಂದು ಗುಪ್ತಚರ ದಳ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರಿಗೆ ಎಚ್ಚರಿಸಿದೆ. ಈ ಪೈಕಿ ಕೆಲ ದರೋಡೆಕೋರರನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿಸಿದೆ.

    ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ, ಸ್ಥಳೀಯ ದರೋಡೆಕೋರರನ್ನು ಐಎಸ್‍ಐ ಸಂಪರ್ಕಿಸಬಹುದು ಅಥವಾ ಈಗಾಗಲೇ ಅವರ ಸಂಪರ್ಕದಲ್ಲಿರಬಹುದು. ಕೇಂದ್ರ ಗುಪ್ತಚರ ದಳದ ಪಂಜಾಬ್ ಘಟಕ ಕೆಲ ದಿನಗಳ ಹಿಂದೆಯೇ ಈ ಕುರಿತು ಎಚ್ಚರಿಕೆ ನೀಡಿದ್ದು, ಐಎಸ್‍ಐ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳು ಕೆಲ ನಾಯಕರನ್ನು ಟಾರ್ಗೆಟ್ ಮಾಡುವಂತೆ ಐವರು ದರೋಡೆಕೋರರಿಗೆ ಟಾಸ್ಕ್ ನೀಡಿದ್ದು, ಈ ಐವರಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಉಳಿದ ಮೂವರನ್ನು ಪಂಜಾಬ್‍ನ ವಿವಿಧ ಜೈಲುಗಳಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಈ ದರೋಡೆಕೋರರು ಹತ್ತಾರು ಕೊಲೆ, ದರೋಡೆ ಹಾಗೂ ಜೈಲುಗಳಲ್ಲಿದ್ದುಕೊಂಡೇ ಸಂಚು ರೂಪಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯ ದರೋಡೆಕೋರರ ಚಲನವಲನಗಳ ಕುರಿತು ಕಣ್ಣಿಡುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ. ಅವರು ಜೈಲಿನಲ್ಲಿದ್ದರೂ ನಿಗಾ ವಹಿಸಬೇಕೆಂದು ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಈ ತಂತ್ರದ ಹಿಂದಿನ ಕಾರಣವೇನೆಂಬುದನ್ನು ಸಹ ಅಧಿಕಾರಿಗಳು ವಿವರಿಸಿದ್ದು, ಐಎಸ್‍ಐನ ಬೆನ್ನೆಲುಬಾಗಿದ್ದು ಅವರೇ ರಚಿಸಿದ ಸ್ಥಳೀಯ ಗುಂಪು. ಆದರೆ ಇತ್ತೀಚೆಗೆ ಬಹುತೇಕರು ಹೆದರಿಕೊಂಡು ಈ ಕೆಲಸ ಮಾಡುತ್ತಿಲ್ಲ. ಪೊಲೀಸರು ಕೊಲ್ಲುತ್ತಾರೆ ಎಂಬ ಭಯದಿಂದ ಇಂತಹ ಕೆಲಸ ಮಾಡುತ್ತಿಲ್ಲ. ಅಲ್ಲದೆ ಇಂತಹ ಸ್ಥಳೀಯ ಗುಂಪುಗಳನ್ನು ನಿಯಂತ್ರಿಸಲು ಯಾವುದೇ ಕಮಾಂಡರ್‍ಗಳು ಸಹ ಅವರ ಬಳಿ ಇಲ್ಲ. ಆದರೆ ಸ್ಥಳೀಯ ದರೋಡೆಕೋರರಾದರೆ ಸುಲಭವಾಗಿ ತಮಗೆ ಬೇಕಾದ ಪರಿಕರಗಳನ್ನು ಸಂಗ್ರಹಿಸಿ, ಸ್ಥಳೀಯ ಮಟ್ಟದಲ್ಲಿ ದಾಳಿ ನಡೆಸುತ್ತಾರೆ. ಹೀಗಾಗಿ ಭಯೋತ್ಪಾದಕ ಸಂಘಟನೆಗಳು ತಮ್ಮ ಕೃತ್ಯಕ್ಕಾಗಿ ಸ್ಥಳೀಯ ದರೋಡೆಕೋರರನ್ನು ಬಳಸಿಕೊಳ್ಳುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

  • ದರೋಡೆಕೋರರನ್ನು ಬೆನ್ನಟ್ಟಿ ಹಿಡಿದಿದ್ದ ನಟನಿಗೆ ಡಿಸಿಪಿ ಸನ್ಮಾನ

    ದರೋಡೆಕೋರರನ್ನು ಬೆನ್ನಟ್ಟಿ ಹಿಡಿದಿದ್ದ ನಟನಿಗೆ ಡಿಸಿಪಿ ಸನ್ಮಾನ

    ಬೆಂಗಳೂರು: ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ್ದ ನಟ ರಘು ಭಟ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಸನ್ಮಾನಿ ಅಭಿನಂದಿಸಿದರು.

    ನಟ ರಘು ಭಟ್  ಕುಟುಂಬದೊಂದಿಗೆ ಮನೆ ಹೋಗುತ್ತಿರುವಾಗ ದರೋಡೆಕೊರರಿಬ್ಬರು ಕಾರು ಚಾಲಕನ ಬಳಿ ಮೊಬೈಲ್ ಹಾಗೂ ಚೈನ್ ಪಡೆದು ಪರಾರಿಯಾಗುತ್ತಿದ್ದರು. ಕಿರುಚಾಡುತ್ತಿದ್ದ ಚಾಲಕ ಧ್ವನಿ ಕೇಳಿಸಿಕೊಂಡ ರಘು ಅವರು  ದರೋಡೆಕೋರರನ್ನು ಚೇಸ್ ಮಾಡಲು ಆರಂಭಿಸಿದಾಗ, ದರೋಡೆಕೋರರು ಬೈಕ್ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದರು. ಸುಮಾರು 2 ಕಿ.ಮೀ ಚೇಸ್ ಮಾಡಿದ ಬಳಿಕ  ಭಾರತಿ ನಗರದ ಸೇಂಟ್ ಜಾನ್ಸ್ ವೃತ್ತದಲ್ಲಿ ರಘು, ದರೋಡೆಕೋರರನ್ನು ಹಿಡಿದಿದ್ದರು. ನಂತರ ಇಬ್ಬರನ್ನೂ, ಹಲಸೂರು ಪೊಲೀಸರಿಗೆ ಒಪ್ಪಿಸಿದ್ದರು.

    ಬಂಧಿತ ಆರೋಪಿಗಳಲ್ಲಿ ಖಾಜಾ ಮೋಹಿನ್ ವಿರುದ್ಧ ದರೋಡೆ, ಸರ ಕಳ್ಳತನ, ಕಳ್ಳತನ ಸೇರಿದಂತೆ ಒಟ್ಟು 27 ಪ್ರಕರಣಗಳಿವೆ. ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲು ಆದೇಶಿಸಲಾಗಿದೆ. ಮತ್ತೊಬ್ಬ ಆರೋಪಿ ಅಬ್ದುಲ್ ಮೋಹಿಮ್‍ನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ದರೋಡೆ ಮಾಡಿದ್ದ ಮೊಬೈಲ್, ಹಣ, ಚೈನ್‍ಗಳನ್ನು ಪೊಲೀಸರು ಚಾಲಕನಿಗೆ ತಲುಪಿಸಿದ್ದಾರೆ.

  • ದರೋಡೆಗೆ ಪೊದೆ ಒಳಗೆ ಕೂತು ಹೊಂಚು ಹಾಕುತ್ತಿದ್ದ ಆರು ಮಂದಿ ಅರೆಸ್ಟ್

    ದರೋಡೆಗೆ ಪೊದೆ ಒಳಗೆ ಕೂತು ಹೊಂಚು ಹಾಕುತ್ತಿದ್ದ ಆರು ಮಂದಿ ಅರೆಸ್ಟ್

    ರಾಮನಗರ: ಹೆದ್ದಾರಿಯಲ್ಲಿ ವಾಹನ ಸವಾರರ ಮೇಲೆ ದಾಳಿ ನಡಸಿ ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಆರು ಜನ ದರೋಡೆಕೋರರನ್ನು ಬಿಡದಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಿಡದಿಯ ಶಾಂತರಾಜು ಅಲಿಯಾಸ್ ಶಾಂತ (24) ಮತ್ತು ಶ್ರೀನಿವಾಸ್ ಅಲಿಯಾಸ್ ಯಾಡುಸೀನಾ (27), ಬೆಂಗಳೂರಿನ ಮಹೇಶ್ ಅಲಿಯಾಸ ಕೋಯಾ (34), ಭರತ್ ಅಲಿಯಾಸ್ ಪುಳಿಚಾರ್ (26), ಶ್ರೀಧರ್ ಎಚ್.ಕೆ ಅಲಿಯಾಸ್ ಕೆಂದ (26) ಬಂಧಿತ ದರೋಡೆಕೋರರು.

    ಬಿಡದಿ ಸಮೀಪದ ಗಾಣಕಲ್ ರಸ್ತೆಯ ಅವರಗೆರೆ ಕ್ರಾಸ್ ಬಳಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚುಹಾಕಿ ಪೊದೆಯಲ್ಲಿ ಕುಳಿತ್ತಿದ್ದರು. ಈ ಬಗ್ಗೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾಸ್ಪದವಾಗಿ ಓಡಾಡುತ್ತಿದ್ದವರನ್ನು ವಶಕ್ಕೆ ಪಡೆದು ನಂತರ ಪೊದೆಯಲ್ಲಿ ಅವಿತಿದ್ದವರನ್ನು ಬಂಧಿಸಿದ್ದಾರೆ.

    ಪೊಲೀಸರ ವಿಚಾರಣೆ ವೇಳೆ ಬಂಧಿತ ದರೋಡೆಕೋರರಿಂದ ದರೋಡೆಗೆ ಉಪಯೋಗಿಸಲು ತಮ್ಮ ಬಳಿ ಇಟ್ಟುಕೊಂಡಿದ್ದ ಕಾರದ ಪುಡಿ ಸೇರಿದಂತೆ ಮಾರಕಾಸ್ತ್ರಗಳು ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಶಾಂತರಾಜು ಹಾಗೂ ಶ್ರೀನಿವಾಸ ಎಂಬುವವರು ಬಿಡದಿ ಠಾಣೆಯ ರೌಡಿ ಶೀಟರ್ ಗಳಾಗಿದ್ದರೆ. ಇನ್ನುಳಿದ ನಾಲ್ವರು ದರೋಡೆಕೋರರು ಹೊಸಮುಖಗಳಾಗಿದ್ದು ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬ್ಯಾಗ್‍ಗಾಗಿ ಪ್ರಾಣ ಕಳ್ಕೊಂಡ ತಾಯಿ-ಮಗಳು

    ಬ್ಯಾಗ್‍ಗಾಗಿ ಪ್ರಾಣ ಕಳ್ಕೊಂಡ ತಾಯಿ-ಮಗಳು

    ಲಕ್ನೋ: ದರೋಡೆಯನ್ನು ವಿರೋಧಿಸಿದ್ದಕ್ಕೆ ತಾಯಿ ಮತ್ತು ಮಗಳನ್ನು ರೈಲಿನಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಾಥುರಾದಲ್ಲಿ ನಡೆದಿದೆ.

    ದೆಹಲಿಯ ಶಹದಾರಾ ನಿವಾಸಿ ಮೀನಾ (55) ಮತ್ತು ಮಗಳು ಮನೀಶಾ (21) ಮೃತರು. ಇವರು ದೆಹಲಿಯಿಂದ ಕೋಟಾಗೆ ಪ್ರಯಾಣಿಸುತ್ತಿದ್ದರು. ಮೀನಾ ಮತ್ತು ಮನೀಶಾ ಜೊತೆ ಮಗ ಆಕಾಶ್ (23) ಕೂಡ ನಿಜಾಮುದ್ದೀನ್-ತಿರುವನಂತಪುರಂ ಸೆಂಟ್ರಲ್ ಎಸ್‍ಎಫ್ ಎಕ್ಸ್ ಪ್ರೆಸ್ (22634) ನಲ್ಲಿ ಪ್ರಯಾಣಿಸುತ್ತಿದ್ದರು. ಈ ಘಟನೆ ಅಜೈ ರೈಲ್ವೆ ನಿಲ್ದಾಣದ ಬಳಿ ನಡೆದಿದೆ ಎಂದು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ತಿಳಿಸಿದೆ.

    ಮನೀಶಾ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ಕೋಚಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ಪ್ರವೇಶ ಪಡೆಯಬೇಕೆಂದು ಕೋಟಾಗೆ ತೆರಳುತ್ತಿದ್ದಳು. ಮುಂಜಾನೆ ಮೀನಾ ದರೋಡೆಕೋರರು ತನ್ನ ಬ್ಯಾಗನ್ನು ತೆಗೆದುಕೊಂಡು ಹೋಗುವುದನ್ನು ನೋಡಿದ್ದಾರೆ. ಅದನ್ನು ಮಗಳಿಗೆ ತಿಳಿಸಿದ್ದು, ಇಬ್ಬರು ದರೋಡೆಕೋರರಿಂದ ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರಲ್ಲಿ ಓರ್ವ ತಾಯಿ-ಮಗಳನ್ನು ರೈಲಿನಿಂದ ತಳ್ಳಿದ್ದಾನೆ ಎಂದು ಆರ್‌ಪಿಎಫ್ ತಿಳಿಸಿದೆ.

    ಬ್ಯಾಗ್‍ನಲ್ಲಿ ಮೊಬೈಲ್ ಫೋನ್, ಹಣ, ಕೋಚಿಂಗ್ ಮತ್ತು ಹಾಸ್ಟೆಲ್ ಶುಲ್ಕ ಜೊತೆಗೆ ಇತರ ಬೆಲೆಬಾಳುವ ವಸ್ತುಗಳು ಇದ್ದವು. ಆಕಾಶ್ ಎಚ್ಚರಕೊಂಡು ರೈಲನ್ನು ನಿಲ್ಲಿಸಲು ಚೈನ್ ಎಳೆದಿದ್ದಾನೆ. ಅದು ವೃಂದಾಬನ್ ರಸ್ತೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದೆ. ತಕ್ಷಣ ಈ ಬಗ್ಗೆ ಆರ್‌ಪಿಎಫ್‌ಗೆ ವಿಷಯ ತಿಳಿಸಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಅಂಬುಲೆನ್ಸ್ ಹೋಗಿದೆ. ಆದರೆ ಅಷ್ಟರಲ್ಲಿಯೇ ತಾಯಿ-ಮಗಳು ಮೃತಪಟ್ಟಿದ್ದರು ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿಗಳ ವಿರುದ್ಧ ದರೋಡೆ ಮತ್ತು ಹತ್ಯೆ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • 7 ಮಂದಿ ದರೋಡೆಕೋರರ ಬಂಧನ – 2.89 ಕೋಟಿ ನಗದು, ಚಿನ್ನ ವಶ

    7 ಮಂದಿ ದರೋಡೆಕೋರರ ಬಂಧನ – 2.89 ಕೋಟಿ ನಗದು, ಚಿನ್ನ ವಶ

    ಹೈದರಾಬಾದ್: ಅಂತರರಾಜ್ಯ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 2.89 ಕೋಟಿ ರೂ. ನಗದು ಮತ್ತು 350 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಪಿಸ್ತೂಲ್ ಬಳಸಿ 3.6 ಕೋಟಿ ದರೋಡೆ ಮಾಡಿರುವ ಆರೋಪ ಈ ಗ್ಯಾಂಗ್ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೈದರಾಬಾದ್ ಪೊಲೀಸ್ ಆಯುಕ್ತರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಶಾಡ್ ನಗರ ವಿಭಾಗ ಪೊಲೀಸರ ಜೊತೆಯಾಗಿ ಸೇರಿ ಕಾರ್ಯಾಚರಣೆ ಮಾಡಿದ್ದು, 2019 ರ ಜೂನ್ 28 ರಂದು ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಶಾಡ್‍ನಗರ ಪ್ರದೇಶದಲ್ಲಿ ಆಟಿಕೆ ಪಿಸ್ತೂಲ್ ಇಟ್ಟುಕೊಂಡು ಬರೋಬ್ಬರಿ 3.6 ಕೋಟಿ ಹಣವನ್ನು ದೋಚಿದ್ದಾರೆ. ಈ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಯ ಮಾಜಿ ಚಾಲಕ ಕೂಡ ಇದ್ದಾನೆ ಎಂದು ಪೊಲೀಸ್ ಆಯುಕ್ತ ವಿ.ಸಿ.ಸಜ್ಜನಾರ್ ಹೇಳಿದ್ದಾರೆ.

    ಮೂರು ತಿಂಗಳ ಹಿಂದೆಯೇ ಆರೋಪಿ ಮಾಜಿ ಚಾಲಕ ಮಯೂರೇಶ್ ದರೋಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ತನ್ನ ಗ್ರಾಮಕ್ಕೆ ಹೋಗಿದ್ದನು. ಅಲ್ಲಿ ಚಾಲಕ ಇತರ ಇಬ್ಬರು ಆರೋಪಿಗಳನ್ನು ಭೇಟಿಯಾಗಿ ದರೋಡೆಯ ಬಗ್ಗೆ ಪ್ಲ್ಯಾನ್ ಮಾಡಿದ್ದನು. ಅದರಂತೆಯೇ ದರೋಡೆ ಮಾಡಲು ಆರೋಪಿಗಳು ಒಂದು ಸಿಗರೇಟ್ ಲೈಟರ್ ಮತ್ತು ಆಟಿಕೆಯ ಪಿಸ್ತೂಲನ್ನು ಖರೀದಿಸಿದ್ದಾರೆ.

    ದರೋಡೆ:
    ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ರಾಜು ನಂಗ್ರೆ ಬರುವುದನ್ನೇ ಕಾದು ಕುಳಿತ್ತಿದ್ದ ಗ್ಯಾಂಗ್, ವಾಹನ ಬರುತ್ತಿದ್ದಂತೆ ಕಾರನ್ನು ತಡೆದು ಚಾಲಕ ಕಾರಿನಲ್ಲಿದ್ದ ಇತರರಿಗೆ ನಕಲಿ ಪಿಸ್ತೂಲಿನಿಂದ ಬೆದರಿಕೆ ಹಾಕಿದ್ದಾನೆ. ನಂತರ ವಾಹನ ಸಮೇತ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದರೋಡೆಕೋರರು ಕಾರಿನಲ್ಲಿದ್ದವರನ್ನು ಹೊರಗೆ ತಳ್ಳಿ ಹಣದೊಂದಿಗೆ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

    ಚಿನ್ನದ ವ್ಯಾಪಾರಿ ತಕ್ಷಣ ಪೊಲೀಸ್ ಠಾಣೆಗೆ ಬಂದು ದರೋಡೆ ಮತ್ತು ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಹೈದರಾಬಾದ್ ಪೊಲೀಸರು ವಿವಿಧ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಯ ಶುರು ಮಾಡಿದ್ದರು. ನಿರಂತರ ಕಾರ್ಯಾಚರಣೆ ನಂತರ ದರೋಡೆಕೋರರನ್ನು ಬಂಧಿಸಿದ್ದಾರೆ.