Tag: Ganga Kalyana Scheme

  • ಗಂಗಾ ಕಲ್ಯಾಣ ಯೋಜನೆಗೂ ಕನ್ನ ಹಾಕಿದ್ದಾರೆ ವಾಲ್ಮೀಕಿ ಹಗರಣದ ಆರೋಪಿಗಳು!

    ಗಂಗಾ ಕಲ್ಯಾಣ ಯೋಜನೆಗೂ ಕನ್ನ ಹಾಕಿದ್ದಾರೆ ವಾಲ್ಮೀಕಿ ಹಗರಣದ ಆರೋಪಿಗಳು!

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Karnataka Maharshi Valmiki Scheduled Tribe Development Corporation Ltd) ಹಗರಣ ಮಾಡಿದ ಆರೋಪಿಗಳು ಗಂಗಾ ಕಲ್ಯಾಣ ಯೋಜನೆಗೂ (Ganga Kalyana Scheme) ಕನ್ನ ಹಾಕಿದ ವಿಚಾರ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ.

    ಎಸ್‌ಸಿ (SC) ಮತ್ತು ಎಸ್‌ಟಿ (ST) ಸಮುದಾಯದ ಜಮೀನುಗಳಿಗೆ ಕೊಳವೆ ಬಾವಿ (Borewell) ತೆಗೆಯುವುದಕ್ಕೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್‌ ವಿರುದ್ಧ ಆಗಸ್ಟ್‌ನಲ್ಲೇ ಚಾರ್ಜ್‌ಶೀಟ್‌ ಸಲ್ಲಿಕೆ ಸಾಧ್ಯತೆ – ಯಾವೆಲ್ಲ ವರದಿ ಬರಬೇಕಿದೆ?

     

    ಸರ್ಕಾರ ನಿರ್ದೇಶನ ಮತ್ತು ನಿಯಮದಂತೆ 43,333 ಕೋಟಿ ರೂ. ಹಣವನ್ನು ಗಂಗಾ ಕಲ್ಯಾಣ ಯೋಜನೆಗಾಗಿ ಮೀಸಲಾಗಿಡಲಾಗಿತ್ತು. ಆದರೆ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಅಣತಿಯ ಮೇರೆಗೆ ಖಜಾನೆ ಅಧಿಕಾರಿಗಳು 43 ಕೋಟಿ ರೂ. ಹಣವನ್ನು ಕೂಡ ಯೂನಿಯನ್ ಬ್ಯಾಂಕ್ ಗೆ ವರ್ಗಾವಣೆ ಮಾಡಿದ್ದಾರೆ.

    ಈ ಹಣವನ್ನು ವರ್ಗಾವಣೆ ಮಾಡುವಾಗ ಕೆಲವು ದಾಖಲಾತಿಗಳನ್ನು ನಕಲು ಮಾಡಿರುವುದು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಭಾಗಿ ಆಗಿರುವುದು ಈಗ ತನಿಖೆಯಲ್ಲಿ ಬಹಿರಂಗವಾಗಿದೆ.

     

  • ಕಾಂಗ್ರೆಸ್‌ನಿಂದ ಶುರುವಾಯ್ತು ಬಿಜೆಪಿ ಕಾಲದ ಅಕ್ರಮದ ತನಿಖೆ – ಮೊದಲ ಎಫ್‌ಐಆರ್‌ ದಾಖಲು

    ಕಾಂಗ್ರೆಸ್‌ನಿಂದ ಶುರುವಾಯ್ತು ಬಿಜೆಪಿ ಕಾಲದ ಅಕ್ರಮದ ತನಿಖೆ – ಮೊದಲ ಎಫ್‌ಐಆರ್‌ ದಾಖಲು

    ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ಕಾಂಗ್ರೆಸ್‌ (Congress) ಮುಂದಾಗಿದ್ದು ಮೊದಲ ಎಫ್‌ಐಆರ್‌ ದಾಖಲಾಗಿದೆ.

    ಅಂಬೇಡ್ಕರ್ ಅಭಿವೃದ್ದಿ ನಿಗಮ ಗಂಗಾ ಕಲ್ಯಾಣ ಯೋಜನೆಯಲ್ಲಿ (Ganga Kalyana Yojane) ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ. ಶೀಘ್ರವೇ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ.

    2 ರಿಂದ 5 ಎಕರೆ ವ್ಯಾಪ್ತಿಯೊಳಗಡೆ ಜಮೀನಿರುವವರಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ (Borwell) ನಿರ್ಮಾಣ ಮಾಡುವ ಮೂಲಕ ಅವರಿಗೆ ನೆರವಾಗುವ ಕೆಲಸ ಮಾಡಲಾಗುತ್ತಿದೆ. ಆದರೆ ಈ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ಹಣ ಕಬಳಿಸಿದ್ದಾರೆ. ನಕಲಿ ದಾಖಲೆ ನೀಡಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿಲಾಗಿದೆ. ಇದನ್ನೂ ಓದಿ: ಗ್ಯಾರಂಟಿ ಲಾಭ ಪಡೆಯಲು ದುಂಬಾಲು – ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಫುಲ್‌ ಡಿಮ್ಯಾಂಡ್‌

    ಈ ಹಿಂದೆ 2021 ರಲ್ಲಿ ಗಂಗಾ ಕಲ್ಯಾಣ ಯೋಜನೆ ಅಕ್ರಮ ತಡೆಯಲು ಸದನ ಸಮಿತಿ ರಚನೆಯಾಗಿತ್ತು. ಡಾ.ವೈ.ಎ. ನಾರಾಯಣಸ್ವಾಮಿ ನೇತೃತ್ವದ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿ ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿದೆ. ಈ ಬೆನ್ನಲ್ಲೇ ಗಂಗಾ‌ಕಲ್ಯಾಣ ಯೋಜನೆಯ ಅಕ್ರಮದ ತನಿಖೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

     

    ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ನಿರ್ಮಾಣ ಕಾರ್ಯದಲ್ಲಿ ಶೇ.30 ರಿಂದ 40 ರಷ್ಟು ಅಕ್ರಮ ನಡೆದಿದೆ. 100 ಕೋಟಿ ರೂ. ಅನುದಾನದಲ್ಲಿ 30ರಿಂದ 40 ಕೋಟಿ ರೂ. ದೋಚುವ ಕೆಲಸ ಮಾಡಲಾಗಿದೆ ಡಾ.ವೈ.ಎ. ನಾರಾಯಣಸ್ವಾಮಿ ಈ ಹಿಂದೆ ಹೇಳಿದ್ದರು. 2015ರಿಂದ ಕೋಟ್ಯಂತರ ರೂ. ಅಕ್ರಮ ನಡೆದಿರುವುದು ಸಮಿತಿಗೆ ಗೊತ್ತಾಗಿದೆ. ಗೋಲ್‌ಮಾಲ್‌ನಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಲಿದೆ ಎಂದು ತಿಳಿಸಿದ್ದರು.