Tag: Gangavali River

  • ಹೆಗ್ಗಾರಿಗೆ ಹಗ್ಗವೇ ಗತಿ – ಮೂರು ವರ್ಷದ ಹಿಂದೆ ಬಿದ್ದ ಸೇತುವೆಗಿಲ್ಲ ಸರ್ಕಾರದ ಅನುದಾನ!

    ಹೆಗ್ಗಾರಿಗೆ ಹಗ್ಗವೇ ಗತಿ – ಮೂರು ವರ್ಷದ ಹಿಂದೆ ಬಿದ್ದ ಸೇತುವೆಗಿಲ್ಲ ಸರ್ಕಾರದ ಅನುದಾನ!

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಗುಳ್ಳಾಪುರ, ಹೆಗ್ಗಾರ, ಶೇವ್ಕಾರ, ಕೈಗಡಿ ಗ್ರಾಮದ ಜನ ಶಿರಸಿಗೆ ಬರಲು ಗಂಗಾವಳಿ ನದಿ (Gangavali River) ದಾಟಲು ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನದಿ ದಾಟಲು ಸಣ್ಣ ತೆಪ್ಪದ ಮೂಲಕ ಜನರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.

    ಈ ನದಿಗೆ ಇದ್ದ ಸೇತುವೆ (Bridge) 2021ರ ಅಬ್ಬರದ ಮಳೆಗೆ ಮುರಿದು ಬಿದ್ದಿತ್ತು. ಈ ವೇಳೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಸೇತುವೆ ನಿರ್ಮಾಣದ ಭರವಸೆ ಕೊಟ್ಟಿದ್ದರು. ಅಲ್ಲದೇ 20 ಕೋಟಿ ರೂ. ಯೋಜನೆಗೆ ಎಸ್ಟಿಮೇಟ್‌ ಮಾಡಲಾಗಿತ್ತು. ಇನ್ನೇನೂ ಸೇತುವೆಗೆ ಹಣ ಬಿಡುಗಡೆ ಆಗುತ್ತದೆ ಎನ್ನುವುದರಲ್ಲಿ ನೆನೆಗುದಿಗೆಗೆ ಬಿದ್ದ ಪ್ರಾಜೆಕ್ಟ್, ಹೊಸ ಸರ್ಕಾರ ಬಂದಾದ ಮೇಲೂ ಹಾಗೆಯೇ ಉಳಿದಿದೆ.

    ಸ್ಥಳಿಯ ಜನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತು ತಮ್ಮ ಸ್ವಂತ ಖರ್ಚಿನಲ್ಲಿ ತೆಪ್ಪ ನಿರ್ಮಿಸಿ ಜೀವ ಕೈಯಲ್ಲಿ ಹಿಡಿದು ನಿತ್ಯ ಸಂಚರಿಸುತಿದ್ದಾರೆ. ಸುಮಾರು 3,000 ಜನಸಂಖ್ಯೆ ಇರುವ ಈ ಊರಿಗೆ ಬಸ್ ಸಂಪರ್ಕ ಸಹ ಇಲ್ಲ. ಅನ್ಯ ಮಾರ್ಗದಲ್ಲಿ ಸಂಚರಿಸಲು ಸಹ ತೊಂದರೆಯಾಗಿದೆ.

    ಈ ಹಿಂದೆ ಸೇತುವೆ ಬಿದ್ದಾಗ ಗ್ರಾಮದ ಜನ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್‌ರವರ ಅನುದಾನ ಹಾಗೂ ತಮ್ಮ ಹಣದಲ್ಲಿ ಒಟ್ಟು 20 ಲಕ್ಷ ರೂ. ಖರ್ಚು ಮಾಡಿ ಚಿಕ್ಕ ಸೇತುವೆ ನಿರ್ಮಾಣ ಮಾಡಿಕೊಡಲಾಗಿತ್ತು. ಈ ಬಾರಿಯ ಮಳೆ ಆರ್ಭಟಕ್ಕೆ ಮತ್ತೆ ಆ ಸೇತುವೆಯೂ ಕೊಚ್ಚಿ ಹೋಗಿದೆ.

    ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾದ ಜನ, ವಿದ್ಯಾರ್ಥಿಗಳು, ಕೂಲಿ ಕೆಲಸಗಾರರು, ಕೃಷಿಕರು ಓಡಾಡಲು ಮತ್ತೆ ತಮ್ಮ ಹಣ ವಿನಿಯೋಗಿಸಿ ನದಿಗೆ ಹಗ್ಗ ಕಟ್ಟಿ ಅದಕ್ಕೆ ತೆಪ್ಪವನ್ನು ಜೋಡಿಸಿ ಸಂಚಾರ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಈ ವ್ಯವಸ್ಥೆ ನದಿ ಪ್ರವಾಹ ಹೆಚ್ಚಾಗಿದ್ದಾಗ ದಾಟಲು ಕಷ್ಟವಾಗುತ್ತದೆ.

    ತೆಪ್ಪ ನಿರ್ಮಾಣಕ್ಕೆ ಸಹಕರಿಸಿರುವ ಅನಂತ್ ಗಾಂವ್ಕರ್ ಈ ಬಗ್ಗೆ ಮಾತನಾಡಿ, ಸರ್ಕಾರ ಸೇತುವೆ ನಿರ್ಮಿಸಿಕೊಡುವ ನಿರೀಕ್ಷೆ ಇದೆ. ಆದರೆ ಪ್ರತಿ ದಿನ ಕೂಲಿ ಕಾರ್ಮಿಕರು, ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಈ ತೆಪ್ಪದ ವ್ಯವಸ್ಥೆ ಮಾಡಲಾಗಿದೆ. ನೀರಿನ ಹರಿವು ಹೆಚ್ಚಾಗಿದ್ದರೇ ಹಗ್ಗ ಎಳೆದುಕೊಂಡು ದಡ ಸೇರೋದು ಕಷ್ಟವಾಗುತ್ತದೆ. ಹೀಗಾಗಿ ಸರ್ಕಾರ ಸೇತುವೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

  • ಶಿರೂರು ಕಾರ್ಯಾಚರಣೆಯಲ್ಲಿ ಸಿಕ್ತು ಮನುಷ್ಯನ ಮೂಳೆಗಳು

    ಶಿರೂರು ಕಾರ್ಯಾಚರಣೆಯಲ್ಲಿ ಸಿಕ್ತು ಮನುಷ್ಯನ ಮೂಳೆಗಳು

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲದ (Ankola) ಶಿರೂರಿನಲ್ಲಿ (Shirur) ಇಂದು (ಸೋಮವಾರ) ಗಂಗಾವಳಿ ನದಿಯಲ್ಲಿ (Gangavali River) ನಡೆದ ಶವ ಶೋಧ ಕಾರ್ಯಾಚರಣೆಯಲ್ಲಿ ಮನುಷ್ಯನ ಎದೆ ಹಾಗೂ ಕೈ ಭಾಗದ ಮೂಳೆಗಳು ದೊರೆತಿವೆ.

    ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಆಲದ ಮರ ಸೇರಿದಂತೆ ಹಲವು ವಸ್ತುಗಳನ್ನು ಹೊರತೆಗೆಯಲಾಗಿತ್ತು. ಇಂದು ಶವದ ಪಳೆಯುಳಿಕೆಗಳು ದೊರೆತಿದ್ದು, ಡಿಎನ್‌ಎ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: MUDA Scam Case: ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ ED

    ಮೂರನೇ ಹಂತದ ಶವ ಶೋಧದಲ್ಲಿ ಅರ್ಜುನ್ ಶವ ಹೊರ ತೆಗೆಯಲಾಗಿದೆ. ಶಿರೂರಿನ ಜಗನ್ನಾಥ್, ಲೋಕೇಶ್ ಅವರ ಶವ ಇನ್ನಷ್ಟೇ ಸಿಗಬೇಕಿದೆ. ಅಂಕೋಲ ಪೊಲೀಸರು ಸಿಕ್ಕ ಅಸ್ತಿಪಂಜರದ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ರವಾನೆ ಮಾಡಲಿದ್ದಾರೆ. ಸದ್ಯ ಈ ಮೂಳೆಗಳು ಯಾರದ್ದು ಎಂಬ ಬಗ್ಗೆ ಮಾಹಿತಿ ಡಿಎನ್‌ಎ ಪರೀಕ್ಷೆ ನಂತರ ತಿಳಿದು ಬರಲಿದೆ. ಇದನ್ನೂ ಓದಿ: ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ – ತಂದೆ, ಮೂವರು ಮಕ್ಕಳು ಸಾವು

  • ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ

    ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ

    ಕಾರವಾರ: ಅಂಕೋಲಾ (Ankola) ತಾಲೂಕಿನ ಶಿರೂರಿನಲ್ಲಿ (Shiruru) ಸಂಭವಿಸಿದ್ದ ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ ಪತ್ತೆಯಾಗಿದೆ.

    ಜುಲೈ 16 ರಂದು ಭೂಕುಸಿತ (Land Slide) ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್ (Kozhikode) ಕಡೆಗೆ ಹೋಗುತ್ತಿದ್ದರು. ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಅರ್ಜುನ್ ಶವ ಇದೀಗ ಪತ್ತೆಯಾಗಿದೆ.ಇದನ್ನೂ ಓದಿ: ನೈತಿಕತೆ ಬಗ್ಗೆ ಮಾತನಾಡುವ ವಿಪಕ್ಷಗಳು ಚರ್ಚೆಗೆ ಬರಲಿ – ಪ್ರಿಯಾಂಕ್ ಖರ್ಗೆ ಸವಾಲ್

    ಕಳೆದ ಆರು ದಿನಗಳಿಂದ ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಬುಧವಾರ ನದಿಯಲ್ಲಿ ಕಾರ್ಯಾಚರಣೆ ವೇಳೆ ಅರ್ಜುನ್ ಶವ ಹಾಗೂ ಲಾರಿ ಪತ್ತೆಯಾಗಿದೆ. ಅರ್ಜುನ್ ಚಲಾಯಿಸುತ್ತಿದ್ದ ಕೇರಳ ಮೂಲದ ಲಾರಿ ಸಿಕ್ಕಿದೆ. ಪತ್ತೆಯಾಗಿರುವ ಲಾರಿ ಗುಡ್ಡಕುಸಿತದ ಭೀಕರತೆಯನ್ನು ತೋರಿಸುತ್ತಿದೆ. ಗುಡ್ಡಕುಸಿತದಲ್ಲಿ ಸಿಲುಕಿ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದೆ.

    ಜುಲೈ 16 ರಂದು ಭೂಕುಸಿತ ಸಂಭವಿಸಿದ ಬಳಿಕ ಕೇರಳದ (Kerala) ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಗಂಗಾವಳಿ ನದಿಗೆ (Gangavali River) ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.

    ಈಗಾಗಲೇ ಟ್ರಕ್ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಪತ್ತೆಯಾಗಿತ್ತು. ಇದೀಗ ಅರ್ಜುನ್ ಚಲಾಯಿಸುತ್ತಿದ್ದ ಕೇರಳ ಮೂಲದ ಲಾರಿ ಪತ್ತೆಯಾಗಿದೆ.ಇದನ್ನೂ ಓದಿ: ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!

  • ಶಿರೂರು ಗುಡ್ಡ ಕುಸಿತ | ಕೊನೆಗೂ ನಾಪತ್ತೆಯಾಗಿದ್ದ ಟ್ರಕ್‌  ಪತ್ತೆ

    ಶಿರೂರು ಗುಡ್ಡ ಕುಸಿತ | ಕೊನೆಗೂ ನಾಪತ್ತೆಯಾಗಿದ್ದ ಟ್ರಕ್‌ ಪತ್ತೆ

    ಕಾರವಾರ: ಶಿರೂರು ಭೂ ಕುಸಿತದ (Shirur Landslide) ಬಳಿಕ ಗಂಗಾವಳಿ ನದಿಯಾಳದಲ್ಲಿ (Gangavali River) ಬಿದ್ದ ಟ್ರಕ್‌ ಕೊನೆಗೂ ಪತ್ತೆಯಾಗಿದೆ.

    ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್‌ ಚಲಾಯಿಸುತ್ತಿದ್ದ ಟ್ರಕ್‌ ಗಂಗಾವಳಿ ನದಿಗೆ ಬಿದ್ದಿತ್ತು.

    ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್‌ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್‌ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು. ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗ್ರಾಮ ತೊರೆದು ಬಂಧನ ಭೀತಿಯಲ್ಲಿ ಯುವಕ ಸಾವು

    ಈಗ ಟ್ರಕ್‌ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಟ್ರಕ್‌ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಹೀಗಾಗಿ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್‌  ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.

    ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ  ಕೋಝಿಕ್ಕೋಡ್‌ ಕಡೆಗೆ ಹೋಗುತ್ತಿದ್ದರು. ಇದನ್ನೂ ಓದಿ: ಪೇಜರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಟ್ಟಿಸ್ಟ್‌ – ಘಟನೆ ಹಿಂದೆ ಭಾರತೀಯ ಮೂಲದ ಉದ್ಯಮಿಯ ಕೈವಾಡ ಇರೋದು ನಿಜವೇ?

     

  • ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದೆ ಗ್ಯಾಸ್‌

    ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದೆ ಗ್ಯಾಸ್‌

    ಕಾರವಾರ: ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಆಗುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

    ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಎರಡು ಗ್ಯಾಸ್ ಟ್ಯಾಂಕರ್ ಹಾಗೂ ಒಂದು ಲಾರಿಯನ್ನು ನಿಲ್ಲಿಸಲಾಗಿತ್ತು. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಒಂದು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಗೆ ಹೋಗಿ ಬಿದ್ದಿದೆ. ಇದನ್ನೂ ಓದಿ: ದಕ್ಷಿಣ ಭಾರತದ ಮೊದಲ ರೋಡ್-ಕಮ್-ರೈಲು ಮೇಲ್ಸೇತುವೆ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ

     

    ಗಂಗಾವಳಿ ನದಿ ವೇಗಕ್ಕೆ 7 ಕಿ.ಮೀ ದೂರಕ್ಕೆ ಕೊಚ್ಚಿ ಹೋಗಿರುವ ಟ್ಯಾಂಕರ್ ಈಗ ಸಗಡಗೇರಿ ಎಂಬಲ್ಲಿ ವಾಲಿ ನಿಂತಿದೆ. ಗ್ಯಾಸ್ ಟ್ಯಾಂಕರ್ ಸ್ಥಿತಿಯನ್ನು ಪರಿಶೀಲಿಸಲು ಬೋಟ್ ಮೂಲಕ ಭಾರತ್ ಗ್ಯಾಸ್‌ ತಜ್ಞರು ತೆರಳಿದಾಗ ಸೋರಿಕೆ ಆಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಮಾನ್‌ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್‌ – 13 ಭಾರತೀಯ ಸಿಬ್ಬಂದಿ ನಾಪತ್ತೆ

    ನೀರಿನಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್‌ನಲ್ಲಿರುವ ಅನಿಲವನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸುವುದೇ ಹೇಗೆ ಎನ್ನುವುದೇ ತಜ್ಞರ ಮುಂದೆ ಇರುವ ದೊಡ್ಡ ಸವಾಲು.

     

    ಮಂಗಳೂರಿನಿಂದ ಧಾರವಾಡಕ್ಕೆ ಟ್ಯಾಂಕರ್‌ ತೆರಳುತ್ತಿತ್ತು. ಈ ಟ್ಯಾಂಕರ್‌ನಲ್ಲಿ ಸುಮಾರು 30 ಟನ್‌ ಅನಿಲವಿದೆ. ಸೋರಿಕೆ ಭೀತಿಯಿಂದ ಪರಿಸರದ ನಿವಾಸಿಗಳಿಗೆ ಬೆಂಕಿ ಒಲೆ ಮತ್ತು ವಿದ್ಯುತ್‌ ದೀಪ ಹಚ್ಚದಂತೆ ಜಿಲ್ಲಾಡಳಿತ ಸೂಚಿಸಿದೆ.

  • ಗಂಗಾವಳಿ ನದಿಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ – ಸ್ಥಳೀಯರಲ್ಲಿ ಆತಂಕ

    ಗಂಗಾವಳಿ ನದಿಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ – ಸ್ಥಳೀಯರಲ್ಲಿ ಆತಂಕ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರಿಗೆ ಹೋಗುವ ಮಾರ್ಗದ ಹೊಸಕಂಬಿ ಸೇತುವೆ ಬಳಿ ನದಿಯಲ್ಲಿ ಬೃಹದಾಕಾರದ ಮೊಸಳೆ (Crocodile) ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

    ಸುಮಾರು 7 ಅಡಿ ಉದ್ದವಿರುವ ಬೃಹತ್ ಮೊಸಳೆ ಇದಾಗಿದೆ. ಈ ಹಿಂದೆ ಕದಂಬ ನೌಕಾನೆಲೆಯಲ್ಲಿ ಬೃಹದಾಕಾರದ ಮೊಸಳೆ ಹಿಡಿದು ಗಂಗಾವಳಿ ನದಿಗೆ (Gangavali River) ಬಿಡಲಾಗಿತ್ತು. ಈಗ ಪ್ರತ್ಯಕ್ಷವಾಗಿರುವ ಮೊಸಳೆ ಅದೇ ಇರಬಹುದೆಂದು ಊಹಿಸಲಾಗಿದೆ. ಇದನ್ನೂ ಓದಿ: KRSನಲ್ಲಿ ಕುಸಿದ ನೀರಿನ ಮಟ್ಟ – ಮಳೆ ಬಾರದಿದ್ರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿಗೂ ತತ್ವಾರ

    ಸದ್ಯ ಮೊಸಳೆ ಕಾಣಿಸಿಕೊಂಡ ಹಿನ್ನೆಲೆ ನದಿ ಪಾತ್ರದ ನಿವಾಸಿಗಳಿಗೆ ಎಚ್ಚರದಿಂದಿರಲು ಸೂಚಿಸಲಾಗಿದೆ. ಮೊಸಳೆ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಲಾಂಗ್ ಝಳಪಿಸಿದ ವಿದ್ಯಾರ್ಥಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆ – ಸಿಲಿಕಾನ್ ಸಿಟಿಯಲ್ಲಿ ವಾತಾವರಣ ಕೂಲ್

    ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆ – ಸಿಲಿಕಾನ್ ಸಿಟಿಯಲ್ಲಿ ವಾತಾವರಣ ಕೂಲ್

    ಬೆಂಗಳೂರು/ಅಂಕೋಲಾ: ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದ ವರುಣ ಈಗ ಕೊಂಚ ಶಾಂತವಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮಳೆಯಿಂದಾಗಿ ಅಂಕೋಲದ ಗಂಗಾವಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಾತ್ಕಾಲಿಕ ಸೇತುವೆ ಹಾಗೂ ಗುಳ್ಳಾಪುರ ಮತ್ತು ಡೊಂಗ್ರಿ ಗ್ರಾಮ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ.

    RAIN 3

    ಭಟ್ಕಳದ ಜಾಲಿಯಲ್ಲಿ ಮಣ್ಣು ಕುಸಿದು ಕಾರು ಹಳ್ಳಕ್ಕೆ ಬಿದ್ದಿದೆ. ದಾವಣಗೆರೆಯ ನ್ಯಾಮತಿ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ಕಟಾವು ಮಾಡಿ ಬಣವೆ ಹಾಕಿದ್ದ ಭತ್ತ ಮಳೆ ನೀರಿಗೆ ನೆನದು ಮೊಳಕೆ ಬಂದಿವೆ. ಮೊಳಕೆಯೊಡೆದ ಭತ್ತ ಹಿಡಿದು ವೃದ್ಧೆ ಕಾಳಮ್ಮ ಕಣ್ಣೀರಿಟ್ಟಿದ್ದಾರೆ. ಸಾಲ-ಸೋಲ ಮಾಡಿ ಎಕರೆಗೆ ಸಾವಿರಾರು ರೂಪಾಯಿ ಬಂಡವಾಳ ಹೂಡಿದ್ದೇವೆ. ಈಗ ಫಸಲು ಕೈಗೆ ಬರುವುದರೊಳಗೆ ಮಳೆ ಬಂದು ಭತ್ತ ಮೊಳಕೆಯೊಡೆದಿದೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

    ಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ಬಳಿಯ ಬೆಣ್ಣಿ ಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು 3 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಸುರಿದ ಭಾರೀ ಮಳೆಗೆ ಬೆಣ್ಣಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದಿದ್ದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಯುವಕನ ಆರೋಗ್ಯ ವಿಚಾರಿಸಿದ್ರು. ಇತ್ತ ಬೆಂಗಳೂರಿನಲ್ಲಿ ಇಂದು ತಂಪು ವಾತಾವರಣ ಮುಂದುವರಿದಿದೆ.