Tag: gangaraju

  • ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರ್ಟ್ ಸೂಚನೆ

    ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರ್ಟ್ ಸೂಚನೆ

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

    ಮೈಸೂರಿನ ವಿಜಯನಗರದಲ್ಲಿರುವ ಸಿದ್ದರಾಮಯ್ಯ ನಿವಾಸದ ಜಾಗದ ಕುರಿತಾಗಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ನಗರದ ಗಂಗರಾಜು ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೈಸೂರು ನ್ಯಾಯಾಲಯದ ಮೊರೆ ಹೋಗಿದ್ದರು.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಜಾಗವನ್ನು ಸಿದ್ದರಾಮಯ್ಯ ಪ್ರಭಾವ ಬಳಸಿ ಡಿನೋಟಿಫೈ ಮಾಡಿಸಿದ್ದಾರೆ. ಅದೇ ಜಾಗವನ್ನು ಸಿದ್ದರಾಮಯ್ಯ ಖರೀದಿ ಮಾಡಿ ಮನೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದಾರೆ ಎಂದು ಗಂಗಾರಾಜು ಆರೋಪ ಮಾಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಂಗರಾಜು, 30 ಗುಂಟೆ ಜಾಗ ಅದರ ಸುತ್ತಾ 400-500 ಎಕರೆ ಜಾಗವನ್ನು ಭೂಸ್ವಾಧಿನ ಮಾಡಿಕೊಳ್ಳುತ್ತಾರೆ. ಅದರಲ್ಲಿ ಲೇಔಟ್ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಈ 30 ಗುಂಟೆ ಜಾಗವನ್ನು ಭೂಸ್ವಾಧಿನ ಮಾಡಿಕೊಳ್ಳದೆ ಪರೋಕ್ಷವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಸಿದ್ದರಾಮಯ್ಯ ಜೊತೆ ಮುಡಾದ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡ ಡಿ ಧೃವಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಸಿ. ಬಸವೇಗೌಡ ಕೂಡ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಗಂಗರಾಜು ಆರೋಪಿಸಿದ್ದಾರೆ.

    https://www.youtube.com/watch?v=0kHCmSjkufA

  • ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

    ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

    ಬೆಂಗಳೂರು: ಪಾಶ್ಚಾತ್ಯ, ಅಬ್ಬರದ ಸಂಗೀತದ ಸಾಧನಗಳ ಮಧ್ಯೆ ನಶಿಸಿ ಹೋಗಿರುವ ಗ್ರಾಮೀಣ ರಂಗಕಲೆಯ ಸಾಧನಗಳಲ್ಲಿ ಹಾರ್ಮೋನಿಯಂ ಸಹ ಒಂದು. ಆದ್ರೆ ನೆಲಮಂಗಲದ ಇವತ್ತಿನ ಪಬ್ಲಿಕ್ ಹೀರೋ ಗಂಗರಾಜು ದೃಷ್ಟಿ ಸಮಸ್ಯೆ ಹೊಂದಿದ್ರೂ ಹಾರ್ಮೋನಿಯಂ ಮೂಲಕ ಗಮನ ಸೆಳೆದಿದ್ದಾರೆ.

    ರಾಗಬದ್ಧವಾಗಿ ಹಾರ್ಮೋನಿಯಂ ನುಡಿಸೋ ಗಂಗರಾಜು ಇವತ್ತಿನ ಪಬ್ಲಿಕ್ ಹೀರೋ. ಬೆಂಗಳೂರು ಹೊರವಲಯದ ನೆಲಮಂಗಲದ ಚಿಕ್ಕಮಾರನಹಳ್ಳಿ ನಿವಾಸಿ. ಚಿಕ್ಕ ವಯಸ್ಸಿನಲ್ಲೇ ಹಾರ್ಮೋನಿಯಂ ಕಲಿತ ಇವರು ಆಸಕ್ತರಿಗೆ 15 ವರ್ಷಗಳಿಂದ ಉಚಿತವಾಗಿ ಹಾರ್ಮೋನಿಯಂ ಕಲಿಸಿಕೊಡ್ತಿದ್ದಾರೆ. ಅಲ್ಲದೆ ಹರಿಕಥೆ ಅಥವಾ ಸಾವಿನ ಮನೆಯ ಭಜನೆಗಳಲ್ಲಿ ಉಚಿತವಾಗಿ ಹಾರ್ಮೋನಿಯಂ ನುಡಿಸ್ತಾರೆ.

    ಹಲವು ಕಡೆ ಪೌರಾಣಿಕ ನಾಟಕ ಪ್ರದರ್ಶನ ಮಾಡಿಸುವುದರ ಜೊತೆಗೆ ಮಹಿಳೆಯರಿಗಾಗಿ ಹೊಸ ನಾಟಕ ತಂಡವನ್ನೇ ಕಟ್ಟಿದ್ದು, ಎರಡು ನಾಟಕಗಳನ್ನ ಆಡಿಸಿದ್ದಾರೆ. ವ್ಯವಸಾಯವನ್ನೂ ಮಾಡಿ ಜೀವನ ಸಾಗಿಸ್ತಿರೋ ಗಂಗರಾಜು ಸ್ವಚ್ಛ ಭಾರತ ಅಭಿಯಾನದ ಅಭಿಮಾನಿಯಾಗಿದ್ದಾರೆ.

    https://www.youtube.com/watch?v=cLaa02G9ygA