Tag: gang

  • ಪುಡಿಗಾಸಿಗಾಗಿ ಬಡಪಾಯಿ ಜೀವ ತೆಗೆದ ಪಾಪಿಗಳು- ಕೊಲೆಯಾದವನ ಬಳಿ ಸಿಕ್ಕಿದ್ದು ಕೇವಲ 150 ರೂ.

    ಪುಡಿಗಾಸಿಗಾಗಿ ಬಡಪಾಯಿ ಜೀವ ತೆಗೆದ ಪಾಪಿಗಳು- ಕೊಲೆಯಾದವನ ಬಳಿ ಸಿಕ್ಕಿದ್ದು ಕೇವಲ 150 ರೂ.

    ಬೆಂಗಳೂರು: ಅದೊಂದು ಖತಾರ್ನಾಕ್ ಗ್ಯಾಂಗ್. ದುಡ್ಡು ಸಿಗುತ್ತೆ ಎಂದರೆ ಯಾರಿಗೆ ಬೇಕಾದರೂ ಚಾಕು ಹಾಕುತ್ತಿದ್ರು. ಅದೇ ರೀತಿ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಂದ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

    ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿನ ಕಮ್ಮನಹಳ್ಳಿ ಜಂಕ್ಷನ್ ನಲ್ಲಿ ತಡರಾತ್ರಿ ಗ್ಯಾಂಗ್ ವೊಂದು ದರೋಡೆಗೆ ಕಾದು ಕುಳಿತಿತ್ತು. ಅದೇ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಅಸ್ಸಾಂ ಮೂಲದ ಸಂಜಯ್ ಮನ್ಸೂರ್ ಮೇಲೆ ಆ ಗ್ಯಾಂಗ್ ದಾಳಿ ಮಾಡಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ ಸಂಜಯ್ ಗೆ ಚಾಕು ಇರಿದು ಕೊಂದುಬಿಟ್ಟರು.

    ಸಂಜಯ್ ಗೆ ಚಾಕು ಇರಿದು ಕೊಂದ ಗ್ಯಾಂಗ್ ಗೆ ಸಿಕ್ಕಿದ್ದು ಕೇವಲ 150 ರೂಪಾಯಿ. ಇದೇ ವೇಳೆ ಆ ರಸ್ತೆಯಲ್ಲಿ ಬಂದ ಟೆಕ್ಕಿಯೊಬ್ಬರಿಂದಲೂ ಹಣ ದೋಚಿ ಪರಾರಿಯಾಗಿದ್ದ ಈ ತಂಡವನ್ನ 4 ತಿಂಗಳ ಬಳಿಕ ಬಾಣಸವಾಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಈ ಗ್ಯಾಂಗ್ ನಗರದಲ್ಲಿ 20ಕ್ಕೂ ಹೆಚ್ಚು ದರೋಡೆ ಮಾಡಿರೋದು ಬೆಳಕಿಗೆ ಬಂದಿದೆ.

  • ಜಸ್ಟ್ 10 ರೂ. ಖರ್ಚು ಮಾಡಿ, ಲಕ್ಷ ಲಕ್ಷ ಹಣ ದೋಚುತ್ತಿದ್ದವರು ಅರೆಸ್ಟ್!

    ಜಸ್ಟ್ 10 ರೂ. ಖರ್ಚು ಮಾಡಿ, ಲಕ್ಷ ಲಕ್ಷ ಹಣ ದೋಚುತ್ತಿದ್ದವರು ಅರೆಸ್ಟ್!

    ಚಿಕ್ಕಬಳ್ಳಾಪುರ: ಬ್ಯಾಂಕುಗಳಿಂದ ಭಾರೀ ಮೊತ್ತದ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಅವರ ಗಮನ ಬೇರೆ ಕಡೆಗೆ ಸೆಳೆದು ಕ್ಷಣ ಮಾತ್ರದಲ್ಲಿ ಲಕ್ಷ ಲಕ್ಷ ಎಗರಿಸುತ್ತಿದ್ದ ಖತರ್ನಾಕ್ ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓಜಿಕುಪ್ಪಂ ಗ್ರಾಮದ ರಮಣ ಹಾಗೂ ಸತೀಶ್ ಬಂಧಿತರು. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಹೀಗಿತ್ತು ಇವರ ಕೃತ್ಯ:
    ಬಂಧಿತ ಕಳ್ಳರು ಕೆಳಗೆ 10 ರೂ. ಹಾಗೂ 100 ರೂಪಾಯಿ ನೋಟು ಬಿಸಾಡಿ ನಂತರ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಗ್ರಾಹಕರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದರು. ಈ ವೇಳೆ ಬೈಕ್ ಹಾಗೂ ಕಾರುಗಳಲ್ಲಿ ಇಟ್ಟಿರುತ್ತಿದ್ದ ಲಕ್ಷಾಂತರ ರೂ. ಹಣವನ್ನು ಎಗರಿಸುತ್ತಿದ್ದರು. ಅಷ್ಟೇ ಅಲ್ಲದೇ ಬೈಕ್ ಹಾಗೂ ಕಾರುಗಳನ್ನು ಫಾಲೋ ಮಾಡಿ ಸಾರ್ವಜನಿಕರನ್ನು ಯಾಮಾರಿಸಿ ಅದರಲ್ಲಿರುತ್ತಿದ್ದ ಹಣವನ್ನು ಎಗರಿಸುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಚಿಕ್ಕಬಳ್ಳಾಪುರದ ಹಾರೋಬಂಡೆ ಬಳಿ ಹೊಂಡಾ ಆ್ಯಕ್ಟಿವಾದ ಡಿಕ್ಕಿಯಲ್ಲಿದ್ದ 2.40 ಲಕ್ಷ ರೂ. ಹಣ ಕದ್ದು ಪರಾರಿಯಾಗುತ್ತಿದ್ದಾಗ ಇಬ್ಬರು ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಂಧಿತರನ್ನು ವಿಚಾರಣೆ ನಡೆಸಿದಾಗ ಕಳೆದ 2 ವರ್ಷದಲ್ಲಿ ಜಿಲ್ಲೆಯಲ್ಲಿ ಎಸಗಿದ್ದ 8 ಪ್ರಕರಣಗಳು ಬೆಳಕಿಗೆ ಬಂದಿದೆ. ಸತತ 6 ದಿನಗಳ ಕಾಲ ಡಿಆರ್ ಸಿಬ್ಬಂದಿ ಹಾಗೂ ಪೊಲೀಸರು ಓಜಿಕುಪ್ಪಂ ಗ್ರಾಮದಲ್ಲೇ ಮೊಕ್ಕಾಂ ಹೂಡಿ ಬಂಧಿತರಿಂದ 15 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಪ್ರಕರಣದಲ್ಲಿ ರಾಮು, ಗಿರೀಶ್ ಎಂಬುವವರು ಕೂಡ ಪಾಲುದಾರರಾಗಿದ್ದು, ಪರಾರಿಯಾಗಿರುವ ಇಬ್ಬರಿಗೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಅಸಲಿಗೆ ಓಜಿಕುಪ್ಪಂ ಗ್ಯಾಂಗ್ ಅಂತಲೇ ಫೇಮಸ್ ಆಗಿರೋ ಈ ಗ್ಯಾಂಗ್ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ಕದಿಯೋದರಲ್ಲಿ ಎಕ್ಸ್‍ಪರ್ಟ್. ಬೆಂಗಳೂರು ಸೇರಿದಂತೆ ರಾಜ್ಯದ ನಾನಾಕಡೆ ಇದೇ ರೀತಿ ಕೃತ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು, ಹಲವರ ಮೇಲೆ ಪ್ರಕರಣಗಳು ದಾಖಲಾಗಿದೆ.

    ಈಗಾಗಲೇ ಬಂಧಿತರು ಜೈಲಿಗೆ ಹೋಗಿ ಬಂದಿದ್ದು, ಕೆಲವರು ಜಾಮೀನು ಪಡೆದು ಹೊರ ಬಂದಿದ್ದಾರೆ. 350 ಮನೆಗಳಿರುವ ಓಜಿಕುಪ್ಪಂ ಅನ್ನೋ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಮನೆಗಳ ಸದಸ್ಯರು ಕಳ್ಳತನವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರಂತೆ. ಇನ್ನೂ ಇವರು ಕದ್ದ ಹಣದಲ್ಲಿ ಒಂದಷ್ಟು ದೇವರ ಪಾಲು ಅಂತ ದೇವರ ಕಾರ್ಯಗಳಿಗೂ ಮೀಸಲಿಡುತ್ತಿದ್ದ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಮತ್ತೆ ಕೃತ್ಯ:
    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎಸ್‍ಪಿ ಕಾರ್ತಿಕ್ ರೆಡ್ಡಿ ಸುದ್ದಿಗೋಷ್ಠಿ ನಡೆಸಿ, ಕಳ್ಳರ ಬಂಧನಕ್ಕೆ ಸಹಕರಿಸಿದ ಪೊಲೀಸರನ್ನ ಪ್ರಶಂಸೆ ಮಾಡಿದ ಮರುಕ್ಷಣವೇ ಜಿಲ್ಲೆಯಲ್ಲಿ ಇಂತಹದ್ದೇ ಕೃತ್ಯ ನಡೆಸುವ ಮೂಲಕ ಕಳ್ಳರು ಪೊಲೀಸರಿಗೆ ಶಾಕ್ ನೀಡಿದ್ದಾರೆ. ಗೌರಿಬಿದನೂರು ಪಟ್ಟಣದಲ್ಲಿ ಎಸ್‍ಬಿಐ ಬ್ಯಾಂಕಿನಿಂದ 50 ಸಾವಿರ ರೂ. ಹಣ ಡ್ರಾ ಮಾಡಿ ಆಕ್ಟೀವಾ ಹೊಂಡಾ ಡಿಕ್ಕಿಯಲ್ಲಿಟ್ಟುಕೊಂಡು ಮನೆ ಕಡೆ ತೆರಳುತ್ತಿದ್ದ ಮಂಜುಳಾರನ್ನು ಹಿಂಬಾಲಿಸಿದ ಖದೀಮರು ಆಕೆಯ ಗಮನ ಬೇರೆಡೆ ಸೆಳೆದು ಅಷ್ಟು ಹಣವನ್ನು ಎಗರಿಸಿದ್ದಾರೆ.

    ಮಂಜುಳಾರನ್ನು ಹಿಂಬಾಲಿಸಿದ ಕಳ್ಳರು ನಿಮ್ಮ ಬೆನ್ನ ಮೇಲೆ ಹುಳು ಇದೆ. ಹುಳು ತೆಗೆದುಬಿಡ್ತೀವಿ. ಗಲೀಜಾಗಿದೆ ತೊಳೆದುಕೊಳ್ಳಲು ನೀರು ತನ್ನ ಅಂತ ಹೋಟೆಲ್ ಕಡೆ ಕಳುಹಿಸಿ ಡಿಕ್ಕಿಯಲ್ಲಿದ್ದ 50 ಸಾವಿರ ರೂ. ಹಣ ಕಳವು ಮಾಡಿದ್ದಾರೆ. ಖತರ್ನಾಕ್ ಖದೀಮರ ಕೃತ್ಯ ಹೋಟೆಲ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಧಿತ ಕಳ್ಳರ ಗ್ಯಾಂಗ್ ಸದಸ್ಯರೇ ಈ ಕೃತ್ಯ ನಡೆಸಿದ ಶಂಕೆ ವ್ಯಕ್ತವಾಗಿದೆ.

  • ವಿಶ್ವದ ಅತೀ ದೊಡ್ಡ ದರೋಡೆ ಯತ್ನ ಠುಸ್- 2 ಸಾವಿರ ಕೋಟಿ ರೂ. ಕದಿಯಲು ಬ್ಯಾಂಕ್‍ಗೆ 4 ತಿಂಗಳು ಸುರಂಗ ಕೊರೆದು ಸಿಕ್ಕಿಬಿದ್ರು

    ವಿಶ್ವದ ಅತೀ ದೊಡ್ಡ ದರೋಡೆ ಯತ್ನ ಠುಸ್- 2 ಸಾವಿರ ಕೋಟಿ ರೂ. ಕದಿಯಲು ಬ್ಯಾಂಕ್‍ಗೆ 4 ತಿಂಗಳು ಸುರಂಗ ಕೊರೆದು ಸಿಕ್ಕಿಬಿದ್ರು

     

    ಸಾವೋ ಪೌಲೋ: ಬ್ಯಾಂಕ್ ಕಳ್ಳತನ ಮಾಡಲು ಸರಿಸುಮಾರು 2 ಸಾವಿರ ಅಡಿ ಸುರಂಗ ಕೊರೆದಿದ್ದ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಇಲ್ಲಿನ ಸಾವೋ ಪೌಲೋನಲ್ಲಿನ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆಗೆ ಯತ್ನಿಸಿದ್ದರು. ಈ ಗ್ಯಾಂಗ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಸುರಂಗ ಕಾರ್ಯ ಕೊನೆ ಹಂತ ತಲುಪುವ ವೇಳೆಗೆ ಸೆಪ್ಟೆಂಬರ್ 27 ರಂದು ಒಳಗೆ ಹೋಗಲು ನಿರ್ಧರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 16 ಮಂದಿಯನ್ನ ಸೋಮವಾರದಂದು ಬಂಧಿಸಿದ್ದಾರೆ.

    ಬ್ಯಾಂಕೋ ಡೋ ಬ್ರೆಜಿಲ್‍ನ ಶಾಖೆಯೊಂದರಲ್ಲಿ ಕಳ್ಳತನ ಮಾಡಲು ಈ ಗುಂಪು ಸುರಂಗದ ಮೂಲಕ ಎಂಟ್ರಿ ಕೊಡುವ ವೇಳೆಯೇ ಪೊಲೀಸರು ದಾಳಿ ಮಾಡಿದ್ದಾರೆ. ಒಂದು ಬಿಲಿಯನ್ ರಿಯಲ್(ಅಂದಾಜು 2 ಸಾವಿರ ಕೋಟಿ ರೂ.) ಹಣ ಕಳ್ಳತನ ಮಾಡಲು ಯತ್ನಿಸಿದ್ದಾಗಿ ತಂಡ ಹೇಳಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಒಂದು ವೇಳೆ ಈ ದರೋಡೆ ನಡೆದುಬಿಟ್ಟಿದ್ದರೆ ಇದು ವಿಶ್ವದ ಅತ್ಯಂತ ದೊಡ್ಡ ದರೋಡೆಯಾಗುತ್ತಿತ್ತು ಎಂದು ಪೊಲೀಸ್ ಮುಖ್ಯಸ್ಥ ಫಾಬಿಯೋ ಪಿನ್ಹೀರೋ ಲೋಪ್ಸ್ ಇಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆದ್ರೆ ಈ ಕಳ್ಳರ ಗುಂಪು ಚೇಂಬರ್‍ನ ಗೋಡೆಯವರೆಗೆ ಹೋದರಾದ್ರೂ ಸೇಫ್ ಲಾಕರ್ ತಲುಪಲು ಸಾಧ್ಯವಾಗಿರಲಿಲ್ಲ. ಸುರಂಗ ಕೊರೆಯಲು ಈ ಗುಂಪು ಸುಮಾರು 8.3 ಕೋಟಿ ರೂ ಹಣ ಹೂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆಯಲು ಆರಂಭಿಸಿದ್ದರು. ಸುರಂಗದೊಳಗೆ ಫ್ಯಾನ್, ಲೈಟ್ ದೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳಿದ್ದವು. ಮರದ ತುಂಡುಗಳು ಮತ್ತು ಕಬ್ಬಿಣದ ಬಾರ್‍ಗಳನ್ನ ಸುರಂಗಕ್ಕೆ ಬಳಸಿದ್ದರು. ಇದರಲ್ಲಿ ವಯಸ್ಕ ವ್ಯಕ್ತಿಯೊಬ್ಬ ಎದ್ದುನಿಲ್ಲುವಷ್ಟು ದೊಡ್ಡದಾಗಿತ್ತು.

     

    ಇಲ್ಲಿನ ಚಾಕಾರಾ ಸಾಂಟೋ ಆಂಟೋನಿಯೋದಲ್ಲಿನ ಬಾಡಿಗೆ ಮನೆಯೊಂದರಿಂದ ಸುರಂಗ ಶುರುವಾಗಿತ್ತು. ಈ ಮನೆಯಲ್ಲಿ ಆಹಾರ ಮತ್ತು ಸಲಕರಣೆಗಳನ್ನ ಶೇಖರಣೆ ಮಾಡಲಾಗಿತ್ತು. ಬ್ಯಾಂಕ್ ಕಡೆಗೆ ಹೋಗುವ ರಸ್ತೆಯ ಕೆಳಗೆ ಸುರಂಗ ಮಾರ್ಗವನ್ನ ಕೊರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?v=LmlH2z11uio

  • ಯೂಟ್ಯೂಬ್ ನೋಡಿ ಐಷಾರಾಮಿ ಬೈಕ್ ಕಳ್ಳತನ: ನಾಲ್ವರು ಖತರ್ನಾಕ್ ಕಳ್ಳರು ಅರೆಸ್ಟ್

    ಯೂಟ್ಯೂಬ್ ನೋಡಿ ಐಷಾರಾಮಿ ಬೈಕ್ ಕಳ್ಳತನ: ನಾಲ್ವರು ಖತರ್ನಾಕ್ ಕಳ್ಳರು ಅರೆಸ್ಟ್

    ಬೆಂಗಳೂರು: ಐಷಾರಾಮಿ ಬೈಕ್‍ಗಳನ್ನು ಕದ್ದು ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನ ಪ್ರಭು(21), ದೊಡ್ಡನಾಗಮಂಗಲದ ಬಿ.ಕಾಂ ವಿದ್ಯಾರ್ಥಿಗಳಾದ ಅರುಣ್ ಸಾಯಿ(21), ಕಾರ್ತಿಕ್ (18) ಹಾಗೂ 17 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ 28 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಆಗ್ನೇಯ ವಲಯದ ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.

    ಆರೋಪಿಗಳ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದ ಇವರ ವಿಲಾಸಿ ಜೀವನಕ್ಕೆ ಹಣದ ಅವಶ್ಯಕತೆ ಇತ್ತು. ವ್ಹೀಲಿಂಗ್ ಹಾಗೂ ಡ್ರ್ಯಾಗ್‍ರೇಸ್ ಮಾಡುವುದನ್ನು ಕಲಿತಿದ್ದ ಇವರು ರಾತ್ರಿ ಸಮಯದಲ್ಲಿ ಮೋಜುಗಾಗಿ ನಗರವನ್ನು ಸುತ್ತುತ್ತಿದ್ದರು. ಈ ವೇಳೆ ಐಷಾರಾಮಿ ಬೈಕ್‍ಗಳ ಮೇಲೆ ಇವರಿಗೆ ಆಸೆ ಹುಟ್ಟಿತ್ತು. ಇವುಗಳನ್ನು ಖರೀದಿಸಲು ಹಣ ಇಲ್ಲದ ಕಾರಣ ವಿದೇಶದಲ್ಲಿ ಬೈಕ್ ಗಳನ್ನು ಹೇಗೆ ಕದಿಯುತ್ತಾರೆ ಎನ್ನುವುದನ್ನು ಯೂಟ್ಯೂಬ್ ವಿಡಿಯೋ ಮೂಲಕ ತಿಳಿದುಕೊಂಡು ಕಳ್ಳತನಕ್ಕೆ ಇಳಿದಿದ್ದರು.

    ಬೆಳಗಿನ ಜಾವ ಕಳ್ಳತನ: ಮಡಿವಾಳ, ಎಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಎಲೆಕ್ಟ್ರಾನಿಕ್‍ಸಿಟಿ, ಪರಪ್ಪನ ಅಗ್ರಹಾರ ಸುತ್ತಮುತ್ತಲು ಇರುವ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಟೆಕ್ಕಿಗಳು ವಾಸವಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರೆಲ್ಲ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಏಳುತ್ತಾರೆ ಎನ್ನುವುದು ಇವರಿಗೆ ಗೊತ್ತಿತ್ತು. ಹೀಗಾಗಿ ಇವರು ಬೆಳಗಿನ ಜಾವ 3 ರಿಂದ 6 ಗಂಟೆ ನಡುವೆ ಬೈಕ್ ಕಳ್ಳತನ ಎಸಗುತ್ತಿದ್ದರು.

    ಕಳ್ಳತನ ಹೇಗೆ?
    ನಾಲ್ಕು ಜನರು ಗುಂಪಾಗಿ ಹೋಗಿ ಕಳ್ಳತನ ಎಸಗದೇ ಒಬ್ಬೊಬ್ಬರೇ ಬೇರೆ ಬೇರೆ ರಸ್ತೆಗಳಿಗೆ ಹೋಗುತ್ತಿದ್ದರು. ಆರಂಭದಲ್ಲಿ ಬೈಕಿನ ಹ್ಯಾಂಡಲ್ ಲಾಕ್ ಮುರಿಯುತ್ತಿದ್ದರು. ನಂತರ ಇಗ್ನೇಷನ್ ವಯರ್ ಕತ್ತರಿಸಿ, ವಯರ್‍ಗಳನ್ನು ಕನೆಕ್ಟ್ ಮಾಡಿ ಚಲಾಯಿಸಿಕೊಂಡು ಹೋಗುತ್ತಿದ್ದರು. ವಾರದಲ್ಲಿ ಒಂದು ಬಾರಿ ಮಾತ್ರ ಈ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

    ಬೈಕ್ ಮಾರಾಟ ಹೇಗೆ?
    6 ತಿಂಗಳಿನಲ್ಲಿ 50ಕ್ಕೂ ಹೆಚ್ಚು ಬೈಕ್‍ಗಳನ್ನು ಕದ್ದಿದ್ದ ಆರೋಪಿಗಳು ಅವುಗಳನ್ನು ತಮಿಳುನಾಡಿನ ವೇಲೂರು ಹಾಗೂ ಅಂಬೂರಿನಲ್ಲಿರುವ ಪರಿಚಿತ ವಾಹನ ಡೀಲರ್‍ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಈ ಬೈಕ್‍ಗಳು ಬೆಂಗಳೂರಿನ ಫೈನಾನ್ಸ್ ನವರು ಜಪ್ತಿ ಮಾಡಿದ್ದ ವಾಹನಗಳು, ಮುಂಗಡವಾಗಿ 10 ಸಾವಿರ ಕೊಡಿ. ಬಳಿಕ ಈ ಬೈಕಿಗೆ ಸಂಬಂಧಿಸಿದ ಉಳಿದ ದಾಖಲೆಗಳನ್ನು ನೀಡುತ್ತೇವೆ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು.

    ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ?
    ಪ್ರತಿ ಬಾರಿಯೂ ಬೈಕ್ ಗಳು ಆಗ್ನೆಯ ವಿಭಾಗದಲ್ಲಿ ಕಳವು ಆಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ 24 ಜನರನ್ನು ಒಳಗೊಂಡ 3 ವಿಶೇಷ ತಂಡವನ್ನು ರಚಿಸಿದ್ದರು. ಕಳ್ಳತನ ಎಸಗಿದ್ದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆರೋಪಿಗಳು ಬೈಕ್ ನಲ್ಲಿ ತಮಿಳುನಾಡಿಗೆ ತೆರಳುತ್ತಿರುವ ದೃಶ್ಯ ಅತ್ತಿಬೆಲೆ ಬಳಿ ಇರುವ ಟೋಲ್‍ಗೇಟ್ ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದರೂ ಚಹರೆ ಪತ್ತೆಯಾಗಿರಲಿಲ್ಲ.

    ಪೊಲೀಸರು ಬೈಕ್ ಗಳ ಕಳ್ಳತನ ಯಾವ ಸಮಯದಲ್ಲಿ ನಡೆದಿದೆ ಎನ್ನುವ ಮಾಹಿತಿ ಕಲೆ ಹಾಕಿದಾಗ ಬೆಳಗಿನ ಜಾವ ಕಳ್ಳತನ ನಡೆಯುತ್ತಿದೆ ಎನ್ನುವುದು ಗೊತ್ತಾಗಿದೆ. ಎಲ್ಲ ಕಳವು ಪ್ರಕರಣಗಳು 3 ರಿಂದ 6 ಗಂಟೆ ಒಳಗಡೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ಕಳವಾದ ಪ್ರದೇಶಗಳಲ್ಲಿ ಚಿಂದಿ ಆಯುವವರ ವೇಷ ಧರಿಸಿ ಸುತ್ತಾಡಲು ಆರಂಭಿಸಿದರು. ಜುಲೈ 25ರ ಬೆಳಗ್ಗೆ 5 ಗಂಟೆಗೆ ಬಿಟಿಎಂ ಲೇಔಟ್‍ನಲ್ಲಿ ಬೈಕ್ ಕದಿಯಲು ಯತ್ನಿಸುತ್ತಿದ್ದಾಗ ಅರುಣ್ ಸಾಯಿ ಸಿಕ್ಕಿ ಬಿದ್ದಿದ್ದ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ಆರೋಪಿಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದರು.

    ಮೋಜು ಮಸ್ತಿ: ಐಷಾರಾಮಿ ಬೈಕ್ ಗಳನ್ನು ಕದ್ದಿಯುತ್ತಿದ್ದ ನಾವು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೆವು. 1.5 ಲಕ್ಷ ರೂ. ಮೌಲ್ಯದ ಬುಲೆಟ್ ಬೈಕನ್ನು ಕೇವಲ 10 ಸಾವಿರಕ್ಕೆ ಮಾರಾಟ ಮಾಡಿದ್ದೇವೆ. ಇದರಿಂದ ಗಳಿಸಿದ ಹಣದಲ್ಲಿ ಕೇರಳ, ಕರ್ನಾಟಕದ ಪ್ರವಾಸಿ ತಾಣಕ್ಕೆ ತೆರಳಿ ಸುತ್ತಾಡುತ್ತಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

     

  • ಉಳ್ಳಾಲದಲ್ಲಿ ಲಾಂಗ್ ಬೀಸಿ ಯುವಕನ ಹತ್ಯೆಗೆ ಯತ್ನ

    ಉಳ್ಳಾಲದಲ್ಲಿ ಲಾಂಗ್ ಬೀಸಿ ಯುವಕನ ಹತ್ಯೆಗೆ ಯತ್ನ

    ಮಂಗಳೂರು: ನಗರದ ಹೊರವಲಯದ ಉಳ್ಳಾಲದಲ್ಲಿ ಮತ್ತೆ ತಲ್ವಾರ್ ಝಳಪಿಸಿದ್ದು, ಸೋಮವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಲಾಂಗ್ ಬೀಸಿ ಹತ್ಯೆಗೆ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

    ಹಲ್ಲೆಗೊಳಗಾದ ಯುವಕನನ್ನು ನೌಷದ್(22) ಎಂದು ಗುರುತಿಸಲಾಗಿದೆ. ಈತನ ಮೇಲೆ ಉಳ್ಳಾಲದ ರಹಮಾನಿಯಾ ಮಸೀದಿ ಬಳಿ ರಮಿತ್ ಮತ್ತು ನಾಲ್ವರಿಂದ ತಲ್ವಾರ್ ದಾಳಿ ನಡೆದಿದ್ದು, ಪರಿಣಾಮ ನೌಷದ್ ಕೈಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ಬಂದ ನೌಷದ್ ನನ್ನು ಉಳ್ಳಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.

    ಸ್ಥಳಕ್ಕೆ ಡಿಸಿಪಿ ಶಾಂತ್ ರಾಜ್, ಎಸಿಪಿ ಶೃತಿ, ಎಸ್‍ಐ ಗೋಪಿಕೃಷ್ಣ ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಘಟನೆ ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.