ಕೊಪ್ಪಳ: ಸಿನಿಮಿಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ (BJP Yuva Morcha) ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಗಂಗಾವತಿ (Gangavathi) ನಗರದಲ್ಲಿ ನಡೆದಿದೆ.
ದೇವಿಕ್ಯಾಂಪ್‌ನಿಂದ ಗಂಗಾವತಿಗೆ ವೆಂಕಟೇಶ್ ಅವರು ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್ ಸದಸ್ಯರು ಬೈಕಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿವೈಸ್‌ಪಿ ಸಿದ್ದನಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣದ ಬಗ್ಗೆ ವೆಂಕಟೇಶ ಸ್ನೇಹಿತ ರಾಮು ಪ್ರತಿಕ್ರಿಯಿಸಿ, ಸ್ನೇಹಿತರೆಲ್ಲರೂ ಊಟಕ್ಕೆ ಹೋಗಿದ್ದೆವು. ವಾಪಸ್ ಮರಳುತ್ತಿದ್ದಾಗ 7-8 ಜನ ಮಾರಾಕಾಸ್ತ್ರಗನ್ನು ಹಿಡಿದು ನಮ್ಮನ್ನು ಬೆದರಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್ ಮಿನಿಸ್ಟರ್- ಜೆಡಿಎಸ್ ಕಿಡಿ
ಕೊಪ್ಪಳ: ಗಂಗಾವತಿ (Gangavathi) ನಗರದ ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾಗಿ ತುಂಬಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಿರಿಯ ಸಹಾಯಕ ಹಾಗೂ ಗೋದಾಮು ವ್ಯವಸ್ಥಾಪಕ ಸೋಮಶೇಖರ ಅವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೊಪ್ಪಳದ (Koppal) ಗಂಗಾವತಿ ನಗರದ ರಾಯಚೂರು ರಸ್ತೆಯ ವಿದ್ಯಾನಗರದ ಗೌರಿಶಂಕರ ರೈಸ್‌ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 168 ಕ್ವಿಂಟಲ್ ಅಕ್ಕಿಯನ್ನು 2022ರಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದು ಸರ್ಕಾರಿ ಗೋದಾಮಿ ನಲ್ಲಿಟ್ಟಿದ್ದರು. ಸಂಬಂಧಿಸಿದ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು. ಇದನ್ನೂ ಓದಿ: ಕಾಳಸಂತೆ ಸೇರುತ್ತಿದೆ ಅನ್ನಭಾಗ್ಯ ಅಕ್ಕಿ – ಪಾಲಿಶ್ ನೀಡಿ ಹೆಚ್ಚಿನ ಬೆಲೆಗೆ ಮಾರಾಟ?
ಆರೋಪಿಗಳು ಕೋರ್ಟ್ ಮೊರೆ ಹೋಗಿ, ‘ಅಧಿಕಾರಿಗಳು ಸೂಕ್ತ ದಾಖಲೆ ಸಂಗ್ರಹಿಸದೆ, ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾದ ಮಂಡಿಸಿದ್ದರಿಂದ ಇದೇ ವರ್ಷ ಜಿಲ್ಲಾಧಿಕಾರಿ ಆರೋಪಿಗಳಿಗೆ ಅಕ್ಕಿ ವಾಪಸ್ ನೀಡುವಂತೆ ಆದೇಶ ಹೊರಡಿಸಿದ್ದರು. ಜಪ್ತಿ ಮಾಡಿದ್ದ 168 ಕ್ವಿಂಟಲ್ ಅಕ್ಕಿಯನ್ನು ರೈಸ್‌ಮಿಲ್‌ನವರು ವಾಪಸ್ ಪಡೆದುಕೊಳ್ಳುವಾಗ ಗೋದಾಮು ವ್ಯವಸ್ಥಾಪಕ ಹಾಗೂ ಇತರರು 275ಕ್ಕೂ ಹೆಚ್ಚು ಕ್ವಿಂಟಲ್‌ನಷ್ಟು ಅಕ್ಕಿ ಸಾಗಾಣಿಕೆಗೆ ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮಾಹಿತಿ ತಿಳಿದ ಸಂಘಟನೆಗಳ ಮುಖಂಡರು ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ಬಾಬು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಇವೆಲ್ಲವೂ 9.10 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಎನ್ನುವ ಮಾಹಿತಿ ಗೊತ್ತಾಗಿದೆ.
ಈ ಕುರಿತು ಇಲ್ಲಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ್ ಸುಹಾಸ್ ಯರೇಶೀಮಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗೋದಾಮು ವ್ಯವಸ್ಥಾಪಕ ಸೋಮಶೇಖರ ಬುಡ್ಡನವರ, ವಿದ್ಯಾನಗರದ ಉಮಾಶಂಕರ ರೈಸ್‌ಮಿಲ್ ಮಾಲೀಕ, ಲಾರಿ ಮಾಲೀಕ ಮತ್ತು ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ಆರೋಪಿ ಜಗ್ಗ 10 ದಿನ ಸಿಐಡಿ ಕಸ್ಟಡಿಗೆ
ಕೊಪ್ಪಳ: ವಿಘ್ನನಿವಾರಕ, ಆದಿವಂದಿತ ಗಣೇಶನ ಹಬ್ಬ ಸಮೀಪಿಸುತ್ತಿದ್ದು, ಈ ಹಿನ್ನೆಲೆ ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಮಕ್ಕಳು ವಿನಾಯಕನ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಮನಮೋಹಕ ದೃಶ್ಯವನ್ನು ಸುಮಾರು ಐನೂರು ಮೀಟರ್ ಎತ್ತರದಿಂದ ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ. ಅದರಲ್ಲೂ ಸಂಜೆಯ ಬಳಿಕ ಮಕ್ಕಳು, ಗಣೇಶನ ಆಕೃತಿಯ ಮೇಲೆ ದೀಪ ಹಚ್ಚಿರುವ ದೃಶ್ಯ ಹೆಚ್ಚು ಆಕರ್ಷಕವಾಗಿ ಸೆರೆ ಹಿಡಿಯಲಾಗಿದೆ.
ಈ ಬಗ್ಗೆ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, 4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ಗಾತ್ರದ ಗಣೇಶನ ಆಕೃತಿಯ ರಚಿಸುವ ಮೂಲಕ ಗಣೇಶನ ಹಬ್ಬಕ್ಕೆ ಶುಭ ಕೋರಿದ್ದಾರೆ. ಅಲ್ಲದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪೂರ್ವ, ಪ್ರಾಥಮಿಕ ಹಂತದಿಂದ ಎಂಟನೆಯ ತರಗತಿವರೆಗಿನ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾಡಿಸಲಾಗಿದೆ.
ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕಾಳಜಿಯನ್ನು ಬೆಳೆಸುವುದರೊಂದಿಗೆ ಅವರಲ್ಲಿ ಅಂತರ್ಗತವಾಗಿರುವ ಕರಕುಶಲ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸಲು ಈ ಕೆಲಸ ಮಾಡಿಸಲಾಗಿದೆ. ಶಾಲೆಯ ಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯ ಮಾಡಲಾಗಿದೆ ಎಂದರು.ಇದನ್ನೂ ಓದಿ:
ಕೊಪ್ಪಳ: ಪೈಪ್ ಮೇಲಿಂದ ತುಂಗಭದ್ರಾ ಎಡದಂಡೆ ಕಾಲುವೆ ದಾಟಲು ಹೋಗಿ ಬಾಲಕಿಯೊಬ್ಬಳು ನೀರುಪಾಲಾದ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಕರೆಕಲ್ ಕ್ಯಾಂಪ್ ಬಳಿ ನಡೆದಿದೆ.
ಕಾಲುವೆ ಎಡಭಾಗದಲ್ಲಿ ಬಾಲಕಿಯ ಪಾಲಕರು ಕುರಿಯ ಹಟ್ಟಿಯನ್ನು ಹಾಕಿಕೊಂಡಿದ್ದರು. ಕಾಲುವೆಗೆ ಅಡ್ಡಲಾಗಿ ಹಾಕಿರುವ ಪೈಪ್ ಮೂಲಕ ಕಾಲುವೆಯ ಬಲಭಾಗಕ್ಕೆ ಬಂದು, ತಮ್ಮ ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಮಂಗಳವಾರ ಬಾಲಕಿಯು ಪೈಪ್ ಮೇಲಿಂದ ಕಾಲುವೆ ದಾಟಲು ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ, ಎಡದಂಡೆ ಕಾಲುವೆಗೆ ಬಿದ್ದಿದ್ದಾಳೆ.
ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಬಾಲಕಿಯು ಹರಿದುಕೊಂಡು ಹೋಗಿದ್ದಾಳೆ. ಮಾಹಿತಿ ತಿಳಿದ ಕೂಡಲೇ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ: ಸತೀಶ್ ಜಾರಕಿಹೊಳಿ
ಕೊಪ್ಪಳ: ಏಕಾಏಕಿ ಎದೆನೋವು ಕಾಣಿಸಿಕೊಂಡು ಯೋಗ ಶಿಕ್ಷಕರೊಬ್ಬರು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ಜಿಲ್ಲೆ ಗಂಗಾವತಿ (Gangavathi) ತಾಲೂಕಿನ ಹಿರೇಬೆನಕಲ್‌ನಲ್ಲಿ ನಡೆದಿದೆ.ಇದನ್ನೂ ಓದಿ: ಚಿಕ್ಕಮಗಳೂರು | ವಿದ್ಯುತ್ ಶಾಕ್‍ಗೆ ನವವಿವಾಹಿತ ಲೈನ್‍ಮೆನ್ ಬಲಿ
ಮೃತರನ್ನು ಬಹದ್ದೂರ ಬಂಡಿ ಗ್ರಾಮದ ಶಾಂತವೀರ ಸ್ವಾಮಿ ಗಂಗಾಧರ ಮಠ (57) ಎನ್ನಲಾಗಿದ್ದು, ಹಿರೇಬೆನಕಲ್ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯ ಹಾಗೂ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶುಕ್ರವಾರ ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಹುಬ್ಬಳ್ಳಿ (Hubballi) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಹೃದಯಾಘಾತದಿಂದ ಐದು ಜನ ಸಾವನ್ನಪ್ಪಿದ್ದು, ಎರಡೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್ – ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿಕೆ
ಉತ್ತರಾಧಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಶಿವಮೊಗ್ಗದ ಆರ್ಯ ಅಕ್ಷೋಭ್ಯ ತೀರ್ಥ ಮಠದ ಮಠಾಧೀಶರಾದ ರಘುವಿಜಯ ತೀರ್ಥರ ಸಾನಿಧ್ಯದಲ್ಲಿ ಮಧ್ಯಾರಾಧನೆ ಮಹೋತ್ಸವ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಧ್ಯಾರಾಧನೆಯ ಅಂಗವಾಗಿ ರಘುವರ್ಯ ತೀರ್ಥರ ಮೂಲಬೃಂದಾವನಕ್ಕೆ ನಿರ್ಮೂಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ರೇಷ್ಮೆ ವಸ್ತ್ರಗಳ ಸಮರ್ಪಣೆ, ವಿವಿಧ ಪುಷ್ಪಗಳ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಉತ್ತರಾಧಿ ಮಠದ ಶ್ರೀಗಳಾದ ಸತ್ಯಾತ್ಮ ತೀರ್ಥ ಶ್ರೀಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ, ಸಂಸ್ಥಾನ ಪೂಜೆ, ಹಸ್ತೋದಕ ಪೂಜೆಗಳನ್ನು ನಡೆಸಲಾಯಿತು.
ನಂತರ ಸತ್ಯಾತ್ಮ ತೀರ್ಥ ಶ್ರೀಗಳು ಮಾತನಾಡಿ, ನವಬೃಂದಾವನ ಗಡ್ಡೆಯಲ್ಲಿ ಬೃಂದಾವನರಾಗಿರುವ ಶ್ರೀ ರಘುವರ್ಯ ತೀರ್ಥರು ತೋರಿಸಿಕೊಟ್ಟ ಮಾರ್ಗದಲ್ಲಿ, ಸಾಧಿಸಿದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಅವರ ಸಂದೇಶಗಳನ್ನು ಆಚರಣೆಗೆ ತರಬೇಕು. ಸುಧಾ-ಸರ್ವಮೂಲ ಗ್ರಂಥಗಳ ಅಧ್ಯಯನದ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು. ನವಬೃಂದಾವನ ಗಡ್ಡೆ ಒಂದು ಪರಮ ಪವಿತ್ರ ತಾಣವಾಗಿದ್ದು, ಇಲ್ಲಿನ ಯತಿಗಳ ಆರಾಧನೆಯಲ್ಲಿ ಭಾಗವಹಿಸುವ ಮೂಲಕ ಅವರ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಹೇಳಿದರು. ಮಠದ ದಿವಾನ ಪಂಡಿತ ಶಶಿಧರ ಚಾರ್ಯರು, ಉಮರ್ಜಿ ಶ್ರೀಕರಾಚಾರ್ಯರು, ಮಹಿಷಿ ಆನಂದ ಆಚಾರ್ಯ, ನರಸಿಂಹ ಆಚಾರ್ಯ, ಜ್ಯೋತಿಷ್ಯ ವಿದ್ವಾಂಸ ಪ್ರಸನ್ನಾಚಾರ್ಯ ಕಟ್ಟಿ, ಮಠದ ವ್ಯವಸ್ಥಾಪಕ ಆನಂದ ಆಚಾರ್ಯ ಹಾಗೂ ಇತರರಿದ್ದರು.ಇದನ್ನೂ ಓದಿ: 11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!
ಕೊಪ್ಪಳ: ಮದುವೆ (Marriage) ಸ್ವರ್ಗದಲ್ಲಿ ನಿಶ್ವಯವಾಗಿರುತ್ತದೆ ಎಂಬುದು ಭಾರತೀಯರ ನಂಬಿಕೆ. ಈಗ ಗಂಗಾವತಿಯಲ್ಲಿ (Gangavathi) ನಡೆದ ಮದುವೆಯೊಂದು ಈ ನಂಬಿಕೆಯನ್ನು ಪುಷ್ಠೀಕರಿಸಿದೆ.
ಕೊಪ್ಪಳ (Koppal) ಜಿಲ್ಲೆ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ನಿವಾಸಿ ಮುರಳಿ ಎಂಬ ಯುವಕ, ಲಂಡನ್‌ನ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಬ ಯುವತಿಯ ಕೈ ಹಿಡಿದಿದ್ದಾನೆ. ಗಂಗಾವತಿಯ ವಿವಾಹ ನೋಂದಣಿ ಕಚೇರಿಯಲ್ಲಿ ನವ ಜೋಡಿ, ಶುಕ್ರವಾರ ತಮ್ಮ ಮದುವೆ ನೋಂದಣಿ ಮಾಡಿಸಿದ್ದಾರೆ. ಪ್ರೀತಿಸಿ ಮದುವೆ ಆಗಿರುವ ಇವರ ಬಂಧನಕ್ಕೆ ಸರ್ಕಾರದ ಮುದ್ರೆ ಬಿದ್ದಿದೆ. ಯುವಕ ವೃತ್ತಿಯಲ್ಲಿ ಪ್ರವಾಸಿ ಮಾರ್ಗದರ್ಶಕ ಹಾಗೂ ಗೆಸ್ಟ್ ಹೌಸ್ ಮಾಲಿಕನಾಗಿದ್ದು, ಇದೀಗ ಸಿನಿಮಾ ಕತೆ ಬರೆಯುತ್ತಿದ್ದಾನೆ. ಯುವತಿ ಕೂಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ: ನಿಮ್ಮೂರಲ್ಲಿ ಮಳೆಯಿಂದ ಸಮಸ್ಯೆ ಆಗಿದೆಯೇ? – 8 ಜಿಲ್ಲೆಗೆ ವಾಟ್ಸಪ್ ಸಹಾಯವಾಣಿ ಸಂಖ್ಯೆ ಬಿಡುಗಡೆ
ಗಂಗಾವತಿಯ ಉಪ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದ ಚಾರ್ಲೊಟ್ಟೆ ಮೇರಿ ಫಿಂಕ್ಲರ್, ಬಿಳಿ ಸೀರೆಯಲ್ಲಿ ಭಾರತೀಯ ನಾರಿಯಂತೆಯೇ ಕಾಣಿಸುತ್ತಿದ್ದರು. ಇತ್ತ ಮುರಳಿ, ತಮ್ಮ ಆಪ್ತರೊಂದಿಗೆ ಸಾದಾ ಸೀದಾ ವಸ್ತ್ರದಲ್ಲಿ ಕಚೇರಿಗೆ ಆಗಮಿಸಿದ್ದರು. ನೋಂದಣಿ ಬಳಿಕ ಅಲ್ಲಿದ್ದ ಜನರಿಗೆ ಧಾರವಾಡದ ಪೇಡಾ, ಕಾಜು ಬರ್ಫಿ ಹಂಚಿ ಸಂತಸ ಹಂಚಿಕೊಂಡರು.
ಲಂಡನ್‌ನಲ್ಲಿ ಆರತಕ್ಷತೆ: ಯುವಕ ಪ್ರವೃತ್ತಿಯಲ್ಲಿ ಸಿನಿಮಾ ನಿರ್ಮಾಣ, ನಿರ್ದೇಶನದ ಕನಸು ಹೊತ್ತವರು. ಅತ್ತ ಯುವತಿ ಕೂಡ ಸಿನಿಮಾಗಳಿಗೆ ಕತೆ ಬರೆಯುವ ಹವ್ಯಾಸ ಉಳ್ಳವರು. ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಯುವತಿ, ಮುರುಳಿ ನಿರ್ಮಾಣ ಮಾಡುತ್ತಿದ್ದ ‘ಐ ಲವ್ ಮೈ ಕಂಟ್ರಿ’ ಎಂಬ ಕಿರುಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪರಿಚಯವಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೀತಿ ಅಂಕುರಿಸಿತ್ತು. ಈ ಜೋಡಿ ಗಂಗಾವತಿಯಲ್ಲಿ ಮದುವೆ ಆಗಿದ್ದು, ಮೇ 9ರಂದು ಲಂಡನ್‌ನಲ್ಲಿ ಅಲ್ಲಿನ ಸಂಪ್ರದಾಯದಂತೆ ಆರತಕ್ಷತೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಇಂಡಿಯಾ ವೆಡ್ಸ್ ಲಂಡನ್: ಮೇ 9ರಂದು ಆರತಕ್ಷತೆ ನಡೆಯುವ ದಿನ ‘ಇಂಡಿಯಾ ವೆಡ್ಸ್ ಲಂಡನ್’ ಎಂಬ ಕಿರುಚಿತ್ರವನ್ನು ಈ ಜೋಡಿ ಬಿಡುಗಡೆ ಮಾಡಲಿದೆ. ಇಬ್ಬರೂ ಸೇರಿ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಇಬ್ಬರು ಸೇರಿ, ‘ಡ್ರೀಮ್ ಸ್ಪೇಸ್’ ಎನ್ನುವ ಕಿರುಚಿತ್ರ ತೆಗೆದಿದ್ದರು. ಇದಕ್ಕೆ ಮೂರು ಪ್ರಶಸ್ತಿ ಸಿಕ್ಕಿವೆ. ಹಾಗೂ ಇವರಿಬ್ಬರು ಹೈದರಾಬಾದ್‌ನಲ್ಲಿ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಾಗಿರುವ ಜೀವನ್‌ರೆಡ್ಡಿ ಎಂಬುವವರ ಬಳಿ ಸದ್ಯಕ್ಕೆ ಕೆಲಸ ಮಾಡುತ್ತಿದ್ದಾರೆ. ಯುವತಿ ಸದ್ಯ ‘ಸಿಂಗರೇಣಿ ಜಂಗ್ ಸೈರನ್ ಎಂಬ ತೆಲುಗು ಚಿತ್ರಕ್ಕೆ ಕತೆ ಬರೆಯುತ್ತಿದ್ದಾರೆ. ಇಂಗ್ಲೀಷ್‌ನಲ್ಲಿ ಬರೆದ ಕತೆಯನ್ನು ಮುರಳಿ ತೆಲುಗಿಗೆ ಅನುವಾದಿಸಿ ಕೊಡುತ್ತಿದ್ದಾರೆ. ತಮ್ಮದೇ ಸ್ವಂತ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಗುರಿ ಹೊಂದಿದ್ದಾರೆ. ಇದನ್ನೂ ಓದಿ: 70 ಜನರನ್ನು ಕೆಲಸದಿಂದ ತೆಗೆದು – 67 ಮಂದಿಗೆ ಬೇರೆ ಕಡೆ ಕೆಲಸ ಸಿಗಲು ಸಹಾಯ ಮಾಡಿದ ಬೆಂಗ್ಳೂರು ಕಂಪನಿ ಸಿಇಒ!
ಸೋಮವಾರ ಸಂಜೆ ಈ ಘಟನೆ ನಡೆದಿದ್ದು, 50 ರೂ. ಪೆಟ್ರೋಲ್ ಹಾಕಿಸಿಕೊಂಡು ಗಲಾಟೆ ಮಾಡಿದ್ದಾರೆ. ಬಳಿಕ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್ ಪಂಪ್ ಸಿಬ್ಬಂದಿ ಶ್ರೀಕಾಂತ ಹಾಗೂ ಅನಿಲ್ ಎಂಬುವವರ ಮೇಲೆ ಮೂವರು ಪುಂಡರು ಸೇರಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಗಲಾಟೆ ಬಿಡಿಸಲು ಹೋದವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಪ್ಪಳ: ವಿದೇಶಿ ಮಹಿಳೆ ಹಾಗೂ ಹೋಂ ಸ್ಟೇ ಮಾಲೀಕೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಇದೀಗ ಗಂಗಾವತಿ (Gangavathi) ಸುತ್ತಮುತ್ತಲಿನ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಮೇಲೆ ದಾಳಿ ಮಾಡಿದೆ.ಇದನ್ನೂ ಓದಿ: ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಗಂಗಾವತಿ ಸಮೀಪದ ಸಾಣಾಪುರದ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಮೂವರು ದುಷ್ಕರ್ಮಿಗಳು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದರು. ಜೊತೆಗೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ರೆಸಾರ್ಟ್‌ಗಳ ಮೇಲೆ ದಾಳಿ ನಡೆಸಿ, ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ರೆಸಾರ್ಟ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ ಹಾಗೂ ವಿದೇಶಿಗರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕೊಪ್ಪಳ ಎಸ್ಪಿ ಡಾ.ರಾಮ್ ಅರಸಿದ್ದಿ ರಾತೋರಾತ್ರಿ ದಿಢೀರನೆ ದಾಳಿ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಬಸ್ಸಾಪುರ, ಗಂಗಾವತಿ ತಾಲೂಕಿನ ಸಾಣಾಪುರ ಸುತ್ತಮುತ್ತಲಿನ ರೆಸಾರ್ಟ್ ಹಾಗೂ ಹೋಂ ಸ್ಟೇಗಳ ಮೇಲೆ ಖುದ್ದು ದಾಳಿ ನಡೆಸಿ, ದಾಖಲಾತಿಗಳ ನಿರ್ವಹಣೆ, ಮದ್ಯ, ಮಾದಕ ವಸ್ತುಗಳ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಅಕ್ರಮ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದು ತವರಿಗೆ ಬಂದ ಕ್ಯಾಪ್ಟನ್ ರೋಹಿತ್‌ಗೆ ಭರ್ಜರಿ ಸ್ವಾಗತ
ಇತ್ತೀಚಿನ ದಿನಗಳಲ್ಲಿ ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜ.01 ರಿಂದ ಮಾ.07ರವರೆಗಿನ ಅವಧಿಯಲ್ಲಿ ಸಂಗ್ರಹಗೊಂಡ ಕಾಣಿಕೆಯ ಎಣಿಕೆ ಕಾರ್ಯ ಇಂದು ನಡೆದಿದ್ದು, ಒಟ್ಟು 28 ಲಕ್ಷ ರೂ. (28,35,647) ಕಾಣಿಕೆ ಸಂಗ್ರಹವಾಗಿದೆ.