Tag: gangs of godavari

  • ನಟಿಯ ಜೊತೆ ಖ್ಯಾತ ನಟ ಬಾಲಕೃಷ್ಣ ದುರ್ವರ್ತನೆ: ಭಿನ್ನ ಪ್ರತಿಕ್ರಿಯೆ

    ನಟಿಯ ಜೊತೆ ಖ್ಯಾತ ನಟ ಬಾಲಕೃಷ್ಣ ದುರ್ವರ್ತನೆ: ಭಿನ್ನ ಪ್ರತಿಕ್ರಿಯೆ

    ತೆಲುಗಿನ ಹೆಸರಾಂತ ನಟ ಬಾಲಕೃಷ್ಣ (Balakrishna) ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಸಿನಿಮಾ ಇವೆಂಟ್ ವೇಳೆ ನಟಿ ಜೊತೆ ದುರ್ವರ್ತನೆ ತೋರಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇದಿಕೆಯ ಮೇಲೆ ಬಂದ ಬಾಲಕೃಷ್ಣ ನಟಿ ಅಂಜಲಿಯನ್ನು (Anjali) ತಳ್ಳಿದರು. ಕ್ಷಣ ಹೊತ್ತು ಅಂಜಲಿ ಶಾಕ್‍ ಒಳಗಾಗಿ ಆಮೇಲೆ ಸುಧಾರಿಸಿಕೊಳ್ಳುತ್ತಾರೆ. ಈ ವಿಡಿಯೋ ಕುರಿತು ಪರ ವಿರೋಧ ಚರ್ಚೆ ಶುರುವಾಗಿತ್ತು.

    ಬಾಲಕೃಷ್ಣ ವೇದಿಕೆಗೆ ಬರುವ ಮುಂಚೆ ವೇದಿಕೆಯ ಮುಂಭಾಗದಲ್ಲಿ ಕೂತಿದ್ದರು. ಅಲ್ಲಿ ಅವರಿಗೆ ಕುಡಿಯಲು ಮದ್ಯ ಇಡಲಾಗಿತ್ತು. ಮದ್ಯವನ್ನು ನೀರಿನೊಂದಿಗೆ ಬೆರೆಸಿದ್ದ ಬಾಟಲ್ ಪತ್ತೆಯಾಗಿತ್ತು. ಹಾಗಾಗಿ ಕುಡಿದು ಬಾಲಕೃಷ್ಣ ಅವರು ಆ ರೀತಿ ನಡೆದುಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು.

     

    ಈ ಕುರಿತಂತೆ ಸಿನಿಮಾ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದು, ಬಾಲಕೃಷ್ಣ ಅವರು ಕುಡಿದಿರಲಿಲ್ಲ. ಗ್ರಾಫಿಕ್ಸ್ ಮಾಡಿ ಬಾಟಲ್ ಇಡಲಾಗಿದೆ ಎಂದಿದ್ದಾರೆ. ನಟಿ ಅಂಜಲಿ ಕೂಡ ಪ್ರತಿಕ್ರಿಯೆ ನೀಡಿ, ಬೇಕು ಅಂತ ಬಾಲಕೃಷ್ಣ ಅವರು ನನ್ನನ್ನು ತಳ್ಳಿಲ್ಲ. ಅದೊಂದು ಫನ್ನಿ ಸನ್ನಿವೇಶ ಎಂದಿದ್ದಾರೆ. ಈ ಇಬ್ಬರೂ ಬಾಲಕೃಷ್ಣ ಪರವಾಗಿಯೇ ಮಾತನಾಡಿದ್ದಾರೆ.

  • ಟ್ರೋಲ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನೇಹಾ ಶೆಟ್ಟಿ

    ಟ್ರೋಲ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನೇಹಾ ಶೆಟ್ಟಿ

    ರಾವಳಿ ನಟಿ ನೇಹಾ ಶೆಟ್ಟಿ (Neha Shetty) ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಡಿಜೆ ಟಿಲ್ಲು’ ನಂತರ ಈಗ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ, ತಮ್ಮ ಬಗೆಗಿನ ಟ್ರೋಲ್‌ಗಳ ಕುರಿತು ನೇಹಾ ಶೆಟ್ಟಿ ಮೌನ ಮುರಿದಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಟ್ರೋಲ್‌ಗಳ (Troll) ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ. ಜಗತ್ತಿನಲ್ಲಿ ಜನರು ತಮ್ಮದೇ ಆದ ವಿವಿಧ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ನಾನು ತಿಳಿದಿದ್ದೇನೆ. ಬೇರೆಯವರ ಅಭಿಪ್ರಾಯಗಳು ನನ್ನ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಹಾಗಾಗಿ ನನಗೆ ಸಂಬಂಧಿಸಿದ ಟ್ರೋಲ್, ಸುದ್ದಿಗಳನ್ನು ನಾನು ನೋಡುವುದಿಲ್ಲ. ಅಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್‌ ವಿಚಾರಗಳು ಹೆಚ್ಚಾಗಿರುತ್ತದೆ ಎಂದು ‘ಮುಂಗಾರು ಮಳೆ 2’ ನಟಿ ಮಾತನಾಡಿದ್ದಾರೆ.

    ಅಂದಹಾಗೆ, ಕನ್ನಡದ ‘ಮುಂಗಾರು ಮಳೆ 2’ ಸಿನಿಮಾದಿಂದ ಶುರುವಾದ ನೇಹಾ ಶೆಟ್ಟಿ ಜರ್ನಿ ಈಗ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪೀಕ್‌ನಲ್ಲಿದ್ದಾರೆ. ಇದನ್ನೂ ಓದಿ:ದಸರಾ ಆನೆ ಅರ್ಜುನ ಸಮಾಧಿ ವಿಚಾರಕ್ಕೆ ದರ್ಶನ್ ಫ್ಯಾನ್ಸ್, ಅರಣ್ಯಾಧಿಕಾರಿಗಳ ಗಲಾಟೆ

    ‘ಡಿಜೆ ಟಿಲ್ಲು’ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೇಲೆ ನೇಹಾಗೆ ಬೇಡಿಕೆ ಹೆಚ್ಚಾಗಿತ್ತು. ಇತ್ತೀಚೆಗೆ ರಿಲೀಸ್ ಆದ ‘ಟಿಲ್ಲು ಸ್ಕ್ವೇರ್‌’ನಲ್ಲಿ ಗೆಸ್ಟ್ ರೋಲ್‌ನಲ್ಲಿ ನೇಹಾ ನಟಿಸಿದ್ದರು. ಇದೀಗ ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs Of Godavari) ಸಿನಿಮಾದಲ್ಲಿ ವಿಶ್ವಕ್ ಸೇನ್‌ಗೆ (Vishwak Sen) ನಾಯಕಿಯಾಗಿ ಕರಾವಳಿ ನಟಿ ಕಾಣಿಸಿಕೊಂಡಿದ್ದಾರೆ. ಇದೇ ಮೇ 31ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಕ್ಸಸ್‌ಗಾಗಿ ಎದುರು ನೋಡ್ತಿರುವ ನೇಹಾಗೆ ಈ ಚಿತ್ರ ಕೈ ಹಿಡಿಯುತ್ತಾ? ಟಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.

  • Gangs Of Godavari: ಶೂಟಿಂಗ್ ವೇಳೆ ವಿಶ್ವಕ್ ಸೇನ್‌ಗೆ ಗಾಯ

    Gangs Of Godavari: ಶೂಟಿಂಗ್ ವೇಳೆ ವಿಶ್ವಕ್ ಸೇನ್‌ಗೆ ಗಾಯ

    ಟಾಲಿವುಡ್ ನಟ ವಿಶ್ವಕ್ ಸೇನ್ (Vishwak Sen) ಅವರು ಸಿನಿಮಾವೊಂದರ ಶೂಟಿಂಗ್ ವೇಳೆ ಸೆಟ್‌ನಲ್ಲಿ ಲಾರಿಯಿಂದ ಕೆಳಗೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ:ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್

    ಸದ್ಯ ವಿಶ್ವಕ್ ಸೇನ್ ಅವರು ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs Of Godavari) ಆ್ಯಕ್ಷನ್ ಭರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿಯೇ ಲಾರಿ ಬಳಸಿ ಆ್ಯಕ್ಷನ್ ದೃಶ್ಯವನ್ನ ಚಿತ್ರೀಕರಿಸಲು ಯೋಜನೆ ಮಾಡಲಾಗಿತ್ತು. ವಿಶ್ವಕ್ ಲಾರಿ ಮೇಲೆ ನಿಂತು ಮಾಡುವ ಸ್ಟಂಟ್ ಶೂಟಿಂಗ್ ವೇಳೆ ಈ ಅವಘಡ ನಡೆದಿದೆ. ಈ ದೃಶ್ಯಕ್ಕೆ ತಾಲೀಮು ಮಾಡುವ ಸಂದರ್ಭದಲ್ಲಿ ಲಾರಿ ಮೇಲಿಂದ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ವಿಶ್ವಕ್ ಸೇನ್ ಸುದ್ದಿ ವೈರಲ್ ಆಗ್ತಿದ್ದಂತೆ ನಿರ್ಮಾಣ ಸಂಸ್ಥೆ ಈ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವಕ್ ಚಿತ್ರೀಕರಣ ಸಮಯದಲ್ಲಿ ಪೆಟ್ಟಾಗಿದ್ದು ನಿಜ. ಆದರೆ ಇದಾಗಿ ಕೆಲವು ದಿನಗಳಾಗಿವೆ. ಸೂಕ್ತ ಚಿಕಿತ್ಸೆ ಬಳಿಕ ಅವರು ಇದೀಗ ಗುಣಮುಖರಾಗಿದ್ದಾರೆ. ಮತ್ತೆ ಚಿತ್ರೀಕರಣಕ್ಕೆ ಅವರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

    ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಇದೇ ಡಿಸೆಂಬರ್ 10ರಂದು ರಿಲೀಸ್ ಆಗುತ್ತಿದೆ. ವಿಶ್ವಕ್‌ಗೆ ನಾಯಕಿಯಾಗಿ ಕನ್ನಡದ ನಟಿ ನೇಹಾ ಶೆಟ್ಟಿ (Neha Shetty) ನಟಿಸಿದ್ದಾರೆ.