ಉಡುಪಿ: ಅಗ್ನಿ ಅವಘಡದಿಂದಾಗಿ (Fire Accident) 7 ಮೀನುಗಾರಿಕಾ ಬೋಟ್‍ಗಳು (Boats) ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗಂಗೊಳ್ಳಿಯಲ್ಲಿ (Gangolli) ನಡೆದಿದೆ.
ದೀಪಾವಳಿ (Deepavali) ಪೂಜೆಯ ವೇಳೆ ಹಚ್ಚಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಬೈಂದೂರು ಹಾಗೂ ಗಂಗೊಳ್ಳಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ರವಾನೆ ಮಾಡಲಾಗಿದೆ. ದುರಂತದಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇದನ್ನೂ ಓದಿ: ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ
ಬೋಟ್‍ಗಳನ್ನು ದುರಸ್ತಿ ಮತ್ತು ಪೇಂಟಿಂಗ್ ಕಾರ್ಯಕ್ಕೆ ದಡದಲ್ಲಿ ಇರಿಸಲಾಗಿತ್ತು. ಬೋಟ್‍ಗಳ ಮೇಲೆ ತೆಂಗಿನ ಗರಿಗಳನ್ನು ಹಾಸಲಾಗಿತ್ತು. ಆರಂಭದಲ್ಲಿ ಬೋಟ್ ಮೇಲೆ ಹಾಸಿದ್ದ ತೆಂಗಿನ ಗರಿಗಳಿಗೆ ಬೆಂಕಿ ತಗುಲಿದೆ. ಬಳಿಕ ಬೋಟ್‍ಗಳಿಗೆ ವ್ಯಾಪಿಸಿದ್ದು ಭಾರೀ ಪ್ರಮಾಣದ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಟಾಕಿಗೆ ಹೊಗೆಮಯವಾದ ಬೆಂಗ್ಳೂರು – ಎಲ್ಲೆಲ್ಲಿ ಎಷ್ಟು ವಾಯುಮಾಲಿನ್ಯ?
ಉಡುಪಿ: ಕರಾವಳಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರದ ಕಿಚ್ಚು ದಿನೇ ದಿನೇ ಹೆಚ್ಚುತ್ತಿದೆ. ಈ ಕಿಚ್ಚಿಗೆ ಆರಂಭದ ಕಿಡಿ ಹಚ್ಚಿದ್ದು, ಕಳೆದ ವರ್ಷ ಗಂಗೊಳ್ಳಿಯಲ್ಲಿ ನಡೆದ ಒಂದು ಘಟನೆ.
ಹಿಜಬ್ ಹೋರಾಟದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಡುಪಿಗೆ ಕೆಟ್ಟ ಹೆಸರು ಬರುತ್ತಿದ್ದ ಹಿನ್ನೆಲೆಯಲ್ಲಿ ಜನತೆ ಅಸಮಾಧಾನಗೊಂಡಿದ್ದರು. ಜನತೆ ಅಸಮಾಧಾನಗೊಂಡಿದ್ದರೂ ಅಂಗಡಿ ಬಹಿಷ್ಕಾರದ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಅಂಗಡಿಗಳನ್ನು ಮುಚ್ಚಿ ಕರ್ನಾಟಕ ಬಂದ್‍ಗೆ ಕರೆ ಯಾವಾಗ ಕೊಟ್ಟರೋ ಆಗ ಗಂಗೊಳ್ಳಿಯಲ್ಲಿ ಹಿಂದೂ ಸಮಾಜದ ಬಡ ಮೀನುಗಾರ ಮಹಿಳೆಯರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಿದ ವಿಚಾರ ಮುನ್ನೆಲೆಗೆ ಬಂದಿದೆ.
ಅಂದು ಏನಾಗಿತ್ತು?: 2021ರ ಅಕ್ಟೋಬರ್ 21ರಂದು ಬೈಂದೂರು ತಾಲೂಕಿನ ಗಂಗೊಳ್ಳಿ ವ್ಯಾಪ್ತಿಯಲ್ಲಿ ವಿಪರೀತವಾಗಿ ಗೋಕಳ್ಳತನ ನಡೆಯುತ್ತಿತ್ತು. ಅಕ್ರಮ ಕಸಾಯಿಖಾನೆಗಳನ್ನು ಮಾಡಿ ಗೋಮಾಂಸ ಸಾಗಾಟ ನಡೆಯುತ್ತಿತ್ತು. ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಮಾಡಿದ್ದವು. ಇದಾಗಿ ಮಾರನೇ ದಿನದಿಂದ ಮೀನುಗಾರ ಸಮುದಾಯದ ವ್ಯಾಪಾರಿಗಳಿಗೆ ಮುಸ್ಲಿಮರು ವ್ಯಾಪಾರ ಬಹಿಷ್ಕಾರ ಹಾಕಿದ್ದರು.
ಸಮುದ್ರದಲ್ಲಿ ಮೊಗವೀರ ಸಮುದಾಯ ಹಿಡಿದ ಮೀನನ್ನು, ಮೊಗವೀರ ಮಹಿಳೆಯರು ಮಾರುವ ಮೀನನ್ನು ಖರೀದಿ ಮಾಡಲು ಮಾರುಕಟ್ಟೆಗೆ ಬಾರದೇ ಅವರು ದೂರವುಳಿದಿದ್ದರು. ಮೊಗವೀರ ಮಹಿಳೆಯರಿಂದ ಮೀನು ಖರೀದಿಸಬಾರದು ಎಂದು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್‍ನಲ್ಲಿ ಸಂದೇಶವನ್ನು ಹರಿ ಬಿಡಲಾಗಿತ್ತು. ಈ ವಿಚಾರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರಲಿಲ್ಲ. ಇದನ್ನೂ ಓದಿ:ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?
ಕರ್ನಾಟಕ ಬಂದ್ ಸಮಯದಲ್ಲಿ ಅಂಗಡಿ ಬಂದ್ ಮಾಡುವುದರ ಜೊತೆ ಮುಸ್ಲಿಂ ಕಾಂಪ್ಲೆಕ್ಸ್‌ನಲ್ಲಿದ್ದ ಹಿಂದೂ ಮಾಲೀಕರ ಅಂಗಡಿಗಳನ್ನು ಬಂದ್ ಮಾಡಿದ ವಿಚಾರ ಹಿಂದೂ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿದೆ. ಸಂವಿಧಾನ ವಿರುದ್ಧ ಬಂದ್ ಕರೆ ಕೊಟ್ಟಿದ್ದಕ್ಕೆ ಐದು ತಿಂಗಳ ನಂತರ ಸೂಕ್ತ ಸಂದರ್ಭ ನೋಡಿಕೊಂಡು ಗಂಗೊಳ್ಳಿ ಘಟನೆಗೆ ದೊಡ್ಡ ರೀತಿಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ದೇವರಿಗೆ ಹಿಂದೂ ಮಟನ್ ಸ್ಟಾಲ್ ಮಾಂಸ ಆಗಲ್ಲ, ನಮ್ಮ ದೇವರಿಗ್ಯಾಕೆ : ಸಿ.ಟಿ ರವಿ
ನಿಯಮ ಏನಿದೆ?:
ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ.
ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಹಿಂದೂ ಸಂಘಟನೆಗಳು ಹೇಳುತ್ತಿದೆ. ಹಿಂದೂ ಸಂಘಟನೆಗಳು ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ. ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ.
ಹಿಜಬ್ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್ ವಿವಾದ, ಕರ್ನಾಟಕ ಬಂದ್ ಬಳಿಕ ಕರಾವಳಿಯ ಹಿಂದೂ-ಮುಸಲ್ಮಾನ ಸಾಮರಸ್ಯದಲ್ಲಿ ಮತ್ತಷ್ಟು ಬಿರುಕಾಗಿದೆ. ಎರಡು ಸಮುದಾಯದ ಮುಖಂಡರು ಧಾರ್ಮಿಕ ದಿಗ್ಗಜರು ಒಂದೆಡೆ ಕುಳಿತು ಇದಕ್ಕೊಂದು ಪರಿಹಾರ ಮಾಡಬೇಕಿದೆ.
ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮೊವಾಡಿ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ.
ಶ್ರೀಕಾಂತ್, ಹರೀಶ್, ಮಹೇಶ್ ಬಂಧಿತರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊವಾಡಿ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಸೋಮವಾರ ರಾತ್ರಿ ಮಾಹಿತಿ ರವಾನೆಯಾಗಿತ್ತು. ಮಾಹಿತಿ ಪಡೆದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಹಸುವನ್ನು ಕೊಂದು ಮಾಂಸ ಮಾಡಿ, ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಹಸುವಿನ ಮೃತದೇಹದ ಜೊತೆ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಮಾರಂಭಕ್ಕೋ? ವ್ಯಾಪಾರಕ್ಕೋ?: ಮೊವಾಡಿ ವಸಮೀಪದ ಮನೆಯ ಕಾರ್ಯಕ್ರಮವೊಂದಕ್ಕೆ ಹಸುವನ್ನು ಕದ್ದು ತಂದು ಮಾಂಸ ಮಾಡುತ್ತಿದ್ದರು ಎಂಬ ಮಾಹಿತಿಯಿದೆ. ಅಲ್ಲದೇ ಹಸುವಿನ ಮಾಂಸವನ್ನು ಮಾರಾಟ ಮಾಡಲು ತರಲಾಗಿತ್ತು ಅಂತ ಕೂಡ ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಇನ್ನಷ್ಟೇ ನಿಜಾಂಶ ಹೊರಬರಲಿದೆ.