Tag: gang

  • ಬೆಂಗಳೂರು ಪೊಲೀಸರಿಗೆ ತಲೆ ನೋವಾದ ಚಿತ್ರ ವಿಚಿತ್ರ ಗ್ಯಾಂಗ್ ಹಾವಳಿ

    ಬೆಂಗಳೂರು ಪೊಲೀಸರಿಗೆ ತಲೆ ನೋವಾದ ಚಿತ್ರ ವಿಚಿತ್ರ ಗ್ಯಾಂಗ್ ಹಾವಳಿ

    ಬೆಂಗಳೂರು: ಹೊಸ ವರ್ಷದ ಭದ್ರತೆ ಬಗ್ಗೆ ತಲೆಕೆಡಿಸಿಕೊಂಡಿರುವ ಬೆಂಗಳೂರು ಪೊಲೀಸರಿಗೆ ಹೊಸದೊಂದು ಸವಾಲು ಎದುರಾಗಿದೆ. ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಬಿಗ್ರೇಡ್ ರೋಡ್, ಚರ್ಚ್ ಸ್ಟ್ರಿಟ್ ಸುತ್ತಮುತ್ತ ವಿಚಿತ್ರ ಗ್ಯಾಂಗ್ ಹುಟ್ಟಿಕೊಂಡಿದೆ.

    ಬೆಂಗಳೂರು ಪೊಲೀಸರು ಹೊಸ ವರ್ಷಕ್ಕೆ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳುವ ತಯಾರಿಯಲ್ಲಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಆದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಹದ್ದಿನ ಕಣ್ಣಿಡಲು ಪೊಲೀಸರು ಭರ್ಜರಿ ತಯಾರಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಏರಿಯಾದ ಸುತ್ತ ಹುಟ್ಟಿಕೊಂಡಿರುವ ವಿಚಿತ್ರ ಗ್ಯಾಂಗ್ ಬೆಂಗಳೂರು ಪೊಲೀಸರ ನಿದ್ದೆಗೇಡಿಸಿದೆ.

    ಯುಬಿ ಸಿಟಿ, ಎಂಜಿ ರೋಡ್, ಪಬ್ ಬಾರ್‍ಗಳಲ್ಲಿ ಪುಂಡ ಕಂಠಪೂರ್ತಿ ಕುಡಿದು ಹಾವಳಿ ಇಡುತ್ತಿದ್ದಾರೆ. ಕುಡಿದ ಅಮಲಿನಲ್ಲಿ ಕಿರಾತಕರ ಗ್ಯಾಂಗ್ ಲೇಟ್ ನೈಟ್ ಮಾಲ್‍ಗಳ ಬಾಗಿಲ ಮೇಲೆ, ಖಾಸಗಿ ಗೋಡೆಗಳ ಮೇಲೆ ಚಿತ್ರ ವಿಚಿತ್ರವಾಗಿ ಪೈಂಟ್ ಬಳಿಯುವುದು, ಪೊಲೀಸರ ವಿರುದ್ಧ ಕೆಟ್ಟ ಪದಗಳನ್ನು ಬರೆಯುತ್ತಿದ್ದಾರೆ.

    ನಗರದ ಎಣ್ಣೆ ಪ್ರಿಯರ ಹಾಗೂ ಪಬ್ ಪ್ರಿಯರ ಹಾಟ್ ಸ್ಪಾಟ್ ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್ ಶಾಪಿಂಗ್ ಮಾಲ್‍ಗಳ ಬಾಗಿಲ ಮೇಲೆ ವಿಚಿತ್ರವಾಗಿ ಬರೆದು ವಿಕೃತಿ ಮೆರೆಯುತ್ತಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಣಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಚಿತ್ರ ವಿಚಿತ್ರ ಗ್ಯಾಂಗ್ ವಿರುದ್ಧ ಸಮೋಟೊ ಕೇಸ್ ದಾಖಲಿಕೊಂಡಿದ್ದಾರೆ.

    ಪಬ್ಲಿಕ್ ಪ್ರಾಪರ್ಟಿ ಹಾಗೂ ಖಾಸಗಿ ಸ್ವತ್ತನ್ನ ವಿಕೃತಿಗೋಳಿಸುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಮತ್ತಷ್ಟು ವಿಕೃತ ಮನಸ್ಸುಗಳನ್ನು ಎಡೆಮುರಿ ಕಟ್ಟಲು ಮುಂದಾಗಿದ್ದಾರೆ.

  • ಮಂಗಳಮುಖಿ ಆ್ಯಂಡ್ ಗ್ಯಾಂಗ್‍ನಿಂದ ಯುವಕನ ಬರ್ಬರ ಹತ್ಯೆ

    ಮಂಗಳಮುಖಿ ಆ್ಯಂಡ್ ಗ್ಯಾಂಗ್‍ನಿಂದ ಯುವಕನ ಬರ್ಬರ ಹತ್ಯೆ

    – ಪೊಲೀಸರಿಂದ ಶೂಟೌಟ್

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಂಗಳಮುಖಿ ಸೇರಿದಂತೆ ನಾಲ್ವರ ಗುಂಪು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರಿನ ತಿಲಕ್ ನಗರದ ಬಾರೊಂದರಲ್ಲಿ ನಡೆದಿದೆ.

    ಕೊಲೆ ಮಾಡಿದ ಆರೋಪಿಗಳನ್ನು ತಬರೇಜ್, ಆನಂದ್, ಮಧು ಹಾಗೂ ಮಂಗಳಮುಖಿಯನ್ನು ಅರ್ಪಿತ ಎಂದು ಗುರುತಿಸಲಾಗಿದೆ. ಕಿಶೋರ್ ಕೊಲೆಯಾದ ದುರ್ದೈವಿ. ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಕಿಶೋರ್ ಬೈರಸಂದ್ರದ ನಿವಾಸಿಯಾಗಿದ್ದು, ಭಾನುವಾರ ಮಧ್ಯಾಹ್ನ ಗೆಳೆಯನ ಜೊತೆ ಕುಡಿಯಲು ಜಯನಗರದ ಈಸ್ಟ್ ಎಂಡ್ ಬಾರ್ ಗೆ ಹೋಗಿದ್ದಾನೆ.

    ಇದೇ ಸಮಯದಲ್ಲಿ ಪಕ್ಕದ ಟೇಬಲ್‍ನಲ್ಲಿ ಕುಳಿತಿದ್ದ ನಾಲ್ವರ ಗ್ಯಾಂಗ್ ಕುಡಿದು ಜೋರಾಗಿ ಕೇಕೆ ಹಾಕಿದ್ದಾರೆ. ಈ ನಡುವೆ ಕಿಶೋರ್ ಜೋರಾಗಿ ಮಾತನಾಡಬೇಡಿ ಎಂದು ಸ್ವಲ್ಪ ನಿಧಾನಕ್ಕೆ ಮಾತನಾಡಿಕೊಳ್ಳಿ ಎಂದಿದ್ದಾನೆ. ಇಷ್ಟಕ್ಕೇ ಕ್ಯಾತೆ ತೆಗೆದ ಗ್ಯಾಂಗ್ ನಮ್ಮ ದುಡ್ಡು ನಮ್ಮ ಇಷ್ಟ ನೀನು ಯಾರು ಕೇಳೊಕೆ ಎಂದು ಗಲಾಟೆ ಶುರು ಮಾಡಿದೆ. ಹೀಗಿರುವಾಗಲೇ ನಾಲ್ವರ ಗ್ಯಾಂಗ್ ಕಿಶೋರ್ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದು ಎಸ್ಕೇಪ್ ಆಗಿದೆ.

    ವಿಶೇಷ ಅಂದರೆ ಆ ಗ್ಯಾಂಗ್‍ನಲ್ಲಿ ಮಂಗಳಮುಖಿ ಇದ್ದು, ಆಕೆ ಕೂಡ ಹಂತಕರಿಗೆ ಸಹಾಯ ಮಾಡಿದ್ದಾಳೆ. ಇದು ಬಾರ್‍ನ ಸಿಟಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಬಗ್ಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಲಾಗಿದೆ.

    ಆರೋಪಿ ಮೇಲೆ ಶೂಟೌಟ್
    ಈ ಪ್ರಕರಣ ಸಂಬಂಧ ಆರೋಪಿ ತಬರೇಜ್ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದಕ್ಕೆ ತಿಲಕನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಆರೋಪಿ ತಬರೇಜ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಪೇದೆ ಆನಂದ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಆರೋಪಿ ತಬರೇಜ್ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೆಲ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ ಆರೋಪಿ, ಬಿಡುಗಡೆ ಬಳಿಕ ಮತ್ತದೇ ಚಾಳಿ ಮುಂದುವರಿಸಿದ್ದ ಎಂದು ಹೇಳಲಾಗಿದೆ.

  • 1 ಲಕ್ಷ ಕೊಟ್ಟರೆ 2ಲಕ್ಷ ಕೊಡ್ತೀವಿ- ಖತರ್ನಾಕ್ ಗ್ಯಾಂಗ್ ಅರೆಸ್ಟ್

    1 ಲಕ್ಷ ಕೊಟ್ಟರೆ 2ಲಕ್ಷ ಕೊಡ್ತೀವಿ- ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಚಿಕ್ಕಬಳ್ಳಾಪುರ: ಒಂದು ಲಕ್ಷ ಕೊಟ್ಟರೆ ನಿಮಗೆ ಎರಡು ಲಕ್ಷ ಮಾಡಿಕೊಡುತ್ತೇವೆ ಎಂದು ನಂಬಿಸಿ ಜನರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್ ಮನಿ ಡಬ್ಲಿಂಗ್ ಗ್ಯಾಂಗನ್ನು ಬಂಧಿಸುವಲ್ಲಿ ಕೆಂಚಾರ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳನ್ನು ಮುರಗಮಲ್ಲ ಗ್ರಾಮದ ಕಾಂತಮ್ಮ, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ದೇವರಕೊಂಡದ ಕೇಶವ, ಚಂದ್ರಶೇಖರ್, ಇಡಗುಟ್ಟ ಕೇಶವ ಮತ್ತು ಶಿಡ್ಲಘಟ್ಟದ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಲಕ್ಷ 75 ಸಾವಿರ ನಗದನ್ನು ಜಪ್ತಿ ಮಾಡಲಾಗಿದೆ.

    ಮುರಗಮಲ್ಲ ಗ್ರಾಮದ ಭಾರ್ಗವೇಂದ್ರ ಎಂಬವರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ 5 ಲಕ್ಷದ 50 ಸಾವಿರ ಹಣ ತೆಗೆದುಕೊಂಡು ಪಂಗನಾಮ ಹಾಕಿದ್ದರು. ಹೀಗಾಗಿ ವಂಚನೆಗೊಳಗಾದ ಭಾರ್ಗವೇಂದ್ರ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಕಾರ್ಯಾಚರಣೆಗಿಳಿದ ಪೊಲೀಸರು ಐವರು ಮನಿ ಡಬ್ಲಿಂಗ್ ದಂಧೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಅವರು ಅಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಭಾಗಗಳಲ್ಲಿ ಇದೇ ರೀತಿಯ ಮನಿ ಡಬ್ಲಿಂಗ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

  • ನಿಂತಿದ್ದ ವ್ಯಕ್ತಿ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿದ ಗ್ಯಾಂಗ್..!

    ನಿಂತಿದ್ದ ವ್ಯಕ್ತಿ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿದ ಗ್ಯಾಂಗ್..!

    ಬೆಂಗಳೂರು: ಯಾವುದೇ ಕಾರಣವಿಲ್ಲದೆ ವ್ಯಕ್ತಿಯೊಬ್ಬನನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯ 5 ನೇ ಮುಖ್ಯರಸ್ತೆಯಲ್ಲಿ ನಡೆದಿದೆ.

    ಗೋಪಿನಾಥ್ ಹಲ್ಲೆಗೊಳಗಾದ ವ್ಯಕ್ತಿ. ಗೋಪಿನಾಥ್ ತನ್ನ ಸ್ನೇಹಿತರ ಜೊತೆ ನಿಂತುಕೊಂಡು ಮಾತನಾಡುತ್ತಿದ್ದನು. ಈ ವೇಳೆ ವ್ಯಕ್ತಿಯೊಬ್ಬ ತನ್ನ ಗ್ಯಾಂಗ್ ಜೊತೆ ಬಂದು ಏಕಾಏಕಿ ಕೈಯಲ್ಲಿದ್ದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಹಲ್ಲೆ ನಡೆದಿರುವುದು ಯಾವುದೋ ಹಳೆ ದ್ವೇಷಕ್ಕೆ ಅಲ್ಲ. ಆದರೆ ಯಾವುದೇ ಕಾರಣವಿಲ್ಲದೆ ಹೀಗೆ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿದ್ದಾರೆ.

    ಈ ಬಗ್ಗೆ ವೆಸ್ಟ್ ಡಿಸಿಪಿ ರವಿ ಚೆನ್ನಣನವರ್ ಅವರು ಪ್ರತಿಕ್ರಿಯಿಸಿ, “ಮೂರು ಜನ ಹುಡುಗರು ಈ ರೀತಿ ಹಲ್ಲೆ ಮಾಡಿರುವುದು ಗಮನಕ್ಕೆ ಬಂದಿದೆ. ಸದ್ಯ ಅಲ್ಲಿನ ಸಿಸಿಟಿವಿ ಆಧರಿಸಿ ತನಿಖೆ ಮುಂದುವರಿಸಿದ್ದೇವೆ. ಯಾವ ಕಾರಣಕ್ಕಾಗಿ ಗಲಾಟೆ ನಡೆಯಿತು ಎನ್ನುವುದು ತನಿಖೆಯಿಂದಷ್ಟೇ ಬಯಲು ಆಗಬೇಕಿದೆ” ಎಂದು ಹೇಳಿದ್ದಾರೆ.

    ಏನೂ ಮಾಡದೇ ಸುಮ್ಮನೆ ಇದ್ದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗುತ್ತಿದ್ದರೂ ಕೂಡ ರಾಜಾರೋಷವಾಗಿ ಹಲ್ಲೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಂತಾಮಣಿಯಲ್ಲಿ ಮತ್ತೆ ಕಾಣಿಸಿಕೊಂಡ ಓಜಿಕುಪ್ಪಂ ಗ್ಯಾಂಗ್

    ಚಿಂತಾಮಣಿಯಲ್ಲಿ ಮತ್ತೆ ಕಾಣಿಸಿಕೊಂಡ ಓಜಿಕುಪ್ಪಂ ಗ್ಯಾಂಗ್

    ಚಿಕ್ಕಬಳ್ಳಾಪುರ: ಕಂಟ್ರ್ಯಾಕ್ಟರ್ ಗಮನ ಬೇರೆಡೆ ಸೆಳೆದ ಖತರ್ನಾಕ್ ಕಿಡಿಗೇಡಿಗಳು ಅವರ ಬೈಕ್‍ನ ಬಾಕ್ಸ್ ನಲ್ಲಿಟ್ಟಿದ್ದ 1 ಲಕ್ಷದ 90 ಸಾವಿರ ನಗದು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಕಂಟ್ರ್ಯಾಕ್ಟರ್ ವೆಂಕಟೇಶ್ ಕೆನರಾ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ತನ್ನ ಬೈಕ್‍ನ ಬಾಕ್ಸ್ ನಲ್ಲಿ ಹಣ ಇರಿಸಿಕೊಂಡು ಮನೆ ಕಡೆಗೆ ತೆರಳಿದ್ದರು. ಆದರೆ ಕಂಟ್ರ್ಯಾಕ್ಟರ್ ಆಗಿದ್ದ ವೆಂಕಟೇಶ್ ಪೈಂಟ್ ಖರೀದಿಗೆ ಅಂತ ಅಂಗಡಿ ಎದುರು ಬೈಕ್ ನಿಲ್ಲಿಸಿ ಖರೀದಿಯಲ್ಲಿ ನಿರತನಾಗಿದ್ದರು.

    ಮೊದಲೇ ಬ್ಯಾಂಕ್ ಬಳಿಯಿಂದ ವೆಂಕಟೇಶ್ ರನ್ನು ಫಾಲೋ ಮಾಡೊಕೊಂಡು ಬಂದಿದ್ದ ಕಿಡಿಗೇಡಿಗಳು ದುಡ್ಡು ಎಗರಿಸಿದ್ದಾರೆ. ಇತ್ತ ವೆಂಕಟೇಶ್ ಪೈಂಟ್ ಖರೀದಿಯಲ್ಲಿದ್ದಾಗ ಅವರನ್ನು ಮಾತಾನಾಡಿಸುವ ರೀತಿಯಲ್ಲಿ ಗಮನವನ್ನು ಓರ್ವ ಬೇರೆಡೆ ಸೆಳೆದರೆ, ಉಳಿದ ಇಬ್ಬರು ಬೈಕ್‍ನ ಬಾಕ್ಸ್ ನಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಕಂಟ್ರ್ಯಾಕ್ಟರ್ ವೆಂಕಟೇಶ್ ಚಿಂತಾಮಣಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಮತ್ತೊಂದೆಡೆ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂತಹ ಕೃತ್ಯಗಳನ್ನು ಮಾಡುವುದರಲ್ಲಿ ಓಜಿ ಕುಪ್ಪಂ ಗ್ಯಾಂಗ್ ಎಕ್ಸ್ ಫರ್ಟ್ ಆಗಿದೆ. ಹೀಗಾಗಿ ಈ ಕೃತ್ಯ ಸಹ ಅವರೇ ಮಾಡಿರಬಹದು ಅಂತ ತನಿಖೆ ನಡೆಸಲಾಗುತ್ತಿದೆ.

    ಮತ್ತೊಂದೆಡೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಇಬ್ಬರು ಓಜಿಕುಪ್ಪಂ ಗ್ಯಾಂಗ್ ನವರನ್ನು ಅರೆಸ್ಟ್ ಮಾಡಿ 11 ಲಕ್ಷ 80ಸಾವಿರ ಸೀಝ್ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ ಹಾಗೂ ಬಟ್ಟೆಯನ್ನು ಕಿತ್ತುಕೊಂಡು ಕಳುಹಿಸುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ.

    ಪೊಲೀಸರ ಅತಿಥಿಯಾಗಿರುವ ಈ ಗ್ಯಾಂಗ್ ಥ್ರೂತ್ ಪಾಯಿಂಟ್ ಎನ್ನುವ ವೆಬ್ ಸೈಟ್ ಮೂಲಕ ಸಲಿಂಗ ಕಾಮಿಗಳನ್ನು ಆಹ್ವಾನ ಮಾಡುತ್ತಿದ್ದರು. ಸಲಿಂಗ ಕಾಮದಲ್ಲಿ ಆಸಕ್ತಿ ಇರುವವರು ಅವರು ಕರೆದ ಅಡ್ರೆಸ್‍ಗೆ ಕೂಡ ಹೋಗುತ್ತಿದ್ದರು.

    ಸಲಿಂಗಕಾಮಕ್ಕೆ ಎಂದು ಆ ಅಡ್ರೆಸ್‍ಗೆ ಹೋದಾಗ ರಾಬರಿ ಗ್ಯಾಂಗ್ ಅಲ್ಲಿಗೆ ಎಂಟ್ರಿ ಕೊಟ್ಟು ಅವರ ಚಿನ್ನಾಭರಣವನ್ನು ದೋಚುತ್ತಿದ್ದರು. ಅಲ್ಲದೇ ವಿಡಿಯೋ ಮಾಡಿದ್ದೀವಿ ಹಣ ಕೊಡು ಎಂದು ಪೀಡಿಸಿ ಅವರ ಚಿನ್ನಾಭರಣವನ್ನು ಕಿತ್ತುಕೊಂಡು ಕಳುಹಿಸುತ್ತಿದ್ದರು.

    ಇದೇ ರೀತಿ ಮಾಡುತ್ತಿದ್ದ ಪ್ರಭಾಕರ್ ಮತ್ತು ನಾಲ್ವರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಗಡಿ ವಿಚಾರಕ್ಕೆ ಗಲಾಟೆ- ಬಡಪಾಯಿ ಮೇಲೆ ಹಲ್ಲೆ ನಡೆಸಿದ ಮಹಿಳಾ ಗ್ಯಾಂಗ್

    ಅಂಗಡಿ ವಿಚಾರಕ್ಕೆ ಗಲಾಟೆ- ಬಡಪಾಯಿ ಮೇಲೆ ಹಲ್ಲೆ ನಡೆಸಿದ ಮಹಿಳಾ ಗ್ಯಾಂಗ್

    ಬೆಂಗಳೂರು: ನಗರದ ಕೆ.ಆರ್.ಮಾರ್ಕೆಟ್ ನಲ್ಲಿ ಅಂಗಡಿ ಇಡುವ ವಿಚಾರಕ್ಕೆ ಮಹಿಳಾ ವ್ಯಾಪಾರಿಗಳ ನಡುವೆ ಘರ್ಷಣೆ ನಡೆದಿದ್ದು, ರಸ್ತೆಬದಿ ಅಂಗಡಿ ಇಡದಂತೆ ಮಹಿಳಾ ಗ್ಯಾಂಗೊಂದು ಬಡಪಾಯಿ ಮೇಲೆ ಹಲ್ಲೆ ನಡೆಸಿದೆ.

    ಘಟನೆಯಲ್ಲಿ ಸೆಲ್ವಿ ಎಂಬವರು ಗಾಯಗೊಂಡಿದ್ದು, ಕಸ್ತೂರಿ ಎಂಬ ಮಹಿಳೆ ತನ್ನ ಗ್ಯಾಂಗ್ ನೊಂದಿಗೆ ಬಂದು ಹಲ್ಲೆ ನಡೆಸಿ ಮನಬಂದಂತೆ ಥಳಿಸಿದ್ದಾರೆ. ಅಂದಹಾಗೆ ಕಳೆದ ಮೂವತ್ತು ವರ್ಷಗಳಿಂದ ಕೆ.ಆರ್.ಮಾರ್ಕೆಟ್ ನ ರಸ್ತೆಬದಿಯಲ್ಲಿ ಸೆಲ್ವಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಈ ಜಾಗ ತನಗೆ ಬೇಕು ಎಂದು ಕಸ್ತೂರಿ ಧಮ್ಕಿ ಹಾಕಿದ್ದಾಳಂತೆ.

    ಮಹಿಳೆಯ ಬೆದರಿಕೆಗೆ ಸೆಲ್ವಿ ಹೆದರದ ಕಾರಣ ನವೆಂಬರ್ 22ರಂದು ಕಸ್ತೂರಿ ಸೇರಿ ಸುಮಾರು ಏಳು ಮಂದಿ ಸೆಲ್ವಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಸೆಲ್ವಿಯವರ ಎಡಗೈ ಮೂಳೆಗೆ ಪೆಟ್ಟಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆದರೆ ಇದುವರೆಗೂ ಪೊಲೀಸರು ಕಸ್ತೂರಿಯನ್ನ ವಿಚಾರಣೆಗೆ ಒಳಪಡಿಸಿಲ್ಲ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಮಿಕರಿಗೆ ಚಾಕುವಿನಿಂದ ಇರಿದು ಮೊಬೈಲ್, ಹಣ ದೋಚಿದ ಡಿಯೋ ಬೈಕ್ ಗ್ಯಾಂಗ್!

    ಕಾರ್ಮಿಕರಿಗೆ ಚಾಕುವಿನಿಂದ ಇರಿದು ಮೊಬೈಲ್, ಹಣ ದೋಚಿದ ಡಿಯೋ ಬೈಕ್ ಗ್ಯಾಂಗ್!

    ಆನೇಕಲ್: ಇಂದು ಮುಂಜಾನೆ ನಾಲ್ವರಿಗೆ ಚಾಕುವಿನಿಂದ ಇರಿದು ಕಾರ್ಮಿಕರ ಬಳಿಯಿದ್ದ ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿರುವ ಪ್ರಕರಣ ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಬಿಲ್ ಪೋರ್ಜ್ ಕಂಪನಿಯ ಕಾರ್ಮಿಕರಾದ ಆಂಧ್ರ ಮೂಲದ ಮಹಾನಂದ, ಉತ್ತರ ಭಾರತ ಮೂಲದ ಪೂರ್ಣಚಂದ್ರ ಹಾಗೂ ಇಬ್ಬರು ಕಾರ್ಮಿಕರ ಮೇಲೆ ಡಿಯೋ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅವರ ಬಳಿಯಿದ್ದ ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿದ್ದಾರೆ. ಈ ಘಟನೆಯಲ್ಲಿ ಮಹಾನಂದ ಹಾಗೂ ಪೂರ್ಣ ಚಂದ್ರ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ತೆರಳಿದ್ದಾರೆ.

    ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ಡಿಯೋ ಬೈಕ್ ಗ್ಯಾಂಗ್ ಕಳೆದ ಮೂರು ದಿನಗಳಲ್ಲಿ ಇದೇ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 13 ಜನರಿಗೆ ಚಾಕುವಿನಿಂದ ಇರಿದು ದರೋಡೆ ಮಾಡಿವೆ. ಕೈಗಾರಿಕಾ ಪ್ರದೇಶದಲ್ಲಿನ ರಸ್ತೆಗಳಲ್ಲಿ ಸರಿಯಾದ ಬೀದಿ ದೀಪಗಳು ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲ್ಲದಿರುವುದೇ ಈ ಘಟನೆಗಳಿಗೆ ಪ್ರಮುಖ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿನಿಮಾ ಸ್ಟೈಲಿನಲ್ಲಿ ಸಬ್‍ ರಿಜಿಸ್ಟಾರ್ ಕಿಡ್ನಾಪ್ – ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್

    ಸಿನಿಮಾ ಸ್ಟೈಲಿನಲ್ಲಿ ಸಬ್‍ ರಿಜಿಸ್ಟಾರ್ ಕಿಡ್ನಾಪ್ – ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್

    ಬೆಂಗಳೂರು: ಸಿನಿಮಾ ಸ್ಟೈಲ್‍ ನಲ್ಲಿ ಅಪಹರಣಕಾರರು ಸಬ್ ರಿಜಿಸ್ಟಾರ್ ಅವರನ್ನು ಕಿಡ್ನಾಪ್ ಮಾಡಿ ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್ ಕೊಟ್ಟಿದ್ದಾರೆ.

    ಇದೇ ಜುಲೈ 5 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆಎಚ್ ರಸ್ತೆಯ ಫುಟ್ ಪಾತ್‍ನಿಂದ ಕಿಡ್ನಾಪ್ ಮಾಡಲಾಗಿತ್ತು. ರಂಗಸ್ವಾಮಿ ಕಿಡ್ನಾಪ್‍ಗೆ ಒಳಗಾದ ಹಿರಿಯ ಸಬ್ ರಿಜಿಸ್ಟಾರ್ ಆಗಿದ್ದು, ಶಾಂತಿನಗರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಜುಲೈ 5ರಂದು ಜನಸಂದಣಿ ಇರುವ ರಸ್ತೆಯಲ್ಲಿ ಕಾರಿನಲ್ಲಿ 20-25 ವರ್ಷದೊಳಗಿನ 10 ಮಂದಿ ಯುವಕರ ಗ್ಯಾಂಗ್ ಕಚೇರಿಯಿಂದನೇ ಕಿಡ್ನಾಪ್ ಮಾಡಿದ್ದಾರೆ. ರಂಗಸ್ವಾಮಿಗೆ ಗ್ಯಾಂಗ್ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ, ಜೋರಾಗಿ ಮ್ಯೂಸಿಕ್ ಹಾಕಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ರಂಗಸ್ವಾಮಿ ಅವರನ್ನು ಕಾರಿನಲ್ಲೇ ಕೂಡಿ ಹಾಕಿದ್ದು, ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ಎಚ್ಚರಿಕೆಯ ಬುದ್ಧಿ ಪಾಠ ಮಾಡಿದ್ದಾರೆ. ಕಿಡ್ನಾಪ್ ಮಾಡಿ ಸಂಜೆ 5 ರಿಂದ ರಾತ್ರಿಯಿಡಿ ಕಾರಿನಲ್ಲಿ ಸುತ್ತಾಡಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ರಾತ್ರಿಯಿಡಿ ಸುತ್ತಾಡಿಸಿ ಜುಲೈ 6ರ ಬೆಳಗಿನ ಜಾವ ಕನಕಪುರ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ.

    ಈ ಕಿಡ್ನಾಪ್ ಕುರಿತಂತೆ ಜುಲೈ 6 ರಂದು ಪೊಲೀಸರಿಗೆ ದೂರನ್ನು ನೀಡಲಾಗಿತ್ತು. ಸದ್ಯಕ್ಕೆ ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ- ಗೆಳೆಯನ ಮಾತು ಕೇಳಿ ಅಟ್ಯಾಕ್!

    ಬೆಂಗ್ಳೂರಲ್ಲಿ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ- ಗೆಳೆಯನ ಮಾತು ಕೇಳಿ ಅಟ್ಯಾಕ್!

    ಬೆಂಗಳೂರು: ಹಾಡಹಗಲೇ ಯವಕನ ಮೇಲೆ ಗ್ಯಾಂಗ್ ಒಂದು ಲಾಂಗ್- ಮಚ್ಚುಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

    ಆಡುಗೋಡಿ ನಿವಾಸಿ ಮನೋಜ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತನ ಮೇಲೆ ಕಾರ್ತಿಕ್ ಮತ್ತು ಪ್ರದೀಪ್ ಗ್ಯಾಂಗ್ ಹಲ್ಲೆ ನಡೆಸಿದೆ. ಪ್ರಕರಣ ಸಂಬಂಧ ಆಡುಗೋಡಿ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಕಾರ್ತಿಕ್ ಗೆಳೆಯ ಸೂರ್ಯ ಎಂಬಾತನ ತಂದೆ ಕಣ್ಣನ್ ಕೆಲದಿನಗಳ ಹಿಂದೆ ಸಾವನ್ನಪ್ಪಿದ್ರು. ತಂದೆ ಹೃದಯಾಘಾತಕ್ಕೆ ಮನೋಜ್ ಕಾರಣ ಎಂದು ಕಾರ್ತಿಕ್ ಬಳಿ ಸೂರ್ಯ ಹೇಳಿಕೊಂಡಿದ್ದನಂತೆ. ಹೀಗಾಗಿ ಸೂರ್ಯನ ಮಾತು ಕೇಳಿ ಗ್ಯಾಂಗ್, ಮನೋಜ್ ಮೇಲೆ ಹಲ್ಲೆ ಮಾಡಿದೆ.

    ಸದ್ಯ ಗಾಯಗೊಂಡಿರುವ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.