Tag: Gangarathi

  • ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

    ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

    – ಕಾವೇರಿ ಆರತಿ ಒಮ್ಮೆ ಶುರು ಮಾಡಿದ್ರೆ ನಿಲ್ಲಿಸುವಂತಿಲ್ಲ

    ಲಕ್ನೋ: ದಸರಾದಲ್ಲಿ (Mysuru Dasara) ಗಂಗಾರತಿಯಂತೆ (Gangarathi) ಕಾವೇರಿ ಆರತಿ ಮಾಡಬೇಕು ಎನ್ನುವುದು ಆಸೆ ಇದೆ. ಸಾಂಕೇತಿಕವಾಗಿ ಮಾಡುವ ಬಗ್ಗೆ ಚಿಂತಿಸಲಾಗುವುದು. ನಮ್ಮಲ್ಲಿ ಸರ್ಕಾರದಿಂದ ಮಾಡಬೇಕು ಅಂದುಕೊಂಡಿದ್ದೇವೆ. ಕಾವೇರಿ ಆರತಿ ಮಾಡುವ ಬಗ್ಗೆ ಚರ್ಚಿಸಿದಾಗ ಇಲ್ಲಿ ಗಂಗಾರತಿ ಆಯೋಜಕರು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧ್ಯಯನ ವರದಿ ನೀಡಲಾಗುವುದು ಎಂದು ವಾರಣಾಸಿಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N Chaluvarayaswamy) ಹೇಳಿಕೆ ನೀಡಿದ್ದಾರೆ.

    ವಾರಣಾಸಿಯಲ್ಲಿ (Varanasi) ಕಾವೇರಿ ಆರತಿ ಅಧ್ಯಯನ ತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿದ್ವಾರ ಮತ್ತು ವಾರಣಾಸಿಯಲ್ಲಿ ಭಿನ್ನ ಅನುಭವವಾಗಿದೆ. ಗಂಗಾ ಮಹಾ ಸಭಾ ಸೊಸೈಟಿ ಅಡಿಯಲ್ಲಿ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಹರಿದ್ವಾರದಲ್ಲಿ ನೂರಕ್ಕೂ ಅಧಿಕ ವರ್ಷದ ಅನುಭವ ಇದೆ. ವಾರಣಾಸಿಯಲ್ಲಿ 35 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಗಂಗಾನದಿಯಂತೆ ಕಾವೇರಿ ಕೂಡಾ ಅತಿ ಮುಖ್ಯವಾದ ನದಿ. ಪ್ರವಾಹ ಬಂದು ಜನರು ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ಅದು ನಿಯಂತ್ರಣಕ್ಕೆ ಬರಲಿ ಎಂದು ಆರತಿ ಶುರು ಮಾಡಿದ ಪ್ರತಿತಿ ಇದೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ, ನದಿ ಸಮಸ್ಯೆ ಇತ್ಯರ್ಥವಾಗಲಿ ಎಂದು ನಾವು ಮಾಡಲಿದ್ದೇವೆ ಎಂದರು. ಇದನ್ನೂ ಓದಿ: ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ರಾಜ್ಯದಲ್ಲಿ ಒಳ್ಳೆ ಮಳೆಯಾದಲಿ, ನದಿ ಸಮಸ್ಯೆ ಇತ್ಯರ್ಥ ವಾಗಲಿ ಅಂತಾ ನಾವು ಮಾಡಲಿದ್ದೇವೆ. ಆರತಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಸಿಎಂ, ಡಿಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ಮಾಡ್ತೇವೆ. ಅಧಿಕಾರಿಗಳನ್ನು ಕಳುಹಿಸಿ ಇನ್ನು ಹೆಚ್ಚಿನ ಮಾಹಿತಿ ಪಡೆಯಲಿದ್ದೇವೆ. ಒಮ್ಮೆ ಶುರು ಮಾಡಿದ ಮೇಲೆ ನಿಲ್ಲಿಸಬಾರದು. ಯಾರೇ ಬಂದರು ಇದನ್ನ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಇನ್ನಷ್ಟು ಪರಿಶೀಲನೆ ಮಾಡಲಾಗುವುದು. ಬಳಿಕ ಸೂಕ್ತ ತಿರ್ಮಾನ ಬೆಂಗಳೂರಿನಲ್ಲಿ (Bengaluru) ತಿರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ನೇತೃತ್ವದ ಸುಮಾರು 25ಕ್ಕೂ ಹೆಚ್ಚು ಶಾಸಕರಿರುವ ನಿಯೋಗ ವಾರಣಾಸಿಗೆ ಭೇಟಿ ನೀಡಿದೆ. ಹರಿದ್ವಾರದಲ್ಲಿ ಗಂಗಾರತಿ ಬಗ್ಗೆ ಅಧ್ಯಯನ ಮಾಡಿದ ತಂಡ ವಾರಣಾಸಿಗೆ ತೆರಳಿ ವ್ಯವಸ್ಥೆಯನ್ನು ಅಧ್ಯಯನ ನಡೆಸಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ; ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ – ಪೇಜಾವರ ಶ್ರೀ

    ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ನಾವು ಇದನ್ನು ರಾಜಕೀಯ ಕಾರಣಕ್ಕೆ ಮಾಡುತ್ತಿಲ್ಲ, ಕಾವೇರಿ ನದಿಗೆ ತನ್ನದೇಯಾದ ಇತಿಹಾಸವಿದೆ ಹೀಗಾಗೀ ಆರತಿ ಮಾಡುವ ಚಿಂತನೆ ಮಾಡಿದೆ. ಕಾಂಗ್ರೇಸ್ (Congress) ಸರ್ವ ಧರ್ಮಗಳನ್ನು ಒಂದೇ ರೀತಿಯಲ್ಲಿ ನೋಡುತ್ತದೆ. ಯಾವುದೇ ಸರ್ಕಾರ ಬಂದರು ಇದನ್ನು ಮುಂದುವರಿಸಬೇಕು ಎಂದರು. ಇದನ್ನೂ ಓದಿ: ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಗಂಗಾನದಿಗೆ ತನ್ನದೇ ಆದ ಇತಿಹಾಸವಿದೆ. ಅದೇ ರೀತಿ ಕಾವೇರಿಗೂ ತನ್ನದೇ ಇತಿಹಾಸ ಇದೆ. ಕಾವೇರಿ ಲಕ್ಷಾಂತರ ರೈತರಿಗೆ ಕೃಷಿಗೆ ಅನುಕೂಲವಾಗಿದೆ. ಕೊಟ್ಯಾಂತರ ಜನರಿಗೆ ಜೀವ ಜಲವಾಗಿದೆ. ಇದಕ್ಕೆ ಕೃತ್ಯಜ್ಞತೆ ಸಲ್ಲಿವುದು ಎನ್ನುವುದು ನನ್ನ ಉದ್ದೇಶ ಹೀಗಾಗೀ ನಾನು ಡಿಸಿಎಂ ಡಿ.ಕೆ ಶಿವಕಿಮಾರ್ (DK Shivakumar) ಜೊತೆಗೆ ಚರ್ಚಿಸಿದೆ ಅವರು ಸಕಾರಾತ್ಮವಾಗಿ ಸ್ಪಂಧಿಸಿದರು. ತಂಡ ಬಂದು ಅಧ್ಯಯನ ಮಾಡಿದ್ದು ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ರಾಜ್ಯಪಾಲರೇ ವಿರೋಧ ಪಕ್ಷದ ನಾಯಕನಂತೆ ನಡೆದುಕೊಳ್ಳುತ್ತಿದ್ದಾರೆ: ದಿನೇಶ್ ಗುಂಡೂರಾವ್

  • ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    -ದಸರಾ ವೇಳೆಗೆ ಕಾವೇರಿ ಆರತಿ ಶುರು ಮಾಡುವ ಪ್ರಯತ್ನ

    ಬೆಂಗಳೂರು: ಉತ್ತರ ಭಾರತದಲ್ಲಿ (North India) ನಡೆಯುವ ಗಂಗಾರತಿ (Gangarathi) ಮಾದರಿಯಲ್ಲಿಯೇ ರಾಜ್ಯದಲ್ಲಿ ಕಾವೇರಿ ಆರತಿ ನಡೆಸಲು ತಯಾರಿ ಆರಂಭವಾಗಿದೆ. ಸಂಬಂಧ ಅಧ್ಯಯನ ನಡೆಸಲು ಸಚಿವ ಚಲುವರಾಯಸ್ವಾಮಿ (Cheluvarayaswamy) ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ತೆರೆಳಿದೆ. ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಸಭೆ ನಡೆಸಿದ್ದು, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿದೆ.

    ಗಂಗೆಯಷ್ಟೇ ಪವಿತ್ರ ನದಿ ಕಾವೇರಿ (Kaveri) ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಇದಕ್ಕಾಗಿ ನಿಯೋಗ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದ್ದು, ಇದರ ಭಾಗವಾಗಿ ಮೊದಲು ಹರಿದ್ವಾರಕ್ಕೆ ಭೇಟಿ ನೀಡಿತು. ಹರ್ ಕೀ ಪೌಡಿ ಘಾಟ್‌ನಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ನಿಯೋಗ ಭಾಗಿಯಾಯಿತು. ಸಚಿವ ಚಲುವರಾಯಸ್ವಾಮಿ ಆದಿಯಾಗಿ ಎಲ್ಲ ಸದಸ್ಯರು ವಿಶೇಷ ಆರತಿ ಮಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ ಆರತಿ ನಡೆಯುವ ರೀತಿ ರಿವಾಜುಗಳನ್ನು ಪರಿಶೀಲಿಸಿದರು.ಇದನ್ನೂ ಓದಿ: ‘ದಳಪತಿ 69’ ಅಸಲಿ ಸ್ಟೋರಿ ರಿವೀಲ್- ಕಮಲ್ ಹಾಸನ್‌ಗೆ ಹೇಳಿದ್ದ ಕಥೆಯಲ್ಲಿ ವಿಜಯ್?

    ಬಳಿಕ ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಆಡಳಿತ ಸಮಿತಿ ಜೊತೆಗೆ ಮಾತುಕತೆ ನಡೆಸಿದ ನಿಯೋಗ ಕರ್ನಾಟಕ ಸರ್ಕಾರದ ಪ್ರಸ್ತಾವನೆ ಬಗ್ಗೆ ತಿಳಿಸಿದರು. ಇದಕ್ಕೆ ಖುಷಿ ವ್ಯಕ್ತಪಡಿಸಿದ ಆಡಳಿತ ಸಮಿತಿ ಕಾರ್ಯದರ್ಶಿ ತನ್ಮಯ ವಶಿಷ್ಠ, ಗಂಗಾರತಿ ರೀತಿಯಲ್ಲಿ ಕಾವೇರಿ ಆರತಿ ಮಾಡುವುದು ಖುಷಿಯ ಸಂಗತಿ ಎಂದರು.

    ಗಂಗಾರತಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಗಂಗಾನದಿಯಂತೆ ಕಾವೇರಿ ನದಿ ಕೂಡಾ ಜೀವ ನದಿಯಾಗಿದೆ. ಅದಕ್ಕಾಗಿ ಇಲ್ಲಿಯೂ ಆರತಿ ಮಾಡಲು ನಿರ್ಧರಿಸಿದ್ದು, ಡಿಸಿಎಂ ಶಿ.ಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಈ ಬಗ್ಗೆ ನಮ್ಮ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಅಧ್ಯಯನಕ್ಕೆ ಬಂದಿದ್ದೇವೆ. ಸಾಧ್ಯವಾದಷ್ಟು ಬೇಗ ಆರತಿ ಶುರು ಮಾಡಬೇಕು ಅಂದುಕೊಂಡಿದ್ದು, ದಸರಾದೊಳಗೆ ನಾವು ಶುರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಒಮ್ಮೆ ಆರತಿಯನ್ನು ಶುರು ಮಾಡಿದರೆ ನಿಲ್ಲಿಸುವ ಮಾತಿಲ್ಲ ಎಂದಿದ್ದಾರೆ.

    ಇನ್ನು ಸಮಿತಿಯೂ ಶನಿವಾರ ವಾರಣಾಸಿಗೆ ತೆರಳಲಿದ್ದು, ಅಲ್ಲೂ ಗಂಗಾರತಿಯನ್ನು ನೋಡಿಕೊಂಡು ಬೆಂಗಳೂರಿಗೆ (Bengaluru) ವಾಪಸ್ ಬರಲಿದ್ದಾರೆ. ಬಳಿಕ ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಿದೆ.ಇದನ್ನೂ ಓದಿ: ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

  • ವಾರಾಣಸಿಯಲ್ಲಿ ಗಂಗಾರತಿ ಮಾಡಿದ ‘ಬನಾರಸ್’ ಹೀರೋ ಝೈದ್ ಖಾನ್

    ವಾರಾಣಸಿಯಲ್ಲಿ ಗಂಗಾರತಿ ಮಾಡಿದ ‘ಬನಾರಸ್’ ಹೀರೋ ಝೈದ್ ಖಾನ್

    ಗಂಗೆಯ ತಟದಲ್ಲಿ ತೆರೆದುಕೊಳ್ಳುವ ಅದ್ಭುತ ಪ್ರೇಮಕಥಾನಕದ ಚಿತ್ರ ಬನಾರಸ್ (Banaras). ಆ ಕಥೆಗೂ ಭಾರತದಲ್ಲಿ ಪೂಜ್ಯನೀಯ ಸ್ಥಾನ ಪಡೆದುಕೊಂಡಿರುವ ತಾಯಿ ಗಂಗೆಗೂ ಅವಿನಾಭಾವ ನಂಟಿದೆ. ಬಹುಶಃ ಬರಿಗಣ್ಣಿಗೆ ಕಾಣದ, ಮನಸಿಗಷ್ಟೇ ತಾಕುವ ಆ ಸೆಳೆತದಿಂದಲೋ ಏನೋ… ನಾಯಕ ಝೈದ್ ಖಾನ್ (Zaid Khan) ಮತ್ತು ನಾಯಕಿ ಸೋನಲ್ ಮೊಂತೆರೊ ಅವರನ್ನು ಮತ್ತೆ ಮಾಯಗಂಗೆ ತನ್ನತ್ತ ಸೆಳೆದುಕೊಂಡಿದ್ದಾಳೆ. ಇದೀಗ ಬೇರೆ ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಝೈದ್ ಖಾನ್ ಸೋನಲ್ ಜೊತೆಗೂಡಿ ವಾರಾಣಸಿಗೆ (Varanasi) ತೆರಳಿದ್ದಾರೆ. ಸ್ವತಃ ಗಂಗಾರತಿ (Gangarathi)ಯಲ್ಲಿ ಪಾಲ್ಗೊಂಡು ಗಂಗಾ ಮಾತೆಗೆ ನಮಿಸಿದ್ದಾರೆ!

    ಈಗೊಂದಷ್ಟು ದಿನಗತಳಿಂದ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಡುವಿರದೆ ಸುತ್ತುತ್ತಿದ್ದಾರೆ. ಬನಾರಸ್ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಈ ಹೊತ್ತಿನಲ್ಲಿ, ಎಲ್ಲವೂ ಸಾರ್ಥಕ್ಯ ಕಾಣುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಗಮನೀಯ ಅಂಶವೆಂದರೆ, ಈ ಹಾದಿಯಲ್ಲಿ ಸಿಗುವ ಧಾರ್ಮಿಕ ಕ್ಷೇತ್ರಗಳಿಗೆಲ್ಲ ಝೈದ್ ಜಾತಿ ಮತಗಳ ಹಂಗಿಲ್ಲದೆ ಭೇಟಿ ನೀಡಿ ಭಕ್ತಿಯಿಂದ ನಮಿಸುತ್ತಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಜೋಡಿಯೀಗ ಪ್ರಚಾರ ಕಾರ್ಯದ ನಿಮಿತ್ತವಾಗಿಯೇ ವಾರಾಣಸಿಗ ಅಂಗಳ ತಲುಪಿಕೊಂಡಿದೆ. ಇಲ್ಲಿಯೇ ಒಂದಷ್ಟು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಈ ಸಂದರ್ಭದಲ್ಲಿ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಗಂಗಾರತಿಯಲ್ಲಿ ಪಾಲ್ಗೊಂಡರು. ವಿಧಿವಿಧಾನಗಳಿಗೆ ತಕ್ಕುದಾಗಿ ಅದರಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮಿಂದೆದ್ದಿದ್ದಾರೆ. ಅದಾದ ನಂತರದಲ್ಲಿ ವಾರಾಣಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿಯೂ ಬನಾರಸ್ ಜೋಡಿ ಭಾಗಿಯಾಗಿದೆ. ಆ ಕಾರ್ಯಕ್ರಮವನ್ನು ಬಾಲಿವುಡ್‌ನ ಹಿರಿಯ ನಟ ಸಂಜಯ್ ಮಿಶ್ರಾ ಉದ್ಘಾಟಿಸಿದ್ದಾರೆ. ಬಳಿಕ ಬಲು ಪ್ರೀತಿಯಿಂದ ಅವರೇ ಖುದ್ದಾಗಿ ಬನಾರಸ್ ಜೋಡಿಯನ್ನು ಸನ್ಮಾನಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ ಒಳ್ಳೆ ಮಾತುಗಳನ್ನಾಡಿ, ಗೆಲುವಾಗಲೆಂದು ಹಾರೈಸಿದ್ದಾರೆ.

    ಇದು ನಿಜಕ್ಕೂ ನಾಯಕ ನಟ ಝೈದ್ ಖಾನ್ ಪಾಲಿಗೆ ಸ್ಮರಣೀಯ ಅನುಭವ. ಯಾಕೆಂದರೆ, ಪ್ರಚಾರದ ಹಾದಿಯಲ್ಲಿ ಎಲ್ಲ ಒಳಿತುಗಳೂ ತಾನೇತಾನಾಗಿ ಅವರನ್ನು ಅರಸಿಕೊಂಡು ಬರುತ್ತಿವೆ. ಯಾವ ವಿರೋಧಾಭಾಸ, ಟೀಕೆ ಟಿಪ್ಪಣಿಗಳಿಗೂ ತಲೆ ಕೆಡಿಸಿಕೊಳ್ಳದೆ, ನಾನಿರೋದೇ ಹೀಗೆಂಬಂಥಾ ಮನಃಸ್ಥಿತಿಯಿಂದ ಮುಂದುವರೆಯುತ್ತಿರುವ ಝೈದ್ ಎಲ್ಲರಿಗೂ ಹಿಡಿಸಿದ್ದಾರೆ. ಜಾತಿ ಮತಗಳಾಚೆಗೆ ಈ ಹುಡುಗ ನಮಮ್ಮವನೆಂಬಂಥಾ ಬೆಚ್ಚಗಿನ ಭಾವವನ್ನು ಎಲ್ಲರೊಳಗೂ ಬೇರೂರಿಸುತ್ತಿದ್ದಾರೆ. ಇದುವೇ ಅಮೋಘ ಗೆಲುವಾಗಿ ಅವರ ಕೈಹಿಡಿಯೋದರಲ್ಲಿ ಯಾವ ಸಂದೇಹವೂ ಇಲ್ಲ. ಮತ್ತೆ ಚಿತ್ರೀಕರಣದ ಬಳಿಕ ಗಂಗೆಯ ಸಾಂಗತ್ಯ ಸಿಕ್ಕ ಖುಷಿಯಲ್ಲಿಯೇ ಝೈದ್, ಬನಾರಸ್ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸಾಗಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಂಭಮೇಳದಲ್ಲಿ ಮನಸೂರೆಗೊಂಡ ಪುನೀತ್ ಲೇಸರ್ ಶೋ – ಗಂಗಾರತಿ ಕಂಡು ಪುಳಕಿತರಾದ ಭಕ್ತರು

    ಕುಂಭಮೇಳದಲ್ಲಿ ಮನಸೂರೆಗೊಂಡ ಪುನೀತ್ ಲೇಸರ್ ಶೋ – ಗಂಗಾರತಿ ಕಂಡು ಪುಳಕಿತರಾದ ಭಕ್ತರು

    ಮಂಡ್ಯ: ಪವಾಡ ಪುರಷ ಮಲೆ ಮಹದೇಶ್ವರರ ಮೂಲ ಪವಾಡ ಸ್ಥಳವದಾ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭ ಮೇಳ (Maha Kumbh Mela) ಮೇಳೈಸುತ್ತಿದೆ. ಇಂದು ರಾತ್ರಿ ನಡೆದ ಗಂಗಾ ಆರತಿ (Gangarathi) ಹಾಗೂ ಲೇಸರ್ ಲೈಟ್ ಶೋ ಭಕ್ತರನ್ನು ಮನಸೂರೆಗೊಳಿಸಿದೆ.

    ಕಳೆದ ಎರಡು ದಿನಗಳಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ. ಅದ್ರಲ್ಲೂ ಇಂದು ತ್ರಿವೇಣಿ ಸಂಗಮದ ದಡದಲ್ಲಿ ನಡೆದ ಕಾಶಿ ಮಾದರಿಯ ಗಂಗಾರತಿ ಭಕ್ತರ ಮನಸ್ಸಿನಲ್ಲಿ ಭಕ್ತಿ ಸುದೆಯನ್ನು ಹರಿಸಿತು. ವಾರಾಣಸಿ ಮೂಲದ ರಣದೀರ್ ಪಾಂಡೆ ನೇತೃತ್ವದ 7 ಮಂದಿಯ ತಂಡ ನಾಗಾರತಿ ಹಾಗೂ ಗಂಗಾರತಿಯನ್ನು ನೆರವೇರಿಸಿ ಕೊಟ್ಟರು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಮೇಳೈಸಿದ ಮಹಾ ಕುಂಭಮೇಳ – ದೇಗುಲ ಲೋಕಾರ್ಪಣೆಗೊಳಿಸಿದ ಡಾ.ವೀರೇಂದ್ರ ಹೆಗ್ಗಡೆ

    ಇದಕ್ಕೂ ಮುನ್ನ ನಡೆದ ನೀರಿನ ಲೇಸರ್ ಶೋ ಅಂತು ನೋಡುಗರನ್ನು ಇಮ್ಮಡಿಗೊಳಿತು. ಒಂದು ಬಾರಿ ಧಾರ್ಮಿಕ ಹಿನ್ನೆಲೆ, ಇನ್ನೊಂದು ದೈವಿಕ ಅಂಶದ ವರ್ಣನೆ, ಮಗದೊಮ್ಮೆ ನಮ್ಮ ದೇಶದ ಇತಿಹಾಸವನ್ನು ಸಂಗೀತದ ಜೊತೆ ಜೊತೆಗೆ ನೀರಿನ ಮೇಲೆ ಲೇಸರ್ ಬಿಟ್ಟು ಜನರನ್ನು ಆಕರ್ಷಿಸಲಾಯಿತು. ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅವರ ಲೇಸರ್ ಶೋ ಜನರಲ್ಲಿ ಅಪ್ಪುವಿನ ನೆನಪನ್ನು ಮರುಕಳಿಸುವಂತೆ ಮಾಡಿತು. ಇದನ್ನೂ ಓದಿ: ರಾಜಧಾನಿಯಲ್ಲಿ ಧಾರಾಕಾರ ಮಳೆ – ಕೆರೆಯಂತಾದ ರಸ್ತೆಯಲ್ಲಿ ವಾಹನ ಸವಾರರ ಪರದಾಟ

    ಶನಿವಾರ ಕುಂಭ ಮೇಳದ ಮೂರನೇ ದಿನವಾಗಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಜರುಗಲಿವೆ. 11 ಗಂಟೆಗೆ ಧಾರ್ಮಿಕ ಸಮ್ಮೇಳನ ಜರುಗಲಿದ್ದು, ಇದ್ರಲ್ಲಿ ರಾಜ್ಯವಲ್ಲದೇ ದೇಶದ ನಾನಾ ಮೂಲೆಳಿಂದ ಸ್ವಾಮೀಜಿಗಳು ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಧರ್ಮದ ವಿಚಾರಗಳನ್ನು ಜನರಿಗೆ ಸಾರಲಿದ್ದಾರೆ. ಸಂಜೆ 4 ಗಂಟೆಗೆ ಮಲೆ ಮಹದೇಶ್ವರರ ಚರಿತ್ರೆ ಕುರಿತು ನಾಟಕ ನಡೆಯಲಿದ್ದು, ಸಂಜೆ 7 ಗಂಟೆಗೆ ನಾಳೆಯೂ ಸಹ ವಿಭಿನ್ನವಾದ ಲೇಸರ್ ಶೋ ಹಾಗೂ ಗಂಗಾರತಿಯನ್ನು ಆಯೋಜನೆ ಮಾಡಲಾಗಿದೆ. ಒಟ್ಟಾರೆ ಪವಾಡ ಪುರುಷರು ನಡೆಸಿದ ಪವಾಡ ಸ್ಥಳದಲ್ಲಿ ತ್ರೀವೇಣಿ ಸಂಗಮದಲ್ಲಿ ಕುಂಭ ಮೇಳೆ ಸಂಭ್ರಮ ಮನೆ ಮಾಡುತ್ತಿದೆ. ಈ ಸಂಭ್ರಮದಲ್ಲಿ ಲಕ್ಷಾಂತರ ಜನರ ಪಾಲ್ಗೊಂಡು ಮಾದಪ್ಪನಿಗೆ ಉಘೇ ಉಘೇ ಎನ್ನುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಲಕ್ನೋ: ಜೀವನದಲ್ಲಿ ಒಮ್ಮೆ ಕಾಶಿ ಯಾತ್ರೆ ಮಾಡಬೇಕು ಗಂಗಾರತಿ ನೋಡಬೇಕು ಅನ್ನೋದು ಬಹುತೇಕ ಹಿಂದೂಗಳ ಆಶಯ. ಆದರೆ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಇದು ಕಷ್ಟವಾಗುತ್ತಿತ್ತು. ಆದರೆ ಇನ್ನು ಆ ತೊಂದರೆ ಇಲ್ಲ, ವಾರಾಣಸಿಯ ಪ್ರಮುಖ ಮೂರು ಗಂಗಾನದಿಯ ಘಾಟ್ ಗಳಿಗೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿನ ಪುಣ್ಯಕ್ಷೇತ್ರಗಳ ಪೈಕಿ ಮೊದಲ ಬಾರಿ ಇಲ್ಲಿ ವೀಲ್ ಚೇರ್ ರ‍್ಯಾಂಪ್  ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

    ಹೊಸ ವರ್ಷದ ಗಿಫ್ಟ್ ಎನ್ನುವಂತೆ ಗಂಗಾ ನದಿ ತಟದಲ್ಲಿರುವ ಮಣಿಕರ್ಣಿಕ, ಅಸ್ಸಿ ಮತ್ತು ದಶಾಶ್ವಮೇಧ ಘಾಟ್ ನಲ್ಲಿ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಮೂರು ಕೋಟಿ ಬಜೆಟ್ ನಲ್ಲಿ ಅರ್ಧವನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ. ವಾರಾಣಸಿಯ ಘಾಟ್ ಗಳ ಪೈಕಿ ಈ ಮೂರು ಘಾಟ್ ಗಳು ಹೆಚ್ಚು ಜನಸಂದಣಿಯಿಂದ ಕೂಡಿರುತ್ತೆ ಅಲ್ಲದೇ ಇಲ್ಲಿ ನಡೆಯುವ ಗಂಗಾರಾತಿ ನೋಡಲು ಜನರು ಬಯಸುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಹೆಚ್ಚು ಮೆಟ್ಟಿಲುಗಳು ಇರುವ ಕಾರಣ ಅಂಗವಿಕಲರಿಗೆ ವಿಶೇಷ ಚೇತನರಿಗೆ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಈ ಮೂರು ಘಾಟ್ ಗಳಲ್ಲಿ ಗಂಗಾರತಿ ನಡೆಯುವ ಸ್ಥಳಕ್ಕೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಚಿಂತಿಸಿದೆ.

    ಸ್ಥಳೀಯ ಬಿಜೆಪಿ ನಾಯಕರ ಪ್ರಕಾರ ವಿಶೇಷ ಚೇತನರು ಗಂಗಾರತಿ ನೋಡಲು ಕಷ್ಟ ಪಡುವುದನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸಿದ್ದರಂತೆ. ಬಳಿಕ ವೀಲ್ ಚೇರ್ ರ‍್ಯಾಂಪ್ ನಿರ್ಮಿಸುವ ಈ ಕಾರ್ಯಕ್ಕೆ ಹೆಚ್ಚು ಆಸಕ್ತಿ ವಹಿಸಿದ್ದರು ಎನ್ನಲಾಗಿದ್ದು ಕೇಂದ್ರ ನೆರವಿನಲ್ಲಿ ಈ ಮೂರು ಘಾಟ್ ಗಳನ್ನು ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆಯಂತೆ. ಅಲ್ಲದೇ ಕುಡಿಯುವ ನೀರಿನ ಅರವಟಿಕೆ, ಶೌಚಾಲಯಗಳಲ್ಲಿ ಬ್ರೇನ್ ಲಿಪಿ ಅಳವಡಿಸಲು ಸೂಚಿಸಿಲಾಗಿದೆ.

    ವಾರಾಣಸಿಯಲ್ಲಿ ಈ ಮೂರು ಘಾಟ್‍ಗಳು ಅತಿಹೆಚ್ಚು ಜನ ಸಂದಣಿಯಿಂದ ಕೂಡಿದ್ದು, ಇಲ್ಲಿ ಅಂಗವಿಕಲರು ಮತ್ತು ವಿಶೇಷ ಚೇತನರು ಗಂಗಾರತಿ ನೋಡುವುದು ಕಠಿಣ, ಹೆಚ್ಚು ಮೆಟ್ಟಿಲುಗಳಿರುವುದರಿಂದ ವೀಕಲಚೇತನರಿಗೆ ಕಷ್ಟವಾಗುತ್ತಿದೆ ಎಂದು ವರದಿ ನೀಡಲಾಗಿತ್ತು. ಈ ವರದಿ ಆಧರಿಸಿ ಕೇಂದ್ರ ನೆರವಿನಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲು ಮುಂದಾಗಿದೆ.