Tag: Ganga

  • ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    -ದಸರಾ ವೇಳೆಗೆ ಕಾವೇರಿ ಆರತಿ ಶುರು ಮಾಡುವ ಪ್ರಯತ್ನ

    ಬೆಂಗಳೂರು: ಉತ್ತರ ಭಾರತದಲ್ಲಿ (North India) ನಡೆಯುವ ಗಂಗಾರತಿ (Gangarathi) ಮಾದರಿಯಲ್ಲಿಯೇ ರಾಜ್ಯದಲ್ಲಿ ಕಾವೇರಿ ಆರತಿ ನಡೆಸಲು ತಯಾರಿ ಆರಂಭವಾಗಿದೆ. ಸಂಬಂಧ ಅಧ್ಯಯನ ನಡೆಸಲು ಸಚಿವ ಚಲುವರಾಯಸ್ವಾಮಿ (Cheluvarayaswamy) ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ತೆರೆಳಿದೆ. ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಸಭೆ ನಡೆಸಿದ್ದು, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿದೆ.

    ಗಂಗೆಯಷ್ಟೇ ಪವಿತ್ರ ನದಿ ಕಾವೇರಿ (Kaveri) ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಇದಕ್ಕಾಗಿ ನಿಯೋಗ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದ್ದು, ಇದರ ಭಾಗವಾಗಿ ಮೊದಲು ಹರಿದ್ವಾರಕ್ಕೆ ಭೇಟಿ ನೀಡಿತು. ಹರ್ ಕೀ ಪೌಡಿ ಘಾಟ್‌ನಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ನಿಯೋಗ ಭಾಗಿಯಾಯಿತು. ಸಚಿವ ಚಲುವರಾಯಸ್ವಾಮಿ ಆದಿಯಾಗಿ ಎಲ್ಲ ಸದಸ್ಯರು ವಿಶೇಷ ಆರತಿ ಮಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ ಆರತಿ ನಡೆಯುವ ರೀತಿ ರಿವಾಜುಗಳನ್ನು ಪರಿಶೀಲಿಸಿದರು.ಇದನ್ನೂ ಓದಿ: ‘ದಳಪತಿ 69’ ಅಸಲಿ ಸ್ಟೋರಿ ರಿವೀಲ್- ಕಮಲ್ ಹಾಸನ್‌ಗೆ ಹೇಳಿದ್ದ ಕಥೆಯಲ್ಲಿ ವಿಜಯ್?

    ಬಳಿಕ ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಆಡಳಿತ ಸಮಿತಿ ಜೊತೆಗೆ ಮಾತುಕತೆ ನಡೆಸಿದ ನಿಯೋಗ ಕರ್ನಾಟಕ ಸರ್ಕಾರದ ಪ್ರಸ್ತಾವನೆ ಬಗ್ಗೆ ತಿಳಿಸಿದರು. ಇದಕ್ಕೆ ಖುಷಿ ವ್ಯಕ್ತಪಡಿಸಿದ ಆಡಳಿತ ಸಮಿತಿ ಕಾರ್ಯದರ್ಶಿ ತನ್ಮಯ ವಶಿಷ್ಠ, ಗಂಗಾರತಿ ರೀತಿಯಲ್ಲಿ ಕಾವೇರಿ ಆರತಿ ಮಾಡುವುದು ಖುಷಿಯ ಸಂಗತಿ ಎಂದರು.

    ಗಂಗಾರತಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಗಂಗಾನದಿಯಂತೆ ಕಾವೇರಿ ನದಿ ಕೂಡಾ ಜೀವ ನದಿಯಾಗಿದೆ. ಅದಕ್ಕಾಗಿ ಇಲ್ಲಿಯೂ ಆರತಿ ಮಾಡಲು ನಿರ್ಧರಿಸಿದ್ದು, ಡಿಸಿಎಂ ಶಿ.ಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಈ ಬಗ್ಗೆ ನಮ್ಮ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಅಧ್ಯಯನಕ್ಕೆ ಬಂದಿದ್ದೇವೆ. ಸಾಧ್ಯವಾದಷ್ಟು ಬೇಗ ಆರತಿ ಶುರು ಮಾಡಬೇಕು ಅಂದುಕೊಂಡಿದ್ದು, ದಸರಾದೊಳಗೆ ನಾವು ಶುರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಒಮ್ಮೆ ಆರತಿಯನ್ನು ಶುರು ಮಾಡಿದರೆ ನಿಲ್ಲಿಸುವ ಮಾತಿಲ್ಲ ಎಂದಿದ್ದಾರೆ.

    ಇನ್ನು ಸಮಿತಿಯೂ ಶನಿವಾರ ವಾರಣಾಸಿಗೆ ತೆರಳಲಿದ್ದು, ಅಲ್ಲೂ ಗಂಗಾರತಿಯನ್ನು ನೋಡಿಕೊಂಡು ಬೆಂಗಳೂರಿಗೆ (Bengaluru) ವಾಪಸ್ ಬರಲಿದ್ದಾರೆ. ಬಳಿಕ ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಿದೆ.ಇದನ್ನೂ ಓದಿ: ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

  • ಬ್ರಿಜ್ ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟಕ್ಕೆ ಬಿಜೆಪಿ ಸಂಸದೆ ಬೆಂಬಲ

    ಬ್ರಿಜ್ ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟಕ್ಕೆ ಬಿಜೆಪಿ ಸಂಸದೆ ಬೆಂಬಲ

    ನವದೆಹಲಿ: ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಕುಸ್ತಿಪಟುಗಳ (Wrestlers) ಹೋರಾಟಕ್ಕೆ ಮಹಾರಾಷ್ಟ್ರ (Maharashtra) ಬಿಜೆಪಿ ಸಂಸದೆ ಪ್ರೀತಮ್ ಮುಂಡೆ (Pritam Munde) ಬೆಂಬಲ ಸೂಚಿಸಿದ್ದಾರೆ.

    ದೂರಿನ ಪರಿಶೀಲನೆಯ ನಂತರ ಅಧಿಕಾರಿಗಳು ಇದು ಸರಿಯಾಗಿದೆಯೇ? ಇಲ್ಲವೆ ಎಂಬುದನ್ನು ನಿರ್ಧರಿಸಬೇಕು. ನಾನು ಈ ಸರ್ಕಾರದ ಭಾಗವಾಗಿದ್ದೇನೆ. ಆದರೂ ಕುಸ್ತಿಪಟುಗಳೊಂದಿಗೆ ಸರ್ಕಾರ ಸಂವಹನ ನಡೆಸಬೇಕಾದ ರೀತಿಯಲ್ಲಿ ನಡೆದುಕೊಂಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಯಾರೇ ದೂರು ನೀಡಿದರೂ ಕ್ರಮ ತೆಗೆದುಕೊಳ್ಳಬೇಕು. ಪ್ರಸ್ತುತ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರೀತಮ್ ಮುಂಡೆ ಹೇಳಿದ್ದಾರೆ. ಇದನ್ನೂ ಓದಿ: 180 ದಿನಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಿಗೆ ಯುವ ನಿಧಿ

    ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಬಿಜೆಪಿ ಮೌನ ವಹಿಸಿದೆ. ಇದರ ನಡವೆ ಪ್ರೀತಮ್ ಮುಂಡೆ ಹಾಗೂ ಹರಿಯಾಣದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಪ್ರತಿಭಟನಕಾರರ ಪರ ದ್ವನಿ ಎತ್ತಿದ್ದಾರೆ.

    ಇತ್ತೀಚೆಗೆ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ (Ganga River) ಎಸೆಯುವುದಾಗಿ ಘೋಷಿಸಿದ್ದರು. ಈ ವೇಳೆ ಹರಿಯಾಣದ (Haryana) ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಪ್ರತಿಭಟನೆ ಹೃದಯವಿದ್ರಾವಕವಾಗಿದೆ ಎಂದು ಹೇಳಿದ್ದರು. ರೈತ ಸಂಘದ ಮುಖಂಡ ನರೇಶ್ ಟಿಕಾಯತ್ ಅವರು ಎಸೆಯದಂತೆ ತಡೆದಿದ್ದರು.

    ನಮ್ಮ ಕುಸ್ತಿಪಟುಗಳ ನೋವು ಮತ್ತು ಅಸಹಾಯಕತೆಯ ನೊವಿನಲ್ಲಿ ನಾನು ಭಾಗಿಯಾಗುತ್ತೇನೆ. ಅವರ ಜೀವಮಾನದ ಕಠಿಣ ಪರಿಶ್ರಮವನ್ನು ನದಿಗೆ ಎಸೆಯುವ ಅಂಚಿಗೆ ಅವರು ತಲುಪಿದ್ದಾರೆ. ಇದು ಹೃದಯ ಹಿಂಡುವ ಘಟನೆಯಾಗಿ ಕಾಣುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದರು.

    ಪ್ರತಿಭಟನಾ ಮೆರವಣಿಗೆಯಲ್ಲಿ ಭಾರತೀಯ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ನಡೆಸಿಕೊಂಡ ರೀತಿ ಗೊಂದಲಕ್ಕೆ ಕಾರಣವಾಗಿದೆ. ಕುಸ್ತಿಪಟುಗಳ ಆರೋಪಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಹೇಳಿದೆ.

    ತನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುವುದಾಗಿ ಬ್ರಿಜ್ ಭೂಷಣ್ ಸಿಂಗ್ ಇತ್ತೀಚೆಗೆ ಹೇಳಿದ್ದಾರೆ. ಇದನ್ನೂ ಓದಿ: ಲಗೇಜ್‍ಗೆ ಹೆಚ್ಚುವರಿ ಹಣ ಪಾವತಿಸಿ ಎಂದಿದ್ದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಅಂತ ಏರ್‌ಪೋರ್ಟ್‌ನಲ್ಲಿ ಮಹಿಳೆ ಡ್ರಾಮಾ

  • ಪವಿತ್ರ ಗಂಗಾನದಿಯಲ್ಲಿ ಮೋಜು ಮಸ್ತಿ – ಹುಕ್ಕಾ ಸೇವಿಸಿ, ಚಿಕನ್‌ ಅಡುಗೆ ಮಾಡಿದ ಯುವಕರು

    ಪವಿತ್ರ ಗಂಗಾನದಿಯಲ್ಲಿ ಮೋಜು ಮಸ್ತಿ – ಹುಕ್ಕಾ ಸೇವಿಸಿ, ಚಿಕನ್‌ ಅಡುಗೆ ಮಾಡಿದ ಯುವಕರು

    ಲಕ್ನೋ: ಗಂಗಾ ನದಿಯ ಮಧ್ಯದಲ್ಲಿ ದೋಣಿ ಮೂಲಕ ಪ್ರಯಾಣಿಸುತ್ತಿದ್ದ ಕೆಲ ಯವಕರು ಹುಕ್ಕಾ ಪೈಪ್ ಉಪಯೋಗಿಸಿ ಧೂಮಪಾನ ಹಾಗೂ ಚಿಕನ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ದಾರಗಂಜ್‌ನಲ್ಲಿರುವ ನಾಗವಾಸುಕಿ ಮಂದಿರದ ಸಮೀಪ ನಡೆದಿದೆ. ಹಿಂದೂಗಳ ಪ್ರಮುಖ ಯಾತ್ರಾ ಕೇಂದ್ರದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

    ಘಟನೆಗೆ ಸಂಬಂಧಿಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಬೋಟ್‌ನಲ್ಲಿ ಮೋಜು ಮಸ್ತಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಅಂಡರ್ ಪಾಸ್‍ನಲ್ಲಿ ಸಿಲುಕಿದ ಕಾಲೇಜ್ ಬಸ್- ವಿದ್ಯಾರ್ಥಿಗಳ ರಕ್ಷಣೆ

    POLICE JEEP

    ಕಳೆದ ವಾರ ಗಂಗಾ ಮತ್ತು ಯಮುನಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಪ್ರಯಾಗರಾಜ್‌ನ ಹಲವಾರು ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದವು. ರಾಜಾಪುರ, ಬಘರಾ, ದಾರಗಂಜ್ ಮತ್ತು ಇತರ ಹಲವಾರು ಸ್ಥಳಗಳಲ್ಲಿ ತಗ್ಗು ಪ್ರದೇಶದ ಕಾಲೋನಿಗಳಲ್ಲಿ ನೀರು ಸಂಗ್ರಹವಾಗಿದೆ. ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಆಡಳಿತವು ದೋಣಿ ವಿಹಾರಕ್ಕೆ ನಿರ್ಬಂಧಗಳನ್ನು ವಿಧಿಸಿದೆ. ಇದನ್ನೂ ಓದಿ: ಸಿದ್ದು ವಿರುದ್ಧ ಶ್ರೀರಾಮುಲು ವಾಗ್ದಾಳಿ- ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್

    Live Tv
    [brid partner=56869869 player=32851 video=960834 autoplay=true]

  • `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    ಲಕ್ನೋ: ಹಿಂದೂಗಳ ಪುಣ್ಯಭೂಮಿಯಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರ ಜೀರ್ಣೋದ್ಧಾರವಾಗಿದೆ. ಸ್ವಕ್ಷೇತ್ರವೂ ಆಗಿರುವ ವಾರಾಣಸಿಯ ಗಂಗಾತಟದ ಮೇಲಿನ ಕಾಶಿ ವಿಶ್ವನಾಥ ಕಾರಿಡಾರನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಸುಮಾರು 800 ಕೋಟಿ ವೆಚ್ಚದ `ಕಾಶಿ ವಿಶ್ವನಾಥ ಧಾಮ್’ ಯೋಜನೆಗೆ ಮೊದಲ ಹಂತದಲ್ಲಿ ದೇಗುಲ ಪುನಃಶ್ಚೇತನಕ್ಕೆ 339 ಕೋಟಿ ಖರ್ಚಾಗಿದೆ.

    2019ರ ಮಾರ್ಚ್ 8 ರಂದು `ದಿವ್ಯ ಕಾಶಿ; ಭವ್ಯ ಕಾಶಿ’ ಹೆಸರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ ಕಾಲಕಾಲಕ್ಕೆ ಯೋಜನೆ ಸಂಪೂರ್ಣ ಪ್ರಗತಿಯ ಮಾಹಿತಿ ಪಡೆದು, ಖುದ್ದು ಪರಿಶೀಲಿಸ್ತಿದ್ದರು. ಕಿಷ್ಕಿಂದೆಯಂತಿದ್ದ ಕಾಶಿಯಲ್ಲಿ ಗತಕಾಲದ ವೈಭವ ಮರುಕಳಿಸಿದೆ. ಪಾರಂಪರಿಕತೆಯನ್ನು ಕಾಪಾಡಿಕೊಂಡೇ ವಿಶ್ವನಾಥನ ಸನ್ನಿಧಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಯೋಜನೆಯ ಎರಡನೇ ಹಂತದಲ್ಲಿ ಗಂಗಾ ನದಿ ತೀರ ಸಮಗ್ರ ಅಭಿವೃದ್ಧಿಯಾಗಲಿದೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಬನಾರಸ್‍ನಲ್ಲಿ ಪ್ರಧಾನಿ ಮೋದಿ:
    ಕೊರೊನಾದಿಂದಾಗಿ ಹಲವು ತಿಂಗಳ ಬಳಿಕ ಬೆಳಗ್ಗೆ 11 ಗಂಟೆಗೆ ವಾರಾಣಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು. ಬಳಿಕ ಏರ್‍ಪೋರ್ಟ್‍ನಿಂದ ಕಾರಿನ ಮೂಲಕ ತೆರಳುವಾಗ ಕಾರ್ಯಕರ್ತರು ಗುಲಾಬಿ ಹೂವಿನ ಮಳೆ ಸುರಿಸಿದರು. ದಾರಿ ಮಧ್ಯೆ ಕಾರಿನಲ್ಲಿ ಕೂತಿದ್ದ ಮೋದಿಗೆ ಸ್ವಾಮೀಜಿಯೊಬ್ಬರು ಪೇಟ ತೊಡಿಸಿ, ಕೇಸರಿ ಶಾಲು ಹೊದಿಸಿದರು. ಮೋದಿ ಅವರು ಹಸನ್ಮುಖಿಯಾಗಿ ಸ್ವೀಕರಿಸಿದರು. ಈ ವೇಳೆ, ಮೋದಿ.. ಮೋದಿ.. ಹರಹರ ಮಹಾದೇವ್ ಅನ್ನೋ ಘೋಷಣೆ ಮುಗಿಲು ಮುಟ್ಟಿತ್ತು.

    ಕಾಲಭೈರವೇಶ್ವರನಿಗೆ ಪೂಜೆ:
    ನರೇಂದ್ರ ಮೋದಿ ಮೊದಲಿಗೆ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಾಲಭೈರವೇಶ್ವರನಿಗೆ ಶಿರಬಾಗಿ ನಮಿಸಿದರು. ಬಳಿಕ ಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ, ದೇಗುಲ ಪ್ರದಕ್ಷಿಣೆ ಹಾಕಿದರು. ಬಳಿಕ 11.30ರ ಸುಮಾರಿಗೆ ದೇಗುಲದಿಂದ ಹೊರಗೆ ಬರುತ್ತಿದ್ದಂತೆ ಜನರತ್ತ ಕೈ ಬೀಸಿದ್ರು. ನೆರೆದಿದ್ದ ಜನಸ್ತೋಮ ಮೋದಿ ಮೋದಿ ಅಂತ ಘೋಷ ಮೊಳಗಿಸಿತು.

    ಕಾಶಿ ವೀಕ್ಷಣೆ:
    ಖಿರಕಿಯ ಘಾಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಂದ ಅಲ್ಕಾನಂದ ಡಬಲ್ ಡೆಕ್ಕರ್ ಕ್ರೂಸ್‍ನಲ್ಲಿ ವಿಹಾರ ಮಾಡುತ್ತಾ ಲಲಿತ್ ಘಾಟ್‍ಗೆ ಆಗಮಿಸಿದ್ದರು. ರುದ್ರಾಕ್ಷಿ ಹಾರ ಧರಿಸಿದ್ದ ಮೋದಿ, ಪುನಃಶ್ಚೇತನಗೊಂಡ ಕಾಶಿ ವೀಕ್ಷಿಸಿದ್ರು. ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ರು. ಈ ವೇಳೆ, ಇಬ್ಬರೂ ಪರಸ್ಪರ ವಿಷಯ ವಿನಿಮಯ ಮಾಡಿಕೊಂಡರು.

    ಗಂಗಾ ಪುಣ್ಯಸ್ನಾನ:
    ಮಧ್ಯಾಹ್ನ 12:15ರ ಸುಮಾರಿಗೆ ಬಳಿಕ ಲಲಿತ್ ಘಾಟ್‍ಗೆ ಬಂದಿಳಿದ ಮೋದಿ, ಕಾವಿ ಬಟ್ಟೆ ತೊಟ್ಟು ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದರು. ರುದ್ರಾಕ್ಷಿ ಮಾಲೆ ಹಿಡಿದು ಜಪಿಸುತ್ತಾ ಗಂಗೆಗೆ ಅಘ್ರ್ಯ, ಗುಲಾಬಿ ಎಸಳುಗಳನ್ನು ಅರ್ಪಿಸಿದರು. ತಾಯಿ ಗಂಗೆಯ ಸ್ಪರ್ಶದಿಂದ ಕೃತಾರ್ಥನಾದೆ. ವಿಶ್ವನಾಥನ ಧಾಮಕ್ಕಾಗಿ ಆಶೀರ್ವದಿಸಿ ಭಾವ ಮೂಡಿತು ಅಂತ ಟ್ವೀಟ್ ಕೂಡ ಮಾಡಿದ್ದರು. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ವಿಶ್ವನಾಥನಿಗೆ ಪೂಜೆ:
    ಪವಿತ್ರ ಸ್ನಾನದ ಬಳಿಕ ಮುಖ್ಯ ದೇಗುಲದ ಬಣ್ಣ ಇರೋ ಬಂಗಾರ ವರ್ಣದ ಉಡುಗೆ ಧರಿಸಿ, ಗಂಗೆಯಿಂದ ನೇರವಾಗಿ ಗೋಚರಿಸುವ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದರು. ಪುರೋಹಿತರು ತಿಲಕವಿಟ್ಟು ಸ್ವಾಗತಿಸಿದರು. ವಿಶ್ವನಾಥನಿಗೆ ಅರಶಿನ, ಹಾಲಿನ ಅಭಿಷೇಕ ಮಾಡಿದ್ರು. ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ, ಪೂಜೆ ಸಲ್ಲಿಸಿ, ಮಂತ್ರ ಪಠಣದೊಂದಿಗೆ ವಿಶೇಷ ಆರತಿ ಬೆಳಗಿದರು.

    ಕಾರಿಡಾರ್ ಇನಾಗ್ರೇಷನ್:
    ಕಾಶಿ ವಿಶ್ವನಾಥ್ ಧಾಮ್‍ನ ಮೊದಲ ಹಂತದ 339 ಕೋಟಿ ಮೊತ್ತದ ಕಾರಿಡಾರ್ ಉದ್ಘಾಟಿಸಿದ ಮೋದಿ, ಕಾಶಿ ನೆಲದ ಮಹತ್ವ ವಿವರಿಸಿದರು. ಕಾಶಿ ಅಂದರೆ ಅವಿನಾಶಿನಿ. ಕಾಶಿ ನಮ್ಮ ಸಂಸ್ಕೃತಿಯ ಧ್ಯೋತಕ. ಕಾಶಿ ಎಂದರೆ ಭಾವುಕನಾಗುತ್ತೇನೆ. ಇಲ್ಲಿ ದೈವಿಕ ವಾತಾವರಣ ಇದೆ. ಕಾಶಿ ಎಂದರೆ ಇಲ್ಲಿ ಮೃತ್ಯು ಕೂಡ ಮಂಗಳವೇ. ಕಾಶಿಯಲ್ಲಿ ಸತ್ಯವೇ ಸಂಸ್ಕಾರ. ಕಾಶಿಯಲ್ಲಿ ಪ್ರೇಮವೇ ಪರಂಪರೆ. ಇಲ್ಲಿ ಇರೋದು ಒಂದೇ ಸರ್ಕಾರ. ಅದು ಶಿವನ ಸರ್ಕಾರ. ಇಲ್ಲಿ ಯಾರೇ ಬರಬೇಕು ಅಂದರೂ ಶಿವನ ಅನುಗ್ರಹ ಇರಬೇಕು. ಅಂಥದ್ದೊಂದು ಪುಣ್ಯಭೂಮಿಯಲ್ಲಿ ಇಂಥಹ ಕಾರ್ಯ ಮಾಡುವ ಅವಕಾಶ ನಮ್ಮ ಸರ್ಕಾರಕ್ಕೆ ಸಿಕ್ಕಿರೋದು ನಮ್ಮ ಪುಣ್ಯ ಅಂದ್ರು. ನಮ್ಮ ಸಂಸ್ಕøತಿ, ಪರಂಪರೆ ಮೇಲೆ ಔರಂಗಜೇಬ್ ಎಂಬ ತೀವ್ರಗಾಮಿ ಆಕ್ರಮಣ ಮಾಡಿದ್ದ, ಅದೇ ಸಮಯಕ್ಕೆ ಶಿವಾಜಿಯ ಹುಟ್ಟೂ ಆಗಿತ್ತು ಅಂದ್ರು. ಕಾಶಿ ಕಾರಿಡಾರ್ ಲೋಕಾರ್ಪಣೆ ನೆನಪಿಗೆ ಗಿಡ ನೆಡಲಾಯಿತು. ಉತ್ತರ ಪ್ರದೇಶ ಸರ್ಕಾರ ನೂತನ ಕಾಶಿಯ ವಾಸ್ತುಶಿಲ್ಪ ರಚನೆಯನ್ನಿತ್ತು ಸನ್ಮಾನಿಸಿದ್ರು. ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೋಗೆ ಪ್ರಶ್ನೆ ಯಾಕೆ? ಹೆಮ್ಮೆ ಪಡಿ – ಕೇರಳ ಹೈಕೋರ್ಟ್

    ಕಾರಿಡಾರ್ ಉದ್ಘಾಟನೆ, ಭಾಷಣ ಬಳಿಕ ಅಲ್ಲಿಯೇ ಮುಂದಿನ ಸಾಲಿನಲ್ಲಿ ಕೂತಿದ್ದ, ಕಾಶಿ ವಿಶ್ವನಾಥ್ ಧಾಮ್ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಕಾರ್ಮಿಕರು, ಎಂಜಿನಿಯರ್‍ಗಳು ಸೇರಿದಂತೆ ಕೆಲಸ ಮಾಡಿದವರ ಮೇಲೆ ಹೂ ಸುರಿದು ಗೌರವ ಸಲ್ಲಿಸಿದರು. ನಂತರ ಪೌರ ಕಾರ್ಮಿಕರ ಜೊತೆಗೆ ಫೋಟೋಗೆ ಪೋಸ್ ಕೊಟ್ಟರು. ತದನಂತರ ಪೌರ ಕಾರ್ಮಿಕರ ಜೊತೆ ಸಹಪಂಕ್ತಿಯಲ್ಲಿ ಮಧ್ಯಾಹ್ನದ ಭೋಜನ ಸವಿದರು. ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದರು. ಕೆಲ ಸಮಯದ ಬಳಿಕ ಮೊದಲ ಹಂತದ ಕಾರಿಡಾರ್ ಯೋಜನೆಯನ್ನು ಪರಿಶೀಲಿಸಿದರು. ಯೋಗಿ ಆದಿತ್ಯನಾಥ್ ಕೆಲವು ಮಾಹಿತಿ ಹಂಚಿಕೊಂಡರು. ಅಲ್ಲಿಂದ ತಮ್ಮ ದೋಣಿ ವಿಹಾರ ಮುಂದುವರಿಸಿ, ಲಲಿತ್ ಘಾಟ್‍ನಿಂದ ರವಿದಾಸ್ ಘಾಟ್‍ಗೆ ತೆರಳಿದರು. ಘಾಟ್‍ಗಳಲ್ಲಿ ನಿಂತಿದ್ದ ಜನರತ್ತ ಕೈ ಬೀಸಿದರು. ಇಷ್ಟೊತ್ತಿಗೆ ಸಂಜೆ 4 ಗಂಟೆ ಆಗಿತ್ತು.

    ಗಂಗಾರತಿಯಲ್ಲಿ ಭಾಗಿ:
    ನಂತರ 6 ಗಂಟೆ ಸುಮಾರಿಗೆ ಗಂಗಾರತಿ ಮಾಡಿ ಮೋದಿ ಭಕ್ತಿ ಪರವಶರಾದರು. ಇದನ್ನೂ ಓದಿ: ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು: ಮೋದಿ

    ಕಾರಿಡಾರ್ ವಿಶೇಷತೆ ಏನು?:
    `ದಿವ್ಯ ಕಾಶಿ, ಭವ್ಯ ಕಾಶಿ’ 5 ಲಕ್ಷ ಚದರ ಅಡಿ ಪ್ರದೇಶಕ್ಕೆ ದೇಗುಲ ಸಂಕಿರ್ಣ ವಿಸ್ತರಣೆ. ಈ ಹಿಂದೆ 3 ಸಾವಿರ ಚದರ ಅಡಿಯಲ್ಲಿ ದೇಗುಲ ಕಿಷ್ಕಿಂದೆಯಂತಿತ್ತು. ಕಾಶಿ ವಿಶ್ವನಾಥ ದೇಗುಲಕ್ಕೂ ಗಂಗಾನದಿಗೂ ನೇರ ಸಂಪರ್ಕ ಕಲ್ಪಿಸಲಾಗಿದೆ. ಗಂಗಾ ನದಿಯಲ್ಲಿ ಮಿಂದು ನೇರ ವಿಶ್ವನಾಥನ ದರ್ಶನಕ್ಕೆ ಅನುಕೂಲ. ವಿಶೇಷ ಚೇತನರು, ಹಿರಿಯ ನಾಗರಿಕರ ಅನುಕೂಲಕ್ಕೆ ಎಸ್ಕಲೇಟರ್ ವ್ಯವಸ್ಥೆ. ಭಕ್ತರು, ಯಾತ್ರಿಗಳ ಅನುಕೂಲಕ್ಕಾಗಿ 23 ಕಟ್ಟಡಗಳ ನಿರ್ಮಾಣ. ಮಂದಿರ ಸುತ್ತಲಿನ 300 ಕಟ್ಟಡಗಳ ಕಾನೂನುಬದ್ಧ ಸ್ವಾಧೀನ, ನೆಲಸಮ. 1400ಕ್ಕೂ ಹೆಚ್ಚು ವರ್ತಕರು, ಬಾಡಿಗೆದಾರರು, ಮಾಲೀಕರ ಮನವೊಲಿಕೆ ಮಾಡಿ 40ಕ್ಕೂ ಹೆಚ್ಚು ಪುರಾತನ ಸಣ್ಣ ದೇಗುಲಗಳು ಪತ್ತೆಯಾಗಿತ್ತು ಅದನ್ನು ನವೀಕರಣ ಮಾಡಲಾಗಿದ್ದು, ವಾಸ್ತು ಶಿಲ್ಪಿ ಬಿಮಲ್ ಪಟೇಲ್ ಕಾರಿಡಾರ್‍ನ ರೂವಾರಿ.

    ಇಂದು ಏನೇನು ಉದ್ಘಾಟನೆಯಾಗಿದೆ?
    – ಬೃಹತ್ ಆವರಣ, ವಾರಾಣಸಿ ಸಿಟಿ ವೀಕ್ಷಣಾ ಗ್ಯಾಲರಿ
    – ಮ್ಯೂಸಿಯಂ, ವಿವಿಧೋದ್ದೇಶದ ಆಡಿಟೋರಿಯಮ್‍ಗಳು
    – ಸಭಾಂಗಣ, ಭಕ್ತರ ಸೌಲಭ್ಯ ಕೇಂದ್ರ
    – ಅರ್ಚಕರು, ಸೇವಾದಾರರಿಗೆ ಆಶ್ರಯ
    – ಏಕಕಾಲಕ್ಕೆ 1 ಲಕ್ಷ ಭಕ್ತರ ಮಹಾಸಂಗಮಕ್ಕೆ ಅವಕಾಶ
    – ಇದಕ್ಕಾಗಿ 7 ಸಾವಿರ ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳು
    – ವೈದಿಕ- ಧಾರ್ಮಿಕ ಗ್ರಂಥಾಲಯ
    – ಊಟ, ಉಪಾಹಾರ ಕೇಂದ್ರ
    – ಕಟ್ಟಡಗಳ ಗೋಡೆಗಳಲ್ಲಿ ಶ್ಲೋಕ, ಸ್ತೋತ್ರ ಕೆತ್ತನೆ
    – ಹಿಂದೊಮ್ಮೆ ದೇಗುಲ ಮರುಸ್ಥಾಪನೆಗೊಳಿಸಿದ್ದ ಮರಾಠ ರಾಣಿ ಅಭಿಲ್ಯಾಭಾಯ್ ಹೋಳ್ಕರ್ ಪ್ರತಿಮೆ ಉದ್ಘಾಟನೆ ಮಾಡಲಾಯಿತು.

    ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆಯನ್ನು ದೇಶಾದ್ಯಂತ 51 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಬೃಹತ್ ಎಲ್‍ಇಡಿ ಪರದೆಗಳಲ್ಲಿ ನೇರ ಪ್ರಸಾರದ ಮೂಲಕ ಜನ ಕಣ್ತುಂಬಿಕೊಂಡರು.

  • 5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿಯಿತು!

    5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿಯಿತು!

    (ಸಾಂದರ್ಭಿಕ ಚಿತ್ರ)

    ಆಗ್ರಾ: 5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿದಿರುವ ಘಟನೆ ಉತ್ತರ ಪ್ರದೇಶದ ಆಗ್ರ ಸಮೀಪದ ಝಾಂಡಿ ಕಿ ಮಾಡಿಯಾ ಹಳ್ಳಿಯಲ್ಲಿ ನಡೆದಿದೆ.

    ಬೆಂಕಿ ಕಡ್ಡಿಗಳ ಜೊತೆ ಆಟವಾಡುತ್ತಿದ್ದ ಬಾಲಕ ಕಡ್ಡಿಯನ್ನು ಹೊತ್ತಿಸಿ ತಮ್ಮ ಗುಡಿಸಿಲಿನ ಮೇಲೆ ಅಚಾನಕ್ ಆಗಿ ಹಾಕಿದ್ದಾನೆ. ಗುಡಿಸಿಲಿಗೆ ಬೆಂಕಿ ಹೊತ್ತಿಕೊಂಡು ಸುತ್ತ ಇರುವ ಗುಡಿಸಿಲುಗಳಿಗೂ ಪಸರಿಸಿದೆ. ಇದರಿಂದಾಗಿ ಎಲ್ಲಾ 60 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ.

    ಅಮ್ರಿತ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಗಂಗಾ ನದಿಯ ಬಳಿ ಹಳ್ಳಿ ಇದೆ. ಹಳ್ಳಿಗೆ ಸಂಪರ್ಕ ಸಾಧಿಸಲು ಕಷ್ಟವಿರುವುದರಿಂದ ಸ್ಥಳಕ್ಕೆ ಒಂದು ಅಗ್ನಿಶಾಮಕ ವಾಹನ ತಲುಪಲು ಸಾಧ್ಯವಾಗಿದೆ. ಕೇವಲ ಒಂದು ಅಗ್ನಿಶಾಮಕ ವಾಹನ ಬೆಂಕಿಯನ್ನು ಆರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರಿಂದ ಸಂಪೂರ್ಣ 60 ಗುಡಿಸಲುಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ಘಟನೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ನಂದಿಸಲು ಅಗ್ನಿಶಾಮಕ ದಳದವರು ಸುಮಾರು 2 ಗಂಟೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಜಿಲ್ಲಾಧಿಕಾರಿ ಮೋನಿಕಾ ರಾಣಿ, ತಹಶೀಲ್ದಾರ್ ರಾಜೀವ್ ನಿಗಮ್, ಎಸ್ ಹೆಚ್ ಒ ರಾಮ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಬಗ್ಗೆ ಭರವಸೆ ನೀಡಿದ್ದಾರೆ.

    ಬೆಂಕಿ ಸಂಪೂರ್ಣ ಹಳ್ಳಿಯನ್ನು ಆಹುತಿ ತೆಗೆದುಕೊಂಡಿದೆ. ಮನೆಗಳನ್ನು ಹುಲ್ಲು ಮತ್ತು ಪ್ಲಾಸ್ಟಿಕ್ ಗಳಿಂದ ಕಟ್ಟಲಾಗಿತ್ತು. ಹತ್ತಿರದಲ್ಲೇ ಇರುವ ಸರ್ಕಾರಿ ಶಾಲೆಗೆ ಎಲ್ಲರನ್ನೂ ಸ್ಥಳಾಂತರಿಸಲಾಗಿದ್ದು ನೀರು ಮತ್ತು ಆಹಾರವನ್ನು ಒದಗಿಸಲಾಗಿದೆ ಎಂದು ರಾಮ್ ಪ್ರಕಾಶ್ ಹೇಳಿದ್ದಾರೆ.

    ಬಾಲಕನ ಅಚಾತುರ್ಯದಿಂದ ಬೆಂಕಿ ಹತ್ತಿಕೊಂಡಿದೆ. ಘಟನೆ ನಡೆದಾಗ ಮನೆಯಲ್ಲಿ ತಂದೆ ತಾಯಿ ಇಬ್ಬರೂ ಇರಲಿಲ್ಲ. ಹಾಗಾಗಿ ಬಾಲಕನ ಇಲ್ಲ ಪೋಷಕರ ವಿರುದ್ಧ ದೂರ ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದರು.