Tag: Gangamma

  • ಅಲ್ಲು ಅರ್ಜುನ್ ಉಗ್ರರೂಪ ‘ಗಂಗಮ್ಮ’ ಅವತಾರಕ್ಕೆ ‘ಕಾಂತರ’ ಪ್ರೇರಣೆ ಎಂದ ಫ್ಯಾನ್ಸ್

    ಅಲ್ಲು ಅರ್ಜುನ್ ಉಗ್ರರೂಪ ‘ಗಂಗಮ್ಮ’ ಅವತಾರಕ್ಕೆ ‘ಕಾಂತರ’ ಪ್ರೇರಣೆ ಎಂದ ಫ್ಯಾನ್ಸ್

    ನಿನ್ನೆಯಷ್ಟೇ ಅಲ್ಲು ಅರ್ಜುನ್‌ (Allu Arjun) ನಟನೆಯ ‘ಪುಷ್ಪ 2’ (Pushpa 2) ಚಿತ್ರದ ಗ್ಲಿಮ್ಸ್  ರಿಲೀಸ್ ಆಗಿದೆ. ಜೊತೆಗೆ ಅಲ್ಲು ಹುಟ್ಟು ಹಬ್ಬಕ್ಕಾಗಿ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ ನಿರ್ದೇಶಕರು. ಇದರಲ್ಲಿ ಅಲ್ಲು ಅರ್ಜುನ್ ಉಗ್ರರೂಪ ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೂಪಕ್ಕೆ ಅವರು ಗಂಗಮ್ಮ (Gangamma) ಎಂದು ಹೆಸರಿಟ್ಟಿದ್ದಾರೆ. ಕಾಡು ಜನರ ದೇವತೆಯಂತೆ ಕರೆಯುವ ಗಂಗಮ್ಮ ರೂಪಕ್ಕೆ ಕನ್ನಡದ ಕಾಂತಾರ (Kantara) ಪ್ರೇರಣೆ ಎಂದು ನೆಟ್ಟಿಗರು ವಿಶ್ಲೇಷಣೆ ಮಾಡುತ್ತಿದ್ದಾರೆ.

    ಈ ಹಿಂದೆ ಪುಷ್ಪ ಸಿನಿಮಾ ಬಂದಾಗ ಕನ್ನಡದ ಕೆಜಿಎಫ್ ಚಿತ್ರಕ್ಕೆ ಹೋಲಿಕೆ ಮಾಡಲಾಗಿತ್ತು. ಕೆಜಿಎಫ್ ಪ್ರೇರಣೆಯಿಂದಲೇ ಪುಷ್ಪ ತಯಾರಾಗಿದೆ ಎಂದು ಕ್ಯಾಮೆಂಟ್ ಮಾಡಿದ್ದರು. ಪುಷ್ಪ 2 ಗಂಗಮ್ಮ ಅವತಾರವನ್ನು ಕಾಂತಾರ ಚಿತ್ರಕ್ಕೆ ಹೋಲಿಕೆ ಮಾಡಲಾಗಿದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲದೇ ಇದ್ದರೂ, ಅಭಿಮಾನಿಗಳು ಮಾತ್ರ ಎರಡೂ ಚಿತ್ರಕ್ಕೂ ಕಂಪೇರ್ ಮಾಡಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಗದ್ದಲದ ನಡುವೆ ಸೈಲೆಂಟ್ ಆಗಿ ಶೂಟಿಂಗ್ ನಲ್ಲಿ ಭಾಗಿಯಾದ ಕಿಚ್ಚ ಸುದೀಪ್

    `ಪುಷ್ಪ’ ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನಿರೀಕ್ಷೆಯ ಮಟ್ಟಕ್ಕೆ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕ ಸುಕುಮಾರ್ (Sukumar) ಅವರು ಪ್ರಯತ್ನಿಸುತ್ತಿದ್ದಾರೆ. ವಿಲನ್ ಸ್ಟ್ರಾಂಗ್ ಆಗಿ ಇದ್ದಷ್ಟು ಹೀರೋ ಗತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿ ಖಡಕ್ ವಿಲನ್‌ಗಳನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

    ಇರಾನ್ ಮೂಲದ ನಟ ಸಜ್ಜಾದ್ ಡೆಲಾಫ್ರೂಜ್, (Sajjad Delafrooz ) ಈ ಹಿಂದೆ ಸಲ್ಮಾನ್ ಖಾನ್ (Salman Khan) ನಟನೆಯ `ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಅವರು ಭಯಾನಕ ವಿಲನ್ ಪಾತ್ರ ಮಾಡಿ ಸೈ ಎನಿಸಿಕೊಂಡರು. ಭಯಾನಕ ಪಾತ್ರಗಳ ಮೂಲಕ ಬೆಚ್ಚಿ ಬೀಳಿಸಿರುವ ನಟನಿಗೆ ಈಗ `ಪುಷ್ಪ 2′ ಚಿತ್ರದಲ್ಲಿ ನಟಿಸುವ ಚಾನ್ಸ್ ಅವರಿಗೆ ಸಿಕ್ಕಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದಷ್ಟು ಬೇಗ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

    ʻಪುಷ್ಪʼ ಪಾರ್ಟ್ 2ಗಾಗಿ ಸಿನಿಮಾದ ಕಥೆಯ ಮೇಲೆ ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಹೋಮ್ ವರ್ಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಥಾನಾಯಕ ಪುಷ್ಪರಾಜ್‌ನ ಸಾಮ್ರಾಜ್ಯ ದೊಡ್ಡದಾಗಲಿದೆ. ರಕ್ತ ಚಂದನ ಸಾಗಾಣಿಕೆಯ ದಂಧೆ ವಿದೇಶಕ್ಕೂ ಹಬ್ಬಲಿದೆ. ಹಾಗಾಗಿ ವಿವಿಧ ದೇಶಗಳಿಗೆ ಪುಷ್ಪರಾಜ್ ತೆರಳುತ್ತಾನೆ. ಅಲ್ಲಿ ಅನೇಕ ವಿಲನ್‌ಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಈ ರೀತಿಯಾಗಿ ಕಥೆ ಸಾಗಲಿದೆಯಂತೆ.

  • ಎ.ಆರ್ ರೆಹಮಾನ್‍ರನ್ನು ಭೇಟಿ ಮಾಡಿದ ಕೊಪ್ಪಳದ ಗಂಗಮ್ಮ

    ಎ.ಆರ್ ರೆಹಮಾನ್‍ರನ್ನು ಭೇಟಿ ಮಾಡಿದ ಕೊಪ್ಪಳದ ಗಂಗಮ್ಮ

    ಬೆಂಗಳೂರು: ಸಂಗೀತ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಕೊಪ್ಪಳದ ಗಂಗಮ್ಮ ಭೇಟಿ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದ ಗಂಗಮ್ಮನ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದಾರೆ. 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದರು.

    ಇದೇ ತಿಂಗಳು 22ಕ್ಕೆ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಾಗಿ ಎ.ಆರ್ ರೆಹಮಾನ್ ಬೆಂಗಳೂರಿಗೆ ಆಗಮಿಸಿದ್ದರು. ಇದೇ ವೇಳೆ ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ ಶುಭ ಹಾರೈಸಿದ್ದಾರೆ.

    ಗಂಗಮ್ಮ 20 ವರ್ಷದಿಂದಲೂ ಹಾಡುತ್ತಿದ್ದು, ಫೇಸ್‍ಬುಕ್ ವಿಡಿಯೋದಿಂದಾಗಿ ಎಲ್ಲೆಡೆ ಫೇಮಸ್ ಆಗಿದ್ದರು. ಇವರು ಹಾಡುತ್ತಿದ್ದ ವಿಡಿಯೋವನ್ನು ಸ್ಟುಡಿಯೋ ಮಾಲೀಕ ಶಿವಪ್ರಸಾದ್ ಲೈವ್ ಮಾಡಿದ್ದರು. ಆ ವಿಡಿಯೋ 24 ಗಂಟೆಯಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಹಾಡು ಕೇಳಿದ್ದರು.

    ನಾನು ಚಿಕ್ಕವಯಸ್ಸಿನಿಂದಲೂ ಹಾಡನ್ನು ಹಾಡಲು ಶುರು ಮಾಡಿದೆ. ಆದರೆ ಆಗ ಆರ್ಕೆಸ್ಟ್ರಾ ಇರಲಿಲ್ಲ. ನಂತರ ಕೊಪ್ಪಳದಲ್ಲಿ ಆರ್ಕೆಸ್ಟ್ರಾ ಶುರುವಾದಾಗ 20 ವರ್ಷದಿಂದ ಹಾಡಲು ಶುರು ಮಾಡಿದ್ದೇನೆ. ಈಗ ನಾನು ಗುರುತಿಸಿಕೊಳ್ಳುತ್ತಿದ್ದೇನೆ. ವಿಡಿಯೋ ವೈರಲ್ ಆಗಿದ್ದಕ್ಕೆ ನನ್ನ ಕುಟುಂಬದವರು ಸಂತೋಷವಾಗಿದ್ದಾರೆ ಎಂದು ಗಂಗಮ್ಮ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರದೇಸಿ ಕೇರಾಫ್ ಲಂಡನ್ – ಇಲ್ಲಿರೋದು ಡಿಫರೆಂಟ್ ವಿಜಯ್ ರಾಘವೇಂದ್ರ!

    ಪರದೇಸಿ ಕೇರಾಫ್ ಲಂಡನ್ – ಇಲ್ಲಿರೋದು ಡಿಫರೆಂಟ್ ವಿಜಯ್ ರಾಘವೇಂದ್ರ!

    ರಾಜಶೇಖರ್ ನಿರ್ದೇಶನದ ಪರದೇಸಿ ಕೇರಾಫ್ ಲಂಡನ್ ಈ ತಿಂಗಳು ತೆರೆ ಕಾಣಲಿದೆ. ಈಗಾಗಲೇ ಹಾಡುಗಳ ಮೂಲಕವೂ ಭಾರೀ ಕ್ರೇಜ್ ಸೃಷ್ಟಿಸಿರೋ ಈ ಚಿತ್ರ ವಿಜಯ್ ರಾಘವೇಂದ್ರ ಅವರ ವೃತ್ತಿ ಬದುಕಲ್ಲಿ ಹೊಸ ತಿರುವು ನೀಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ರಾಜಶೇಖರ್ ಅಂಥಾದ್ದೊಂದು ರಸವತ್ತಾದ ಕಥನವನ್ನಿಲ್ಲಿ ದೃಶ್ಯ ರೂಪಕವಾಗಿಸಿದ್ದಾರೆ.

    ವಿಜಯ್ ರಾಘವೇಂದ್ರರನ್ನು ಹೊಸ ಗೆಟಪ್ಪಿನಲ್ಲಿ ಕಾಣಿಸಬೇಕೆಂಬ ಹಂಬಲದೊಂದಿಗೆ ಈ ಕಥೆಯನ್ನು ಸಿದ್ಧಪಡಿಸಿದ್ದವರು ರಾಜಶೇಖರ್. ಚಿತ್ರೀಕರಣವನ್ನೆಲ್ಲ ಅಚ್ಚುಕಟ್ಟಾಗಿಯೇ ಮಾಡಿ ಮುಗಿಸಿದ್ದ ಅವರು ಪ್ರತಿಯೊಂದು ವಿಚಾರದಲ್ಲಿಯೂ ಅದೇ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸಿದ್ದರು. ಹಾಡುಗಳ ವಿಚಾರದಲ್ಲಿ ಅವರು ವಹಿಸಿದ್ದ ಮುತುವರ್ಜಿಯೇ ಈ ಮಾತಿಗೆ ಸಾಕ್ಷಿಯಾಗುತ್ತೆ.

    ಸಾಮಾನ್ಯವಾಗಿ ಇತ್ತೀಚಿನ ಚಿತ್ರಗಳ ಹಾಡುಗಳಿಗೆ ಒಂದೋ ಪರಭಾಷಾ ಗಾಯಕ, ಗಾಯಕಿಯರಾಗಬೇಕು. ಇಲ್ಲದಿದ್ದರೆ ಕನ್ನಡದ ಖ್ಯಾತನಾಮರೇ ಹಾಡಬೇಕೆಂಬ ಟ್ರೆಂಡಿದೆ. ಕೆಲ ಮಂದಿ ಅದರ ಆಚೀಚೆಗೆ ದೃಷ್ಟಿ ಹಾಯಿಸಿದ್ದಿದೆ. ಆದರೆ ರಾಜಶೇಖರ್ ಅಪ್ಪಟ ಈ ನೆಲದ ಅಪರೂಪದ ಮಹಿಳೆಯೋರ್ವರಿಂದ ಒಂದು ಹಾಡನ್ನು ಹಾಡಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಎಂಬ ಹಾಡಿನ ಶೋನ ಮೂಲಕ ಪ್ರಸಿದ್ಧಿ ಪಡೆದವರು ಗಂಗಮ್ಮ. ಹಳ್ಳಿಗಾಡಿನಿಂದ ಬಂದಿರೋ ಗಂಗಮ್ಮ ಯಾವ ಥರದ ಹಾಡನ್ನೇ ಆದರೂ ಶ್ರುತಿಬದ್ಧವಾಗಿ, ಎಂಥವರೂ ತಲೆದೂಗುವಂತೆ ಹಾಡುವ ಕಲೆಗಾರಿಕೆಯ ಮೂಲಕವೇ ಗಾನಕೋಗಿಲೆ ಗಂಗಮ್ಮ ಎಂದೇ ಪ್ರಸಿದ್ಧರಾಗಿದ್ದಾರೆ. ರಾಜಶೇಖರ್ ತಮ್ಮ ಚಿತ್ರಕ್ಕಾಗಿ ಗಂಗಮ್ಮನವರಿಂದಲೇ ಒಂದು ಚೆಂದದ ಹಾಡನ್ನು ಹಾಡಿಸಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಈ ಹಾಡೂ ಕೂಡಾ ಜನಮನ ಗೆದ್ದಿದೆ. ಈ ಮೂಲಕವೇ ಈ ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆ ಮಾತುಗಳು ಹರಡಿಕೊಂಡಿವೆ. ಅದೆಲ್ಲವೂ ಗೆಲುವಾಗುವ ಸ್ಪಷ್ಟ ಸೂಚನೆಗಳೂ ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಳ ಬಂಗಾರ ನೀನು ಎಂದು ಸರಿಗಮಪಗೆ ಎಂಟ್ರಿ ಕೊಟ್ರು ಗಂಗಮ್ಮ

    ಬಾಳ ಬಂಗಾರ ನೀನು ಎಂದು ಸರಿಗಮಪಗೆ ಎಂಟ್ರಿ ಕೊಟ್ರು ಗಂಗಮ್ಮ

    ಬೆಂಗಳೂರು: 50 ನೇ ವಯಸ್ಸಲ್ಲೂ 15ರ ಹದಿಹರೆಯದ ಹುಡುಗಿಯಂತೆ ಹಾಡಿ ನೋಡುಗರನ್ನ ಮಂತ್ರ ಮುಗ್ದರನ್ನಾಗಿಸಿದ್ದಾರೆ. ಖಾಸಗಿ ಚಾನಲ್ ಅಲ್ಲಿ ಬರುವ ಸರಿಗಮಪ ಅಂಗಳದಲ್ಲಿ ಗಂಗಮ್ಮ ತಮ್ಮ ಹಂಗಾಮವನ್ನು ತೋರಿಸಿದ್ದಾರೆ.

    ವಯಸ್ಸಾಗ್ತಿದೆ ಅನ್ನೋದನ್ನ ತಲೆಯಲ್ಲಿಟ್ಟುಕೊಳ್ಳದೇ ಕೆಲಸ ಮಾಡಿದರೆ ನಾವು ಅಂದುಕೊಂಡ ಗುರಿಯನ್ನ ಸಾಧಿಸಬಹುದು ಅನ್ನೋದಕ್ಕೆ ಕೊಪ್ಪಳ ಮೂಲದ ಗಂಗಮ್ಮ ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ. ಸಂಗೀತ ಲೋಕದಲ್ಲಿ ಮಿಂಚ ಬೇಕು ಅಂತ ಭರ್ತಿ 20 ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಬಂದರು. ಕೊನೆಗೂ ಗಂಗಮ್ಮನ ದಶಕಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಸರಿಗಮಪ ಸಿಂಗಿಂಗ್ ಶೋನಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ಸಿಕ್ಕಿದೆ.

    ಗ್ರಾಮೀಣ ಪ್ರತಿಭೆ ಗಂಗಮ್ಮನ ಗಾಯನಕ್ಕೆ ಇಡೀ ಕರುನಾಡೇ ಸಲಾಮ್ ಹೊಡೆದಿದೆ. 50ನೇ ವಯಸ್ಸಲ್ಲೂ 15ರ ಹದಿಹರೆಯದ ಹುಡುಗಿಯಂತೆ ಹಾಡುವ ಪರಿಗೆ ಕರುನಾಡ ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ. `ಗಗನವೂ ಎಲ್ಲೋ ಭೂಮಿಯೂ ಎಲ್ಲೋ’ ಅಂತ ಹಾಡುತ್ತಾ ಸರಿಗಮಪ ವೇದಿಕೆ ಪ್ರವೇಶಿಸಿದ್ದ ಗಂಗಮ್ಮ, `ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು’ ಹಾಡಿಗೆ ಧ್ವನಿಯಾಗಿ ಸಂಗೀತ ಲೋಕದ ದಿಗ್ಗಜರಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

    ಗಂಗಮ್ಮನಿಗೆ ಸಿಕ್ಕಿರುವಂತಹ ಗೋಲ್ಡನ್ ಆಪರ್ಚುನಿಟಿ ಬಹುಶಃ ಬೇರ್ಯಾರಿಗೂ ಅಷ್ಟು ಸುಲಭವಾಗಿ ಸಿಗೋದಿಲ್ಲ. ಆ ವೇದಿಕೆ ಹತ್ತೋಕೆ ವರ್ಷಗಳ ಕಾಲ ತಪಸ್ಸು ಮಾಡಿರುತ್ತಾರೆ. ಹಗಲು-ರಾತ್ರಿ ಎನ್ನದೇ ಸಂಗೀತಾಭ್ಯಾಸ ಮಾಡಿರುತ್ತಾರೆ. ಆದರೆ ಸಂಗೀತ ಸರಸ್ವತಿ ಗಂಗಮ್ಮನನ್ನ ಕಾವಲು ಕಾಯುತ್ತಿರುವುದರಿಂದಲೇ ಹಳ್ಳಿಕೋಗಿಲೆಗೆ ಇಂತಹದ್ದೊಂದು ಸುವರ್ಣಾವಕಾಶ ಹುಡುಕಿಕೊಂಡು ಬರುವುದಕ್ಕೆ ಸಾಧ್ಯವಾಗಿದೆ.

    ಕಲೆಗೆ ಬೆಲೆ ಸಿಕ್ಕೆ ಸಿಗುತ್ತೆ ಅನ್ನೋದು ಗಂಗಮ್ಮನಿಂದ ನಿಜವಾಗಿದೆ. ಸದ್ಯ ಸರಿಗಮಪ ಅಂಗಳದಲ್ಲಿ ಬೀಡುಬಿಟ್ಟಿರುವ ಗಂಗಮ್ಮ ಇಡೀ ಕರುನಾಡು ಬೆರಗುಗಣ್ಣಿನಿಂದ ನೋಡುವಂತೆ ಹಾಡಲಿ. ಹುಟ್ಟೂರು ಕೊಪ್ಪಳದ ಕೀರ್ತಿಪತಾಕೆಯನ್ನ ಎತ್ತಿಹಿಡಿಯಲಿ ಅನ್ನೋದೇ ಎಲ್ಲರ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಟುಡಿಯೋದಲ್ಲಿ ನನ್ನನ್ನು ಮರೆತು ನಾನು ಹಾಡಿದ್ದೇನೆ: ಕಷ್ಟದ ದಿನ ನೆನೆದು ಭಾವುಕರಾದ ಗಂಗಮ್ಮ

    ಸ್ಟುಡಿಯೋದಲ್ಲಿ ನನ್ನನ್ನು ಮರೆತು ನಾನು ಹಾಡಿದ್ದೇನೆ: ಕಷ್ಟದ ದಿನ ನೆನೆದು ಭಾವುಕರಾದ ಗಂಗಮ್ಮ

    ಬೆಂಗಳೂರು: ಸೋಶಿಯಲ್ ಮೀಡಿಯಾದ ಮೂಲಕವೇ ಸ್ಟಾರ್ ಆದ ಗಾನ ಕೋಗಿಲೆ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡುವಾಗ ತಮ್ಮ ಕಷ್ಟದ ದಿನಗಳನ್ನು ನೆನದು ಭಾವುಕರಾದರು.

    ಇಂದು ಹಾಡಿನ ರೆಕಾರ್ಡಿಂಗ್ ಮುಗಿಸಿ ಸ್ಟುಡಿಯೋದಿಂದ ಹೊರ ಬಂದ ಗಂಗಮ್ಮರನ್ನು ಪಬ್ಲಿಕ್ ಟಿವಿ ಮಾತನಾಡಿಸಿತ್ತು. ಇಂದು ಇಂತಹ ದೊಡ್ಡ ಸ್ಟುಡಿಯೋದಲ್ಲಿ ತುಂಬಾ ಖುಷಿಯಾಗಿದೆ. ನಾನು ಎಂದು ಇಷ್ಟು ದೊಡ್ಡ ಮಟ್ಟದಲ್ಲಿ ಬರುತ್ತೇನೆ ಎಂದು ಕಲ್ಪಿಸಿಕೊಂಡಿರಲಿಲ್ಲ. ಸ್ಟುಡಿಯೋದಲ್ಲಿ ನನ್ನನ್ನು ಮರೆತು ನಾನು ಹಾಡಿದ್ದೇನೆ ಎಂದರು.

    ನಾನು ಕೊಪ್ಪಳದಿಂದ ಬೆಂಗಳೂರಿಗೆ ಬರುವಾಗ, ನಮ್ಮ ತಾಯಿ ಸಿನಿಮಾ ಅಥವಾ ಆರ್ಕೆಸ್ಟ್ರಾದಲ್ಲಿ ಆದರೂ ಎಲ್ಲೆ ಹಾಡಿದರೆ ಚೆನ್ನಾಗಿ ಹಾಡು ಅಂತಾ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ನಮ್ಮ ತಾಯಿ ಕೂಲಿ ಮಾಡಿ ತುಂಬಾ ಕಷ್ಟದಿಂದ ನಮ್ಮನ್ನು ಸಾಕಿದ್ದಾರೆ. ನಾವು ಒಟ್ಟು ಒಂಬತ್ತು ಮಕ್ಕಳು. ಸದ್ಯ 6 ಮಂದಿ ಮಾತ್ರ ಇದ್ದೇವೆ ಎಂದರು.

    ನನಗೆ ಮದುವೆಯಾದ ವೇಳೆ ಬರಗಾಲ ಪರಿಸ್ಥಿತಿ ಎದುರಿಸಿದ್ದೇವು. ಗಂಡನ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಎದುರಿಸಬೇಕಾಯಿತು. ಈ ವೇಳೆ ತನ್ನ ಗಂಡನೊಂದಿಗೆ ಪ್ರತ್ಯೇಕ ಕುಟುಂಬ ಮಾಡಿದೆ. ಬಳಿಕ ನನ್ನ ಕುಟುಂಬದ ನಿರ್ವಹಣೆಯನ್ನ ಮಾಡಿ ಹಾಡುಗಾರಿಕೆಯನ್ನು ಮುಂದುವರಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಳ್ಳಿ ಕೋಗಿಲೆ ಗಂಗಮ್ಮ ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ!

    ಕೊಪ್ಪಳದ ಹಳ್ಳಿ ಕೋಗಿಲೆ ಗಂಗಮ್ಮ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಲಭಿಸಿ ‘ಪರದೇಸಿ ಕೇರ್ ಆಫ್ ಲಂಡನ್’ ಚಿತ್ರದ ಮೂಲಕ ಗಾಯಕಿಯಾಗಿ ಸಿನಿರಂಗ ಪ್ರವೇಶ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸ್ಟುಡಿಯೋದಲ್ಲಿ ಗಂಗಮ್ಮ ಅವರ ಹಾಡು ರೆಕಾರ್ಡಿಂಗ್ ನಡೆಯಿತು. ಅಲ್ಲದೇ ಗಂಗಮ್ಮ ತಮ್ಮ ಮೊದಲ ಹಾಡು ಪೂರ್ಣಗೊಳಿಸುವ ವೇಳೆಗೆ ಮತ್ತೆ ಎರಡೂ ಸಿನಿಮಾದ ನಿರ್ದೇಶಕರು ಬಂದು ತಮ್ಮ ಸಾಹಿತ್ಯಕ್ಕೆ ಇವರ ಕಂಠ ಹೋಲುತ್ತಾ ಎಂದು ಪರೀಕ್ಷೆ ಆಗಮಿಸಿದ್ದರು.

    ಇತ್ತೀಚಿಗೆ ಗಂಗಮ್ಮ ಅವರ ಹಾಡಿನ ವಿಡಿಯೋ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಹಾಡು ಒಂದೇ ದಿನದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ವ್ಯೂ ಆಗಿತ್ತು. ಅಲ್ಲದೇ ಸುಮಾರು 10 ಸಾವಿರ ಜನ ಇವರ ಹಾಡಿನ ವಿಡಿಯೋ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ಇದನ್ನೂ ಓದಿ: ಕೇವಲ 24 ಗಂಟೆಯಲ್ಲಿ 5 ಲಕ್ಷ ವೀವ್ಸ್, 10 ಸಾವಿರ ಶೇರ್ ಆಯ್ತು ಕೊಪ್ಪಳದ ಹಾಡು ಕೋಗಿಲೆಯ ವಿಡಿಯೋ!

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಂಗೀತಾ ನಿರ್ದೇಶಕ ಅರ್ಜುನ್ ಜನ್ಯ, ಗಂಗಮ್ಮ ಅವರ ಹಾಡನ್ನು ಕೇಳಿ ಸಂಗೀತಕ್ಕೆ ವಯಸ್ಸು ಇರಲ್ಲ ಎಂಬುದು ತಿಳಿಯಿತು. ತುಂಬಾ ಚೆನ್ನಾಗಿ ಹಾಡುತ್ತಿದ್ದು ಅವರಿಗೆ 20 ವರ್ಷ ಅನುಭವವಿರುವುದು ಅವರ ಹಾಡು ಕೇಳಿ ತಿಳಿಯುತ್ತದೆ. ಗಂಗಮ್ಮ ಹಾಗೂ ಅವರ ಕುಟುಂಬಕ್ಕೆ ನಾನು ಶುಭಾಶಯ ತಿಳಿಸುತ್ತೇನೆ ಎಂದಿದ್ದರು.

     

  • ಹಳ್ಳಿ ಕೋಗಿಲೆ ಗಂಗಮ್ಮ ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ!

    ಹಳ್ಳಿ ಕೋಗಿಲೆ ಗಂಗಮ್ಮ ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ!

    ಬೆಂಗಳೂರು: ಕೊಪ್ಪಳದ ಹಳ್ಳಿ ಕೋಗಿಲೆ ಗಂಗಮ್ಮ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಲಭಿಸಿದ್ದು, ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದಾರೆ.

    ‘ಪರದೇಸಿ ಕೇರ್ ಆಫ್ ಲಂಡನ್’ ಚಿತ್ರದ ಮೂಲಕ ಗಂಗಮ್ಮ ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದಾರೆ. ಸದ್ಯ ಈಗ ನಾದಬ್ರಹ್ಮ ಹಂಸಲೇಖ ಅವರ ಸ್ಟುಡಿಯೋದಲ್ಲಿ ಗಂಗಮ್ಮ ಅವರ ಹಾಡು ರೆಕಾರ್ಡಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲದೇ ಇನ್ನೂ ಇಬ್ಬರು ನಿರ್ದೇಶಕರು ಗಂಗಮ್ಮ ಅವರನ್ನು ತಮ್ಮ ಚಿತ್ರಕ್ಕೆ ಹಾಡು ಹಾಡಿಸಲೆಂದು ಸ್ಟುಡಿಯೋ ಬಳಿ ಕಾಯುತ್ತಿದ್ದಾರೆ.

    ವೀರ ಸಮರ್ಥ್ ಸಂಗೀತ ನಿರ್ದೇಶನದ ಸಿನಿಮಾ ಇದಾಗಿದ್ದು, ಈಗ ಅವರಿಗೆ ಮೈಕ್ ಮುಂದೆ ಹೇಗೆ ನಿಲ್ಲಬೇಕು, ಹೇಗೆ ಧ್ವನಿ ಬದಲಾಯಿಸಿ ಯಾವ ರೀತಿ ಹಾಡಬೇಕು ಎನ್ನುವುದನ್ನು ವೀರ ಸಮರ್ಥ್ ಹೇಳಿಕೊಡುತ್ತಿದ್ದಾರೆ. ‘ಪರದೇಸಿ ಕೇರ್ ಆಫ್ ಲಂಡನ್’ ಚಿತ್ರವನ್ನು ರಾಜಶೇಖರ್ ನಿರ್ದೇಶಿಸುತ್ತಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ: ಕೇವಲ 24 ಗಂಟೆಯಲ್ಲಿ 5 ಲಕ್ಷ ವೀವ್ಸ್, 10 ಸಾವಿರ ಶೇರ್ ಆಯ್ತು ಕೊಪ್ಪಳದ ಹಾಡು ಕೋಗಿಲೆಯ ವಿಡಿಯೋ!

    ಗಂಗಮ್ಮ ತಮ್ಮ ಮೊದಲ ಹಾಡು ಪೂರ್ಣಗೊಳಿಸಿಲ್ಲ. ಅಷ್ಟರಲ್ಲೇ ಎರಡೂ ಸಿನಿಮಾದ ನಿರ್ದೇಶಕರು ಬಂದು ತಮ್ಮ ಸಾಹಿತ್ಯಕ್ಕೆ ಇವರ ಕಂಠ ಹೋಲುತ್ತಾ ಎಂದು ಪರೀಕ್ಷೆ ಮಾಡಲು ಬಂದಿದ್ದಾರೆ.

    ಇತ್ತೀಚಿಗೆ ಗಂಗಮ್ಮ ಅವರ ಹಾಡಿನ ವಿಡಿಯೋ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಹಾಡು ಒಂದೇ ದಿನದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ವ್ಯೂ ಆಗಿತ್ತು. ಅಲ್ಲದೇ ಸುಮಾರು 10 ಸಾವಿರ ಜನ ಇವರ ಹಾಡಿನ ವಿಡಿಯೋ ಪೋಸ್ಟ್ ಅನ್ನು ಶೇರ್ ಮಾಡಿದ್ದರು.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಂಗೀತಾ ನಿರ್ದೇಶಕ ಅರ್ಜುನ್ ಜನ್ಯ, ಗಂಗಮ್ಮ ಅವರ ಹಾಡನ್ನು ಕೇಳಿ ಸಂಗೀತಕ್ಕೆ ವಯಸ್ಸು ಇರಲ್ಲ ಎಂಬುದು ತಿಳಿಯಿತು. ತುಂಬಾ ಚೆನ್ನಾಗಿ ಹಾಡುತ್ತಿದ್ದು ಅವರಿಗೆ 20 ವರ್ಷ ಅನುಭವವಿರುವುದು ಅವರ ಹಾಡು ಕೇಳಿ ತಿಳಿಯುತ್ತದೆ. ಗಂಗಮ್ಮ ಹಾಗೂ ಅವರ ಕುಟುಂಬಕ್ಕೆ ನಾನು ಶುಭಾಶಯ ತಿಳಿಸುತ್ತೇನೆ ಎಂದಿದ್ದರು.

    https://www.youtube.com/watch?v=pf0De5WBDJk