Tag: Ganga Aarti

  • ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

    ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

    ಕೆಲವರು ಧರ್ಮವನ್ನೂ ಮೀರಿ ದೇವರ ಆರಾಧನೆಯಲ್ಲಿ ನಂಬಿಕೆ ಇಡ್ತಾರೆ. ಇದೀಗ ಬಾಲಿವುಡ್ ನಿರ್ದೇಶಕಿ, ನೃತ್ಯ ನಿರ್ದೇಶಕಿ, ನಟಿ ನಿರ್ಮಾಪಕಿ ಫರ‍್ಹಾ ಖಾನ್ (Farah Khan) ರಿಷಿಕೇಶಕ್ಕೆ ತೆರಳಿ ಗಂಗಾರತಿಯಲ್ಲಿ (Ganga aarti)  ಪಾಲ್ಗೊಂಡಿದ್ದಾರೆ. ಕೈಮುಗಿದು ಓಂ ನಮಃ ಶಿವಾಯ ಎಂದಿದ್ದಾರೆ. ಜೈ ಭೋಲೇನಾಥ್ ಎಂದಿರುವ ದೃಶ್ಯಗಳನ್ನ ಅವರೇ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ಲಾಂ ಧರ್ಮದ ಫರ‍್ಹಾ ಖಾನ್ ಮೊದಲ ಬಾರಿ ರಿಷಿಕೇಶಕ್ಕೆ (Rishikesh) ತೆರಳಿದ್ದು, ಇದನ್ನು ಅದ್ಭುತ ಅನುಭವ ಎಂದು ವರ್ಣಿಸಿದ್ದಾರೆ.

    ತಮ್ಮ ಮನೆಯ ಅಡುಗೆಭಟ್ಟ ದಿಲೀಪ್ ಜೊತೆ ರಿಷಿಕೇಶಕ್ಕೆ ತೆರಳಿರುವ ಫರ‍್ಹಾ ಅಲ್ಲಿ ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಂಡ ಬಗೆ ವಿಶೇಷವಾಗಿದೆ. ಹಣೆಯಲ್ಲಿ ಸಿಂಧೂರವಿಟ್ಟು ಕೈ ಮುಗಿದು ದೇವರಲ್ಲಿ ಬೇಡಿಕೊಂಡಿದ್ದಾರೆ. ದೀಪ ಹಿಡಿದು ಗಂಗಾರತಿ ಮಾಡಿದ್ದಾರೆ. ಹೀಗೆ ಧಾರ್ಮಿಕ ಆಚರಣೆ ಮಾಡ್ತಿರುವ ಫರ‍್ಹಾ ಫೋಟೋ ವೀಡಿಯೋಗಳು ಇನ್ಸ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

    ಅನೇಕರು ಫರ‍್ಹಾ ಖಾನ್ ನಡೆದುಕೊಂಡ ರೀತಿಗೆ ಭೇಷ್ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಅಸ್ತಗ್‌ಫಿರುಲ್ಲ (ದೇವರ ಆಶೀರ್ವಾದ ನಿಮ್ಮ ಮೇಲಿರಲಿ) ಎಂದು ಕಾಮೆಂಟ್ ಬರೆದಿದ್ದಾರೆ. ಹೀಗೆ ಫರ‍್ಹಾ ಖಾನ್ ಧಾರ್ಮಿಕ ಆಚರಣೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  • ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

    ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

    ಕು ಡ್ಲದ ಬೆಡಗಿ ಪೂಜಾ ಹೆಗ್ಡೆ ಸದ್ಯ ವರುಣ್ ಧವನ್ (Varun Dhawan) ಜೊತೆಗಿನ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ವರುಣ್ ಜೊತೆ ಪೂಜಾ (Pooja Hegde) ಉತ್ತರಾಖಂಡದ ಋಷಿಕೇಶನಲ್ಲಿ ಗಂಗಾ ಆರತಿ ಮಾಡಿದ್ದಾರೆ. ಈ ಕುರಿತು ನಟಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ

    ಹೊಸ ಸಿನಿಮಾದ ಶೂಟಿಂಗ್‌ಗಾಗಿ ಋಷಿಕೇಶಗೆ ಚಿತ್ರತಂಡ ತೆರಳಿದೆ. ಈ ವೇಳೆ, ಋಷಿಕೇಶನಲ್ಲಿರುವ ಗಂಗಾ ನದಿಯ ಬಳಿ ವರುಣ್ ಮತ್ತು ಪೂಜಾ ಗಂಗಾ ಆರತಿ ಮಾಡಿ ಪ್ರಾರ್ಥನೆ ಮಾಡುತ್ತಾರೆ. ಸಿನಿಮಾ ಯಶಸ್ಸಿಗಾಗಿ ಸಲ್ಲಿಸಿದ್ದಾರೆ. ಈ ಮೂಲಕ ಸಿನಿಮಾಕ್ಕೆ ಚಿತ್ರತಂಡ ಚಾಲನೆ ನೀಡಿದೆ.

     

    ಈ ಪೋಸ್ಟ್ ಅನ್ನು Instagram ನಲ್ಲಿ ವೀಕ್ಷಿಸಿ

     

    ಪೂಜಾ ಹೆಗ್ಡೆ (@hegdepooja) ಹಂಚಿಕೊಂಡ ಪೋಸ್ಟ್

    ಅಂದಹಾಗೆ, ವರುಣ್ ತಂದೆ ಡೇವಿಡ್ ಧವನ್ ನಿರ್ದೇಶನದ ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿದ್ದಾರೆ. ತೆಗೆದುಕೊಳ್ಳುವ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.

    ಈ ಮುನ್ನ ವರುಣ್ ಅವರು ಕೀರ್ತಿ ಸುರೇಶ್ ಜೊತೆ ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸಿದರು. ಇತ್ತ ಪೂಜಾ ಅವರು ಶಾಹಿದ್ ಕಪೂರ್‌ಗೆ ನಾಯಕಿಯಾಗಿ ‘ದೇವ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ಕಾಶಿ ಮಾದರಿಯಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ: ಕಣ್ಣು ತುಂಬಿಕೊಂಡ ಸಾವಿರಾರು ಭಕ್ತರು

    ಕಾಶಿ ಮಾದರಿಯಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ: ಕಣ್ಣು ತುಂಬಿಕೊಂಡ ಸಾವಿರಾರು ಭಕ್ತರು

    ಚಿಕ್ಕೋಡಿ: ಉತ್ತರ ಭಾರತದಲ್ಲಿ ನದಿಗಳಿಗೆ ಗಂಗಾರತಿ (Ganga Aarti) ಮಾಡುವ ಮಾದರಿಯಲ್ಲೆ ಹೀರಣ್ಯಕೇಶಿ ನದಿಗೆ ಗಂಗಾರತಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಸುಪ್ರಸಿದ್ಧ ಹೊಳೆಮ್ಮ ದೇವಸ್ಥಾನ ಪಕ್ಕದ ಹೀರಣ್ಯಕೇಶಿ (Hiranyakeshi) ನದಿಗೆ ಗಂಗಾರತಿ ಜರುಗಿತು. ಕಳೆದ ನಾಲ್ಕು ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ ಕಾರ್ಯಕ್ರಮವನ್ನ ಹುಕ್ಕೇರಿ ಹಿರೇಮಠದಿಂದ ಆಯೋಜನೆ ಮಾಡಲಾಗುತ್ತಿದೆ.

    ಕಾಶಿ ಗಂಗಾರತಿ ಮಾದರಿಯಲ್ಲೇ ಮಂತ್ರ ಜಪಿಸಿ ನದಿಗೆ ಪೂಜೆ ಸಲ್ಲಿಸಿ ಗಂಗಾರತಿ ಮಾಡುವುದು ವಿಶೇಷವಾಗಿತ್ತು. ನದಿಗಳನ್ನು ಸ್ವಚ್ಛಂದವಾಗಿಟ್ಟುಕೊಳ್ಳಲು ಗಂಗಾರತಿಯನ್ನು ಆಯೋಜಿಸಲಾಗುತ್ತಿರುವುದು ವಿಶೇಷ. ಇದನ್ನೂ ಓದಿ: ಕಡೆಯ ಕಾರ್ತಿಕ ಸೋಮವಾರ – ಕೋಲಾರದ ಅಂತರಗಂಗೆಗೆ ಭಕ್ತರ ದಂಡು

    ಗಂಗಾರತಿ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಗಂಗಾರತಿಯನ್ನ ಕಣ್ಣು ತುಂಬಿಕೊಂಡರು. ಗಂಗಾರತಿ ಬಳಿಕ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

     

  • ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ – ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ

    ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ – ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ

    ಮಂಡ್ಯ: ಕೆಆರ್‌ಎಸ್‌ ಜಲಾಶಯಕ್ಕೆ (KRS Dam) ಭೇಟಿಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು, ವಾರಣಾಸಿಯ ಗಂಗಾರತಿ (Ganga Aarti) ಮಾದರಿಯಲ್ಲೇ ಕಾವೇರಿ ಆರತಿ (Kaveri Arti) ಮಾಡಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

    ಒಂದು ತಿಂಗಳ ಒಳಗೆ ಹೇಗೆ ಕಾರ್ಯಕ್ರಮ ಮಾಡಬೇಕು ಎಂದು ವರದಿ ಸಲ್ಲಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಕಾವೇರಿ ಆರತಿಗೆ ಹೊಸ ಯೋಜನೆ ರೂಪಿಸಿದ್ದೇವೆ. ಧಾರ್ಮಿಕ ದತ್ತಿ, ನೀರಾವರಿ ಇಲಾಖೆಯಿಂದ ಕಾವೇರಿ ಆರತಿ ಮಾಡಲು ನಿರ್ಧರಿಸಿದ್ದೇವೆ. ಬೃಂದಾವನಕ್ಕೆ ಹೊಸ ರೂಪ ಕೊಡಲು ಸರ್ಕಾರಕ್ಕೆ ಮನವಿ ಬಂದಿದೆ. ಸಂಪುಟದಲ್ಲಿಯೂ ಇದಕ್ಕೆ ಅನುಮತಿ ಸಿಗಲಿದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬೃಂದಾವನ ಅಭಿವೃದ್ದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಕಾವೇರಿ ಮಾತೆಗೆ ಸಿಎಂ ಬಾಗಿನ ಅರ್ಪಣೆ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದರು. ಬಳಿಕ 40 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಿತ್ತು. ಈಗ 30 ಟಿಎಂಸಿ ನೀರು ಹರಿದು ಹೋಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಬೆಂಗಳೂರು ಸೇರಿದಂತೆ 6 ಜಿಲ್ಲೆಗಳ ಜೀವನದಿಯಾಗಿರುವ ಕಾವೇರಿ ನದಿ, ಮಳೆಯ ಅಬ್ಬರದಿಂದ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕೆಆರ್‍ಎಸ್ ಡ್ಯಾಂ ಭರ್ತಿ ಹಂತಕ್ಕೆ ತಲುಪಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಮ್‍ನಲ್ಲಿ 123.200 ಅಡಿ ನೀರು ಭರ್ತಿಯಾಗಿದೆ. ಡ್ಯಾಮ್‍ಗೆ 60,016 ಕ್ಯುಸೆಕ್ ಒಳಹರಿವಿದೆ. 52,020 ಕ್ಯುಸೆಕ್ ಹೊರ ಹರಿವಿದೆ. ಡ್ಯಾಮ್‍ನ ಕೆಳಭಾಗದ ನದಿ ಪಾತ್ರದಲ್ಲಿ ನೆರೆ ಭೀತಿ ಉಂಟಾಗಿದ್ದು, ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಾವೃತವಾಗುವ ಆತಂಕ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

  • ‘ಚುನವಿ ಹಿಂದೂ’ – ‘ಗಂಗಾ ಆರತಿ’ ಪೂಜೆಗೈದ ರಾಗಾ ವಿರುದ್ಧ ಬಿಜೆಪಿ ವ್ಯಂಗ್ಯ

    ‘ಚುನವಿ ಹಿಂದೂ’ – ‘ಗಂಗಾ ಆರತಿ’ ಪೂಜೆಗೈದ ರಾಗಾ ವಿರುದ್ಧ ಬಿಜೆಪಿ ವ್ಯಂಗ್ಯ

    ಲಕ್ನೋ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಗೆಗೆ ಆರತಿ ಮಾಡುತ್ತಿದ್ದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಈ ಪೋಸ್ಟ್ ಗೆ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ‘ಚುನವಿ ಹಿಂದೂ’ ಎಂದು ವ್ಯಗ್ಯವಾಡಿದ್ದಾರೆ.

    ರಾಹುಲ್ ಗಾಂಧಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡಿದಾಗ ಪ್ರಸಿದ್ಧ ಹರ್ ಕಿ ಪೌರಿ ಘಾಟ್‍ನಲ್ಲಿ ‘ಗಂಗಾ ಆರತಿ’ ಮಾಡಿದ್ದು, ಆ ವೀಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಟ್ವೀಟ್ ನೋಡಿದ ತಜೀಂದರ್ ಪಾಲ್ ಸಿಂಗ್ ಅವರು ರೀಟ್ವೀಟ್ ಮಾಡಿ ‘ಚುನವಿ ಹಿಂದೂ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫೆ.19 ರಿಂದ 28ವರೆಗೆ ದ.ಕ ಜಿಲ್ಲೆಯಲ್ಲಿ ಕಡತ ವಿಲೇವಾರಿ, ಕಂದಾಯ ಮೇಳ

    ಗಂಗೆಗೆ ಆರತಿ ಸಲ್ಲಿಸುವ ವೇಳೆ ರಾಹುಲ್ ಅವರಿಗೆ ಅರ್ಚಕರೊಬ್ಬರು ಮಾರ್ಗದರ್ಶನ ನೀಡುತ್ತಿರುವ ವೀಡಿಯೋ ತುಣುಕನ್ನು ಹಂಚಿಕೊಂಡಿರುವ ಬಗ್ಗಾ ಅವರು, ರಾಹುಲ್ ‘ಚುನವಿ ಹಿಂದೂ’ ಆಗಿದ್ದಾರೆ. ಅವರು ಹೆಚ್ಚು ತರಬೇತಿ ಪಡೆಯಬೇಕು ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

    ನಿನ್ನೆ ಉತ್ತರಾಖಂಡದಲ್ಲಿ ಗಂಗೆ ಪೂಜೆ ಮಾಡಲು ಬಂದಿದ್ದ ರಾಹುಲ್ ಅವರನ್ನು ನೋಡಲು ಅಪಾರ ಜನಸಮೂಹ ನೆರೆದಿತ್ತು. ಆಗ ಅವರು ‘ಹರ್ ಹರ್ ಗಂಗೆ’ ಘೋಷಣೆಗಳನ್ನು ಕುಗುತ್ತಿದ್ದು, ಈ ವೇಳೆ ರಾಹುಲ್ ‘ಗಂಗಾ ಆರತಿ’ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ಮೂರು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ರಾಹುಲ್ ಅವರು ತಾವು ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದು, ಗಂಗಾಜಿಗೆ ನಮಸ್ಕಾರಗಳು! ಉತ್ತರಾಖಂಡದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದರು.

    ಕಳೆದ ತಿಂಗಳು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ಗಾಂಧಿ ಕುಟುಂಬವನ್ನು ಧರ್ಮದ ವಿಚಾರದಲ್ಲಿ ತಿರುಗೇಟು ಕೊಟ್ಟಿದ್ದರು. ಯೋಗಿ ಅವರು, ತಮ್ಮನ್ನು ‘ಆಕಸ್ಮಿಕ ಹಿಂದೂಗಳು’ ಎಂದು ಕರೆದುಕೊಳ್ಳುವವರು, ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಅವರು ಹಿಂದೂಗಳಾಗುತ್ತಾರೆ ಎಂದು ಕಿಡಿಕಾರಿದ್ದರು.

    ಉತ್ತರಾಖಂಡದ ಉಧಮ್ ಸಿಂಗ್ ನಗರದ ಕಿಚ್ಚಾ ಮಂಡಿಯಲ್ಲಿ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದರು. ನಮ್ಮ ದೇಶದಲ್ಲಿ ಪ್ರಧಾನಿಯಿಲ್ಲ, ಅದರ ಬದಲು ಜನರು ತಮ್ಮ ಮಾತುಗಳನ್ನು ಕೇಳಬೇಕು ಎನ್ನುವ ರಾಜನಿದ್ದಾನೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಭಾರತಕ್ಕೆ ಇಂದು ಪ್ರಧಾನಿ ಇಲ್ಲ, ಏನೇ ಮಾಡಿದ್ರೂ ಜನ ಸುಮ್ಮನಿರಬೇಕೆನ್ನುವ ರಾಜನಿದ್ದಾನೆ: ರಾಗಾ

    ಪ್ರಧಾನಿ ದೇಶದ ಜನರಿಗಾಗಿ ಕೆಲಸ ಮಾಡಬೇಕು. ಜನರ ಮಾತನ್ನು ಕೇಳಬೇಕು. ನರೇಂದ್ರ ಮೋದಿ ಪ್ರಧಾನಿ ಅಲ್ಲ, ಅವರು ರಾಜ. ಅವರು ಸುಮಾರು ಒಂದು ವರ್ಷ ರೈತರನ್ನು ಕಡೆಗಣಿಸಿ ನಂತರ ಪರಿಹಾರವನ್ನು ಕೊಟ್ಟರು. ಒಬ್ಬ ರಾಜನು ಕೂಲಿ ಕಾರ್ಮಿಕರ ಜೊತೆ ಮಾತನಾಡುವುದಿಲ್ಲ. ಅವರ ಮಾತುಗಳನ್ನು ಕೇಳುವುದಿಲ್ಲ. ತನ್ನದೇ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಟೀಕಿಸಿದ್ದರು.

  • ಗಂಗಾ ಆರತಿಯಂತೆ ಕಾವೇರಿ ನದಿಗೂ ನೂರನೇ ಮಹಾ ಆರತಿ

    ಗಂಗಾ ಆರತಿಯಂತೆ ಕಾವೇರಿ ನದಿಗೂ ನೂರನೇ ಮಹಾ ಆರತಿ

    – ನೀರನ್ನು ಕಾಪಾಡುವಂತೆ ಚಕ್ರವರ್ತಿ ಸೂಲಿಬೆಲೆ ಕರೆ

    ಮಡಿಕೇರಿ: ಉತ್ತರ ಭಾರತದಲ್ಲಿ ಗಂಗಾ ನದಿ ಮಲೀನವಾಗುತ್ತಿರುವಂತೆ ದಕ್ಷಿಣದಲ್ಲಿ ಕಾವೇರಿ ಮಲೀನವಾಗುತ್ತಿದ್ದಾಳೆ. ಕಾವೇರಿಯನ್ನು ಸ್ವಚ್ಚಗೊಳಿಸಲು ಆಂದೋಲನಗಳು ನಡೆಯುತ್ತಿದ್ದು, ಇದೀಗ ಗಂಗಾ ನದಿಯಂತೆ ಕಾವೇರಿಗೂ ಮಹಾ ಆರತಿ ನಡೆಸಲಾಗುತ್ತಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಶುಕ್ರವಾರ ಕಾವೇರಿ ನದಿಗೆ ಸುತ್ತುರು ಶ್ರೀಗಳು ಗಣ್ಯ ವ್ಯಕ್ತಿಗಳು ನೂರನೇ ಮಹಾ ಆರತಿ ನೆರವೇರಿಸಿದರು. ಇತ್ತೀಚಿನ ದಿನಗಳಲ್ಲಿ ದಕ್ಷಿಣದಲ್ಲಿ ಕಾವೇರಿ ನದಿ ಕೂಡ ವರ್ಷದಿಂದ ವರ್ಷಕ್ಕೆ ಮಲೀನವಾಗುತ್ತಿದ್ದಾಳೆ. ಇದನ್ನೂ ಓದಿ: ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ಕುಶಾಲನಗರದ ಕಾವೇರಿಯನ್ನು ರಕ್ಷಿಸಿ ಆಂದೋಲನ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಇದರೊಂದಿಗೆ ಕಾವೇರಿ ಸ್ವಚ್ಚತಾ ಆಂದೋಲನ ಸಮಿತಿ ಕಳೆದ ಒಂಬತ್ತು ವರ್ಷಗಳಿಂದ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನದಿಗೆ ಮಹಾ ಆರತಿ ನಡೆಸುತ್ತಾ ಬಂದಿದ್ದು, ಶುಕ್ರವಾರ ನೂರನೇ ಮಹಾ ಆರತಿ ನಡೆಸಲಾಯಿತು.

    ಕಾವೇರಿ ನದಿ ಹಬ್ಬ ನಡೆಸುವ ಮೂಲಕ ನೂರನೇ ಆರತಿಯನ್ನು ಮಾಡಲಾಯಿತು. ಸುತ್ತೂರು ಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಪ್ರಮುಖರು ಆರತಿಯಲ್ಲಿ ಪಾಲ್ಗೊಂಡಿದ್ದರು. ಕಾವೇರಿ ಸ್ವಚ್ಚತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನೂರಾರು ವಿದ್ಯಾರ್ಥಿಗಳನ್ನು ಕಾವೇರಿ ಹಬ್ಬ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

    ಕಾವೇರಿ ಸ್ವಚ್ಚತಾ ಕಾರ್ಯಕ್ರಮದ ರೂವಾರಿ ಯುವ ಬ್ರಿಗೇಡ್‍ನ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಾವೇರಿ ಹಬ್ಬದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ನೀರನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರು. ಕಾವೇರಿಯ ತವರು ಕೊಡಗು ಜಿಲ್ಲೆಯ ಹಲವೆಡೆ ಕಾವೇರಿ ಕಲುಷಿತವಾಗುತ್ತಿದೆ. ಕುಶಾಲನಗರದಲ್ಲಿ ಕಲುಷಿತ ನೀರನ್ನು ನೇರವಾಗಿ ಟ್ಯಾಂಕರ್ ಮೂಲಕ ನದಿಗೆ ಬಿಡುವುದು ಕಂಡುಬರುತ್ತಿದೆ. ಇದನ್ನು ತಡೆಗಟ್ಟುಲು ಪ್ರತಿಯೊಬ್ಬರು ಮುಂದಾಗಬೇಕೆಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.

  • ಮೆಗಾ ರೋಡ್‍ಶೋ ಬಳಿಕ ಮೋದಿಯಿಂದ ಗಂಗಾರತಿ

    ಮೆಗಾ ರೋಡ್‍ಶೋ ಬಳಿಕ ಮೋದಿಯಿಂದ ಗಂಗಾರತಿ

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ವಾರಣಾಸಿಯಲ್ಲಿ ಮೆಗಾ ರೋಡ್ ಶೋ ನಡೆಸಿದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಕಾಶಿಯ ದಶಾಶ್ವಮೇಧ ಘಾಟ್‍ನಲ್ಲಿ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತರಿದ್ದರು.

    ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿ ಗಂಗೆಯ ತಟಕ್ಕೆ ಆಗಮಿಸಿದರು.

    ರೋಡ್ ಶೋ ವೇಳೆ ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನವನ್ನು ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು.

    ಗಂಗಾರತಿ ವಿಶೇಷತೆ ಏನು?
    ಭೂಲೋಕದಲ್ಲಿ ಎಲ್ಲಿ ನೆಲೆಸಲು ಬಯಸ್ತೀಯಾ ಎಂದು ಶಿವ ಕೇಳಿದಾಗ, ಪವಿತ್ರ ಪರಿಶುದ್ಧ ಪಾವನೆ ಗಂಗೆಯ ತಟವಾದ ವಾರಾಣಸಿಯನ್ನು ಪಾರ್ವತಿ ಆಯ್ಕೆ ಮಾಡಿಕೊಂಡು ಎಂದು ಪುರಾಣ ಹೇಳುತ್ತದೆ.

    ಮೂರು ಜನ್ಮಗಳ ಪಾಪ ಕಳೆದುಕೊಳ್ಳಲು ಗಂಗಾರತಿ ಪೂಜೆ ಮಾಡಲಾಗುತ್ತದೆ. ಪಂಚಭೂತಗಳ ಸಂಕೇತವಾಗಿ ಈ ಆರತಿ ನಡೆಯುತ್ತದೆ. ಒಂದು ಕಡೆ 5 ಅರ್ಚಕರು, ಇನ್ನೊಂದು ಕಡೆ 7 ಅರ್ಚಕರು ಆರತಿ ಮಾಡುತ್ತಾರೆ. ಸಪ್ತ ಋಷಿಗಳು ಗಂಗಾರತಿ ಮಾಡಿದ್ದರು ಎನ್ನುವುದರ ಪ್ರತೀಕವಾಗಿ 7 ಆರತಿ ಮಾಡಲಾಗುತ್ತದೆ. ಸಾವಿರಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ಪದ್ಧತಿ ಇದಾಗಿದೆ.

    ಗುರುವಾರ ರಾತ್ರಿ ವಾರಣಾಸಿಯಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ನಾಮಪತ್ರ ಪತ್ರ ಸಲ್ಲಿಸಲ್ಲಿದ್ದಾರೆ. ಬೆಳಗ್ಗೆ 9.30ಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಬೆಳಗ್ಗೆ 11.30 ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ನಿತಿಶ್ ಕುಮಾರ್, ಉದ್ಧವ್ ಠಾಕ್ರೆ, ಅಣ್ಣಾಡಿಎಂಕೆಯ ನಾಯಕರು ಸೇರಿದಂತೆ ಎನ್‍ಡಿಎ ಮಿತ್ರಪಕ್ಷಗಳ ಮುಖಂಡರು ಸಾಥ್ ನೀಡಲಿದ್ದಾರೆ.

  • ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ – ಮೊದಲ ಬಾರಿಗೆ ಗಂಗಾರತಿ

    ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ – ಮೊದಲ ಬಾರಿಗೆ ಗಂಗಾರತಿ

    ಮೈಸೂರು: ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಮಹಾಕುಂಭ ಮೇಳ ಆರಂಭವಾಗಿದ್ದು, 2ನೇ ದಿನವಾದ ಇಂದು ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

    ನವಗ್ರಹ ಹೋಮ, ಸುದರ್ಶನ ಹೋಮ, ರುದ್ರ ಹೋಮ, ನದಿ ಪಾತ್ರದಲ್ಲಿ ಪುಣ್ಯ ಹೋಮಗಳು ನೆರವೇರಿಸಲಾಯಿತು. ಮಹಾಕುಂಭ ಮೇಳಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಗಣ ಬರುತ್ತಿದ್ದು, ಪುಣ್ಯಸ್ನಾನ ಮಾಡಿ ದೇವಿಯ ಅನುಗ್ರಹ ಪಡೆಯುತ್ತಿದ್ದಾರೆ.

    ವಾರಣಾಸಿಯಲ್ಲಿ ಗಂಗಾರತಿ ನಡೆಸುವ ತಂಡದಿಂದಲೇ ವಾರಣಾಸಿ ಮಾದರಿಯಲ್ಲಿ ನದಿ ಮಧ್ಯ (ತ್ರಿವೇಣಿ ಸಂಗಮದಲ್ಲಿ) ಆರತಿ ಪೂಜೆ ಮಾಡಲಾಯಿತು. ಈ ಮೂಲಕ ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಗಂಗಾರತಿ ಪೂಜೆ ನೆರವೇರಿತು. ಈ ವೇಳೆ ನದಿ ಮಧ್ಯೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಗಂಗಾ ಪೂಜೆಯನ್ನು ಕಣ್ತುಂಬಿಕೊಂಡರು. ಪತಿ ಸಿಎಂ ಕುಮಾರಸ್ವಾಮಿ ಅವರ ಜೊತೆಗೆ ಕುಳಿತು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಗಂಗಾರತಿ ಕಾರ್ಯಕ್ರಮ ವೀಕ್ಷಿಸಿದರು. ಸಚಿವರಾದ ಜಿ.ಟಿ ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಶಾಸಕರಾದ ಯತೀಂದ್ರ, ಅಶ್ವಿನ್ ಕುಮಾರ್ ಅವರು ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv